Tag: ಸಾಯಿ ಪಲ್ಲವಿ

  • ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ‘ಪುಷ್ಪಾ 2’ ಟೀಮ್ ಸೇರಿಕೊಂಡ ನಟಿ ಸಾಯಿ ಪಲ್ಲವಿ: ರಶ್ಮಿಕಾ ಮಂದಣ್ಣ ಪಾತ್ರವೇನು?

    ಅಲ್ಲು ಅರ್ಜುನ್ ಮುಖ್ಯ ಭೂಮಿಕೆಯ ಪುಷ್ಪಾ 2 (Pushpa 2) ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಈ ಸಿನಿಮಾಗೆ ಅಚ್ಚರಿ ಎನ್ನುವಂತೆ ನಟಿ ಸಾಯಿ ಪಲ್ಲವಿಯ (Sai Pallavi) ಎಂಟ್ರಿ ಆಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಹಾಗಂತ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಈ ಸಿನಿಮಾದಿಂದ ಕೈ ಬಿಡಲಾಗಿದೆಯಾ ಎನ್ನುವ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ರಶ್ಮಿಕಾ ಮಂದಣ್ಣ ಜೊತೆ ಸಾಯಿ ಪಲ್ಲವಿ ಕೂಡ ಇರಲಿದ್ದಾರೆ ಎನ್ನುವುದು ಸಮಾಧಾನದ ಸಂಗತಿ.

    ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನ ‘ಪುಷ್ಪ’ ಸಿನಿಮಾ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಭಾರತದಲ್ಲಿ ಕೋಟಿ ಕೋಟಿ ಹಣವನ್ನು ಅದು ಬಾಚಿತ್ತು. ಅಲ್ಲು ಅರ್ಜುನ್ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಹಣ ತಂದುಕೊಟ್ಟ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಅದು ಪಾತ್ರವಾಗಿತ್ತು. ಈ ಸಿನಿಮಾದಿಂದ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ಹೆಚ್ಚಿಗೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಂಜು ಪಾವಗಡ ಮೇಲೆ ಅಮೂಲ್ಯ ಲವ್: ರಾಕೇಶ್ ಅಡಿಗ ಕಕ್ಕಾಬಿಕ್ಕಿ

    ಈ ಎಲ್ಲ ಗೆಲುವನ್ನು ಮುಂದಿಟ್ಟುಕೊಂಡು ಪುಷ್ಪ ತಂಡವು ಈ ಸಿನಿಮಾವನ್ನು ರಷ್ಯಾಯಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿತ್ತು. ಆ ದೇಶದ ಭಾಷೆಯಲ್ಲೇ ಡಬ್ ಮಾಡಿ, ರಿಲೀಸ್ ಕೂಡ ಮಾಡಿತ್ತು. ರಷ್ಯಾದಲ್ಲಿ ಈ ಸಿನಿಮಾಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಗಲಿದೆ ಎನ್ನುವ ಅಂದಾಜಿನಿಂದ ಇಡೀ ತಂಡವೂ ಅಲ್ಲಿಗೆ ಹೋಗಿ ಪ್ರಚಾರ ಕೂಡ ಮಾಡಿತ್ತು. ಆದರೆ, ರಷ್ಯಾ ಜನರು ಈ ಸಿನಿಮಾವನ್ನು ನಿರೀಕ್ಷಿತ ಮಟ್ಟದಲ್ಲಿ ಸ್ವೀಕರಿಸಿಲ್ಲ. ಅಂದುಕೊಂಡಷ್ಟೂ ಜನರು ಈ ಸಿನಿಮಾವನ್ನು ನೋಡಿಲ್ಲ ಎನ್ನಲಾಗುತ್ತಿದೆ.

    ಡಬ್ಬಿಂಗ್, ಪ್ರಚಾರಕ್ಕೆ ಮಾಡಿದ ಖರ್ಚು ಕೂಡ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ರಷ್ಯಾದಲ್ಲಿ ಈ ಸಿನಿಮಾ ಭಾರೀ ನಷ್ಟವನ್ನೇ ಅನುಭವಿಸಿದೆ. ಇಡೀ ತಂಡದ ಶ್ರಮ ಮಣ್ಣುಪಾಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಷ್ಯಾ ಜನರು ಈ ಸಿನಿಮಾವನ್ನು ಯಾಕೆ ಸ್ವೀಕರಿಸಿಲ್ಲ ಎನ್ನುವ ಕುರಿತು ಚಿತ್ರತಂಡ ತಲೆಕೆಡಿಸಿಕೊಂಡು ಕೂತಿದೆ. ಭಾರತದಲ್ಲಿ ಸಿಕ್ಕಿದ್ದ ಮಾನ ರಷ್ಯಾದಲ್ಲಿ ಕಳೆದುಕೊಂಡಂತಾಗಿದೆ ಪುಷ್ಪ ತಂಡ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್‌ನತ್ತ ರೌಡಿಬೇಬಿ ಸಾಯಿ ಪಲ್ಲವಿ

    ಬಾಲಿವುಡ್‌ನತ್ತ ರೌಡಿಬೇಬಿ ಸಾಯಿ ಪಲ್ಲವಿ

    ಸೌತ್ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ,(Sai Pallavi) `ಗಾರ್ಗಿ’ ಸಿನಿಮಾ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ರೌಡಿ ಬೇಬಿ ಬಾಲಿವುಡ್ (Bollywood) ಕಡೆ ಮುಖ ಮಾಡಿದ್ದಾರೆ. ಸೀತಾ ಮಾತೆ (Sita) ಪಾತ್ರ ಮಾಡುವ ಮೂಲಕ ಬಿಟೌನ್‌ಗೆ ಲಗ್ಗಿ ಇಡ್ತಿದ್ದಾರೆ.

    ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಸಾಯಿ ಪಲ್ಲವಿ, ಗ್ಲಾಮರ್‌ನಿಂದ ದೂರವಿದ್ದು, ನಟನೆಗೆ ಅವಕಾಶವಿರುವ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಯಿಪಲ್ಲವಿ ನಟಿಸಿರುವ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂತಹ ಸೌಂಡ್ ಮಾಡದೇ ಇದ್ದರೂ, ರೌಡಿ ಬೇಬಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾರಂಗವನ್ನೇ ನಟಿ ತೊರೆಯುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಬಾಲಿವುಡ್‌ಗೆ ಲಗ್ಗೆ ಇಡುವ ಮೂಲಕ ಎಲ್ಲಾ ಗಾಸಿಪ್‌ಗೂ ನಟಿ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ

    ಬಾಲಿವುಡ್‌ನ ನಿರ್ಮಾಪಕ ಮಧು ಮಂತೇನಾ ನಿರ್ಮಾಣದಲ್ಲಿ ರಾಮಾಯಣ (Ramayana) ಕಾವ್ಯವನ್ನ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಸೀತೆಯಾಗಿ ನಟಿಸಲು ಸಾಯಿ ಪಲ್ಲವಿಗೆ ಬುಲಾವ್ ಬಂದಿದೆ. ಈ ಹಿಂದೆ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಮತ್ತು ದೀಪಿಕಾ ಪಡುಕೋಣೆಗೆ ಕೇಳಲಾಗಿತ್ತಂತೆ, ಆದರೆ ಈಗ ಸಾಯಿಪಲ್ಲವಿನೇ ಸೀತಾ ಪಾತ್ರಕ್ಕೆ ಸೂಕ್ತ ಎಂದೇನಿಸಿ ಕೇಳಲಾಗಿದೆ.

    ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್,(Ranbir Kapoor) ರಾವಣನ ಪಾತ್ರಕ್ಕೆ ಹೃತಿಕ್ ರೋಷನ್ (Hrithik Roshan) ನಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಎಲ್ಲಾ ಓಕೆ ಆದರೆ 2023ರಲ್ಲಿ ಸೆಪ್ಟೆಂಬರ್ ಸಿನಿಮಾ ಸೆಟ್ಟೇರಲಿದೆ. ರಣ್‌ಬೀರ್, ಹೃತಿಕ್, ಸಾಯಿಪಲ್ಲವಿ ಈ ಮೂವರನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ರಂಗ ತೊರೆದು, ಕ್ಲಿನಿಕ್ ಮಾಡ್ತಾರಂತೆ ಖ್ಯಾತ ನಟಿ ಸಾಯಿ ಪಲ್ಲವಿ

    ಸಿನಿಮಾ ರಂಗ ತೊರೆದು, ಕ್ಲಿನಿಕ್ ಮಾಡ್ತಾರಂತೆ ಖ್ಯಾತ ನಟಿ ಸಾಯಿ ಪಲ್ಲವಿ

    ಕ್ಷಿಣದ ಖ್ಯಾತ ನಟಿ ಸಾಯಿ ಪಲ್ಲವಿ ಬಗ್ಗೆ ಮತ್ತೊಂದು ಗಾಸಿಪ್ ಹರಡಿದೆ. ಇವರ ಮುಖ್ಯ ಭೂಮಿಕೆಯ ಗಾರ್ಗಿ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಅಲ್ಲದೇ, ಸಾಯಿ ಪಲ್ಲವಿ ಅವರು ಕಾಶ್ಮೀರ ಹತ್ಯೆಯನ್ನು, ಗೋ ಹತ್ಯೆ ಮಾಡುವವರಿಗೆ ಹೋಲಿಸಿದರು ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರನ್ನು ಕೂಡ ನೀಡಲಾಯಿತು. ಇದರಿಂದ ಬೇಸತ್ತು, ಅವರು ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎನ್ನುವ ಸುದ್ದಿ ಹರಡಿದೆ.

    ಸಿನಿಮಾ ರಂಗದಲ್ಲಿ ಗಾಸಿಪ್ ಕಾಮನ್. ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರವಾಗುತ್ತಾರಾ ಎನ್ನುವುದು ಕೂಡ ಗಾಸಿಪ್ ಇರಬಹುದು ಎಂದೇ ನಂಬಲಾಗಿತ್ತು. ಆದರೆ, ಅವರು ಕ್ಲಿನಿಕ್ ತೆರೆಯುವ ಕುರಿತು ಮನೆಯಲ್ಲಿ ಚರ್ಚೆ ಮಾಡಿದ್ದರಿಂದ ಇದು, ಇಂದಲ್ಲ ನಾಳೆ ನಿಜವೂ ಆಗಬಹುದು ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಸಾಯಿ ಪಲ್ಲವಿ ಕೂಡ ತುಂಬಾ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದನ್ನೂ ಓದಿ:ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಸಾಯಿ ಪಲ್ಲವಿ ಉತ್ತಮ ನಟಿ. ದಕ್ಷಿಣದ ಸ್ಟಾರ್ ನಟಿಯರಿಗೆ ನಿದ್ದೆ ಕೆಡಿಸಿದಾಕೆ. ಅತೀ ಕಡಿಮೆ ಸಮಯದಲ್ಲೇ ಅತ್ಯುತ್ತಮ ಸಿನಿಮಾಗಳನ್ನು ಪಡೆದವರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡವರು. ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ಅವರನ್ನು ಹುಡುಕಿಕೊಂಡು ಬಂದವು. ಆದರೂ, ಒಂದಿಲ್ಲೊಂದು ರೀತಿಯಲ್ಲಿ ಅವರಿಗೆ ಕಿರುಕುಳ ನಡೆಯುತ್ತಲೇ ಬಂದಿವೆ. ಹೀಗಾಗಿ ಮೂಲತಃ ವೈದ್ಯಯೂ ಆಗಿರುವ ಸಾಯಿ ಪಲ್ಲವಿ ಹೊಸದೊಂದು ಕ್ಲಿನಿಕ್ ಶುರು ಮಾಡಿ, ವೈದ್ಯ ವೃತ್ತಿಯಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಅವರು ಸಿನಿಮಾ ರಂಗವನ್ನು ತೊರೆಯುವುದಾದರೆ, ಅಭಿಮಾನಿಗಳಿಗೆ ನಿಜಕ್ಕೂ ಶಾಕ್ ಆಗುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಟ ರಕ್ಷಿತ್ ಶೆಟ್ಟಿಗೆ ಎಡಪಂಥಿ ಪಟ್ಟ ಕಟ್ಟಿದ ಸಾಯಿ ಪಲ್ಲವಿ ವಿರೋಧಿಗಳು

    ನಟ ರಕ್ಷಿತ್ ಶೆಟ್ಟಿಗೆ ಎಡಪಂಥಿ ಪಟ್ಟ ಕಟ್ಟಿದ ಸಾಯಿ ಪಲ್ಲವಿ ವಿರೋಧಿಗಳು

    ಳೆದ ಶುಕ್ರವಾರ ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ದೇಶದಾದ್ಯಂತ ಬಿಡುಗಡೆ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾದ ಕನ್ನಡದ ಹಕ್ಕುಗಳನ್ನು ರಕ್ಷಿತ್ ಶೆಟ್ಟಿ ಒಡೆತನದ ಪರಮಃ ಸ್ಟುಡಿಯೋಸ್ ಪಡೆದಿದೆ. ಈ ಕಾರಣಕ್ಕಾಗಿ ಸಾಯಿ ಪಲ್ಲವಿ ವಿರೋಧಿಗಳು ರಕ್ಷಿತ್ ಶೆಟ್ಟಿಗೆ ಎಡಪಂಥಿ ಪಟ್ಟ ಕಟ್ಟಿದ್ದಾರೆ.

    ಈ ಹಿಂದೆ ಸಾಯಿ ಪಲ್ಲವಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದರು ಎನ್ನುವ ಕಾರಣಕ್ಕಾಗಿ ಹಲವರು ಇವರ ಮೇಲೆ ದೂರು ದಾಖಲಿಸಿದ್ದಾರೆ. ಕಾಶ್ಮೀರದಲ್ಲಿ ನಡೆದ ಹಿಂದೂಗಳ ಮಾರಣ ಹೋಮವನ್ನು ಹಸುಗಳ್ಳರಿಗೆ ಹೋಲಿಸಿದ್ದರು ಎನ್ನುವ ಕಾರಣಕ್ಕಾಗಿ ವಿವಾದವಾಗಿತ್ತು. ಅದನ್ನೇ ಮುಂದಿಟ್ಟುಕೊಂಡು ಗಾರ್ಗಿ ಸಿನಿಮಾಗೆ ಬೈಕಾಟ್ ಮಾಡಬೇಕೆಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವಾಗಿತ್ತು. ಆದರೆ, ಕೊನೆಗೂ ರಕ್ಷಿತ್ ಶೆಟ್ಟಿ ಮೂಲಕ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡಿದೆ. ಇದನ್ನೂ ಓದಿ:ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ಹಿಂದೂ ವಿರೋಧಿ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಕರ್ನಾಟಕದಲ್ಲಿ ವಿತರಣೆ ಮಾಡಿದ್ದಾರೆ. ಈ ನಡೆಯನ್ನು ನೋಡಿದರೆ, ರಕ್ಷಿತ್ ಎಡಪಂಥಿ ಅನಿಸುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ರಕ್ಷಿತ್ ಶೆಟ್ಟಿ ಸಿನಿಮಾಗಳನ್ನೂ ವಿರೋಧಿಸೋಣ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ರಕ್ಷಿತ್ ಅವರನ್ನು ಬೆಂಬಲಿಸಿದವರೂ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ನಲ್ಲಿ ಸಾಯಿಪಲ್ಲವಿಗೆ ಹಿನ್ನೆಡೆ: ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಕೋರ್ಟ್ ನಲ್ಲಿ ಸಾಯಿಪಲ್ಲವಿಗೆ ಹಿನ್ನೆಡೆ: ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಸಂದರ್ಶನವೊಂದರಲ್ಲಿ ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆಯ ಹಂತಕರಿಗೆ ಹೋಲಿಸಿದ್ದ ಸಾಯಿ ಪಲ್ಲವಿಯ ವಿರುದ್ಧ ಹಲವು ಕಡೆ ದೂರು ದಾಖಲಾಗಿತ್ತು. ಹಾಗೆಯೇ ಹೈದರಾಬಾದ್ ನಲ್ಲೂ ದೂರು ದಾಖಲಾಗಿತ್ತು. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಿದ್ದರು. ಅದನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿ ಕೋರ್ಟ್ ಮೆಟ್ಟಿಲೇರಿದ್ದರು. ಸಾಯಿ ಪಲ್ಲವಿಯ ಮನವಿಯನ್ನು ತೆಲಂಗಾಣ ಹೈಕೋರ್ಟ್ ಕೋರ್ಟ್ ತಿರಸ್ಕರಿಸಿದೆ.

    ಹೈದರಾಬಾದ್ ಸುಲ್ತಾನ್ ಬಜಾರ್ ಸರ್ಕಲ್ ಇನ್ಸ್ಪೆಕ್ಟರ್ ಕೊಟ್ಟಿರುವ ನೋಟಿಸ್ ಅನ್ನು ರದ್ದುಗೊಳಿಸುವಂತೆ ಸಾಯಿ ಪಲ್ಲವಿಯ ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕನ್ನೆಗಂಟಿ ಲಲಿತಾ, ‘ಅರ್ಜಿದಾರರು ಅಪರಾಧದ ಕುರಿತು ನಿರ್ದಿಷ್ಟಪಡಿಸದ ದುರುದ್ದೇಶಪೂರಿತ ಅರ್ಜಿಯ ಆಧಾರದ ಮೇಲೆ ದೂಷಾರೋಪಣೆಗಾಗಿ ನೋಟಿಸ್ ನೀಡಲಾಗಿದೆ. ಈ ಕುರಿತು ಸತ್ಯಾಸತ್ಯತೆ ಅರಿವುದಕ್ಕಾಗಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ:ಪೂಲನ್ ದೇವಿ ಬದುಕಿಗೆ ನಿರ್ದೇಶಕ ರಾಜಗುರು ಅವರ ಹೊಸ ಸ್ಪರ್ಶ

    ಹೈದರಾಬಾದ್ ಬಜರಂಗದಳದ ಸದಸ್ಯ ಅಖಿಲ್ ಎನ್ನುವವರು ಸಾಯಿ ಪಲ್ಲವಿಯನ್ನು ವಿಚಾರಣೆ ನಡೆಸುವಂತೆ ಸುಲ್ತಾನ್ ಬಜಾರ್ ಸರ್ಕಲ್ ಇನ್ಸೆಪೆಕ್ಟರ್ ಗೆ ದೂರು ನೀಡಿದ್ದರು. ಅಲ್ಲದೇ, ಇನ್ನೂ ಹಲವು ಕಡೆ ದೂರುಗಳು ದಾಖಲಾಗಿದ್ದವು. ಹಾಗಾಗಿ ಸಾಯಿ ಪಲ್ಲವಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಕುರಿತು ಸಾಯಿ ಪಲ್ಲವಿ ಸ್ಪಷ್ಟನೆ ಕೊಟ್ಟರೂ ದೂರುಗಳು ಮಾತ್ರ ನಿಂತಿರಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ಗೆ ಕರ್ನಾಟಕದಲ್ಲಿ ಧರ್ಮ ಸಂಕಟ

    ದೇ ಜುಲೈ 15 ರಂದು ದೇಶಾದ್ಯಂತ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿಂದೆ ಸಾಯಿ ಪಲ್ಲವಿ ನೀಡಿದ ಹೇಳಿಕೆಯಿಂದಾಗಿ ಚಿತ್ರಕ್ಕೆ ಧರ್ಮ ಸಂಕಟ ಎದುರಾಗಿದೆ. ಕಾಶ್ಮೀರ ಪಂಡಿತರ ಹತ್ಯೆಯನ್ನು ಗೋವು ಹತ್ಯೆ ಮಾಡುವವರಿಗೆ ಹೋಲಿಸಿ ಹೇಳಲಾದ ಹೇಳಿಕೆಯನ್ನು ಮುಂದಿಟ್ಟುಕೊಂಡು ಗಾರ್ಗಿ ಸಿನಿಮಾವನ್ನು ಬೈಕಾಟ್ ಮಾಡುವಂತೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ.

    ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಕನ್ನಡದಲ್ಲಿ ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅರ್ಪಿಸುತ್ತಿದ್ದಾರೆ. ಅಲ್ಲದೇ, ಈ ಸಿನಿಮಾವನ್ನು ಕನ್ನಡದಲ್ಲಿ ತಾವು ಏಕೆ ಬಿಡುಗಡೆ ಮಾಡುತ್ತಿದ್ದೇವೆ ಎನ್ನುವ ಕುರಿತಾಗಿಯೂ ಈಗಾಗಲೇ ರಕ್ಷಿತ್ ಹೇಳಿಕೊಂಡಿದ್ದಾರೆ. ಆದರೆ, ಯಾರೇ ಈ ಸಿನಿಮಾವನ್ನು ಕನ್ನಡದಲ್ಲಿ ರಿಲೀಸ್ ಮಾಡಿದರೂ, ಆ ಸಿನಿಮಾವನ್ನು ತಾವು ನೋಡುವುದಿಲ್ಲ ಎಂದು ಹಿಂದೂಪರ ಸಂಘಟನೆಯವರು ಅನೇಕ ಸೋಷಿಯಲ್ ಮೀಡಿಯಾ ಪೇಜ್ ಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್‌ ಆಗುತ್ತೀರಾ

    ರಕ್ಷಿತ್ ಮುಖ ನೋಡಿ ಚಾರ್ಲಿ ನೋಡ್ತೀವಿ . ಆದರೆ, ಗಾರ್ಗಿ ಸಿನಿಮಾ ನೋಡಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನೇ ಕೆಲವರು ಶುರು ಮಾಡಿದ್ದಾರೆ. ಸಾಯಿ ಪಲ್ಲವಿಯ ಸಿನಿಮಾವನ್ನು ಮಲಗಿಸಿಯೇ ಬಿಡಲು ಹಿಂದೂ ಸಮಾಜ ತೀರ್ಮಾನ ಮಾಡಿದೆ ಅಂತ ಅಭಿಯಾನ ಈಗಾಗಲೇ ಸೋಷಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ದೊಡ್ಡಮಟ್ಟದಲ್ಲೇ ಅಭಿಯಾನ ಮಾಡುವುದಾಗಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ಬೆನ್ನಿಗೆ ನಿಂತ ರಕ್ಷಿತ್ ಶೆಟ್ಟಿ

    ಸಾಯಿ ಪಲ್ಲವಿ ನಟನೆಯ ‘ಗಾರ್ಗಿ’ ಸಿನಿಮಾ ಬೆನ್ನಿಗೆ ನಿಂತ ರಕ್ಷಿತ್ ಶೆಟ್ಟಿ

    ಖ್ಯಾತ ನಟಿ ಸಾಯಿ‌ ಪಲ್ಲವಿ ಅಭಿನಯದ “ಗಾರ್ಗಿ’ ಚಿತ್ರ ಇದೇ ಜುಲೈ ಹದಿನೈದರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡದ ಹೆಸರಾಂತ ಪರಮ್ ವಾ ಪಿಕ್ಚರ್ಸ್ ಕನ್ನಡದಲ್ಲಿ ಈ ಚಿತ್ರವನ್ನು ಪ್ರಸ್ತುತ ಪಡಿಸಲಿದೆ. ಇದು ನಟ ರಕ್ಷಿತ್ ಶೆಟ್ಟಿ ಅವರ ಸಂಸ್ಥೆ ಎನ್ನುವುದು ವಿಶೇಷ. ಅಲ್ಲದೇ,  ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ.

    ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸ್ರೈಯಂತಿ ಹಾಗೂ ಪ್ರೇಮ್ ಅಕ್ಕಟ್ಟು ಛಾಯಾಗ್ರಹಣ, ಶಫಿಕ್ ಮೊಹಮದ್ ಆಲಿ ಅವರ ಸಂಕಲನ ಈ ಚಿತ್ರಕ್ಕಿದೆ. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್ ಎಸ್ ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌. ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಆಗಿರುವ ಟ್ರೈಲರ್ ಭಾರೀ ಸದ್ದು ಮಾಡಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಯಿ ಪಲ್ಲವಿ ಹೇಳಿಕೆ ‘ವಿರಾಟ ಪರ್ವಂ’ ಚಿತ್ರಕ್ಕೆ ಮುಳುವಾಯ್ತಾ?

    ಸಾಯಿ ಪಲ್ಲವಿ ಹೇಳಿಕೆ ‘ವಿರಾಟ ಪರ್ವಂ’ ಚಿತ್ರಕ್ಕೆ ಮುಳುವಾಯ್ತಾ?

    ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಕಾಂಬಿನೇಷನ್ ನ ವಿರಾಟ ಪರ್ವಂ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಇದೊಂದು ನಕ್ಸಲ್ ಹೋರಾಟದ ಹಿನ್ನೆಲೆಯಲ್ಲಿ ಮೂಡಿ ಬಂದ ಸಿನಿಮಾವಾಗಿದ್ದರಿಂದ ಮತ್ತು ಈವರೆಗೂ ಸಾಯಿ ಪಲ್ಲವಿಯ ಬಹುತೇಕ ಚಿತ್ರಗಳು ಹಿಟ್ ಆಗಿರುವುದರಿಂದ, ವಿರಾಟ ಪರ್ವಂ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದೆ. ಸಾಯಿ ಪಲ್ಲವಿ ಹೇಳಿಕೆಯಿಂದಾಗಿ ಸಿನಿಮಾಗೆ ಎಫೆಕ್ಟ್ ಆಗಿದೆ ಎನ್ನಲಾಗುತ್ತಿದೆ.

    ವಿರಾಟ ಪರ್ವಂ ಸಿನಿಮಾದ ಟ್ರೈಲರ್, ಫಸ್ಟ್ ಲುಕ್ ಮತ್ತು ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಲ್ಲದೇ, ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ ಈ ರೀತಿಯ ಪಾತ್ರ ಮಾಡಿದ್ದರಿಂದ, ಅಭಿಮಾನಿಗಳು ಚಿತ್ರವನ್ನು ಅಪ್ಪಿಕೊಳ್ಳುತ್ತಾರೆ ಎನ್ನುವ ಸುದ್ದಿಯಿತ್ತು. ಅದು ನಿಜವಾಗಿಲ್ಲ ಎನ್ನುವುದು ಎರಡು ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ಹೇಳುತ್ತಿದೆ. ಇದನ್ನೂ ಓದಿ:ಚಾರ್ಲಿ 777 ತೆರಿಗೆ ವಿನಾಯತಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅಸಮಾಧಾನ ಏಕೆ?

    ಸಿನಿಮಾ ಪ್ರಚಾರದ ಭಾಗವಾಗಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಕಾಶ್ಮೀರಿ ಪಂಡಿತರ ಹತ್ಯ ಮತ್ತು ಗೋವು ಸಾಗಿಸುತ್ತಿದ್ದಾಗ ಅನ್ಯ ಕೋಮಿನ ವ್ಯಕ್ತಿಯೊಬ್ಬರ ಹತ್ಯೆಯನ್ನು ಹೋಲಿಕೆ ಮಾಡಿ ಮಾತನಾಡಿದ್ದರು. ಹಿಂದೂಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ಮಾತುಗಳನ್ನು ಸಾಯಿ ಪಲ್ಲವಿ ಆಡಿದ್ದಾರೆ ಎನ್ನುವಂತೆ ಸುದ್ದಿ ಆಯಿತು. ಈ  ಹೇಳಿಕೆಯೇ ಸಿನಿಮಾ ಓಟಕ್ಕೆ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ಇಂದಿಗೆ ಮೂರು ದಿನಗಳಾಗಿವೆ. ಎರಡು ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

    Live Tv

  • ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ

    ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ

    ಮಾಧ್ಯಮವೊಂದರ ಸಂದರ್ಶನದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣೆ ಮಾಡುತ್ತಿದ್ದ ಮುಸ್ಲಿಂ ಹತ್ಯೆ ಎರಡೂ ಒಂದೇ ಅನಿಸುತ್ತಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ದಕ್ಷಿಣದ ತಾರೆ ಸಾಯಿ ಪಲ್ಲವಿ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಹೇಳುವ ಮೂಲಕ ಸಾಯಿ ಪಲ್ಲವಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದರು. ದೇಶಾದ್ಯಂತ ಈ ಬಗ್ಗೆ ತೀವ್ರ ಪರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಫೇಸ್‍ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಅನ್ನು ವೀಕ್ಷಿಸಿದ ನಂತರ, ನಾನು ಚಿತ್ರದ ನಿರ್ದೇಶಕ (ವಿವೇಕ್ ಅಗ್ನಿಹೋತ್ರಿ) ಜೊತೆ ಮಾತನಾಡಿದೆ. ಜನರ ದುಃಸ್ಥಿತಿಯನ್ನು ನೋಡಿದ ನಂತರ ತಾನು ವಿಚಲಿತಳಾಗಿದ್ದೇನೆ.  ಇದನ್ನೂ ಓದಿ: ‘ಜೈ ಶ್ರೀರಾಮ್’ ಎಂದು ಕೊಲ್ಲುವ ಮಾತಿನ ವಿವಾದ: ನಟಿ ಸಾಯಿ ಪಲ್ಲವಿ ಬಂಧನಕ್ಕೆ ಹೆಚ್ಚಿದ ಒತ್ತಡ

     

    View this post on Instagram

     

    A post shared by Sai Pallavi (@saipallavi.senthamarai)

    ಯಾವುದೇ ರೂಪದಲ್ಲಿ ಹಿಂಸೆ ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ. ಆದರೆ, ಅನೇಕ ಜನರು ಇದನ್ನು ಬೇರೆ ರೀತಿ ಅರ್ಥಮಾಡಿಕೊಂಡು ವಿವಾದ ಸೃಷ್ಟಿಸಿದ್ದು, ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ವೈಯಕ್ತಿಕ ಜೀವನವನ್ನು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಜೊತೆಗೆ ಇಲ್ಲಿ ನನ್ನ ಸ್ಪಷ್ಟೀಕರಣವಿದೆ ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ನಾನು ಬಯಸುತ್ತೇನೆ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀರಾಮ್’ ಎನ್ನುತ್ತಾ ಮುಸ್ಲಿಂ ಹತ್ಯೆ ವಿಚಾರ: ಸಾಯಿ ಪಲ್ಲವಿ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

    ವಿವಾದದ ಹೇಳಿಕೆ:
    ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣೆ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು ಎಂದು ಸಾಯಿ ಪಲ್ಲವಿ ಮಾತನಾಡಿದ್ದರು. ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಮೊನ್ನೆ ಇಂಥದ್ದೊಂದು ಹೇಳಿಕೆಯನ್ನು ಸಾಯಿ ಪಲ್ಲವಿ ಕೊಡುತ್ತಿದ್ದಂತೆಯೇ ಎಲ್ಲಡೆ ಆಕ್ರೋಶ ವ್ಯಕ್ತವಾಯಿತು. ಸಾಯಿ ಮಾತಿಗೆ ಪರ ವಿರೋಧ ವ್ಯಕ್ತವಾಯಿತು. ಕಳ್ಳಸಾಗಾಣಿಕೆದಾರನಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿದ್ದಕ್ಕಾಗಿ ಭಜರಂಗ ದಳದ ನಾಯಕರು, ಹೈದರಾಬಾದ್‍ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    Live Tv

  • ನಟಿ ಸಾಯಿ ಪಲ್ಲವಿ ಬಂಧಿಸಿ : ಬಿಜೆಪಿ ಶಾಸಕ ರಾಜಾ ಸಿಂಗ್ ಆಗ್ರಹ

    ನಟಿ ಸಾಯಿ ಪಲ್ಲವಿ ಬಂಧಿಸಿ : ಬಿಜೆಪಿ ಶಾಸಕ ರಾಜಾ ಸಿಂಗ್ ಆಗ್ರಹ

    ಟಿ ಸಾಯಿ ಪಲ್ಲವಿ ಆಡಿದ ಮಾತು ಇಷ್ಟು ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತದೆ ಎಂದು ಸ್ವತಃ ಅವರಿಗೂ ಅರಿವಿರಲಿಲ್ಲ ಅನಿಸುತ್ತಿದೆ. ಹೀಗಾಗಿ ನಕ್ಸಲ್ ಹಿನ್ನೆಲೆಯಲ್ಲಿ ಬಂದ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದಲ್ಲಿದ್ದಾಗ ಕೆಲ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ ಸಾಯಿ ಪಲ್ಲವಿ. ಸಾಯಿ ಪಲ್ಲವಿ ಆಡಿದ ಮಾತು ಅವರಿಗೆ ವಿವಾದಾತ್ಮಕ ಹೇಳಿಕೆ ಎಂದು ಅನಿಸಿದೆಯೋ ಇಲ್ಲವೋ, ಆದರೆ, ಕಾಶ್ಮೀರಿ ಪಂಡಿತರ ಹತ್ಯೆಯನ್ನು ಗೋ ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಸಾವಿಗೆ ಹೋಲಿಸಿದ್ದು ಮಾತ್ರ ಭಾರೀ ಚರ್ಚೆ ಮೂಡಿಸಿದೆ.

    ಸಾಯಿ ಪಲ್ಲವಿ ಅವರ ಮಾತು ಇದೀಗ ಕೇವಲ ಮಾತಾಗಿ ಉಳಿದುಕೊಂಡಿಲ್ಲ. ಕಾನೂನು ಹೋರಾಟಕ್ಕೂ ಕೆಲವರು ಸಜ್ಜಾಗಿದ್ದಾರೆ. ನಿನ್ನೆಯಷ್ಟೇ ಹೈದರಾಬಾದ್ ನಲ್ಲಿ ಇವರ ವಿರುದ್ಧ ದೂರು ದಾಖಲಾಗಿದೆ. ಇದೀಗ ತೆಲಂಗಾಣದ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಿಸಿ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ವಿಡಿಯೋ ಕೂಡ ಮಾಡಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

    ರಾಜಾ ಸಿಂಗ್ ವಿವಾದಿತ ಶಾಸಕರೆಂದೇ ಫೇಮಸ್. ಫೈಯರ್ ಬ್ರ್ಯಾಂಡ್ ಎಂಎಲ್ಎ ಎಂದೇ ಆ ಭಾಗದಲ್ಲಿ ಖ್ಯಾತರಾದವರು. ಹೀಗಾಗಿ ಸಾಯಿ ಪಲ್ಲವಿಯ ವಿರುದ್ಧ ಕೇಸು ದಾಖಲಿಸುವಂತೆ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಹಿಂದೂಗಳ ಬಗ್ಗೆ ಮಾತನಾಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಹತ್ಯೆಯಾದ ಕಾಶ್ಮೀರಿ ಪಂಡಿತರ ಕುಟುಂಬವನ್ನು ಭೇಟಿ ಮಾಡಿ, ಅವರ ನೋವುಗಳನ್ನು ಸಾಯಿ ಪಲ್ಲವಿ ಕೇಳಲಿ ಎಂದು ಸಲಹೆ ನೀಡಿದ್ದಾರೆ. ಹಿಂದೂಗಳನ್ನು ಬೈದರೆ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಕೆಲವರು ಇದ್ದಾರೆ. ಅವರ ವಿರುದ್ಧ ದೂರು ದಾಖಲಿಸಿ, ಪಾಠ ಕಲಿಸಿ ಎಂದು ಅವರು ಕರೆ ನೀಡಿದ್ದಾರೆ.

    Live Tv