– ಕ್ಷಮೇ ಕೇಳಿಸುವ ಪ್ರಯತ್ನ ಮಾಡ್ತೀವಿ ಎಂದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು
ಬೆಂಗಳೂರು: ನಟ ಕಮಲ್ ಹಾಸನ್ (Kamal Haasan) ಕೊಟ್ಟ ಉದ್ಧಟತನದ ಹೇಳಿಕೆ ಇಡೀ ರಾಜ್ಯದ ಜನರ ಆಕ್ರೋಶ ಕಟ್ಟೆಯೊಡೆಯುವಂತೆ ಮಾಡಿದೆ. ರಾಜ್ಯದಲ್ಲಿ ಕಮಲ್ ಸಿನಿಮಾಗಳನ್ನ ಬ್ಯಾನ್ ಮಾಡುವಂತೆ ಕನ್ನಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಈ ನಡುವೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber) ಸಭೆ ನಡೆಸಿದ್ದು, ಕ್ಷಮೆ ಕೇಳಿಸುವ ಪ್ರಯತ್ನ ಮಾಡುವುದಾಗಿ ಹೇಳಿದೆ.
ಸಭೆಯಲ್ಲಿ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ಕಮಲ್ ಹಾಸನ್ ಬಗ್ಗೆ ನಮಗೆ ಯಾರಿಗೂ ಕನಿಕರ ಇಲ್ಲ. ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೆ ಖಂಡನೆ ಮಾಡ್ತೀವಿ. ಕಮಲ್ ಹಾಸನ್ ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಅಂತ ಎಚ್ಚೆರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್
ಇನ್ನೂ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಕನ್ನಡ ರಕ್ಷಣಾ ವೇದಿಕೆಯವರು, ಹಲವಾರು ಸಂಘ ಸಂಸ್ಥೆಗಳು ಖಂಡಿಸಿದ್ದಾರೆ. ಸಿನಿಮಾ ಬ್ಯಾನ್ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳ್ಬೇಕು ಅಂತಾ ಒತ್ತಾಯಿಸಿದ್ದಾರೆ. ಕಮಲ್ ಹಾಸನ್ ಮಾಡಿರುವ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡ್ತೀವಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಕಮಲ್ ಹಾಸನ್ ಚಿತ್ರಗಳನ್ನ ನಿರ್ಬಂಧಿಸಿ: ಶಿವರಾಜ್ ತಂಗಡಗಿ ಪತ್ರ
ಫಿಲ್ಮ್ ಚೇಂಬರ್ ಮುತ್ತಿಗೆಗೆ ಯತ್ನ:
ಕಮಲ್ ಹಾಸನ್ ಚಲನಚಿತ್ರಗಳನ್ನ ಬ್ಯಾನ್‌ಗೆ ಒತ್ತಾಯ ಹೆಚ್ಚಾದಂತೆ ಕರ್ನಾಟಕ ಸಿನಿಮಾ ವಿತರಕ ಕಮಲಾಕರ್ ಅವರ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ ಭಾಗಿ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು. ಸಭೆ ನಡೆಯುತ್ತಿದ್ದಾಗಲೇ ಕೆಲ ಕನ್ನಡಪರ ಹೋರಾಟಗಾರರು ಮುತ್ತಿಗೆಗೆ ಉತ್ನಿಸಿದ ಘಟನೆಯೂ ನಡೆಯಿತು. ಇದನ್ನೂ ಓದಿ: ಕಮಲ್ ಹಾಸನ್ `ಕನ್ನಡ’ ವಿವಾದ – ಸಾಕು ಸರ್ ಎಂದ ನ್ಯಾಚುರಲ್ ಸ್ಟಾರ್
ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಯ್ತು ಎಂದ ಸೋನು ನಿಗಮ್ (Sonu Nigam) ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಸೋನು ನಿಗಮ್ ಆಡಿರುವ ಮಾತಿಗೆ ಕನ್ನಡಪರ ಹೋರಾಟಗಾರ ಸಾರಾ ಗೋವಿಂದು (Sa Ra Govindu) ಕಿಡಿಕಾರಿದ್ದಾರೆ. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಾರಾ ಗೋವಿಂದು, ಸೋನು ನಿಗಮ್ ಅದ್ಭುತ ಗಾಯಕ ಅದರಲ್ಲಿ ಎರಡು ಮಾತಿಲ್ಲ. ಅಷ್ಟೇ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡ ಸಾಂಗ್ ಹಾಡಿ ಎಂದು ಹೇಳಿದ್ದೆ ತಪ್ಪಾ? ಎಂದು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಗೆ ಯಾಕೆ ಹೋಲಿಸಿದ್ರಿ ಅನ್ನೋದು ಅರ್ಥವಾಗಲಿಲ್ಲ. ಕನ್ನಡಿಗರೇನು ಭಯೋತ್ಪಾದಕರಾ? ಇಂತಹ ಉದ್ಧಟತನದ ಮಾತುಗಳನ್ನು ಆಡೋದು ಬೇಡ. ನೀವು ಕೂಡಲೇ ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳಲ್ಲಿ ಅಂದರೆ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮ ಮಾಡೋಕೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್ ಆರ್ಯನ್, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್
ಒಬ್ಬ ಜವಾಬ್ದಾರಿಯುತ ವ್ಯಕ್ತಿ ಹೀಗೆ ಮಾತನಾಡಿದಾಗ ಚಲನಚಿತ್ರ ವಾಣಿಜ್ಯ ಮಂಡಳಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸೋನು ನಿಗಮ್‌ಗೆ ಯಾವುದೇ ಕನ್ನಡ ಸಿನಿಮಾಗಳಲ್ಲಿ ಹಾಡಲು ಅವಕಾಶ ನೀಡಬಾರದು. ಮೊದಲು ಅವರು ಕ್ಷಮೆಯಾಚಿಸಬೇಕು ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇವೆ. ಅವರ ಕ್ಷಮೆಗಾಗಿ ಕಾದುನೋಡುತ್ತೇವೆ. ಇಲ್ಲಾಂದ್ರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗಾಯಕನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ನಿನ್ನೆ (ಮೇ.1) ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದನು. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡರು.
ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನೀವೆಲ್ಲ ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.
ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವರನಟ ರಾಜ್‌ಕುಮಾರ್ (Rajkumar) ಅವರನ್ನು ವೀರಪ್ಪನ್ (Veerappan) ಅಪಹರಣ ಮಾಡಿ ಬರೋಬ್ಬರಿ 108 ದಿನಗಳ ಕಾಲ ಕಾಡಿನಲ್ಲಿಟ್ಟಿದ್ದನು. ಅಣ್ಣಾವ್ರರನ್ನು ಹೊರ ತರುವುದಕ್ಕೆ ಎಸ್.ಎಂ. ಕೃಷ್ಣ ದೊಡ್ಡ ಮಟ್ಟದ ಪ್ರಯತ್ನವನ್ನೇ ಮಾಡಿದರು. ಇದೀಗ ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಳೆಯ ದಿನಗಳನ್ನು ಸ್ಮರಿಸಿದ್ದಾರೆ. ರಾಜ್‌ಕುಮಾರ್ ಜೀವಂತವಾಗಿ ಮನೆಗೆ ಬರಲು ಎಸ್.ಎಂ. ಕೃಷ್ಣ ಕಾರಣ ಎಂದಿದ್ದಾರೆ.
ಸಾರಾ ಗೋವಿಂದು ಮಾತನಾಡಿ, ಒಂದು ತಿಂಗಳ ಹಿಂದೆ ಎಸ್.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದೆ, ಒಂದು ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಆಗ ಅವರ ಸ್ಥಿತಿ ನೋಡಿ ಬೇಸರವಾಯಿತು. ನಾನು ಆ ದೇವರಲ್ಲಿ ಕೇಳಿಕೊಂಡಿದ್ದೆ, ದೇವರೆ ಅವರಿಗೆ ಹಿಂಸೆ ಕೊಡಬೇಡ ಆದಷ್ಟು ಬೇಗ ಕರೆದುಕೊಂಡು ಬಿಡು ಎಂದು ಕೋರಿಕೊಂಡಿದ್ದೆ ಎಂದರು. ಇಂತಹ ರಾಜಕಾರಣಿ ಸಿಗೋದು ಅಪರೂಪ. ಅವರು ತುಂಬಾ ಶಿಸ್ತು ಅನ್ನು ಪಾಲಿಸುತ್ತಿದ್ದರು. ಅದರಿಂದಲೇ ಕೇಂದ್ರದಲ್ಲಿ ವಿದೇಶಾಂಗ ಸಚಿವರಾದರು.
ಡಾ.ರಾಜ್‌ಕುಮಾರ್‌ರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ಪಟ್ಟಂತಹ ಕಷ್ಟ ತುಂಬಾ ಹತ್ತಿರದಿಂದ ನೋಡಿದ್ದೇನೆ. ಆ ಸಂದರ್ಭದಲ್ಲಿ ಎಲ್ಲರೂ ಶಾಂತಿಯಿಂದ ಇದ್ರೆ ಅಣ್ಣಾವ್ರು ವಾಪಸ್ ಬರುತ್ತಾರೆ ಎಂದು ಪಾರ್ವತಮ್ಮ ಹೇಳಿದ್ದರು. ಎಸ್.ಎಂ. ಕೃಷ್ಣ ಅವರು ಅಂದು ಸಿಎಂ ಆಗಿದ್ದಕ್ಕೆನೇ ರಾಜ್‌ಕುಮಾರ್ ಅವರು ಜೀವಂತ ಮನೆಗೆ ಬಂದರು. ರಾಜ್‌ಕುಮಾರ್‌ಗೆ ಮರುಜೀವ ತಂದು ಕೊಟ್ಟಿದ್ದು ಎಸ್.ಎಂ. ಕೃಷ್ಣ ಎಂದು ಸ್ಮರಿಸಿದರು.
ಇಂತಹ ವ್ಯಕ್ತಿಯನ್ನು ರಾಜಕಾರಣದಲ್ಲಿ ಮತ್ತೆ ನೋಡೋಕೆ ಆಗಲ್ಲ. ಅಂದು ಅಪಹರಣದಿಂದ ಮುಕ್ತರಾದ್ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಣ್ಣಾವ್ರಿಗೆ ಅಭಿನಂದನಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವು. ಆ ಸಂದರ್ಭದಲ್ಲಿ ಎಸ್.ಎಂ ಕೃಷ್ಣಗೆ ಆಹ್ವಾನ ನೀಡಿದ್ದೇವು. ಅಂದು ಅವರ ಮನಸ್ಸಿಗೆ ಏನೋ ಬೇಸರ ಆಗಿತ್ತು ಅಂತ ಕಾಣುತ್ತೆ ಅವರು ಬರಲ್ಲ ಅಂದ್ರು. ನೀವು ಬರಲಿಲ್ಲ ಅಂದರೆ ಕಾರ್ಯಕ್ರಮ ರದ್ದು ಮಾಡುತ್ತೇವೆ ಎಂದು ಹೇಳಿದಾಗ ನಮ್ಮ ಮಾತಿಗೆ ಸ್ಪಂದಿಸಿ ಬಂದರು. ಅಪಹರಣದ ಸಂದರ್ಭದಲ್ಲಿ ಅಣ್ಣಾವ್ರ ಮಕ್ಕಳು ಮತ್ತು ನಾವೆಲ್ಲರೂ ಎಸ್.ಎಂ. ಕೃಷ್ಣರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವು. ಅಣ್ಣಾವ್ರರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಹೊಣೆ ನಮ್ಮದು ಎಂದರು. ಅವರು ಆಡಿದ ಮಾತಿನಂತೆ ಅಣ್ಣಾವ್ರರನ್ನು ಕರೆದುಕೊಂಡು ಬಂದರು. ಎಸ್.ಎಂ. ಕೃಷ್ಣ ಅವರು ಸರಳ ವ್ಯಕ್ತಿ, ಇಂದು ಅವರು ನಮ್ಮೊಂದಿಗೆ ಇಲ್ಲದೆ ಇರೋದು ಬೇಸರವಿದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಾರಾ ಗೋವಿಂದು ಮಾತನಾಡಿದರು.
ಇನ್ನೂ ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣ (92) ಅವರು ಮಂಗಳವಾರ ಬೆಳಗ್ಗೆ 3:30ಕ್ಕೆ ವಿಧಿವಶರಾಗಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಕೊಡುಗೆ ಏನಿದೆ ಎಂಬ ಸಾರಾ ಗೋವಿಂದು ಹೇಳಿಕೆಗೆ ಇಂದು ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.
2000 ಇಸವಿಯಲ್ಲಿ ಡಿಗ್ರಿ ಮುಗಿಸಿಕೊಂಡು ಹೀರೋ ಆಗಬೇಕೆಂಬ ಕನಸು ಇಟ್ಟುಕೊಂಡು ಬಂದಿದ್ದೆ. ಆಗ ನನಗೆ ಪರಿಚಯ ಆಗಿದ್ದು ಸುದೀಪ್. ಅವರ ಹಾದಿಯಲ್ಲಿ ಫಿಲಂ ಇಂಡಸ್ಟ್ರಿ ಬಗ್ಗೆ ತುಂಬಾ ಕಲಿತಿದ್ದೇನೆ. ಆದರೆ ಕಾರಣಾಂತರಗಳಿಂದ ಯಾವುದೇ ಚಾನ್ಸ್ ಸಿಕ್ಕಿಲ್ಲ. ಆದರೆ ಹೇಗಾದ್ರೂ ಮಾಡಿ ಚಿತ್ರಂಗದ ಜೊತೆಗೆ ಸಂಪರ್ಕ ಇರಬೇಕು ಅಂತ ಹೇಳಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಕಂಪನಿಯನ್ನು 2002ರಲ್ಲಿ ಹುಟ್ಟುಹಾಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನನಗೆ ರಿಲಾಯನ್ಸ್ ಇನ್ಫೋ ಕಾಂ.ಗೆ ಬೇಕಾಗಿರುವಂತಹ ಬ್ರಾಂಡ್ ಅಂಬಾಸಿಡರ್ ಎಂಬ ಮೊದಲ ಕಾರ್ಯಕ್ರಮ ಬಂತು. ಆಗಿನ ಕಾಲಕ್ಕೆ ನನಗೆ ಹೀರೋ ಆಗಿದ್ದವರು ಸುದೀಪ್. ಹೀಗಾಗಿ ಅವರನ್ನೇ ನಾನು ಅಂಬಾಸಿಡರ್ ಮಾಡಿ ಒಂದು ಪ್ರೀಫೈಡ್ ಫೋನ್ ಗೆ ಇಡೀ ವಿಶ್ವದಲ್ಲೇ ಮಾಡದೇ ಇರುವಂತಹ ಸಾಹಸವೊಂದನ್ನು ಮಾಡಿದೆವು ಎಂದರು.
2006ರಲ್ಲಿ ಬೆಂಗಳೂರಿಗೆ ಎಫ್‍ಎಂ ಚಾನೆಲ್ ಬಂದಾಗ ಅನ್ನು ಜನರಿಗೆ ಹೇಗೆ ತಲುಪಿಸುವುದು ಅಂತ ಕೇಳಿದಾಗ ಐಡಿಯಾ ಕೊಟ್ಟಿದ್ದೆ. ಇದಕ್ಕೆ ಉಪೇಂದ್ರ ಅವರನ್ನು ಬ್ರಾಂಡ್ ಆಗಿ ಮಾಡಿದೆವು. ಬಿಗ್ ಎಫ್‍ಎಂ ನಲ್ಲಿ ಉಪೇಂದ್ರ ಅವರು ಒಂದು ಇಮೇಜ್ ಆಗಿ ಕಾಣಿಸಿಕೊಂಡರು. ಹೀಗೆ ಅನೇಕ ಬ್ರಾಂಡ್ ಗಳನ್ನು ಕರ್ನಾಟಕ್ಕೆ ಪರಿಚಯ ಮಾಡಿದ್ದೇನೆ ಎಂದು ಹೇಳಿದರು.
2006ರಲ್ಲಿ ಐಶ್ವರ್ಯಾ ಸಿನಿಮಾವನ್ನು ಆತ್ಮೀಯ ಗೆಳೆಯ ಇಂದ್ರಜಿತ್ ಲಂಕೇಶ್ ಮಾಡಿದರು. ಈ ಚಿತ್ರದಲ್ಲಿ ಪಾಲುದಾರಿಕೆ ಹಾಕಿದೆ. 2004ರಲ್ಲಿ ರಿಲಾಯನ್ಸ್ ಸಂಸ್ಥೆಗಳಿಗೆ ರಿಂಗ್ ಟೋನ್ ಮ್ಯೂಸಿಕ್ ಕೊಡುವ ಮೂಲಕ ರೆವೆನ್ಯೂ ಶೇರಿಂಗ್ ಅನ್ನು ಕಂಡುಹಿಡಿದಿದ್ದೇ ನಾನೇ. ಅಂದು ನಿರ್ಮಾಪಕರು, ನಿರ್ದೇಶಕರು ನನ್ನ ಕಚೇರಿಗೆ ಓಡೋಡಿ ಬರುತ್ತಿದ್ದು, ಇಂದು ಪ್ರಶಾಂತ್ ಕೊಡುಗೆ ಏನು ಅಂತ ಕೇಳುತ್ತಿದ್ದಾರೆ ಅಂತ ಗರಂ ಆದರು.
2010ರಲ್ಲಿ ಎಫ್‍ಎಂ ಚಾನೆಲ್ ನಲ್ಲಿ ಒಂದು ತಿಂಗಳು ‘ಉಪ್ಪಿ ಲಾಜಿ’ ಎಂಬ ಕಾರ್ಯಕ್ರಮ ಮಾಡಿದ್ದೆ. ಇದರಲ್ಲಿ ಜನಸಾಮಾನ್ಯರ ಪ್ರಶ್ನೆಗಳಿಗೆ ಉಪೇಂದ್ರ ಅವರು ಉತ್ತರ ಕೊಡುತ್ತಿದ್ದರು. ಹೀಗೆ ಅನೇಕ ಸಾಹಸಗಳನ್ನು ಮಾಡಿಕೊಂಡು ಬರುತ್ತಿರಬೇಕಾದರೆ ಚಿತ್ರರಂಗದ ಡಿಸ್ಟ್ರಿಬ್ಯೂಟರ್ಸ್ ಗಳು, ಸಣ್ಣ ಪುಟ್ಟ ತೆಲುಗು ಸಿನಿಮಾಗಳನ್ನು ಕನ್ನಡದಲ್ಲಿ ರಿಲೀಸ್ ಮಾಡಿಕೊಂಡು ಬಂದೆ. ಆದರೆ ಇಲ್ಲಿಯವರೆಗೂ ಫಿಲಂ ಚೇಂಬರ್ ನಲ್ಲಿ ಯಾವುದೇ ಸದಸ್ಯತ್ವ ಹೊಂದರಲಿಲ್ಲ. ಸದಸ್ಯತ್ವ ಪಡೆದುಕೊಳ್ಳುವುದೂ ಇಲ್ಲ ಎಂದು ತಿಳಿಸಿದರು.
ಕರ್ನಾಟಕದ ಹಲವು ಚಿತ್ರಗಳನ್ನು ನಾನು ಡಿಸ್ಟ್ರಿಬ್ಯೂಟ್ ಮಾಡಿದ್ದೇನೆ. ಬಾಹುಬಲಿ ಚಿತ್ರವನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡ್ತೀನಿ ಅಂತ ಸಾರಾ ಗೋವಿಂದ್ ಹೇಳಿದ್ರು. ಅವರು ಬಾಹುಬಲಿ ಮಾಡಿದ್ರೆ ನೀವು ಕೂಡ ಬಾಹುಬಲಿ ಮಾದರಿ ಸಿನಿಮಾ ಮಾಡಿ ಎಂದಿದ್ದೆ. ಅಲ್ಲಿಂದ ನನಗೂ ಸಾ ರಾ ಗೋವಿಂದುಗೂ ಮುನಿಸು ಎದ್ದಿದ್ದು, ಹೀಗಾಗಿ ನನ್ನ ಕಂಡ್ರೆ ಅವರಿಗೆ ಆಗಲ್ಲ ಅಂದರು.
ಯಾವುದೇ ಚಿತ್ರ 24 ಸ್ಕ್ರೀನ್ ಗಳಿಗಿಂತ ಹೆಚ್ಚು ರಿಲೀಸ್ ಆಗಬಾರದು ಎಂಬ ರೂಲ್ ಇತ್ತು. ಆದರೂ ನಾವು 50 ಸ್ಕ್ರೀನ್ ಗಳಲ್ಲಿ ಬಿಡುಗಡೆ ಮಾಡಿದ್ವಿ. ಬಿಗ್ ಎಫ್‍ಎಂ ನಲ್ಲಿ ಆರ್ ಜೆ ರೋಹಿತ್ ಅವರಿಗೆ ಕಾಲ್ ಮಾಡಿ ಒಂದು ಹುಡುಗಿ ಪ್ರಶ್ನೆ ಮಾಡುತ್ತಾಳೆ. ಆಗ ಆಕೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡುತ್ತಾಳೆ. ಇದಕ್ಕೆ ರೋಹಿತ್ ಕೂಡ ನೀವು ಸಹಿಸಿಕೊಂಡು ಹೋಗಬೇಕು ಎಂದು ಉತ್ತರಿಸುತ್ತಾರೆ. ಆಗ ಇನ್ನೊಂದು ಎಫ್‍ಎಂ ಚಾನೆಲ್ ಫಿಲಂ ಚೇಂಬರ್ ಗೆ ಅದರ ರೆಕಾರ್ಡಿಂಗ್ ಕಳಿಸುತ್ತಾರೆ. ಬಿಗ್ ಎಫ್‍ಎಂಗೆ ಹಾಡು, ಇಂಟರ್ವ್ಯೂ ಕೊಡಬಾರದು ಎಂದು ಹೇಳ್ತಾರೆ. ಆಗ 10 ಲಕ್ಷ ಹಣವನ್ನು ನಮ್ಮ ಬಳಿ ಡಿಮ್ಯಾಂಡ್ ಮಾಡುತ್ತಾರೆ. ಈ ವೇಳೆ ಆರ್ಜೆ ರೋಹಿತ್ ನನ್ನ ತೆಗೆದು ಹಾಕಿದ್ವಿ. ಇದರ ಬಗ್ಗೆ ಕ್ಷಮೆಯಾಚನೆ ಮಾಡಿದ್ವಿ. ಇದರ ಇತ್ಯರ್ಥಕ್ಕೆ ರಾಕ್ ಲೈನ್ ವೆಂಕಟೇಶ್ ಸಹಕಾರಿಯಾದ್ರು ಎಂಂದರು.
ಬಾಹುಬಲಿ ಯಲ್ಲಿ ಸತ್ಯರಾಜ್ ಇದ್ದರು ಅದಕ್ಕಾಗಿ ಇಂಟರ್ ನ್ಯಾಷನಲ್ ಸಿನಿಮಾ ತಡೆಯಲು ಸಾರಾ ಗೋವಿಂದು ಕರೆ ನೀಡಿದ್ದರು. ನಾನು ರೋಲ್ ಕಾಲ್ ಮಾಡಿದ್ದೀನಿ ಎಂದು ಉಪ್ಪಾರಪೇಟೆಯಲ್ಲಿ ಎನ್ಸಿಆರ್ ಮಾಡಿದ್ದರು. ಫಿಲಂ ಚೇಂಬರ್ ಅಂದ್ರೆ ಬರೀ ಕನ್ನಡ ಒಂದೇ ಒಂದು ಮಾಡಿಕೊಂಡು ಇರ್ತಾರಾ? ಫಿಲಂ ಚೇಂಬರಲ್ಲಿ ಮೆಂಬರ್ಸ್ ಎಷ್ಟು? ಎಲೆಕ್ಷನ್ ಪ್ರೋಸೆಸ್ ಏನು? ಡೆಪಾಸಿಟ್ ಹಣ ಏನ್ಮಾಡಿದ್ದಾರೆ? ಎಸಿಬಿಯಲ್ಲಿ ಫುಡ್ ಕಿಟ್ ಹಗರಣ ಬಗ್ಗೆ ದೂರು ನೀಡಲಾಗಿತ್ತು. ಸಾರಾ ಗೋವಿಂದ್ ಅವರಿಗೆ ರೋಲ್ ಕಾಲ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಾಹುಬಲಿ 2ಗೆ ಕ್ಯಾತೆ ತೆಗೆದಿದ್ದರು ಎಂದು ಸಾರಾ ಗೋವಿಂದ್ ವಿರುದ್ಧ ಪ್ರಶಾಂತ್ ಸಂಬರಗಿ ಆರೋಪ ಮಾಡಿದರು.
ಬೆಂಗಳೂರು: ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದು ಪುತ್ರನಿಂದ ಗೂಂಡಾಗಿರಿ ನಡೆದಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹೌದು. ಸಾರಾ ಗೋವಿಂದು ಅವರ ಪುತ್ರ ಅನೂಪ್ ವಿರುದ್ಧ ಈ ಆರೋಪ ಕೇಳಿಬಂದಿದೆ. ಅನೂಪ್ ಸಾರಾ ಗೋವಿಂದು ಮನೆಯ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಂಬಳ ನೀಡದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದ್ದಕ್ಕೆ ಈ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹರೀಶ್‍ರನ್ನು ಬಸವೇಶ್ವರನಗರಕ್ಕೆ ಕರೆಸಿಕೊಂಡು ಫರಿಸ್ತಾ ಕೆಫೆ ಮುಂಭಾಗದಲ್ಲಿ ಅನೂಪ್ ಸೇರಿ ಜೊತೆಯಿದ್ದ ಫ್ರಭಾಕರ್ ಮತ್ತು ಸತ್ಯ ಎಂಬವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹೊರಗಡೆ ಈ ವಿಚಾರ ಗೊತ್ತಾದ್ರೆ ಕೊಲೆ ಮಾಡೋದಾಗಿ ಕೂಡ ಗ್ಯಾಂಗ್ ಬೆದರಿಕೆ ಹಾಕಿದೆ ಅಂತ ಹಲ್ಲೆಗೊಳಗಾದ ಹರೀಶ್ ಹೇಳಿದ್ದಾರೆ.
ಘಟನೆಯಿಂದ ಕಿವಿ ಕೇಳದ ಸ್ಥಿತಿಯಲ್ಲಿದ್ದ ಹರೀಶ್ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೂಪ್ ಡವ್, ಮಿಸ್ಟರ್ ಫರ್ಫೆಕ್ಟ್, ಸಾಗುವ ದಾರಿಯಲ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಘಟನೆ ಸಂಬಂಧ ಅನೂಪ್ ಅಂಡ್ ಗ್ಯಾಂಗ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಬೆಂಗಳೂರು: ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎನ್ನುವುದು ಇದೆ. ಅದನ್ನು ಬಿಟ್ಟು ಪ್ರಶ್ನೆ ಮಾಡಲು ನಟ ಚೇತನ್ ಯಾರು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಪ್ರಶ್ನೆ ಮಾಡಿದ್ದಾರೆ.
ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಕೇಳಿ ಬಂದಿರುವ ಮೀಟೂ ಆರೋಪದ ಕುರಿತು ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಯಿತು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಾ ಗೋವಿಂದು ಅವರು, ಚಿತ್ರರಂಗದಲ್ಲಿ ಶೂಟಿಂಗ್ ಮುನ್ನ ರಿಹರ್ಸಲ್ ಮಾಡುವುದು ನಿನ್ನೆ ಮೊನ್ನೆಯಾದಲ್ಲ. ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಡಾ. ರಾಜ್ ಕುಮಾರ್ ಅವರೂ ಕೂಡ ಹದಿಮೂರು ಟೇಕ್ ಮಾಡಿರುವ ಉದಾಹರಣೆ ಇದೆ. ಅದಕ್ಕೂ ಮುನ್ನ ರಿಹರ್ಸಲ್ ಮಾಡಿರುವ ಉದಾಹರಣೆಗಳು ಸಾಕಷ್ಟಿದೆ. ಇದೆಲ್ಲವೂ ಸಿನಿಮಾಗಾಗಿ ಅಷ್ಟೇ. ಆದರೆ ನಟಿ ಶೃತಿ ಹರಿಹರನ್ ಅವರಿಗೆ ಯಾವುದೇ ಅನ್ಯಾಯವಾಗಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಅದಕ್ಕೆ ಒಂದು ರೀತಿ ನೀತಿ ಎಂಬುವುದು ಇದೆ. ಅದನ್ನು ಹಗುರವಾಗಿ ಮಾತನಾಡುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಗರಂ ಆದರು.
70 ವರ್ಷ ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗದಲ್ಲಿ ಹಲವು ನಟಿಯರು ಉದ್ಯಮವನ್ನು ಬೆಳೆಸಿದ್ದಾರೆ. ಹಾಗಾದರೆ ಅವರಿಗೆಲ್ಲ ನಾವು ಅವಮಾನ ಮಾಡಿದಂತೆ. ಅದ್ದರಿಂದ ಚೇತನ್ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಅವರ ಹೇಳಿಕೆಯನ್ನು ಬಹಿರಂಗವಾಗಿ ವಾಪಸ್ ತೆಗೆದುಕೊಳ್ಳಬೇಕು. ಸಮಾನತೆ ಎಂದರೆ ಏನು ಎನ್ನುದನ್ನು ನಾವು ಡಾ. ರಾಜ್ ಕುಮಾರ್ ಅವರಿಂದ ಕಲಿತು ಬಂದಿದ್ದೇವೆ. ಯಾರು ಸಮಸ್ಯೆ ಎದುರಿಸಿದರೂ ನಾವು ಪರಿಹಾರ ನೀಡುತ್ತೇವೆ. ನಾವು ಕೂಡ ಹೆಣ್ಣು ಮಕ್ಕಳ ಜೊತೆ ಬೆಳೆದಿದ್ದೇವೆ. ಮೂವತ್ತು ವರ್ಷ ನಾವು ರಾಜ್ ಕುಮಾರ್ ಅವರ ಜೊತೆ ಇದ್ದೇವೆ ಎಂದರು. ಇದನ್ನು ಓದಿ: ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ
ಯಾವುದೇ ನಟಿಯಾದರು ನನ್ನನ್ನು ರೆಸಾರ್ಟ್, ಡಿನ್ನರ್ ಗೆ ಕರೆದಿದ್ದಾರೆ ಎಂದು ಹೇಳುವಾಗ ದಾಖಲೆ ಇರಬೇಕು ಅಥವಾ ಆ ಕೂಡಲೇ ಸಿನಿಮಾದಿಂದ ಹೊರ ಬರಬೇಕಾಗಿತ್ತು. ಆಗ ನೀವು ಒಬ್ಬ ಉತ್ತಮ ನಟಿ ಎಂದು ಯಾರು ಕೂಡ ಪ್ರಶ್ನೆ ಮಾಡುವಂತಹ ಸಂದರ್ಭವೇ ಬರುತ್ತಿರಲಿಲ್ಲ. ಅರ್ಜುನ್ ಸರ್ಜಾ ಅವರನ್ನು ಚಿಕ್ಕಂದಿನಿಂದ ನಾವು ನೋಡಿದ್ದೇವೆ. ಸಾಕಷ್ಟು ನಟಿಯರ ಜೊತೆ ಕೆಲಸ ಮಾಡಿದ್ದಾರೆ. ಅಲ್ಲದೇ ತಮಿಳು, ತೆಲುಗು ರಂಗದಲ್ಲಿ 150 ಕ್ಕೂ ಸಿನಿಮಾ ಮಾಡುವ ಅವಕಾಶ ಕನ್ನಡಿಗನಿಗೆ ಸುಮ್ಮನೆ ಬರಲ್ಲ. ಶೃತಿ ಅವರ ಆರೋಪಕ್ಕೆ ಒಂದು ಸಮಿತಿ ನೇಮಿಸಿ ಸಮಸ್ಯೆ ಬರೆಹರಿಸುವ ಕಾರ್ಯ ಮಾಡುತ್ತೇವೆ. ಆದರೆ ಅವರು ಕೋರ್ಟ್ ಗೆ ಹೋಗುವುದಾಗಿ ತಿಳಿಸಿದ್ದಾರೆ. ಒಂದೊಮ್ಮೆ ಕೋರ್ಟ್ ಹೋಗುವ ನಿರ್ಧರವಿದ್ದರೆ ಸುಮ್ಮನೆ ಮಾಧ್ಯಮಗಳನ್ನು ಕರೆದು ಸುದ್ದಿಗೋಷ್ಠಿ ನಡೆಸುವ ಅವಕಶ್ಯಕತೆ ಏನಿದೆ ಎಂದು ಪ್ರಶ್ನೆ ಮಾಡಿದರು. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?
ಈ ಹಿಂದೆಯೂ ಸಿನಿಮಾ ಕುರಿತು ಸಮಸ್ಯೆಗಳನ್ನು ನಮ್ಮಲ್ಲಿ ಚರ್ಚೆ ನಡೆಸಿ ಪರಿಹಾರ ನೀಡಿದ್ದೇವೆ. ಈ ಸಮಸ್ಯೆಯೂ ಕೂಡ ಚರ್ಚೆ ನಡೆಸಿ ಬರೆಹರಿಸುತ್ತೇವೆ. ಸಮಸ್ಯೆಯನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಬೇಡ. ಯಾರು ಸಮಸ್ಯೆ ಎದರುಸಿದ್ದರೂ ನೇರ ಇಲ್ಲಿಗೆ ಬನ್ನಿ. ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಆದರೆ ಕೋರ್ಟ್ ನಲ್ಲಿ ದೂರು ದಾಖಲಿಸುವುದಾದರೆ ನಮಗೆ ತೊಂದರೆ ಇಲ್ಲ. ಆದರೆ ಸದ್ಯ ಅರ್ಜುನ್ ಸರ್ಜಾ ಅವರಿಂದ ದೂರು ಬಂದಿರುವುರಿಂದ ಇಲ್ಲಿ ಚರ್ಚೆ ನಡೆಸಿದ್ದೇವೆ ಎಂದರು. ಇದನ್ನು ಓದಿ: ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್
ಬೆಂಗಳೂರು: ಕಾಲಾ ಸಿನಿಮಾ ಬಿಡುಗಡೆ ಪೊಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ, ಆದರೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾರಾ ಗೋವಿಂದು ಹೇಳಿದ್ದಾರೆ.
ನಟ ರಜನಿಕಾಂತ್ ಅಭಿನಯದ ಕಾಲಾ ಸಿನಿಮಾ ಬಿಡುಗಡೆಗೆ ಕೋರ್ಟ್ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ನೀಡಿದ ಬಳಿಕ ಕರವೇ ಪ್ರವೀಣ್ ಶೆಟ್ಟಿ ಸೇರಿದಂತೆ ಕನ್ನಡಪರ ಹೋರಾಟಗಾರರು ಸಾ.ರಾ ಗೋವಿಂದ್ ಅವರ ನೇತೃತ್ವದಲ್ಲಿ ಸಿಎಂ ಕುಮಾರಸ್ವಾಮಿ ಕೃಷ್ಣ ಗೃಹ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಸಿಎಂ ಭೇಟಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಾರಾ ಗೋವಿಂದ್, ಸಿನಿಮಾ ಬಿಡುಗಡೆಗೆ ರಕ್ಷಣೆ ಕೊಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಕನ್ನಡ ಪರ ಸಂಘಟನೆಗಳಿಗೆ ಪ್ರತಿಭಟನೆ ಮಾಡಬೇಡಿ ಎಂದು ಎಲ್ಲೂ ಹೇಳಿಲ್ಲ. ಪ್ರತಿಭಟನೆ ಮಾಡೋದು ನಮ್ಮ ಹಕ್ಕು. ಪೊಲೀಸರು ಯಾವುದೇ ಪ್ರಕರಣ ದಾಖಲಿಸಿದರೂ ಭಯವಿಲ್ಲ. ಈ ವಿಚಾರದಲ್ಲಿ ಜೈಲಿಗೂ ಹೋಗಲು ಸಿದ್ಧ. ಕಾಲಾ ಸಿನಿಮಾ ಬಿಡುಗಡೆಯನ್ನು ತಡೆದು ನಿಲ್ಲಿಸುತ್ತೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ನಟ ರಜಿನಿಕಾಂತ್ ಅವರು ನೀಡಿರುವ ಹೇಳಿಕೆಗಳು ಸರಿಯಿಲ್ಲ. ಅದ್ದರಿಂದ ಕಾಲಾ ಸಿನಿಮಾ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಸಾರಾ ಗೋವಿಂದು ಅವರು ಮನವಿ ಮಾಡಿದ್ದಾರೆ.