Tag: ಸಾರ್ವಜನಿಕರು

  • ಸವಾರರನ್ನು ಹಿಡಿಯಲು ಹೋದ ಪೊಲೀಸರು- ಆಟೋ, ಬೈಕ್ ನಡುವೆ ಡಿಕ್ಕಿ

    ಸವಾರರನ್ನು ಹಿಡಿಯಲು ಹೋದ ಪೊಲೀಸರು- ಆಟೋ, ಬೈಕ್ ನಡುವೆ ಡಿಕ್ಕಿ

    ಮಂಗಳೂರು: ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿಯಲು ಹೋಗಿ ಆಟೋ ಹಾಗೂ ಬೈಕ್ ನಡುವೆ ಅಪಘಾತಕ್ಕೆ ಪೊಲೀಸರೇ ಕಾರಣರಾಗಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ವಾಗ್ದಾದ ನಡೆದ ಘಟನೆ ಬಿ.ಸಿ ರೋಡ್ ನಲ್ಲಿ ನಡೆದಿದೆ.

    ಬಿ.ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವವರ ಸಂಖ್ಯೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು.

    ಈ ಸಂದರ್ಭದಲ್ಲಿ ಬೈಕ್ ಒಂದನ್ನು ನಿಲ್ಲಿಸುವ ಭರದಲ್ಲಿ ಬೈಕ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಆಟೋದಲ್ಲಿದ್ದ ಇಬ್ಬರು ಮಹಿಳೆಯರಿಗೆ ಹಾಗೂ ಬೈಕ್ ಸವಾರನಿಗೆ ಗಾಯಗಳಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

    ಸದ್ಯ ಬಂಟ್ವಾಳ ಪೊಲೀಸ್ ಉಪನಿರೀಕ್ಷಕ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಸೇರಿದ್ದ ಸಾರ್ವಜನಿಕರನ್ನು ಚದುರಿಸಿದ್ದಾರೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ – ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

    ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ – ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ

    – ಬಿಡಿಸಲು ಬಂದ ತಂದೆಯ ಮೇಲೆ ಹಲ್ಲೆ

    ಗದಗ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಯತ್ನಿಸಿದ ಕಾಮುಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಸಿದ ಘಟನೆ ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    11 ವರ್ಷದ ಅಪ್ರಾಪ್ತ ಬಾಲಕಿ ಮೇಲೆ 22 ವರ್ಷದ ಯುವಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವಿಷಯ ತಿಳಿದ ಸಾರ್ವಜನಿಕರು ಕಾಮುಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಕಾಮುಕನ ತಂದೆ ಆತನನ್ನು ಬಿಡಿಸಲು ಬಂದಿದ್ದಾರೆ.

    ಸಾರ್ವಜನಿಕರು ಕಾಮುಕನನ್ನು ಬಿಡಿಸಲು ಬಂದ ತಂದೆಗೂ ಗೂಸಾ ಕೊಟ್ಟಿದ್ದಾರೆ. ಬಳಿಕ ಜನರು ಕಾಮುಕನ ತಂದೆಗೆ ರಸ್ತೆಯಲ್ಲಿ ಥಳಿಸುತ್ತ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜನರ ಥಳಿತಕ್ಕೆ ಆರೋಪಿ ತಂದೆಯ ಮುಖ, ತಲೆ ಭಾಗಕ್ಕೆ ಗಾಯವಾಗಿದ್ದು, ಗದಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಿಡಿಸಲು ಹೋದ ತಂದೆಯನ್ನು ಜನರು ಥಳಿಸುತ್ತಿದ್ದ ವೇಳೆ ಆರೋಪಿ ಅಲ್ಲಿಂದ ಪರಾರಿ ಆಗಿದ್ದಾನೆ. ಅಲ್ಲದೆ ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಲು ಪೊಲೀಸರು ಮಧ್ಯ ಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಿದ್ದಾರೆ.

  • 7 ಹೆಡೆ ಸರ್ಪದ ಪೊರೆ ಪತ್ತೆ- ದೈವಸ್ವರೂಪವೆಂದು ಪೂಜಿಸಿದ ಭಕ್ತರು

    7 ಹೆಡೆ ಸರ್ಪದ ಪೊರೆ ಪತ್ತೆ- ದೈವಸ್ವರೂಪವೆಂದು ಪೂಜಿಸಿದ ಭಕ್ತರು

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ನಿರ್ಜನ ಪ್ರದೇಶವೊಂದರ ಬಳಿ ಏಳು ತಲೆಯ(ಹೆಡೆ) ಸರ್ಪದ ಪೊರೆ ಪತ್ತೆಯಾಗಿದ್ದು, ಇದು ದೈವಸ್ವರೂಪವೆಂದು ನಂಬಿರುವ ಜನರು ಹಾವಿನ ಪೊರೆಗೆ ಪೂಜೆ ಸಲ್ಲಿಸಿದ್ದಾರೆ.

    ಕೋಡಿಹಳ್ಳಿ ಹೋಬಳಿಯ ಮರಿಗೌಡನ ದೊಡ್ಡಿ ಬಳಿ ಏಳು ಹೆಡೆಯ ಸರ್ಪದ ಪೊರೆ ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡ ಏಳು ತಲೆಯ ಹಾವಿನ ಪೊರೆಯನ್ನು ಕಂಡ ಸಾರ್ವಜನಿಕರು ದೈವಸ್ವರೂಪವೆಂದು ನಂಬಿ ಹೂ ಹಣ್ಣು, ಅರಿಶಿಣ ಕುಂಕುಮ ಹಾಕಿ ಪೂಜೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಒಂದು ತಲೆ ಹಾವು ಕಾಣಸಿಗುತ್ತದೆ. ಆದ್ರೆ ಏಳು ತಲೆಯಿರುವ ಸರ್ಪದ ಪೊರೆ ಪತ್ತೆಯಾಗಿರುವುದು ಜನರಲ್ಲಿ ಅಚ್ಚರಿ ಮೂಡಿಸಿದೆ.

    ಈ ಅಪರೂಪದ ಹಾವಿನ ಪೊರೆಯನ್ನು ನೋಡಲು ಅಕ್ಕಪಕ್ಕದ ಗ್ರಾಮಸ್ಥರು ಸ್ಥಳಕ್ಕೆ ಬರುತ್ತಿದ್ದಾರೆ. ಅಲ್ಲದೆ ಈ ಹಾವಿನ ಪೊರೆಯನ್ನು ದೈವಸ್ವರೂಪವೆಂದೇ ನಂಬಿರುವ ಗ್ರಾಮಸ್ಥರು ಪೊರೆ ಪತ್ತೆಯಾಗಿರುವ ಸ್ಥಳದಲ್ಲೇ ನಾಗದೇವಾಲಯ ಕಟ್ಟುವ ಬಯಕೆಯನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.

    ಜೊತೆಗೆ ಪೊರೆ ಪತ್ತೆಯಾಗಿರುವ ಅಕ್ಕಪಕ್ಕದಲ್ಲಿಯೇ ಏಳು ಹೆಡೆಯ ಹಾವು ಇರಬಹುದು ಎಂದು ಊಹಿಸಲಾಗಿದ್ದು, ಇನ್ನೇನಾದರೂ ಪೂರೆ ಅಥವಾ ಹಾವೇ ಸಿಗಬಹುದು ಎಂದು ಗ್ರಾಮಸ್ಥರು ಶೋಧಕಾರ್ಯ ನಡೆಸುತ್ತಿದ್ದಾರೆ. ಅಲ್ಲದೆ ಈ ಅಪರೂಪದ ಏಳು ಹೆಡೆ ಸರ್ಪದ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

  • ಗುತ್ತಿಗೆದಾರನ ಎಡವಟ್ಟು- ದಾರಿ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ರಸ್ತೆ ನಿರ್ಮಾಣ!

    ಗುತ್ತಿಗೆದಾರನ ಎಡವಟ್ಟು- ದಾರಿ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ರಸ್ತೆ ನಿರ್ಮಾಣ!

    ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನ ಎಡವಟ್ಟಿನಿಂದ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವನ್ನು ಬಿಟ್ಟು ರಸ್ತೆ ನಿರ್ಮಾಣ ಮಾಡಲಾಗಿದೆ.

    ಅಥಣಿ ತಾಲೂಕಿನ ಗುತ್ತಿಗೆದಾರ ರಫೀಕ್ ತಾರಡೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೋಣನವಾಡಿಯಿಂದ ಕಲ್ಲಾಳ ಗ್ರಾಮದವರೆಗೆ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ 1 ಕಿ.ಮೀ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ರಸ್ತೆಯಲ್ಲಿ ರಾತ್ರಿ ಪ್ರಯಾಣ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾಕೆಂದರೆ ಈ ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದರೂ ಅಲ್ಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ಎಡವಟ್ಟಿನಿಂದ ಗುತ್ತಿಗೆದಾರ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

    ಶೇಡಬಾಳ ಪಟ್ಟಣ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಹೀಗೆ ರಸ್ತೆ ನಿರ್ಮಾಣ ಮಾಡಲು ಕಾರಣವಾಗಿದ್ದು, ದಾರಿ ಮಧ್ಯದಲ್ಲೇ ಕಂಬ ಇದ್ದರೂ ರಸ್ತೆ ನಿರ್ಮಾಣ ಮಾಡಲಾಗಿದೆ. ಆದ್ರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳದೆ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂದಾಜು 40 ಲಕ್ಷ ಜನರ ದುಡ್ಡು ನೀರು ಪಾಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಅಲ್ಲದೆ ಈ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ನಿರ್ಮಾಣವಾಗಿರುವ ಡಾಂಬರ್ ರಸ್ತೆಯನ್ನು ಕೈಯಿಂದಲೇ ಕಿತ್ತಬಹುದಾಗಿದೆ. ಈ ರೀತಿ ನಿರ್ಲಕ್ಷ್ಯ ತೋರಿರುವ ಗುತ್ತಿಗೆದಾರ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.

  • ಕಣ್ಣ ಮುಂದೆಯೇ ಸಾವು – ತಂದೆಯ ನರಳಾಟ ನೋಡಿ 8 ವರ್ಷದ ಪುತ್ರನ ರೋಧನೆ

    ಕಣ್ಣ ಮುಂದೆಯೇ ಸಾವು – ತಂದೆಯ ನರಳಾಟ ನೋಡಿ 8 ವರ್ಷದ ಪುತ್ರನ ರೋಧನೆ

    ತುಮಕೂರು: ಕಣ್ಣು ಮುಂದೆಯೇ ತಂದೆ ಸಾವನ್ನಪ್ಪಿದ್ದು, ಅದನ್ನು ನೋಡಲಾಗದೇ 8 ವರ್ಷದ ಪುತ್ರ ರೋಧಿಸಿದ ಮನಕಲುಕುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹುಳಿಯಾರು ಪಟ್ಟಣದಲ್ಲಿ ನಡೆದಿದೆ.

    ಶಿವಕುಮಾರ್ (35) ಮೃತ ದುರ್ದೈವಿ. ಶಿವಕುಮಾರ್ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಲಾಳಸಂದ್ರ ಗ್ರಾಮದ ನಿವಾಸಿಯಾಗಿದ್ದು, ಕುಕ್ಕರ್ ಅನ್ಲೋಡ್ ಮಾಡಲು ತನ್ನ ಮಗ ಪುನೀತ್ ಜೊತೆ ಟಾಟಾ ಎಸ್ ನಲ್ಲಿ ಹುಳಿಯಾರಿಗೆ ತೆರಳುತ್ತಿದ್ದರು.

    ಟಾಟಾ ಏಸ್ ಚಲಾಯಿಸುವಾಗಲೇ ಶಿವಕುಮಾರ್ ಗೆ ಮೂರ್ಛೆ ಬಂದು ಮೃತಪಟ್ಟಿದ್ದಾರೆ. 8 ವರ್ಷದ ಮಗ ಪುನೀತ್ ಪಕ್ಕದ ಟಾಟಾ ಏಸ್‍ನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಹೋಗುತ್ತಿದ್ದನು. ಏಕಾಏಕಿ ತಂದೆ ನರಳಾಟವನ್ನು ನೋಡಿ ಪುನೀತ್ ದಿಕ್ಕು ಕಾಣದ ರೋಧಿಸಿದ್ದಾನೆ.

    ಪುತ್ರನ ರೋಧನೆ ಕಂಡ ಸಾರ್ವಜನಿಕರು ಕೂಡ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಳೆಗಾಗಿ ಪ್ರಾರ್ಥಿಸಿ ಶಿವನಿಗೆ ಅಭಿಷೇಕ ಮಾಡಿದ ಮುಸ್ಲಿಂ ಮಹಿಳೆಯರು

    ಮಳೆಗಾಗಿ ಪ್ರಾರ್ಥಿಸಿ ಶಿವನಿಗೆ ಅಭಿಷೇಕ ಮಾಡಿದ ಮುಸ್ಲಿಂ ಮಹಿಳೆಯರು

    ಚಾಮರಾಜನಗರ: ಧರ್ಮಬೇಧ ಮರೆತು ಮಳೆಗಾಗಿ ಶಿವನಿಗೆ ಮುಸ್ಲಿಂ ಮಹಿಳೆಯರು ಜಲಾಭಿಷೇಕ ಮಾಡಿ ಪ್ರಾರ್ಥಿಸಿದ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿರುವ ಹಿನ್ನೆಲೆ ಜನರು ಆತಂಕದಲ್ಲಿದ್ದಾರೆ. ಆದ್ದರಿಂದ ವರುಣನ ಕೃಪೆಗಾಗಿ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಶಿವನ ಮೂರ್ತಿ ಇಟ್ಟು ಪೂಜೆ ಸಲ್ಲಿಸಲಾಯಿತು. ಜನಾರ್ದನ ಪ್ರತಿಷ್ಠಾನದಿಂದ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಶಿವನಿಗೆ ಸಾರ್ವಜನಿಕರಿಂದ ಜಲಾಭಿಷೇಕ ಹಾಗೂ ಕ್ಷೀರಾಭಿಷೇಕ ನೆರವೇರಿಸಲಾಯ್ತು. ಈ ವೇಳೆ ಮುಸ್ಲಿಂ ಮಹಿಳೆಯರು ಕೂಡ ಈ ಪೂಜೆಯಲ್ಲಿ ಭಾಗಿಯಾಗಿ ನೀಲಕಂಠನಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.

    ಈ ವಿಶೇಷ ಪೂಜೆಯಲ್ಲಿ ಸಾಕಷ್ಟು ಮಂದಿ ಭಕ್ತರು ಶಿವನಿಗೆ ಅಭಿಷೇಕ ನೆರವೇರಿಸಿ, ಪಾರ್ಥನೆ ಸಲ್ಲಿಸಿದರು. ಅದರಲ್ಲೂ ಮುಸ್ಲಿಂ ಮಹಿಳೆಯರು ಶಿವನಿಗೆ ಭಕ್ತಿಯಿಂದ ಅಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿರುವುದು ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಧರ್ಮ ಬೇರೆಯಾದರೂ ಎಲ್ಲಾ ದೇವರು ಒಂದೇ ಎನ್ನುವ ಸಂದೇಶವನ್ನು ಈ ಮುಸ್ಲಿಂ ಮಹಿಳೆಯರು ಸಾರಿದ್ದಾರೆ.

  • ಫಾನಿ ಚಂಡಮಾರುತ- ಜನತೆಗೆ ಕೋಲಾರ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ

    ಫಾನಿ ಚಂಡಮಾರುತ- ಜನತೆಗೆ ಕೋಲಾರ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ

    ಕೋಲಾರ: ಇನ್ನೆರಡು ದಿನಗಳ ಕಾಲ ರಾಜ್ಯದಲ್ಲಿ ಫಾನಿ ಚಂಡಮಾರುತ ತನ್ನ ರುದ್ರಾವತಾರ ತೋರಿಸುವ ಮಾಹಿತಿ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

    ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಫಾನಿ ಚಂಡಮಾರುತದ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲೆಯ ಜನರಿಗೆ ಸೂಚನೆ ನೀಡಿದ್ದಾರೆ. ಭಾರತದ ಹವಾಮಾನ ಇಲಾಖೆ ರವಾನಿಸಿರುವ ಸಂದೇಶದಂತೆ ಫಾನಿ ಚಂಡಮಾರುತ 100 ಕೀ.ಮೀ ವೇಗ ಪಡೆಯಲಿರುವ ಸಾಧ್ಯತೆಯಿದ್ದು, ಹವಾಮಾನ ವೈಪರೀತ್ಯ ಉಂಟಾಗಲಿದೆ. ಆದ್ದರಿಂದ ಜಿಲ್ಲೆಯ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ತಿಳಿಸಿದೆ.

    ಇಂದು ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗಿ, ಬಿಸಿ ಗಾಳಿ ಬೀಸಲಿದ್ದು, ಸೋಮವಾರ ಹಾಗೂ ಮಂಗಳವಾರ ಅಂದ್ರೆ ಏಪ್ರಿಲ್ 29 ಹಾಗೂ 30 ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ಓಡಾಟ ಮಾಡಬೇಡಿ, ಆದಷ್ಟು ಸುರಕ್ಷಿತವಾಗಿ ಮನೆಗಳಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅಲ್ಲದೆ ಮಿಂಚು ಸಿಡಿಲು ಸಂಭವಿಸಿದ ವೇಳೆ ಎಚ್ಚರದಿಂದಿರುವಂತೆ ಪ್ರಕಟಣೆ ಹೊರಡಿಸುವ ಮೂಲಕ ಕೋಲಾರ ಜಿಲ್ಲಾಡಳಿತ ಜಿಲ್ಲೆಯ ಜನರ ಹಿತ ಕಾಯಲು ಮುಂದಾಗಿದೆ.

  • ಚುನಾವಣಾ ಆಯೋಗದ ಬ್ಯಾನರ್‌ಗೆ ಮಹಾ ಮಂಗಳಾರತಿ

    ಚುನಾವಣಾ ಆಯೋಗದ ಬ್ಯಾನರ್‌ಗೆ ಮಹಾ ಮಂಗಳಾರತಿ

    ಉಡುಪಿ: ಚುನಾವಣಾ ಆಯೋಗ ಈ ಬಾರಿ ಚುನಾವಣೆಯನ್ನು ಬಹಳ ಸ್ಟ್ರಿಕ್ಟ್ ಮಾಡಿದೆ. ರಾಜಕಾರಣಿಗಳು ಒಂದು ಹೆಜ್ಜೆ ಎಕ್ಸ್ ಟ್ರಾ ಇಡಬೇಕಾದರೂ ಆಯೋಗದ ಅನುಮತಿ ಬೇಕು. ಇಷ್ಟೆಲ್ಲಾ ಸ್ಟ್ರಿಕ್ಟ್ ಆಗಿರುವ ಆಯೋಗ ಕಳೆದ ಚುನಾವಣೆಯ ಬ್ಯಾನರ್‍ನಲ್ಲೇ ಈ ಬಾರಿಯ ಚುನಾವಣೆಯನ್ನು ಮುಗಿಸುವ ಪ್ರಯತ್ನದಲ್ಲಿದೆ. ಇದರಿಂದ ಕೋಪಗೊಂಡಿರುವ ಸ್ಥಳೀಯರು ಉಡುಪಿಯ ಮಣಿಪಾಲದಲ್ಲಿ ಚುನಾವಣಾ ಆಯೋಗದ ಬ್ಯಾನರ್‌ಗೆ ಮಂಗಳಾರತಿ ಮಾಡಿದ್ದಾರೆ.

    ಚುನಾವಣಾ ಆಯೋಗದ ಬ್ಯಾನರ್‌ಗೆ ಮಂಗಳಾರತಿ ಮಾಡುವ ಮೂಲಕ ಸಾರ್ವಜನಿಕರು ಕೋಪ ಹೊರ ಹಾಕಿದ್ದಾರೆ. ಜಿಲ್ಲೆಯಲ್ಲಿ ಅನಗತ್ಯ ಬ್ಯಾನರ್ ಹಾಗೂ ಪತಾಕೆಗಳನ್ನು ತೆಗೆದು ಚುನಾವಣಾ ಆಯೋಗ ಕರ್ತವ್ಯಪರತೆ ಮೆರೆದಿದೆ. ಆದರೆ 2018ರಲ್ಲಿ ಅಳವಡಿಸಿರುವ ಸ್ವತಃ ಆಯೋಗದ ಬ್ಯಾನರ್ ಇನ್ನೂ ತೆರವು ಮಾಡಿಲ್ಲ. 2018 ಚುನಾವಣೆಯಲ್ಲಿ ಮತದಾನ ಮಾಡುವಂತೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಫೋಟೋ ಬಳಸಿಕೊಂಡು ಜಾಹಿರಾತು ಹಾಕಲಾಗಿತ್ತು.

    ಚುನಾವಣೆ ಮುಗಿದು ವರ್ಷ ಕಳೆದರೂ ಈ ಬ್ಯಾನರ್ ತೆಗೆದಿಲ್ಲ. ಹೊಸ ಬ್ಯಾನರ್ ಹಾಕಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಜನರನ್ನು ತಪ್ಪು ದಾರಿಗೆಳೆಯುವ ಈ ಬ್ಯಾನರ್ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆ ಬ್ಯಾನರ್ ತೆರವು ಮಾಡುವಂತೆ ಅನೇಕ ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಹಾಗಾಗಿ ಸ್ಥಳೀಯ ನಾಗರಿಕರು ಈ ಬ್ಯಾನರ್‍ಗೆ ಮಂಗಳಾರತಿ ಎತ್ತಿ, ಪೂಜೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. ಊರಿಗೆಲ್ಲ ಬುದ್ಧಿ ಹೇಳುವ ತಮ್ಮದೇ ವಿಭಾಗದ ಬ್ಯಾನರ್ ತೆರವು ಮಾಡದ ಚುನಾವಣಾ ಆಯೋಗದ ನಡೆಗೆ ಈ ರೀತಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

    https://www.youtube.com/watch?v=KZUZyyptlyc

  • ಪೊಲೀಸರ ಜೊತೆ ಗಸ್ತು ತಿರುಗುತ್ತಿದ್ದಾರೆ ಪಬ್ಲಿಕ್ಸ್..!

    ಪೊಲೀಸರ ಜೊತೆ ಗಸ್ತು ತಿರುಗುತ್ತಿದ್ದಾರೆ ಪಬ್ಲಿಕ್ಸ್..!

    – ಇಲಾಖೆಯಿಂದ ಐಡಿ ಕಾರ್ಡ್ ಭರವಸೆ

    ಧಾರವಾಡ: ಸಾಮಾನ್ಯವಾಗಿ ನೀವು ಪೊಲೀಸರು ಗಸ್ತು ತಿರುಗುತ್ತಿರುವ ಬಗ್ಗೆ ಕೇಳಿದ್ದೀರಿ. ಪ್ರತಿದಿನ ರಾತ್ರಿ ಪೊಲೀಸರು ಗಸ್ತು ತಿರುಗುವುದು ಸರ್ವೇ ಸಾಮಾನ್ಯ ಕೂಡಾ. ಆದರೆ ಧಾರವಾಡದಲ್ಲಿ ಪೊಲೀಸರ ಜೊತೆ ಸಾರ್ವಜನಿಕರು ಕೂಡ ಗಸ್ತು ತಿರುಗುತ್ತಾರೆ.

    ಹೌದು.. ಇಂತಹ ಹೊಸ ಗಸ್ತು ನಿಮಯವನ್ನು ಪೊಲೀಸರು ಆರಂಭ ಮಾಡಿದ್ದಾರೆ. ಕಳ್ಳತನ ಹಾಗೂ ರಾತ್ರಿ ನಡೆಯುವ ಅನೈತಿಕ ಚಟುವಟಿಕೆ ತಡೆಗಟ್ಟಲು ಈ ಹೊಸ ಬೀಟ್ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಆರಂಭ ಮಾಡಿದೆ. ಸೈಕಲ್ ಇರುವ ಕೆಲ ಸೈಕ್ಲಿಸ್ಟ್ ಗಳು ಇವರ ಜೊತೆ ಕೈ ಜೋಡಿಸಿದರೆ, ಇನ್ನೊಂದು ಕಡೆ ಕೆಲ ಯುವಕರು ಕೂಡ ನಡೆದಾಡುತ್ತಲೇ ಗಸ್ತು ತಿರುಗುತ್ತಿದ್ದಾರೆ. ಪ್ರತಿ ದಿನ ರಾತ್ರಿ ಸುಮಾರು 12 ಗಂಟೆಗೆ ಈ ಗಸ್ತು ಆರಂಭ ಮಾಡಿ, ಬೆಳಗ್ಗಿನ ಜಾವ 3 ರಿಂದ 4.00 ಗಂಟೆಯವರೆಗೆ ಗಸ್ತು ತಿರುಗಲಾಗುತ್ತಿದೆ.

    ಪ್ರತಿದಿನ ಒಂದು ಬಡಾವಣೆಯಲ್ಲಿ ಓಡಾಡುವ ಈ ಗಸ್ತು ತಂಡಕ್ಕೆ ಮುಂದಿನ ದಿನಗಳಲ್ಲಿ ಐಡಿ ಕಾರ್ಡ್ ಕೂಡ ಮಾಡಿಸಿಕೊಡುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದೆ. ಸದ್ಯಕ್ಕೆ 50ಕ್ಕೂ ಹೆಚ್ಚು ಸೈಕ್ಲಿಸ್ಟ್ ಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಅವರಲ್ಲಿ ಕೆಲವರು ವೈದ್ಯರು ಹಾಗೂ ಸರ್ಕಾರಿ ನೌಕರರು ಕೂಡ ಇದ್ದಾರೆ. ಇದರಿಂದ ನಾವು ಇಲ್ಲಿ ನಡೆಯುವ ಕಳ್ಳತನವನ್ನು ತಡೆಗಟ್ಟಬಹುದು. ಈ ಮೂಲಕ ಸಾರ್ವಜನಿಕರು ಮತ್ತು ಪೊಲೀಸರು ಒಟ್ಟಿಗೆ ಸೇರಿದರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇವೆ ಎಂದು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಮುರುಗೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯುತ್ ಕಂಬಗಳನ್ನ ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಇಂಜಿನ್ ಕೆಳಗಡೆ ಸಿಲುಕಿ ನರಳಾಡಿದ ಚಾಲಕ

    ವಿದ್ಯುತ್ ಕಂಬಗಳನ್ನ ಸಾಗಿಸ್ತಿದ್ದ ಟ್ರ್ಯಾಕ್ಟರ್ ಪಲ್ಟಿ- ಇಂಜಿನ್ ಕೆಳಗಡೆ ಸಿಲುಕಿ ನರಳಾಡಿದ ಚಾಲಕ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರೊಂದು ಪಲ್ಟಿಯಾಗಿದ್ದು, ಇಂಜಿನ್ ಕೆಳಗಡೆ ಸಿಲುಕಿ ಚಾಲಕ ನರಳಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ನಡೆದಿದೆ.

    ಹೊಸಕೋಟೆ ಚಿಂತಾಮಣಿ ಹೆದ್ದಾರಿಯ ಸಿದಾರ್ಥ ನಗರ ಬಳಿ ಈ ಅಪಘಾತ ಸಂಭವಿಸಿದೆ. ವಿದ್ಯುತ್ ಕಂಬಗಳನ್ನ ಸಾಗುಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾಗಿದೆ. ಏಕಾಏಕಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಇಂಜಿನ್ ಕೆಳಗಡೆ ಸಿಲುಕಿ ನರಳಾಡುತ್ತಿದ್ದನು. ಇದನ್ನು ಗಮನಿಸಿದ ಸಾರ್ವಜನಿಕರು ಚಾಲಕನನ್ನು ಹೊರಕ್ಕೆ ತೆಗೆದು ಸಹಾಯ ಮಾಡಿದ್ದಾರೆ.

    ಸರಿಯಾದ ಸಮಯಕ್ಕೆ ಚಾಲಕನ ನೆರವಿಗೆ ಬಂದ ಸಾರ್ವಜನಿಕರು ಆತನನ್ನು ರಕ್ಷಣೆ ಮಾಡಿದ್ದಾರೆ. ಆದ್ದರಿಂದ ಅದೃಷ್ಟವಶಾತ್ ಟ್ರ್ಯಾಕ್ಟರ್ ಚಾಲಕ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸದ್ಯ ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv