Tag: ಸಾರಾಯಿ

  • ಕಳ್ಳ ಬಟ್ಟಿ ದುರಂತ – 13 ಬಲಿ, 30 ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಕಳ್ಳ ಬಟ್ಟಿ ದುರಂತ – 13 ಬಲಿ, 30 ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಚೆನ್ನೈ: ಕಳ್ಳ ಬಟ್ಟಿ ಪ್ಯಾಕೆಟ್‌ ಸಾರಾಯಿ ಸೇವಿಸಿ 13 ಮಂದಿ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ತಮಿಳುನಾಡಿನ (Tamil Nadu) ಕಲ್ಲಕುರಿಚಿಯಲ್ಲಿ (Kallakurichi) ನಡೆದಿದೆ.

    ದುರಂತ (Hooch Tragedy) ವರದಿಯಾದ ನಂತರ ಸಿಎಂ ಎಂಕೆ ಸ್ಟಾಲಿನ್ (CM MK Stalin) ಈ ಪ್ರಕರಣದ ಬಗ್ಗೆ ಸಿಐಡಿ (CID ತನಿಖೆಗೆ ಆದೇಶಿಸಿದ್ದಾರೆ.

    ಕ್ಷಿಪ್ರ ಕ್ರಮ ಕೈಗೊಂಡಿರುವ ತಮಿಳುನಾಡು ಸರ್ಕಾರ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾತಾವತ್ ಅವರನ್ನು ವರ್ಗಾವಣೆ ಮಾಡಿದೆ. ಕಲ್ಕುರಿಚಿ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ಪ್ರಶಾಂತ್ ನೇಮಕಗೊಂಡಿದ್ದಾರೆ.

    ಕಲ್ಲಕುರಿಚಿ ಎಸ್‌ಪಿ ಸಮಯಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ. ಅವರ ಜಾಗಕ್ಕೆ ಸರ್ಕಾರ ರಜತ್ ಚತುರ್ವೇದಿ ಅವರನ್ನು ನೂತನ ಎಸ್ಪಿಯನ್ನಾಗಿ ನೇಮಿಸಿದೆ. ಅಷ್ಟೇ ಅಲ್ಲದೇ 9 ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಪೊಲೀಸರು ಕಳ್ಳ ಬಟ್ಟಿದಂಧೆಕೋರನನ್ನು ಬಂಧಿಸಿದ್ದಾರೆ. ಮೆಥೆನಾಲ್‌ ಮಿಶ್ರಣ ಹೊಂದಿದ್ದ 200 ಲೀಟರ್‌ ಕಳ್ಳಬಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ.

     

  • ಮದ್ಯದ ನಶೆಯಲ್ಲಿಯೇ ಸಾರಾಯಿ ಬಂದ್ ಮಾಡ್ಬೇಕೆಂದು ಪಂಚಾಯ್ತಿ ಕಟ್ಟಡವೇರಿದ!

    ಮದ್ಯದ ನಶೆಯಲ್ಲಿಯೇ ಸಾರಾಯಿ ಬಂದ್ ಮಾಡ್ಬೇಕೆಂದು ಪಂಚಾಯ್ತಿ ಕಟ್ಟಡವೇರಿದ!

    ಬಾಗಲಕೋಟೆ: ಸಾರಾಯಿ ಬಂದ್ ಮಾಡಬೇಕೆಂದು ವ್ಯಕ್ತಿಯೊಬ್ಬ ಪಂಚಾಯ್ತಿ ಕಟ್ಟಡ ಏರಿ ಹೈಡ್ರಾಮಾ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

    ಕಾಕಪ್ಪ ಮಾದರ ಹೈಡ್ರಾಮಾ ಮಾಡಿದ ವ್ಯಕ್ತಿ. ಈತ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಕನೂರು ಗ್ರಾಮ ಪಂಚಾಯ್ತಿ ಏರಿ ಕುಳಿತು, ಸಾರಾಯಿ ಬಂದ್ ಮಾಡಿಸದಿದ್ದರೆ ಪಂಚಾಯ್ತಿಯಲ್ಲೇ ನೇಣು ಹಾಕಿಕೊಂಡು ಸಾಯ್ತೀನಿ ಎಂದು ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲ್ಲಿ-ಎಷ್ಟು ಮಳೆಯಾಗಿದೆ?

    ನಾ ಮನೆ ಕೇಳಿಲ್ಲ, ಹೊಲ ಕೇಳಿಲ್ಲ. ಸಾರಾಯಿ ಮಾರಾಟ ಬಂದ್ ಮಾಡಿಸಿ. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಬಂದ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದಾನೆ. ಸ್ವತಃ ಸಾರಾಯಿ ಕುಡಿದು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಪಂಚಾಯ್ತಿ ಕಟ್ಟಡವೇರಿ ಕಾಕಪ್ಪ ಕೂತಿದ್ದಾನೆ. ನಂತರ ಗ್ರಾಮದ ಹಿರಿಯರು ಪಂಚಾಯ್ತಿ ಮೇಲೇರಿ ಮನವೊಲಿಕೆ ಮಾಡಿ ಆತನನ್ನು ಕೆಳಗಿಳಿಸಿದ್ದಾರೆ.

    ವ್ಯಕ್ತಿಯ ಈ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

    ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ

    ಚಿಕ್ಕೋಡಿ: ಸಾರಾಯಿ ಕುಡಿಬೇಡ ಅಂತ ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ.

    ಮನ್ಸೂರ್ ಇಲಾಹಿ ಮುಲ್ಲಾ(50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶನಿವಾರ ತಡರಾತ್ರಿ ಹೆಂಡತಿ ಮಗನೊಂದಿಗೆ ಇದೇ ವಿಚಾರಕ್ಕೆ ಮನ್ಸೂರ್ ಜಗಳವಾಡಿದ್ದ. ಸಾರಾಯಿ ಕುಡಿಯುವ ವಿಷಯಕ್ಕೆ ದಿನನಿತ್ಯ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಯಾವುದೇ ಕಾರಣಕ್ಕೂ ಹಣ ಕೊಡಲ್ಲ ಕುಡಿಯಬೇಡ ಅಂತ ಹೇಳಿದ್ದಕ್ಕೆ ಮನ್ಸೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯಿಂದ ಸ್ಥಳಕ್ಕೆ ಖಡಕಲಾಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 7 ಮಂದಿ ದುರ್ಮರಣ

    Live Tv

  • ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ- ಸಾವಿರ ಲೀಟರ್ ಕಳ್ಳಬಟ್ಟಿ ನಾಶ

    ಕಳ್ಳಬಟ್ಟಿ ಅಡ್ಡೆಗಳ ಮೇಲೆ ದಾಳಿ- ಸಾವಿರ ಲೀಟರ್ ಕಳ್ಳಬಟ್ಟಿ ನಾಶ

    ಬಾಗಲಕೋಟೆ: ಒಂದೇ ದಿನ 3 ವಿವಿಧ ಕಳ್ಳಬಟ್ಟಿ ಅಡ್ಡೆಗಳ ಮೇಲೆ ಜಿಲ್ಲಾ ಅಬಕಾರಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 1 ಸಾವಿರ ಲೀಟರ್ ಗೂ ಅಧಿಕ ಕಳ್ಳಬಟ್ಟಿ ನಾಶಪಡಿಸಿದ್ದಾರೆ.

    ತಾಲೂಕಿನ ನಾಯನೇಗಲಿ, ಸೀತಿಮನಿ ತಾಂಡಾದಲ್ಲಿನ ಅಡ್ಡೆಗಳ ಮೇಲೆ ದಾಳಿ ವೇಳೆ 800 ಲೀಟರ್ ಬೆಲ್ಲದ ಕೊಳೆ, ಬೀಳಗಿ ತಾಲೂಕಿನ ಬಿಸನಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸುಮಾರು 200 ಲೀಟರ್ ಬೆಲ್ಲದ ಕೊಳೆ ಪತ್ತೆಯಾಗಿದೆ. ಒಟ್ಟು ಸುಮಾರು 1 ಸಾವಿರ ಲೀಟರ್ ಬೆಲ್ಲದ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ.

    ದಂಧೆಕೋರರು ನೀರಿನ ಬಿಂದಿಗೆಗಳಲ್ಲಿ ಹೂತಿಟ್ಟ ಕೊಳೆಯನ್ನು ಅಧಿಕಾರಿಗಳು ನಾಶಪಡಿಸಿದ್ದಾರೆ. ಅಲ್ಲದೆ ಇದೇ ವೇಳೆ ಕಳ್ಳಬಟ್ಟಿ ಸಾಗಿಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ. ಓರ್ವ ಪರಾರಿಯಾಗಿದ್ದು, ಪರಾರಿಯಾಗಲು ಬಳಸಿದ್ದ ಮೂರು ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

  • ಮದ್ಯ ಕುಡಿಯಲು ಹಣ ಕೊಡದ ಅಪ್ಪನ ಕುತ್ತಿಗೆಯನ್ನ ಕೊಡಲಿಯಿಂದ ಕಡಿದ ಮಗ

    ಮದ್ಯ ಕುಡಿಯಲು ಹಣ ಕೊಡದ ಅಪ್ಪನ ಕುತ್ತಿಗೆಯನ್ನ ಕೊಡಲಿಯಿಂದ ಕಡಿದ ಮಗ

    ವಿಜಯಪುರ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂದು ಮಗನೊಬ್ಬ ತಂದೆಯನ್ನ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಮಹಾರಾಷ್ಟ್ರ ಗಡಿಯ ಟಾಕಳಿ ಗ್ರಾಮದಲ್ಲಿ ನಡೆದಿದೆ.

    ಕೊಲೆ ಮಾಡಿದ ಪಾಪಿ ಮಗನನ್ನು ಸಂಜೀವ ತೊರವಿ (38) ಎಂದು ಗುರುತಿಸಲಾಗಿದೆ, ಕುಡಿತಕ್ಕೆ ದಾಸನಾಗಿದ್ದ ಈತ ಕುಡಿಯಲು ಹಣ ಕೊಡಲಿಲ್ಲ ಎಂದು ತನ್ನ ಸ್ವಂತ ತಂದೆ ಅಣ್ಣಪ್ಪ ತೊರವಿ (58) ಯನ್ನು ಕೊಲೆ ಮಾಡಿದ್ದಾನೆ.

    ಬುಧವಾರ ಬೆಳಗ್ಗೆ ತಂದೆ ಅಣ್ಣಪ್ಪ ಬಳಿ 1 ಸಾವಿರ ರೂಪಾಯಿ ಕೇಳಿ ಪಡೆದು ಕುಡಿದು ಬಂದಿದ್ದ ಸಂಜೀವ ಮತ್ತೆ ರಾತ್ರಿ ಕುಡಿಯಲು 500 ರೂ. ಕೇಳಿದ್ದಾನೆ. ಇದರಿಂದ ಕೋಪಗೊಂಡ ತಂದೆ ಕೊಡಲ್ಲ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಕೋಪಗೊಂಡ ಮಗ ಸಂಜೀವ ಮನೆಯಲ್ಲಿ ಇದ್ದ ಕೊಡಲಿಯಿಂದ ಅಪ್ಪನ ಕುತ್ತಿಗೆಯನ್ನು ಕಡಿದು ಹಾಕಿದ್ದಾನೆ. ಇದನ್ನು ಓದಿ: ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಮನೆಯವರೆಲ್ಲ ಗ್ರಾಮ ದೇವರ ಜಾತ್ರೆಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಚಡಚಣ ಸಿಪಿಐ ಚಿದಂಬರಂ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಡಚಣ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ಅನ್ವಯ ಪ್ರಕರಣ ದಾಖಲಾಗಿದೆ.

  • ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ನವದೆಹಲಿ: ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗುತ್ತಿದ್ದ ಹಾನಿಕಾರಕ ಮದ್ಯವನ್ನು ಗ್ರಾಹಕರಿಗೆ ಕೇವಲ 40 ರೂ.ಗೆ ಮಾರುತ್ತಿದ್ದ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ದೆಹಲಿಯ ರಘುಬೀರ್ ನಗರದಲ್ಲಿ ಶುಕ್ರವಾರ ಪೊಲೀಸರು ಎರಡು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇಲ್ನೊಟಕ್ಕೆ ದಿನಸಿ ಅಂಗಡಿ ಅಂತ ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಡ್ರಮ್‍ಗಟ್ಟಲೆ ಸಾರಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ಸತ್ಯಾಂಶ ಹೊರಬಿದ್ದಿದೆ.

    ಅಂಗಡಿಯಲ್ಲಿ ಪತ್ತೆಯಾದ ಸಾರಾಯಿ ತಯಾರಿಕೆಯ ಸಾಮಾಗ್ರಿ ಪಟ್ಟಿಯಲ್ಲಿ ಈ ಮದ್ಯಕ್ಕೆ ಯಾವ್ಯಾವ ಸಾಮಾಗ್ರಿ ಬಳಕೆಯಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆಗ ಸಾರಾಯಿ ತಯಾರಿಸಲು ಆರೋಪಿಗಳು ಹಾನಿಕಾರಕ ಸೋಪಿನ ಪುಡಿ ಹಾಗೂ ಶ್ಯಾಂಪುಗಳನ್ನು ಬಳಕೆ ಮಾಡುತ್ತಾರೆ ಎಂಬುದು ಬಯಲಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ಬಾಟಲಿಗೆ ಕೇವಲ 40 ರೂ.ಗೆ ಈ ಸಾರಾಯಿಯನ್ನು ಅಂಗಡಿಯವರು ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಕೂಡ ಸಾಕ್ಷಿಗಳು ದೊರಕಿದೆ.

    ಆರೋಪಿಗಳಾದ ಜಿಜಾರ್ ಸಿಂಗ್ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿದ್ದ ಅಕ್ರಮ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಹಿಂದೆ 2009ರಲ್ಲಿ ಇದೇ ಪ್ರದೇಶದಲ್ಲಿ ಸಾರಾಯಿ ಸೇವಿಸಿ 17ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಜಿಜಾರ್ ಸಿಂಗ್‍ನ ಮಾವನೇ ಆರೋಪಿಯಾಗಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv