Tag: ಸಾರಾ ಗೋವಿಂದ್

  • ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    – ಸಾರಾ ಗೋವಿಂದ್, ಕವಿರಾಜ್ ಸಂತಾಪ

    ಬೆಂಗಳೂರು: ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ ಎಂದು ಟ್ವೀಟ್ ಮಾಡುವ ಮೂಲಕ ನಟ ಜಗ್ಗೇಶ್ ಅವರು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತನ್ನ ಗಾಯನವನ್ನು ನಿಲ್ಲಿಸಿದ್ದಾರೆ. ಈ ಮೂಲಕ 50ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ಗೌರವಾನ್ವಿತ ವಿದಾಯ ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ. ನೀವು ಕಾಯಕದಲ್ಲಿ ಗಾಯಕ ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬರದು. ಮರೆಯಲಾಗದು. ಹೋದಿರಿ ಮತ್ತೆ ಬೇಗ ಬನ್ನಿ ಎಂದಿದ್ದಾರೆ.

    ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದು, ಯಾರ ಕಣ್ಣು ತಾಕಿತು. ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು. ವಿಶ್ವಶಾಂತಿ ಭಂಗಕ್ಕೆ ಕೊರೊನಾ ಹರಡಿ ಮಳ್ಳಿಯಂತ ದರಿದ್ರ ದೇಶ ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು. ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ಸಾರಾ ಗೋವಿಂದ್ ಅವರು, ಕನ್ನಡ ಚಿತ್ರೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನ ಸುದ್ದಿ ತಿಳಿದು ದುಃಖವಾಗುತ್ತಿದೆ. ನಟನಾಗಿ ರಾಜಕುಮಾರ್ ಹೇಗೆ ಹೆಸರು ಮಾಡಿದರು ಅದೇ ರೀತಿ ಗಾಯಕರಾಗಿ ಅವರು ಸಹ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದರು. ಇವತ್ತು ನಮ್ಮನ್ನ ಆಗಲಿದ್ದಾರೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

    https://www.facebook.com/kavi.raj.376258/posts/3715760768457932

    ಜೊತೆಗೆ ಕವಿರಾಜ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ನೆಟ್ ವರ್ಕ್ ಇಲ್ಲದ ಜಾಗದಲ್ಲಿದ್ದು ಬೆಳಗ್ಗೆಯಿಂದ ಡ್ರೈವಿಂಗಿನಲ್ಲಿದ್ದೆ. ದಾರಿಯಲ್ಲಿ ಮೂರು ಟಿವಿಯವರು ಎಸ್‍ಪಿಬಿ ಸಾರ್ ಬಗ್ಗೆ ಬೈಟ್ಸ್ ಕೇಳಿದರು. ಪರಿಸ್ಥಿತಿ ಗಂಭೀರವಾಗಿದೆ ಅಂತಷ್ಟೇ ಗೊತ್ತಿತ್ತು. ಅವರು ಗುಣಮುಖರಾಗಲಿ ಅಂತ ಹಾರೈಸುವ ರೀತಿಯಲ್ಲೇ ಮಾತಾಡಿದೆ. ಟಿವಿಯವರು ವಿಷಯ ಹೇಳಲಿಲ್ಲ. ಸ್ವಲ್ಪ ಹೊತ್ತಿಗೆ ಮೊದಲು ವಿಷಯ ಗೊತ್ತಾಯಿತು. ಅವರಿಲ್ಲ ಅಂತಾ ಈಗಲೂ ಒಪ್ಪಲಾಗುತ್ತಿಲ್ಲ. ಭೂಮಿ ಮೇಲೆ ಹಾಡುಗಳಿರೋವರೆಗೂ ಅವರು ಇರುತ್ತಾರೆ. ಅವರು ಅಜರಾಮರ ಎಂದು ಕಂಬನಿಮಿಡಿದಿದ್ದಾರೆ.

  • ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದ್ದಾರೆ – ಸಂಬರಗಿ ವಿರುದ್ಧ ಸಾರಾ ಗೋವಿಂದು ಆಕ್ರೋಶ

    ಬೆಂಗಳೂರು: ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಸಾರಾ ಗೋವಿಂದ್ ಅವರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಮಾತನಾಡಿದ್ದ ಪ್ರಶಾಂತ್ ಸಂಬರಗಿಯವರು, ಕೆಲ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಸಾರಾ ಗೋವಿಂದ್ ಅವರು ಸಂಬರಗಿ ನಮ್ಮ ಚಿತ್ರರಂಗದವರೇ ಅಲ್ಲ ಎಂದು ದೂರಿದ್ದರು. ಈಗ ಇದೇ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.

    ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಗೋವಿಂದು, ಹಾದಿ ಬಿದಿಯಲ್ಲಿ ಮಾತಾಡೋರಿಗೆಲ್ಲಾ ಉತ್ತರ ಕೊಡೋಕಾಗಲ್ಲ. ಪ್ರಶಾಂತ್ ಸಂಬರಗಿ ಯಾರು? ನಮ್ಮ ಮೆಂಬರ್ ಅಲ್ಲ, ಸದಸ್ಯ ಅಲ್ಲ. ಕನ್ನಡ ಚಿತ್ರ ರಂಗಕ್ಕೂ ಪ್ರಶಾಂತ್ ಸಂಬರಗಿಗೂ ಏನ್ ಸಂಬಂಧ, ಚಿತ್ರರಂಗಕ್ಕೆ ಇವರ ಕೊಡುಗೆ ಏನು? ನಮ್ಮ ಬಗ್ಗೆ ಮಾತಾಡೋಕೆ, ಪ್ರಶ್ನೆ ಮಾಡೋಕೆ ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

    ವಾಣಿಜ್ಯ ಮಂಡಳಿಗೆ ಒಂದು ಘನತೆ, ಗೌರವ ಇದೆ. ಎಲ್ಲೋ ಕುಳಿತುಕೊಂಡು ಮಾತಾಡೋದಲ್ಲ. ಮೊದಲು ಕನ್ನಡ ಬೆಳೆಸಿ, ಕನ್ನಡತನ ಉಳಿಸಿ ಆಮೇಲೆ ಚಿತ್ರರಂಗದ ಬಗ್ಗೆ ಮಾತಾಡಿ. ನಮ್ಮ ಚಿತ್ರರಂಗ ಬೆಳೆಸೋದಕ್ಕೆ, ಉಳಿಸೋದಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ನಿಮ್ಮಿಂದ ನಾವು ಕಲಿಯಬೇಕಿಲ್ಲ, ಚಿತ್ರರಂಗದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ. ಮಂಡಳಿ ರಚನೆ ಆಗಿ 75 ವರ್ಷ ಆಗಿದೆ. ವಾಣಿಜ್ಯ ಮಂಡಳಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಸಾರಾ ಗೋವಿಂದು ಅವರು ಕಿಡಿಕಾರಿದ್ದಾರೆ.

  • ಕನ್ನಡ ಚಿತ್ರರಂಗ ನೆಲ, ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತೆ: ಸಿಎಂ ಪರ ಸಾರಾ ಗೋವಿಂದ್ ಬ್ಯಾಟಿಂಗ್

    ಕನ್ನಡ ಚಿತ್ರರಂಗ ನೆಲ, ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತೆ: ಸಿಎಂ ಪರ ಸಾರಾ ಗೋವಿಂದ್ ಬ್ಯಾಟಿಂಗ್

    ಮಂಡ್ಯ: ಇಡೀ ಚಿತ್ರರಂಗ ಸುಮಲತಾ ಪರ ನಿಂತಿದೆ ಎನ್ನುವುದು ತಪ್ಪು. ಕನ್ನಡ ಚಿತ್ರರಂಗ ಕಾವೇರಿ, ಮಹದಾಯಿ, ನೆಲ ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತದೆ ಎಂದು ನಿರ್ಮಾಪಕ ಸಾರಾ ಗೋವಿಂದು ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಾರಾ ಗೋವಿಂದ್, “ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದಿಂದ ಯುವಕ ಇಂದು ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಬೆಂಬಲಿಸಲು ನಾನು ಇಲ್ಲಿ ಬಂದಿದ್ದೇನೆ. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಅವರ 20 ತಿಂಗಳ ಆಡಳಿತ ಹಾಗೂ ಈಗ ಮುಖ್ಯಮಂತ್ರಿ ಆದ್ಮೇಲೆ 10 ತಿಂಗಳ ಆಡಳಿತ ನೋಡಿದ ಮೇಲೆ ಅವರಿಗೆ ರೈತರ ಮೇಲೆ, ಕಾವೇರಿ ವಿಚಾರದಲ್ಲಿ ಅಥವಾ ಮಹಾದಾಯಿ ವಿಚಾರದಲ್ಲಿ ಅವರಿಗೆ ಇರುವ ಕಾಳಜಿಯನ್ನು ನೋಡಿ ನಾನು ಅವರ ಮಗನನ್ನು ಬೆಂಬಲಿಸಲು ಬಂದಿದ್ದೇನೆ” ಎಂದರು.

    ನಿಖಿಲ್ ಇನ್ನು ಯುವಕ. ಆತನಿಂದ ಆಗಬೇಕಾದ ಹಲವು ಕೆಲಸಗಳು ಆಗಬೇಕಿದೆ. ಆತ ಮಂಡ್ಯ ಜನತೆಗೆ ಮಾಡಬೇಕಾದ ಕೆಲಸ ಬಹಳಷ್ಟು ಇದೆ. ಆ ಎಲ್ಲಾವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರ ಗೆಲುವಿಗೆ ಮಂಡ್ಯ ಜನತೆ ಕೈಜೋಡಿಸಬೇಕೆಂದು ಮಂಡ್ಯ ಜನತೆಗೆ ಚಲನಚಿತ್ರದ ನಿರ್ಮಾಪಕರಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

    ಇಡೀ ಚಿತ್ರರಂಗ ಕಾವೇರಿ, ಮಹದಾಯಿ, ನೆಲ-ಜಲ ವಿಚಾರದಲ್ಲಿ ಒಂದಾಗಿ ನಿಲ್ಲುತ್ತದೆ. ಆದರೆ ರಾಜಕೀಯ ವಿಷಯಕ್ಕೆ ಬಂದಾಗ ಇಡೀ ಚಿತ್ರರಂಗ ಒಂದಾಗಲ್ಲ. ಅವರವರ ವೈಯಕ್ತಿಕ ಇರುತ್ತದೆ. ಇಡೀ ಚಿತ್ರರಂಗ ಯಾವಾಗ ಚುನಾವಣೆಗೆ ಬಂದಿದೆ? ಕೆಲವರು ಒಬ್ಬೊಬ್ಬರ ಪರ ಪ್ರಚಾರ ಮಾಡ್ತಾರೆ. ಇನ್ನು ಕೆಲವರು ತಟಸ್ಥರಾಗಿ ಇರುತ್ತಾರೆ ಎಂದು ಹೇಳಿದರು.

  • ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಫಿಲ್ಮ್ ಚೇಂಬರ್ ಗೆ  ತೆರಳಿ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಆರ್‌ಜೆ ರಶ್ಮಿ

    ಬೆಂಗಳೂರು: ರಾಜರಥ ತಂಡ ಸಂದರ್ಶನದ ವೇಳೆ ಮಾತನಾಡಿದ ಪದಗಳಿಂದ ಕನ್ನಡಿಗರಿಗೆ ಆಗಿರುವ ನೋವಿಗೆ ಆರ್‌ಜೆ ರಶ್ಮಿ ಕನ್ನಡಿಗರ ಕ್ಷಮೆ ಕೇಳಿದ್ದಾರೆ.

    ಚಿತ್ರ ತಂಡ ಬಳಸಿದ ಪದಗಳು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿದೆ. ಪ್ರತಿ ದಿನ ಒಂದೊಂದು ತಿರುವು ಪಡೆದುಕೊಂಡು ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಹಾಗಾಗಿ ಇವತ್ತು ನಾನೆ ಖುದ್ದು ಸಾರಾ ಗೋವಿಂದ್ ಅವರನ್ನು ಹುಡುಕಿ ಕೊಂಡು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಬಂದಿದ್ದೇನೆ. ಭೇಟಿಗೆ ಅವಕಾಶ ಮಾಡಿಕೊಟ್ಟ ಸಾರಾ ಗೋವಿಂದ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    ನಮ್ಮ ಕಾಯಕ್ರಮದಿಂದ ಕನ್ನಡಿಗರಿಗೆ ನೋವಾಗಿದೆ ನಮ್ಮ ಕಡೆಯಿಂದ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮದಲ್ಲಿ ಈ ರೀತಿ ಘಟನೆಗಳಿಗೆ ಅವಕಾಶ ಮಾಡಿಕೊಡವುದಿಲ್ಲ ಎಂದು ಭರವಸೆ ನೀಡಿದ್ದಾರೆ.

    ನನ್ನ ಪ್ರಶ್ನೆಗೆ ಆ ರೀತಿ ಉತ್ತರ ಕೊಟ್ಟರು ಯಾಕೆ ಪ್ರತಿಕ್ರಿಯಿಸಿಲ್ಲ ಅಂತ ನನ್ನನ್ನು ಜನ ಪ್ರಶ್ನೆ ಮಾಡುತ್ತಿದ್ದಾರೆ. ಆ ಕ್ಷಣದಲ್ಲಿ ಹೊಳೆದಿಲ್ಲ ಕ್ಷಮಿಸಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಹೀಗಾದಲ್ಲಿ ತಕ್ಷಣವೇ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

    ಕನ್ನಡಿಗರ ಮನಸ್ಸಿಗೆ ನೊವಾಗುವಂತಹ ವಿಚಾರ ಬಂದಾಗ ಎಚ್ಚರದಿಂದ ಇರುತ್ತೇನೆ. ಇಷ್ಟು ವರ್ಷಗಳ ಕಾಲ ಆರ್‍ಜೆ ಆಗಿದ್ದೇನೆ. ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಡುವಂತಹ ಕಾರ್ಯಕ್ರಮಗಳನ್ನು ಹುಟ್ಟು ಹಾಕಿದ್ದೇನೆ. ಕಳೆದ ಒಂದು ವರ್ಷದಲ್ಲಿ ನಮ್ಮ ಕಾರ್ಯಕ್ರಮಕ್ಕೆ ನಹಳಷ್ಟು ಚಿತ್ರ ತಂಡದವರು ಬಂದಿದ್ದಾರೆ. ಇನ್ನಮುಂದೆ ಕೂಡ ನಿಮ್ಮ ಸಹಕಾರ ಹೀಗೆ ಇರಲಿ. ನಮ್ಮ ಕಾರ್ಯಕ್ರಮದ ಉದ್ದೇಶ ಚಿತ್ರದ ಪ್ರಚಾರಕ್ಕಷ್ಟೇ ಸೀಮಿತ ವಾಗಿರುತ್ತದೆ ಎಂದು ಮತ್ತೊಮ್ಮೆ ಹೇಳಿ ಕನ್ನಡಿಗರಲ್ಲಿ ರಶ್ಮಿ ಅವರು ಕ್ಷಮಾಪಣೆ ಕೇಳಿದ್ದಾರೆ. ಇದನ್ನೂ ಓದಿ: ರಾಜರಥ ಸಿನಿಮಾ ತಂಡದ ವಿರುದ್ಧ ಮತ್ತೊಂದು ದೂರು ದಾಖಲು

    ಸಾರಾ ಗೋವಿಂದ್ ಮಾತನಾಡಿ ಒಂದು ಹೆಣ್ಣು ಮಗಳು ಖುದ್ದು ಬಂದು ಮೊದಲ ಬಾರಿ ಆಗಿರುವ ತಪ್ಪಿಗೆ ಕ್ಷಮಾಪಣೆ ಕೇಳುತ್ತಿದ್ದಾರೆ. ಕನ್ನಡಿಗರು ಔದಾರ್ಯದಿಂದ ಕ್ಷಮಿಸಬೇಕೆಂದು ತಿಳಿಸಿದರು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ