ಪತ್ರದಲ್ಲಿ ಏನಿದೆ?
ಹೈಕೋರ್ಟ್ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಕೋರ್ಟ್ ಆದೇಶವನ್ನು ಗೌರವಿಸಬೇಕು. ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ, ಸಾರ್ವಜನಿಕ ಅಗತ್ಯ ಸೇವಾ ಸಂಸ್ಥೆಯಾಗಿರುವ ಸಾರಿಗೆ ಸಂಸ್ಥೆಯ ನೌಕರರು ನಾಳಿನ ಮುಷ್ಕರದಲ್ಲಿ ಪಾಲ್ಗೊಳ್ಳಬಾರದೆಂದು ಮನವಿ ಮಾಡಲಾಗಿದೆ.
ಬೆಂಗಳೂರು: 38 ತಿಂಗಳ ಅರಿಯರ್ಸ್ ಸಹಿತ ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಬುಧವಾರ ಸಾರಿಗೆ ಮುಷ್ಕರ (Transport Strike) ನಡೆಸಲು ಮುಂದಾಗಿವೆ. ಒಂದು ಕಡೆ, ಸಾರಿಗೆ ಸಂಘಟನೆಗಳ ಜೊತೆ ಸಿಎಂ ತುರ್ತುಸಭೆ ನಡೆಸಿ ಸಂಧಾನಕ್ಕೆ ಯತ್ನಿಸಿದರೆ, ಇನ್ನೊಂದೆಡೆ ಒಂದು ದಿನದ ಮಟ್ಟಿಗೆ ಬಂದ್ ಮುಂದೂಡಿಕೆಗೆ ಹೈಕೋರ್ಟ್ ಸೂಚಿಸಿದೆ. ಆದರೆ ಹೈಕೋರ್ಟ್ (High Court) ಸೂಚನೆಯ ಮಧ್ಯೆಯೂ ಬೆಳಗ್ಗೆ 6 ಗಂಟೆಯಿಂದ ಸಾರಿಗೆ ಮುಷ್ಕರಕ್ಕೆ ಜಂಟಿ ಕ್ರಿಯಾ ಸಮಿತಿ ಮುಂದಾಗಿದೆ.
ಸಾರಿಗೆ ಸಂಘಟನೆಗಳ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ (CM Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಇಂದು ಮಧ್ಯಾಹ್ನ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. 38 ತಿಂಗಳ ಅರಿಯರ್ಸ್ ಕೊಡಲು ತಾಂತ್ರಿಕ ಅಡ್ಡಿಯಿದೆ. ತಕ್ಷಣಕ್ಕೆ 14 ತಿಂಗಳ ಅರಿಯರ್ಸ್ ಕೊಡುತ್ತೇವೆ. 2023ರಲ್ಲಿ ವೇತನ (Salary) ಹೆಚ್ಚಳವಾಗಿರುವ ಕಾರಣ ಸಾರಿಗೆ ಕಾಯ್ದೆ ಪ್ರಕಾರ 2027ವರೆಗೆ ವೇತನ ಹೆಚ್ಚಳ ಅಸಾಧ್ಯ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಆ.5ರಂದು ಸಾರಿಗೆ ನೌಕರರ ಮುಷ್ಕರ; 40% ಖಾಸಗಿ ಬಸ್ ರಸ್ತೆಗಿಳಿಸಲು ಸರ್ಕಾರ ನಿರ್ಧಾರ
ಸಾರಿಗೆ ನೌಕರರ ಬೇಡಿಕೆಗಳೇನು?
2020ರಿಂದ ನೀಡಬೇಕಿರುವ 38 ತಿಂಗಳ ಅರಿಯರ್ಸ್ (Arrears) ಬಿಡುಗಡೆಯಾಗಬೇಕು. 2024ರಿಂದ 25%ರಷ್ಟು ವೇತನ ಪರಿಷ್ಕರಣೆಯಾಗಬೇಕು. 2024 ರ ವೇತನ ಪರಿಷ್ಕರಣೆಯ 18 ತಿಂಗಳ ಅರಿಯರ್ಸ್ ಬಿಡುಗಡೆ ಆಗಬೇಕು. 4 ನಿಗಮದ ನೌಕರರಿಗೆ ನೀಡಬೇಕಿರುವ 38 ತಿಂಗಳ ಅರಿಯರ್ಸ್ 1,800 ಕೋಟಿ ರೂ. ಬಿಡುಗಡೆ ಮಾಡಬೇಕು. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್ ಸೂಚನೆ
ಸರ್ಕಾರದ ವಾದ ಏನು?
ಮಾರ್ಚ್ 1, 2023ರಂದು ವೇತನ (Salary) ಪರಿಷ್ಕರಣೆ ಒಪ್ಪಂದ ನಡೆದಿದ್ದು ಆಗ 15% ವೇತನ ಪರಿಷ್ಕರಣೆಗೆ ಒಪ್ಪಿಕೊಂಡಿದ್ದರು. ವೇತನ ಪರಿಷ್ಕರಣೆಗೆ ಶ್ರೀನಿವಾಸ್‌ಮೂರ್ತಿ ಸಮಿತಿ ರಚನೆಯಾಗಿದೆ. ಜನವರಿ 1, 2022ರಿಂದ ಫೆ.28, 2023ರ ತನಕ ಆರಿಯರ್ಸ್ ಬಿಡುಗಡೆ ಮಾಡಲಾಗುವುದು. 14 ತಿಂಗಳ ಆರಿಯರ್ಸ್‌ಗೆ 718 ಕೋಟಿ ರೂ. ವೆಚ್ಚವಾಗಲಿದೆ. 38 ತಿಂಗಳ ಆರಿಯರ್ಸ್ ಸಾಧ್ಯವಿಲ್ಲ, ಕೇಳುವುದು ಸಮಂಜಸ ಅಲ್ಲ.
ರಾಮಲಿಂಗಾರೆಡ್ಡಿ ಹೇಳಿದ್ದೇನು?
ಸಾರಿಗೆ ನೌಕರರಲ್ಲಿ ಎರಡು ಬಣ ಇವೆ. 2 ಬಣಗಳಲ್ಲಿ 14 ಸಂಘ ಸಂಸ್ಥೆಗಳು ಇವೆ. 38 ತಿಂಗಳ ಪರಿಷ್ಕೃತ ವೇತನ ಕೊಡಬೇಕು ಎಂದು ಆಗ್ರಹಿಸಿದರು. ಮಾರ್ಚ್ 01, 2023 ರಲ್ಲಿ ವೇತನ ಪರಿಷ್ಕರಣೆ ನಡೆದಿತ್ತು. ಸಿಎಂ 718 ಕೋಟಿ ರೂ. 14 ತಿಂಗಳ ಅರಿಯರ್ಸ್ ನೀಡುವುದಾಗಿ ಹೇಳಿದರೂ ಇವರು ಒಪ್ಪಿಲ್ಲ. ಈ ವರ್ಷದಿಂದ ವೇತನ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ. ಈ ವರ್ಷ ಚುನಾವಣೆ ನಡೆಸಲು ಅನುಮತಿ ಕೇಳಿದ್ದು, ನಾವು ಪರಿಶೀಲನೆ ನಡೆಸುವುದಾಗಿ ಹೇಳಿದ್ದೇನೆ. ಎರಡನೇ ಬಣ ಮುಷ್ಕರ ಮಾಡುತ್ತಿಲ್ಲ, ಧರಣಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರ ವೇತನ ಪರಿಷ್ಕರಣೆಯಾಗದೇ ಇರಲು ಬಿಜೆಪಿ ಕಾರಣವಂತೆ: ಏನಿದು ಆದೇಶ ಗೊಂದಲ?
ವೇತನ ಹೆಚ್ಚಳ ಬಗ್ಗೆ ಏನೂ ಹೇಳಿಲ್ಲ. ಅಧಿವೇಶನದ ಬಳಿಕ ನೋಡೋಣ ಎಂದಿದ್ದಾರೆ. 14 ತಿಂಗಳ ಅರಿಯರ್ಸ್‌ಗೆ ನಾವು ಒಪ್ಪಿಗೆ ನೀಡಿಲ್ಲ. ಶಿಸ್ತು ಕ್ರಮಕ್ಕೆ ನಾವು ಹೆದರುವುದಿಲ್ಲ. ಹತ್ತಾರು ಪ್ರತಿಭಟನೆ ಮಾಡಿದ ಅಭ್ಯಾಸ ನಮಗಿದೆ.ಬೆದರಿಕೆಗೆ ನಾವು ಬಗ್ಗುವುದಿಲ್ಲ. – ವಿಜಯ್ ಭಾಸ್ಕರ್, ಜಂಟಿ ಕ್ರಿಯಾ ಸಮಿತಿ
ಜಂಟಿ ಕ್ರಿಯಾ ಸಮಿತಿಗೆ ಹೇಳಿದ್ದನ್ನು ನಮಗೆ ಹೇಳಿದ್ದಾರೆ. ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವ ಬಗ್ಗೆ ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ. ಬಂದ್‌ಗೆ ಬೆಂಬಲ ನೀಡುವ ಬಗ್ಗೆ ಇನ್ನೂ ನಿರ್ಣಯ ಮಾಡಿಲ್ಲ. ಕಾನೂನು ತೊಡಕು ಬಂದಿರುವುದಿಂದ ನೋಡಬೇಕು. – ಚಂದ್ರು, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ
ಬೆಂಗಳೂರು: ಬುಧವಾರ ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು (Transport Strike) ಮುಂದೂಡುವಂತೆ ಹೈಕೋರ್ಟ್ (High Court) ಸೂಚನೆ ನೀಡಿದೆ.
ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ವಕೀಲ ಅಮೃತೇಶ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ಹಾಜರಾಗಿದ್ದ ದೀಕ್ಷಾ ಅಮೃತೇಶ್ ಅವರು, ಜುಲೈ 15ರಂದು ಪ್ರತಿಭಟನಾಕಾರರು ನೋಟಿಸ್ ನೀಡಿದ್ದಾರೆ. ಆದರೆ ಈಗ ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿಗೊಳಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಸಭೆಯ ಬಳಿಕ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಮಾತನಾಡಿ, 24 ತಿಂಗಳ ಹಿಂಬಾಕಿ ನೀಡಲು ಸಾಧ್ಯವಿಲ್ಲ. 14 ತಿಂಗಳು ಆರಿಯರ್ಸ್ ಕೊಡುತ್ತೇವೆ ಎಂದು ಸಿಎಂ ತಿಳಿಸಿದರು. ಮುಂದಿನ ವೇತನ ಪರಿಷ್ಕರಣೆ ಬಗ್ಗೆಯೂ ನಮಗೆ ಭರವಸೆ ಸಿಕ್ಕಿಲ್ಲ. ಹೀಗಾಗಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದರು.
ಬೆಂಗಳೂರು: ಸರ್ಕಾರದ ವಿರುದ್ಧ ಸಮರ ಸಾರಿರುವ ಸಾರಿಗೆ ನೌಕರರು (Transport Employees) ಪಟ್ಟು ಸಡಿಲಿಸುವಂತೆ ಕಾಣ್ತಿಲ್ಲ. ಅತ್ತ 5ನೇ ತಾರೀಖು ಬಂದ್ ಮಾಡೇ ಮಾಡುತ್ತೇವೆ ಅಂತ ಪಟ್ಟು ಹಿಡಿದಿದ್ರೆ, ಇತ್ತ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ನಿರ್ಧಾರ ಮಾಡಬೇಕಿದ್ದ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಪ್ರತಿಭಟನೆ (Rahul Gandhi Protest) ಸಮಾವೇಶದಲ್ಲಿ ಬ್ಯುಸಿಯಾಗಿದ್ದಾರೆ.
ಹಿಂಬಾಕಿ, ಸಂಬಳ ಹೆಚ್ಚಳ ವಿಚಾರವಾಗಿ ಸರ್ಕಾರದ ವಿರುದ್ಧ ಸಮರ ಸಾರಿ ಮುಷ್ಕರಕ್ಕೆ ಕರೆ ಕೊಟ್ಟಿರುವ ಸಾರಿಗೆ ನೌಕರರು ಮುಷ್ಕರ ಮಾಡೇ ಮಾಡ್ತೀವಿ ಅಂತ ಪಟ್ಟು ಹಿಡಿದಿದ್ದಾರೆ. ಆಗಸ್ಟ್ 4ರ ತನಕ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದು, ಡೆಡ್‌ಲೈನ್ ಮುಕ್ತಾಯಕ್ಕೆ ಇನ್ನೆರಡೇ ದಿನ ಮಾತ್ರ ಬಾಕಿ ಇದ್ದು ಸಮಸ್ಯೆ ಸಂಬಂಧ ಸಭೆ ಕರೆದು ಸಾರಿಗೆ ಮುಖಂಡರ ಜೊತೆ ಮಾತನಾಡಬೇಕಿದ್ದ ಸಿಎಂ, 5ನೇ ತಾರೀಖು ಬೆಂಗಳೂರಿನಲ್ಲಿ ನಡೆಯಲಿರುವ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಬ್ಯುಸಿಯಾಗಿದ್ದು, ಮುಷ್ಕರ ಆರಂಭವಾಗೇ ಬಿಡುತ್ತಾ ಅನ್ನೋ ಟೆನ್ಷನ್ ಹೆಚ್ಚಾಗಿದೆ. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಗೆ ರಾಷ್ಟ್ರಪತಿ ಪದಕ
ಹೌದು. ಸಮಸ್ಯೆ ಸಂಬಂಧ ಈ ಹಿಂದೆ ಮುಷ್ಕರಕ್ಕೆ ಕರೆಕೊಟ್ಟಿರೋ ಸಾರಿಗೆ ಮುಖಂಡರ ಜೊತೆ ಸಿಎಂ ಸಭೆ ಮಾಡಿದ್ರು. ಆದ್ರೆ ಸಭೆ ಯಶಸ್ಸು ಕಂಡಿರಲಿಲ್ಲ. ಆದಾದ ಮೇಲೆ ಆಗಸ್ಟ್ 4ರ ವರೆಗೆ ಡೆಡ್‌ಲೈನ್ ನೀಡಿ 5ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆಕೊಡಲಾಗಿದ್ದು. ಸಾರಿಗೆ ಮುಖಂಡರು ಕೊಟ್ಟಿದ್ದ ಡೆಡ್‌ಲೈನ್ ಮುಕ್ತಾಯಕ್ಕೆ ಇನ್ನೆರೆಡು ದಿನ ಮಾತ್ರ ಬಾಕಿ ಇದೆ. ಡೆಡ್‌ಲೈನ್ ಹತ್ತಿರ ಬರ್ತಿದ್ರೂ ಸಿಎಂ ಮಾತ್ರ ಈ ಬಗ್ಗೆ ಹೆಚ್ಚು ಗಮನಕೊಟ್ಟಂತೆ ಕಾಣ್ತಿಲ್ಲ. ಸಾರಿಗೆ ಮುಷ್ಕರ ಆರಂಭವಾಗುವ ದಿನದಂತೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.
ಈ ಸಮಾವೇಶದ ಆಯೋಜನೆಯಲ್ಲಿ ಬ್ಯುಸಿಯಾಗಿರುವ ಸಿಎಂ ಸಾರಿಗೆ ಮುಷ್ಕರದ ಬಗ್ಗೆ ಗಮನ ಕೊಟ್ಟಂತೆ ಇಲ್ಲ. ಹಣಕಾಸು ಇಲಾಖೆ ಸಿಎಂ ಕೈಯಲ್ಲೇ ಇರುವ ಕಾರಣ, ಬೇಡಿಕೆ ಈಡೇರಿಕೆ ಸಂಬಂಧ ಸಿಎಂ ಮಾತ್ರ ನಿರ್ಧಾರ ಮಾಡೋಕೆ ಸಾಧ್ಯ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಪ್ರತಿಭಟನೆ ತಯಾರಿ ನಡುವೆ ಮುಖಂಡರ ಸಭೆ ಕರೆದು ಮನವೊಲಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಇದನ್ನೂ ಓದಿ: ದೇಶದಲ್ಲಿ ಕರ್ನಾಟಕವೊಂದು ಆರ್ಥಿಕ ದೇಶ: ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಸಿಎಂ ಅಭಿಪ್ರಾಯ
ಇನ್ನೂ ಈ ಮಧ್ಯೆ ಸಿಎಂ ಕೊಟ್ಟಿರುವ ಡೆಡ್‌ಲೈನ್ ಮುಕ್ತಾಯಕ್ಕೂ ಮುನ್ನ ಕಾರ್ಮಿಕ ಇಲಾಖೆ ಸಮ್ಮುಖದಲ್ಲಿ ಕೊನೆಯ ಹಂತದ ಮನವೊಲಿಕೆ ಪ್ರಯತ್ನ ನಡೆಯಲಿದೆ. ಇಂದು ಕಾರ್ಮಿಕ ಇಲಾಖೆ ಸಮ್ಮುಖದಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ಅಧಿಕಾರಿಗಳು, ಸಾರಿಗೆ ಸಂಘಟನೆ ಮುಖಂಡರ ಸಭೆ ನಡೆಯಲಿದೆ. ಇಂದು ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದ್ದು, ಸಭೆಯಲ್ಲಿ ಅಧಿಕಾರಿಗಳು ಕೆಲವು ಭರವಸೆ ನೀಡುವ ಸಾಧ್ಯತೆ ಇದೆ. ಆದರೆ ಇತ್ತ ಯಾವುದೇ ಕಾರಣ ಬೇಡಿಕೆ ಈಡೇರುವ ಬಗ್ಗೆ ಘೋಷಣೆಯಾಗದ ಹೊರತು ನಾವಂತೂ ಮುಷ್ಕರ ಹಿಂಪಡೆಯಲ್ಲ ಅಂತ ಮುಖಂಡರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದಿನ ಸಭೆ ಕೂಡ ಸಾಕಷ್ಟು ಕುತೂಹಲ ಕೆರಳಿಸಿದೆ.
ಬೆಂಗಳೂರು: ಮುಷ್ಕರ ನಿಲ್ಲಿಸಿ, ಕೂಡಲೇ ಸೇವೆ ಆರಂಭಿಸಿ ಸಾರಿಗೆ ನೌಕರರಿಗೆ ಹೈಕೋರ್ಟ್ ಇಂದು ಸೂಚನೆ ನೀಡಿದೆ. ಈ ಮೂಲಕ 14 ದಿನಗಳ ಸಾರಿಗೆ ನೌಕರರ ಮುಷ್ಕರ ಇಂದಿಗೆ ಕೊನೆಯಾಗುವ ಸಾಧ್ಯತೆಯಿದೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಷ್ಕರ ಹೂಡುವುದು ಸರಿಯಲ್ಲ. ನಿಮ್ಮ ಬೇಡಿಕೆ ಕಾಯ್ದಿರಿಸಿ ತಕ್ಷಣ ಸೇವೆ ಆರಂಭಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಸೂಚನೆ ನೀಡಿ ಮುಷ್ಕರ ನಿರತ ಸಾರಿಗೆ ನೌಕರರ ಸಂಘಕ್ಕೆ ನೋಟಿಸ್ ನೀಡಿದೆ.
ಸರ್ಕಾರದ ಪರವಾಗಿ ಹಾಜರಾಗಿದ್ದ ಎಜಿ ಪ್ರಭುಲಿಂಗ ನಾವದಗಿ, ಮುಷ್ಕರ ನಿರತರ ವಿರುದ್ಧ ಎಸ್ಮಾ ಜಾರಿಗೊಳಿಸಲಾಗಿದೆ. ಸರ್ಕಾರ ಕಾರ್ಮಿಕರ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದೆ. ಸಾರಿಗೆ ನೌಕರರ ಮುಷ್ಕರ ಕಾನೂನುಬಾಹಿರವೆಂದು ಘೋಷಿಸಲಾಗಿದೆ. ಕೆಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದ್ದು, ಸರ್ಕಾರಿ ನೌಕರರಾಗಿಸುವ ಬೇಡಿಕೆ ಪರಿಗಣಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಾಲಯದ ಆದೇಶದ ಬಗ್ಗೆ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ನಮಗೆ ನ್ಯಾಯಾಲಯದ ಪೂರ್ಣ ಪ್ರಮಾಣದ ಆದೇಶವನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರು: ಜನಸಾಮಾನ್ಯರ ಹಿತದೃಷ್ಟಿಯಿಂದ ಮುಷ್ಕರವನ್ನು ಕೈಬಿಟ್ಟು ಕೆಲಸಕ್ಕೆ ಹಾಜರಾಗಿ ಎಂದು ಮಾತ್ರ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಹೇಳಿದ್ದೇನೆ. ಹೋರಾಟ ಮುಂದುವರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಯನ್ನು ಮಾಡಿಲ್ಲ. 6 ನೇ ವೇತನ ಆಯೋಗದ ಬಗ್ಗೆ ಯಾವುದೇ ಭರವಸೆ ನೀಡಿರುವುದಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಿಗೆ ತಿಳಿಸುತ್ತೇನೆ ಎಂದು ಮಾತ್ರ ಹೇಳಿದ್ದೇನೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು ಮುಂಜಾನೆ ತಮ್ಮನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದ್ದೇನೆ. ಇದು ಮುಷ್ಕರ ನಡೆಸಲು ಸೂಕ್ತ ಸಂದರ್ಭ ಅಲ್ಲ. ಕೋವಿಡ್ ಎಲ್ಲರನ್ನೂ ಕಾಡುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮುಷ್ಕರವನ್ನು ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗುವಂತೆ ಮಾತ್ರ ನಾನು ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಈ ಮೇಲ್ಕಂಡ ವಿಷಯವನ್ನು ಮಾತ್ರ ಅವರಿಗೆ ತಿಳಿಸಿರುತ್ತೇನೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಕರಪತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಇದರಿಂದ ಸಾರಿಗೆ ನೌಕರರಿಗೆ ತಪ್ಪು ಸಂದೇಶ ರವಾನೆಯಾಗಬಾರದು. ಹೀಗಾಗಿ ಈ ಸ್ಪಷ್ಟೀಕರಣವನ್ನು ಕೊಡಲು ಬಯಸುತ್ತೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ನಾಳೆಯಿಂದ ರಾಜ್ಯ 8 ನಗರಗಳಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ. ಇತ್ತ ಶನಿವಾರದಿಂದ ಸತತ 4 ದಿನ ರಜೆ ಇರುತ್ತದೆ. ಹೀಗಾಗಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಂಕಷ್ಟ ಎದುರಾಗಿದೆ.
ಇಂದು ಕೂಡ ಸಾರಿಗೆ ನೌಕರರ ಮುಷ್ಕರ ಮುಂದುವರಿದ್ದು, ಬಸ್‍ಗಳ ಓಡಾಟ ಇರಲ್ಲ. ಸಾರಿಗೆ ಮುಷ್ಕರ ಹೊತ್ತಲ್ಲೇ ಸರ್ಕಾರ ನೈಟ್‍ಕರ್ಫ್ಯೂ ಹೇರಿದೆ. ಈ ಮೂಲಕ ಜನಸಾಮಾನ್ಯರಿಗೆ ಏಕಕಾಲಕ್ಕೆ 2 ಶಾಕ್ ಕಾದಿದೆ.
ನೈಟ್‍ಕರ್ಫ್ಯೂ, ವಾರಾಂತ್ಯದ ಲಾಕ್‍ಡೌನ್ ಇಲ್ಲ ಎನ್ನುತ್ತಲೇ ವಾದಿಸುತ್ತ ಬಂದಿದ್ದ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಜನಸಾಮಾನ್ಯರಿಗೆ ಮತ್ತೆ ಆಘಾತ ನೀಡಿದೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ 11 ರಾಜ್ಯಗಳ ಸಿಎಂಗಳ ಸಭೆಯ ತರುವಾಯ ರಾಜ್ಯದಲ್ಲಿ ಮತ್ತೆ ನೈಟ್‍ಕರ್ಫ್ಯೂ ಜಾರಿಗೊಳಿಸಿ ಸಿಎಂ ಬಿಎಸ್‍ವೈ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10ರಿಂದ ಅಂದರೆ ಶನಿವಾರದಿಂದ ಏಪ್ರಿಲ್ 20ರವರೆಗೆ ರಾಜ್ಯದ 8 ನಗರಗಳ ವ್ಯಾಪ್ತಿಯಲ್ಲಷ್ಟೇ ಸೀಮಿತಗೊಳಿಸಿ ನೈಟ್‍ಕರ್ಫ್ಯೂ ಜಾರಿಗೊಳಿಸಲಾಗಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್‍ಕಫ್ರ್ಯೂ ಜಾರಿಗೊಳಿಸಲಾಗಿದೆ. ರಾಜ್ಯದ 8 ನಗರಗಳಿಗೆ ಸೀಮಿತಗೊಳಿಸಿ ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ನೈಟ್‍ಕರ್ಫ್ಯೂ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕಫ್ರ್ಯೂ ಇರಲಿದೆ. ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್‍ಕರ್ಫ್ಯೂ ಹೇರಲಾಗಿದೆ.
ರಾಜ್ಯದಲ್ಲಿ ಮತ್ತೆ ನೈಟ್‍ಕರ್ಫ್ಯೂ ಆಘಾತ..!
ವಾಣಿಜ್ಯ ಚಟುವಟಿಕೆಗಳ ಮೇಲೆ ಮತ್ತೆ ನೈಟ್‍ಕರ್ಫ್ಯೂ ಬರೆ ಬೀಳಲಿದ್ದು, ರಾತ್ರಿ 10 ಗಂಟೆಯಿಂದ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಲಿದೆ. 7 ಜಿಲ್ಲೆಗಳ 8 ನಗರಗಳಲ್ಲಿ ವಾಣಿಜ್ಯ ಚಟುವಟಿಕೆಗಳಾದ ಹೋಟೆಲ್, ರೆಸ್ಟೋರೆಂಟ್, ಪಬ್‍ಗಳೂ ಬಂದ್ ಆಗಲಿದೆ. ಅಗತ್ಯ ಚಟುವಟಿಕೆಗಳಿಗಷ್ಟೇ ನೈಟ್‍ಕರ್ಫ್ಯೂ ವೇಳೆ ವಿನಾಯ್ತಿ ನೀಡಲಾಗುತ್ತದೆ. ನೈಟ್‍ಕರ್ಫ್ಯೂ ವೇಳೆ ಸಿನಿಮಾ ಪ್ರದರ್ಶನ ನಿಷೇಧ ಹಾಗೂ ಅಂತರ್ಜಿಲ್ಲೆಗಳ ಓಡಾಟಕ್ಕೆ ನಿರ್ಬಂಧ ಇಲ್ಲ. ಅಂತರ್‍ಜಿಲ್ಲೆ ಓಡಾಟ, ಬಸ್, ಸ್ವಂತ ವಾಹನಗಳಲ್ಲಿ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ.
– ನನ್ನನ್ನು ಮ್ಯಾನೇಜರ್ ಕೂಡಿ ಹಾಕಿ ಕೆಲಸ ಮಾಡಿಸ್ತಿದ್ದಾರೆ – ರೆಡ್ಡಿ – ಮೆಕ್ಯಾನಿಕ್ ರೆಡ್ಡಿ ಪ್ರಚಾರ ಪಡೆಯಲು ಗಿಮಿಕ್ ಮಾಡ್ತಿದ್ದಾನೆ – ಶೆಟ್ಟಿ
ಉಡುಪಿ: ಸರಕಾರಿ ಬಸ್ ಸಿಬ್ಬಂದಿ ಮುಷ್ಕರ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಕೆಲವೆಡೆ ಸಿಬ್ಬಂದಿ ಹಾಗೂ ಡಿಪೋ ಮ್ಯಾನೇಜರ್ ನಡುವೆ ಜಟಾಪಟಿ ನಡೆದಿದೆ. ನನ್ನನ್ನು ಕೂಡಿಹಾಕಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಉಡುಪಿಯ ಮೆಕ್ಯಾನಿಕ್ ಆರೋಪಿಸಿದ್ರೆ, ಇದು ಶುದ್ಧ ಸುಳ್ಳು, ಪ್ರಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಅಂತ ಮ್ಯಾನೇಜರ್ ವೀಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಾದ್ಯಂತ ಸರಕಾರಿ ಬಸ್ ಗಳು ರಸ್ತೆಗಿಳಿಯದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸರಕಾರ ಮತ್ತು ಯೂನಿಯನ್ ಜೊತೆ ಒಂದೆಡೆ ಜಟಾಪಟಿ ನಡೆಯುತ್ತಿದ್ದರೆ, ಉಡುಪಿ ಡಿಪೋದಲ್ಲಿ ಮೆಕ್ಯಾನಿಕ್ ಶ್ರೀಕಾಂತ್ ಕೊಟ್ಟ ಹೇಳಿಕೆ ಭಾರಿ ಚರ್ಚೆ ಮತ್ತು ವಿವಾದ ಸೃಷ್ಟಿ ಮಾಡಿತು.
ಶ್ರೀಕಾಂತ್ ರೆಡ್ಡಿ ಹೇಳಿದ್ದೇನು?
ಕಳೆದ ರಾತ್ರಿಯಿಂದ ನನ್ನನ್ನ ಡಿಪೋದಲ್ಲಿ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಪ್ರತಿಭಟನೆ ಮಾಡುತ್ತೇನೆ ಎಂದರೂ ಬಿಡುತ್ತಿಲ್ಲ. ಪ್ರತಿಭಟನಾರ್ಥವಾಗಿ ನಾನು ಬೆಳಗ್ಗೆನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ ಎಂದು ಉಡುಪಿಯ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಶ್ರೀಕಾಂತ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಆಕ್ರೋಶದ ಕಣ್ಣೀರು ಹಾಕಿದ್ದಾರೆ.
ನಿನ್ನ ಕೇಸು ಕ್ಲಿಯರ್ ಆಗಬೇಕಾದರೆ ನೀನು ಕೆಲಸ ಮಾಡಲೇಬೇಕು ಎಂದು ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ್ದಾರೆ. ನಾನು ಬಡವ ಅದಕ್ಕೆ ಕೆಲಸ ಮಾಡುತ್ತಿದ್ದೇನೆ. ನನ್ನತ್ರ ದುಡ್ಡಿದ್ರೆ ನಾನು ಎಂಎಲ್‍ಎ ಆಗುತ್ತಿದ್ದೆ. ನಾವು ಅರ್ಚಕರಗಿಂತ ಕೀಳಾಗಿ ಬಿಟ್ಟೆವಾ? ಕೆಎಸ್‍ಆರ್‍ಟಿಸಿ ಅನ್ನ ತಿನ್ನುವುದರಿಂದ ನಿಯತ್ತಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮ ನಿಯತ್ತಿನ ಕೆಲಸಕ್ಕೆ ಸೂಕ್ತ ಸಂಬಳ ಕೊಡಿ. ನಾನು ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ನಿಮ್ಮ ತರ ಎಸಿ ಕಾರಿನಲ್ಲಿ ಕೂತು ಎಸಿ ಆಫೀಸಲ್ಲಿ ಕೂತು ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬ್ಲಾಕ್ ಮಾಡಿ ಡ್ಯೂಟಿ:
ಸ್ಟ್ರೈಕ್ ದಿನವೂ ನಾನು ಯಾಕೆ ಡ್ಯೂಟಿ ಮಾಡುತ್ತಿದ್ದೇನೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ ಯಾಕೆ? ಮ್ಯಾನೇಜರ್ ನನ್ನನ್ನು ಬೆಳಗ್ಗೆ ಲಾಕ್ ಮಾಡಿ ಹೊರಗೆ ಹೋಗದಂತೆ ತಡೆದಿದ್ದಾರೆ. ನಾನು ಅನಾರೋಗ್ಯ ಇದ್ದಾಗ ರಜೆ ಮಾಡಿದ್ದೆ. ಆ ಕೇಸ್ ಕ್ಲಿಯರ್ ಆಗೋವರೆಗೆ ಡ್ಯೂಟಿ ಮಾಡಬೇಕು ಎಂದು ಭಯ ಹುಟ್ಟಿಸಿದ್ದಾರೆ. ನಾನೊಬ್ಬ ಬಡವ ಕೆಎಸ್‍ಆರ್ಟಿಸಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ನನಗೆ ಭಯ ಹುಟ್ಟಿಸಿದ್ದರಿಂದ ನಾನು ಇಲ್ಲಿ ಡ್ಯೂಟಿ ಮಾಡುತ್ತಿದ್ದೇನೆ. ನನಗೆ ಈ ಸಂಸ್ಥೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಶ್ರೀಕಾಂತ್ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಆರನೇ ವೇತನ ಆಯೋಗದ ಸೌಲಭ್ಯ ಯಾಕೆ ಬೇಕು ಗೊತ್ತಾ? ನಿಮ್ಮ ಬಳಿ ಹಣವಿದೆ. ನಮ್ಮ ಬಳಿ ಹಣವಿಲ್ಲ. ಅದಕ್ಕಾಗಿ ಸಂಬಳ ಏರಿಕೆ ಕೇಳುತ್ತಿದ್ದೇವೆ. ಶ್ರೀಮಂತ ರಾಜಕಾರಣಿಗಳಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ. ನಾವು ಮತ ಹಾಕಿರುವುದರಿಂದ ಇವರೆಲ್ಲ ರಾಜಕಾರಣ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿದ್ದರೆ ನಾನೇ ರಾಜಕಾರಣ ಮಾಡುತ್ತಿದ್ದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅರ್ಚಕರಿಗೆ ಆರನೇ ವೇತನ ಆಯೋಗದ ಸಂಬಳ ಕೊಡುತ್ತಾರೆ. ನಾವೇನು ಸತ್ತಿದ್ದೀವಾ? ನಿಮ್ಮ ಸ್ವಂತಕ್ಕೆ ನೀವು ರಾಜಕಾರಣ ಮಾಡುವುದಲ್ಲ, ಜನರ ಸೇವೆ ಮಾಡಿ. ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವವರು ನೀವು ಎಂಎಲ್‍ಎಗಳು. ನಿಮ್ಮ ಜಾತಿ ರಾಜಕೀಯ ಸುಡುಗಾಡು ಸೇರಲಿ ಎಂದು ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಸವದಿ ಮತ್ತಿತರ ರಾಜಕಾರಣಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಆರನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮಾಡಿ, ಸಂಬಳ ಕೊಡಿ. ನಾನು ಬಡವ ಎಂದು ಉಡುಪಿ ಕೆಎಸ್ ಆರ್ ಟಿಸಿ ಡಿಪೋ ಮೆಕ್ಯಾನಿಕ್ ಕಣ್ಣೀರಿಟ್ಟ ಘಟನೆಗೆ ಸಂಬಂಧಿಸಿದಂತೆ, ಸಿಬ್ಬಂದಿ ಶ್ರೀಕಾಂತ್ ರೆಡ್ಡಿ ಆರೋಪಕ್ಕೆ ಕೆಎಸ್‍ಆರ್ಟಿಸಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಶ್ರೀಕಾಂತ್ ರೆಡ್ಡಿ ಇವತ್ತು ಸ್ವ ಇಚ್ಛೆಯಿಂದ ಕೆಲಸಕ್ಕೆ ಬಂದಿದ್ದ. ಆತ ಒಬ್ಬ ಮದ್ಯವ್ಯಸನಿ. ಅವನನ್ನು ನಾವು ಕಚೇರಿಯಿಂದ ಕೆಲಸಕ್ಕೆ ಕರೆದಿಲ್ಲ. ಇವತ್ತು ನಮ್ಮ ಘಟಕದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಿಬ್ಬಂದಿಗಳು ವರದಿ ಮಾಡಿಲ್ಲ. ಚಾಲನಾ ಸಿಬ್ಬಂದಿ ಕೂಡ ಇವತ್ತು ಕರ್ತವ್ಯಕ್ಕೆ ಬಂದಿಲ್ಲ. ಹಾಗಿದ್ದರೂ ಆತ ಒಬ್ಬನೇ ಬಂದು ಕೆಲಸಕ್ಕೆ ವರದಿ ಮಾಡಿಕೊಂಡಿದ್ದಾನೆ ಎಂದು ಉಡುಪಿ ಡಿಪೋ ಮ್ಯಾನೇಜರ್ ಉದಯ್ ಶೆಟ್ಟಿ ಹೇಳಿದ್ದಾರೆ.
ಪದೇಪದೇ ಕರ್ತವ್ಯಕ್ಕೆ ಗೈರು ಹಾಜರಾಗುವ ಪ್ರವೃತ್ತಿ ಉಳ್ಳವರಾಗಿದ್ದಾನೆ. ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕಟ್ಟುಕಥೆಗಳನ್ನು ಆತ ಹೇಳಿದ್ದಾನೆ. ಸಂಸ್ಥೆಯ ಇಮೇಜ್ ಹಾಳು ಮಾಡಲು ಈ ರೀತಿಯ ಹೇಳಿಕೆ ನೀಡಿದ್ದಾನೆ. ನಾನು ಆತನ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ ಎಂದು ಉದಯ್ ಶೆಟ್ಟಿ ವೀಡಿಯೋ ರಿಲೀಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ಒಂದು ದಿನದಲ್ಲಿ 4 ನಿಗಮಗಳಿಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.
ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5 ರಿಂದ 3 ಕೋಟಿ ರೂ. ಇದೆ. ಕೆಎಸ್‌ಆರ್‌ಟಿಸಿ ನಿತ್ಯದ ಆದಾಯ 7 ಕೋಟಿ ರೂ., ವಾಯುವ್ಯ ಸಾರಿಗೆಯ ಆದಾಯ 2 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ಪ್ರಸ್ತುತ ನಿತ್ಯದ ಆದಾಯ 2 ಕೋಟಿ ರೂ. ಇದೆ.
ಕೊರೊನಾದಿಂದ ಈಗಾಗಲೇ ಸಾರಿಗೆ ಇಲಾಖೆ ಮೊದಲೇ ನಷ್ಟದಲ್ಲಿದೆ. ಈಗ ಮುಷ್ಕರಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಲಿದೆ. ಸಾರಿಗೆ ಇಲಾಖೆ ಮಂಗಳವಾರವೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಇದ್ದರೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.