ಬೀದರ್: ಪ್ರಯಾಣ ಮಾಡುವಾಗ ಬಸ್‌ನಲ್ಲೇ ಬಿಟ್ಟು ಹೋಗಿದ್ದ 1.60ಲಕ್ಷ ಹಣವನ್ನು ಪ್ರಯಾಣಿಕನಿಗೆ ಮರಳಿ ನೀಡಿ ಕಂಡಕ್ಟರ್ ಮತ್ತು ಚಾಲಕ ಮಾನವೀಯತೆ ಮೆರೆದ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯನುಸಾರ ಮುಂದಿನ 10 ದಿನಗಳವರೆಗೆ ಮೈಸೂರಿಗೆ 280 ಹೆಚ್ಚುವರಿ ಬಸ್ಸುಗಳು ಸಂಚರಿಸಲಿವೆ.
ದಸರಾ ಪ್ರಯುಕ್ತ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಸೆ.25ರಂದು ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ದಸರಾ ವಿಶೇಷ ಬಸ್ಸುಗಳಿಗೆ ಚಾಲನೆ ನೀಡಲಾಯಿತು.ಇದನ್ನೂ ಓದಿ: ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ
ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣದಲ್ಲಿ ದಸರಾ ಕ್ಯಾಂಪ್ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಿದರು.ಇದನ್ನೂ ಓದಿ: S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ
ಹೆದ್ದಾರಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳು ಒನ್ ವೇ ಸಂಚಾರ ಮಾಡುತ್ತಿವೆ. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ತೆಲಂಗಾಣ ಬಸ್‌ನಿಂದಾಗಿ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಕಂದಕಕ್ಕೆ ಬಿದ್ದಿದೆ. ಬಸ್ಸಿನಲ್ಲಿ 10 ರಿಂದ 15 ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಮಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದ ನೌಕಾನೆಲೆಯಲ್ಲಿ F-35 ಯುದ್ಧ ವಿಮಾನ ಪತನ
ಹಾವೇರಿ: ಸಾರಿಗೆ ಬಸ್‌ಗೆ (Bus) ಕಾರು (Car) ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ (Haveri) ಜಿಲ್ಲೆ ರಾಣೇಬೆನ್ನೂರು (Ranebennur) ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ನಡೆದಿದೆ.
ಘಟನೆಯಲ್ಲಿ ದಾವಣಗೆರೆ ಮೂಲದ ಪ್ರವೀಣ (36) ಸಾವನ್ನಪ್ಪಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೊಟ್ಟೇಶ ಅಬಲೂರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ಬಸ್ ಅಥಣಿಯಿಂದ ದಾವಣಗೆರೆಗೆ ಹೊರಟ್ಟಿದ್ದು, ಬೈಪಾಸ್‌ನಲ್ಲಿ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ
ಬೀದರ್: ರಸ್ತೆ ದಾಟುತ್ತಿದ್ದ ಬೈಕ್‌ಗೆ (Bike) ಸಾರಿಗೆ ಬಸ್ (Bus) ಡಿಕ್ಕಿಯಾದ (Accident) ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದ ಘಟನೆ ಬೀದರ್ (Bidar) – ತೆಲಂಗಾಣ ಗಡಿಯ ಗಣೀಶಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ರೇಣುಕಾ(33), ಜಗನ್ನಾಥ್ (38), ವಿನೋದ್ (15) ಹಾಗೂ ಸಿದ್ರಾಮ್ (72) ಎಂದು ಗುರುತಿಸಲಾಗಿದೆ. ಎಲ್ಲರೂ ಜಮೀನಿನಲ್ಲಿ ಕೆಲಸ ಮಾಡಿ ಮನೆ ಕಡೆ ಹೊರಟಿದ್ದರು. ಈ ವೇಳೆ ಜಮೀನಿನಿಂದ ರಸ್ತೆ ದಾಟುವಾಗ ಬೈಕ್ ನಿಲ್ಲಿಸಿ ಇಬ್ಬರೊಂದಿಗೆ ಮಾತನಾಡುತ್ತಿದ್ದಾಗ ಬಸ್, ಬೈಕ್‌ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: Punjab | ಕಾರು ಅಡ್ಡಗಟ್ಟಿ ಆಪ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಚಿತ್ರದುರ್ಗ: ಸಾರಿಗೆ ಬಸ್ (Bus) ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಿಂದಾಗಿ (Accident) ಐವರು ಸಾವನ್ನಪ್ಪಿದ ಘಟನೆ ಹಿರಿಯೂರಿನ ಗೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 150 (ಎ)ನಲ್ಲಿ ನಡೆದಿದೆ.
ಬಸ್ ರಾಯಚೂರಿನಿಂದ ಬೆಂಗಳೂರಿಗೆ (Bengaluru) ತೆರಳುತಿತ್ತು. ಈ ವೇಳೆ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಹಾಗೂ ಆಸ್ಪತ್ರೆಯಲ್ಲಿ ಒಬ್ಬ ಗಾಯಾಳು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಇದನ್ನೂ ಓದಿ: Bengaluru Bandh – ಇಂದು ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಮರ
ಮೃತರನ್ನು ಬೆಂಗಳೂರು ಮೂಲದ ಪಾರ್ವತಮ್ಮ (45) ಮಸ್ಕಿ ಮೂಲದ ರಮೇಶ್ (40) ಹಾಗೂ ಮಾಬಮ್ಮ (35) ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ. ಬಸ್‌ನಲ್ಲಿದ್ದ ಆರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ: ಸಾರಿಗೆ ಬಸ್ (KSRTC) ನಿರ್ವಾಹಕನೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಸಿದ್ದಕ್ಕೆ ಆಕೆಯ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಗುರುವಾರ ಚಳ್ಳಕೆರೆ (Challakere) ಬಸ್ ನಿಲ್ದಾಣದ ಬಳಿ ನಡೆದಿದೆ.
ಹಲ್ಲೆಗೊಳಗಾದ ನಿರ್ವಾಹಕನನ್ನು ಚಂದ್ರೇಗೌಡ ಎಂದು ಗುರುತಿಸಲಾಗಿದೆ. ಬೆಂಗಳೂರಿಗೆ (Bengaluru) ತೆರಳುತ್ತಿದ್ದ ಬಸ್‍ನಲ್ಲಿ ಮಹಿಳೆ ಬುಧವಾರ ಚಳ್ಳಕೆರೆಯಿಂದ ದಾಬಸ್ ಪೇಟೆಗೆ ಪ್ರಯಾಣಿಸುತ್ತಿದ್ದಳು. ದಾಬಸ್ ಪೇಟೆಯಲ್ಲಿ ಬಸ್ ನಿಲ್ಲಿಸುವಂತೆ ಮಹಿಳೆ ಹೇಳಿದ್ದಳು. ಆದರೆ ಅಲ್ಲಿ ಬಸ್ ನಿಲ್ಲಿಸದೇ ನಿರ್ವಾಹಕ ನಿಯಮದಂತೆ ಮೆಜಸ್ಟಿಕ್‍ನಲ್ಲಿ (Majestic) ಬಸ್ ನಿಲ್ಲಿಸಿದ್ದಾನೆ. ಇದರಿಂದ ಸಿಟ್ಟಾದ ಮಹಿಳೆ ನಿರ್ವಾಹಕನೊಂದಿಗೆ ಗಲಾಟೆ ಮಾಡಿದ್ದಾಳೆ. ಅಲ್ಲದೇ ಕುಟುಂಬಸ್ಥರ ಬಳಿ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರಧಾನಿ ಮೋದಿ ಕೊಲ್ಲುತ್ತೇನೆ ಎಂದು ಕರೆ ಮಾಡಿದ್ದ ವ್ಯಕ್ತಿ ಬಂಧನ
ಈ ಘಟನೆಯಿಂದಾಗಿ ಆಕ್ರೋಶಗೊಂಡಿದ್ದ ಮಹಿಳೆ ಚಳ್ಳಕೆರೆ ಬಸ್ ನಿಲ್ದಾಣದ ಬಳಿ ಆ ಬಸ್ ಬರುವವರೆಗೆ ಸಂಬಂಧಿಗಳೊಂದಿಗೆ ಕಾದು ಕುಳಿತು ಹಲ್ಲೆ ನಡೆಸಿದ್ದಾಳೆ. ಹಲ್ಲೆಗೊಳಗಾದ ಬಸ್ ನಿರ್ವಾಹಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್
ಹಾವೇರಿ: ಮಿತಿ ಮೀರಿ ಜನ ತುಂಬಿದ್ದ ಸಾರಿಗೆ ಬಸ್‍ನಿಂದ (Bus) ಬಿದ್ದು 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಹಾನಗಲ್ (Hangal) ತಾಲ್ಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಮಧು ಕುಂಬಾರ ಎಂದು ಗುರುತಿಸಲಾಗಿದೆ. ಬಸ್‍ನಲ್ಲಿ ಭಾರೀ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ದರಿಂದಾಗಿ ಬಾಲಕಿ ಬಾಗಿಲ ಬಳಿಯೇ ನಿಂತಿದ್ದಳು. ದುರಾದೃಷ್ಟವಶಾತ್ ಆಯತಪ್ಪಿ ಕೆಳಗಡೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವಾಟ್ಸಾಪ್‍ನಲ್ಲಿ ಔರಂಗಜೇಬ್ ಡಿಪಿ ಹಾಕಿದ್ದ ವ್ಯಕ್ತಿಯ ಬಂಧನ
ಬಾಲಕಿ ವಾಸನ ಗ್ರಾಮದಿಂದ ಕುಸನೂರು ಗ್ರಾಮದ ಶಾಲೆಗೆ ಬಸ್‍ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರೌಢ ಶಾಲೆಗೆ ದಾಖಲಾಗಿದ್ದಳು. ಕುಟುಂಬದಲ್ಲಿ ಒಬ್ಬಳೇ ಮಗಳಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ನಿಧನ
ಯಾದಗಿರಿ: ಕುಡಿದ ಅಮಲಿನಲ್ಲಿ ಸಾರಿಗೆ ಬಸ್ ಚಲಾಯಿಸಿದ ಚಾಲಕನಿಗೆ (Driver) ಪ್ರಯಾಣಿಕರು ತರಾಟೆ ತೆಗೆದುಕೊಂಡ ಘಟನೆ ಯಾದಗಿರಿಯ ಕೆಂಭಾವಿಯಲ್ಲಿ (Kembhavi) ನಡೆದಿದೆ.
ಜೇವರ್ಗಿ ಡಿಪೋಗೆ ಸೇರಿದ್ದ ಬಸ್ ಯಾದಗಿರಿಯಿಂದ (Yadagiri) ಕಲಬುರಗಿ (Kalaburagi) ಕಡೆಗೆ ಹೊರಟಿತ್ತು. ಬಸ್ ಚಾಲಕ ಕಾಸಿಂ ಅಮಲಿನಲ್ಲಿ ತೇಲಾಡ್ತಾ ಬಸ್ ಚಾಲನೆ ಮಾಡುತ್ತಿದ್ದ. ಚಾಲಕನ ಎಡವಟ್ಟಿಗೆ ಗಾಬರಿಗೊಂಡಿದ್ದ ಪ್ರಯಾಣಿಕರು ಕೆಂಭಾವಿಯ ನಾರಾಯಣಪುರ ಎಡದಂಡೆ ಕಾಲುವೆ ಬಳಿ ಬಸ್ ನಿಲ್ಲಿಸಿ ತರಾಟೆ ತಗೆದುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೊಂದು ಕೇಸ್ – ಕುಡಿದ ಅಮಲಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ
ಚಾಲಕನ ಎಡವಟ್ಟಿನಿಂದ ಬಸ್ ಕಾಲುವೆಗೆ ಉರುಳಿ ಬೀಳುವ ಅಪಾಯವಿತ್ತು. ಆದರೆ ಕೂಡಲೇ ಎಚ್ಚೆತ್ತ ಪ್ರಯಾಣಿಕರು ಚಾಲಕನ ಪರಿಸ್ಥಿತಿ ಕಂಡು ಬಸ್ ನಿಲ್ಲಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸರಿಯಾಗಿ ನಿಲ್ಲಲೂ ಆಗದಷ್ಟು ಮದ್ಯಪಾನ ಮಾಡಿ ಬಸ್ ಚಲಾಯಿಸುತ್ತಿದ್ದ ಚಾಲಕನಿಂದಾಗಿ ನಿರ್ವಾಹಕ ಅಂಬರೀಶ್ ಬಸ್ ಚಾಲನೆ ಮಾಡಿಕೊಂಡು ಪ್ರಯಾಣಿಕರನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: 50% ಆಫರ್ ಪಡೆದು 33 ಲಕ್ಷ ದಂಡ ಪಾವತಿಸಿದ BMTC
ಹಾವೇರಿ-ಹುಬ್ಬಳ್ಳಿ ತಡೆ ರಹಿತ ಬಸ್ ಬಂಕಾಪುರ ಟೋಲ್‌ಗೇಟ್ ದಾಟಿ ಮುಂದೆ ಬಂದ ನಂತರ ಪ್ರಯಾಣಿಕರ ಸೋಗಿನಲ್ಲಿ ಬಸ್ಸಿನಲ್ಲಿದ್ದ ದರೋಡೆಕೋರರ ಗ್ಯಾಂಗಿನ ಓರ್ವ ಸದಸ್ಯ, ಬ್ಯಾಗ್ ಇಟ್ಕೊಂಡು ಕುಳಿತಿದ್ದ ಪ್ರಯಾಣಿಕ ರಾಕೇಶ ಎಂಬವರ ಷರ್ಟ್‌ಗೆ ಗುಟ್ಕಾ ಉಗುಳಿದ್ದಾರೆ. ಆಗ ಗುಟ್ಕಾ ಉಗುಳಿರುವುದನ್ನು ರಾಕೇಶ್ ಪ್ರಶ್ನಿಸಿದ್ದಾರೆ. ಅಷ್ಟರಲ್ಲಾಗಲೆ ಬಸ್ಸಿನಲ್ಲೇ ಇದ್ದ ಗ್ಯಾಂಗಿನ ಮೂವರು ಸೇರಿಕೊಂಡು ರಾಕೇಶ ಹೊಟ್ಟೆಗೆ ಚಾಕು ಇಟ್ಟು ಬಸ್ಸಿನ ಚಾಲಕನಿಗೆ ಚಾಕು ತೋರಿಸಿ, ಬಸ್ ನಿಲ್ಲಿಸುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಚಾಕು ಕಂಡು ದಿಕ್ಕು ತೋಚದಂತಾದ ಬಸ್ಸಿನ ಚಾಲಕ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ ಬಂಕಾಪುರ ಸ್ಮಶಾನದ ಬಳಿ ಬಸ್ ನಿಲ್ಲಿಸಿದ್ದಾನೆ. ಆಗ ದರೋಡೆಕೋರರು, ರಾಕೇಶ ಬಳಿ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿ ಆಗಿದ್ದಾರೆ. ಈ ಕುರಿತು ರಾಕೇಶ, ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ – ಆರೋಪಿ ಆರ್.ಡಿ.ಪಾಟೀಲ್‌ಗೆ ಸಿಐಡಿ ನೋಟಿಸ್
Live Tv
[brid partner=56869869 player=32851 video=960834 autoplay=true]