Tag: ಸಾಯಿರಾಧಾ ರೆಸಾರ್ಟ್

  • ಜಗತ್ತಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಅಂದ್ರೆ ಕುಮಾರಸ್ವಾಮಿ: ಶಿವರಾಮೇಗೌಡ

    ಜಗತ್ತಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಅಂದ್ರೆ ಕುಮಾರಸ್ವಾಮಿ: ಶಿವರಾಮೇಗೌಡ

    ಉಡುಪಿ: ಸಿಎಂ ಕುಮಾರಸ್ವಾಮಿಗೆ ಕೋಪನೇ ಬರಲ್ಲ. ಅವರು ಜಗತ್ತಲ್ಲೇ ಕೋಪ ಮಾಡಿಕೊಳ್ಳದ ವ್ಯಕ್ತಿ ಅಂತ ಮಂಡ್ಯ ಸಂಸದ ಶಿವರಾಮೇಗೌಡ ಸಿಎಂ ಬಗ್ಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

    ಉಡುಪಿಯ ಕಾಪುವಿನಲ್ಲಿರುವ ಸಾಯಿರಾಧಾ ರೆಸಾರ್ಟ್ ಗೆ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆಗಮಿಸಿದ್ದು, ಅವರ ಆರೋಗ್ಯ ವಿಚಾರಿಸಲು ಸಂಸದ ಶಿವರಾಮೇಗೌಡ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಸಿಎಂಗೆ ಕೋಪ ಇಲ್ಲ. ಜಗತ್ತಿನಲ್ಲಿ ಕೋಪ ಮಾಡಿಕೊಳ್ಳದಿರುವ ವ್ಯಕ್ತಿ ಒಬ್ಬರಿದ್ದರೆ ಅದು ಕುಮಾರಸ್ವಾಮಿ ಎಂದರು. ಬಳಿಕ ಮಂಡ್ಯ ಚೆನ್ನಾಗಿದೆ, ಯಾವ ಟೆನ್ಶನ್ ಇಲ್ಲ ಎಂದು ತಿಳಿಸಿದರು.

    ಕುಮಾರಸ್ವಾಮಿ ಹಾಗೂ ದೇವೇಗೌಡರ ಆರೋಗ್ಯ ವಿಚಾರಣೆಗೆ ಬಂದಿದ್ದೇನೆ. ಮಾಧ್ಯಮಗಳಿಂದ ಸಿಎಂ ದೂರವಿದ್ದಾರೆ. ಇದು ಸಿಎಂ ಅವರ ಖಾಸಗಿ ಭೇಟಿ. ಆರೋಗ್ಯದ ಚಿಕಿತ್ಸೆಗಾಗಿ ಉಡುಪಿಗೆ ಬಂದಿರುವುದರಿಂದ ನಿಮ್ಮ ಕೈಗೆ ಅವರು ಸಿಗುತ್ತಿಲ್ಲ ಎಂದು ತಿಳಿದರು.

    ಪುತ್ರ ನಿಖಿಲ್ ಚುನಾವಣಾ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿರುವ ಸಿಎಂ ಶಿವರಾಮೇಗೌಡ ಅವರನ್ನು ಕರೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಪ್ರಕೃತಿ ಚಿಕಿತ್ಸೆಯಲ್ಲಿ ಬ್ಯುಸಿಯಾಗಿರುವ ಎಚ್‍ಡಿಡಿಗೆ ಕೃಷ್ಣಮಠದಿಂದ ಆಹ್ವಾನ

    ಪ್ರಕೃತಿ ಚಿಕಿತ್ಸೆಯಲ್ಲಿ ಬ್ಯುಸಿಯಾಗಿರುವ ಎಚ್‍ಡಿಡಿಗೆ ಕೃಷ್ಣಮಠದಿಂದ ಆಹ್ವಾನ

    ಉಡುಪಿ: ಜಿಲ್ಲೆಯ ಮೂಳೂರಿನ ಸಾಯಿರಾಧಾ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರಿಗೆ ಕೃಷ್ಣಮಠದ ಪ್ರಸಾದದ ಜೊತೆಗೆ ಕೃಷ್ಣಮಠಕ್ಕೆ ಬರಲು ಆಹ್ವಾನ ನೀಡಲಾಗಿದೆ. ಹೀಗಾಗಿ ಮಠಕ್ಕೆ ಅಕ್ಷಯ ತೃತೀಯಕ್ಕೆ ಬರುವುದಾಗಿ ದೊಡ್ಡ ಗೌಡರು ಹೇಳಿದ್ದಾರೆ.

    ದಳಪತಿಗಳು ಇಂದು ನಾಲ್ಕನೇ ದಿನದ ಪಂಚಕರ್ಮ ಚಿಕಿತ್ಸೆಗೆ ಮೈಯ್ಯೊಡ್ಡಿದ್ದಾರೆ. ಈ ನಡುವೆ ಉಡುಪಿ ಕೃಷ್ಣ ಮಠದಿಂದ ಕೃಷ್ಣ, ಮುಖ್ಯಪ್ರಾಣ ದೇವರ ಪ್ರಸಾದ ನೀಡಲಾಗಿದೆ. ಹಾಗೆಯೇ ಪ್ರಕೃತಿ ಚಿಕಿತ್ಸೆ ಪೂರೈಸಿ ಮಠಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಕೃಷ್ಣಮಠಕ್ಕೆ ಬರುವುದಾಗಿ ತಿಳಿಸಿದ ದೇವೇಗೌಡರು, ಮೇ 7ಕ್ಕೆ ಅಕ್ಷಯ ತೃತೀಯದ ದಿನ ಮಠಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ.

    ಕೃಷ್ಣಮಠದಲ್ಲಿ 11 ಗಂಟೆಗೆ ದರ್ಶನ ವ್ಯವಸ್ಥೆ ಮಾಡಿ. ನಂತರ ಮಠದಲ್ಲೇ ಅನ್ನಪ್ರಸಾದ ಸ್ವೀಕರಿಸುವುದಾಗಿ ಹೇಳಿದ್ದಾರೆ. ಸ್ವರ್ಣ ಗೋಪುರ ಉದ್ಘಾಟನೆಗೂ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಉಡುಪಿ ಸಾಯಿರಾಧಾ ರೆಸಾರ್ಟಿಗೆ ಹಸಿರು ಬೇಲಿ!

    ಉಡುಪಿ ಸಾಯಿರಾಧಾ ರೆಸಾರ್ಟಿಗೆ ಹಸಿರು ಬೇಲಿ!

    ಉಡುಪಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಗರದ ಸಾಯಿರಾಧಾ ರೆಸಾರ್ಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ.

    ಹೌದು. ಇಂದು ಸಿಎಂ ಹಾಗೂ ಮಾಜಿ ಪ್ರಧಾನಿಗೆ ಎರಡನೇ ದಿನದ ಪಂಚಕರ್ಮ ಚಿಕಿತ್ಸೆ ಮುಂದುವರಿದಿದೆ. ಯೋಗ, ಧ್ಯಾನದಲ್ಲಿ ಜೆಡಿಎಸ್ ವರಿಷ್ಠರು ಮಗ್ನರಾಗಿದ್ದಾರೆ. ಹೀಗಾಗಿ ರೆಸಾರ್ಟ್ ಸುತ್ತ ಮಾಧ್ಯಮದವರಿಗೆ ನಿಷೇಧ ಹೇರಿದ್ದಾರೆ.


    ಕಾಪು ತಾಲೂಕಿನ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‍ನ ಬೀಚ್ ಆವರಣದಲ್ಲಿ ಸೋಮವಾರ ಶಾಸಕ ಭೋಜೇಗೌಡ ಹಾಗೂ ಸಚಿವ ಸಾರಾ ಮಹೇಶ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಆವರಣ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.