Tag: ಸಾಯಿಬಾಬಾ

  • ಸಾಯಿಬಾಬಾ ಮಂದಿರ ನಿರ್ಮಿಸಿ ತಾಯಿ ಕನಸು ಈಡೇರಿಸಿದ ನಟ ವಿಜಯ್

    ಸಾಯಿಬಾಬಾ ಮಂದಿರ ನಿರ್ಮಿಸಿ ತಾಯಿ ಕನಸು ಈಡೇರಿಸಿದ ನಟ ವಿಜಯ್

    ಳಪತಿ ವಿಜಯ್ (Vijay) ಮತ್ತೊಂದು ಅಪರೂಪದ ಕೆಲಸ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಲೇ ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಇವರು, ಇದೀಗ ತಮ್ಮ ತಾಯಿಗಾಗಿ ಸಾಯಿಬಾಬಾ (Saibaba) ಮಂದಿರವನ್ನು (Mandir) ಕಟ್ಟಿದ್ದಾರೆ. ಈ ಮೂಲಕ ತಮ್ಮ ತಾಯಿ ಕನಸನ್ನು ಈಡೇರಿಸಿದ್ದಾರೆ.

    ಚೆನ್ನೈನಲ್ಲಿ ಅವರದ್ದೊಂದು ಪುಟ್ಟ ನಿವೇಶನವಿತ್ತು. ಅಲ್ಲಿಯೇ ಸುಂದರವಾದ ಸಾಯಿಬಾಬಾ ಮಂದಿರ ಕಟ್ಟಬೇಕು ಎನ್ನುವುದು ತಾಯಿ ಕನಸಾಗಿತ್ತು. ಆ ನಿವೇಶನವನ್ನು ಹಾಗೇ ಉಳಿಸಿಕೊಂಡು ಬಂದಿದ್ದರು ಅವರ ತಾಯಿ. ಅವರ ತಾಯಿ ಸಾಯಿಬಾಬಾನ ಮಹಾನ್ ಭಕ್ತರೂ ಆಗಿರೋದ್ರಿಂದ ಈ ಕೆಲಸ ನೆರವೇರಿದೆ.

     

    ಸದ್ಯ ಗೋಟ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ವಿಜಯ್. ಈ ನಡುವೆ ರಾಜಕೀಯ ಪಕ್ಷವನ್ನೂ ಅವರು ಕಟ್ಟಿದ್ದಾರೆ. ಮುಂದಿನ ತಮಿಳುನಾಡ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಿನಿಂದಲೇ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.

  • ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು

    ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು

    ನ್ನಡ ಚಿತ್ರರಂಗದಲ್ಲಿ ಓಂ ಸಾಯಿಪ್ರಕಾಶ್ ತಾಯಿ ಸೆಂಟಿಮೆಂಟ್, ಅಣ್ಣ ತಂಗಿ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದವರು. ಅವರೀಗ ತಮ್ಮ ನೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ದೇವಮಾನವ  ಪುಟ್ಟಪರ್ತಿ ಸಾಯಿಬಾಬಾ ಅವರ ಮಹಿಮೆಗಳನ್ನು ಹೇಳುವ  ಕಥಾಹಂದರ ಇಟ್ಟುಕೊಂಡು ಶ್ರೀ ಸತ್ಯಸಾಯಿ ಅವತಾರ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.   ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಅವರು‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ

    ಕಳೆದ ಸೋಮವಾರ ಸಂಜೆ ಕಲಾವಿದರ ಸಂಘದ ಆವರಣದಲ್ಲಿ  ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಮಹರ್ಷಿ ಆನಂದ ಗುರೂಜಿ ಚಿತ್ರದ ಶೀರ್ಷಿಕೆ  ಅನಾವರಣಗೊಳಿಸಿದರು. ಸಾಯಿಗೋಲ್ಡ್ ಸರವಣ , ನಿರ್ಮಾಪಕ  ಡಾ.ದಾಮೋದರ್, ಹಿರಿಯ ಸಾಹಿತಿ ದೊಡ್ಡರಂಗೇಗೌಡರು, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಮುಂತಾದವರು ಸಮಾರಂಭದ ಮುಖ್ಯ ಆತಿಥಿಗಳಾಗಿ ಪಾಲ್ಗೊಂಡಿದ್ದರು.       ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಕೃಷ್ಣ, ಈಗಾಗಲೇ  ಸಾಯಿಪ್ರಕಾಶ್ ಅವರು ಶಿರಡಿ ಸಾಯಿಬಾಬಾರ ಮೇಲೆ ಸಿನಿಮಾ ಮಾಡಿದ್ದಾರೆ. ಜೊತೆಗೆ ಅವರೇ ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಸಾಯಿಬಾಬಾರ ಆಶೀರ್ವಾದ ವಿದೆ. ನಾನು ಕೂಡ ಹತ್ತಾರುಬಾರಿ ಪುಟ್ಟಪರ್ತಿ ಗೆ ಹೋಗಿ ಸತ್ಯಸಾಯಿಬಾಬಾರ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ಎಂಥವರನ್ನಾದರೂ ಮಂತ್ರಮುಗ್ಧಗೊಳಿಸುವ ಶಕ್ತಿ ಅವರಲ್ಲಿತ್ತು. ಯಾವ ಸಿಎಂ ಎದುರಿಸದಂಥ ಕಷ್ಟಕಾರ್ಪಣ್ಯಗಳು ನನ್ನ ಕಾಲದಲ್ಲಿ  ಎದುರಾಗಿದ್ದವು. ರಾಜ್ ಕುಮಾರ್ ಅಪಹರಣ, ವೀರಪ್ಪನ್ ಪ್ರಕರಣ, ಕಾವೇರಿ ವಿವಾದ ಹೀಗೆ ಎಲ್ಲವೂ ನನಗೇ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿ ನೀನು ಹೆದರಬೇಡ ಧೈರ್ಯದಿಂದ ಮುನ್ನಡೆ ಎಂದು ಅಭಯ ನೀಡಿದವರು ಈ ಸತ್ಯ ಸಾಯಿಬಾಬಾ. ಅವರಲ್ಲಿದ್ದ ಮ್ಯಾಗ್ನಟಿಕ್ ಪರ್ಸನಾಲಿಟಿ ಯಾರಿಗೂ ಬರುವುದಿಲ್ಕ. ಕೆಲವೇ ದೈವಾಂಶ ಸಂಭೂತರಿಗೆ ಮಾತ್ರ ಆ ಪವರ್ ಇರುತ್ತದೆ. ಅವರೊಬ್ಬ ಪ್ರವಾದಿಗಳು, ಅವರನ್ನು ನೋಡಿದ ಕೂಡಲೇ ನಮಗೊಂದು ಎನರ್ಜಿ ಬರುತ್ತದೆ. ಅಂಥಾ ಮಹಾತ್ಮರ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಹೊರಟಿದ್ದಾರೆ. ಅವರಿಗೆ ಯಶಸ್ಸಾಗಲಿದೆ ಎಂದರು.

    ನಂತರ ಮಾತನಾಡಿದ ಮಹರ್ಷಿ ಆನಂದ ಗುರೂಜಿ ಸತ್ಯ ಸಾಯಿಬಾಬಾ ಅವರು  ದೈವಾಂಶ ಸಂಭೂತರು. ಒಬ್ಬ  ಸಿಎಂ ಮಾಡುವುದಕ್ಕಿಂತಲೂ ಹೆಚ್ಚಿನ  ಜನಸೇವಾ ಕಾರ್ಯಗಳನ್ನು ಅವರು  ಮಾಡಿದ್ದಾರೆ. ಜನರಿಗಾಗಿ ಅವರು ಕಟ್ಟಿಸಿರುವ ಆಸ್ಪತ್ರೆ, ವೈದ್ಯಕೀಯ ಸೇವೆ, ಹಸಿದು ಬಂದಂಥವರಿಗೆ ಅನ್ನ ನೀಡುವ ಕಾಯಕ ತುಂಬಾ ದೊಡ್ಡದು. ಬಾಬಾರವರು ಬೆಳೆದುಬಂದಂಥ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾನ ಆಶೀರ್ವಾದವಿದೆ. ನಾನು ೨೧ ವರ್ಷದವನಿದ್ದಾಗ ಅವರನ್ನು ನೋಡಲು ಹೋಗಿದ್ದೆ, ನನ್ನನ್ನು ನೋಡಿದಾಗ ನಮ್ಮಜೊತೆ ಬಂದುಬಿಡು ಎಂದು ಆಗಲೇ  ಹೇಳಿದ್ದರು. ಅವರ ಮಾತಿನ ಮಹಿಮೆ ಎಂಥಾದ್ದೆಂದು ನನಗೀಗ ಅರ್ಥವಾಗಿದೆ ಎಂದು ಹೇಳಿದರು. ಸಾಯಿಪ್ರಕಾಶ್ ನನಗೆ ಬಹಳ ಆತ್ಮೀಯರು, ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿ ಪ್ರದಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಲಗಲಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಹೇಳಿದರು. ಜೆಜಿ ಕೃಷ್ಣ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಗಣೇಶ್ ನಾರಾಯಣ್ ಸಂಗೀತ ಸಂಗೀತ ನಿರ್ದೇಶನ‌ ಮಾಡುತ್ತಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದ್ದು,  ಕಲಾವಿದರ ಆಯ್ಕೆಪ್ರಕ್ರಿಯೆ ಮುಗಿದ ನಂತರ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಚಿತ್ರ ತಂಡಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲ ನೆಲಸಮ!

    ಬೆಂಗಳೂರು: ಸಿಲಿಕಾನ್ ಸಿಟಿಯ ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲವನ್ನು ನೆಲಸಮ ಮಾಡಲಾಗಿದೆ.

    ಅನಧಿಕೃತ ಎಂದು ತಹಶೀಲ್ದಾರರ ನೇತೃತ್ವದಲ್ಲಿ ದೇಗುಲವನ್ನು ನಾಶ ಮಾಡಲಾಗಿದೆ. ಇದೀಗ ದೇಗುಲವನ್ನು ಕೆಡವಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರಗಡೆ ಪ್ರತಿಷ್ಠಾಪನೆ ಮಾಡಿದ ಆಂಜನೇಯ ದೇಗುಲದ ಹೊರಭಾಗವನ್ನು ಕೂಡ ಸಿಬ್ಬಂದಿ ಜೆಸಿಬಿಯಲ್ಲಿ ತೆಗೆಯುತ್ತಿದ್ದಾರೆ.

    ಮಂತ್ರಿ ಮಹಲ್ ಹಾಗೂ ಬಸವೇಶ್ವರ ವೃತ್ತ (ವಿಧಾನ ಸೌಧದ ಬಳಿ) ಇರುವ ದರ್ಗಾ ಅಧಿಕೃತವೇ ಇದಕ್ಕೆ ಸರ್ಕಾರ ಅನುಮತಿ ನೀಡಿದೆಯಾ? ಹಿಂದೂ ದೇವಾಲಯಗಳೇ ಏಕೆ ಗುರಿ, ರಾಜಕೀಯ ವ್ಯಕ್ತಿಗಳಿಗೆ ಕಾನೋನು ಇಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು: ಡಿಕೆಶಿ

    ಮೂರ್ತಿಯನ್ನು ನೀವೇ ತೆಗೆದುಕೊಂಡು ಹೋಗಿ ಇಲ್ಲವೇ ನಾವೇ ಎತ್ತಿಕೊಂಡು ಹೋಗುತ್ತೇವೆ ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇವಾಲಯ ಆವರಣದೊಳಗೆ ಸಾರ್ವಜನಿಕರು ಜಮಾಯಿಸಿದ್ದಾರೆ. ಅಲ್ಲದೆ ಆಂಜನೇಯ ವಿಗ್ರಹ ತೆರವು ಹಿನ್ನೆಲೆಯಲ್ಲಿ ಕೊನೆಯ ಬಾರಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಭಾವುಕರಾದರು.

  • ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ

    ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ

    ಶಿವಮೊಗ್ಗ: ನಗರದ ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಸಾದ ಸೇವನೆ ಮಾಡಿದ 25 ರಿಂದ 30 ಮಂದಿ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

    ಸಾಗರ ನಗರಸಭೆ ವ್ಯಾಪ್ತಿಯ ವಿನೋಬನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರು ಪ್ರಸಾದ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದ ಹಲವು ಮಂದಿಗೆ ಶನಿವಾರ ಸಂಜೆ ಸುಮಾರಿಗೆ ವಾಂತಿ ಭೇದಿ ಆಗಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಅಸ್ವಸ್ಥಗೊಂಡಿದ್ದರು. ಅಸ್ವಸ್ಥರಾದವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಮಾಲೋಚನೆ!

    ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಅಲ್ಲದೇ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ: ಕುಟುಕಿದ ಬಿಜೆಪಿ

  • ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಮುಂಬೈ: ಸಾಯಿಬಾಬಾರು ಸಮಾಧಿಸ್ಥರಾಗಿ ಇಂದಿಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರಕ್ಕೆ ಶಿರಡಿ ಸಾಯಿಬಾಬಾರ ಸಮಾಧಿಸ್ಥರಾಗಿ ನೂರು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ವಿಶೇಷ ಪೂಜೆ ನೆರವೇರಿಸಿದರು.

    ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ, ಸಾಯಿಬಾಬಾ ಸಮಾಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ‌ವೇಳೆ ಸಾಯಿಬಾಬಾರವರ ಬೆಳ್ಳಿಯ ನಾಣ್ಯಗಳನ್ನು ಸಹ ಬಿಡುಗಡೆಗೊಳಿಸಿದರು.

    ದೇವಾಲಯದ ಭೇಟಿಗೂ ಮುನ್ನ ಪ್ರಧಾನಿ ಆವಾಸ್ ಗ್ರಾಮೀಣ ಯೋಜನೆಯ ಫಲಾನುಭವಿಗಳಿಗೆ ಸಾರ್ವಜನಿಕ ಸಮಾರಂಭದಲ್ಲಿ ಮನೆಯ ಕೀಲಿ ಕೈಗಳನ್ನು ವಿತರಿಸಿದ್ದರು. ಇದಲ್ಲದೇ 29 ಜಿಲ್ಲೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv