Tag: ಸಾರಿ ಟ್ವಿಟ್ಟರ್

  • ಹಳೆಯ ಫೋಟೋದೊಂದಿಗೆ ಸ್ಯಾರಿ ಟ್ವಿಟ್ಟರ್‌ಗೆ ಪ್ರಿಯಾಂಕ ಎಂಟ್ರಿ

    ಹಳೆಯ ಫೋಟೋದೊಂದಿಗೆ ಸ್ಯಾರಿ ಟ್ವಿಟ್ಟರ್‌ಗೆ ಪ್ರಿಯಾಂಕ ಎಂಟ್ರಿ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿರುವ ‘ಸ್ಯಾರಿ ಟ್ವಿಟ್ಟರ್’ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸಾಥ್ ಕೊಟ್ಟಿದ್ದಾರೆ.

    ಗುಲಾಬಿ ಬಣ್ಣದ ಬನಾರಸಿ ಸೀರೆಯುಟ್ಟು ಕುಳಿತಿರೋ ತಮ್ಮ ಫೋಟೋವನ್ನು ಟ್ವಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ ಸ್ಯಾರಿ ಟ್ವಿಟ್ಟರ್ ಎಂದು ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

    ಇದು 22 ವರ್ಷದ ಹಳೆಯ ಫೋಟೋವಾಗಿದ್ದು ನನ್ನ ಮದುವೆಯ ದಿನದಂದು ಬೆಳಗ್ಗಿನ ಪೂಜೆಗೆ ಕುಳಿತ ಸಂದರ್ಭದಲ್ಲಿ ತೆಗೆದು ಫೋಟೋ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕ ಗಾಂಧಿಯವರು ಈ ಹ್ಯಾಶ್ ಟ್ಯಾಗ್ ಬಳಸಿ ಫೋಟೋ ಹಾಕಿದ ನಿಮಿಷಕ್ಕೆ ಸುಮಾರು 4 ಸಾವಿರ ಲೈಕ್ಸ್ ಬಂದಿದ್ದು, 100ಕ್ಕೂ ಹೆಚ್ಚು ಕಾಂಮೆಂಟ್ ಗಳು ಬಂದಿವೆ.

    ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಸ್ಯಾರಿ ಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್‍ನಲ್ಲಿ ಇತ್ತು. ಹೀಗಾಗಿ ಹಲವು ಮಹಿಳೆಯರು ಸ್ಯಾರಿಟ್ವಿಟ್ಟರ್ ಹ್ಯಾಶ್‍ಟ್ಯಾಗ್ ಬಳಸಿ ತಾವು ಸೀರೆ ಉಟ್ಟಿರುವ ಫೋಟೋವನ್ನು ಫೋಟೋ ಅಪ್ಲೋಡ್ ಮಾಡುತ್ತಿದ್ದರು.

    ಈ ಹ್ಯಾಶ್‍ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದಂತೆ ಕಲಾವಿದರು, ರಾಜಕಾರಣಿಗಳು ಸೀರೆ ಉಟ್ಟಿರುವ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಶಿವಸೇನೆಯ ಪ್ರಿಯಾಂಕ ಚರ್ತುವೇದಿ ಸೀರೆ ಧರಿಸಿರುವ ನಾಲ್ಕು ಫೋಟೋ ಟ್ವಿಟ್ಟರಿನಲ್ಲಿ ಹಾಕಿದ್ದಾರೆ. `ಇದು ಸ್ಯಾರಿ ಟ್ವಿಟ್ಟರ್ ಹಾಗೂ ನಾನು ಈ ಹ್ಯಾಶ್‍ಟ್ಯಾಗ್ ಬಳಸಿ ಟ್ವೀಟ್ ಮಾಡುವುದನ್ನು ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ’ ಎಂದು ಬರೆದುಕೊಂಡಿದ್ದರು.