Tag: ಸಾಯಿ ಚರಣ್

  • ವಿದ್ಯುತ್ ಶಾಕ್ ಹೊಡೆದ ಪ್ರಕರಣ – ಆಸ್ಪತ್ರೆಯಲ್ಲಿ ಸಾಯಿ ಚರಣ್ ಚೇತರಿಕೆ

    ವಿದ್ಯುತ್ ಶಾಕ್ ಹೊಡೆದ ಪ್ರಕರಣ – ಆಸ್ಪತ್ರೆಯಲ್ಲಿ ಸಾಯಿ ಚರಣ್ ಚೇತರಿಕೆ

    ಬೆಂಗಳೂರು: ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಆಸ್ಪತ್ರೆ ಸೇರಿರುವ ಬಾಲಕ ಸಾಯಿ ಚರಣ್ ಚೇತರಿಸಿಕೊಳ್ಳುತ್ತಿದ್ದಾನೆ.

    ಮಗನ ಆರೋಗ್ಯದ ಬಗ್ಗೆ ಬಾಲಕನ ತಂದೆ ಬಸವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಇಂದು ಕೃತಕ ಉಸಿರಾಟದ ಉಪಕರಣ ತೆಗೆಯಲಾಗುತ್ತಿದ್ದು, ನೈಸರ್ಗಿಕವಾಗಿ ಉಸಿರಾಡಿಸಲು ಅವಕಾಶ ಕಲ್ಪಿಸಲಾಗುತ್ತದೆ. 6 ಗಂಟೆಗಳ ಕಾಲ ನೈಸರ್ಗಿಕವಾಗಿ ಉಸಿರಾಟ ಮಾಡಿದ್ರೆ ಮುಂದಿನ 2 ದಿನದಲ್ಲಿ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.

    ಸದ್ಯ ಸಾಯಿ ಚರಣ್ ಮೊಬೈಲ್ ನಲ್ಲಿ ಆಟ ಆಡುತ್ತಿದ್ದಾನೆ. ನೈಸರ್ಗಿಕವಾಗಿ ಉಸಿರಾಡುತ್ತಿರುವ ಬಾಲಕ ಸಹಜ ಸ್ಥಿತಿಯತ್ತ ತಲುಪಲು ಎಂದು ಮೊಬೈಲ್ ನೀಡಿದ್ದೇವೆ. 2 ಗಂಟೆ ನಂತರ ಯಾವುದೇ ತೊಂದರೆ ಆಗದಿದ್ದರೆ ಊಟ ಸಹ ನೀಡಲು ವೈದ್ಯರ ನಿರ್ಧಾರ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

    ಶಾಸಕ ಗೋಪಾಲಯ್ಯ ಕರೆ ಮಾಡಿ 2 ಲಕ್ಷ ಚೆಕ್ ಕೊಡಿಸುವುದಾಗಿ ಹೇಳಿದ್ದಾರೆ. ಸದ್ಯ ಚಿಕಿತ್ಸೆಗೆ 5 ಲಕ್ಷ ಖರ್ಚು ಆಗಲಿದೆ. ನಾವು ಈಗಾಗಲೇ ಒಂದೂವರೆ ಲಕ್ಷವನ್ನು ಈಗಾಗಲೇ ಆಸ್ಪತ್ರೆಗೆ ಪಾವತಿಸಿದ್ದೇವೆ. ಮೇಯರ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಬೆಸ್ಕಾಂ ಸಹ ಸಹಾಯ ಮಾಡುವುದಾಗಿ ಹೇಳುತ್ತಿದೆ. ಆದ್ರೆ ನಮ್ಮ ಮಗನ ಸ್ಥಿತಿ ಯಾರಿಗೂ ಬೇಡ. ದಯಮಾಡಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳ ದುರಸ್ತಿ ಮಾಡಿ. ಇಲ್ಲವಾದ್ರೆ ಜನ ರೊಚಿಗೆದ್ದು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಬಸವರಾಜ್ ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=SMhv7yZ7C5k

    https://www.youtube.com/watch?v=LXHTYpGtJLg