Tag: ಸಾಲಿಗ್ರಾಮ

  • ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

    ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ- ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ದೂರು

    ಮೈಸೂರು: ತಮ್ಮ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಬೆಂಬಲಿಗರ ವಿರುದ್ಧ ಸಂಸದೆ ಸುಮಲತಾ ದೂರು ನೀಡಿದ್ದಾರೆ.

    ಕೆ.ಆರ್.ನಗರ, ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಸಂಸದೆ ಸುಮಲತಾ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದರು. ಇದನ್ನೂ ಓದಿ: ‘ಕರ್ನಾಟಕ ಅದ್ಭುತ ರಾಜ್ಯ’: ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ ಬಗ್ಗೆ ನಿರ್ಮಲಾ ಸೀತಾರಾಮನ್ ಸುಳಿವು..!?

    50 ಲಕ್ಷ ರೂ. ವೆಚ್ಚದ ನೀರಾವರಿ ಇಲಾಖೆ ಕಾಮಗಾರಿ ಪೂಜೆಗೆ ಆಗಮಿಸಿದ್ದ ಸುಮಲತಾ ಅವರು ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ, ಬ್ಯಾಡಹಳ್ಳಿ, ಹಂಪಾಪುರ ಸೇರಿದಂತೆ ಮುಂಜನಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರನ್ನು ಬಿಟ್ಟು ನೀವು ಗುದ್ದಲಿ ಪೂಜೆ ಮಾಡಿದ್ದು ಸರಿಯಲ್ಲ. ಪ್ರೋಟೊಕಾಲ್‌ ನಿಯಮಗಳನ್ನು ಗಾಳಿಗೆ ತೂರಿದ್ದೀರಿ ಎಂದು ಜೆಡಿಎಸ್‌ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಸಂಸದೆ ಗ್ರಾಮದ ಮಹಿಳೆಯರನ್ನು ಸೇರಿಸಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

    ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ, ಶಿಷ್ಟಾಚಾರ ಪಾಲಿಸಿಲ್ಲವೆಂದು ಸಾರಾ ಬೆಂಬಲಿಗರ ತಕರಾರು ತೆಗೆದಿದ್ದಾರೆ. ಗ್ರಾಮಕ್ಕೆ ಬಾರದಂತೆ ಸಂಸದರು ಹಾಗೂ ಜೊತೆಯಲ್ಲಿದ್ದವರನ್ನು ತಡೆದಿದ್ದಾರೆ. ಈ ವೇಳೆ ಗಲಾಟೆಯನ್ನೂ ಆರಂಭಿಸಿದ್ದಾರೆ. ಗಲಾಟೆ ತಡೆಯಲು ಬಂದ ಸಂಸದರ ಕಾರು ಚಾಲಕ ನಂಜುಂಡನ ಮೇಲೆ ಸಾರಾ ಬೆಂಬಲಿಗರ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಸಾರಾ ಬೆಂಬಲಿಗರ ವಿರುದ್ದ ಖುದ್ದು ಸಾಲಿಗ್ರಾಮ ಠಾಣೆಗೆ ತೆರಳಿ ಸಂಸದೆ ಸುಮಲತಾ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ

  • ಜೀರೋ ಮೇಕಪ್‍ನಲ್ಲಿ ಸಹಜ ಸುಂದರಿ ‘ಸ್ತ್ರೀ’ ಪಲ್ಲವಿ..!

    ಜೀರೋ ಮೇಕಪ್‍ನಲ್ಲಿ ಸಹಜ ಸುಂದರಿ ‘ಸ್ತ್ರೀ’ ಪಲ್ಲವಿ..!

    ಬೆಂಗಳೂರು: ಫೋಟೋಶೂಟ್ ಅಂದ್ರೆ ಇತ್ತೀಚಿನ ದಿನಗಳಲ್ಲಿ ಮಣಭಾರದ ಮೇಕಪ್ ಹಾಕಿಕೊಂಡು ಮಾಡ್ಬೇಕು ಅನ್ನೋ ಭಾವನೆ ಎಲ್ಲರದು. ಇದರ ನಡುವೆಯೇ ಕೆಲವರು ತೀರಾ ವಿಭಿನ್ನವಾಗಿ ನಿಲ್ಲುತ್ತಾರೆ. ಈ ಮೇಕಪ್, ಲಿಪ್‍ಸ್ಟಿಕ್ ಸಹವಾಸ ಇಲ್ಲದೆಯೂ ಫೋಟೋ ಶೂಟ್ ಮಾಡಿಸ್ಕೊಂಡು ನಾವು ಚೆನ್ನಾಗಿ ಕಾಣಿಸ್ಬಹುದು. ನ್ಯಾಚುರಲ್ ಲೈಟಲ್ಲಿ ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ಮಾಡಿಸಿದ ಈ ಫೋಟೋ ಶೂಟೊಂದು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಯಾರಪ್ಪಾ ಈ ಸಹಜ ಸುಂದರಿ ಎಂದರೆ, ಈಕೆಯ ಹೆಸರು ಪಲ್ಲವಿ ರಾಜು. ಈಗಾಗಲೇ ಮಂತ್ರಂ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಇನ್ನೊಂದಷ್ಟು ಫಿಲಂಗಳ ಸಾಲು ಸಾಲೇ ಇವರ ಮುಂದಿದೆ.

    ಯಾವುದೇ ಕೃತಕತೆಯಿಲ್ಲದ ಸಹಜ ಸುಂದರಿಯಾಗಿ ಕಾಣಿಸಿಕೊಂಡು ಮಾಡಿದ ಫೋಟೋಶೂಟ್‍ಗೆ ಪಲ್ಲವಿ ರಾಜು ಹೆಸರಿಟ್ಟಿದ್ದು ‘ಸ್ತ್ರೀ’. ಈ ಫೋಟೋ ನೋಡಿ ಅವರ ಫ್ರೆಂಡ್ಸ್, ಅಭಿಮಾನಿಗಳು ಯಾವ ಮೂವಿ ಫೋಟೋಶೂಟ್ ಇದು, ‘ಸ್ತ್ರೀ’ ಅನ್ನೋದು ನಿಮ್ಮ ಹೊಸ ಮೂವಿ ಹೆಸರಾ ಎಂದು ಕೇಳ್ತಿದ್ದಾರಂತೆ. ಈ ಫೋಟೋಶೂಟ್ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲ್ಲವಿರಾಜು, ನಾನು ಹಿಂದೆ ಗ್ಲಾಮರ್ ಶೂಟ್ ಮಾಡಿದ್ದೆ, ಮಾಡರ್ನ್ ಶೂಟ್ ಮಾಡಿದ್ದೆ. ಆದರೆ ಹಲವಾರು ದಿನಗಳಿಂದ ಜೀರೋ ಮೇಕ್ ಅಪ್ ಶೂಟ್ ಮಾಡ್ಬೇಕು ಎಂಬ ಆಸೆಯಿತ್ತು.

    ಇದೇ ವೇಳೆ ಮಡಿಕೇರಿಯಲ್ಲಿ ಯುವತಿಯೊಬ್ಬಳು ಹೇರ್ ಸ್ಟ್ರೇಟನಿಂಗ್ ಮಾಡಿಸಲು ಹೋದ ಬಳಿಕ ಕೂದಲು ಉದುರಲು ಶುರುವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿತು. ಇದು ನನ್ನ ಮನಸಿನ ಮೇಲೆ ಪ್ರಭಾವ ಬೀರಿತು. ಹೀಗಾಗಿ ನಾನು ಮೇಕಪ್ ಯಾವುದೂ ಇಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು. ಮೇಕಪ್ ಇದ್ರೆ ಮಾತ್ರ ಜೀವನವಲ್ಲ. ಅದಿಲ್ಲದೆಯೂ ನಾವು ಸುಂದರವಾಗಿ ಕಾಣಿಸಬಹುದು ಎಂದು ಎಲ್ಲರಿಗೂ ತೋರಿಸಬೇಕಿತ್ತು. ಈ ವೇಳೆ ನನ್ನ ಮನಸಲ್ಲಿ ಬಂದಿದ್ದೇ ‘ಸ್ತ್ರೀ’ ಎಂಬ ಕಾನ್ಸೆಪ್ಟ್.

    ಈ ಕಾನ್ಸೆಪ್ಟನ್ನು ಕ್ಯಾಮರಾದಲ್ಲಿ ಅದ್ಭುತವಾಗಿ ಸೆರೆಹಿಡಿದುಕೊಟ್ಟವರು ಫೋಟೋಗ್ರಾಫರ್ ಸತೀಶ್ ಗೋದಿಕಟ್ಟಿ. ಬೆಂಗಳೂರಿನ ಕೆಆರ್ ಮಾರ್ಕೆಟ್‍ನಲ್ಲಿ ನಾವು 4 ಜನ ಸೇರಿ ಈ ಫೋಟೋಶೂಟ್ ಮುಗಿಸಿದ್ವಿ. ಈ ಫೋಟೋ ನೋಡಿದ ಮೇಲೆ ಸಿನೆಮಾ ಮಾಡಬಹುದು ಎಂಬ ಆಫರ್‍ಗಳೂ ಬಂದಿವೆ. ನಗುವಿನ ಫೋಟೋ ಎಲ್ಲರ ಮನಸೆಳೆದಿದೆ. ಔಟರ್ ಅಪಿಯರೆನ್ಸ್ ಗಿಂತ ಜೀರೋ ಮೇಕಪ್‍ಗೆ ನಾವು ಹೆಚ್ಚು ಆದ್ಯತೆ ನೀಡಿದೆವು. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಫೋಟೋ ಚೆನ್ನಾಗಿ ಬಂದಿದೆ ಎಂದು ಹೇಳಿದರು ಪಲ್ಲವಿ ರಾಜು.

    ಪಲ್ಲವಿರಾಜುಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ಅವರು ‘ಮಂತ್ರಂ’ ಮೂವಿಯಲ್ಲಿ ನಟಿಸಿದ್ದಾರೆ. ಮೂವಿಯಲ್ಲೂ ನಾನು ರಿಯಾಲಿಟಿ ಹೆಚ್ಚಿರಲು ಟ್ರೈ ಮಾಡ್ತೀನಿ. ಇದುವರೆಗೆ ಕಮರ್ಷಿಯಲ್ ಫಿಲ್ಮ್ ಮಾಡಿಲ್ಲ ಎಂದ ಪಲ್ಲವಿರಾಜು ಈಗ ಫುಲ್ ಬ್ಯುಸಿಯಾಗಿದ್ದಾರೆ. ಇವರ ಅಭಿನಯದ ರವಿ ಹಿಸ್ಟರಿ ಎಂಬ ಸಿನೆಮಾ ಅಕ್ಟೋಬರ್ ಫಸ್ಟ್ ಅಥವಾ ಸೆಕೆಂಡ್ ವೀಕಲ್ಲಿ ರಿಲೀಸ್ ಆಗ್ತಿದೆ. ಈ ಸಿನೆಮಾದಲ್ಲಿ ನಾನು ಪೊಲೀಸ್ ಪಾತ್ರ ಮಾಡ್ತಾ ಇದೀನಿ.

    ಇನ್ನೊಂದು ಸಿನೆಮಾ ಸಾಲಿಗ್ರಾಮ ದೀಪಾವಳಿಗೆ ರಿಲೀಸ್ ಆಗುತ್ತಿದೆ. ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಪ್ರತಾಪ್ ನಾರಾಯಣ್ ಇರುವ ‘ಉತ್ತಮರು’ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿಕ್ಸನ್ ಎಂಬ ಕನ್ನಡ, ತಮಿಳು ಭಾಷೆಯ ಮೂವಿಯಲ್ಲಿ ಆಕ್ಟ್ ಮಾಡ್ತಿದೀನಿ. ತಮಿಳಲ್ಲಿ ನಿಕ್ಸನ್ ನನ್ನ ಫಸ್ಟ್ ಮೂವಿ. ಇದರ ಸಾಂಗ್ ಶೂಟ್ ಬಾಕಿಯಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಇದರ ಚಿತ್ರೀಕರಣ ನಡೆಯಲಿದೆ. ರತ್ನ ಮಂಜರಿ ಎಂಬ ಮೂವಿ ಕೂಡಾ ಬರ್ತಾ ಇದೆ. ಎನ್‍ಆರ್ ಐ ಕನ್ನಡಿಗರು ಈ ಚಿತ್ರದ ಪವರ್. ಜೊತೆಗೆ ಯುಎಸ್ ಟೆಕ್ನೀಶಿಯನ್ ವರ್ಕ್ ಮಾಡ್ತಿದ್ದಾರೆ ಎಂದರು ಪಲ್ಲವಿ. ಸದ್ಯ ಸಹಜ ಸುಂದರಿಯಾಗಿ ಕಾಣಿಸಿರೋ ಪಲ್ಲವಿರಾಜು ಎಲ್ಲರ ಮನಸೆಳೆದಿರೋದಂತೂ ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಭವಾನಿ ರೇವಣ್ಣ ಸ್ಕೆಚ್! – ವಿಡಿಯೋ ನೋಡಿ

    ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಭವಾನಿ ರೇವಣ್ಣ ಸ್ಕೆಚ್! – ವಿಡಿಯೋ ನೋಡಿ

    ಬೆಂಗಳೂರು: ಚುನಾವಣೆಗೆ ದಿನಗಣನೆ ಶುರುವಾಗಿದ್ರೂ ಜೆಡಿಎಸ್‍ನಲ್ಲಿ ಇನ್ನೂ ಭಿನ್ನಮತ ಮುಂದುವರಿದಿದೆ. ಮೈಸೂರಿನ ಕೆ.ಆರ್. ನಗರದ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರನ್ನ ಸೋಲಿಸಲು ದೇವೇಗೌಡ್ರ ಸೊಸೆ ಭವಾನಿ ರೇವಣ್ಣ ಷಡ್ಯಂತ್ರ ರೂಪಿಸಿದ್ದಾರಾ ಅನ್ನೋ ಚರ್ಚೆ ಎದ್ದಿದೆ.

    ಇವತ್ತು ಸಾಲಿಗ್ರಾಮದ ಒಕ್ಕಲಿಗ ಮುಖಂಡರ ಜೊತೆ ಭವಾನಿ ರೇವಣ್ಣ ನಡೆಸಿದ ಗೌಪ್ಯ ಸಭೆಯ ವೀಡಿಯೋ ವೈರಲ್ ಆಗಿದೆ. ಸಾ.ರಾ.ಮಹೇಶ್ ಸೋಲಿಗೆ ತನ್ನದೇ ಹೆಸರು ಬಳಸಿಕೊಳ್ಳಿ ಅಂತ ಭವಾನಿ ರೇವಣ್ಣ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.

    ಕೆ.ಆರ್.ನಗರದಲ್ಲಿ ಭವಾನಿ ಸ್ಪರ್ಧಿಸೋಕೆ ಯತ್ನಿಸಿದ್ದರು. ಆದ್ರೆ, ದೇವೇಗೌಡ್ರು ಒಪ್ಪದ ಕಾರಣ ಈಗ ಈ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ, ಯುವಘರ್ಜನೆ ಹೆಸರಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕ್ಯಾಂಪೇನ್ ಶುರು ಮಾಡಿದ್ದಾರೆ.

    ತುಮಕೂರಿನ ಹಲವು ಕ್ಷೇತ್ರಗಳಲ್ಲಿ ಇದೇ ವಾರ ನಿಖಿಲ್ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಇವತ್ತು ಚಿಕ್ಕಬಳ್ಳಾಪುರದ ಅಭ್ಯರ್ಥಿ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಸಾಥ್ ನೀಡಿದ್ರು. ಆದ್ರೆ, ಟಿಕೆಟ್ ಆಕಾಂಕ್ಷಿ ಪ್ರಜ್ವಲ್ ಅವರನ್ನ ಸುಮ್ಮನಾಗಿಸಿದ್ದ ದೇವೇಗೌಡ್ರು, ಹಾಸನಕ್ಕೆ ಮಾತ್ರ ಸೀಮಿತಗೊಳಿಸಿದ್ರಾ ಅಂತ ಚರ್ಚೆ ಶುರುವಾಗಿದೆ.

     

    https://www.youtube.com/watch?v=_cQaaLgUtx0

     

     

  • ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ

    ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ

    ಮೈಸೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಬಾಲ್ಯದ ಗೆಳತಿ ಜಾನಕಮ್ಮ, ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ.

    ಪಾರ್ವತಮ್ಮ ಅವರಿಗೆ ಇದ್ದಿದ್ದು ಒಬ್ಬರೇ ಬಾಲ್ಯದ ಗೆಳತಿ. ಆ ಬಾಲ್ಯದ ಗೆಳತಿ ಹೆಸರು ಜಾನಕಮ್ಮ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಪಾರ್ವತಮ್ಮ ಅವರ ಹುಟ್ಟೂರು. ಅಲ್ಲಿ ಅವರು ಪ್ರಾಥಮಿಕ ಶಾಲೆ ಕಲಿಯುವಾಗ ಜೊತೆಗಾತಿ ಆಗಿದ್ದವರು ಜಾನಕಮ್ಮ. ಇವತ್ತು ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ. ಗೆಳತಿಯನ್ನು ಕಳೆದಕೊಂಡ ದುಃಖ ಅವರಲ್ಲಿ ತುಂಬಿದೆ.

    ಪಾರ್ವತಮ್ಮ ಅವರೊಂದಿಗಿನ ಬಾಲ್ಯದ ಒಡನಾಟದ ಬಗ್ಗೆ ಮಾತನಾಡಿದ ಜಾನಕಮ್ಮ, ನನಗೂ, ಅವರಿಗೂ(ಪಾರ್ವತಮ್ಮ) 5ನೇ ಕ್ಲಾಸ್‍ಗೆ ಪರಿಚಯವಾಯಿತು. ಅಂದಿನಿಂದ 8ನೇ ತರಗತಿವರೆಗೂ ನಾವು ಜೊತೆಯಲ್ಲಿಯೇ ಓದಿದ್ದು. 8ನೇ ಕ್ಲಾಸ್ ನಂತರ ನನ್ನನ್ನು ಶಾಲೆ ಬಿಡಿಸಿದ್ರು. ಅವರು ಹೈಸ್ಕೂಲ್ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಮದುವೆಯಾಗುವವರೆಗೂ ಪ್ರತಿದಿನ ನಮ್ಮ ಮನೆಗೆ ಬರ್ತಿದ್ರು. ಅವರ ಮದುವೆಗೆ ಹೋಗೋಕೆ ಅಗ್ಲಿಲ್ಲ. ರಾಜ್‍ಕುಮಾರ ಅವರನ್ನು ವಿವಾಹವಾದ ನಂತರವೂ ಕೆಲವು ಬಾರಿ ನಮ್ಮ ಮನೆಗೆ ಬಂದಿದ್ದರು. ಒಮ್ಮೆ ರಾಜ್‍ಕುಮಾರ್ ಅವರು ಬಸ್ ಸ್ಟಾಪ್‍ನಲ್ಲಿ ಕುಳಿತು ನಿನ್ನ ಸ್ನೇಹಿತೆಯನ್ನು ಮಾತನಾಡಿಸಿಕೊಂಡು ಬಾ ಅಂತ ಪಾರ್ವತಮ್ಮರನ್ನ ನಮ್ಮ ಮನೆಗೆ ಕಳಿಸಿದ್ರು. ಅಷ್ಟು ಜೊತೆಯಲ್ಲಿದ್ದವರು ಈಗ ಇಲ್ಲ. ತುಂಬಾ ಬೇಜಾರಾಗುತ್ತದೆ ಎಂದು ಗದ್ಗದಿತರಾದ್ರು.

    ಪಾರ್ವತಮ್ಮ ರಾಜಕುಮಾರ್ ಹುಟ್ಟಿದ್ದು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ. 1953 ಡಿಸೆಂಬರ್ 6 ರಂದು ಅಪ್ಪಾಜಿಗೌಡರ ಎರಡನೇ ಮಗಳಾಗಿ ಜನ್ಮ ತಾಳುತ್ತಾರೆ. ಮದುವೆ ಆಗುವವರೆಗೂ ಅವರು ಸಾಲಿಗ್ರಾಮದಲ್ಲೆ ಇರುತ್ತಾರೆ. ಇವತ್ತಿಗೂ ಸಾಲಿಗ್ರಾಮದಲ್ಲಿ ಅವರು ಹುಟ್ಟಿ ಬೆಳೆದ ಮನೆ ಇದೆ. ಇಡೀ ಗ್ರಾಮಕ್ಕೆ ಆ ಮನೆಯೂ ಒಂದು ರೀತಿ ದೊಡ್ಮನೆ.