Tag: ಸಾರಿಗೆ ಬಸ್

  • ಆಂಧ್ರ ಬಸ್ಸಿಗೆ ಬೈಕ್ ಡಿಕ್ಕಿ – ತಂದೆ, ಮಗ ಸ್ಥಳದಲ್ಲೇ ಸಾವು

    ಆಂಧ್ರ ಬಸ್ಸಿಗೆ ಬೈಕ್ ಡಿಕ್ಕಿ – ತಂದೆ, ಮಗ ಸ್ಥಳದಲ್ಲೇ ಸಾವು

    ಕೋಲಾರ: ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ತಂದೆ ಮಗ ಇಬ್ಬರು ಮೃತಪಟ್ಟಿರುವ ಘಟನೆ ಗಡಿ ಭಾಗದ ಆಂಧ್ರದ ಕುಪ್ಪಂ ಬಳಿ ನಡೆದಿದೆ.

    ಅಪಘಾತದಲ್ಲಿ ತಂದೆ ಮಗ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ತಂದೆ ಮಗ ಇಬ್ಬರು ಲಗ್ನ ಪತ್ರಿಕೆ ನೀಡಲು ಬೈಕ್ ನಲ್ಲಿ ಹೋಗುತ್ತಿದ್ದು ಈ ವೇಳೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬಂಗಾರಪೇಟೆ ತಾಲೂಕಿನ ಚಿಕ್ಕತುಮಟಗೆರೆ ಗ್ರಾಮದ ವೆಂಕಟೇಶ್ (57), ಕನಕರಾಜ್ (27)ಗೆ ಮೃತಪಟ್ಟ ತಂದೆ ಹಾಗೂ ಮಗ. ತನ್ನ ದೊಡ್ಡ ಮಗನ ವಿವಾಹ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮೃತರ ದೇಹಗಳು ಕೆಜಿಎಫ್ ಸರ್ಕಾರಿ ಶವಗಾರಕ್ಕೆ ಬಂದಿದ್ದು, ಸ್ಥಳದಲ್ಲಿ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿದೆ. ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಮಹಿಳೆಯರ ಮುಂದೆ ಬಟ್ಟೆ ಬದಲಿಸಿದ ಕಂಡಕ್ಟರ್ – ವಿರೋಧಿಸಿದವನಿಗೆ ಥಳಿತ

    ಚೆನ್ನೈ: ಬಸ್ಸಿನಲ್ಲಿ ಮಹಿಳೆಯರ ಮುಂದೆಯೇ ನಿರ್ವಾಹನೊಬ್ಬ ಬಟ್ಟೆ ಬದಲಿಸಿದ್ದು, ಇದನ್ನು ಪ್ರಶ್ನೆ ಮಾಡಿದ ಪ್ರಯಾಣಿಕನಿಗೆ ಕೆಲ ಬಸ್ ಚಾಲಕರು ಮತ್ತು ನಿರ್ವಾಹಕರು ಸೇರಿ ಥಳಿಸಿರುವ ಘಟನೆ ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ.

    ಬಸ್‍ನಲ್ಲಿ ಮಹಿಳಾ ಪ್ರಯಾಣಿಕರ ಮುಂದೆಯೇ ಕಂಡಕ್ಟರ್ ಬಟ್ಟೆ ಬದಲಿಸಿದ್ದಾನೆ. ಇದನ್ನು ಥೇನಿ ಜಿಲ್ಲೆಯ ನಿವಾಸಿ ವಿಜಯ್ ವಿರೋಧ ಮಾಡಿದ್ದಕ್ಕೆ ಸಾರಿಗೆ ನೌಕರರು ಮನಬಂದಂತೆ ಹಲ್ಲೆ ಮಾಡಿದ್ದಾರೆ. ಇದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋದಲ್ಲಿ ವಿಜಯ್ ಮತ್ತು ಕಂಡಕ್ಟರ್ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ಸಮಯದಲ್ಲಿ ಕೋಪಗೊಂಡ ಕಂಡಕ್ಟರ್ ಮೊದಲು ವಿಜಯ್‍ನ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಕೋಪಗೊಂಡ ವಿಜಯ್ ಕಂಡಕ್ಟರ್‍ ಗೆ ಹೊಡೆಯುತ್ತಾರೆ. ಈ ವೇಳೆ ಕಂಡಕ್ಟರ್ ಜೊತೆ ಇದ್ದ ಕೆಲ ಸರ್ಕಾರಿ ನೌಕರರು ವಿಜಯ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಯಾಣಿಕ ವಿಜಯ್, ಕಂಡಕ್ಟರ್ ಇದ್ದಕ್ಕಿದಂತೆ ಮಹಿಳೆಯರು ಸೇರಿದಂತೆ ಪ್ರಯಾಣಿಕರ ಮುಂದೆಯೇ ಬಟ್ಟೆ ಬದಲಾಯಿಸುತ್ತಿದ್ದರು. ಇದರಿಂದ ನಾನು ಬೇರೆ ಕಡೆ ಹೋಗಿ ಬಟ್ಟೆ ಬದಲಾಯಿಸಿ ಎಂದು ಹೇಳಿದೆ. ಇದರಿಂದ ಕೋಪಗೊಂಡ ಕಂಡಕ್ಟರ್ ಬಸ್ ದಿಂಡಿಗಲ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದ ಹಾಗೇ ನನ್ನ ಮೇಲೆ ಜಗಳಕ್ಕೆ ಬಂದು ಅವರ ಸಿಬ್ಬಂದಿ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದರು ಎಂದು ಹೇಳಿದ್ದಾರೆ.

    ಈಗ ಪ್ರಯಾಣಿಕ ಕುಡಿದು ನಮ್ಮ ಬಳಿ ಕೆಟ್ಟದಾಗಿ ವರ್ತಿಸಿದ ಎಂದು ಬಸ್ ಕಂಡಕ್ಟರ್ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಆದರೆ ಕೆಲ ಸ್ಥಳೀಯರು ಈ ಘಟನೆಯಲ್ಲಿ ಇಬ್ಬರ ಕಡೆಯಿಂದಲು ತಪ್ಪಾಗಿದೆ ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದ್ದು, ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಸ್ ರಿಪೇರಿ ಮಾಡೋ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ!

    ಬಳ್ಳಾರಿ: ಸಾರಿಗೆ ಬಸ್ ರಿಪೇರಿ ಮಾಡುವ ಮೆಕ್ಯಾನಿಕಲ್ ಸಿಬ್ಬಂದಿಗೆ ಡ್ರೈನೇಜ್ ಕ್ಲೀನಿಂಗ್ ಮಾಡುವ ಶಿಕ್ಷೆ ಕೊಟ್ಟ ಅಮಾನವೀಯ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೌದು. ಸಾರಿಗೆ ಇಲಾಖೆ ಅಧಿಕಾರಿಗಳ ಅಮಾನುಷ ವರ್ತನೆಯಿಂದ ಮೆಕ್ಯಾನಿಕಲ್ ಸಿಬ್ಬಂದಿ ಡ್ರೈನೇಜ್ ಕ್ಲೀನಿಂಗ್ ಶಿಕ್ಷೆ ಅನುಭವಿಸಿದ ಘಟನೆ ಗುರುವಾರ ನಡೆದಿದೆ. ಬಳ್ಳಾರಿಯ 2ಡಿಪೋ ಘಟಕದಲ್ಲಿ ನಿನ್ನೆ 10 ಕ್ಕೂ ಹೆಚ್ಚು ಸಾರಿಗೆ ಮೆಕ್ಯಾನಿಕಲ್ ಸಿಬ್ಬಂದಿ ಡಿಪೋದಲ್ಲಿನ ಡ್ರೈನೇಜ್ ಕ್ಲೀನ್ ಮಾಡಿದ್ದಾರೆ.

    ಸ್ವತಃ ಸಾರಿಗೆ ಡಿಸಿ ಆದೇಶದ ಮೇರೆಗೆ ಡಿಎಂಇ ಅಧಿಕಾರಿಯೇ ಮೆಕ್ಯಾನಿಕಲ್ ಗಳನ್ನು ಮುಂದಿರಿಸಿಕೊಂಡು ಡ್ರೈನೇಜ್ ಅನ್ನು ಕ್ಲೀನ್ ಮಾಡಿಸಿದ್ದಾರೆ. ಡ್ರೈನೇಜ್ ಕ್ಲೀನ್ ಮಾಡಲು ನಿರಾಕರಿಸಿದಸಿಬ್ಬಂದಿಗೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಅನಿವಾರ್ಯವಾಗಿ ಕ್ಲೀನಿಂಗ್ ಮಾಡಿದ್ದಾರೆ.

    ಸಾರಿಗೆ ಸಿಬ್ಬಂದಿಗೆ ಡ್ರೈನೇಜ್ ಕ್ಲೀನ್ ಮಾಡೋ ಕೆಲಸ ಮಾಡಿಸಿದ್ದಕ್ಕೆ ಸಾರಿಗೆ ಇಲಾಖೆ ಸಿಬ್ಬಂದಿಯಿಂದ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಲ್ಲದೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಡ್ರೈನೇಜ್ ಕ್ಲೀನಿಂಗ್ ನ್ನು ಹೊರಗಿನವರಿಗೆ ವಹಿಸಿದ್ರೆ 25 ಸಾವಿರ ರೂಪಾಯಿ ಖರ್ಚಾಗುತ್ತೆ ಅನ್ನೋ ಕಾರಣದಿಂದ ಈ ರೀತಿಯಾಗಿ ಸಿಬ್ಬಂದಿಗೆ ಶಿಕ್ಷೆ ನೀಡಿರುವುದಾಗಿ ತಿಳಿದುಬಂದಿದೆ.

  • ಸಾರಿಗೆ ಬಸ್ ಹರಿದು 30 ಕ್ಕೂ ಹೆಚ್ಚು ಕುರಿಗಳು ಸಾವು

    ಸಾರಿಗೆ ಬಸ್ ಹರಿದು 30 ಕ್ಕೂ ಹೆಚ್ಚು ಕುರಿಗಳು ಸಾವು

    ಬಳ್ಳಾರಿ: ಸಾರಿಗೆ ಬಸ್ ಹರಿದ ಪರಿಣಾಮ 30 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವದ್ದಟ್ಟಿ ಗ್ರಾಮದ ಬಳಿಯ ರಸ್ತೆಯಲ್ಲಿ ನಡೆದಿದೆ.

    ಬೆಳಗಾವಿ ಮೂಲದ ಹೊನ್ನೂರಪ್ಪ ಅವರಿಗೆ ಸೇರಿದ ಕುರಿಗಳಾಗಿವೆ. ಹೊನ್ನೂರಪ್ಪ ಅವರು ಹೊಲ ಗದ್ದೆಗಳಲ್ಲಿ ಕುರಿಗಳಿಗೆ ಮೇವು ಮೇಯಿಸುತ್ತಿದ್ದರು. ಅಂತೆಯೇ ಇಂದು ಮುಂಜಾನೆ ನಸುಕಿನ ಜಾವದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕುರಿಗಳು ರಸ್ತೆ ದಾಟುತ್ತಿದ್ದವು.

    ಈ ಸಂದರ್ಭದಲ್ಲಿ ಕುರುಗೋಡುನಿಂದ ಬಳ್ಳಾರಿಗೆ ಹೊರಟ್ಟಿದ್ದ ಸಾರಿಗೆ ಬಸ್ ಗೆ ಈ ಕುರಿಗಳು ಬಲಿಯಾಗಿವೆ. ಅತಿವೇಗ ಹಾಗೂ ಮಂಜು ಕವಿದ್ದರಿಂದ ದಾರಿ ಸರಿಯಾಗಿ ಕಾಣದೆ ಬಸ್ ಚಾಕಲನ ನಿಯಂತ್ರಣ ತಪ್ಪಿ ಏಕಾಏಕಿ ಕುರಿಗಳ ಮೇಲೆ ಹರಿದಿದೆ.

    ಬಸ್ ಹರಿದ ಪರಿಣಾಮ 30 ಕ್ಕೂ ಹೆಚ್ಚು ಕುರಿಗಳು ಬಸ್ ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳ ಕೆಳಗೆ ಸಿಲುಕಿ ಮೃತಪಟ್ಟಿವೆ. ಘಟನೆ ನಡೆದ ಸ್ಥಳಕ್ಕೆ ಕುರುಗೋಡು ಪೊಲೀಸರು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.