Tag: ಸಾವಣ್ಣ

  • ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ, ರಾಜ್ ಬಿ ಶೆಟ್ಟಿ

    ಬುಕ್ ರಿಲೀಸ್ ಕಾರ್ಯಕ್ರಮದಲ್ಲಿ ಡಾಲಿ, ರಾಜ್ ಬಿ ಶೆಟ್ಟಿ

    ನಿನ್ನೆ ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ (Book release) ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್ (Dolly Dhananjay) ಮತ್ತು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಸಾಹಿತ್ಯ ಕಾರ್ಯಕ್ರಮಗಳಿಂದ ಸಾಮಾನ್ಯವಾಗಿ ಸಿನಿಮಾ ನಟರು ದೂರ, ದೂರ. ಆದರೆ, ಡಾಲಿ ಮತ್ತು ರಾಜ್ ಬಿ ಶೆಟ್ಟಿ ಅತಿಥಿಯಾಗಿ ಬಂದು ಪುಸ್ತಕ ರಿಲೀಸ್ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಬಿ ಶೆಟ್ಟಿ (Raj B Shetty), ‘ಸಿನಿಮಾ ಜಗತ್ತಿನಲ್ಲಿ ಎಲ್ಲವೂ ಇದೆ. ಬರಹಗಾರರ ಕೊರತೆ ಇದೆ. ಕಥಾ ಲೋಕ ಮತ್ತು ಸಿನಿಮಾ ಲೋಕ ಹತ್ತಿರ ಬಂದಾಗ ಸಿನಿಮಾ ಕ್ಷೇತ್ರ ಶ್ರೀಮಂತ ಆಗುತ್ತದೆ ಎಂದರು. ಇದನ್ನೂ ಓದಿ:ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ನಟರಿಗೂ ಒಂದು ಖಾಸಗಿ ಬದುಕು ಇರುತ್ತದೆ. ಅಲ್ಲಿ ನಾವೂ ಎಲ್ಲರ ಹಾಗೆ ಇರುತ್ತೇವೆ. ನಮ್ಮ ಒಳಗಿನ ಹುಡುಕಾಟ, ತೊಳಲಾಟ, ಸಂಘರ್ಷ ನಡೆಯುತ್ತಲೇ ಇರುತ್ತವೆ. ಒಂದು ಪ್ರೇಮಾಂಕುರ ಆಗಲಿ ಅಂತ ಕಾಯುತ್ತಿರುತ್ತವೆ. ನನ್ನ ಕೆಲಸಗಳ ನಡುವೆ ಓದು ಬಿಟ್ಟುಹೋಗಿತ್ತು. ಈಗ ಮತ್ತೆ ಓದಲು ಶುರು ಮಾಡಿದ್ದೇನೆ ಎಂದು ನಟ ನಿರ್ಮಾಪಕ ಡಾಲಿ ಧನಂಜಯ ಹೇಳಿದರು.

    ಸಾವಣ್ಣ (Sawanna) ಪ್ರಕಾಶನದ ನಾಲ್ಕು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ಧನಂಜಯ ಮುಖ್ಯ ಅತಿಥಿಗಳಾಗಿದ್ದರು.  ಜೋಗಿ ಅವರ ಚಿಯರ್ಸ್, ಅಶ್ವತ್ಥಾಮನ್, ಕಥೆಕೂಟ ಸದಸ್ಯರ ಒಲವು ತುಂಬುವುದಿಲ್ಲ ಹಾಗೂ ಜಗದೀಶ ಶರ್ಮ ಸಂಪ ಅವರ ದಶಕಂಠ ರಾವಣ ಕೃತಿಗಳು ಅನಾವರಣಗೊಂಡವು. ಜೋಗಿ, ಗೋಪಾಲಕೃಷ್ಣ ಕುಂಟಿನಿ, ಜಮೀಲ್ ವೇದಿಕೆಯಲ್ಲಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ಶಿವಾಜಿ ಸುರತ್ಕಲ್ 2 ಸಿನಿಮಾ ಟೀಸರ್, ನಾಳೆ ಪುಸ್ತಕ ಬಿಡುಗಡೆ

    ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ಶಿವಾಜಿ ಸುರತ್ಕಲ್ 2 ಸಿನಿಮಾ ಟೀಸರ್, ನಾಳೆ ಪುಸ್ತಕ ಬಿಡುಗಡೆ

    ಟ ರಮೇಶ್ ಅರವಿಂದ್ (Ramesh Aravind) ಇಂದು ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು. ಇವರ ಹುಟ್ಟು ಹಬ್ಬಕ್ಕಾಗಿಯೇ ರಮೇಶ್ ನಟನೆಯ ‘ಶಿವಾಜಿ ಸುರತ್ಕಲ್ 2’  (Shivaji Surathkal 2) ಸಿನಿಮಾದ ಟೀಸರ್ (Teaser) ರಿಲೀಸ್ ಮಾಡಲಾಗಿದೆ. ಇದೊಂದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಾಜಿ ಸುರತ್ಕಲ್ ಸಿನಿಮಾದ ಮುಂದುವರಿಕೆ ಭಾಗವಾಗಿದೆ. ಮೊದಲ ಭಾಗದಲ್ಲೇ ಈ ಸಿನಿಮಾ ಯಶಸ್ಸು ಕಂಡಿದ್ದು, ಎರಡನೇ ಭಾಗ ಕೂಡ ಕುತೂಹಲ ಮೂಡಿಸಿದೆ.

    2020ರಲ್ಲಿ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ಹೆಸರಿನಲ್ಲಿ ಸಿನಿಮಾ ಮೂಡಿ ಬಂದಿತ್ತು. ಆಕಾಶ್ ಶ್ರೀವಾತ್ಸವ್ (Akash Srivatsa) ನಿರ್ದೇಶನದಲ್ಲಿ ಮೂಡಿ ಬಂದಿದ್ದ  ಈ ಸಿನಿಮಾ ಬಾಕ್ಸ್ ಆಫೀಸಿನಲ್ಲೂ ಸಖತ್ ಕಮಾಯಿ ಮಾಡಿತ್ತು. ಹೀಗಾಗಿ ಎರಡನೇ ಭಾಗದಲ್ಲಿ ಈ ಚಿತ್ರವನ್ನು ತಯಾರಿಸಲಾಗುತ್ತಿದೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಕೇಸ್ ನಂ 131ನ್ನು ಬೇಧಿಸುವಂತಹ ಪಾತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ಈ ನಡುವೆ ರಮೇಶ್ ಅರವಿಂದ್ ಅವರು ಬರೆದ, ಸಾವಣ್ಣ ಪಬ್ಲಿಕೇಷನ್ (Sawanna Books) ಪ್ರಕಟಿಸಿರುವ ‘ಪ್ರೀತಿಯಿಂದ ರಮೇಶ್’ ಯಶಸ್ಸಿನ ಸರಳ ಸೂತ್ರಗಳು ಹೆಸರಿನ ಪುಸ್ತಕವು (Book) ರವಿವಾರ ಬಿಡುಗಡೆ ಆಗುತ್ತಿದ್ದು, ಯಶಸ್ಸಿಗೆ ಸಂಬಂಧಿಸಿದಂತೆ ಬರಹಗಳು ಈ ಪುಸ್ತಕದಲ್ಲಿ ಇವೆ. ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯ ವಲಯದಲ್ಲೂ ರಮೇಶ್ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳವಷ್ಟೇ ವೀರಲೋಕ ಪ್ರಕಾಶನವು ರಮೇಶ್ ಅವರ ಮತ್ತೊಂದು ಪುಸ್ತಕವನ್ನು ಪ್ರಕಟಿಸಿತ್ತು. ಈಗ ಮತ್ತೊಂದು ಪುಸ್ತಕ ಓದುಗರ ಮಡಿಲಿಗೆ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್

    ತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ.

    ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ’ ಎಂದರು. ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

    ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.

    ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳನ್ನು ಹೊಂದಿದೆ. ಪುನೀತ್ ಅವರ ಹುಟ್ಟು ಹಬ್ಬದ ದಿನದಂದು ಬಿಡುಗಡೆಯಾಗಿದೆ. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ಅಪರೂಪದ ಸಂಗತಿಗಳು ಮತ್ತು ಫೋಟೋಗಳನ್ನುಈ ಪುಸ್ತಕದಲ್ಲಿ ಸೊಗಸಾಗಿ ಹಿಡಿದಿಟ್ಟಿದ್ದಾರೆ ಲೇಖಕ ಶರಣು ಹುಲ್ಲೂರು.