Tag: ಸಾಯಿ ಪಲ್ಲವಿ

  • ಆಮೀರ್ ಖಾನ್ ಮಗನ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ

    ಆಮೀರ್ ಖಾನ್ ಮಗನ ಜೊತೆ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ

    ಹಜ ಸುಂದರಿ ಸಾಯಿ ಪಲ್ಲವಿ (Sai Pallavi) ‘ಗಾರ್ಗಿ’ ಚಿತ್ರದ ನಂತರ ಬಾಲಿವುಡ್‌ಗೆ ಹಾರಿದ್ದಾರೆ. ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ನಾಯಕಿಯಾಗಿ ಬಿಟೌನ್‌ಗೆ ಪಾದಾರ್ಪಣೆ ಮಾಡ್ತಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಸಾಯಿ ಪಲ್ಲವಿ ಆಮೀರ್ ಪುತ್ರನ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ

    ಜುನೈದ್- ಸಾಯಿ ಪಲ್ಲವಿ ನಟನೆಯ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಚಿತ್ರೀಕರಣಕ್ಕೆ ಜಪಾನ್‌ಗೆ ತೆರಳಿತ್ತು. ಇತ್ತೀಚೆಗೆ ಜಪಾನ್ ಶೆಡ್ಯೂಲ್ ಅಂತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪಬ್‌ನಲ್ಲಿ ಪಾರ್ಟಿ ಮಾಡಿತ್ತು. ಈ ಸಂದರ್ಭದಲ್ಲಿ ನಾಯಕಿ ಸಾಯಿ ಪಲ್ಲವಿ ಸಖತ್ ಡ್ಯಾನ್ಸ್ ಮಾಡಿದ್ದಾರೆ.

    ಮ್ಯೂಸಿಕ್ ಶುರುವಾಗ್ತಿದ್ದಂತೆ ನಟಿ ಡ್ಯಾನ್ಸ್ ಮಾಡಲು ಶುರು ಮಾಡಿದ್ದರು. ಚಿತ್ರತಂಡದ ಸದಸ್ಯರು ಸಾಯಿ ಪಲ್ಲವಿಯನ್ನು ಬೆಂಬಲಿಸಿದ್ದರು. ನಟಿ ಕೂಡ ಖುಷಿಯಿಂದ ನಗುತ್ತಾ ಕೂಗುತ್ತಾ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಅಂದ್ರೆ ಸಾಯಿ ಪಲ್ಲವಿ ಸದಾ ಮುಂದಿರುತ್ತಾರೆ.

    ಸಾಯಿ ಪಲ್ಲವಿ ಡ್ಯಾನ್ಸ್ ನೋಡಿ ಅಭಿಮಾನಿಗಳು, ಆಕೆಯ ಎನರ್ಜಿ ಸೂಪರ್ ಎಂದಿದ್ದಾರೆ. ಫೀಲ್ ಮಾಡುತ್ತಾ ಡ್ಯಾನ್ಸ್ ಮಾಡುತ್ತಾ ಇರೋದು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

  • ಮೊದಲ ಬಾರಿಗೆ ‘ನೋ ಲಿಪ್ ಕಿಸ್’ ಪಾಲಿಸಿ ಮುರಿದ ನಟಿ ಸಾಯಿ ಪಲ್ಲವಿ

    ಮೊದಲ ಬಾರಿಗೆ ‘ನೋ ಲಿಪ್ ಕಿಸ್’ ಪಾಲಿಸಿ ಮುರಿದ ನಟಿ ಸಾಯಿ ಪಲ್ಲವಿ

    ಯಾವುದೇ ಕಾರಣಕ್ಕೂ ತಾವು ಕಿಸ್ ಮಾಡುವ ಅದರಲ್ಲೂ ಲಿಪ್ ಕಿಸ್ ಮಾಡುವ ಪಾತ್ರಗಳನ್ನು ಮಾಡಲಾರೆ ಎಂದು ದಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ (Sai Pallavi) ಹೇಳಿಕೊಂಡಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡೇ ಬಂದಿದ್ದರು. ಮೈ ತೋರಿಸುವಂತಹ ದೃಶ್ಯವಾಗಲಿ ಅಥವಾ ಕಾಮ ಉತ್ತೇಜಿಸುವಂತಹ ಭಂಗಿಯಾಗಲಿ, ಲಿಪ್ ಕಿಸ್ (Lip Kiss) ಆಗಲಿ ಅವರು ಮಾಡಲಿಲ್ಲ.

    ಇದೀಗ ಮೊದಲ ಬಾರಿಗೆ ಅವರು ತಮ್ಮ ನೋ ಪಿಲ್ ಕಿಸ್ ಪಾಲಿಸಿಯನ್ನು ಮುರಿದಿರುವ ವಿಚಾರ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2022ರಲ್ಲಿ ರಿಲೀಸ್ ಆಗಿದ್ದ ನಾಗಚೈತನ್ಯ (Naga Chaitanya) ಜೊತೆಗಿನ ಸಿನಿಮಾದಲ್ಲಿ ಸಾಯಿ ಪಲ್ಲವಿ ಲಿಪ್ ಕಿಸ್ ಮಾಡಿದ್ದರು ಎಂದು ಫೋಟೋವೊಂದನ್ನು ಹರಿಬಿಟ್ಟು ಟ್ರೋಲ್ ಮಾಡಲಾಗುತ್ತಿದೆ.

    ಕೆಲವರು ಈ ಫೋಟೋವನ್ನು ಅಸಲಿ ಎಂದರೆ, ಇನ್ನೂ ಕೆಲವರು ನಕಲಿ ಎಂದೂ ಹೇಳುತ್ತಿದ್ದಾರೆ. ನಿಜ ಏನಂದರೆ, ಲವ್ ಸ್ಟೋರಿ ಸಿನಿಮಾದ ಹಾಡೊಂದರಲ್ಲಿ ಸಾಯಿ ಪಲ್ಲವಿ ಮುತ್ತಿಡುವ ಸನ್ನಿವೇಶವೊಂದು ಇದೆ. ಆದರೆ, ಈ ದೃಶ್ಯದಲ್ಲಿ ಅವರು ಯಾವುದೇ ಕಾರಣಕ್ಕೂ ತುಟಿಗೆ ಮುತ್ತು ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ.

     

    ಕೆಲವು ದಿನಗಳ ಹಿಂದೆಯೂ ಈ ಕುರಿತಂತೆ ಸಾಯಿ ಪಲ್ಲವಿ ಮಾತನಾಡಿದ್ದರು. ನನಗೆ ಕಂಫರ್ಟ್ ಅನಿಸದ ದೃಶ್ಯಗಳಲ್ಲಿ ನಾನು ನಟಿಸಲ್ಲ ಎಂದು ಹೇಳಿದ್ದರು. ಅದರಲ್ಲೂ ಮುತ್ತಿನ ದೃಶ್ಯಗಳಿಂದ ದೂರ ಇರುವುದಾಗಿ ತಿಳಿಸಿದ್ದರು.

  • ಜಪಾನ್‌ನಲ್ಲಿ ಆಮೀರ್ ಖಾನ್ ಪುತ್ರನ ಜೊತೆ ಸಾಯಿ ಪಲ್ಲವಿ

    ಜಪಾನ್‌ನಲ್ಲಿ ಆಮೀರ್ ಖಾನ್ ಪುತ್ರನ ಜೊತೆ ಸಾಯಿ ಪಲ್ಲವಿ

    ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ (Junaid Khan) ಜೊತೆ ಜಪಾನ್‌ನಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿರುವ ಜುನೈದ್- ಸಾಯಿ ಪಲ್ಲವಿ (Sai Pallavi)  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಯುಗಳಗೀತೆ’ ನಟಿ ಸಿರಿ, ಮಧುಸೂದನ್

    ಸೌತ್‌ನ ಕೆಂಪು ಗಲ್ಲದ ಸುಂದರಿ ಸಾಯಿ ಪಲ್ಲವಿ ಅವರು ದೂರದ ಜಪಾನ್‌ನಲ್ಲಿ ಜುನೈದ್ ಜೊತೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಜಪಾನ್‌ನಲ್ಲಿ ಸಾಯಿ ಪಲ್ಲವಿ ಟೀಮ್ ಬೀಡು ಬಿಟ್ಟಿದೆ. ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅವರಲ್ಲಿ ಸೂಪರ್ ಮ್ಯಾನ್ ಚಾಯೆ ಕೂಡ ಕಂಡು ಬರುತ್ತಿದೆ. ಸಾಯಿ ಪಲ್ಲವಿ ಹಿಂದಿ ಚಿತ್ರರಂಗಕ್ಕೆ ನಾಯಕಿಯಾಗಿ ಅಧಿಕೃತವಾಗಿ ಕಾಲಿಡ್ತಿದ್ದಾರೆ.

    ಕೆಲವು ತಿಂಗಳುಗಳಿಂದ ಆಮೀರ್ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಈ ಹಿಂದೆಯೇ ಆಮೀರ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ ಎಂದು ಕೂಡ ಸಖತ್ ಸುದ್ದಿಯಾಗಿತ್ತು. ಇದೀಗ ವೈರಲ್ ಆಗಿರುವ ಫೋಟೋ ಮೂಲಕ ಗಾಸಿಪ್‌ಗೆ ತೆರೆಬಿದ್ದಿದೆ.

    ಜುನೈದ್ ಖಾನ್‌ಗೆ ನಾಯಕಿಯಾಗುವ ಮೂಲಕ ಬಾಲಿವುಡ್‌ಗೆ ಸಾಯಿ ಪಲ್ಲವಿ ಪಾದಾರ್ಪಣೆ ಮಾಡಿದ್ದಾರೆ. ಸೌತ್‌ನಲ್ಲಿ ಗೆದ್ದ ಹಾಗೇ ಬಾಲಿವುಡ್‌ನಲ್ಲಿಯೂ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

  • Ramayana: ಸಾಯಿ ಪಲ್ಲವಿ ಔಟ್, ಸೀತೆಯ ಪಾತ್ರದಲ್ಲಿ ಶ್ರೀದೇವಿ ಪುತ್ರಿ

    Ramayana: ಸಾಯಿ ಪಲ್ಲವಿ ಔಟ್, ಸೀತೆಯ ಪಾತ್ರದಲ್ಲಿ ಶ್ರೀದೇವಿ ಪುತ್ರಿ

    ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ (Nitesh Tiwari) ಇದೀಗ ರಾಮಾಯಣ (Ramayana) ಆಧರಿಸಿ ಸಿನಿಮಾ ಮಾಡಲು ಸಕಲ ತಯಾರಿ ಮಾಡುತ್ತಿದ್ದಾರೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಸೆಲೆಕ್ಟ್ ಆಗಿದ್ರೆ, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈಗ ಸಾಯಿ ಪಲ್ಲವಿ ಬದಲು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ನಟಿಸಲಿದ್ದಾರೆ ಎನ್ನಲಾಗುತ್ತಿದೆ.

    ದಂಗಲ್, ಬಾವಲ್ ಚಿತ್ರಗಳ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಪ್ರೀ- ಪ್ರೊಡಕ್ಷನ್ ಹಂತದ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ತೆರೆಮರೆಯಲ್ಲಿ ಪಾತ್ರಗಳ ಆಯ್ಕೆ ಕೂಡ ನಡೆಯುತ್ತಿದೆ. ಸೀತೆಯ ಪಾತ್ರದ ಆಯ್ಕೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ಪೂನಂ ಪರವಾಗಿ ಕ್ಷಮೆ ಕೇಳಿದ ಡಿಜಿಟೆಲ್ ಟೀಮ್

    ‘ರಾಮಾಯಣ’ ಸಿನಿಮಾ ಬಗ್ಗೆ ಒಂದಲ್ಲ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಣಬೀರ್ ರಾಮನ ಪಾತ್ರ ಮಾಡ್ತಾರೆ ಎನ್ನುವ ಸುದ್ದಿ ಹೊರಬಂದ ಬಳಿಕ ಸೀತೆಯಾಗಿ ಆಲಿಯಾ ಭಟ್ ಕಾಣಿಸಿಕೊಳ್ತಾರೆ ಎನ್ನಲಾಯ್ತು. ಆದರೆ ಡೇಟ್ ಸಮಸ್ಯೆಯಿಂದ ಆಲಿಯಾ ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಸೀತೆಯ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಇದಾದ ಬಳಿಕ ಇದೀಗ ಶ್ರೀದೇವಿ ಮಗಳಿಗೆ ಸೀತೆಯಾಗುವ ಚಾನ್ಸ್ ಸಿಕ್ಕಿದೆ ಎನ್ನಲಾಗ್ತಿದೆ.

    ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ವಿ ಇದೀಗ ‘ರಾಮಾಯಣ’ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರಾ ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

  • ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ ತಂಗಿ

    ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ ತಂಗಿ

    ದೇ ಮೊದಲ ಬಾರಿಗೆ ತಾವು ಮದುವೆ ಆಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡಿದ್ದಾರೆ ಖ್ಯಾತನಟಿ ಸಾಯಿ ಪಲ್ಲವಿ (Sai pallavi) ಸಹೋದರಿ ಪೂಜಾ. ಈ ಹುಡುಗನ ಕುರಿತಂತೆ ಕೆಲಸ ಸಾಲುಗಳನ್ನೂ ಅವರು ಬರೆದಿದ್ದಾರೆ.

    ಪೂಜಾ ಮದುವೆ (Marriage) ವಿಚಾರ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಈ ಬಾರಿ ನಿಜವಾಗಿಯೂ ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ ಮನೆ ಮಾಡಿದೆ. ಮದುವೆಯ ಪೂರ್ವಭಾವಿ ಕೆಲಸಗಳನ್ನು ಈಗಾಗಲೇ ಅವರ ತಂದೆ ತಾಯಿ ಶುರು ಮಾಡಿದ್ದಾರೆ.

    ಹಾಗಂತ ಸಾಯಿ ಪಲ್ಲವಿ ಮದುವೆ ಆಗುತ್ತಿಲ್ಲ. ಅವರ ತಂಗಿ, ನಟಿಯೂ ಆಗಿರುವ ಪೂಜಾ ಅವರ ಮದುವೆ ಸದ್ಯದಲ್ಲೇ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಪೂಜಾ (Pooja) ತನ್ನ ಎಂಗೇಜ್ ಮೆಂಟ್ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು. ಹುಡುಗನ ಫೋಟೋ ಶೇರ್ ಮಾಡಿದ್ದರು.

     

    ಹಲವು ಬಾರಿ ಸಾಯಿ ಪಲ್ಲವಿ ಮದುವೆ ವಿಚಾರ ಕೇಳಿ ಬಂದಿದ್ದರೂ, ಈ ಬಾರಿ ಮಾತ್ರ ಸಾಯಿ ಪಲ್ಲವಿ ಸ್ಥಾನದಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರವಾಗಿ ಅವರೇ ಒಂದಷ್ಟು ವಿಷಯವನ್ನು ಹಂಚಿಕೊಳ್ಳಬಹುದು.

  • ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ

    ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ

    ಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ (Sai pallavi) ಮದುವೆ (Marriage) ವಿಚಾರ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಈ ಬಾರಿ ನಿಜವಾಗಿಯೂ ಸಾಯಿ ಪಲ್ಲವಿ ಮನೆಯಲ್ಲಿ ಮದುವೆ ಸಡಗರ ಮನೆ ಮಾಡಿದೆ. ಮದುವೆಯ ಪೂರ್ವಭಾವಿ ಕೆಲಸಗಳನ್ನು ಈಗಾಗಲೇ ಅವರ ತಂದೆ ತಾಯಿ ಶುರು ಮಾಡಿದ್ದಾರೆ.

    ಹಾಗಂತ ಸಾಯಿ ಪಲ್ಲವಿ ಮದುವೆ ಆಗುತ್ತಿಲ್ಲ. ಅವರ ತಂಗಿ, ನಟಿಯೂ ಆಗಿರುವ ಪೂಜಾ ಅವರ ಮದುವೆ ಸದ್ಯದಲ್ಲೇ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಪೂಜಾ (Pooja) ತನ್ನ ಎಂಗೇಜ್ ಮೆಂಟ್ ವಿಚಾರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದರು. ಹುಡುಗನ ಫೋಟೋ ಶೇರ್ ಮಾಡಿದ್ದರು.

     

    ಹಲವು ಬಾರಿ ಸಾಯಿ ಪಲ್ಲವಿ ಮದುವೆ ವಿಚಾರ ಕೇಳಿ ಬಂದಿದ್ದರೂ, ಈ ಬಾರಿ ಮಾತ್ರ ಸಾಯಿ ಪಲ್ಲವಿ ಸ್ಥಾನದಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ. ಮದುವೆ ವಿಚಾರವಾಗಿ ಅವರೇ ಒಂದಷ್ಟು ವಿಷಯವನ್ನು ಹಂಚಿಕೊಳ್ಳಬಹುದು.

  • ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಸಾಯಿಪಲ್ಲವಿ

    ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಸಾಯಿಪಲ್ಲವಿ

    ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಉಡುಪಿ (Udupi) ಶ್ರೀ ಕೃಷ್ಣ ಮಠಕ್ಕೆ (Shrikrishna Math) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

    ಸಿನಿಮಾ ರಂಗದಿಂದ ದೂರ

    ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್‌ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ?

    ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ.

    ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ.

    ಕಳೆದ ವರ್ಷ ಸಾಯಿಪಲ್ಲವಿಯ ಮೇಲೆ ಬಂದ ಅಪವಾದಗಳು ಒಂದೆರಡಲ್ಲ. ನಾಗಚೈತನ್ಯ ಜೊತೆ ಲವ್‌ಸ್ಟೋರಿ ಚಿತ್ರ ಮಾಡ್ತಿರುವಾಗ ಸ್ಯಾಮ್ ನಾಗ್ ಡಿವೋರ್ಸ್ ಮುನ್ನಲೆಗೆ ಬಂತು. ವಿಪರ್ಯಾಸ ಅಂದ್ರೆ ನಾಗ್ ಜೊತೆ ಸಾಯಿಪಲ್ಲವಿ ಸಲುಗೆಯಿಂದ ಕಾಣಿಸ್ಕೊಂಡಿದ್ದಕ್ಕೆ ಇದೇ ಪ್ರೇಮಂ ಬೆಡಗಿಯ ಮೇಲೆ ಗೂಬೆ ಕೂರಿಸಲಾಯಿತು. ಈ ಎರಡು ಹೊಡೆತದಿಂದ ಸಾಯಿಪಲ್ಲವಿ ಸಿನಿಮಾ ರಂಗದಿಂದ ಒಳ್ಳೆಯ ನೀತಿಪಾಠ ಕಲಿತಿದ್ದಾರೆ. ಹೀಗಾಗೇ ಸಾಯಿಪಲ್ಲವಿ ಕರಿಯರ್ ಆಲ್‌ಮೋಸ್ಟ್ ಮುಗಿಯುವ ಹಂತಕ್ಕೆ ಬಂದು ತಲುಪಿದೆ.

     

    ಕುಟುಂಬಸ್ಥರೂ ಕೂಡ ಸಿನಿಮಾ ಸಾಕು ಮದುವೆಯಾಗು ಎಂಬ ಸಲಹೆ ಕೊಡುತ್ತಿದ್ದಾರಂತೆ. ಶೀಘ್ರದಲ್ಲೇ ಸಾಯಿಪಲ್ಲವಿ ಬಣ್ಣಕ್ಕೆ ವಿದಾಯ ಹೇಳಿದ್ರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದೆ ಟಾಲಿವುಡ್ ಗಲ್ಲಿ.

  • ಟೈಟಲ್ ಲಾಂಚ್ ಗೆ ಕ್ಷಣಗಣನೆ: ಯಶ್ ಚಿತ್ರಕ್ಕೆ ಮೂವರು ನಾಯಕಿಯರು

    ಟೈಟಲ್ ಲಾಂಚ್ ಗೆ ಕ್ಷಣಗಣನೆ: ಯಶ್ ಚಿತ್ರಕ್ಕೆ ಮೂವರು ನಾಯಕಿಯರು

    ನಾಳೆ ಯಶ್ ನಟನೆಯ ಹೊಸ ಸಿನಿಮಾದ ಟೈಟಲ್ ಅನಾವರಣವಾಗಲಿದೆ. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿದೆ. ಮೊನ್ನೆಯಷ್ಟೇ ಈ ಚಿತ್ರಕ್ಕೆ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಕೇವಲ ಒಬ್ಬರು ನಾಯಕಿಯರಲ್ಲ, ಮೂವರು ನಾಯಕಿಯರ ಇರಲಿದ್ದಾರೆ ಎನ್ನುವುದು ಲೆಟೆಸ್ಟ್ ಮಾಹಿತಿ. ಸಾಯಿ ಪಲ್ಲವಿ, ಮೃಣಲಾ ಠಾಕೂರ್ (Mrunal Thakur) ಹೀಗೆ ಮೂವರು ಹಿರೋಯಿನ್ ಚಿತ್ರದಲ್ಲಿ ಪಾತ್ರವಾಗಲಿದ್ದಾರೆ.

    ಟೈಟಲ್ ಬಗ್ಗೆ ಕ್ರೇಜ್

    ಹಲವು ತಿಂಗಳಿಂದ ಯಶ್ ಅಭಿಮಾನಿಗಳು ಕಾಯುತ್ತಿರುವ ಸಮಯ ಕೊನೆಗೂ ಕೂಡಿ ಬಂದಿದೆ. ತಮ್ಮ ಹೊಸ ಸಿನಿಮಾದ ಟೈಟಲ್ (Title) ಅನ್ನು ಡಿ.8ರಂದು ಬೆಳಗ್ಗೆ 9.55ಕ್ಕೆ ಲಾಂಚ್ ಮಾಡುವುದಾಗಿ ರಾಕಿಭಾಯ್ ಘೋಷಣೆ ಮಾಡಿದ್ದಾರೆ. ಈ 9.55ಕ್ಕೆ ಸಮಯ ನಿಗದಿ ಆಗಿದ್ದು ಏಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಲಾಂಚ್ ಮಾಡಿದರೆ ಒಳ್ಳೆಯದಾ? ಅಥವಾ ಯಾರಾದರೂ ಅದೇ ಸಮಯವನ್ನು ನಿಗದಿ ಮಾಡಿದ್ದಾರಾ ಎನ್ನುವ ಚರ್ಚೆ ಕೂಡ ಶುರುವಾಗಿದೆ.

    ಉತ್ತರ ಸಿಂಪಲ್ ಎನ್ನುತ್ತವೆ ಮೂಲಗಳು. ಯಶ್ ಅವರ 19ನೇ ಸಿನಿಮಾ ಇದಾಗಿದ್ದು, 9+5+5 ಒಟ್ಟು ಮಾಡಿದರೆ 19 ಸಂಖ್ಯೆಯಾಗುತ್ತದೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಶ್ ಏನೇ ಮಾಡಿದರೂ ಹೊಸ ರೀತಿಯಲ್ಲಿ ಯೋಚಿಸುತ್ತಾರೆ. ಹಾಗಾಗಿ ಈ ಲೆಕ್ಕಾಚಾರವನ್ನು ಅವರು ಹೊಸದಾಗಿ ಯೋಚಿಸಿದ್ದಾರೆ. ಅದರಾಚೆ ಏನೂ ಇಲ್ಲ ಎನ್ನುತ್ತಾರೆ ಯಶ್ ಆಪ್ತರು.

    ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

     

    ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ನಿನ್ನೆ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದರು.

  • ಯಶ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ: ಲೋಡಿಂಗ್.. ಲೋಡಿಂಗ್

    ಯಶ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ: ಲೋಡಿಂಗ್.. ಲೋಡಿಂಗ್

    ರಾಕಿಭಾಯ್ ಯಶ್ ನಟನೆಯ ಹೊಸ ಸಿನಿಮಾದ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.  ಈ ಚಿತ್ರಕ್ಕೆ ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi) ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾದ ಮೂಲಕ ಸಾಯಿ ಪಲ್ಲವಿ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಾಜಾ ಸುದ್ದಿ. ಆದರೆ, ಇದು ಅಧಿಕೃತವಾದ ಮಾಹಿತಿ ಅಲ್ಲ. ಚಿತ್ರರಂಗದಲ್ಲಿ ನಡೆದಿರುವ ಗುಸುಗುಸು ಮಾತು.

    ಡಿಸೆಂಬರ್ 8ಕ್ಕೆ ಟೈಟಲ್

    ಷ್ಟು ದಿನ ತೆರೆಮೆರೆಯಲ್ಲಿ ತಮ್ಮ ಹೊಸ ಸಿನಿಮಾದ ಕೆಲಸ ಮಾಡುತ್ತಿದ್ದ ಯಶ್, ನಿನ್ನೆಯಿಂದ ಅಭಿಮಾನಿಗಳಿಗೆ ದಿನಕ್ಕೊಂದು ಹೊಸ ಸುದ್ದಿ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಲೋಡಿಂಗ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದವರು, ಇಂದು ತಮ್ಮ ಹೊಸ ಸಿನಿಮಾದ ಟೈಟಲ್ (Title) ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 8ರಂದು ಮುಂಜಾನೆ 9.55ಕ್ಕೆ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವುದಾ ತಿಳಿಸಿದ್ದಾರೆ.

    ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗೆದ್ದು ಬೀಗಿದ್ದು ಆಗಿದೆ. ಇನ್ನೂ ಏನೇ ಇದ್ರೂ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡೊದೊಂದೇ ಬಾಕಿ. ಹೀಗಿರುವಾಗ ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

    ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಲೋಡಿಂಗ್’ ಎಂಬ ಬರಹದ ಫೋಟೋವನ್ನ ನಿನ್ನೆ ಇನ್ಸ್ಟಾಗ್ರಾಂ ಮುಖಪುಟ ಬದಲಿಸಿದ್ದಾರೆ ಯಶ್. ಸಂಡೆ ಸಂಜೆ ಯಶ್ ಸಖತ್ ನ್ಯೂಸ್ ಕೊಟ್ಟಿದ್ದರು.

     

    ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್ 19 (Yash 19) ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ ‘ಯಶ್ 19’ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ. ನಟ ಯಶ್ ಅವರು ಮಲಯಾಳಂ ಡೈರೆಕ್ಟರ್ ಗೀತು ಮೋಹನ್ ದಾಸ್ ಜೊತೆ ಕೈಜೋಡಿಸಿದ್ದಾರೆ ಎಂಬ ಸುದ್ದಿಯಿದೆ. ‘ಯಶ್ 19’ ಪ್ರಾಜೆಕ್ಟ್ ಜೊತೆಗೆ ಕೆಜಿಎಫ್ 3 ಕೂಡ ಯಶ್ ಕೈಯಲ್ಲಿದೆ.

  • ಸೀತೆ ಪಾತ್ರ ಒಪ್ಪಿಕೊಂಡಿದ್ದು ನಿಜ: ನಟಿ ಸಾಯಿ ಪಲ್ಲವಿ

    ಸೀತೆ ಪಾತ್ರ ಒಪ್ಪಿಕೊಂಡಿದ್ದು ನಿಜ: ನಟಿ ಸಾಯಿ ಪಲ್ಲವಿ

    ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ರಾಮಾಯಣ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲದ ಸುದ್ದಿಗಳು ಹೊರ ಬರುತ್ತಲೇ ಇವೆ. ಅವುಗಳು ಅಧಿಕೃತವಾ ಅಥವಾ ಸುಳ್ಳಾ ಗೊತ್ತಿಲ್ಲ. ಆದರೂ, ದಿನಕ್ಕೊಂದು ಸುದ್ದಿಗಳು ಹೊರ ಬೀಳುತ್ತಿವೆ. ಈ ಸುದ್ದಿಗೊಂದು ಖಚಿತತೆ ಸಿಕ್ಕಿದೆ. ಈ ಸಿನಿಮಾದಲ್ಲಿ ಸೀತೆ (Seetha) ಪಾತ್ರವನ್ನು ಮಾಡುತ್ತಿರುವುದಾಗಿ ಸಾಯಿ ಪಲ್ಲವಿ (Sai Pallavi) ಒಪ್ಪಿಕೊಂಡಿದ್ದಾರೆ. ಆ ಪಾತ್ರಕ್ಕೆ ಜೀವ ತುಂಬುವಂತೆ ಪ್ರಯತ್ನ ಮಾಡುವೆ ಎಂದೂ ಹೇಳಿಕೊಂಡಿದ್ದಾರೆ.

    ರಾವಣನಾಗ್ತಾರಾ ಯಶ್?

    ಈ ಸಿನಿಮಾದಲ್ಲಿ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

    ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ.

     

    ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]