Tag: ಸಾಯಿ ಪಲ್ಲವಿ

  • ಖ್ಯಾತ ನಟಿ ಸೌಂದರ್ಯ ಬಯೋಪಿಕ್‍ನಲ್ಲಿ ಸಾಯಿ ಪಲ್ಲವಿ

    ಖ್ಯಾತ ನಟಿ ಸೌಂದರ್ಯ ಬಯೋಪಿಕ್‍ನಲ್ಲಿ ಸಾಯಿ ಪಲ್ಲವಿ

    ತ್ತೀಚೆಗೆ ಸಾಧನೆ ತೋರಿದ ಖ್ಯಾತ ನಟ-ನಟಿಯರು, ಕ್ರಿಕೆಟಿಗರು, ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡವರ ಕುರಿತು ಸಿನಿಮಾಗಳನ್ನು ಮಾಡಲಾಗುತ್ತಿದೆ. ಇದೇ ರೀತಿ ಇದೀಗ ಖ್ಯಾತ ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರು ಜೀವನ ಚರಿತ್ರೆ ಕುರಿತು ಬಯೋಪಿಕ್ ಮೂಡಿ ಬರಲಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಹೌದು. ಸೌಂದರ್ಯ ಬಯೋಪಿಕ್ ನಿರ್ಮಾಣ ಮಾಡುವ ಬಗ್ಗೆ ಅನೇಕ ವರ್ಷಗಳಿಂದ ಮಾತು ಕೇಳಿಬರುತ್ತಿದ್ದು, ಇದುವರೆಗೆ ಅದು ಸಾಧ್ಯವಾಗಿಲ್ಲ. ಇದೀಗ ಮತ್ತೆ ಸೌಂದರ್ಯ ಜೀವನಚರಿತ್ರೆಯನ್ನು ಸಿನಿಮಾ ಮಾಡುವ ವಿಚಾರ ಮುನ್ನೆಲೆಗೆ ಬಂದಿದೆ. ತೆಲುಗು ನಿರ್ಮಾಪಕರೊಬ್ಬರು ಬಯೋಪಿಕ್ ನಿರ್ಮಾಣ ಮಾಡುವ ಬಗ್ಗೆ ಸೌಂದರ್ಯ ಕುಟುಂಬದ ಜೊತೆ ಮಾತುಕತೆ ಕೂಡ ನಡೆಸುತ್ತಿದ್ದು, ಕುಟುಂಬದ ಒಪ್ಪಿಗೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ. ಆದರೆ ಅದ್ಭುತ ನಟಿ ಸೌಂದರ್ಯ ಬಯೋಪಿಕ್ ನಲ್ಲಿ ಯಾರು ನಟಿಸುತ್ತಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.

    ಈ ಚಿತ್ರದಲ್ಲಿ ಸೌಂದರ್ಯ ಅವರ ಪಾತ್ರವನ್ನು ಮಲಯಾಳಂ ನಟಿ ಸಾಯಿಪಲ್ಲವಿ ನಿಭಾಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಾಯಿ ಪಲ್ಲವಿಗೆ ತೆಲುಗಿನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಸೌಂದರ್ಯಾ ಬಯೋಪಿಕ್‍ಗೆ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿ ಕೇಳಿಬಂದಿದೆ. ತಮ್ಮ ಅದ್ಭುತ ನಟನೆ ಮೂಲಕವೇ ಎಲ್ಲರ ಗಮನಸೆಳೆದಿರುವ ಸಾಯಿ ಪಲ್ಲವಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಸಾಯಿ ಪಲ್ಲವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಜಾಣ್ಮೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

    ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೆಲಸ ಮಾಡುವ ಮೂಲಕ ಸೌಂದರ್ಯ ಕೂಡ ಬಹುಭಾಷಾ ನಟಿಯಾಗಿ ಗಮನಸೆಳೆದವರಾಗಿದ್ದಾರೆ. ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದ ನಟಿ ಸೌಂದರ್ಯ, ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ. 2004ರಲ್ಲಿ ವಿಮಾನ ದುರಂತದಲ್ಲಿ ಇಹಲೋಕ ತ್ಯಜಿಸಿದರು. ಒಟ್ಟಿನಲ್ಲಿ ಭಾರೀ ಚರ್ಚೆಯಲ್ಲಿರುವ ಸೌಂದರ್ಯ ಬಯೋಪಿಕ್ ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಸದ್ಯದ ಕುತೂಹಲ.

  • ವೈದ್ಯಕೀಯ ಪರೀಕ್ಷೆ ಬರೆಯಲು ಬಂದ ಸಾಯಿ ಪಲ್ಲವಿ – ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ವೈದ್ಯಕೀಯ ಪರೀಕ್ಷೆ ಬರೆಯಲು ಬಂದ ಸಾಯಿ ಪಲ್ಲವಿ – ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    – ಮಾಸ್ಕ್ ತೊಟ್ಟು ಗೌಪ್ಯವಾಗಿ ಬಂದರೂ ಕಂಡುಹಿಡಿದ ಅಭಿಮಾನಿಗಳು

    ಚೆನ್ನೈ: ವೈದ್ಯಕೀಯ ಪರೀಕ್ಷೆ ಬರೆಯಲು ಕಾಲೇಜಿಗೆ ಹೋದ ನಟಿ ಸಾಯಿ ಪಲ್ಲವಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿರುವ ಘಟನೆ ತಿರುಚ್ಚಿಯಲ್ಲಿ ನಡೆದಿದೆ.

    ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿಯವರು, ಈ ವಾರದ ಆರಂಭದ ದಿನಗಳಲ್ಲಿ ತಿರುಚ್ಚಿಯಲ್ಲಿರುವ ಎಂಎಎಂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಸಾಯಿ ಪಲ್ಲವಿ ಅವರು ಹಳೇಯ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಭಾಗವಹಿಸಲು ಅಲ್ಲಿಗೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಅವರು ಅಲ್ಲಿಗೆ ಯಾಕೆ ಬಂದಿದ್ದರು ಎಂದು ತಿಳಿದು ಬಂದಿದೆ.

    ಸಾಯಿ ಪಲ್ಲವಿಯವರು ನಟನೆಯ ಜೊತೆಗೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಸಾಯಿಯವರು ಜಾರ್ಜಿಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ 2016ರಿಂದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರು ಭಾರತದಲ್ಲಿ ಔಷಧಿಯ ಬಗ್ಗೆ ಅಧ್ಯಯನ ಮಾಡಲು, ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯನ್ನು ಪಾಸ್ ಮಾಡಬೇಕಿದೆ. ಈ ಪರೀಕ್ಷೆಯನ್ನು ಬರೆಯಲು ಸಾಯಿ ತಿರುಚ್ಚಿಯ ಎಂಎಎಂ ಕಾಲೇಜಿಗೆ ಬಂದಿದ್ದಾರೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

    ಪರೀಕ್ಷೆಯಲ್ಲಿ ಭಾಗವಹಿಸಲು ಸಾಯಿ ಪಲ್ಲವಿ ಮಾಸ್ಕ್ ತೊಟ್ಟು, ದುಪ್ಪಟ್ಟ ಹೊದ್ದುಕೊಂಡು ಹೋಗಿದ್ದಾರೆ. ಆದರೆ ಕಾಲೇಜಿನಲ್ಲಿ ಕೆಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಾಯಿ ಪಲ್ಲವಿಯವರನ್ನು ಕಂಡು ಹಿಡಿದಿದ್ದಾರೆ. ಈ ವೇಳೆ ಅವರ ಜೊತೆ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಈಗ ನಟಿ ಅಭಿಮಾನಿಗಳ ಜೊತೆ ತೆಗೆದುಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಸದ್ಯ ಸಾಯಿ ಪಲ್ಲವಿ ಪ್ರಸ್ತುತ ಎರಡು ತೆಲುಗು ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಲವ್ ಸ್ಟೋರಿ ಮತ್ತು ವಿರಾಟಾ ಪರ್ವಂ ಎಂಬ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಶೇಖರ್ ಕಮ್ಮುಲಾ ನಿರ್ದೇಶನದ ಲವ್ ಸ್ಟೋರಿ ಚಿತ್ರೀಕರಣ ಸೆಪ್ಟೆಂಬರ್ 7ರಿಂದ ಪ್ರಾರಂಭವಾಗಲಿದೆ. ಇದರಲ್ಲಿ ನಾಗ ಚೈತನ್ಯ ನಾಯಕನಟನಾಗಿ ಅಭಿನಯಿಸಿದ್ದಾರೆ. ವಿರಾಟಾ ಪರ್ವಂ ಸಿನಿಮಾದಲ್ಲಿ ಸಾಯಿ ರಾಣಾ ದಗ್ಗುಬಾಟಿ ಮತ್ತು ಪ್ರಿಯಮಣಿಯವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

  • ನಾನಿ ಜೊತೆಗಿನ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ರಶ್ಮಿಕಾ?

    ನಾನಿ ಜೊತೆಗಿನ ಸಿನಿಮಾ ರಿಜೆಕ್ಟ್ ಮಾಡಿದ್ಯಾಕೆ ರಶ್ಮಿಕಾ?

    ಹೈದರಾಬಾದ್: ಟಾಲಿವುಡ್ ನಟ ನಾನಿ ಅಭಿನಯದ ಶ್ಯಾಮ್ ಸಿಂಗ್ ರಾಯ್ ಸಿನಿಮಾದ ಹೀರೋಯಿನ್‍ಗಳ ಆಯ್ಕೆ ಕುರಿತು ಸಖತ್ ಚರ್ಚೆ ನಡೆಯುತ್ತಿದ್ದು, ಚಿತ್ರದಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಯಾಕೆ ನಿರಾಕರಿಸಿದರು, ಕಾರಣವೇನು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

    ಟಾಲಿವುಡ್‍ನಲ್ಲಿ ನಾನಿಯ ಮುಂದಿನ ಸಿನಿಮಾ ಶ್ಯಾಮ್ ಸಿಂಗ್ ರಾಯ್, ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಕೆಲಸಗಳನ್ನು ನಿಲ್ಲಿಸಲಾಗಿತ್ತು. ಇದೀಗ ಚಿತ್ರ ತಂಡ ಹೀರೋಯಿನ್ ಆಯ್ಕೆಯಲ್ಲಿ ತೊಡಗಿದೆ. ಇನ್ನೂ ವಿಶೇಷವೆಂದರೆ ಈ ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರಂತೆ ಪ್ರಮುಖ ಮಾತ್ರಕ್ಕೆ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರಂತೆ, ಅದರಂತೆ ಎರಡನೇ ನಟಿಯಾಗಿ ನಟಿಸಲು ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ರಶ್ಮಿಕಾ ಈ ಆಫರ್ ತಿರಸ್ಕರಿಸಿದ್ದು, ಶ್ಯಾಮ್ ಸಿಂಗ್ ರಾಯ್ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿಲ್ಲ.

    ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡುತ್ತಿದ್ದಂತೆ, ಯಾಕೆ, ಏನು ಎಂಬ ಚರ್ಚೆ ಶುರುವಾಗಿದೆ. ತೆಲುಗು ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ ಯಾಕೆ ರಿಜೆಕ್ಟ್ ಮಾಡಿದರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದ್ದು, ಚಿತ್ರದಲ್ಲಿ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ರಶ್ಮಿಕಾ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಶ್ಮಿಕಾಗೆ ತಮ್ಮ ಪಾತ್ರ ಇಷ್ಟವಾಗಿತ್ತಂತೆ ಆದರೆ ಸಾಯಿ ಪಲ್ಲವಿ ನಟಿಸುತ್ತಿರುವ ಒಂದೇ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡಿಲ್ಲ ಎನ್ನಲಾಗಿದೆ.

    ಸಾಯಿ ಪಲ್ಲವಿ ಸೆನ್ಸೇಶನ್ ಕ್ವೀನ್ ಎಂಬ ಹೆಗ್ಗಳಿಕೆ ಪಡೆದಿದ್ದು, ತಮ್ಮ ಅದ್ಭುತ ನಟನೆ ಮತ್ತು ಡ್ಯಾನ್ಸ್ ಮೂಲಕ ಇಡೀ ಸಿನಿಮಾವನ್ನು ಆವರಿಸುವ ಸಾಧ್ಯತೆ ಇದೆ. ಇದರಿಂದಾಗಿ ಉಳಿದ ನಾಯಕಿಯರ ಪಾತ್ರಗಳಿಗೆ ಅಷ್ಟು ಪ್ರಾಧಾನ್ಯತೆ ಸಿಗುವುದಿಲ್ಲ. ಹೀಗಾಗಿ ರಶ್ಮಿಕಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ ಎಂಬುದು ಸಾಯಿಪಲ್ಲವಿ ಅಭಿಮಾನಿಗಳ ವಾದ. ಹೀಗೆ ರಶ್ಮಿಕಾ ಸಿನಿಮಾ ರಿಜೆಕ್ಟ್ ಮಾಡಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆ ನಡೆಯುತ್ತಿದೆ.

    ಅಂದಹಾಗೆ ಶ್ಯಾಮ್ ಸಿಂಗ್ ರಾಯ್ ಸಿನಿಮಾವನ್ನು ರಾಹುಲ್ ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್ ಟೈನ್ಮೆಂಟ್ಸ್ ಇದಕ್ಕೆ ಬಂಡವಾಳ ಹೂಡಿದೆ. ತೆಲುಗಿನ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ.

    ರಶ್ಮಿಕಾ ಮಂದಣ್ಣ ಸದ್ಯ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ನಂತರ ರಶ್ಮಿಕಾ ಪುಷ್ಪ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲು ಅರ್ಜುನ್ ಈ ಸಿನಿಮಾಗೆ ಹೆಚ್ಚು ಸಂಭಾವನೆ ಸಹ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಹೀಗಾಗಿ ಈ ಸಿನಿಮಾ ಭಾರೀ ಕುತೂಹಲ ಹುಟ್ಟಿಸಿದೆ.

  • ತೆಲುಗು ನಾನಿ ಸಿನಿಮಾಗೆ ರಶ್ಮಿಕಾ ಬದಲಿಗೆ ಸಾಯಿ ಪಲ್ಲವಿ ಆಯ್ಕೆ?

    ತೆಲುಗು ನಾನಿ ಸಿನಿಮಾಗೆ ರಶ್ಮಿಕಾ ಬದಲಿಗೆ ಸಾಯಿ ಪಲ್ಲವಿ ಆಯ್ಕೆ?

    ಹೈದರಾಬಾದ್: ದಕ್ಷಿಣ ಭಾರತ ಖ್ಯಾತ ನಟಿ ಹಾಗೂ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿರುವ ನಟಿ ಇದೀಗ ತೆಲುಗಿನ ಚಿತ್ರವೊಂದರಲ್ಲಿ ನಟಿಸಲು ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಈಗಾಗಲೇ ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದೇ ಗ್ಯಾಪ್‍ನಲ್ಲಿ ತೆಲುಗು ನಟ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ನಾನಿ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಈಗಾಗಲೇ ನಾನಿ ಜೊತೆ ಎಂಸಿಎ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಎರಡನೇ ಬಾರಿ ನಾನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಟ್ಯಾಕ್ಸಿವಾಲಾ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಕೊನೆಯಲ್ಲಿ ಕ್ರಿಸ್‍ಮಸ್‍ಗೆ ಚಿತ್ರ ತೆರೆಗೆ ಬರಬೇಕಿತ್ತು ಆದರೆ ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ತೆರೆ ಕಾಣುವುದು ಇನ್ನೂ ತಡವಾಗಬಹುದು ಎಂದು ಅಂದಾಜಿಸಲಾಗಿದೆ.

    ಸಾಯಿ ಪಲ್ಲವಿ ಅಷ್ಟು ಸುಲಭವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಚಿತ್ರದಲ್ಲಿ ತಮ್ಮದು ಪ್ರಮುಖ ಪಾತ್ರವಿದ್ದರೆ, ಇಲ್ಲವೇ ವಿಶೇಷ ಸಿನಿಮಾ ಆಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಅಳೆದು ತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಸಾಯಿ ಪಲ್ಲವಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ರಾಣಾ ದಗ್ಗುಬಾಟಿ ಜೊತೆ ವಿರಾಟಪರ್ವಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಮತ್ತೆ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ ಈ ಕುರಿತು ಸಿನಿಮಾ ತಂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

  • ಪೆನ್ ಹಿಡಿದು ಕಾದು ಕೂತ ಸಾಯಿ ಪಲ್ಲವಿ – ರೌಡಿ ಬೇಬಿ ಹೊಸ ಲುಕ್ ವೈರಲ್

    ಪೆನ್ ಹಿಡಿದು ಕಾದು ಕೂತ ಸಾಯಿ ಪಲ್ಲವಿ – ರೌಡಿ ಬೇಬಿ ಹೊಸ ಲುಕ್ ವೈರಲ್

    ಹೈದರಾಬಾದ್: ಅದ್ಭುತ ಅಭಿನಯ, ಡ್ಯಾನ್ಸ್, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರೇಮಂ ಸುಂದರಿ ಸಾಯಿ ಪಲ್ಲವಿ ಫೋಟೋವೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ಇತ್ತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೌಡಿ ಬೇಬಿಗೆ ನಟ ರಾಣಾ ದಗ್ಗುಬಾಟಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

    ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾರೆ. 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಾಯಿಗೆ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ ಸಾಯಿ ಪಲ್ಲವಿ ನಟಿಸುತ್ತಿರುವ ‘ವಿರಾಟಪರ್ವಂ’ ಸಿನಿಮಾದ ಲುಕ್ ಕೂಡ ಇಂದೇ ರಿಲೀಸ್ ಆಗಿದ್ದು, ಈ ಪೋಸ್ಟ್‌ರ್‌ ಅನ್ನು ಹಂಚಿಕೊಂಡು ರಾಣಾ ರೌಡಿ ಬೇಬಿಗೆ ವಿಶ್ ಮಾಡಿದ್ದಾರೆ.

    ವಿರಾಟಪರ್ವಂ ಸಿನಿಮಾದಲ್ಲಿ ರಾಣಾ ನಾಯಕರಾಗಿದ್ದು, ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಲುಕ್‍ನಲ್ಲಿ ಸಾಯಿ ಒಂದು ಬ್ಯಾಗ್ ಜೊತೆಯಲ್ಲಿಟ್ಟುಕೊಂಡು, ಕೈಯಲ್ಲಿ ಪೆನ್ನು ಹಿಡಿದು, ಯಾರಿಗೋ ಕಾಯುತ್ತಿರುವ ಹಾಗೆ ಕುಳಿತು ಕೊಂಡಿದ್ದಾರೆ. ‘ವಿರಾಟಪರ್ವಂ’ ಸಿನಿಮಾಗೆ ವೇಣು ಉಡುಗುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ನಕ್ಸಲಿಸಂ ಬಗ್ಗೆ ಇರಲಿದ್ದು, ಹೃದಯಸ್ಪರ್ಶಿ ಪ್ರೇಮ ಕಥೆ ಚಿತ್ರದ ಹೈಲೈಟ್ ಎನ್ನಲಾಗಿದೆ. ಅದರಲ್ಲೂ ಈ ಸಿನಿಮಾದಲ್ಲಿ ಸಾಯಿ ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.

    ವಿರಾಟಪರ್ವಂ ಸಿನಿಮಾ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲಿಯೂ ಸಾಯಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಯಾವಾಗಪ್ಪ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು, ಸಿನಿಪ್ರಿಯರು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿಗೆ ನಾಗ್ ಚೈತನ್ಯ ನಾಯಕರಾಗಿ ಸಾಥ್ ಕೊಟ್ಟಿದ್ದಾರೆ.

  • ಸಿನಿಮಾ ಬಿಟ್ಟರೂ ಲಿಪ್‍ಲಾಕ್, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದ ರೌಡಿ ಬೇಬಿ

    ಸಿನಿಮಾ ಬಿಟ್ಟರೂ ಲಿಪ್‍ಲಾಕ್, ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದ ರೌಡಿ ಬೇಬಿ

    ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ವಿಭಿನ್ನ ನಟನೆ ಮೂಲಕ ದಕ್ಷಿಣ ಭಾರತದ ಸಿನಿ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೇಯಾದ ಫ್ಯಾನ್ ಫಾಲೋವರ್ಸ್ ಹೊಂದುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ನಟನೆಗೆ ಹೊರತಾಗಿಯೂ ಅವರ ವೈಯಕ್ತಿಕ ಜೀವನದಲ್ಲಿ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಬೋಲ್ಡ್ ಸ್ಟೇಟ್‍ಮೆಂಟ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

    ಸಾಯಿ ಪಲ್ಲವಿ ಎಂದರೆ ಅದೊಂದು ಚಾರ್ಮ್ ಎಂಬುದು ತಿಳಿದಿರುವ ವಿಚಾರ. ಅವರ ಅಭಿಮಾನಿಗಳೂ ಸಹ ಅವರನ್ನು ಅಷ್ಟೇ ಇಷ್ಟಪಡುತ್ತಾರೆ. ವೈಯಕ್ತಿಕ ಜೀವನದಲ್ಲಿಯೂ ಸಹ ಸಾಯಿ ಪಲ್ಲವಿ ತುಂಬಾ ವಿಭಿನ್ನ. ಹೀಗಾಗಿ ಸಿನಿಮಾಗಳ ಆಯ್ಕೆ ವಿಚಾರದಲ್ಲಿಯೂ ಎಚ್ಚರ ವಹಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಇದೀಗ ಒಂದು ಸ್ಟೇಟ್‍ಮೆಂಟ್ ನೀಡಿದ್ದಾರೆ.

    ಮೇಕಪ್‍ಗೆ ಹೆಚ್ಚು ಒತ್ತುಕೊಡದೆ ಸಹಜ ಸೌಂದರ್ಯ ಹಾಗೂ ಅಭಿನಯದ ಮೂಲಕವೇ ಹೆಸರು ಮಾಡಿದ್ದಾರೆ. ಈ ಹಿಂದೆ ಮೇಕಪ್ ವಿಷಯವಾಗಿ ಮಾತನಾಡುವಾಗ ಸಹಜ ಸೌಂದರ್ಯಕ್ಕೆ ಮಹತ್ವ ಕೊಡುವುದಾಗಿ ಹೇಳಿದ್ದ ನಟಿ, ಕಾಸ್ಮೆಟಿಕ್ ಕಂಪೆನಿಯೊಂದರ ಜಾಹೀರಾತನ್ನೂ ತಿರಸ್ಕರಿಸಿದ್ದರು. ಈ ಮೂಲಕ ಸಹಜ ಸೌಂದರ್ಯಕ್ಕೆ ಒತ್ತು ನೀಡುವುದಾಗಿ ತಿಳಿಸಿದ್ದರು.

    ಮಲಯಾಳಂ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿಗೆ ಇದೀಗ ತೆಲುಗು ಹಾಗೂ ತಮಿಳಿನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ‘ಲವ್ ಸ್ಟೋರಿ’ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಸಿನಿಮಾ ಶೂಟಿಂಗ್ ಸ್ಥಗಿತವಾಗಿದೆ.

    ಇದೇ ಸಂದರ್ಭದಲ್ಲಿ ಅವರು ಲಿಪ್ ಲಾಕ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಕುರಿತು ಮಾತನಾಡಿದ್ದು, ಈ ರೀತಿಯಾಗಿ ನಟಿಸಲು ನನಗೆ ಇಷ್ಟವಿಲ್ಲ. ಹಾಗೆ ನಟಿಸಲೇಬೇಕಾಗಿ ಬಂದರೆ ಸಿನಿಮಾವನ್ನೇ ಬಿಡುತ್ತೇನೆ ಎಂದಿದ್ದಾರೆ. ಈ ಮೂಲಕ ಲಿಪ್ ಲಾಕ್ ರೀತಿಯ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

    ಇದೇ ಕಾರಣಕ್ಕೆ ಈ ಹಿಂದೆ ಡಿಯರ್ ಕಾಮ್ರೇಡ್ ಹಾಗೂ ಸರಿಲೇರು ನೀಕೆವ್ವರು ಸಿನಿಮಾಗಳನ್ನೂ ಸಾಯಿ ಪಲ್ಲವಿ ಬಿಟ್ಟಿದ್ದರು ಎನ್ನಲಾಗಿದೆ. ಸಿನಿಮಾ ಕಥೆ ಡಿಮ್ಯಾಂಡ್ ಮಾಡಿದರೂ ನಾನು ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದಿಲ್ಲ. ಹಾಗೆ ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಮತ್ತೆ ವೈದ್ಯ ವೃತ್ತಿಗೆ ಮರಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  • ಸಾಯಿ ಪಲ್ಲವಿಯನ್ನು ಮದ್ವೆಯಾಗಿ ಪೂಜಾ ಹೆಗಡೆ ಜೊತೆ ಸುತ್ತಾಡಬೇಕೆಂದ ನಟ

    ಸಾಯಿ ಪಲ್ಲವಿಯನ್ನು ಮದ್ವೆಯಾಗಿ ಪೂಜಾ ಹೆಗಡೆ ಜೊತೆ ಸುತ್ತಾಡಬೇಕೆಂದ ನಟ

    ಹೈದರಾಬಾದ್: ಟಾಲಿವುಡ್ ನಟ ವರುಣ್ ತೇಜ್ ಅವರು ನಟಿ ಸಾಯಿ ಪಲ್ಲವಿ ಅವರನ್ನು ಮದುವೆ ಆಗಬೇಕೆಂದು ಹೇಳಿದ್ದಾರೆ.

    ಇತ್ತೀಚೆಗೆ ನಟ ವರುಣ್ ತೇಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಫೀಟ್ ಅಪ್ ವಿತ್ ಸ್ಟಾರ್ಸ್ ತೆಲುಗು” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ಲಕ್ಷ್ಮಿ ಮಂಚು, ವರುಣ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

    ನಿರೂಪಕಿ ಲಕ್ಷ್ಮಿ ಅವರು, ನೀವು ಯಾವ ನಟಿಯನ್ನು ಕೊಲೆ ಮಾಡುತ್ತೀರಾ, ಯಾವ ನಟಿಯನ್ನು ಮದುವೆ ಆಗುತ್ತೀರಾ ಹಾಗೂ ಯಾವ ನಟಿ ಜೊತೆ ಸುತ್ತಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಪ್ರಶ್ನೆಗಳಿಗೆ ನಟಿಯರಾದ ರಾಶಿ ಖನ್ನಾ, ಸಾಯಿ ಪಲ್ಲವಿ ಹಾಗೂ ಪೂಜಾ ಹೆಗಡೆ ಹೆಸರನ್ನು ಹೇಳುತ್ತಾರೆ.

    ಈ ವೇಳೆ ವರುಣ್ ಅವರು, ನಾನು ನಟಿ ರಾಶಿ ಖನ್ನಾ ಅವರನ್ನು ಕೊಲೆ ಮಾಡುತ್ತೇನೆ. ನಟಿ ಸಾಯಿ ಪಲ್ಲವಿಯನ್ನು ಮದುವೆ ಆಗುತ್ತೇನೆ ಹಾಗೂ ಪೂಜಾ ಹೆಗಡೆ ಜೊತೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದಾರೆ.

    ಈ ಹಿಂದೆ ನಟಿ ಸಮಂತಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕಿ ನಿಮ್ಮ ಬೆಡ್‍ರೂಂ ಸೀಕ್ರೆಟ್ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮೊದಲು ಸಮಂತಾ ಇದಕ್ಕೆ ನಿರಾಕರಿಸುತ್ತಾರೆ. ನಂತರ ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ ಎಂದು ಹೇಳಿದ್ದಾರೆ.

  • ವಿಜಯ್ ಜೊತೆ ಕಿಸ್‍ಗೆ ಒಲ್ಲೆ ಅಂದ ಸಾಯಿ ಪಲ್ಲವಿ

    ವಿಜಯ್ ಜೊತೆ ಕಿಸ್‍ಗೆ ಒಲ್ಲೆ ಅಂದ ಸಾಯಿ ಪಲ್ಲವಿ

    ಹೈದರಾಬಾದ್: ಬಹುಭಾಷಾ ನಟಿ ಸಾಯಿ ಪಲ್ಲವಿ ಕಿಸ್ಸಿಂಗ್ ಸೀನ್ ಇದೆ ಎನ್ನುವ ಒಂದೇ ಕಾರಣಕ್ಕೆ ನಟ ವಿಜಯ್ ದೇವರಕೊಂಡ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎಂಬ ಸುದ್ದಿ ಟಾಲಿವುಡ್‍ನಲ್ಲಿ ಹರಿದಾಡುತ್ತಿದೆ.

    ವಿಜಯ್ ದೇವರಕೊಂಡ ನಟಿಸಿರುವ ‘ಡಿಯರ್ ಕಾಮ್ರೆಡ್’ ಚಿತ್ರಕ್ಕಾಗಿ ಮೊದಲು ನಟಿ ಸಾಯಿ ಪಲ್ಲವಿ ಅವರಿಗೆ ಆಫರ್ ನೀಡಲಾಗಿತ್ತು. ಚಿತ್ರದ ನಿರ್ದೇಶಕ ಭರತ್ ಕಾಮಾ ಅವರು ಈ ಸ್ಕ್ರಿಪ್ಟ್ ಅನ್ನು ಸಾಯಿ ಪಲ್ಲವಿಗೆ ವಿವರಿಸಿದ್ದಾಗ ತಕ್ಷಣ ಅವರು ನಿರ್ಧಾರ ತೆಗೆದುಕೊಂಡಿದ್ದು, ಕಿಸ್ಸಿಂಗ್ ಸೀನ್ ಮಾಡಲು ನಿರಾಕರಿಸಿದ್ದಾರೆ.

    ಕಿಸ್ಸಿಂಗ್ ಸೀನ್‍ಗಾಗಿ ಸಾಯಿ ಪಲ್ಲವಿ ಡಿಯರ್ ಕಾಮ್ರೆಡ್ ಚಿತ್ರವನ್ನು ನಿರಾಕರಿಸಿದ್ದರು. ಹಾಗಾಗಿ ಚಿತ್ರತಂಡ ವಿಜಯ್‍ಗೆ ನಾಯಕಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಡಿಯರ್ ಕಾಮ್ರೆಡ್ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಡಿಯರ್ ಕಾಮ್ರೆಡ್ ದಕ್ಷಿಣ ಭಾರತದಲ್ಲಿ ಭಾರೀ ಸದ್ದು ಮಾಡಿದ್ದು, ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ.

    ಈ ಚಿತ್ರ ಭರತ್ ಕಾಮಾ ನಿದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ನವೀನ್ ಯೆರನೆನಿ, ವೈ. ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಜಸ್ಟಿನ್ ಪ್ರಭಾಕರನ್ ಅವರ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದೆ.

  • ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ನಿಜಕ್ಕೂ ಕನ್ನಡಕ್ಕೆ ಬರ್ತಾಳಾ ರೌಡಿ ಬೇಬಿ?

    ಒಂದೆಡೆ ಪರಭಾಷಾ ನಟಿಯರಿಗೆ ಮಣೆ ಹಾಕೋದರ ವಿರುದ್ಧ ಕನ್ನಡಿಗರಿಂದ ಪ್ರತಿರೋಧ ವ್ಯಕ್ತವಾಗುತ್ತಾ ಬಂದಿದೆ. ಆದರೆ ಪರಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕೆಲ ನಟಿಯರು ಕನ್ನಡ ಚಿತ್ರಗಳಲ್ಲಿ ನಟಿಸಬೇಕೆಂಬ ಇಂಗಿತವೂ ಕನ್ನಡದ ಪ್ರೇಕ್ಷಕರಲ್ಲಿಯೇ ಇರುತ್ತೆ. ಆಯಾ ಕಾಲ ಘಟ್ಟಕ್ಕೆ ಫೇಮಸ್ ಆದ ನಟಿಯರು ಇನ್ನೇನು ಕನ್ನಡಕ್ಕೆ ಬಂದೇ ಬಿಟ್ಟರು ಎಂಬಂತೆ ಸುದ್ದಿ ಹಬ್ಬಿಸೋದು ಮಾಮೂಲಿ. ಆದರೆ ಸಾಯಿಪಲ್ಲವಿಯ ಅಭಿಮಾನಿಗಳು ಮಾತ್ರ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಲಿರೋದು ನಿಜ ಎಂದೇ ನಂಬಿ ಕೂತಿದ್ದಾರೆ.

    ಸಾಯಿಪಲ್ಲವಿ ಮಲೆಯಾಳದ ಪ್ರಸಿದ್ಧ ಚಿತ್ರ ಪ್ರೇಮಂ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ನಟಿ. ಇದೊಂದು ಚಿತ್ರದ ನಂತರ ಈ ಹುಡುಗಿ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡ ರೀತಿ ಎಂಥವರೂ ಅಚ್ಚರಿಗೊಳ್ಳುವಂತಿದೆ. ಇಂಥಾ ಸಾಯಿಪಲ್ಲವಿಯನ್ನು ನಿರ್ದೇಶಕ ಮಹೇಶ್ ತಮ್ಮ ಮದಗಜ ಚಿತ್ರಕ್ಕೆ ನಾಯಕಿಯಾಗಿ ಕರೆತರುತ್ತಾರೆಂಬ ಮಾತು ಈಗೊಂದಷ್ಟು ದಿನಗಳಿಂದ ಕೇಳಿ ಬರುತ್ತಿದೆ.

    ಇದರೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ವಿಚಾರದಲ್ಲಿಯೂ ಸಾಯಿಪಲ್ಲವಿ ಹೆಸರು ಕೇಳಿ ಬರುತ್ತಿದೆ. ಆದರೆ ಇದುವರೆಗೂ ಕೂಡಾ ಚಿತ್ರತಂಡದ ಕಡೆಯಿಂದ ಯಾರೊಬ್ಬರೂ ಈ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ.

    ಆದರೆ ಸಾಯಿಪಲ್ಲವಿಯನ್ನು ಮನಸಾರೆ ಆರಾಧಿಸುವ ಒಂದಷ್ಟು ಕನ್ನಡದ ಅಭಿಮಾನಿಗಳು ಮಾತ್ರ ಆಕೆ ಬಂದೇ ಬರುತ್ತಾರೆಂಬ ನಂಬಿಕೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡಿದ್ದ ತಮಿಳಿನ ಮಾರಿ ಚಿತ್ರದ ರೌಡಿ ಬೇಬಿ ಹಾಡಿನ ಮೂಲಕವೇ ಪಡ್ಡೆಗಳನ್ನು ಹುಚ್ಚೆಬ್ಬಿಸಿರೋ ಸಾಯಿಪಲ್ಲವಿ ಕನ್ನಡಕ್ಕೆ ನಿಜಕ್ಕೂ ಬರ್ತಾರಾ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆಯಷ್ಟೇ.

  • ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ನಟಿ ಸಾಯಿ ಪಲ್ಲವಿಯಿಂದ 2 ಕೋಟಿ ಆಫರ್ ರಿಜೆಕ್ಟ್

    ಹೈದರಾಬಾದ್: ನಟಿ ಸಾಯಿ ಪಲ್ಲವಿ ಅವರು ಬರೋಬ್ಬರಿ 2 ಕೋಟಿ ಪ್ರಾಜೆಕ್ಟ್ ತಿರಸ್ಕರಿಸಿದ್ದಾರೆ.

    ಸಾಯಿ ಪಲ್ಲವಿ ಅವರಿಗೆ ಖ್ಯಾತ ಸಂಸ್ಥೆಯೊಂದು 2 ಕೋಟಿ ಸಂಭಾವನೆ ನೀಡುವುದಾಗಿ ಹೇಳಿ ತಮ್ಮ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗುವಂತೆ ಆಫರ್ ನೀಡಿದೆ. ಆದರೆ ಈ ಆಫರ್ ಅನ್ನು ಸಾಯಿ ಪಲ್ಲವಿ ಅವರು ತಿರಸ್ಕಾರ ಮಾಡಿದ್ದಾರೆ.

    ಕಂಪನಿ ಹೊಸದಾಗಿ ಫೇಸ್ ಕ್ರೀಮ್ ಒಂದನ್ನ ಉತ್ಪಾದಿಸಿದ್ದು, ಅದನ್ನು ಪ್ರೇಕ್ಷರಿಗೆ ಪರಿಚಯಿಸಬೇಕಿತ್ತು. ಈ ಫೇಸ್ ಕ್ರೀಮ್ ಜಾಹೀರಾತಿಗೆ ಸಾಯಿ ಪಲ್ಲವಿ ಸೂಕ್ತ ಎಂದು ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಅದರಂತೆಯೇ ಅವರ ಬಳಿ ಸಂಸ್ಥೆ ಬೇಡಿಕೆ ಇಟ್ಟಿದೆ. ಆದರೆ ಜಾಹೀರಾತಿನ ಆಫರನ್ನು ಸಾಯಿ ಪಲ್ಲವಿ ಅವರು ತಾವು ಮಾಡುವುದಿಲ್ಲ ಎಂದು ಹೇಳಿ ತಿರಸ್ಕರಿಸಿದ್ದಾರೆ.

    ಇದು ಫೇಸ್ ಕ್ರೀಮ್ ಜಾಹೀರಾತು ಆಗಿರುವುದರಿಂದ ಸಾಮಾನ್ಯವಾಗಿ ಮೊಡವೆ ಇರಲ್ಲ, ಮಾರ್ಕ್ ಇರಲ್ಲ, ನಿಮ್ಮ ಮುಖ ಸುಂದರವಾಗಿ ಕಾಣುತ್ತದೆ ಎಂದು ಹೇಳಬೇಕಾಗುತ್ತದೆ. ಇದರಿಂದ ಜನರನ್ನು ಮೋಸ ಮಾಡಿದಂತೆ ಆಗುತ್ತದೆ. ಪ್ರೇಕ್ಷಕರಿಗೆ ಸುಳ್ಳು ಹೇಳುವುದು ಕಷ್ಟವಾಗುತ್ತದೆ ಎಂದು ಸಾಯಿ ಪಲ್ಲವಿ ಅವರು ಈ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಅವರು ತಾವು ಅಭಿನಯಿಸುವ ಸಿನಿಮಾಗಳಲ್ಲಿ ಹೆಚ್ಚು ಮೇಕಪ್ ಬಳಸುವುದಿಲ್ಲ. ತಮ್ಮ ಮುಖದಲ್ಲಿ ಮೊಡವೆಗಳಿದ್ದರೂ ಅದನ್ನ ಕಾಣಿಸಿದಂತೆ ಮೇಕಪ್ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ನೈಜ ಸೌಂದರ್ಯವನ್ನೇ ಉಳಿಸಿಕೊಂಡು, ಸಿನಿಮಾ ಮಾಡುತ್ತಾರೆ. ಈ ಮೂಲಕವೇ ಅವರು ಅಪಾರ ಪ್ರೇಕ್ಷಕರ ಮನಗೆದ್ದಿದ್ದಾರೆ. ಈ ಕಾರಣದಿಂದ ಅವರು ಫೇಸ್ ಕ್ರೀಮ್ ಆಫರ್ ರಿಜೆಕ್ಟ್ ಮಾಡಿದ್ದಾರೆ.