Tag: ಸಾರಗೋಡು

  • ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿ ದಾಳಿಗೆ ಸಾವು

    ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ನಾಯಿ ದಾಳಿಗೆ ಸಾವು

    ಚಿಕ್ಕಮಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾದ ಹಿನ್ನೆಲೆ ಹನಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಡಿನಲ್ಲೂ ನೀರಿಲ್ಲದೆ ಪ್ರಾಣಿಗಳು ನೀರಿಗಾಗಿ ಕಾಡಿನಿಂದ ನಾಡಿನ ಕಡೆಗೆ ಮುಖ ಮಾಡಿವೆ. ಕಳೆದ ಒಂದು ವಾರದಲ್ಲಿ ನಾಯಿಗಳ ದಾಳಿಯಿಂದ ಮೂರು ಜಿಂಕೆಗಳು ಸಾವನ್ನಪ್ಪಿವೆ.

    ಕಾಡಿನಲ್ಲಿ ಕುಡಿಯಲು ನೀರಿಲ್ಲದೇ ನಾಡಿನತ್ತ ಬಂದ ಜಿಂಕೆಯೊಂದು ನಾಯಿಗಳ ದಾಳಿಗೆ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಾರಗೋಡು ಗ್ರಾಮದಲ್ಲಿ ನಡೆದಿದೆ.

    ನೀರು ಅರಸಿ ನಾಡಿನತ್ತ ಬರುತ್ತಿರುವ ಜಿಂಕೆ, ಕಡವೆ ಮುಂತದ ಪ್ರಾಣಿಗಳು ಗ್ರಾಮಗಳಲ್ಲಿಯ ನಾಯಿಗಳ ದಾಳಿಗೆ ಸಾವನ್ನಪ್ಪಿತ್ತಿರುವುದು ಆಂತಕಕಾರಿ ವಿಷಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಆಲ್ದೂರು ವಲಯದ ಅರಣ್ಯಾಧಿಕಾರಿಗಳು ಜಿಂಕೆ ಶವ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಿದರು.