Tag: ಸಾರು

  • ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಯಾವಾಗಲೂ ಒಂದೇ ರೀತಿಯ ಸಾರು ತಿಂದು ನಿಮ್ಮ ನಾಲಿಗೆಗೆ ಬೋರ್ ಆಗಿರುತ್ತೆ. ಅದಕ್ಕೆ ಇಂದು ನಿಮ್ಮ ನಾಲಿಗೆಗೆ ಹಳ್ಳಿ ರುಚಿಯನ್ನು ತೋರಿಸಿ. ಇದನ್ನು ಮಾಡುವುದು ತುಂಬಾ ಸರಳ. ಹೆಚ್ಚು ಮಸಾಲೆ ಏನು ಬೇಡ. ಸಿಂಪಲ್ ಆಗಿ ಮಾಡುವ ಈ ರೆಸಿಪಿಯನ್ನು 20 ನಿಮಿಷದಲ್ಲಿಯೇ ಮಾಡಬಹುದು. ಹಾಗಾದರೆ ಯಾವುದು ಆ ರೆಸಿಪಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ಕಾಯಿ ಹಾಲು ಕಾಳುಮೆಣಸಿನ ಸಾರು’. ಈ ಸಾರನ್ನು ನೀವು ಮನೆಯಲ್ಲಿಯೇ ಟ್ರೈ ಮಾಡಿ.

    ಬೇಕಾಗುವ ಸಾಮಾಗ್ರಿಗಳು:
    * ಕಾಳು ಮೆಣಸು – 1 ಟೀಸ್ಪೂನ್
    * ಜೀರಿಗೆ – 1/2 ಟೀಸ್ಪೂನ್
    * ಬೆಳ್ಳುಳ್ಳಿ – 7 ಎಸಳು
    * ಹಸಿ ಶುಂಠಿ – 1/2 ಇಂಚು
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಬೆಲ್ಲ – 1/2 ಟೀಸ್ಪೂನ್


    * ತೆಂಗಿನಕಾಯಿ ಹಾಲು – 1 ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ನಿಂಬೆ ರಸ – 2 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ಸಾಸಿವೆ – 1/2 ಟೀಸ್ಪೂನ್
    * ಒಣ ಮೆಣಸಿನಕಾಯಿ – 2
    * ಕರಿಬೇವು – 10

    ಮಾಡುವ ವಿಧಾನ:
    * ಒಂದು ಕುಟ್ಟಾಣಿಗೆ ಕಾಳು ಮೆಣಸು, ಜೀರಿಗೆ ಹಾಕಿ, ಕುಟ್ಟಿ ಪುಡಿಮಾಡಿ. ಇದಕ್ಕೆ 6 ರಿಂದ 7 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಹಸಿ ಶುಂಠಿ ಹಾಕಿ ತರಿ ತರಿಯಾಗಿ ಕುಟ್ಟಿ.
    * ಒಂದು ಪಾತ್ರೆಗೆ 2 ಕಪ್ ನೀರು ಹಾಕಿ, ಅದಕ್ಕೆ ಕುಟ್ಟಿದ ಪೇಸ್ಟ್ ಹಾಕಿ ಕಲಕಿ, 6 ರಿಂದ 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ನಂತರ ಕಾಲು ಅರಿಶಿಣ ಪುಡಿ, ಉಪ್ಪು ಹಾಕಿ ಕಲಕಿ. ಇದಕ್ಕೆ ಅರ್ಧ ಚಮಚ ಬೆಲ್ಲ, ಕಾಯಿ ಹಾಲು ಹಾಕಿ, ಚೆನ್ನಾಗಿ ಕಲಕಿ 3 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲಕಿ.
    * ಒಗ್ಗರಣೆಗೆ ಒಂದು ಚಿಕ್ಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಣ ಮೆಣಸಿನಕಾಯಿ ಮುರಿದು ಹಾಕಿ. ಇದಕ್ಕೆ ಕರಿಬೇವು ಹಾಕಿ ಹುರಿಯಿರಿ. ನಂತರ ಈ ಒಗ್ಗರಣೆಯನ್ನು ಸಾರಿಗೆ ಹಾಕಿ, ಚೆನ್ನಾಗಿ ಕಲಸಿದರೆ ರುಚಿಯಾದ ತಿಳಿ ಸಾರು ಸಿದ್ಧ.

    Live Tv
    [brid partner=56869869 player=32851 video=960834 autoplay=true]

  • ಮುದ್ದೆ ಜೊತೆ ಸವಿಯಿರಿ ಮಸ್ಸೊಪ್ಪು ಸಾರು

    ಮುದ್ದೆ ಜೊತೆ ಸವಿಯಿರಿ ಮಸ್ಸೊಪ್ಪು ಸಾರು

    ಸ್ಸೊಪ್ಪು ಎಂಬುದು ಜನಪ್ರಿಯ ಸೊಪ್ಪು ಸಾರಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸಾರಿನ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಅದರಲ್ಲಿಯೂ ಮುದ್ದೆ ಜೊತೆ ಇದರ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಈ ಸಾರು ಮಾಡುವುದು ತುಂಬಾ ಸುಲಭ. ಅದರಲ್ಲಿಯೂ ಇದರಲ್ಲಿ ಎಲ್ಲ ರೀತಿಯ ಸೊಪ್ಪು ಮಿಶ್ರಣವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟ್ರೈ ಮಾಡಿ.

    ಬೇಕಾಗಿರುವ ಪದಾರ್ಥಗಳು:
    * ಕಟ್ ಮಾಡಿದ ಪಾಲಕ್ ಸೊಪ್ಪು – 2 ಕಪ್
    * ಸಬ್ಬಸಿಗೆ ಸೊಪ್ಪು – 1 ಕಪ್
    * ಮೆಂತ್ಯ ಸೊಪ್ಪು – 1 ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ಬೆಳೆ – 1 ಕಪ್
    * ಕಟ್ ಮಾಡಿದ ಈರುಳ್ಳಿ – ಒಂದುವರೆ ಕಪ್
    * ಕಟ್ ಮಾಡಿದ ಟೊಮೆಟೊ – 2 ಕಪ್
    * ಹಸಿ ಮೆಣಸಿನಕಾಯಿ – 3
    * ತುರಿದ ತೆಂಗಿನಕಾಯಿ – ಅರ್ಧ ಕಪ್


    * ಹುಣಸೆಹಣ್ಣು – 1 ಟೀಚಮಚ
    * ಸಾಂಬಾರ್ ಪುಡಿ – 2 ಚಮಚ
    * ಅಡುಗೆ ಎಣ್ಣೆ – 2-3 ಟೀಸ್ಪೂನ್
    * ಸಾಸಿವೆ – ಅರ್ಧ ಚಮಚ
    * ಕರಿಬೇವಿನ ಎಲೆಗಳು – 5 ಎಲೆಗಳು
    * ಒಣ ಕೆಂಪು ಮೆಣಸಿನಕಾಯಿ – 2
    * ಬೆಳ್ಳುಳ್ಳಿ – 4
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಎಲ್ಲ ಸೊಪ್ಪುಗಳನ್ನು ನೀರಿನಲ್ಲಿ ತೊಳೆಯಿರಿ. ಬೆಳೆ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು 1 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಸ್ಪಲ್ಪ ಸಮಯ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಮಸಿಯಿರಿ. ಆದರೆ ಹೆಚ್ಚು ನುಣ್ಣಗೆ ಮಸಿಯ ಬಾರದು.
    * ಪ್ಯಾನ್‍ನಲ್ಲಿ ಎಣ್ಣೆ ಸಾಸಿವೆ, ಕರಿಬೇವು, ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆಹಣ್ಣು ರಸ ಮತ್ತು ಸಾಂಬಾರ್ ಪುಡಿಯನ್ನು ಹಾಕಿ ಫ್ರೈ ಮಾಡಿ.
    * ಇದಕ್ಕೆ ನೀರು 2 ರಿಂದ 3 ಕಪ್ ನೀರು ಸೇರಿಸಿ ಮಸಿದ ಸೊಪ್ಪಿನ ಮಿಶ್ರಣವನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಸೇರಿಸಿ ಕುದಿಸಿ.
    * ಕುದಿಯಲು ಪ್ರಾರಂಭಿಸಿದ ನಂತರ, ಗ್ಯಾಸ್ ಆಫ್ ಮಾಡಿ.

    – ಈ ಸಾರನ್ನು ತುಪ್ಪದ ಜೊತೆ ರಾಗಿ ಮುದ್ದೆ / ಅನ್ನದೊಂದಿಗೆ ಬಡಿಸಿ. ಟೆಸ್ಟ್ ಮಾಡಿ.

  • ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ- ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರ!

    ಪತಿ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ- ಕಾರಣ ಕೇಳಿದ್ರೆ ನೀವೂ ಶಾಕ್ ಆಗ್ತೀರ!

    ಬೆಂಗಳೂರು: ಸಾರು ಚೆನ್ನಾಗಿಲ್ಲ ಅಂತಾ ಗಂಡ ಬೈದಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಬೆಂಗಳೂರಿನ ಚೋಳೂರುಪಾಳ್ಯದಲ್ಲಿ ನಡೆದಿದೆ.

    ನಾಗರತ್ನಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ರಾತ್ರಿ ನಾಗರತ್ನಮ್ಮ ಅವರಿಗೆ ಪತಿ ಶ್ರೀನಿವಾಸ್ ಸಾರು ಚೆನ್ನಾಗಿ ಮಾಡಿಲ್ಲ ಅಂತಾ ಬೈದಿದ್ದಾರೆ. ಇದರಿಂದ ಮನನೊಂದ ನಾಗರತ್ನಮ್ಮ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

    ಮದುವೆಯಾಗಿ 28 ವರ್ಷವಾಗಿದ್ದ ಶ್ರೀನಿವಾಸ್ ಗೆ ಲಕ್ವ ಹೊಡೆದಿತ್ತು. ಮಗ ಮಿಥುನ್ ರೂಮ್ ಗೆ ಹೋಗಿ ನೋಡಿದಾಗ ತಾಯಿ ನೇಣು ಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.

    ಈ ಸಂಬಂಧವನ್ನು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.