Tag: ಸಾಯಿ ಪಲ್ಲವಿ

  • ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

    ನ್ಯಾಷನಲ್ ಸ್ಟಾರ್ ಯಶ್ ಪ್ರಸ್ತುತ ‘ಟಾಕ್ಸಿಕ್’ (Toxic) ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಒಪ್ಪಿಕೊಂಡಿರುವ ‘ರಾಮಾಯಣ’ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಡಿಸೆಂಬರ್‌ನಲ್ಲಿ ಯಶ್ (Yash) ‘ರಾಮಾಯಣ’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಕನ್ನಡತಿ ಸೀರಿಯಲ್‌ ನಟ ಕಿರಣ್‌ ರಾಜ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಆ.8ಕ್ಕೆ ಟಾಕ್ಸಿಕ್ ಸಿನಿಮಾಗೆ ಚಿತ್ರಕ್ಕೆ ನೀಡಲಾಗಿತ್ತು. ಅಂದಿನಿಂದ ಈ ಪ್ರಾಜೆಕ್ಟ್‌ನಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಇನ್ನೂ ಹಲವು ಹಂತದಲ್ಲಿ ಶೂಟಿಂಗ್ ನಡೆಯಲಿದೆ. ಆದರೆ ರಣ್‌ಬೀರ್ ಕಪೂರ್ (Ranbir Kapoor) ‘ರಾಮಾಯಣ’ (Ramayana) ಚಿತ್ರದಲ್ಲಿ ಯಶ್ ‘ರಾವಣ’ನಾಗಿ ಬರೋಕೆ ಮುಹೂರ್ತ ಫಿಕ್ಸ್ ಆಗಿದೆ. ‘ಟಾಕ್ಸಿಕ್’ ಸಿನಿಮಾ ಜೊತೆಗೆಯೇ ಈ ಚಿತ್ರಕ್ಕೂ ಅವರು ಸಾಥ್ ನೀಡಲಿದ್ದಾರೆ.

    ರಣ್‌ಬೀರ್ ರಾಮನ ಪಾತ್ರ, ಸಾಯಿ ಪಲ್ಲವಿ (Sai Pallavi) ಸೀತೆ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಇವರ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಚಿತ್ರದ ಸೆಟ್‌ಗೆ ಯಶ್ ಎಂಟ್ರಿ ಕೊಡಲಿದ್ದಾರೆ. ರಾವಣನಾಗಿ ಘರ್ಜಿಸೋಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

    ಇನ್ನೂ ‘ರಾಮಾಯಣ’ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕನಾಗಿಯೂ ಕನ್ನಡದ ನಟ ಯಶ್ ಕೈಜೋಡಿಸಿದ್ದಾರೆ. ಹಾಗಾಗಿ ಈ ಸಿನಿಮಾದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ಶೂಟಿಂಗ್ ಮುಗಿಸಿದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟನೆಯ ‘ಅಮರನ್’ ಸಿನಿಮಾ

    ‘ಪ್ರೇಮಂ’ ನಟಿ ಸಾಯಿ ಪಲ್ಲವಿ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಿವಕಾರ್ತಿಕೇಯನ್ (Sivakarthikeyan) ಜೊತೆ ಸಾಯಿ ಪಲ್ಲವಿ ನಟಿಸಿರುವ ‘ಅಮರನ್’ (Amaran Film) ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಸಿನಿಮಾ ರಿಲೀಸ್‌ಗೆ ಸಿದ್ಧತೆ ಕೂಡ ನಡೆಯುತ್ತಿದೆ. ಇದನ್ನೂ ಓದಿ:ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ

    ‘ಅಮರನ್’ ಮೇಜರ್ ಮುಕುಂದ ವರದರಾಜನ್ ಜೀವನ ಚರಿತ್ರೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಯೋಧನಾಗಿ ಲೀಡ್ ರೋಲ್‌ನಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದು, ನಾಯಕಿಯಾಗಿ ಸಾಯಿ ಪಲ್ಲವಿ (Sai Pallavi)  ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಖ್ಯಾತ ನಟ ಕಮಲ್ ಹಾಸನ್ (Kamal Haasan), ಆರ್. ಮಹೇಂದ್ರನ್, ವಿವೇಕ್ ಸೇರಿ ನಿರ್ಮಾಣ ಮಾಡಿದ್ದಾರೆ.

    ರಾಜಕುಮಾರ್ ಪೆರಿಸ್ವಾಮಿ ನಿರ್ದೇಶನದ ಈ ಚಿತ್ರದ ಶೂಟಿಂಗ್ ಈಗ ಪೂರ್ಣಗೊಂಡಿದ್ದು, ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಘೋಷಿಸಲಿದ್ದಾರೆ. ಇನ್ನೂ ಸಾಯಿ ಪಲ್ಲವಿ ಮತ್ತು ಶಿವಕಾರ್ತಿಕೇಯನ್‌ ಜೋಡಿಯನ್ನು ನೋಡಲು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದಾರೆ.

    ಅಂದಹಾಗೆ, ರಾಮಾಯಣ, ತಾಂಡೇಲ್, ಆಮೀರ್ ಖಾನ್ ಪುತ್ರನ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಾಯಿ ಪಲ್ಲವಿ ಕೈಯಲ್ಲಿವೆ. ಬಾಲಿವುಡ್‌ನಲ್ಲಿ ಕೂಡ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

  • ವಿಜಯ್ ದೇವರಕೊಂಡಗೆ ಸಾಯಿ ಪಲ್ಲವಿ ನಾಯಕಿ

    ವಿಜಯ್ ದೇವರಕೊಂಡಗೆ ಸಾಯಿ ಪಲ್ಲವಿ ನಾಯಕಿ

    ‘ಪ್ರೇಮಂ’ (Premam) ಬೆಡಗಿ ಸಾಯಿ ಪಲ್ಲವಿ (Sai Pallavi) ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಸಿನಿಮಾದ ಶೂಟಿಂಗ್ ತೊಡಗಿಸಿಕೊಂಡಿರುವ ಸಾಯಿ ಪಲ್ಲವಿ ಈಗ ತೆಲುಗಿನ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರೌಡಿ ಬಾಯ್‌ಗೆ ಸಾಯಿ ಪಲ್ಲವಿ ನಾಯಕಿಯಾಗಲು ಸಜ್ಜಾಗಿದ್ದಾರೆ.

    ಖುಷಿ, ಫ್ಯಾಮಿಲಿ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ನಟನೆಯ ಹೊಸ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ ಎಂದು ಸುದ್ದಿ ಹರಿದಾಡುತ್ತಿದೆ. ವಿಜಯ್ ಜೊತೆ ಸಾಯಿ ಪಲ್ಲವಿ ಜೋಡಿಯಾಗಿ ತೋರಿಸಲು ಡೈರೆಕ್ಟರ್‌ ರವಿ ಕಿರಣ್‌ ಕೋಲಾ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ.

    ಒಂದು ವಿಭಿನ್ನ ಕಥೆಯನ್ನು ತೋರಿಸಲು ರವಿಕಿರಣ್ ಹೊರಟಿದ್ದಾರೆ. ವಿಜಯ್‌ಗೆ ಸಾಯಿ ಪಲ್ಲವಿ ಸೂಕ್ತ ನಾಯಕಿ ಎಂದು ಚಿತ್ರತಂಡ ಯೋಚಿಸಿ ನಟಿಯನ್ನು ಸಂಪರ್ಕಿಸಿದೆ. ಸಾಯಿ ಪಲ್ಲವಿ ಕೂಡ ಕಥೆ ಕೇಳಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನೂ ಓದಿ:ಸ್ವಪ್ನಮಂಟಪ: ಶೂಟಿಂಗ್ ಮುಗಿಸಿದ ಬರಗೂರು ರಾಮಚಂದ್ರಪ್ಪ

    ಇನ್ನೂ ಆಮೀರ್ ಖಾನ್ (Aamir Khan) ಪುತ್ರನಿಗೆ ನಾಯಕಿಯಾಗಿ ಬಾಲಿವುಡ್‌ಗೆ ಸಾಯಿ ಪಲ್ಲವಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯಶ್ (Yash) ಸಹ-ನಿರ್ಮಾಣದ ‘ರಾಮಾಯಣ’ (Ramayana) ಚಿತ್ರದಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ನಾಗಚೈತನ್ಯ (Nagachaitanya) ಜೊತೆ ತಾಂಡೇಲ್ ಸಿನಿಮಾ ಮಾಡಿ ಮುಗಿಸಿದ್ದಾರೆ. ಹೀಗೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.

  • ಮೊಡವೆ ನಿವಾರಣೆಗಾಗಿ ಸರ್ಜರಿ ಮೊರೆ ಹೋದ್ರಾ ಸಾಯಿ ಪಲ್ಲವಿ?

    ಮೊಡವೆ ನಿವಾರಣೆಗಾಗಿ ಸರ್ಜರಿ ಮೊರೆ ಹೋದ್ರಾ ಸಾಯಿ ಪಲ್ಲವಿ?

    ಟಾಲಿವುಡ್ (Tollywood) ನಟಿ ಸಾಯಿ ಪಲ್ಲವಿ (Sai Pallavi) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡ್ಯಾನ್ಸಿಂಗ್ ಕ್ವೀನ್ ಎಂದೇ ಹೆಸರು ಮಾಡಿರುವ ಸಾಯಿ ಪಲ್ಲವಿ ಬಗ್ಗೆ ಹೊಸ ವಿಚಾರವೊಂದು ಚರ್ಚೆಯಾಗುತ್ತಿದೆ. ಮೊಡವೆ ನಿವಾರಣೆಗಾಗಿ ನಟಿ ಸರ್ಜರಿ ಮೊರೆ ಹೋದ್ರಾ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

    ‘ಪ್ರೇಮಂ’ (Premam Film) ಚಿತ್ರದ ಮೂಲಕ ಸಾಯಿ ಪಲ್ಲವಿ ಮಾಲಿವುಡ್‌ಗೆ ಕಾಲಿಟ್ಟಾಗ ಮುಖ ತುಂಬಾ ಮೊಡವೆ ಇತ್ತು. ಬಹುತೇಕ ಸಿನಿಮಾದಲ್ಲಿ ಮೇಕಪ್ ಇಲ್ಲದೇ ಕೂಡ ನಟಿಸಿದ್ದರು. ಈಗ ಅವರ ಮುಖದಲ್ಲಿ ಮೊಡವೆಗಳು ಮಾಯವಾಗಿದೆ. ಅದಕ್ಕೆ ಸರ್ಜರಿ ಮಾಡಿಸಿದ್ರಾ ಎಂಬ ಪ್ರಶ್ನೆ ನಟಿಗೆ ಸಂದರ್ಶನವೊಂದರಲ್ಲಿ ಎದುರಾಗಿದೆ. ಇದನ್ನೂ ಓದಿ:ತಮಿಳಿನ ರಿಮೇಕ್ ಸಿನಿಮಾದಲ್ಲಿ ಪೂಜಾ ಹೆಗ್ಡೆ

    ಹದಿಹರೆಯದ ಹುಡುಗಿಯರಲ್ಲಿ ಮೊಡವೆಗಳು ಆಗೋದು ಸಾಮಾನ್ಯ ವಿಚಾರ. ನಂತರ ದಿನಗಳಲ್ಲಿ ಅವು ಕಡಿಮೆ ಆಗುತ್ತದೆ. ದಪ್ಪ ಕೂದಲಿಗಾಗಿ ನಾನು ಹೆಚ್ಚಾಗಿ ಪೋಷಕಾಂಶ ಆಹಾರವನ್ನು ಸೇವಿಸುತ್ತೇನೆ. ನಂತರ ಅಲೋವರಾ ಜೆಲ್ ಅನ್ನು ಹಚ್ಚಿಕೊಳ್ಳುತ್ತೇನೆ ಎಂದು ನಟಿ ವಿವರಿಸಿದ್ದಾರೆ. ಸರ್ಜರಿ ವಿಚಾರಕ್ಕೆ ನಟಿ ಸ್ಪಷ್ಟನೆ ನೀಡಿದ್ದಾರೆ.

    ಆಮೀರ್ ಖಾನ್‌ಗೆ ನಾಯಕಿಯಾಗಿ ಸಾಯಿ ಪಲ್ಲವಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ರಣ್‌ಬೀರ್‌ಗೆ ಸೀತೆಯಾಗಿ ‘ರಾಮಾಯಣ’ (Ramayana Film) ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಗಚೈತನ್ಯಗೆ ನಾಯಕಿಯಾಗಿ ‘ತಾಂಡೇಲ್’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಬಿಗ್ ಪ್ರಾಜೆಕ್ಟ್ ಚಿತ್ರಗಳು ನಟಿಯ ಕೈಯಲ್ಲಿವೆ.

  • ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯ್ತು ನಾಗಚೈತನ್ಯ, ಸಾಯಿ ಪಲ್ಲವಿ ಸಿನಿಮಾ

    ಒಟಿಟಿಗೆ ಭಾರೀ ಮೊತ್ತಕ್ಕೆ ಸೇಲ್ ಆಯ್ತು ನಾಗಚೈತನ್ಯ, ಸಾಯಿ ಪಲ್ಲವಿ ಸಿನಿಮಾ

    ತೆಲುಗಿನ ನಟ ನಾಗಚೈತನ್ಯ (Nagachaitanya) ಮತ್ತು ಸಾಯಿ ಪಲ್ಲವಿ (Sai Pallavi) ಜೋಡಿ ಲವ್ ಸ್ಟೋರಿ ಚಿತ್ರದ ನಂತರ ಮತ್ತೆ ಒಂದಾಗಿದ್ದಾರೆ. ‘ತಾಂಡೇಲ್’ (Thandel Film) ಚಿತ್ರದ ಮೂಲಕ ಮತ್ತೆ ಹೊಸ ಪ್ರೇಮ ಕಹಾನಿ ಹೇಳಲು ರೆಡಿಯಾಗಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಭಾರೀ ಮೊತ್ತಕ್ಕೆ ಒಟಿಟಿಗೆ ಸೇಲ್ ಆಗಿದೆ.

    ನಾಗಚೈತನ್ಯ ಕೆರಿಯರ್‌ನಲ್ಲಿ ಮೊದಲ ಬಾರಿಗೆ ದುಬಾರಿ ಮೊತ್ತಕ್ಕೆ ಸಿನಿಮಾ ಒಟಿಟಿಗೆ ಮಾರಾಟವಾಗಿದೆ. ಬಹುಭಾಷೆಗಳಲ್ಲಿ ‘ತಾಂಡೇಲ್’ ಚಿತ್ರದ ಒಟಿಟಿ ರೈಟ್ಸ್ ಅನ್ನು ಖರೀದಿಸಿದೆ. 40 ಕೋಟಿ ರೂ.ಗೆ ಸಿನಿಮಾವನ್ನು ಖರೀದಿ ಮಾಡಲಾಗಿದೆ. ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಇದನ್ನೂ ಓದಿ:ವಿಲನ್ ಆಗಿ ಮತ್ತೆ ಕಿರುತೆರೆಗೆ ಕಾವ್ಯಾ ಶಾಸ್ತ್ರಿ ಎಂಟ್ರಿ

    ನಿರ್ದೇಶಕ ಚಂದು ಮಾಂಡೇಟಿ ನಿರ್ದೇಶನದ ‘ತಾಂಡೇಲ್’ ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದೇ ಡಿಸೆಂಬರ್‌ನಲ್ಲಿ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

    ‘ತಾಂಡೇಲ್’ ಸಿನಿಮಾ ಆ್ಯಕ್ಷನ್ ಕಮ್ ಲವ್ ಸ್ಟೋರಿ ಸಿನಿಮಾವಾಗಿದ್ದು, ವಿಭಿನ್ನ ಕಥೆ ಮೂಲಕ ನಾಗಚೈತನ್ಯ, ಸಾಯಿ ಪಲ್ಲವಿ ಬರುತ್ತಿದ್ದಾರೆ. ಬನ್ನಿ ವಾಸು ನಿರ್ಮಾಣ ಮಾಡಿದ್ದಾರೆ.

  • ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ: ಸಿನಿಮಾ ನೋಡಲ್ಲ ಎಂದ ನೆಟ್ಟಿಗರು

    ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ: ಸಿನಿಮಾ ನೋಡಲ್ಲ ಎಂದ ನೆಟ್ಟಿಗರು

    ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಅವರು ಸೀತಾ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಾಗ ಹಿಂದೂ ವಿರೋಧಿ ಹೇಳಿಕೆಯನ್ನು ಸಾಯಿ ಪಲ್ಲವಿ ನೀಡಿದ್ದರು. ಈ ಕಾರಣದಿಂದಾಗಿ ಭಾರೀ ವಿರೋಧವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ.

    ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ (Remuneration) ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.

    ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.

     

    ಈ ನಡುವೆ ಸಿನಿಮಾಗಾಗಿ ರಣ್‌ಬೀರ್ (Ranbir Kapoor) ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್‌’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ (Ramayana) ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ (Adipurush Film) ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.

  • ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್‌ ಮುಗಿಸಿದ ಆಮೀರ್ ಖಾನ್ ಪುತ್ರ

    ಸದ್ದಿಲ್ಲದೇ 2ನೇ ಚಿತ್ರದ ಶೂಟಿಂಗ್‌ ಮುಗಿಸಿದ ಆಮೀರ್ ಖಾನ್ ಪುತ್ರ

    ಬಾಲಿವುಡ್ (Bollywood) ನಟ ಆಮೀರ್ ಖಾನ್ (Aamir Khan) ಪುತ್ರ ಜುನೈದ್ ಖಾನ್ ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ 2ನೇ ಸಿನಿಮಾದ ಶೂಟಿಂಗ್‌ ಕೂಡ ಮುಗಿಸಿ ಕೊಟ್ಟಿದ್ದಾರೆ. ಈ ಮೂಲಕ ಬಿಟೌನ್‌ನಲ್ಲಿ ಜುನೈದ್‌ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ:18 ವರ್ಷಗಳ ನಂತರ ಒಂದಾದ ಸೂರ್ಯ, ಜ್ಯೋತಿಕಾ

    ಸಾಯಿ ಪಲ್ಲವಿ ಜೊತೆಗಿನ ಚೊಚ್ಚಲ ಸಿನಿಮಾದ ಶೂಟಿಂಗ್‌ ಕೂಡ ಕಂಪ್ಲೀಟ್‌ ಆಗಿದೆ. ಜಪಾನ್‌ ಸೇರಿದಂತೆ ಹಲವು ಕಡೆ ಸಿನಿಮಾದ ಶೂಟಿಂಗ್ ನಡೆದಿದೆ. ಜುನೈದ್ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನ ‘ಮಹಾರಾಜ’ (Maharaja Film) ಸಿನಿಮಾ ನೋಡೋಕೆ ಕಾಯುತ್ತಿರುವ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ. ಇದನ್ನೂ ಓದಿ:ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರ: ಸಂಸದೆ ಸುಮಲತಾ ಹೇಳಿದ್ದೇನು?

    ಪ್ರತಿಷ್ಠಿತ ಸಂಸ್ಥೆಯ ಜೊತೆ ಜುನೈದ್ ಖಾನ್ (Junaid Khan) ಕೈ ಜೋಡಿಸಿದ್ದಾರೆ. 58 ದಿನಗಳ ಕಾಲ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಮೊದಲ ಸಿನಿಮಾಗಿಂತ 2ನೇ ಚಿತ್ರದ ಕಥೆ ಭಿನ್ನವಾಗಿದೆ. ಮೊದಲ ಸಿನಿಮಾ ರಿಲೀಸ್‌ ಆಗುವ ಮುಂಚೆಯೇ ಆಮೀರ್‌ ಪುತ್ರನಿಗೆ ಭಾರೀ ಬೇಡಿಕೆಯಿದೆ. ಸೈಲೆಂಟ್‌ ಆಗಿ ಎರಡು ಸಿನಿಮಾಗಳನ್ನು ಜುನೈದ್‌ ಮುಗಿಸಿ ಕೊಟ್ಟಿದ್ದಾರೆ.

    ಬಾಲಿವುಡ್‌ನಲ್ಲಿ ಸ್ಟಾರ್ ಕಲಾವಿದರ ಮಕ್ಕಳ ದರ್ಬಾರ್ ಶುರುವಾಗಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ, ಶ್ರೀದೇವಿ ಪುತ್ರಿಯರು ಸೇರಿದಂತೆ ಅನೇಕರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಮೀರ್ ಖಾನ್ ಪುತ್ರ ಕೂಡ ನಟನೆಯ ಅಖಾಡಕ್ಕೆ ಇಳಿಯುವ ಮುಂಚೆಯೇ ಸಕಲ ತಯಾರಿ ಮಾಡಿಕೊಂಡು ಬಂದಿದ್ದಾರೆ. ತಂದೆ ಆಮೀರ್‌ರಂತೆಯೇ ಜುನೈದ್ ಗಟ್ಟಿ ನೆಲೆ ಗಿಟ್ಟಿಸಿಕೊಳ್ತಾರಾ ಎಂದು ಕಾದುನೋಡಬೇಕಿದೆ.

  • ‘ರಾಮಾಯಣ’ ಚಿತ್ರದ ಲೆಕ್ಕಾಚಾರ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

    ‘ರಾಮಾಯಣ’ ಚಿತ್ರದ ಲೆಕ್ಕಾಚಾರ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

    ಬಾಲಿವುಡ್ ಸಿನಿಮಾ ರಂಗದಲ್ಲಿ ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ (Remuneration) ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.

    ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.

    ಈ ನಡುವೆ ಸಿನಿಮಾಗಾಗಿ ರಣ್‌ಬೀರ್ (Ranbir Kapoor) ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್‌’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ (Ramayana) ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ (Adipurush Film) ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.

    ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದರೆ ಫಿಟ್ ಆಗಿರಬೇಕು. ಅಲ್ಲದೇ ಗೆಟಪ್ ಸಹ ಬದಲಾಯಿಸಿಕೊಳ್ಳಬೇಕು. ಅದಕ್ಕಾಗಿ ರಣಬೀರ್ ಕಪೂರ್ ಅವರು ತಮ್ಮ ಟ್ರೇನರ್ ಜೊತೆ ಹಳ್ಳಿಗೆ ಹೋಗಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವಿವಿಧ ಬಗೆಯ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

     

    ‘ಅನಿಮಲ್’ ಚಿತ್ರದ ಸಕ್ಸಸ್ ನಂತರ ರಾಮನಾಗಿ ಬರುತ್ತಿರುವ ರಣ್‌ಬೀರ್ ಕಪೂರ್ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ರಾಮನಾಗಿ ಕೂಡ ಆಲಿಯಾ ಪತಿ ಗೆದ್ದು ಬೀಗುತ್ತಾರಾ? ಕಾಯಬೇಕಿದೆ.

  • ಸಾಯಿ ಪಲ್ಲವಿ ನಟನೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ತೆಲುಗು ನಟ

    ಸಾಯಿ ಪಲ್ಲವಿ ನಟನೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ತೆಲುಗು ನಟ

    ಸೌತ್ ಸುಂದರಿ ಸಾಯಿ ಪಲ್ಲವಿ (Sai Pallavi) ನಟನೆಗೆ ಮತ್ತು ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ನ್ಯಾಚುರಲ್ ನಟನೆಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಹೀಗಿರುವಾಗ ಸಹಜ ನಟಿ ಸಾಯಿ ಪಲ್ಲವಿ ನಟನೆ ಬಗ್ಗೆ ತೆಲುಗು ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇತ್ತೀಚೆಗೆ ಸಿನಿಮಾವೊಂದರ ಸಂದರ್ಶನದಲ್ಲಿ ನಿಖಿಲ್‌ಗೆ ಪ್ರಶ್ನೆಯೊಂದು ಎದುರಾಗಿದೆ. ಯಾವ ನಟಿಯ ನಟನೆ ನೋಡಿ ನೀವು ಕಣ್ಣೀರು ಹಾಕಿದ್ರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಥಟ್ ಅಂತ ಸಾಯಿ ಪಲ್ಲವಿ ಹೆಸರನ್ನು ನಟ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

    ‘ವಿರಾಟ ಪರ್ವಂ’ (Viraat Parvam) ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆ ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ರಿವೀಲ್ ಮಾಡಿದ್ದಾರೆ. ಬಳಿಕ ಆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿಯ ಸಾವಿನ ದೃಶ್ಯ ಕಣ್ಣೀರು ತರಿಸಿತ್ತು. ಇದರ ಬಗ್ಗೆ ಸಾಯಿ ಪಲ್ಲವಿ ಜೊತೆ ಕೂಡ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಅಂದಹಾಗೆ, ಸದ್ಯ ಸಾಯಿ ಪಲ್ಲವಿ ಅವರು ಬಾಲಿವುಡ್‌ಗೆ ಹಾರಿದ್ದಾರೆ. ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆ ನಾಗಚೈತನ್ಯ ಹೊಸ ಚಿತ್ರಕ್ಕೆ ನಟಿ ಹೀರೋಯಿನ್ ಆಗಿದ್ದಾರೆ.

  • ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

    ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ನಡುವೆ ಹೊಸ ವಿಚಾರವೊಂದು ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಜೊತೆ ನಟಿಸಲು ಸಾಯಿ ಪಲ್ಲವಿ (Sai Pallavi) ಫೈನಲ್‌ ಆಗಿದ್ದರು. ಆದರೆ ಲೈಗರ್ ಹೀರೋ ಮೃಣಾಲ್ ಠಾಕೂರ್ (Mrunal) ಮಣೆ ಹಾಕಿದ್ದೇಕೆ ಎಂದು ಚರ್ಚೆಯಾಗುತ್ತಿದೆ.

    ವಿಜಯ್ ದೇವರಕೊಂಡ, ಮೃಣಾಲ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಇದೇ ಏಪ್ರಿಲ್ 5ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ. ವಿಜಯ್- ಮೃಣಾಲ್ ನಟಿಸಿರುವ ಚಿತ್ರದ ಹಾಡು, ಟ್ರೈಲರ್ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಈ ಚಿತ್ರದಲ್ಲಿ ಮೊದಲು ಹೀರೋ ಜೊತೆ ನಟಿಸಲು ಸೆಲೆಕ್ಟ್ ಆಗಿದ್ದು ಸಾಯಿ ಪಲ್ಲವಿ ಆದರೆ ಅವರ ಬದಲು ಮೃಣಾಲ್ ಯಾಕೆ ಅವಕಾಶ ಕೊಟ್ಟರು. ಏಕಾಏಕಿ ನಾಯಕಿ ಬದಲಾವಣೆ ಆಗಿದ್ದೇಕೆ? ಸಾಯಿ ಪಲ್ಲವಿಯಂತಹ ಪ್ರತಿಭಾನ್ವಿತ ನಟಿಯನ್ನು ಕೈಬಿಟ್ಟಿದ್ದೇಕೆ? ಎಂದು ಫ್ಯಾನ್ಸ್‌ ಪ್ರಶ್ನಿಸುತ್ತಿದ್ದಾರೆ.

    ಕೋಟಿ ಕೋಟಿ ದುಡ್ಡು ಕೊಡುತ್ತೀವಿ ಅಂದ್ರು ಲಿಪ್ ಲಾಕ್, ಹಸಿ ಬಿಸಿ ದೃಶ್ಯಗಳಲ್ಲಿ ಸಾಯಿ ಪಲ್ಲವಿ ನಟಿಸಲ್ಲ. ಸಿನಿಮಾಗಳಲ್ಲಿ ನಟಿಸಲು ತಮ್ಮದೇ ಕೆಲವು ರೂಲ್ಸ್‌ಗಳನ್ನು ಇಂದಿಗೂ ಸಾಯಿ ಪಲ್ಲವಿ ಫಾಲೋ ಮಾಡ್ತಾರೆ. ವಿಜಯ್ ದೇವರಕೊಂಡ ಚಿತ್ರ ಅಂದ್ಮೇಲೆ ಅಲ್ಲಿ ಲಿಪ್ ಲಾಕ್ ಸೀನ್, ಕೆಲವು ಹಸಿ ಬಿಸಿ ದೃಶ್ಯಗಳು ಇದ್ದೇ ಇರುತ್ತದೆ. ಸಾಯಿ ಪಲ್ಲವಿ ಒಪ್ಪಲ್ಲ ಎಂದೇ ವಿಜಯ್, ಮೃಣಾಲ್‌ಗೆ ಚಾನ್ಸ್ ಕೊಟ್ಟಿದ್ದಾರೆ ಎಂದೇ ಟಾಕ್ ಆಗುತ್ತಿದೆ. ಇದನ್ನೂ ಓದಿ:ಅಮ್ಮನ ಲಾಲಿ: ಕನ್ನಡದಲ್ಲಿ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ

    ಸಿನಿಮಾ ಕಥೆಗೆ ಹಸಿ ಬಿಸಿ ದೃಶ್ಯಗಳು ಅವಶ್ಯಕತೆ ಇದ್ರೆ ಮೃಣಾಲ್ ನಟಿಸುತ್ತಾರೆ. ಹಾಗಾಗಿ ವಿಜಯ್ ದೇವರಕೊಂಡ ಅವರು ಮೃಣಾಲ್‌ಗೆ ಜೈ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಡಿಯರ್ ಕಾಮ್ರೆಡ್ ಚಿತ್ರಕ್ಕೆ ಸಾಯಿ ಪಲ್ಲವಿ ಸೆಲೆಕ್ಟ್ ಆಗಿದ್ದರು. ಬೋಲ್ಡ್ ಆಗಿ ಸಾಯಿ ಪಲ್ಲವಿ ನಟಿಸಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಮಂದಣ್ಣಗೆ ವಿಜಯ್ ಮಣೆ ಹಾಕಿದ್ದರು. ಈಗ ಮತ್ತೆ ಹಿಸ್ಟರಿ ರಿಪೀಟ್ ಆಗಿದೆ ಎಂಬ ಸುದ್ದಿ ಆಂಧ್ರದಲ್ಲಿ ಹರಿದಾಡುತ್ತಿದೆ.

    ‘ಲೈಗರ್’ (Liger) ಸಿನಿಮಾ ಮಕಾಡೆ ಮಲಗಿದ ಮೇಲೆ ಸಮಂತಾ (Samantha) ಜೊತೆ ‘ಖುಷಿ’ ಸಿನಿಮಾ ಮಾಡಿ ವಿಜಯ್‌ ದೇವರಕೊಂಡ ಗೆದ್ದರು. ಈಗ ಮತ್ತೆ ಫ್ಯಾಮಿಲಿ ಸ್ಟಾರ್ ಮೂಲಕ ನಟ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.