Tag: ಸಾಲಮನ್ನ

  • ಸಾಲಮನ್ನಾ ಆಗದೇ ಇದ್ರೆ ಬೆಂಬಲ ಬೆಲೆ ನೀಡಿ – ಸರ್ಕಾರಕ್ಕೆ ನಟ ದರ್ಶನ್ ಸವಾಲು

    ಸಾಲಮನ್ನಾ ಆಗದೇ ಇದ್ರೆ ಬೆಂಬಲ ಬೆಲೆ ನೀಡಿ – ಸರ್ಕಾರಕ್ಕೆ ನಟ ದರ್ಶನ್ ಸವಾಲು

    ಬೆಂಗಳೂರು: ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ದರ್ಶನ್ ಇಂದು ನಗರದ ಬಿಐಟಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ, ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.

    ಇನ್ನೂ ದರ್ಶನ್ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಕಾಲೇಜ್‍ನಲ್ಲಿ ದರ್ಶನ್‍ ಕಟೌಟ್ ಹಾಕಲಾಗಿತ್ತು. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಟ ದರ್ಶನ್ ನೋಡಿ ಡಿಬಾಸ್ ಡಿಬಾಸ್ ಎಂದು ಕೂಗಿದ್ದಾರೆ.  ಆಗ ‘ಏ ಕ್ಯಾಡ್ಬರೀಸ್…ಸ್ಟೂಡೆಂಟ್ಸ್ ನಡೆದಿದ್ದೇ ದಾರಿ’ ಎಂದು ವಿದ್ಯಾರ್ಥಿಗಳಿಗಾಗಿ ದರ್ಶನ್ ಡೈಲಾಗ್ ಹೇಳಿದ್ದಾರೆ.

    ವಿದ್ಯಾರ್ಥಿಗಳು ಸನ್ಮಾನ ಮಾಡಲು ಬಂದಾಗ ದರ್ಶನ್ ಮೊದಲು ನಿರಾಕರಿಸಿದ್ದರು. ಕೊನೆಗೆ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಮಣಿದು ನಿಂತುಕೊಂಡೆ ಸನ್ಮಾನ ಸ್ವೀಕರಿಸಿದ್ದಾರೆ. ಈ ವೇಳೆ ದರ್ಶನ್ ಅವರಿಗೆ ವಿದ್ಯಾರ್ಥಿಗಳು ಗದೆ ನೀಡಿದ್ದಾರೆ. ಆದರೆ ನಟ ದರ್ಶನ್ ತಮಗೆ ಬಂದ ಗದೆಯನ್ನ ಮತ್ತೆ ಅದೇ ವೇದಿಕೆ ಮೇಲೆ ಎಂಜಿನೀಯರಿಂಗ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ.

  • ಋಣಮುಕ್ತ ಪತ್ರ ರೈತರ ಮೂಗಿಗೆ ತುಪ್ಪ ಸವರಿದಂತೆ : ಮಾಜಿ ಡಿಸಿಎಂ ಕಿಡಿ

    ಋಣಮುಕ್ತ ಪತ್ರ ರೈತರ ಮೂಗಿಗೆ ತುಪ್ಪ ಸವರಿದಂತೆ : ಮಾಜಿ ಡಿಸಿಎಂ ಕಿಡಿ

    ರಾಮನಗರ: ಸರ್ಕಾರ ನ್ಯಾಯವಾಗಿ ರೈತರ ಸಾಲಮನ್ನಾ ಮಾಡಿದ್ದರೆ, ರಾಜ್ಯದ ಎಲ್ಲಾ ರೈತರಿಗೂ ಒಟ್ಟಿಗೆ ಋಣಮುಕ್ತ ಪತ್ರ ನೀಡಿ. ಅದು ನಿಜವಾದ ರೈತರ ಸೇವೆ ಆಗುತ್ತೆ. ಆದರೆ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುಬೇಡಿ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಕನಕಪುರ ತಾಲೂಕಿನ ಪಡುವಣಗೆರೆಯಲ್ಲಿ ಬರ ವೀಕ್ಷಣೆ ನಡೆಸಿ ಮಾತನಾಡಿದ ಆರ್ ಅಶೋಕ್, ಸರ್ಕಾರ ರಚನೆಯಾದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ 6 ತಿಂಗಳು ಕಳೆದರು ಸಾಲಮನ್ನಾ ಆಗಿಲ್ಲ. ಸಾಲಮನ್ನಾ ಆಗುತ್ತೆ ಎಂದು ಹೇಳುತ್ತಾರೆ. ಆದರೆ ರಾಜ್ಯದ ಜನಕ್ಕೆ ಮುಖ್ಯಮಂತ್ರಿ ಅವರ ಮೇಲೆ ನಂಬಿಕೆ ಇಲ್ಲ. ಸಿಎಂ ಕುಮಾರಸ್ವಾಮಿ ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಕಿಡಿಕಾಡಿದರು.

    ರಾಜ್ಯ ಜನರಿಗೆ ಋಣಮುಕ್ತ ಪತ್ರ ವಿತರಣೆ ಮಾಡುತ್ತೇನೆ ಎಂದು ಹೇಳುತ್ತೀರಾ. ಆದರೆ ಎಲ್ಲಾ ರೈತರು ಕೊಡುವುದನ್ನು ಬಿಟ್ಟು ನಿಮಗೆ ಬೇಕಾಗಿದ್ದ ನಾಲ್ಕು ಕಡೆ ಕೊಡುತ್ತಿದ್ದೀರಾ. ಇದನ್ನು ರಾಜ್ಯ ರೈತರ ಸಮುದಾಯದ ಎಲ್ಲರಿಗೂ ಕೊಟ್ಟಿದ್ದೀನಿ ಎಂದು ಹೇಳಿದರೆ ಬೊಗಳೆಯಾಗುತ್ತೆ. ರಾಜ್ಯದ ಯಾವುದೋ ಎರಡು ಹಳ್ಳಿಗೆ ಹೋಗಿ 50 ಜನರಿಗೆ ಕೊಟ್ಟರೆ, ಐದು ರಿಂದ ಹತ್ತು ಲಕ್ಷ ರೈತರು ಋಣ ಮುಕ್ತ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಇದು ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಆಗಿದೆ. ಎಲ್ಲಾ ರೈತರಿಗೆ ಋಣ ಮುಕ್ತ ಪತ್ರ ಕೊಟ್ಟರೇ ಆಗ ನಿಜವಾಗಿ ಸಾಲಮನ್ನಾ ಮಾಡಿದಂತೆ ಎಂದರ್ಥ ಎಂದರು.

    ಇದಕ್ಕೂ ಮುನ್ನ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಪಡುವಣಗೆರೆಯಲ್ಲಿ ಬರ ವೀಕ್ಷಣೆ ನಡೆಸಿದರು. ಮಳೆಯಿಲ್ಲದೇ ನಾಶವಾಗಿರುವ ಜಮೀನು, ಬತ್ತಿ ಹೋಗಿರುವ ಕೆರೆಯನ್ನ ವೀಕ್ಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತರ ಸಾಲಮನ್ನಾ ಮಾಡಿಲ್ಲಾಂದ್ರೆ ರಾಜೀನಾಮೆ ನೀಡ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ- ಎಚ್‍ಡಿಡಿ

    ರೈತರ ಸಾಲಮನ್ನಾ ಮಾಡಿಲ್ಲಾಂದ್ರೆ ರಾಜೀನಾಮೆ ನೀಡ್ತೇನೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ- ಎಚ್‍ಡಿಡಿ

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿ ಅವರನ್ನು ಕರೆದಿಲ್ಲ. ಸೃಷ್ಟಿ ಮಾಡಿ ಸುದ್ದಿ ಮಾಡಬಾರದು. ಸುಳ್ಳು ಸುದ್ದಿಯಿಂದ ನನಗೆ ನೋವಾಗಿದೆ ಅಂತ ಮಾಜಿ ಪ್ರಧಾನಿ ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಮುಲಾಜಿನಲ್ಲಿ ಇದ್ದೇನೆ ಅನ್ನೋ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಕುಮಾರಸ್ವಾಮಿ ಪ್ರಧಾನಿ ಹಾಗೂ ಕೇಂದ್ರ ಮಂತ್ರಿಗಳನ್ನು ಭೇಟಿ ಆಗಿ ಬರುತ್ತಾರೆ. ಕಲ್ಲಿದ್ದಲು ಕಡಿಮೆ ಇರೋದ್ರಿಂದ ಸದನ್ನ ಸಪ್ಲೈ ಮಾಡಲು ಮನವಿ ಮಾಡುತ್ತಾರೆ. ಕುಮಾರಸ್ವಾಮಿ ಸನ್ನಿವೇಶದ ಶಿಶು. ಅವರ ಹೇಳುತ್ತಿರುವುದು ನಿಜ. ನನಗೂ ಆ ನೋವಿದೆ ಅಂದ್ರು.

    ಇದೇ ವೇಳೆ ಯಡಿಯೂರಪ್ಪ ಸದನದಲ್ಲಿ ಭಾಷಣದ ಕುರಿತು ಮಾತನಾಡಿದ ಅವರು, ಇತಿಹಾಸದಲ್ಲಿ ಅಂತಹ ಕೆಳಮಟ್ಟದ ಭಾಷೆ ಬಳಕೆ ಮಾಡಿದ್ದು ನಾನು ನೋಡಿಲ್ಲ ಎಂದು ಹೇಳಿ ಯಡಿಯೂರಪ್ಪ ವಿರುದ್ಧ ಎಚ್ ಡಿಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಂದ್ ಬೇಕಾದರೆ ಮಾಡಿಕೊಳ್ಳಲಿ. ಆರೂವರೆ ಕೋಟಿ ಜನ ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. 38 ಜನ ಇಟ್ಟುಕೊಂಡು ನಾವು ಹೇಗೆ ನಿರ್ಧಾರ ಮಾಡೋಕೆ ಆಗುತ್ತೆ. ಕುಮಾರಸ್ವಾಮಿ ಅದನ್ನೇ ಹೇಳಿದ್ದಾರೆ. ಸಿಎಂ ನೀವೇ ಆಗಿ ಎಂದು ಕಾಂಗ್ರೆಸ್ ಅವರಿಗೆ ನಾವೇ ಹೇಳಿದ್ದೀವಿ. ಆದರೆ ಕಾಂಗ್ರೆಸ್ ಅವರೇ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಹೇಳಿದ್ದರು ಎಂದು ದೇವೇಗೌಡ ತಿಳಿಸಿದ್ದಾರೆ.

    ಪ್ರಣಾಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹಣಕಾಸು ಇಲಾಖೆ ಕಾಂಗ್ರೆಸ್ ಕೇಳುತ್ತಿದ್ದಾರೆ. ಇನ್ನು ತೀರ್ಮಾನವಾಗಿಲ್ಲ. ಏನಾಗುತ್ತೋ ಮುಂದೆ ನೋಡೋಣ. ರೈತರ ಸಾಲಮನ್ನಾ ಮಾಡಿಲ್ಲ ಎಂದರೆ ರಾಜೀನಾಮೆ ನೀಡುತ್ತೀನಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

  • ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಬಸ್ ತಡೆದು ಪ್ರತಿಭಟನೆ: ಪ್ರತಾಪ್ ಸಿಂಹ ವಶಕ್ಕೆ

    ಮೈಸೂರು: ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬಸ್‍ಗಳನ್ನು ತಡೆಯಲು ಮುಂದಾಗಿದ್ದ ಸಂಸದ ಪ್ರತಾಪ್ ಸಿಂಹರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಬನ್ನಿಮಂಟಪ ಡಿಪೋ ಬಳಿ ಪ್ರತಿಭಟನೆ ನಡೆಸಲಾಗುತಿತ್ತು. ಆಗ ಸಂಸದ ಪ್ರತಾಪ್ ಸಿಂಹ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ತಕ್ಷಣ ಪೊಲೀಸರು ಬಂದು ಪ್ರತಾಪ್ ಸಿಂಹ ಹಾಗೂ ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದಿದ್ದಾರೆ.

    ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ಜನರ ಮುಲಾಜಿನಲ್ಲಿ ಇಲ್ಲ ಎಂದರೆ ಏನರ್ಥ? ಜನರ ಮುಲಾಜಿನಲ್ಲಿ ಇಲ್ಲದಿದ್ದರೆ ಅಧಿಕಾರ ಬಿಟ್ಟು ಕೆಳಗಿಳಿಯಲಿ. ಕುಮಾರಸ್ವಾಮಿಯವರು ಪ್ರಣಾಳಿಕೆಯಲ್ಲಿ ಸಾಲಮನ್ನ ಭರವಸೆ ನೀಡಿದ್ದರು. ಅವರು ಭರವಸೆಯಂತೆ ಸಾಲಮನ್ನ ಮಾಡಲಿ. ಯಡಿಯೂರಪ್ಪ ಒಂದು ಲಕ್ಷದವರೆಗೆ ಸಾಲಮನ್ನ ಮಾಡಲು ಮುಂದಾಗಿದ್ದರು. ಅದೇ ರೀತಿ ನೀವು ಸಾಲಮನ್ನಾ ಮಾಡುವುದಾಗಿ ನೀಡಿದ್ದ ಹೇಳಿಕೆಯನ್ನು ಉಳಿಸಿಕೊಳ್ಳಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

    ಸಾಲಮನ್ನಕ್ಕೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್ ಕರೆಗೆ ಮೈಸೂರಿನಲ್ಲಿ ಕನ್ನಡ ಪರ ಸಂಘಟನೆ ಹಾಗೂ ರೈತಪರ ಸಂಘಟನೆಗಳು ಬೆಂಬಲ ಸೂಚಿಸಲಿಲ್ಲ. ಇನ್ನೂ ಕರ್ನಾಟಕ ಬಂದ್ ಗೆ ಹೋಟೆಲ್ ಮಾಲೀಕರ ಸಂಘದಿಂದ ಬೆಂಬಲ ಇಲ್ಲ. ಅಲ್ಲದೇ ಮೈಸೂರು ಲಾರಿ ಮಾಲೀಕರ ಸಂಘದಿಂದಲೂ ನೈತಿಕ ಬೆಂಬಲ ಮಾತ್ರ ನೀಡುತ್ತಿದ್ದು, ಮೈಸೂರು ಥಿಯೇಟರ್ ಮಾಲೀಕರಿಂದ ಬಂದ್‍ಗೆ ಬೆಂಬಲ ಸೂಚಿಸಿದ್ದು, ಥಿಯೇಟರ್ ಮಾಲೀಕರು ಬೆಳಗಿನ ಪ್ರದರ್ಶನ ಮಾತ್ರ ರದ್ದು ಮಾಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ರಿಂದ ಮಾಹಿತಿ ನೀಡಿದ್ದಾರೆ.

    ಸಾಂಸ್ಕೃತಿಕ ನಗರಿಯಲ್ಲಿ ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ ಇದ್ದು, ಜನಜೀವನ ಎಂದಿನಂತೆ ಸಾಗತ್ತಿದೆ. ಸಾರಿಗೆ ಬಸ್‍ಗಳು ರಸ್ತೆಗಿಳಿದು ಸೇವೆ ಆರಂಭಿಸಿದ್ದು, ನಗರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್ ಸಂಚರಿಸುತ್ತಿದೆ. ಆಟೋ ಹಾಗೂ ಇತರೆ ಸಾರಿಗೆ ಕೂಡ ಇಂದು ಲಭ್ಯವಿದೆ. ಹಾಲು, ದಿನಪತ್ರಿಕೆಗಳು ಎಂದಿನಂತೆ ಲಭ್ಯವಿದ್ದು, ರಸ್ತೆಯಲ್ಲಿ ವಾಹನಗಳು ದಿನ ನಿತ್ಯದಂತೆ ಸಂಚರಿಸುತ್ತಿದೆ. ಸದ್ಯದವರೆಗೆ ಮೈಸೂರಿಗೆ ಬಂದ್ ಬಿಸಿ ತಟ್ಟಿಲ್ಲ.

    ಕೆಎಸ್ ಆರ್ ಟಿ ಸಿ ಬಸ್ ತಡೆದ ಹಿನ್ನೆಲೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ.