Tag: ಸಾರ್ವಜನಿಕ ಶಿಕ್ಷಣ ಇಲಾಖೆ

  • ಇಂದು SSLC ಫಲಿತಾಂಶ – ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಗುಡ್‌ನ್ಯೂಸ್!

    ಇಂದು SSLC ಫಲಿತಾಂಶ – ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಗುಡ್‌ನ್ಯೂಸ್!

    ಬೆಂಗಳೂರು: 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಫಲಿತಾಂಶ ಹೊರಬೀಳುವ ಮುನ್ನವೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ.

    ಇಂದು ಮಧ್ಯಾಹ್ನ 12.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in  ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಇದನ್ನೂ ಓದಿ: ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ ಜೀವ ಬಿಟ್ಟ ಮುದ್ದಿನ ಶ್ವಾನ

    SSLC

    ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಶುಭ ಹಾರೈಸಿದ್ದಾರೆ.

    2 ವರ್ಷಗಳ ಬಳಿಕ ನಡೆದ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸ್ನೇಹಿ ನಿರ್ಧಾರ ಕೈಗೊಳ್ಳಲು ಇಲಾಖೆ ನಿರ್ಧಾರ ಮಾಡಿದೆ. ಫೇಲ್ ಆಗುವ ವಿದ್ಯಾರ್ಥಿಗಳಿಗೂ ಸಂಜೀವಿನಿ ನೀಡಲು ಮುಂದಾಗಿದೆ. ಒಂದೆರಡು ಅಂಕಗಳಿಂದ ಫೇಲ್ ಆಗಬಹುದಾದ ವಿದ್ಯಾರ್ಥಿಗಳಿಗೂ ಪಾಸ್ ಅಂಕ ನೀಡಿ ಉತ್ತೀರ್ಣಗೊಳಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

    ಸಾಂದರ್ಭಿಕ ಚಿತ್ರ

    ಒಂದೆರಡು ವಿಷಯಗಳಲ್ಲಿ 1 ಅಥವಾ 2 ಅಂಕಗಳಿಂದ ಫೇಲ್ ಆಗುವ ಹಂತದಲ್ಲಿದ್ದರೆ ಅಂತಹವರಿಗೆ ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ಮುಂದಾಗಿದೆ. ಅದಕ್ಕೂ ಮುನ್ನ ಶಿಕ್ಷಣ ಇಲಾಖೆಯ ಮಾನದಂಡಗಳನ್ನು ಅನ್ವಯಿಸಬೇಕಾಗುತ್ತದೆ.

    ಮಾರ್ಚ್ 28 ರಿಂದ ಏಪ್ರಿಲ್ 11ರ ವರಗೆ 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಈ ಬಾರಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು. ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

    ಸಾಂದರ್ಭಿಕ ಚಿತ್ರ

    ಮಾನದಂಡಗಳೇನು?
    * ಎಲ್ಲ ವಿದ್ಯಾರ್ಥಿಗಳಿಗೂ ಗ್ರೇಸ್ ಅಂಕ ನೀಡುವ ನಿಯಮ ಅನ್ವಯ ಆಗುವುದಿಲ್ಲ.
    * ವಿದ್ಯಾರ್ಥಿಯು 175 ಅಂಕಗಳಿಗಿಂತ ಹೆಚ್ಚು ಅಂಕ ಪಡೆದಿರಬೇಕು.
    * ಭಾಷಾ ವಿಷಯಗಳಲ್ಲಿ ಕಡ್ಡಾಯವಾಗಿ ಶೇ.35 ಮತ್ತು ಕೋರ್ ಸಬ್ಜೆಕ್ಟ್ ನಲ್ಲಿ ಶೇ.30 ಅಂಕ ಕಡ್ಡಾಯವಾಗಿ ಪಡೆದಿರಬೇಕು.
    * 6 ವಿಷಯಗಳ ಪೈಕಿ 5 ವಿಷಯಗಳಲ್ಲಿ ಉತ್ತಮ ಅಂಕ ಪಡೆದಿರಬೇಕು. ಒಂದು ವಿಷಯದಲ್ಲಿ ಮಾತ್ರ ಕಡಿಮೆ ಅಂಕ ಇರಬೇಕು.
    * ಒಂದು ವಿಷಯದಲ್ಲೂ ಹೆಚ್ಚು ಅಂಕ ಕೊಡಲು ಅವಕಾಶ ಇಲ್ಲ. ಪಾಸ್ ಮಾಡೋಕೆ 2 ರಿಂದ 5 ಅಂಕದ ಒಳಗೆ ಇದ್ದರೆ ಮಾತ್ರ ಈ ಅಂಕ ನೀಡಲು ಸಾಧ್ಯ.
    * ಗರಿಷ್ಠ 3 ವಿಷಯಗಳಿಗೆ ಹೀಗೆ ಅಂಕ ನೀಡಲು ಅವಕಾಶ ಇದೆ.
    * ವಿದ್ಯಾರ್ಥಿಗಳು ಇತರೇ ವಿಷಯಗಳ ಅಂಕ ನೋಡಿ, ಹೆಚ್ಚುವರಿ ಅಂಕಗಳನ್ನು ನೀಡಲಾಗುತ್ತದೆ.

  • ನಿವೃತ್ತಿಯಾಗಿ 9 ತಿಂಗಳಾದ್ರೂ ಪಿಂಚಣಿಯಿಲ್ಲ – ಒಂದೊತ್ತಿನ ಊಟಕ್ಕೂ ಸಾಲ ಮಾಡುತ್ತಿದೆ ಕುಟುಂಬ

    ನಿವೃತ್ತಿಯಾಗಿ 9 ತಿಂಗಳಾದ್ರೂ ಪಿಂಚಣಿಯಿಲ್ಲ – ಒಂದೊತ್ತಿನ ಊಟಕ್ಕೂ ಸಾಲ ಮಾಡುತ್ತಿದೆ ಕುಟುಂಬ

    – ಸಂಕಷ್ಟದಲ್ಲಿ ಶಿಕ್ಷಣ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಕುಟುಂಬ

    ರಾಯಚೂರು: ಕೊರೊನಾ ಲಾಕ್‍ಡೌನ್ ಕೇವಲ ಸಣ್ಣಪುಟ್ಟ ಕೆಲಸಗಾರರಿಗೆ ಮಾತ್ರ ಬಿಸಿ ಮುಟ್ಟಿಸಿಲ್ಲ. ದೊಡ್ಡ ನೌಕರಿಯಲ್ಲಿದ್ದು ನಿವೃತ್ತಿಯಾದ ರಾಯಚೂರಿನ ಹಿರಿಯ ಅಧಿಕಾರಿಯನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ.

    ಶಿಕ್ಷಣ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಅಧಿಕಾರಿ ಕಷ್ಟದಲ್ಲಿದ್ದಾರೆ. ನಗರದ ಜವಾಹರನಗರದಲ್ಲಿ ವಾಸವಿರುವ ಜಯತೀರ್ಥಾಚಾರ್ಯ ವೈದ್ಯ ಕುಟುಂಬ ಲಾಕ್‍ಡೌನ್ ಹಿನ್ನೆಲೆ ಒಂದು ಹೊತ್ತಿನ ಊಟಕ್ಕೆ ಸಾಲ ಮಾಡಿಕೊಂಡು ಬದುಕುವ ಸ್ಥಿತಿಗೆ ತಲುಪಿದೆ. ಇವರ ಪರಸ್ಥಿತಿಗೆ ಲಾಕ್‍ಡೌನ್ ಒಂದು ಕಾರಣವಾದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಾಲೇಖಪಾಲಕರ ಕಚೇರಿ ಸಿಬ್ಬಂದಿ ಮುಖ್ಯ ಕಾರಣವಾಗಿದ್ದಾರೆ.

    2019 ಜೂನ್ 30ಕ್ಕೆ ಜಯತೀರ್ಥಾಚಾರ್ಯರು ನಿವೃತ್ತಿಯಾಗಿದ್ದು, 9 ತಿಂಗಳು ಕಳೆದರೂ ಇದುವರೆಗೆ ನಿವೃತ್ತಿ ವೇತನ, ಪಿಂಚಣಿ ಯಾವುದೂ ಬಂದಿಲ್ಲ. ವಂಶಪಾರಂಪರಿಕ ನರದೌರ್ಬಲ್ಯ ಇರುವ ಜಯತೀರ್ಥಾಚಾರ್ಯರಿಗೆ ಈಗ ಎದ್ದು ಓಡಾಡಲು ಕೂಡ ಕಷ್ಟಪಡುತ್ತಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಮಗ ಪ್ರವೀಣನಿಗೂ ವಂಶಪಾರಂಪರಿಕ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ದುಡಿಯದ ಪರಸ್ಥಿತಿಯಲ್ಲಿದ್ದಾನೆ. ನಿವೃತ್ತಿ ವೇತನವೇ ಈಗ ಕುಟುಂಬಕ್ಕೆ ಆಧಾರವಾಗಿದೆ. ಆದ್ರೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಿಂದ ಸರಿಯಾದ ದಾಖಲೆಗಳನ್ನ ಮಹಾಲೇಖಪಾಲಕರ ಕಚೇರಿಗೆ ಕಳುಹಿಸದ ಹಿನ್ನೆಲೆ ನಿವೃತ್ತಿ ವೇತನ ಬಿಡುಗಡೆಯಾಗುತ್ತಿಲ್ಲ.

    ನಿವೃತ್ತಿಗೆ ಮುಂಚಿತವಾಗೇ ಮೂರು ತಿಂಗಳು ಮೊದಲು ಎಲ್ಲಾ ಸೇವಾ ದಾಖಲೆಗಳನ್ನ ಮಹಾಲೇಖಪಾಲರಿಗೆ ತಲುಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿನ ಸಿಬ್ಬಂದಿ ದಾಖಲೆಗಳನ್ನು ಸರಿಯಾಗಿ ಕಳುಹಿಸಿಲ್ಲ. ಪಿಂಚಣಿ ಮಂಜೂರಾತಿ ವಿಭಾಗಕ್ಕೆ ನಿವೃತ್ತಿಗೂ ಮುಂಚಿತವಾಗೇ ಮಾಹಿತಿ ಸಲ್ಲಿಸಬೇಕು. ಆದರೆ ಅನಗತ್ಯ ವಿಳಂಬ ಮಾಡಿ ಕಷ್ಟಕೊಡುತ್ತಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡುವ ಶಕ್ತಿಯೂ ಇವರಲ್ಲಿಲ್ಲ. ಹೀಗಾಗಿ ಲಾಕ್‍ಡೌನ್ ವೇಳೆ ಕೈ ಖಾಲಿಯಿರುವುದರಿಂದ ಮನೆ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಸಾಲ ಮಾಡಿದ್ದಾರೆ, ಔಷಧಿ ಖರ್ಚಿಗೂ ಸಾಲ ಮಾಡಿ ಬದುಕುತ್ತಿದ್ದಾರೆ.

    ಒಟ್ಟಿನಲ್ಲಿ ನಿವೃತ್ತಿ ವೇತನ ಬಂದರಷ್ಟೇ ಬದುಕು ಎನ್ನುವ ಪರಸ್ಥಿತಿಯಲ್ಲಿ ಜಯತೀರ್ಥಾಚಾರ್ಯರ ಕುಟುಂಬ ಇದೆ. ಔಷಧಿ ಖರ್ಚು, ಮನೆ ಖರ್ಚಿಗೆ ಕಷ್ಟವಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಕಷ್ಟದಲ್ಲಿರುವ ಕುಟುಂಬಕ್ಕೆ ಸಹಾಯ ಮಾಡಬೇಕಿದೆ.

  • ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

    ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2020-21ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು: 2020-21 ನೇ ಸಾಲಿನ ಶೈಕ್ಷಣಿಕ ಅವಧಿ ಮತ್ತು ರಜೆ ದಿನಗಳ ವೇಳಾಪಟ್ಟಿಯನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶಾಲೆಗಳಿಗೆ ಮಾಹಿತಿ ನೀಡಲು ಶಾಲಾ ಅವಧಿ ಮತ್ತು ರಜೆ ಅವಧಿಯನ್ನು ಪ್ರಕಟ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಜಗದೀಶ್ ನೂತನ ಶಾಲಾ ವೇಳಾಪಟ್ಟಿ ಆದೇಶ ಹೊರಡಿಸಿದ್ದಾರೆ.

    ಮೇ 29 ರಿಂದ 2020- 21 ನೇ ಸಾಲಿನ ಶಾಲೆಗಳ ಶೈಕ್ಷಣಿಕ ಚಟುವಟಿಕೆ ಆರಂಭವಾಗಲಿವೆ. ಶಾಲೆಗಳ ಮೊದಲ ಅವಧಿ ಮೇ 29 ರಿಂದ ಅಕ್ಟೋಬರ್ 2 ವರೆಗೆ ನಡೆಯಲಿದೆ. ಶಾಲೆಗಳ ಎರಡನೇ ಅವಧಿ ಅಕ್ಟೋಬರ್ 26 ರಿಂದ ಏಪ್ರಿಲ್ 14,2021 ಕ್ಕೆ ಮುಕ್ತಾಯವಾಗಲಿದೆ. ದಸರಾ ರಜೆ ಅಕ್ಟೋಬರ್ 3 ರಿಂದ 25 ವರೆಗೆ ನೀಡಲಾಗುತ್ತದೆ. ಬೇಸಿಗೆ ರಜೆಯನ್ನ 2021 ಏಪ್ರಿಲ್ 15 ರಿಂದ 2021 ಮೇ 29 ವರೆಗೆ ನೀಡಲು ಇಲಾಖೆ ಸೂಚನೆ ನೀಡಲಾಗಿದೆ. ಈ ವರ್ಷ ಒಟ್ಟಾರೆ 240 ದಿನ ಶಾಲೆಗಳು ನಡೆಯಲಿದ್ದು, 77 ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಕ್ರಿಸ್ ಮಸ್ ರಜೆಯನ್ನು ಡಿಸೆಂಬರ್ ತಿಂಗಳಲ್ಲಿ ನೀಡಲು ಜಿಲ್ಲಾ ಉಪ ನಿರ್ದೇಶಕರಿಗೆ ಅಧಿಕಾರ ನೀಡಲಾಗಿದೆ.

    ಏಪ್ರಿಲ್ 14 ರಂದು ನಡೆಯುವ ಅಂಬೇಡ್ಕರ್ ಜಯಂತಿಯನ್ನ ಬೇಸಿಗೆ ರಜೆ ಇದ್ದರು ಕಡ್ಡಾಯವಾಗಿ ಶಾಲೆಯಲ್ಲಿ ಆಚರಣೆ ಮಾಡಲು ಇಲಾಖೆ ಸೂಚನೆ ನೀಡಲಾಗಿದೆ. ಇದಲ್ಲದೆ ರಾಷ್ಟ್ರೀಯ ಹಬ್ಬಗಳನ್ನು ಕಡ್ಡಾಯವಾಗಿ ಅದೇ ದಿನದಂದೂ ರಜೆ ಇದ್ದರು ಆಚರಣೆ ಮಾಡಲು ಸೂಚನೆ ನೀಡಲಾಗಿದೆ. ಮುಷ್ಕರ ಇನ್ನಿತರ ಸಮಸ್ಯೆಯಿಂದ ಬೋಧನಾ ಅವಧಿ ಕಡಿಮೆ ಆದರೆ ಅದನ್ನ ಮುಂದಿನ ರಜೆ ದಿನಗಳಲ್ಲಿ ಪೂರ್ತಿ ದಿನ ಶಾಲೆ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

  • ಭ್ರಷ್ಟಾಚಾರ, ಕರ್ತವ್ಯಲೋಪ – ಗದಗದ ಮೂವರು ಮುಖ್ಯಶಿಕ್ಷಕರು ಅಮಾನತು

    ಭ್ರಷ್ಟಾಚಾರ, ಕರ್ತವ್ಯಲೋಪ – ಗದಗದ ಮೂವರು ಮುಖ್ಯಶಿಕ್ಷಕರು ಅಮಾನತು

    ಗದಗ: ಹಣ ದುರುಪಯೋಗ ಹಾಗೂ ಕರ್ತವ್ಯಲೋಪ ಎಸಗಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂವರು ಮುಖ್ಯ ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

    ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕಿನ ಒಬ್ಬೊಬ್ಬ ಮುಖ್ಯಶಿಕ್ಷಕರು ಅಮಾನತುಗೊಂಡಿದ್ದಾರೆ. ಮಕ್ಕಳ ಶೂ ಹಾಗೂ ಸಾಕ್ಸ್ ಖರೀದಿಯಲ್ಲಿ ಇಲಾಖೆ ನಿಯಮಗಳನ್ನು ಮೀರಿ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಖರೀದಿ ಮಾಡಿರುವ ಆರೋಪದ ಮೇರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಮ್ಯಾಗೇರಿ-ಶಿರಹಟ್ಟಿ ಮುಖ್ಯಶಿಕ್ಷಕ ಎಸ್.ಬಿ ಸರ್ಜಾಪೂರ ಅವರನ್ನು ಅಮಾನತುಗೊಳಿಸಲಾಗಿದೆ.

    ಅಕ್ಷರ ದಾಸೋಹ ಯೋಜನೆಯ 6.44 ಲಕ್ಷ ರೂ. ಹಣ ದುರುಪಯೋಗ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ಲಕ್ಷ್ಮೇಶ್ವರ ಸರಕಾರಿ ಪ್ರಾಥಮಿಕ ನಂಬರ್-4 ಶಾಲೆಯ ಮುಖ್ಯಶಿಕ್ಷಕ ಎ.ಎಸ್ ಬಣಗಾರ ಅವರನ್ನು ಮಾನತುಗೊಳಿಸಲಾಗಿದೆ. ಮದ್ಯಪಾನ ಮಾಡಿ ಶಾಲೆಗೆ ಬರುವುದು ಹಾಗೂ ಶಾಲೆಗೆ ತಡವಾಗಿ ಬರುತ್ತಿದ್ದರಿಂದ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಕೆ.ಗಾಡರೆಡ್ಡಿಯವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.

    ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಗೂ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ ಇರುವ ಶಿಕ್ಷಕರು ಎಂದು ಶಿಕ್ಷಣ ಇಲಾಖೆಗೆ ದೂರು ಬಂದಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಎಲ್ಲ ಶಾಲೆಗಳು ಶ್ರಮಿಸಬೇಕು. ಮಕ್ಕಳ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

  • ಸಾಮಾನ್ಯ ಜ್ಞಾನ ಇಲ್ಲದ ಸರ್ಕಾರಿ ಶಿಕ್ಷಕರಿಗೆ ನೋಟಿಸ್

    ಸಾಮಾನ್ಯ ಜ್ಞಾನ ಇಲ್ಲದ ಸರ್ಕಾರಿ ಶಿಕ್ಷಕರಿಗೆ ನೋಟಿಸ್

    ಧಾರವಾಡ/ಹುಬ್ಬಳ್ಳಿ: ಕನ್ನಡ ವಿಷಯ ಬೋಧನೆ ಮಾಡುವ ಶಿಕ್ಷಕರಿಗೆ ಕನ್ನಡದ ಸಂಧಿಗಳ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ಹುಬ್ಬಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರಾದ ವಿ.ಎಫ್.ಚಳಕಿ ಹಾಗೂ ಎಸ್.ಆರ್.ಹೂಲಿ ಶಿಕ್ಷಕರು ಸಂಧಿಗಳನ್ನು ತಪ್ಪಾಗಿ ಹೇಳಿದ್ದಾರೆ. ಮತ್ತೊಬ್ಬ ಶಿಕ್ಷಕ ಗಾಂಧೀಜಿ ಅವರ ಜನ್ಮ ದಿನವನ್ನು ಇಲಾಖೆ ಅಧಿಕಾರಿಗಳ ಮಂದೆ ತಪ್ಪಾಗಿ ಹೇಳಿದ್ದರಿಂದ ನೋಟಿಸ್ ನೀಡಿದ್ದಾರೆ.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗಯ್ಯ ಹಿರೇಮಠ್ ನೋಟಿಸ್ ಜಾರಿ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳ ವಿರುದ್ಧ ಶಾಲಾ ಸಮಯದಲ್ಲೇ ದೂರು ನೀಡಲು ಈ ಇಬ್ಬರು ಶಿಕ್ಷಕರು ಕಚೇರಿಗೆ ಬಂದಿದ್ದಾರೆ. ಈ ವೇಳೆ ಸಿದ್ದಲಿಂಗಯ್ಯ ಹಿರೇಮಠ್ ಅವರು ಪ್ರಶ್ನೆ ಕೇಳಿದ್ದಾರೆ. ಗಾಂಧೀಜಿ ಜನಿಸಿದ್ದು ಯಾವಾಗ ಎಂಬ ಪ್ರಶ್ನೆಗೆ ಶಿಕ್ಷಕ ವಿ.ಎಫ್.ಚಳಕಿ 1857ರ ಅಕ್ಟೋಬರ್ 5 ಎಂದು ತಪ್ಪಾಗಿ ಉತ್ತರಿಸಿದ್ದಾರೆ.

    ಸಂಧಿ ಎಂದರೇನು? ಪ್ರಕಾರಗಳೆಷ್ಟು? ಎಂದು ಮತ್ತೊಬ್ಬ ಶಿಕ್ಷಕ ಎಸ್.ಆರ್.ಹೂಲಿ ಅವರನ್ನು ಪ್ರಶ್ನಿಸಿದಾಗ ಉತ್ತರಿಸಲು ತಡಬಡಾಯಿಸಿದ್ದಾರೆ. ಮಕ್ಕಳಿಗೆ ತಾವು ಬೋಧಿಸುವ ವಿಷಯದ ಬಗ್ಗೆ ಜ್ಞಾನವೇ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಈ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

  • ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮೇಜರ್ ಸರ್ಜರಿ- ಇತಿಹಾಸದಲ್ಲೇ ಭಾರೀ ವರ್ಗಾವಣೆ

    ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮೇಜರ್ ಸರ್ಜರಿ- ಇತಿಹಾಸದಲ್ಲೇ ಭಾರೀ ವರ್ಗಾವಣೆ

    ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಮೇಜರ್ ವರ್ಗಾವಣೆಯ ಸರ್ಜರಿ ನಡೆದಿದೆ.

    ಬಿಇಓ, ಡಿಡಿಪಿಐ ಹಾಗೂ ಇತರೇ 283 ಅಧಿಕಾರಿಗಳನ್ನ ಒಂದೇ ದಿನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾವಣೆ ಮಾಡಿದೆ. ಹಿಂದೆ ಯಾವತ್ತೂ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ನಡೆದೇ ಇಲ್ಲ. ಹೀಗಾಗಿ ಚುನಾವಣೆ ವರ್ಷ ಆಗಿರೋದ್ರಿಂದ ವರ್ಗಾವಣೆ ಮೇಲೆ ಹಲವು ಅನುಮಾನಗಳು ಹುಟ್ಟಿದ್ದು ಆಯಕಟ್ಟಿನ ಸ್ಥಳಕ್ಕೆ ತಮಗೆ ಬೇಕಾದ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆಯಾ ಅನ್ನೊ ಅನುಮಾನಗಳು ಸೃಷ್ಟಿಯಾಗಿದೆ.

    ಬೆಂಗಳೂರು ಹಾಗೂ ಮೈಸೂರು ವಿಭಾಗದ ಅಧಿಕಾರಕ್ಕೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು ಎರಡು ವಿಭಾಗಗಳಲ್ಲಿ ಬರೋಬ್ಬರಿ 30 ಅಧಿಕಾರಿಗಳ ವರ್ಗಾವಣೆ ಆಗಿದೆ. ಈ ಎರಡು ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಯ ಹಿಂದೆ ಗೋಲ್‍ಮಾಲ್ ನಡೆದಿದೆ ಅನ್ನೋ ಆರೋಪಗಳು ಕೇಳಿಬಂದಿದೆ.