Tag: ಸಾರಾ ಮಹೇಶ್

  • ಸುಮಲತಾ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

    ಸುಮಲತಾ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

    ಮೈಸೂರು: ಕಾಂಗ್ರೆಸ್‍ಗೆ ಎಚ್ಚರಿಕೆ ನೀಡಿದ ಸಚಿವ ಸಾರಾ ಮಹೇಶ್ ಸುಮಲತಾ ಅಂಬರೀಶ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಿಖೀಲ್ ಪರ ಪ್ರಚಾರ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಚಿವರು, ಅಂಬರೀಶ್ ನನ್ನ ತಲೆಗೆ ರಾಜಕೀಯ ಸಾಕು ಎಂದಿದ್ದರು. ನಿಖಿಲ್ ಮತ್ತು ಅಭಿಷೇಕ್ ಆತ್ಮೀಯ ಸ್ನೇಹಿತರು ಎಂದರು.

    ನಿಖಿಲ್‍ರನ್ನು ಸುಮಲತಾ ತಮ್ಮ ಮಗ ಎಂದು ಹೇಳಿದ್ರು. ಮಗನಿಗೆ ಸುಮಲತಾ ಅವರು ಆಶೀರ್ವಾದ ಮಾಡಬೇಕಿತ್ತು. ಆದರೆ ಸುಮಲತಾ ಅವರು ನಿಖಿಲ್ ವಿರುದ್ಧ ಪ್ರಹಾರ ಮಾಡಲು ನಿಂತಿದ್ದಾರೆ. ಎಲ್ಲರೂ ಅಭಿಷೇಕ್ ಸಿನಿಮಾ ನೋಡಿ, ಬೇಕಾದ್ರೆ ಹೆಚ್ಚಿನ ಹಣ ಕೊಟ್ಟು ಬ್ಲಾಕ್ ಟಿಕೆಟ್ ಪಡೆದು ಸಿನಿಮಾ ನೋಡಿ. ಆದರೆ ಕುಮಾರಣ್ಣನ ಮಗ ರಾಜ್ಯದ ನೇತಾರನಾಗಬೇಕು ಎಂದಿದ್ದಾರೆ.

    ಕಾಂಗ್ರೆಸ್ ಗೆ ಎಚ್ಚರಿಕೆ:
    ಮೈತ್ರಿ ಧರ್ಮದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿರುವ ದೋಸ್ತಿ ಪಕ್ಷಗಳ ನಡುವೆ ಹೊಂದಾಣಿಕೆ ಕಷ್ಟವಾಗುತ್ತಿದ್ಯಾ ಎಂಬ ಅನುಮಾನ ಮೂಡಿದ್ದು, ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಕೂಡ ಪ್ರತಿಧ್ವನಿಸಲಿದೆ ಎಂದು ಸಾರಾ ಮಹೇಶ್ ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ, ನಮ್ಮ ಅಂತರ ಇದ್ದೆ ಇರುತ್ತದೆ. ಮೈತ್ರಿಯಾಗಿ ಸರ್ಕಾರ ನಡೆಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸ್ನೇಹಿತರೇ ನೀವು ಮಂಡ್ಯದಲ್ಲಿ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಪ್ರತಿಧ್ವನಿಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿರೋ ಅದು ಮೈಸೂರಿನಲ್ಲಿ ಪ್ರತಿಧ್ವನಿಸಲಿದೆ – ಸಾರಾ ಮಹೇಶ್ ಎಚ್ಚರಿಕೆ

    ಸುಮಲತಾ, ನಿಖಿಲ್ ಪ್ರಚಾರ:
    ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಷ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರ ಕೆಡವಲು ಯತ್ನಿಸುತ್ತಿರೋ ಬಿಎಸ್‍ವೈಗೆ ಎಚ್‍ಡಿಡಿ ಶಾಕ್

    ಸರ್ಕಾರ ಕೆಡವಲು ಯತ್ನಿಸುತ್ತಿರೋ ಬಿಎಸ್‍ವೈಗೆ ಎಚ್‍ಡಿಡಿ ಶಾಕ್

    ಮೈಸೂರು: `ಆಪರೇಷನ್ ಕಮಲ’ ಮೂಲಕ ತಮ್ಮ ಕಿರಿ ಮಗನ ಸರ್ಕಾರವನ್ನು ಕೆಡವಲು ಯತ್ನಿಸಿದ್ದ ಮಾಜಿ ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ದೇವೇಗೌಡರು ಶಾಕ್ ಕೊಟ್ಟಿದ್ದಾರೆ.

    ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಇತಿಶ್ರೀ ಹಾಡಿರುವ ಗೌಡರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಗೆ ನಿರ್ಧರಿಸಿದ್ದಾರೆ. ಈ ಮೂಲಕ ಕೈಗೆ ಬಂದ ಅಧಿಕಾರದ ತುತ್ತು ಬಿಜೆಪಿ ಬಾಯಿಯಿಂದ ತಪ್ಪಿದೆ. ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ, ಕಾಂಗ್ರೆಸ್‍ಗೆ ಉಪಾಧ್ಯಕ್ಷ ಸ್ಥಾನ ದಕ್ಕಲಿದ್ದು, ಇಂದು ಚುನಾವಣೆ ನಡೆಯಲಿದೆ.

    ವಿಧಾನಸೌಧದಲ್ಲಿರುವ ಮೈತ್ರಿ ಧರ್ಮವನ್ನು ಸಿದ್ದರಾಮಯ್ಯ ಊರಲ್ಲೂ ಪಾಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಮತ್ತು ಸಚಿವ ಸಾರಾ ಮಹೇಶ್‍ಗೆ ನಿರ್ದೇಶಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಮೈಸೂರು ಜಿ.ಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಬಿಜೆಪಿಯವರಿಗೆ ಮಾತು ಕೊಟ್ಟಿದ್ದೇವೆ. ಅದಕ್ಕಾಗಿ ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಮೈಸೂರು ಜಿಲ್ಲಾಪಂಚಾಯ್ತಿ ಹೊಂದಾಣಿಕೆ ಬಗ್ಗೆ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದರು.

    ನಾನು ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಮಾತನಾಡಿದ್ದೇನೆ. ಸ್ಥಳೀಯ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಈ ಸಂದರ್ಭದಲ್ಲಿ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಸದಸ್ಯರ ಮನಸ್ಥಿತಿಯನ್ನ ಅರ್ಥ ಮಾಡಿಕೊಂಡು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಅಂದು ಕಾಂಗ್ರೆಸ್ ಜೊತೆಗಿನ ಸಂಬಂಧ ಹಾಳಾಗಿದ್ದ ಸಂಧರ್ಬದಲ್ಲಿ ತೆಗೆದುಕೊಂಡ ನಿರ್ಧಾರ ಮಾಡಿರೋದು. ಯಾರು ಅಧ್ಯಕ್ಷ ಉಪಾಧ್ಯಕ್ಷ ಅದು ಸಹ ನಿರ್ಣಯ ಆಗಿದೆ ಎಂದು ಸಚಿವರು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಲೋಕಸಭೆಯಲ್ಲೂ ಜೊತೆಗೆ ಇರ್ತೀರಾ ಬಿಡಿ: ಸಾರಾ ಮಹೇಶ್ ಕಾಲೆಳೆದ ಪ್ರತಾಪ್ ಸಿಂಹ

    ಮೈಸೂರು: ಲೋಕಸಭಾ ಚುನಾವಣೆಯಲ್ಲೂ ನೀವು ಜೊತೆಗೆ ಇರ್ತೀರಾ ಬಿಡಿ ಎಂದು ಸಂಸದ ಪ್ರತಾಪ್ ಸಿಂಹ ಅವರು ಜೆಡಿಎಸ್ ಸಚಿವರ ಕಾಲೆಳೆದಿದ್ದಾರೆ.

    ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದರು, ಇದು ಹಳೇ ದೋಸ್ತಿ. ಈಗ ಮುಂದುವರಿಯುತ್ತಿದೆ ಅಷ್ಟೇ. ಈ ಹಿಂದೆ ಕಯಬಂಳಿ ನಟರಾಜ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಿ, 30 ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡುವಂತೆ ತಿಳಿಸಿದ್ದೇವು. ಹೀಗಾಗಿ ನಾಳೆ ಹೊಸಬರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಮಾಡಲಾಗುತ್ತಿದೆ ಎಂದರು.

    ಬಿಜೆಪಿಯ ಅಭ್ಯರ್ಥಿ ಯಾರು ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾಳೆ… ನಾಳೆ ಬೆಳಗ್ಗೆ ಹೇಳುತ್ತೇವೆ ಎಂದು ಸಂಸದರು ನಗೆ ಹರಿಸಿದರು. ಇದನ್ನು ಓದಿ: ಬಿಜೆಪಿಗೆ ಮಾತು ಕೊಟ್ಟಿದ್ದೇವೆ, ದೋಸ್ತಿ ಕೈಬಿಡುವ ನಿರ್ಧಾರವಿಲ್ಲ: ಸಾರಾ ಮಹೇಶ್

    ಲೋಕಸಭೆಯಲ್ಲಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಇರುತ್ತದೇಯೇ ಎಂದು ಮಾಧ್ಯಮದವರು ಸಚಿವ ಜಿ.ಟಿ.ದೇವೇಗೌಡ ಅವರಿಗೆ ಕೇಳಿದರು. ಈ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಸಚಿವ ಸಾರಾ ಮಹೇಶ್ ಅವರು, ಈಗ ಜೊತೆಯಾಗಿ ಇರುತ್ತೇವೆ. ಆದರೆ ಲೋಕಸಭೆಯಲ್ಲಿ ವಿರುದ್ಧವಾಗಿಯೇ ಮತ ಕೇಳುತ್ತೇವೆ ಎಂದರು. ಇದಕ್ಕೆ ನಗುತ್ತಲೇ ಪ್ರತ್ಯುತರ ಕೊಟ್ಟ ಸಂಸದ ಲೋಕಸಭೆಯಲ್ಲೂ ಜೊತೆಯಾಗಿಯೇ ಇರ್ತೀರಾ ಬಿಡಿ ಸಚಿವರ ಕಾಲೆಳೆದರು. ಇಬ್ಬರ ಮಧ್ಯ ನಿಂತಿದ್ದ ಸಚಿವ ಜಿ.ಟಿ.ದೇವೇಗೌಡ ಅವರು ಮಾತ್ರ ನಗುತ್ತಲೇ ನಿಂತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ರಾಜೀನಾಮೆ ನೀಡ್ತಾರೆ: ಸಾರಾ ಮಹೇಶ್

    ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ರಾಜೀನಾಮೆ ನೀಡ್ತಾರೆ: ಸಾರಾ ಮಹೇಶ್

    ಬೆಂಗಳೂರು: ಕಾಂಗ್ರೆಸ್ಸಿನ ಶಾಸಕರು ಯಾರೂ ರಾಜೀನಾಮೆ ನೀಡುವುದಿಲ್ಲ. ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರೇ ರಾಜೀನಾಮೆ ಕೊಡಬಹುದು ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹೇಳಿದ್ದಾರೆ.

    ಬಿಜೆಪಿಯವರ ಸಂಪರ್ಕದಲ್ಲಿ ಆರೆಂಟು ಶಾಸಕರೂ ಇಲ್ಲ. ಪಕ್ಷೇತರರು ಇಬ್ಬರು ಸೇರಿ ಮೂರ್ನಾಲ್ಕು ಶಾಸಕರು ಇದ್ದಿರಬಹುದು. ಎಲ್ಲವೂ ನಾಳೆ ಬಹಿರಂಗ ಆಗುತ್ತದೆ. ಜೆಡಿಎಸ್ ಪಕ್ಷದ ಶಾಸಕರು ಒಗ್ಗಟ್ಟಾಗಿದ್ದಾರೆ. ಸರ್ಕಾರ ಉಳಿಸಲು ನಾವು ಯಾವ ತ್ಯಾಗಕ್ಕೂ ಸಿದ್ಧ ಎಂದು ಅವರು ಈ ವೇಳೆ ತಿಳಿಸಿದರು.

     

    ಆಪರೇಷನ್ ಕಮಲ ಇಲ್ಲ: ಕಾಂಗ್ರೆಸ್‍ನ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿ ಇರುವುದು ನಿಜ. ಆದರೆ ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.

    ಚಿಕ್ಕೋಡಿಯಲ್ಲಿ ಮಾತನಾಡಿದ ಅವರು ಬಿಜೆಪಿಯ 104 ಶಾಸಕರು ದೆಹಲಿಯಲ್ಲಿ ಸೇರಿದ್ದು ನಿಜ. ಎಲ್ಲರೂ ಲೋಕಸಭಾ ಚುನಾವಣಾ ವಿಚಾರವಾಗಿ ನಡೆದ ಚರ್ಚೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಲಹೆಯಂತೆ ಎಲ್ಲರೂ ಸಭೆ ನಡೆಸಿ, ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

    ಬಿಜೆಪಿಯವರನ್ನು ಬಿಟ್ಟರೆ ಬೇರೆ ಪಕ್ಷದ ಶಾಸಕರು ದೆಹಲಿಗೆ ಬಂದಿಲ್ಲ. ನಾವು ಮಾತ್ರ ಲೋಕಸಭಾ ಚುನಾವಣೆಯ ವಿಚಾರವಾಗಿ ಅಷ್ಟೇ ಚರ್ಚೆ ಮಾಡಿದ್ದೇವೆ. ಆಪರೇಷನ್ ಕಮಲದ ಬಗ್ಗೆ ಮಾತುಕತೆಯಾಗಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ – ಸುಳಿವು ಬಿಟ್ಟುಕೊಟ್ಟ ಸಚಿವ ಸಾರಾ ಮಹೇಶ್

    ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ – ಸುಳಿವು ಬಿಟ್ಟುಕೊಟ್ಟ ಸಚಿವ ಸಾರಾ ಮಹೇಶ್

    ಮೈಸೂರು: ಜಿಲ್ಲೆಯ ಮಹಾನಗರ ಪಾಲಿಕೆ ಮೇಯರ್ ಗದ್ದುಗೆಗಾಗಿ ಗುದ್ದಾಟ ಆರಂಭವಾಗಿದ್ದು ಮತ್ತೆ ರೆಸಾರ್ಟ್ ರಾಜಕಾರಣ ಶುರುವಾಗಿದೆ.

    ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರೆ. ಇತ್ತ ಮೈಸೂರಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿವೆ. ಇಂತದೊಂದು ಸುಳಿವನ್ನು ಸಚಿವ ಸಾರಾ ಮಹೇಶ್ ಬಿಟ್ಟುಕೊಟ್ಟಿದ್ದಾರೆ.

    ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಮ್ಮೆ ನೋವಾಗಿದೆ. ಮೈತ್ರಿ ವೇಳೆ ಇದ್ದಕಿದ್ದಂತೆ ನಾಮಪತ್ರ ಸಲ್ಲಿಸಿ ತೊಂದರೆ ಕೊಟ್ಟಿದ್ದರು. ಅದಕ್ಕಾಗಿ ಈ ಬಾರಿ ಮೊದಲಿಗೆ ಜೆಡಿಎಸ್‍ಗೆ ಮೇಯರ್ ಸ್ಥಾನ ಬೇಕು ಎಂದು ಕೇಳಿದ್ದೇವೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಮತ ಇರುವವರಿಗೇ ಮೇಯರ್ ಸ್ಥಾನ ಎಂದು ಹೇಳಿದ್ದಾರೆ. ಸದ್ಯ ಮೇಯರ್ ಆಯ್ಕೆ ಮಾಡುವ ಮತದಾರರ ಸಂಖ್ಯೆ ಜೆಡಿಎಸ್‍ನಲ್ಲಿ ಹೆಚ್ಚಿದೆ. ನಾವು ಈಗಾಗಲೇ ಬಿಬಿಎಂಪಿಯಲ್ಲೂ ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಈಗ ನಮಗೆ ಅಧಿಕಾರ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

    ಬಿಜೆಪಿ ನಾಯಕರು ಈಗಾಗಲೇ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ಸಿಗೆ ಸಚಿವ ಸಾ.ರಾ.ಮಹೇಶ್ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಜೆಡಿಎಸ್ ಸದಸ್ಯರು ಈಗಾಗಲೇ ರೆಸಾರ್ಟ್ ಗೆ ತೆರಳಿದ್ದು, ನಮ್ಮ ಸದಸ್ಯರು ಕಾಂಗ್ರೆಸ್ಸಿನಂತೆ ಹೆದರಿಕೊಂಡು ರೆಸಾರ್ಟ್ ಗೆ ಹೋಗಿಲ್ಲ. ಎಲ್ಲರೂ ಕೂತು ಸಮಾಲೋಚನೆ ನಡೆಸಲು ನಾವೇ ಕಳುಹಿಸಿಕೊಟ್ಟಿದ್ದೇವೆ. ಶಾಸಕ ತನ್ವೀರ್ ಸೇಠ್ ಈಗಾಗಲೇ ಬಂದು ಭೇಟಿಯಾಗಿ ಹೋಗಿದ್ದಾರೆ. ಮಾತುಕತೆ ನಡೆಸಿ ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

    ಮೈಸೂರು ಮೇಯರ್ ಚುನಾವಣೆ ಉಸ್ತುವಾರಿಯನ್ನು ಕೃಷ್ಣ ಭೈರೇಗೌಡರಿಗೆ ವಹಿಸಲಾಗಿದ್ದು, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಇಂದು ಮೈಸೂರಿಗೆ ಆಗಮಿಸಿ ಖಾಸಗಿ ಹೋಟೆಲ್‍ ನಲ್ಲಿ ಸಭೆ ನಡೆಸಲಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯರವರ ಮೈಸೂರಿನ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದಾರೆ.

    ಸಂಜೆ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ನಾಳೆಯ ಮೇಯರ್ ಚುನಾವಣೆ ವಿಚಾರವಾಗಿ ಸಭೆ ನಡೆಯಲಿದ್ದು, ಮೈಸೂರಿನ ಶಾಸಕರು, ಜಿಲ್ಲಾಧ್ಯಕ್ಷರು, ನಗರಾಧ್ಯಕ್ಷರು ಮತ್ತು ನಗರ ಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸದಸ್ಯರ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್‍ ಗೆ ಮಾಹಿತಿಯನ್ನು ಕೃಷ್ಣಭೈರೇಗೌಡ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಿಜೆಪಿ ಒಬ್ಬ ಶಾಸಕನನ್ನ ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ನಾವ್ ರೆಡಿ: ಸಾ.ರಾ.ಮಹೇಶ್

    ಬಿಜೆಪಿ ಒಬ್ಬ ಶಾಸಕನನ್ನ ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ನಾವ್ ರೆಡಿ: ಸಾ.ರಾ.ಮಹೇಶ್

    -ನಾನು 20 ವರ್ಷ ಬಿಜೆಪಿಯಲ್ಲಿದ್ದವನು, ನನಗೆ ಬಹಳಷ್ಟು ಶಾಸಕರು ಆತ್ಮೀಯರು

    ಮೈಸೂರು: ಬಿಜೆಪಿ ನಮ್ಮ ಓರ್ವ ಶಾಸಕರನ್ನು ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ನಾವು ರೆಡಿಯಾಗಿದ್ದೇವೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಹಾಗೂ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಅವರು ಅಭಿವೃದ್ಧಿಪರವಾದ ಆಡಳಿತನ್ನು ರಾಜ್ಯದ ಜನತೆಗೆ ನೀಡುತ್ತಿದ್ದಾರೆ. ಆದ್ರೆ ಸರ್ಕಾರ ಉರುಳಿಸಲು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿಯ 10 ಶಾಸಕರು ನನ್ನ ಸಂಪರ್ಕದಲ್ಲಿರೋ ವಿಷಯ ಜೆಡಿಎಸ್ ವರಿಷ್ಠರಿಗೆ ಗೊತ್ತಿದೆ. ನಾನು ಸಹ 20 ವರ್ಷ ಬಿಜೆಪಿಯಲ್ಲಿ ಇದ್ದವನು. ಹಲವು ಶಾಸಕರು ನನಗೆ ಆತ್ಮೀಯರು ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಇದೂವರೆಗೆ ನಮ್ಮ ಯಾವ ಶಾಸಕರನ್ನು ಬಿಜೆಪಿ ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಿಸಿದರೂ ನಮ್ಮ ಯಾವ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವೇ ಆಗಿರಬಹುದು. ಆದ್ರೆ ನಾವು ಸುಮ್ಮನೆ ಕುಳಿತಿಲ್ಲ. ಬಿಜೆಪಿ ನಮ್ಮ ಒಬ್ಬ ಶಾಸಕನನ್ನು ಸೆಳೆದ್ರೆ, ಕೌಂಟರ್ ಕೊಡೋದಕ್ಕೆ ಸಿದ್ಧವಾಗಿದ್ದೇವೆ. ಅಲ್ಲಿ ಪ್ರಾದೇಶಿಕ ಪಕ್ಷ ಮತ್ತು ನಾಯಕರು ಶಕ್ತಿ ಏನು ಎಂಬುವುದನ್ನು ತೋರಿಸುತ್ತೇವೆ ಎಂದು ಗುಡುಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ `ಸಿಲ್ಕ್ ಸೀರೆ ಡಿಸ್ಕೌಂಟ್ ಭಾಗ್ಯ’!

    ವರ ಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ `ಸಿಲ್ಕ್ ಸೀರೆ ಡಿಸ್ಕೌಂಟ್ ಭಾಗ್ಯ’!

    ಮೈಸೂರು: ರಾಜ್ಯದ ಮಹಿಳೆಯರಿಗೆ ವರಮಹಾಲಕ್ಷೀ ಹಬ್ಬಕ್ಕೆ ರೇಷ್ಮೆ ಇಲಾಖೆ ಬಂಪರ್ ಕೊಡುಗೆ ನೀಡುತ್ತಿದೆ. 10 ಸಾವಿರ ರೂ. ಬೆಲೆ ಬಾಳುವ ಮೈಸೂರು ಸಿಲ್ಕ್ ಸೀರೆಯನ್ನು ಹಬ್ಬದ ಕೊಡುಗೆ ಆಗಿ 4,500 ರೂ.ಗೆ ಮಾರಾಟ ಮಾಡಲು ಮುಂದಾಗಿದೆ.

    ಮೈಸೂರಿನಲ್ಲಿ ಮಾತನಾಡಿದ ರೇಷ್ಮೆ ಮತ್ತು ಪ್ರವಾಸ್ಯೋದ್ಯಮ ಸಚಿವ ಸಾ.ರಾ.ಮಹೇಶ್, ಮೈಸೂರು ಸಿಲ್ಕ್ ಸೀರೆ ಮಧ್ಯಮ ವರ್ಗದವರಿಗೆ ಸಿಗುವುದಿಲ್ಲ ಎಂಬ ಆರೋಪ ಇದೆ. ಈ ಕಾರಣದಿಂದ ರಾಜ್ಯ ಸರ್ಕಾರದಿಂದ ಹೊಸ ಕೊಡುಗೆ ನೀಡುತ್ತಿದ್ದೇವೆ. ರಾಜ್ಯಾದ್ಯಂತ ಇರುವ ನಮ್ಮ ಮಳಿಗೆಗಳಲ್ಲಿ 4,500 ರೂ.ಗೆ ಮೈಸೂರು ಸಿಲ್ಕ್ ಸೀರೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

    ಸದ್ಯಕ್ಕೆ ವರ ಮಹಾಲಕ್ಷ್ಮಿ ಹಬ್ಬಕ್ಕೆ ಈ ಕೊಡುಗೆ ನೀಡಿದ್ದು, ನಂತರ ಮುಂದುವರೆಸುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ ರಾಜ್ಯಾದ್ಯಂತ ಮೈಸೂರು ಸಿಲ್ಕ್ ಅಂಗಡಿ ತೆರೆಯುವ ಭರವಸೆ ನೀಡಿ, ಪ್ರವಾಸಿ ತಾಣಗಳಲ್ಲಿ ಅಂಗಡಿ ಇದ್ದರೆ ಅಭಿವೃದ್ಧಿ ಪಡಿಸುತ್ತೇವೆ ಎಂದರು.

    ಉಸ್ತುವಾರಿ ಸಚಿವ ಸ್ಥಾನ ಆಕ್ಷಾಂಕ್ಷಿ ಅಲ್ಲ: ಇದೇ ವೇಳೆ ನಾನು ಮೈಸೂರು ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸಾರಾ ಮಹೇಶ್ ಸ್ಪಷ್ಟಪಡಿಸಿದ್ದು, ನಾನಂತೂ ಉಸ್ತುವಾರಿ ಸಚಿವ ಸ್ಥಾನದ ಆಕಾಂಕ್ಷಿ ರೇಸ್‍ನಲ್ಲಿ ಇಲ್ಲ. ಯಾರಿಗೆ ಉಸ್ತುವಾರಿ ಕೊಟ್ಟರೂ ನನಗೆ ಅಭ್ಯಂತರ ಇಲ್ಲ. ಸಿಎಂ ಕುಮಾರಸ್ವಾಮಿ ಯಾರನ್ನು ಮೈಸೂರು ಉಸ್ತುವಾರಿ ಮಾಡುತ್ತಾರೆ ಎಂದು ಕಾದು ನೋಡುತ್ತೇನೆ. ಒಂದು ವೇಳೆ ಸರ್ಕಾರ ನನಗೆ ಉಸ್ತುವಾರಿ ಕೊಟ್ಟರೆ ಆಗ ಯೋಚನೆ ಮಾಡುತ್ತೇನೆ ಎಂದರು.

  • ಯಾತ್ರಿ ನಿವಾಸ್ ಗೇಟ್ ಕಾಯುತ್ತ ಅರ್ಧ ಗಂಟೆ ನಿಂತ ಪ್ರವಾಸೋದ್ಯಮ ಸಚಿವ ಮಹೇಶ್

    ಯಾತ್ರಿ ನಿವಾಸ್ ಗೇಟ್ ಕಾಯುತ್ತ ಅರ್ಧ ಗಂಟೆ ನಿಂತ ಪ್ರವಾಸೋದ್ಯಮ ಸಚಿವ ಮಹೇಶ್

    ಮಂಡ್ಯ: ಯಾತ್ರಿ ನಿವಾಸ್ ಗೇಟ್ ಬಾಗಿಲು ತೆಗೆಯುವಂತೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅರ್ಧ ಗಂಟೆ ಗೇಟ್ ಮುಂದೆಯೇ ಕಾಯುತ್ತ ನಿಂತ ಘಟನೆ ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದಿದೆ.

    ಶುಕ್ರವಾರ ನಾಗಮಂಗಲ ತಾಲೂಕಿನ ಪ್ರವಾಸ ಕೈಗೊಂಡಿದ್ದ ಸಚಿವರು, ತಾಲೂಕು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ, ಸೌಮ್ಯ ಯಾತ್ರಿ ಕೇಶವ ನಿವಾಸ ಪರಿಶೀಲನೆಗೆ ಮುಂದಾಗಿದ್ದಾಗ ಘಟನೆ ನಡೆದಿದೆ.

    ಸಚಿವರು ನಾಗಮಂಗಲ ಪ್ರವಾಸಿ ಮಂದಿರದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ನಂತರ ಪ್ರವಾಸಿ ಮಂದಿರ ಸಮೀಪದ ಸೌಮ್ಯ ಕೇಶವ ಯಾತ್ರಿ ನಿವಾಸ ಪರಿಶೀಲಿಸಲು ಮುಂದಾಗಿದ್ದರು. ಆದರೆ ಸೌಮ್ಯ ಯಾತ್ರಿ ಕೇಶವ ನಿವಾಸದ ಗೇಟ್ ಬೀಗ ಯಾರ ಹತ್ತಿರವಿದೆ ಎನ್ನುವುದೇ ತಿಳಿಯದೇ ಅಧಿಕಾರಿಗಳು ಪರದಾಡಿದರು. ಸುಮಾರು 30 ನಿಮಿಷ ಗೇಟ್ ಮುಂದೆ ಕಾದು ನಿಂತರೂ ಯಾರೊಬ್ಬರು ಬಂದು ಗೇಟ್ ಬೀಗ ತೆಗೆಯಲಿಲ್ಲ.

    ಅಧಿಕಾರಿಗಳ ನಿಷ್ಕಾಳಜಿ, ಬೇಜವಾಬ್ದಾರಿಯಿಂದ ಸ್ವಲ್ಪ ಅಸಮಾಧಾನಗೊಂಡ ಸಚಿವರು ಮತ್ತೇ ಅರ್ಧ ಗಂಟೆ ನಂತರ ಮರಳಿ ಬರುತ್ತೇನೆ. ಅಷ್ಟರಲ್ಲಿಯೇ ಬೀಗ ತೆಗೆಸಿರಿ ಎಂದು ಉಪವಿಭಾಗಾಧಿಕಾರಿ ಯಶೋಧ ಅವರಿಗೆ ಸೂಚನೆ ನೀಡಿ ಪ್ರವಾಸ ಮುಂದುವರಿಸಿದರು.