Tag: ಸಾಯಿ ಪಲ್ಲವಿ

  • `ಫಿದಾ’ ಬ್ಯೂಟಿ ಸಾಯಿ ಪಲ್ಲವಿ ಮದುವೆ ಫಿಕ್ಸ್

    `ಫಿದಾ’ ಬ್ಯೂಟಿ ಸಾಯಿ ಪಲ್ಲವಿ ಮದುವೆ ಫಿಕ್ಸ್

    ಸೌತ್ ಚಿತ್ರರಂಗದ ಟಾಪ್ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ನಟಿ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋವಾಗ್ಲೆ ಹಸೆಮಣೆ ಏರೋಕೆ ಸಜ್ಜಾಗಿದ್ದಾರೆ.

    ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರೋ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಇದೀಗ ಚಿತ್ರರಂಗದಲ್ಲಿ ಅಷ್ಟೋಂದು ಆಕ್ಟೀವ್ ಆಗಿಲ್ಲ. ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. `ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಸಾಕಷ್ಟು ಚಿತ್ರದ ಆಫರ್‌ಗಳು ಈ ನಟಿಯನ್ನ ಅರಸಿ ಬಂದರೂ ಅವೆಲ್ಲಾ ಚಿತ್ರಗಳಿಗೂ ಸಾಯಿ ಪಲ್ಲವಿ ಯಾಕೆ ನೋ ಅಂತಿದ್ರು ಅಂತಾ ಇದೀಗ ತಿಳಿದು ಬಂದಿದೆ. ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆಯಂತೆ.

    ನಟಿ ಸಾಯಿ ಪಲ್ಲವಿ ಬಾಳಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಈ ನಟಿ ಮದುವೆಯತ್ತ ಮನಸ್ಸು ಮಾಡಿದ್ದಾರಂತೆ ಹಾಗಂತ ಟಿಟೌನ್ ಗಲ್ಲಿ ಗಲ್ಲಿಯಲ್ಲೂ ಈ ಸುದ್ದಿ ಸೌಂಡ್ ಮಾಡ್ತಿದೆ. ನಟಿಯ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರೆ ಹಾಗಾಗಿ ಯಾವ ಚಿತ್ರಕ್ಕೂ ನಟಿ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಹಾಗಂತ ಸಾಯಿ ಪಲ್ಲವಿ ಲವ್ ಮ್ಯಾರೇಜ್ ಆಗ್ತಿಲ್ಲ, ಗುರು ಹಿರಿಯರು ನಿಶ್ಚಯಿಸಿದ ವರನನ್ನೇ ಮದುವೆಯಾಗುತ್ತಿದ್ದಾರೆ. ಪಕ್ಕಾ ಆರೇಂಜ್ ಮ್ಯಾರೇಜ್ ಆಗಲು ಸಾಯಿ ಪಲ್ಲವಿ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ‘ಈದ್ ಪಾರ್ಟಿ’ಯಲ್ಲಿ ಕಂಗನಾ ರಣಾವತ್ ಖುಷ್

    ಕಡೆಯದಾಗಿ `ಲವ್‌ಸ್ಟೋರಿ’ ಮತ್ತು `ಶ್ಯಾಮ್ ಸಿಂಗ್ ರಾಯ್’ ಚಿತ್ರದ ಮೂಲಕ ಕಮಾಲ್ ಮಾಡಿದ್ರು. ನಟಿಯ ಪಾತ್ರ ಮತ್ತು ಚಿತ್ರ ಎರಡನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಆದರೆ ಈಗ ಸಾಯಿ ಪಲ್ಲವಿ ನಡೆಗೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯಿರೋವಾಗಲೇ ಮದುವೆಗೆ ಸಿದ್ಧವಾಗಿರೋ ನೆಚ್ಚಿನ ನಟಿ ಮತ್ತೆಂದೂ ನಟಿಸಲ್ವಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

  • ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಮಂಸೋರೆ ನಿರ್ದೇಶನದ ಹೊಸ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಸಾಯಿ ಪಲ್ಲವಿ ಕೂಡ ಕಥೆಯನ್ನು ಕೇಳುತ್ತಿದ್ದಾರೆ, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎನ್ನುವಲ್ಲಿಗೆ ಸುದ್ದಿ ಹರಡಿತ್ತು. ಆನಂತರ ಮಂಸೋರೆ ಬೇರೆ ಚಿತ್ರದತ್ತ ಹೊರಳಿದರು. ಇದನ್ನೂ ಓದಿ : 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    ದಕ್ಷಿಣದ ಹೆಸರಾಂತ ಈ ತಾರೆ ಅನೇಕ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮೂಲತಃ ಡಾನ್ಸರ್ ಆಗಿದ್ದ ಸಾಯಿ ಪಲ್ಲವಿ 2005ರಲ್ಲಿ ತೆರೆಕಂಡ ತಮಿಳಿನ ಕಸ್ತೂರಿ ಮಾನ್ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ಮಾಡಿದ್ದು ಕಡಿಮೆ ಸಂಖ್ಯೆಯ ಚಿತ್ರಗಳಾದರೂ, ಅಪರೂಪದ ನಟಿಯರ ಸಾಲಿನಲ್ಲಿ ಇವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ಸದ್ಯ ರಾಣಾ ದುಗ್ಗುಬಾಟಿ ಸಿನಿಮಾದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿಯ ನಿಜವಾದ ಹೆಸರು ಪಲ್ಲವಿ ಸೆಂತಮಾರೈ. ಮೂಲತಃ ಇವರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೊಟಗಿರಿಯವರು. ತಂದೆ ಸೆಂತಮಾರೈ ಕಣ್ಣನ್ ತಾಯಿ ರಾಧಾ. ಈ ದಂಪತಿ ಸಾಯಿ ಬಾಬಾ ಅವರ ದೊಡ್ಡ ಭಕ್ತರು. ಹಲವು ವರ್ಷಗಳಿಂದ ಸಾಯಿಬಾಬಾ ಟ್ರಸ್ಟ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಪಲ್ಲವಿ ಕೂಡ ಅಪ್ಪನೊಂದಿಗೆ ಸಾಯಿಬಾಬಾ ಆಶ್ರಮಕ್ಕೆ ಈಗಲೂ ಹೋಗುತ್ತಾರೆ. ಸಾಯಿಬಾಬಾ ಅವರ ಕಾರಣದಿಂದಾಗಿ ಪಲ್ಲವಿ ಅವರ ಹೆಸರಿನ ಹಿಂದೆ ‘ಸಾಯಿ’ ಪಲ್ಲವಿ ಎಂದು ಹೆಸರು ಸೇರಿಕೊಂಡಿದೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

    ಈವತ್ತಿಗೂ ಅಪ್ಪ ಅಮ್ಮನೊಂದಿಗೆ ಸಾಯಿ ಬಾಬಾ ದೇವಸ್ಥಾನಕ್ಕೆ ಪಲ್ಲವಿ ತಪ್ಪದೇ ಹೋಗುತ್ತಾರೆ. ಅಲ್ಲಿನ ಆಶ್ರಮಗಳಲ್ಲಿ ಸೇವೆ ಮಾಡುತ್ತಾರೆ. ನಿತ್ಯವೂ ಸಾಯಿಯನ್ನು ನೆನೆಯುತ್ತಾರಂತೆ ಸಾಯಿ ಪಲ್ಲವಿ.

  • ಸಾಯಿ ಪಲ್ಲವಿ ತುಂಬಾ ಕ್ಯೂಟ್ ಇದ್ದಾರಲ್ವಾ?: ರಶ್ಮಿಕಾ ಮಂದಣ್ಣ

    ಸಾಯಿ ಪಲ್ಲವಿ ತುಂಬಾ ಕ್ಯೂಟ್ ಇದ್ದಾರಲ್ವಾ?: ರಶ್ಮಿಕಾ ಮಂದಣ್ಣ

    ಹೈದರಾಬಾದ್: ನಟಿ ಮಣಿಯರನ್ನು ಅಭಿಮಾನಿಗಗಳು ಹೊಗಳುವುದು ಹೊಸೆತೇನು ಅಲ್ಲ. ಆದರೆ ಒಬ್ಬ ನಟಿ ಇನ್ನೊಬ್ಬ ನಟಿಯ ಸೌಂದರ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿವುದು ಸಿನಿಮಾ ರಂಗದಲ್ಲಿ ಸ್ವಲ್ಪ ಕಡಿಮೆ ಎಂದರೆ ತಪ್ಪಾಗಲಾರಾದು. ಹೌದು ನಟಿ ರಶ್ಮಿಕಾ ಮಂದಣ್ಣ, ಟಾಲಿವುಡ್ ನಟಿ ಸಾಯಿ ಪಲ್ಲವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಸುದ್ದಿಯಾಗಿದ್ದಾರೆ.

    ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಆಡವಾಳ್ಳು ಮೀಕು ಜೋಹರ್ಲು ಚಿತ್ರದದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗೆ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಸಾಯಿಪಲ್ಲವಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ಚಿತ್ರದ ನಾಯಕಿ ರಶ್ಮಿಕಾ, ಸಾಯಿ ಪಲ್ಲವಿಯನ್ನು ಕೊಂಡಾಡಿದ್ದಾರೆ.

    ಈವರೆಗೂ ನೀವು ಏನೆಲ್ಲಾ ಮಾಡಿದ್ದೀರೋ ಅದೆಲ್ಲವನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಆ ಕಾರಣಕ್ಕೆ ಇಷ್ಟೆಲ್ಲ ಪ್ರೀತಿಯನ್ನು ನೀವು ಗಳಿಸಿದ್ದೀರಿ. ನಿಮ್ಮ ಉಪಸ್ಥಿತಿಯಿಂದ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬಂದಿದೆ. ಸಾಯಿ ಪಲ್ಲವಿ ಅವರು ತುಂಬ ಕ್ಯೂಟ್ ಇದ್ದಾರಲ್ವಾ? ಎಂದು ಹೇಳುತ್ತಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಮೀಕು ಜೋಹಾರ್ಲು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 4 ರಂದು ಬಿಡುಗಡೆಯಾಗುತ್ತಿದೆ. ತಿರುಮಲ ಕಿಶೋರ್ ನಿರ್ದೇಶನದ ಈ ಚಿತ್ರವನ್ನು ಎಸ್‍ಎಲ್‍ವಿ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ಸುಧಾಕರ್ ಚೆರುಕುರಿ ನಿರ್ಮಿಸಿದ್ದಾರೆ.

  • ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ

    ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿದ ಸಾಯಿ ಪಲ್ಲವಿ

    ಹೈದರಾಬಾದ್: ಟಾಲಿವುಡ್ ನಟಿ ಸಾಯಿ ಪಲ್ಲವಿ ಬುರ್ಖಾ ಧರಿಸಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಕುಳಿತು ಶ್ಯಾಮ್ ಸಿಂಗ್ ರಾಯ್ ಸಿನಿಮಾವನ್ನು ವೀಕ್ಷಿಸಿದ್ದಾರೆ.

    ತನ್ನ ಸಿನಿಮಾವನ್ನು ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ವೀಕ್ಷಿಸಲು ಬಯಸಿದ್ದರು. ಆದ್ದರಿಂದ ಅವರು ಥಿಯೇಟರ್‍ಗೆ ರಹಸ್ಯವಾಗಿ ಬುರ್ಖಾ ಧರಿಸಿ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ಪ್ರದರ್ಶನ ಸಮಯದಲ್ಲಿ ಅವರ ಅಭಿಮಾನಿಗಳು ನೀಡುವ ಪ್ರತಿಕ್ರಿಯೆಗಳನ್ನು ವೀಕ್ಷಿಸಿದರು. ಇದನ್ನೂ ಓದಿ: ಬಂಡೀಪುರ ಸಫಾರಿಗೆ ಪ್ರವಾಸಿಗರ ದಂಡು- ರೆಸಾರ್ಟ್‍ಗಳೆಲ್ಲ ಹೌಸ್ ಫುಲ್

     

    View this post on Instagram

     

    A post shared by @filmy_ka_adda

    ಈ ಕುರಿತು ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಟಿ ಸಾಯಿ ಪಲ್ಲವಿ ಬುರ್ಖಾ ಧರಿಸಿ ಥಿಯೇಟರ್‍ಗೆ ಪ್ರವೇಶಿಸಿ ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ. ಬುರ್ಖಾ ಧರಿಸಿಕೊಂಡು ಬಂದ ಕಾರಣ ಸಾಯಿ ಪಲ್ಲವಿ ಅವರನ್ನು ಪ್ರೇಕ್ಷಕರು ಗುರುತಿಸಲು ಸಾಧ್ಯವಾಗಲಿಲ್ಲ. ಬುರ್ಖಾ ಧರಿಸಿ ಸಿನಿಮಾ ನೋಡುತ್ತಿರುವ ಸಂಪೂರ್ಣ ವೀಡಿಯೋವನ್ನು ಫಿಲ್ಮಿ ಕಾ ಅಡ್ಡ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮನೆಗೆ ಹೋಗುವ ಮುನ್ನ ಬುರ್ಖಾದ ಮುಖಗವಚವನ್ನು ತೆರೆದು ಮುಖ ತೋರಿಸಿ ನಂತರ ತಮ್ಮ ಕಾರಿನಲ್ಲಿ ಹೋಗಿದ್ದಾರೆ.

    ಶ್ಯಾಮ್ ಸಿಂಗ ರಾಯ್ ನಲ್ಲಿನ ತನ್ನ ನೃತ್ಯ ಪ್ರದರ್ಶನದ ಸಮಯದಲ್ಲಿ ಪ್ರೇಕ್ಷಕರು ಹರ್ಷೋದ್ಗಾರ ಮಾಡುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ತುಂಬಾ ಜನಸಂದಣಿ ಇದ್ದರೂ ಸಿನಿಮಾ ನೋಡುತ್ತಿದ್ದ ಅವರನ್ನು ಯಾರೂ ಗುರುತಿಸಲಿಲ್ಲ.

  • ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ನಾಗಚೈತನ್ಯ ‘ಲವ್ ಸ್ಟೋರಿ’ ಲೀಕ್ ಆಯ್ತು

    ಚೆನ್ನೈ: ಟಾಲಿವುಡ್ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದೆ.

    ಫುಲ್ ಎಚ್‍ಡಿ ಕ್ವಾಲಿಟಿ ಸಿನಿಮಾವನ್ನು ತಮಿಳುರಾಕರ್ಸ್ ತಂಡ ಲೀಕ್ ಮಾಡಿದ್ದು ಟೆಲಿಗ್ರಾಂನಲ್ಲಿ ಸಿಗುತ್ತಿರುವ ಚಿತ್ರ ತಂಡಕ್ಕೆ ಶಾಕ್ ನೀಡಿದೆ.

    ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ 24ರಂದು ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರ ರಿಲೀಸ್‍ಗೂ ಮುನ್ನ ತೆಲುಗು ಚಿತ್ರ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಇದನ್ನೂ ಓದಿ: ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಉಪಾಧ್ಯಕ್ಷರಾದ ಕನ್ನಡತಿ

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ನಟಿಸಿರುವ ಈ ಚಿತ್ರ ರೋಮ್ಯಾಂಟಿಕ್ ಆಗಿದ್ದು, ಜಾತಿ, ವರ್ಗ ವಿಭಜನೆಯಂತಹ ಕೆಲವು ಪ್ರಬುದ್ಧ ವಿಷಯಗಳನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ನಾಯಕ – ನಾಯಕಿ ಪ್ರೀತಿಯಲ್ಲಿ ಬೀಳುವ, ಅದನ್ನು ಕುಟುಂಬ ವಿರೋಧಿಸುವ ಹಲವು ಅಂಶಗಳನ್ನು ಒಳಗೊಂಡಿದ್ದು, ಫುಲ್ ಪ್ಯಾಕ್ ಮೂವಿ.

    ಈ ಸಿನಿಮಾ ರಿಲೀಸ್ ಆಗಿ 2 ದಿನಗಳಷ್ಟೇ ಕಳೆದಿದೆ. ಈ ನಡುವೆಯೇ 10 ಕೋಟಿ ರೂ. ಗಳಿಸಿತ್ತು. ಆದರೆ ಈಗ ಈ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡಲಾಗಿದ್ದು, ಚಿತ್ರತಂಡಕ್ಕೆ ಹೊಡೆತ ಬಿದ್ದಿದೆ. ಇದನ್ನೂ ಓದಿ: 2022ರ ಪ್ರೇಮಿಗಳ ದಿನ ಬರಲಿದೆ ‘ಲಾಲ್ ಸಿಂಗ್ ಚಡ್ಡಾ’

    ಈ ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದು, ಕೊರೊನಾ ನಡುವೆಯೂ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಈಗ ‘ಲವ್ ಸ್ಟೋರಿ’ ಸಿನಿಮಾ ಪೈರಸಿಯಾಗಿದ್ದು, ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

  • ಸ್ಯಾಂಡಲ್‍ವುಡ್‍ಗೆ ಸಾಯಿ ಪಲ್ಲವಿ ಎಂಟ್ರಿ

    ಸ್ಯಾಂಡಲ್‍ವುಡ್‍ಗೆ ಸಾಯಿ ಪಲ್ಲವಿ ಎಂಟ್ರಿ

    ಬೆಂಗಳೂರು: ಬಹುಭಾಷಾ ನಟಿ ಸಾಯಿ ಪಲ್ಲವಿ ಟಾಲಿವುಡ್‍ನಲ್ಲಿ ಸಖತ್ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿದ್ದಾರೆ. ತಮ್ಮ ಸಹಜ ಸೌಂದರ್ಯದ ಮೂಲಕವೇ ಜನಮನ ಗೆದ್ದಿರುವ ಸಾಯಿ ಪಲ್ಲವಿ ಇದೀಗ ಸ್ಯಾಂಡಲ್‍ವುಡ್‍ಗೂ ಎಂಟ್ರಿ ಕೊಡುತ್ತಿದ್ದಾರೆ.

    ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ರಿಲೀಸ್ ಡೇಟ್ ಸಹ ಅನೌನ್ಸ್ ಆಗಿದ್ದು, ಸೆಪ್ಟೆಂಬರ್ 10ಕ್ಕೆ ತೆರೆ ಕಾಣುತ್ತಿದೆ. ಇದೆಲ್ಲದರ ಮಧ್ಯೆ ಕನ್ನಡಿಗರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದ್ದು, ಸಹಜ ಸುಂದರಿ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ 

    ಸಿನಿಮಾ ಕುರಿತು ಮಂಸೋರೆ ಸಾಯಿ ಪಲ್ಲವಿ ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದು, ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಂಸೋರೆ ಸ್ಟೋರಿ ಕೇಳಿ ಸಾಯಿ ಪಲ್ಲವಿ ಸಖತ್ ಖುಷಿಪಟ್ಟಿದ್ದಾರೆ. ಫೈನಲ್ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದಾರೆ. ವಿವಾಹಕ್ಕೋಸ್ಕರ ಬ್ರೇಕ್ ತೆಗೆದುಕೊಂಡಿದ್ದೆ. ಆದಷ್ಟು ಬೇಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಆ್ಯಕ್ಟ್ 1978 ಸಿನಿಮಾ ಮೂಲಕ ನಿರ್ದೇಶಕ ಮಂಸೂರೆ ಜನಪ್ರಿಯರಾಗಿದ್ದಾರೆ. ಕೊರೊನಾ ಮೊದಲ ಅಲೆಯ ಲಾಕ್‍ಡೌನ್ ಬಳಿಕ ಸಿನಿಮಾ ರಿಲೀಸ್ ಮಾಡಿ ಸಕ್ಸೆಸ್ ಆಗಿದ್ದಾರೆ. ಈ ಸಿನಿಮಾ ಒಳ್ಳೆಯ ಗಳಿಕೆ ಕಂಡಿತ್ತು. ಇದು ಟಾಲಿವುಡ್ ಅಂಗಳಕ್ಕೂ ತಲುಪಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.

    ಹರಿವು, ನಾತಿಚರಾಮಿ ಹಾಗೂ ಇತ್ತೀಚೆಗೆ ಆ್ಯಕ್ಟ್ 1978 ಸಿನಿಮಾ ಮಂಸೋರೆ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಇದೆಲ್ಲದರ ಮಧ್ಯೆ ಬ್ರೇಕ್ ಪಡೆದಿದ್ದ ಮಂಸೋರೆ ಆಗಸ್ಟ್ 15ರಂದು ತಮ್ಮ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ. ಈ ಮೂಲಕ ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಭಾಗವಹಿಸಿದ್ದರು. ಇದೀಗ ವಿವಾಹದ ಬಳಿಕ ಮತ್ತೆ ಕೆಲಸದಲ್ಲಿ ತೊಡಗಿದ್ದು, ಸಾಯಿ ಪಲ್ಲವಿ ಅವರಿಗೆ ಕರೆ ಮಾಡಿ ಕಥೆ ಹೇಳಿದ್ದಾರೆ. ಆದರೆ ಕಥೆ ಹೇಗಿದೆ, ಸಾಯಿ ಪಲ್ಲವಿ ಒಪ್ಪುತ್ತಾರಾ ಕಾದು ನೋಡಬೇಕಿದೆ.

  • ಮೆಹಂದಿ ಹಾಕಿ ಮದುವೆಗೆ ಸಿದ್ಧವಾದ ಸಾಯಿ ಪಲ್ಲವಿ

    ಮೆಹಂದಿ ಹಾಕಿ ಮದುವೆಗೆ ಸಿದ್ಧವಾದ ಸಾಯಿ ಪಲ್ಲವಿ

    ಬೆಂಗಳೂರು: ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಫೋಟೋ ನೋಡಿ ಅಭಿಮಾನಿಗಳಿಗೆ ನಟಿ ಮದುವೆಯಾಗುತ್ತಿದ್ದಾರಾ? ಎಂದು ಪ್ರಶ್ನೆ ಮೂಡಿದೆ. ಇದನ್ನೂ ಓದಿ:  ಮದುವೆ ಸ್ಕ್ವಾಡ್ ಕನ್ನಡದಲ್ಲೇ ಬರೆದು, ಕಲರ್‍ಫುಲ್ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಲಾಕ್‍ಡೌನ್‍ನಲ್ಲಿ ಕೆಲವು ದಿನಗಳಿಂದ ಸಾಯಿ ಪಲ್ಲವಿ ಅವರು ತಮ್ಮ ಕಸಿನ್ಸ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕ್ಯಾಂಡಿಡ್ ಗ್ರೂಪ್ ಫೋಟೋಗಳನ್ನು ಹಂಚಿಕೊಂಡಿದ್ದ ಅವರು ಮದುವೆ ಸ್ಕ್ವಾಡ್ ಎಂದು ಕ್ಯಾಪ್ಷನ್ ನೀಡಿದ್ದರು. ಈಗ ಮೆಹಂದಿ ಸಂಭ್ರಮದ ಕ್ಷಣಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಹಲವರು ಒಮ್ಮೆಲೇ ಅಚ್ಚರಿ ಪಟ್ಟಿದ್ದಾರೆ. ಸೈಲೆಂಟ್ ಆಗಿ ಸಾಯಿ ಪಲ್ಲವಿ ಹಸೆಮಣೆ ಏರಬಹುದೇ ಎಂಬ ಗುಮಾನಿ ಅನೇಕರಿಗೆ ಒಂದು ಕ್ಷಣ ಕಾಡಿರಬಹುದು. ಆದರೆ ಅವರು ಈ ರೀತಿ ಮೆಹಂದಿ ಹಚ್ಚಿಕೊಂಡು ಸಜ್ಜಾಗಿರುವುದು ಕಸಿನ್ ಮದುವೆಗೆ ಎನ್ನಲಾಗಿದೆ. ಇದನ್ನೂ ಓದಿ:  ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ: ಮಿಲ್ಕಿ ಬ್ಯೂಟಿ ತಮನ್ನಾ

     

    View this post on Instagram

     

    A post shared by Sai Pallavi (@saipallavi.senthamarai)

    ಲಾಕ್‍ಡೌನ್‍ನಲ್ಲಿ ಅನೇಕ ನಟಿಯರು ಸದ್ದಿಲ್ಲದೇ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಣಿತಾ ಸುಭಾಷ್, ಯಾಮಿ ಗೌತಮ್ ಮುಂತಾದವರು ಸೈಲೆಂಟ್ ಆಗಿ ಹಸೆಮಣೆ ಏರಿದ್ದರು. ಹೆಚ್ಚಾಗಿ ಸೆಲೆಬ್ರಿಟಿಗಳು ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಮೆಹಂದಿ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಂತ ಸ್ವತಃ ಸಾಯಿ ಪಲ್ಲವಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿಲ್ಲ. ಸದ್ಯ ಅವರು ಸಂಬಂಧಿಕರ ಮದುವೆಗಾಗಿ ಸಜ್ಜಾಗಿದ್ದಾರೆ.

     

    View this post on Instagram

     

    A post shared by Sai Pallavi (@saipallavi.senthamarai)

    ಸಿನಿಮಾದಿಂದ ಭಾರಿ ಜನಪ್ರಿಯತೆಗಳಿಸಿದ ಅವರು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮಲಯಾಳಂನ ಪ್ರೇಮಂ ಸಿನಿಮಾದಿಂದ ಭಾರಿ ಜನಪ್ರಿಯತೆ ಗಳಿಸಿದ ಅವರು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಲವ್ ಸ್ಟೋರಿ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ, ವಿರಾಟ ಪವರ್ಂ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ನಾನಿ ಜೊತೆ ನಟಿಸುತ್ತಿರುವ ಶ್ಯಾಮ್ ಸಿಂಗ್ ರಾಯ್ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.

  • ಮದುವೆ ಸ್ಕ್ವಾಡ್ ಕನ್ನಡದಲ್ಲೇ ಬರೆದು, ಕಲರ್‍ಫುಲ್ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಮದುವೆ ಸ್ಕ್ವಾಡ್ ಕನ್ನಡದಲ್ಲೇ ಬರೆದು, ಕಲರ್‍ಫುಲ್ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಚೆನ್ನೈ: ನಟಿ ಸಾಯಿಪಲ್ಲವಿ ಲಾಕ್‍ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಸಂಬಂಧಿಕರ ಮದುವೆ ಸಮಾರಂಭಗಳಲ್ಲಿ ಭಾಗವಹಿಸಿ, ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆನಂದದ ಕ್ಷಣಗಳನ್ನು ಕಳೆಯುತ್ತಿದ್ದಾರೆ.

    ಈ ಫೋಟೋಗಳನ್ನು ಇದೀಗ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಚಿತ್ರಗಳನ್ನು ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಸಾಯಿ ಪಲ್ಲವಿ ಕನ್ನಡ ಬಳಕೆ ಬಗ್ಗೆ ಕನ್ನಡಿಗರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Sai Pallavi (@saipallavi.senthamarai)

    ಸಹೋದರಿ ಪೂಜಾ ಕಣ್ಣನ್ ಹಾಗೂ ಇತರ ಸೋದರ ಸಂಬಂಧಿಗಳೊಂದಿಗೆ ಫುಲ್ ಮಜಾ ಮಾಡಿರುವ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ. ಮೇಕಪ್ ಹಾಕಿಕೊಳ್ಳದೆ, ಜೀನ್ಸ್ ಹಾಗೂ ಸ್ಲೀವ್‍ಲೆಸ್ ಟಿ ಶರ್ಟ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಒಟ್ಟು ಎರಡು ಪೋಸ್ಟ್ ಮಾಡಿದ್ದು, ಒಂದು ಪೋಸ್ಟ್ ನಲ್ಲಿ ‘ಮದುವೆ ಸ್ಕ್ವಾಡ್’ ಎಂದು ಬರೆದಿದ್ದಾರೆ. ಈ ಮೂಲಕ ಮದುವೆ ಕನ್ನಡ ಪದವನ್ನು ಬಳಸಿದ್ದಾರೆ.

     

    View this post on Instagram

     

    A post shared by Sai Pallavi (@saipallavi.senthamarai)

    ಮದುವೆ ಎಂಬ ಪದ ಬಳಸಿದ್ದಕ್ಕೆ ಹಲವು ಅಭಿಮಾನಿಗಳು ಸಂಬಂಧಿಕರ ವಿವಾಹದಲ್ಲಿ ಭಾಗವಹಿಸಿರಬಹುದು ಎಂದು ಊಹಿಸಿದ್ದಾರೆ. ಸಾಯಿ ಪಲ್ಲವಿ ಅವರು ಮೂಲತಃ ತಮಿಳುನಾಡಿನ ನಿಲ್ಗಿರಿಸ್ ಜಿಲ್ಲೆಯವರಾಗಿದ್ದು, ಇವರ ಮಾತೃ ಭಾಷೆ ಬಡಗ. ಆದರೆ ಕನ್ನಡದಲ್ಲಿ ಮದುವೆ ಎಂದು ಬರೆದುಕೊಂಡಿರುವ ಬಗ್ಗೆ ಫ್ಯಾನ್ಸ್ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

     

    View this post on Instagram

     

    A post shared by Sai Pallavi (@saipallavi.senthamarai)

    ಇತ್ತೀಚೆಗೆ ಸಾಯಿ ಪಲ್ಲವಿ ಸ್ಕೈ ಬ್ಲ್ಯೂ ಸೀರೆಯುಟ್ಟು ಮಿಂಚಿದ್ದರು. ಈ ಫೋಟೋಗಳನ್ನು ಸಹ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪೋಸ್ಟ್ ನೋಡಿದ ಅಭಿಮಾನಿಗಳು ಲೈಕ್, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  • ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ದಾಖಲೆ ಬರೆದ ರೌಡಿ ಬೇಬಿ ಹಾಡು- ಸಾಯಿ ಪಲ್ಲವಿ ಅಭಿಮಾನಿಗಳು ಗರಂ

    ಚೆನ್ನೈ: ಧನಷ್ ಹಾಗೂ ಸಾಯಿ ಪಲ್ಲವಿ ಅಭಿನಯದ ಮಾರಿ 2 ಸಿನಿಮಾ ಅಷ್ಟೇನು ಯಶಸ್ಸು ಕಾಣದಿದ್ದರೂ ರೌಡಿ ಬೇಬಿ ಹಾಡು ಮಾತ್ರ ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಹೀಗಾಗಿ 100 ಕೋಟಿ ವ್ಯೂ ಪಡೆದಿದ್ದು, ಚಿತ್ರತಂಡ ಸಂಭ್ರಮಿಸುತ್ತಿದೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಾಜಿ ಮೋಹನ್ ನಿರ್ದೇಶನದ ಮಾರಿ 2 ಸಿನಿಮಾದ ರೌಡಿ ಬೇಬಿ ಹಾಡನ್ನು ಯುವನ್ ಶಂಕರ್ ರಾಜಾ ಕಂಪೋಸ್ ಮಾಡಿದ್ದು, ಸಖತ್ ಹಿಟ್ ಆಗಿದೆ. ಇದೀಗ ಯೂಟ್ಯೂಬ್‍ನಲ್ಲಿ 1 ಬಿಲಿಯನ್ ವ್ಯೂವ್ಸ್ ಸಹ ಪಡೆದಿದೆ. ಚಿತ್ರತಂಡ ಇದರ ಸಂಭ್ರಮಾಚರಣೆ ಮಾಡಿದೆ. ಅಲ್ಲದೆ ಧನುಶ್ ಅವರ ವಂಡರ್‍ಬಾರ್ ಫಿಲಂಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಸಂತಸ ವ್ಯಕ್ತಪಡಿಸಿದೆ.

    ಕಾಮನ್ ಡಿಪಿ(ಸಿಡಿಪಿ) ಮೂಲಕ ರೌಡಿಬೇಬಿಹಿಟ್ಸ್1ಬಿಲಿಯನ್‍ವ್ಯೂವ್ಸ್ ಹ್ಯಾಷ್ ಟ್ಯಾಗ್‍ನೊಂದಿಗೆ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಕೇವಲ ಧನುಷ್ ಫೋಟೋ ಮಾತ್ರವಿದ್ದು, ಸಾಯಿಪಲ್ಲವಿ ಅವರನ್ನು ಸೈಡ್‍ಲೈನ್ ಮಾಡಲಾಗಿದೆ. ಹೀಗಾಗಿ ಅವರ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧನುಷ್ ಉತ್ತಮ ಡ್ಯಾನ್ಸರ್ ಆಗಿರಬಹುದು ಆದರೆ ಸಾಯಿ ಪಲ್ಲವಿ ಹಾಗೂ ಯುವನ್ ಅವರ ಸಂಗೀತದಿಂದ ಹಾಡು ಹಿಟ್ ಆಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

    ಇನ್ನೂ ಕೆಲ ಅಭಿಮಾನಿಗಳು ಸಾಯಿ ಪಲ್ಲವಿ ಮಾತ್ರ ಇರುವ ಸಿಡಿಪಿಯನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

    ರೌಡಿ ಬೇಬಿ ಹಾಡಿನಲ್ಲಿ ಧನುಷ್ ಜೊತೆಗೆ ಸಾಯಿಪಲ್ಲವಿ ಸಹ ಅಷ್ಟೇ ಪವರ್‍ಫುಲ್ ಸ್ಟೆಪ್ ಹಾಕಿದ್ದು, ಭರ್ಜರಿ ಡ್ಯಾನ್ಸ್ ಮಾಡಿದ್ದರು. ಇಬ್ಬರ ಕಾಂಬಿನೇಶನ್ ಹಾಗೂ ಯುವನ್ ಶಂಕರ್ ಅವರ ಕಂಪೋಸ್, ಪ್ರಭುದೇವ್ ಹಾಗೂ ಜಾನಿ ಕೋರಿಯೋಗ್ರಫಿಯಲ್ಲಿ ಸಾಂಗ್ ಮೂಡಿಬಂದಿತ್ತು. ಈಗ ಸಂಭ್ರಮದ ವೇಳೆ ಇವರ್ಯಾರ ಚಿತ್ರ ಹಾಕದೇ, ಕೇವಲ ಧನುಷ್ ಫೊಟೋ ಹಾಕಿದ್ದಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದಾರೆ.

    2015ರಲ್ಲಿ ಬಿಡುಗಡೆಯಾದ ಮಾರಿ ಸಿನಿಮಾ ಸಖತ್ ಹಿಟ್ ಆಗಿತ್ತು. ಹೀಗಾಗಿ ಈ ಸಿನಿಮಾದ ಸೀಕ್ವೆಲ್ ಎಂಬಂತೆ ಮಾರಿ 2 ಸಿನಿಮಾ ಮಾಡಲಾಗಿತ್ತು. ಎರಡು ವರ್ಷಗಳ ಹಿಂದೆ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರವನ್ನು ಸ್ವತಃ ಧನುಷ್ ಅವರು ತಮ್ಮ ಸ್ವಂತ ಬ್ಯಾನರ್‍ನಲ್ಲಿ ವಂಡರ್‍ಬಾರ್ ಫಿಲಂಸ್ ಅಡಿ ನಿರ್ಮಿಸಿದ್ದರು. ಆದರೆ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಆದರೆ ರೌಡಿ ಬೇಬಿ ಹಾಡು ಮಾತ್ರ ಭರ್ಜರಿ ಸದ್ದು ಮಾಡಿತ್ತು.

  • ಪುಟ್ಟ ಮಕ್ಕಳಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ರೌಡಿ ಬೇಬಿ

    ಪುಟ್ಟ ಮಕ್ಕಳಿಗೆ ಮೆಹಂದಿ ಹಾಕಿ ಸಂಭ್ರಮಿಸಿದ ರೌಡಿ ಬೇಬಿ

    ಚೆನ್ನೈ: ನಟಿ ಸಾಯಿ ಪಲ್ಲವಿ ನಿಸರ್ಗದೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ಗುಡ್ಡ ಬೆಟ್ಟ ಅಲೆಯುತ್ತಾರೆ ಎಂಬುದು ತಿಳಿದಿರುವ ವಿಚಾರ. ಆದರೆ ಅವರು ಮಕ್ಕಳೊಂದಿಗೂ ಅಷ್ಟೇ ಚೆಂದ ಬೆರೆಯುತ್ತಾರೆ ಎಂಬುದಕ್ಕೆ ಅವರ ಇನ್‍ಸ್ಟಾಗ್ರಾಮ್ ಪೋಸ್ಟ್ ಸಾಕ್ಷಿಯಾಗಿದೆ.

    ಲಾಕ್‍ಡೌನ್ ಬಳಿಕ ಸಾಯಿ ಪಲ್ಲವಿ ಯಾವುದೇ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಸಾಯಿ ಪಲ್ಲವಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು. ಲಾಕ್‍ಡೌನ್ ಬಳಿಕ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸಾಯಿ ಪಲ್ಲವಿ ರೌಡಿ ಬೇಬಿ ಎಂದೇ ಫೇಮಸ್, ಅವರ ವಿಭಿನ್ನ ಸಿನಿಮಾ ಹಾಗೂ ಡ್ಯಾನ್ಸ್ ಗಳಿಗಾಗಿಯೇ ಅಭಿಮಾನಿ ಬಳಗವಿದೆ.

    ಫಿದಾ ಸಿನಿಮಾ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿರುವ ಸಾಯಿ ಪಲ್ಲವಿ, ಮಲಯಾಳಂ, ತೆಲುಗು, ತಮಿಳು, ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಿದಾ ಬಳಿಕ ಮಿಡ್ಲ್ ಕ್ಲಾಸ್ ಅಬ್ಬಾಯ್, ದಿಯಾ, ಮಾರಿ-2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಲವ್ ಸ್ಟೋರಿ, ವಿರಾಟ ಪರ್ವಂ ಸಿನಿಮಾಗಳು ಇನ್ನೂ ಚಿತ್ರೀಕರಣ ಹಂತದಲ್ಲಿವೆ. ಲಾಕ್‍ಡೌನ್ ಬಳಿಕ ಮನೆಯಲ್ಲೇ ಕಾಲ ಕಳೆಯುತ್ತಿರುವ ಸಾಯಿ ಪಲ್ಲವಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕಾಡು ಅಲೆಯುತ್ತಿದ್ದಾರೆ. ಅಲ್ಲದೆ ಮಕ್ಕಳೊಂದಿಗೆ ಸೇರುತ್ತಿದ್ದಾರೆ.

    ಮಕ್ಕಳಿಗೆ ಮೆಹಂದಿ ಹಾಕುವ ಫೋಟೋ ಹಾಗೂ ವಿಡಿಯೋ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಹ್ಯಾಪಿ ಕ್ಲೇಂಟ್ಸ್, ಪಿಪ್ರಿ ಪಿಲ್ಲಾಸ್ ಎಂದು ಬರೆದುಕೊಂಡಿದ್ದಾರೆ. ಮಕ್ಕಳೊಂದಿಗೆ ಬೆರೆತಿರುವ ಈ ವಿಡಿಯೋ ನೋಡಿದ ಸಮಂತಾ ದ್ಯಾಟ್ಸ್ ಸೋ ಕ್ಯೂಟ್ ಎಂದು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಹಲವು ಜನ ಪ್ರತಿಕ್ರಿಯಿಸುತ್ತಿದ್ದು, ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.

     

    View this post on Instagram

     

    Happy Clients♥️Pipri Pillas♥️

    A post shared by Sai Pallavi (@saipallavi.senthamarai) on

    ಸಾಯಿ ಮಲ್ಲವಿ ಬಿಡುವಿದ್ದಾಗಲೆಲ್ಲ ಕಾಡು ಸುತ್ತುವುದು, ಇಲ್ಲವೇ ಮಕ್ಕಳೊಂದಿಗೆ ಕಾಲ ಕಳೆಯುವುದನ್ನು ಮಾಡುತ್ತಾರೆ. ನಿಸರ್ಗವನ್ನು ತುಂಬಾ ಪ್ರೀತಿಸುತ್ತಾರೆ. ಇತ್ತೀಚೆಗೆ ಮರದ ಕೊಂಬೆಯನ್ನು ಹಿಡಿದು ಝರಿಯ ಬಳಿ ನೇತಾಡುವ ಫೋಟೋ ಸಹ ಪೋಸ್ಟ್ ಮಾಡಿದ್ದರು. ಹೀಗೆ ಲಾಕ್‍ಡೌನ್ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಭಿಮಾನಿಗಳು ಸಹ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚಿನ ಮಾಹಿತಿ ಪ್ರಕಾರ ನಟಿ ಸೌಂದರ್ಯ ಜೀವನಾಧಾರಿತ ಚಿತ್ರದಲ್ಲಿ ಸಹ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಹ ಲಭ್ಯವಾಗಿದೆ. ಆದರೆ ಈ ಕುರಿತು ಇನ್ನೂ ಅಂತಿಮವಾಗಿಲ್ಲ. ಅಂದಹಾಗೆ ಸೌಂದರ್ಯ ಜೀವನಾಧಾರಿತ ಸಿನಿಮಾವನ್ನು ತೆಲುಗಿನಲ್ಲಿ ಮಾಡಲು ನಿರ್ಧರಿಸಲಾಗಿದೆ. ಸೌಂದರ್ಯ ಕುಟುಂಬದ ಒಪ್ಪಿಗೆಯನ್ನು ಚಿತ್ರ ತಂಡ ಪಡೆಯುತ್ತಿದೆ. ಒಪ್ಪಿಗೆ ಸಿಕ್ಕ ಬಳಿಕ ಸಿನಿಮಾ ಸೆಟ್ಟೇರಲಿದೆ. ಈ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಸಿನಿಮಾದಲ್ಲಿ ಯಾರು ನಟಿಸಬೇಕು ಎಂಬ ಚರ್ಚೆ ನಡೆಯುತ್ತಿದ್ದು, ಸಾಯಿ ಪಲ್ಲವಿ ಸೂಕ್ತ ಎನ್ನಲಾಗಿದೆ. ಫಿದಾ ಸಿನಿಮಾ ಬಳಿಕ ಸಾಯಿ ಪಲ್ಲವಿಗೆ ತೆಲುಗು ಅಭಿಮಾನಿಗಳು ಹೆಚ್ಚಿದ್ದಾರೆ. ಅಲ್ಲದೆ ಅದ್ಭುತ ನೃತ್ಯಗಾರ್ತಿ ಕೂಡ ಹೀಗಾಗಿ ಅವರೇ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.