ಯಾದಗಿರಿ: ಕುಡುಕರ ಹಾವಳಿಯಿಂದಾಗಿ ಯಾದಗಿರಿ (Yadagiri) ನಗರದ ಉದ್ಯಾನವನಗಳು ಅದ್ವಾನಗೊಂಡಿವೆ. ನಗರದ ಹೊಸಳ್ಳಿ ಕ್ರಾಸ್‍ನ ನಜರತ್ ಕಾಲೋನಿಯ ಉದ್ಯಾನವನ ಮದ್ಯಪ್ರಿಯರ ಅಡ್ಡೆಯಾಗಿ ಮಾರ್ಪಟ್ಟಿದೆ.
ರಾತ್ರಿ ವೇಳೆ ಕುಡುಕರು ಮದ್ಯ ಕುಡಿದು ಬಾಟ್ಲಿ ಹಾಗೂ ಪ್ಲಾಸ್ಟಿಕ್ ಗಳನ್ನು ಗಾರ್ಡನ್ ಏರಿಯಾದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಈ ಪಾರ್ಕ್ ಕುಡುಕರ ಅಡ್ಡೆಯಾಗುತ್ತಿದ್ರು ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಉದ್ಯಾನವನ ಗಾರ್ಡನ್ ಬಳಿ ಕುಳಿತು ಮದ್ಯೆ ಸೇವಿಸಿ ಎಲ್ಲೆಂದರಲ್ಲಿ ಬಾಟ್ಲಿಗಳನ್ನ ಬಿಸಾಕಿ ಹೋಗುತ್ತಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಗಾರ್ಡನ್ (Guarden) ಇದ್ರೂ, ಕುಡುಕರ ಹಾವಳಿಗೆ ಬೇಸತ್ತು, ಸಾರ್ವಜನಿಕರು ವ್ಯಾಯಾಮ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಇದೇ ಗಾರ್ಡನ್ ನಲ್ಲಿ ಕುಳಿತು ಊಟ ಮಾಡಲು ಬರುತ್ತಾರೆ. ಇದು ಮಕ್ಕಳಿಗೂ ಭಾರೀ ಮುಜುಗರವನ್ನುಂಟು ಮಾಡ್ತಿದೆ. ಪೊಲೀಸ್ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗ್ತಿಲ್ಲ. ಹೀಗಾಗಿ ಸಾರ್ವಜನಿಕರು ರೋಸಿ ಹೋಗಿದ್ದು, ಈ ಕಡೆ ಮುಖವನ್ನೂ ಮಾಡ್ತಿಲ್ಲ. ಇದನ್ನೂ ಓದಿ: ತನ್ವೀರ್ ಪೀರಾ ಸಂಬಂಧಿ ಜೊತೆ ಯತ್ನಾಳ್ ವ್ಯವಹಾರ – ದಾಖಲೆ ಬಿಡುಗಡೆ
ಬೆಂಗಳೂರು/ನೆಲಮಂಗಲ: ಮೊಬೈಲ್ ಕಳ್ಳತನ (Mobile Thief) ಮಾಡುತ್ತಿದ್ದವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದೆ.
ಸುಮಾರು ದಿನಗಳಿಂದ ದಾಬಸ್ ಪೇಟೆ (Dabas Pete)ಬಸ್ ನಿಲ್ದಾಣದಲ್ಲಿ, ಆಟೋ ನಿಲ್ದಾಣದಲ್ಲಿ ಜನ ಸಂದಣಿ ಹೆಚ್ಚಾದ ಸಂದರ್ಭದಲ್ಲಿ ಬಸ್ಸಿಗೆ ಹತ್ತುವಾಗ ಪ್ರಯಾಣಿಕನಂತೆ ಬಂದು ತನ್ನ ಕೈ ಚಳಕ ತೋರಿಸಿ ಮೊಬೈಲ್ ಎಗರಿಸಿ ಎಸ್ಕೇಪ್ ಆಗುತ್ತಿದ್ದ ಕಳ್ಳನೋರ್ವನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ದಾಬಸ್ ಪೇಟೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿ ಅವೈಜ್ಞಾನಿಕ ಗಾಮಗಾರಿ ಆರೋಪ – ನಿರಂತರ ಅಪಘಾತದಿಂದ ರೊಚ್ಚಿಗೆದ್ದ ಗ್ರಾಮಸ್ಥರು
ಪ್ರಯಾಣಿಕರ ಮೊಬೈಲ್ ಕದ್ದು ಓಡುತ್ತಿದ್ದ ಆಸಾಮಿ, ಇಂದು ಅವನ ಬ್ಯಾಡ್ ಲಕ್ ಮೊಬೈಲ್ ಕದಿಯುವುದಕ್ಕೆ ಹೋಗಿ ದಾಬಸ್ ಪೇಟೆಯ ಮಧುಗಿರಿ ಪಾವಗಡ ಕಡೆ ತೆರಳುವ ಬಸ್‍ಗಳ ನಿಲ್ದಾಣದಲ್ಲಿ ಸಾರ್ವಜನಿಕರ ಕೈಗೆ ತಗಲಾಕಿ ಕೊಂಡಿದ್ದಾನೆ. ತಕ್ಷಣ ಆತನನ್ನು ಹಿಡಿದ ಸಾರ್ವಜನಿಕರು ಚೆನ್ನಾಗಿ ಬಾರಿಸಿ ಕೈ, ಕಾಲುಗಳನ್ನು ಹಿಡಿದು ಎತ್ತುಕೊಂಡು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲದೇ ಬಸ್ ನಿಲ್ದಾಣ, ಸಾರ್ವಜನಿಕರ ಪ್ರದೇಶಗಳಲ್ಲಿ ಪೊಲೀಸರು ಸರಿಯಾಗಿ ಗಸ್ತು ಮಾಡುತ್ತಿಲ್ಲವೆಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ
Live Tv
[brid partner=56869869 player=32851 video=960834 autoplay=true]
ರಾಯಚೂರು: ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ. ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗಳಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಡವರು ಆಸ್ಪತ್ರೆ ಬಿಲ್ ಕಟ್ಟಲು ಆಗದೇ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರಿಗೆ ಇಬ್ಬರು ಬಲಿಯಾದರು ನಗರಸಭೆ ಮಾತ್ರ ಇನ್ನೂ ಎಚ್ಚೆತ್ತಿಲ್ಲ.
ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಗಫರ್ ರಾಯಚೂರು ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಸಾವನ್ನಪ್ಪಿದ್ದಾನೆ. ಏಕಾಏಕಿ ವಾಂತಿ, ಭೇದಿ ಜೊತೆಗೆ ಕಿಡ್ನಿಯ ಮೇಲೆ ಪರಿಣಾಮ ಬೀರಿ ಡೈಯಲೈಸಿಸ್ ಹಂತಕ್ಕೆ ತಲುಪಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ನಿರ್ಜಲೀಕರಣದಿಂದ ಇಂದಿರಾನಗರ ನಿವಾಸಿ 40 ವರ್ಷದ ಮಲ್ಲಮ್ಮ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ
ನೂರಾರು ಜನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿರ್ಜಲೀಕರಣದಿಂದ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗದವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಕುಡಿದು ವಾಂತಿ, ಭೇದಿ, ಕಿಡ್ನಿ ಸಮಸ್ಯೆ ಸೇರಿ ನಾನಾ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಕೂಡ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.
ನಗರದ ಪ್ರತೀ ವಾರ್ಡ್‍ನ ಮನೆ ಮನೆಯಲ್ಲೂ ಅನಾರೋಗ್ಯದಿಂದ ಜನ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಶುದ್ದೀಕರಣ ಘಟಕದ ಸ್ವಚ್ಛತಾ ಕಾರ್ಯ ಈಗ ಆರಂಭಗೊಂಡಿದ್ದು, ಪೂರ್ಣ ಸ್ವಚ್ಛಗೊಳಿಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಿದೆ. ನಗರಸಭೆಯ ಸುಮಾರು ವರ್ಷಗಳ ನಿರ್ಲಕ್ಷ್ಯಕ್ಕೆ ಈಗ ನಗರದಲ್ಲಿ ಇಬ್ಬರು ಬಲಿಯಾಗಿದ್ದು, ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಲಕ್ಷ್ಯ ಹಿನ್ನೆಲೆ ನಗರಸಭೆ ಎಇಇ ವೆಂಕಟೇಶ್ ಹಾಗೂ ಜೆ.ಇ ಕೃಷ್ಣ ಮೇಲೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್
ಆಲಂ, ಪೊಟ್ಯಾಸಿಯಂ, ಬ್ಲೀಚಿಂಗ್ ಪೌಡರ್‌ನ್ನು ಸಮರ್ಪಕವಾಗಿ ಬಳಸಿ ನೀರನ್ನು ಶುದ್ದೀಕರಿಸದೇ ಸರಬರಾಜು ಮಾಡುತ್ತಿರುವ ನಗರಸಭೆ ಜನರಲ್ಲಿ ಈಗ ಜಾಗೃತಿ ಮೂಡಿಸಲು ಮುಂದಾಗಿದೆ. ನೀರನ್ನು ಕಾಯಿಸಿ, ಸೋಸಿ ಕುಡಿಯಿರಿ ಅಂತ ಹೇಳುತ್ತಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಲೇ ಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಯಚೂರು: ಜಿಲ್ಲೆಯನ್ನ ಬಿಸಿಲನಾಡು ಅಂತ ಕರೆಯುವುದೇನೋ ನಿಜ ಆದರೆ ಇಲ್ಲಿನ ಭಿಕ್ಷುಕರಿಗೆ ಬಿಸಿಲು ತಟ್ಟುತ್ತೋ ಇಲ್ಲವೋ ಗೊತ್ತಿಲ್ಲ. ಚಿಕ್ಕಮಕ್ಕಳನ್ನ ಬಳಸಿಕೊಂಡು ಸುಡುಬಿಸಿಲಲ್ಲಿ ಮಹಿಳೆಯರು ಭಿಕ್ಷೆ ಬೇಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಎಲ್ಲೆಲ್ಲಿಂದಲೋ ಬರುವ ಭಿಕ್ಷುಕರ ಕಾಟಕ್ಕೆ ರಾಯಚೂರು ಜನ ಸಹ ಬೇಸತ್ತು ಹೋಗಿದ್ದಾರೆ.
ಪುಟ್ಟಕಂದಮ್ಮಗಳನ್ನ ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವವರ ಹಾವಳಿ ಇತ್ತೀಚೆಗೆ ನಗರದಲ್ಲಿ ವಿಪರೀತವಾಗಿದೆ. ಸುಡುಬಿಸಿಲಲ್ಲೂ ಸದಾ ನಿದ್ರೆಗೆ ಜಾರಿರುವ ಕಂದಮ್ಮಗಳೇ ಈ ಮಹಿಳೆಯರಿಗೆ ಬಂಡವಾಳ. ಟ್ರಾಫಿಕ್ ಸಿಗ್ನಲ್, ಹೋಟೆಲ್‍ಗಳ ಮುಂದೆ, ನಗರದ ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ ಸೇರಿದಂತೆ ನಗರದ ಹಲವೆಡೆ ಬೆಳಗ್ಗೆಯಿಂದ ರಾತ್ರಿವರೆಗೆ ನೂರಾರು ಜನ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ.
ಸಾರ್ವಜನಿಕರಿಗೆ ಈ ಭಿಕ್ಷುಕರದ್ದೇ ದೊಡ್ಡ ಕಾಟವಾಗಿದೆ. ಸಿಗ್ನಲ್‍ಗಳಲ್ಲಂತೂ ಸಿಕ್ಕಾಪಟ್ಟೆ ಹಿಂಸೆ ಕೊಡುತ್ತಾರೆ. ಆದರೆ ಇವರು ಭಿಕ್ಷಾಟನೆಗೆ ಬಳಸುವ ಮಕ್ಕಳು ಸದಾ ನಿದ್ರೆಯಲ್ಲೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಬೇರೆ ಜಿಲ್ಲೆ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಬಂದಿರುವ ಭಿಕ್ಷುಕರು ಇಲ್ಲೆ ಸೇರಿಕೊಂಡಿದ್ದಾರೆ.
ಕಂದಮ್ಮಗಳಿಗೆ ನಿದ್ರೆ ಬರುವ ಔಷಧಿ ನೀಡಿ ಭಿಕ್ಷಾಟನೆ ದಂಧೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದೇ ಮಗುವನ್ನ ಬೇರೆ ಬೇರೆ ಮಹಿಳೆಯರು ಶಿಫ್ಟ್ ಪ್ರಕಾರ ಬಳಸಿಕೊಳ್ಳುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ನಿರಾಶ್ರಿತರ ಕೇಂದ್ರ ಇಲ್ಲದೆ ಇರುವುದು ಹೆಚ್ಚು ಮಹಿಳಾ ಭಿಕ್ಷುಕರು ಇರಲು ಕಾರಣವಾಗಿದೆ. ಇಳಿವಯಸ್ಸಿನ ವೃದ್ದೆಯರು, ಅನಾರೋಗ್ಯ ಪೀಡಿತ ಅಜ್ಜಿಯರು ಸಹ ಸುಡುಬಿಸಿಲಲ್ಲೇ ಭಿಕ್ಷಾಟನೆ ಮಾಡುತ್ತಿದ್ದರೂ ಅವರ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಜನ ಆರೋಪಿಸಿದ್ದಾರೆ.
ಪುಟ್ಟ ಕಂದಮ್ಮಗಳನ್ನ ಭಿಕ್ಷಾಟನೆಯ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಸುಡುಬಿಸಿಲಲ್ಲಿ ಏಳೆಂಟು ತಿಂಗಳ ಹಸುಗೂಸುಗಳನ್ನ ಹಿಡಿದು ಬರುವ ಭಿಕ್ಷುಕರ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕಿದೆ. ಭಿಕ್ಷುಕರ ಹಾವಳಿಯನ್ನ ತಪ್ಪಿಸಬೇಕು ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೀದರ್: ಎಕ್ಸ್ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಾಪರಿಗಳಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ನಗರದ ಶಿವನಗರದ ಪಾಪನಾಶ ಗೇಟ್ ಬಳಿ ನಡೆದಿದೆ.
ಡ್ರೈಫ್ರೂಟ್ಸ್ ಕೊಂಡುಕೊಳ್ಳಲು ಬಂದಾಗ ಸಾರ್ವಜನಿಕರು ದಿನಾಂಕ ಪರಿಶೀಲನೆ ಮಾಡಿ ವ್ಯಾಪಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುತ್ತಿದ್ದಂತ್ತೆ ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ತುಂಬಿಕೊಂಡು ಅಂಗಡಿಗಳನ್ನು ಮುಚ್ಚಿಕೊಂಡು ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಪರಾರಿಯಾಗಿದ್ದಾರೆ.
ಹಾಸನ: ವರ್ಷಕ್ಕೊಮ್ಮೆ ಮಾತ್ರ ದರುಶನ ನೀಡುವ ಹಾಸನ ನಗರದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಇಂದು ಕೊನೆಯ ದಿನ. ನಾಳೆ ಮಧ್ಯಾಹ್ನ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಹೀಗಾಗಿ ಹಾಸನಾಂಬೆ ನೋಡಲು ಇಂದು ಭಕ್ತ ಸಾಗರವೇ ಹರಿದು ಬಂದಿದೆ.
ಇಂದು ಹಾಸನಾಂಬೆ ಸನಿಹದಲ್ಲಿರೋ ಸಿದ್ದೇಶ್ವರ ಸ್ವಾಮಿಯ ಚಂದ್ರ ಮಂಡಲೋತ್ಸವ, ರಥೋತ್ಸವ, ಕೊಂಡ ಹಾಯುವ ಕಾರ್ಯಕ್ರಮ ರಾತ್ರಿ ನೇರವೇರುತ್ತದೆ. ಹೀಗಾಗಿ ಇಂದು ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಇದ್ದ ಕಾರಣ ಅಂತಿಮ ದಿನ ದೇವಿ ದರ್ಶನ ಪಡೆದ ಭಕ್ತರು ಪುನೀತ ಭಾವ ವ್ಯಕ್ತ ಪಡಿಸಿದರು. ಇದನ್ನೂ ಓದಿ: ಹಾಸನನಾಂಬೆ ದರ್ಶನಕ್ಕೂ ತಟ್ಟಿದ ಪುನೀತ್ ಸಾವಿನ ನೋವು
ಅಕ್ಟೋಬರ್ 28 ರಂದು ಹಾಸನಾಂಬೆ ದೇವಾಲಯ ಗರ್ಭಗುಡಿ ಬಾಗಿಲನ್ನು ತೆರೆಯಲಾಗಿತ್ತು. ಅಂದಿನಿಂದ ನವೆಂಬರ್ 5ರ ವರೆಗೆ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ಮಾಡಿತ್ತು. ಇಂದೂ ಕೂಡ ಈ ವರ್ಷದ ಕಡೆ ದಿನ ದೇವಿ ದರ್ಶನ ಪಡೆಯಲು ಭಕ್ತರು ಮುಗಿಬಿದ್ದರು. ಹಾಗೆ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಪಂಚೆ, ಷಲ್ಯೆ ಧರಿಸಿ ಹಾಸನಾಂಬೆ ಸೇವೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ
ಈ ಬಾರಿ ಹಾಸನಾಂಬೆ ದೇವಾಲಯ ಒಟ್ಟು 9 ದಿನ ಬಾಗಿಲು ತೆರೆಯಲಾಗಿದೆ. ಇದರಲ್ಲಿ 7 ದಿನ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಾಳೆ ಮಧ್ಯಾಹ್ನ 12.30ರ ಸಮಯಕ್ಕೆ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ವಿವಿಧ ಪೂಜಾ ಕೈಂಕರ್ಯ ಈಡೇರಿಸಿ ಮುಚ್ಚಲಾಗುವುದು. ಹೀಗಾಗಿ ಅಂತಿಮ ದಿನ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ.
ನೆಲಮಂಗಲ: ಗ್ರಾಮ ಪಂಚಾಯತಿ ಅಧಿಕಾರಿಗಳಿಂದ, ಕಂದಾಯ ವಸೂಲಾತಿಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿರುವ ಘಟನೆ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಅಧಿಕಾರಿಗಳು ಗ್ರಾಮಸಭೆ ಅಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ, ಕಂದಾಯ ವಸೂಲಾತಿಯಲ್ಲಿ ಆಗುತ್ತಿರುವ ತಾರತಮ್ಯದ ಕುರಿತು ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಆಪ್ತರಿಗೆ ಸರ್ಕಾರದಲ್ಲಿ ಮಣೆ – ರೇಣುಕಾಚಾರ್ಯ, ಜೀವರಾಜ್ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಮರು ನೇಮಕ
ಕಳೆದ 5 ವರ್ಷದಿಂದ ಕಾರ್ಖಾನೆಗಳ ಕಂದಾಯ ಬಾಕಿ ಇದೆ. ಬಡವರ ಕಂದಾಯ ಬಾಕಿಯಿದ್ದರೆ ಕಟ್ಟುವಂತೆ ಒತ್ತಾಯ ಮಾಡುತ್ತಿರಿ ಬಲಾಢ್ಯರಿಂದ ಕಂದಾಯ ವಸೂಲಿ ಮಾತ್ರ ಯಾಕೆ ಮಾಡಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ವೇಳೆ ಅಧಿಕಾರಿಯಿಂದ ಮೈಕ್ ಕಿತ್ತು ಆಕ್ರೋಶ ಹೊರಹಾಕಿದ್ದಾರೆ. 50 ಸಾವಿರ ಕಂದಾಯ ಕಟ್ಟುವ ಕಂಪನಿಯಿಂದ ಕಂದಾಯ ವಸೂಲಿ ಮಾಡಿಲ್ಲ. ಬಡವರ ಮನೆ ಮುಂದೆ ಬಂದು ಹಣ ಕಟ್ಟುವಂತೆ ಹಿಂಸೆ ಕೊಡುತ್ತಿರಿ ಎಂದು ಪಿಡಿಓ ಅಧಿಕಾರಿ ಪ್ರಶಾಂತ್‍ಗೆ ಗ್ರಾಮಸ್ಥರು ಚಳಿ ಬಿಡಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ- ಮಗಳ ಸಾವಿನ ಬಗ್ಗೆ ಅನುಮಾನ ಇದೆ ಎಂದ ತಂದೆ
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಪಂಚಾಯತಿಯಿಂದ ಸಮರ್ಪಕವಾಗಿ ಗ್ರಾಮಗಳ ಅಭಿವೃದ್ಧಿ ಮಾಡುತ್ತಿಲ್ಲ. ನಾನಾ ಸಮಸ್ಯೆಗಳನ್ನ ಜನರು ಎದುರಿಸುತಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಜನರು ಸಭೆಯಲ್ಲಿ ಆಗ್ರಹಿಸಿದ್ದಾರೆ.
ಸ್ಕೂಟರ್ ಮಾಲೀಕರಾದ ಸಂಜೀವ್ ಎಂಬುವವರು ಎಂಸಿಎಫ್ ಉದ್ಯೋಗಿಯಾಗಿದ್ದು, ಕೆಲಸದ ನಿಮಿತ್ತ ತಮ್ಮ ಸ್ಕೂಟರ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ಸ್ಕೂಟರ್ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಭಯಗೊಂಡ ಅವರು, ತಕ್ಷಣ ಸ್ಕೂಟರ್ ನಿಲ್ಲಿಸಿ ಕೆಳಗಿಳಿದಿದ್ದಾರೆ. ಅಷ್ಟರಲ್ಲಿ ಸ್ಕೂಟರ್ ಹೊತ್ತಿ ಉರಿಯಲಾರಂಭಿಸಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ
ಏಕಾಏಕಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಸ್ಕೂಟರ್ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಕೂಡ ಸ್ಕೂಟರ್ ಭಾಗಶಃ ಸುಟ್ಟು ಕರಕಲಾಗಿದೆ. ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: ಎಗ್‍ರೈಸ್ ತಿನ್ನಿಸೋ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ – ಆರೋಪಿ ಅರೆಸ್ಟ್
ಗದಗ: ಕಳೆದ 3 ದಿನಗಳಿಂದ ಸುರಿದ ಮಳೆಗೆ ರಸ್ತೆಗಳು ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ಹಾಗೂ ಪಾದಾಚಾರಿಗಳು ಈ ಭಾಗದಲ್ಲಿ ಓಡಾಡುವುದು ದುಸ್ತರವಾಗಿದೆ. ಬಿದ್ದಿರುವ ಗುಂಡಿಗೆ ಮಣ್ಣು ಹಾಕಿ ಸಮನಾಗಿ ಮಾಡಿದರೂ ಸಂಚಾರ ಸುಗಮವಾಗುತ್ತದೆ. ಇದನ್ನು ಮಾಡಲು ನಗರಸಭೆ ಮನಸ್ಸು ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಬೆಟಗೇರಿ ಭಾಗದಲ್ಲಿರುವ 6, 9, 10, 13ನೇ ವಾರ್ಡ್‍ಗಳಲ್ಲಿನ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು ಬಿದ್ದು ನೀರು ತುಂಬಿಕೊಂಡಿವೆ. ಸಂಚರಿಸಲು ಕಷ್ಟವಾಗಿದೆ. ಮನೆಯಿಂದ ಮಕ್ಕಳು ಹಿರಿಯರು ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ಈ ಭಾಗದ ರಸ್ತೆಗಳು ಬಹುತೇಕವಾಗಿ ಮಣ್ಣಿನಿಂದ ಕೂಡಿದ್ದು, ಸ್ವಲ್ಪ ಮಳೆಯಾದರೆ ಸಾಕು ಜನರು ಓಡಾಡಲು ಹರಸಾಹಸ ಪಡಬೇಕಾಗುತ್ತೆ ಎಂದು ನಗರಸಭೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ.
ಬೆಟಗೇರಿಯ ಭಗೀರಥ ನಗರ, ಶರಣಬಸವೇಶ್ವರ ನಗರ, ವೀರನಾರಾಯಣ ಬಡಾವಣೆ, ಎಸ್.ಕೃಷ್ಟಾ ಈ ಎಲ್ಲಾ ಬಡಾವಣೆಗಳು ಸುಮಾರು ಎರಡೂ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗು ಸಹ ಮೂಲಭೂತ ಸೌಲಭ್ಯಗಳಿಂದ ಈ ಭಾಗದ ಜನರು ವಂಚಿತರಾಗಿದ್ದಾರೆ. ಸರಿಯಾದ ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯಗಳು ಮರೀಚಿಕೆಯಾಗಿದೆ. ಇದನ್ನೂ ಓದಿ: ಅ. 1ರಿಂದ ಥಿಯೇಟರ್‌ಗಳು ಹೌಸ್‍ಫುಲ್- ಕಂಡೀಷನ್ಸ್ ಅಪ್ಲೈ
ನಾವು ಜಿಲ್ಲಾ ಕೇಂದ್ರದಲ್ಲಿ ವಾಸವಾಗಿದ್ದೇವಾ ಅಥವಾ ಗ್ರಾಮೀಣ ಭಾಗದಲ್ಲಿ ಇದ್ದೇವೆ ಎಂಬ ಅನುಮಾನ ನಮ್ಮಲ್ಲೇ ವ್ಯಕ್ತವಾಗುತ್ತದೆ. ಈ ಬಾರಿ ನಡೆಯುವ ನಗರಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುವ ಚಿಂತನೆ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಸಿಸಿ ರಸ್ತೆಗಳು ಮಾಡಬೇಕು. ಸರಿಯಾಗಿ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವವರಿಗೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳಿಯ ನಿವಾಸಿಗಳು ಹೇಳಿದರು. ಇದನ್ನೂ ಓದಿ: ನಟ ದುನಿಯಾ ವಿಜಯ್ ನೋಡಲು ಮುಗಿಬಿದ್ದ ಅಭಿಮಾನಿಗಳು!
ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರು ಸಾಕು, ಹೊಸ ಬಸ್ ಸ್ಟಾಂಡ್ ರಸ್ತೆ, ಭೂಮರಡ್ಡಿ ವೃತ್ತ, ಹಳೇ ಡಿಸಿ ಆಫೀಸ್ ರಸ್ತೆ, ಎಪಿಎಂಸಿ ರೋಡ್ ಮುಂತಾದ ರಸ್ತೆಗಳು ಸಂಪೂರ್ಣ ಹಾಳಾಗುತ್ತವೆ. ಇದು ಗೊತ್ತಿದ್ದರೂ ಸಹ ಜಿಲ್ಲಾಡಳಿತ ಮತ್ತು ನಗರಸಭೆಯ ಇತ್ತ ಕಡೆಗೆ ಗಮನ ಹರಿಸಿಲ್ಲ. ನಗರಸಭೆ ವ್ಯಾಪ್ತಿಯ ನಗರಗಳಾದ ಪಂಚಾಕ್ಷರಿ ನಗರ, ಬಳ್ಳಾರಿ ಗೇಟ್, ಝೆಂಡಾ ಸರ್ಕಲ್, ಕುರಹಟ್ಟಿ ಪೇಟೆ ರಸ್ತೆ, ಬೆಟಗೇರಿಯ ತರಕಾರಿ ಮಾರುಕಟ್ಟೆ, ಬೆಟಗೇರಿ ಪೆÇಲೀಸ್ ಠಾಣೆ, ಕಂಬಾರ ಗಲ್ಲಿ, ಸಿದ್ಧಲಿಂಗ ನಗರದ ಸರಕಾರ ಪ್ರೌಢ ಶಾಲೆಯ ಆಟದ ಮೈದಾನವೂ ದುಸ್ಥಿತಿಯಿಂದ ಕೂಡಿವೆ. ಇಂತಹ ರಸ್ತೆಯಲ್ಲೇ ಜನರು ನಿತ್ಯ ಸಂಚರಿಸುವುದು ಅನಿವಾರ್ಯವಾಗಿದೆ.
ಚಿಕ್ಕಬಳ್ಳಾಪುರ: ಅಯ್ಯಯ್ಯೋ ಮಾರಕಾಸ್ತ್ರಗಳನ್ನ ತಂದವ್ರೆ…ನಾನು ಬದುಕಲ್ಲ ನೇಣು ಹಾಕೋತಿನಿ ಅಂತ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಚಿಕ್ಕಬಳ್ಳಾಪುರ ನಗರದ ಎಚ್.ಎಸ್ ಗಾರ್ಡನ್ ಬಳಿ ಹೈಡ್ರಾಮಾ ಮಾಡಿದ್ದಾರೆ.
ಎಚ್.ಎಸ್ ಗಾರ್ಡನ್ ಬಳಿ ನಿವೃತ್ತ ಪೊಲೀಸ್ ಅಧಿಕಾರಿ ಆಶ್ವತ್ಥನಾರಾಯಣಪ್ಪ ಎಂಬವರು ತಮ್ಮ ಸ್ವಂತ ಜಮೀನಿನಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಲೆಂದು ಕಂಪನಿಗೆ ಜಾಗ ಕೊಟ್ಟಿದ್ದಾರೆ. ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು ಅಂತ ಸುತ್ತಮುತ್ತಲಿನ ಸ್ಥಳೀಯರು ಕಾಮಗಾರಿ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಸ್ಕರ್ ಆತ್ಮ ಸ್ವರ್ಗ ಸಾಮ್ರಾಜ್ಯ ತಲುಪಿದೆ – ಉಡುಪಿ ಬಿಷಪ್ ಪ್ರಾರ್ಥನೆ
ಸ್ಥಳೀಯರ ಆಕ್ಷೇಪಕ್ಕೆ ಮಣಿಯದ ಅಶ್ವತ್ಥನಾರಾಯಣಪ್ಪ, ಇದು ನನ್ನ ಸ್ವಂತ ಜಮೀನು ನಾನು ಏನ್ ಬೇಕಾದ್ರೂ ಮಾಡ್ಕೋತಿನಿ ಅಂತ ಹೇಳಿದ್ದಾರೆ. ಇದರಿಂದ ಕೆರಳಿರೋ ಸ್ಥಳೀಯರು, ಅಶ್ವತ್ಥನಾರಾಯಣಪ್ಪ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಂತೆ ಕ್ಯಾಮೆರಾ ಮುಂದೆ ಅಯ್ಯಯ್ಯೋ ನನ್ನ ಮಾರಕಾಸ್ತ್ರಗಳಿಂದ ಹಲ್ಲೆ ಮಾಡ್ತಾವ್ರೆ ಅಂತ ಹೈಡ್ರಾಮಾ ಶುರು ಮಾಡಿದ್ದಾರೆ. ಇದನ್ನೂ ಓದಿ: ಹಿಂದೂ ದೇವಾಲಯಗಳ ತೆರವು ವಿರೋಧ: ಸರ್ಕಾರದ ವಿರುದ್ಧ ಭಜರಂಗದಳ ಆಕ್ರೋಶ
ಸ್ಥಳೀಯರು ನಗರಸಭೆ ಅನುಮತಿ ಪಡೆಯದೆ ಮೊಬೈಲ್ ಟವರ್ ನಿರ್ಮಾಣ ಮಾಡ್ತಿದ್ದಾರೆ ಅಂತ ನಗರಸಭೆಗೆ ದೂರು ನೀಡಿದ್ದು, ನಗರಸಭೆ ಪರಿಸರ ಅಭಿಯಂತರರು ಸ್ಥಳಕ್ಕೆ ಬಂದು ನೋಟಿಸ್ ನೀಡಿದ್ದಾರೆ. ಆದರೂ ಅಶ್ವತ್ಥನಾರಾಯಣಪ್ಪ ನೋಟಿಸ್ ಪಡೆದುಕೊಂಡಿಲ್ಲ. ಹೀಗಾಗಿ ಟವರ್ ನಿರ್ಮಾಣ ಮಾಡ್ತಿದ್ದ ಜಾಗದ ಗೇಟ್ ಗೆ ಅಧಿಕಾರಿಗಳು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಅನುಮತಿ ಪಡೆಯದೆ ಅಕ್ರಮವಾಗಿ ಟವರ್ ನಿರ್ಮಾಣ ಮಾಡಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣ ಮಾಡಬಾರದು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸೋಕೆ ಅಶ್ವತ್ಥನಾರಾಯಣಪ್ಪ ನಿರಾಕರಿಸಿದ್ದಾರೆ.
ಪರಿಸರ ಅಭಿಯಂತರರು ಈ ಬಗ್ಗೆ ಮಾತನಾಡಿ, ನಮಗೆ ಸ್ಥಳೀಯರು ದೂರು ನೀಡಿದ್ರು. ನಾವು ಅಶ್ವತ್ಥನಾರಾಯಣಪ್ಪನವರನ್ನು ಭೇಟಿ ಮಾಡಿ ನೋಟಿಸ್ ನೀಡಲು ಮುಂದಾಗಿದ್ದೇವೆ. ಆದರೆ ಅವರು ನಮಗೆ ನಾನು ನಿವೃತ್ತ ಪೊಲೀಸ್ಅಧಿಕಾರಿ ಅಂತ ಐಡಿ ಕಾರ್ಡ್ ತೋರಿಸಿದ್ರು. ನಿಮ್ಮ ನೋಟಿಸ್ ನನಗೆ ಬೇಡ. ನ್ಯಾಯಾಲಯದಿಂದ ಕೊಡಿಸಿ ಅಂತ ನೋಟಿಸ್ ಪಡೆದುಕೊಂಡಿಲ್ಲ ಎಂದು ಹೇಳಿದರು.