Tag: ಸಾಯಿಪಲ್ಲವಿ

  • ತಂಗಿ ಮಾಡಿರೋ ತಪ್ಪಿಗೆ ಟ್ರೋಲ್ ಆದ ಸಾಯಿಪಲ್ಲವಿ

    ತಂಗಿ ಮಾಡಿರೋ ತಪ್ಪಿಗೆ ಟ್ರೋಲ್ ಆದ ಸಾಯಿಪಲ್ಲವಿ

    ಉಡುಗೆ ತೊಡುಗೆ ವಿಚಾರದಲ್ಲಿ ನಟಿ ಸಾಯಿಪಲ್ಲವಿ (Sai Pallavi) ಸಾಮಾನ್ಯರಲ್ಲಿ ಸಾಮಾನ್ಯ ಹುಡುಗಿಯಂತೆ ಇರೋದು ವಾಡಿಕೆ. ನೋ ಮೇಕಪ್, ನೋ ಗ್ಲ್ಯಾಮರ್ ಡ್ರೆಸ್ ಅನ್ನೋದು ಸಾಯಿಪಲ್ಲವಿ ಪಾಲಿಸಿ. ಆದರೆ ಇದೀಗ ತಂಗಿ ಮಾಡಿರೋ ಯಡವಟ್ಟಿನಿಂದ ಸಾಯಿಪಲ್ಲವಿ ಬಟ್ಟೆ ವಿಚಾರದಲ್ಲಿ ಟ್ರೋಲ್ ಆಗಿದ್ದಾರೆ. ಸಾಯಿಪಲ್ಲವಿ ಸ್ವಿಮ್‌ಸೂಟ್ ಧರಿಸಿರುವ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.

    ಅನೇಕರು ಉದ್ದೇಶಪೂರ್ವಕವಾಗಿ ಸ್ವಿಮ್‌ಸೂಟ್ ಧರಿಸಿ ಫೋಟೋ ಪೋಸ್ಟ್ ಮಾಡುವಂತೆ ಸಾಯಿಪಲ್ಲವಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಲ್ಲ. ಸಾಯಿಪಲ್ಲವಿ ತಂಗಿ ಪೂಜಾ ಕಣ್ಣನ್ ಹಾಕಿರುವ ಪೋಸ್ಟ್ ಸಾಯಿಪಲ್ಲವಿಯನ್ನ ಇಣುಕಿ ನೋಡುವಂತೆ ಮಾಡಿದೆ. ಬೀಚ್‌ನಲ್ಲಿ ಅಕ್ಕ ಸಾಯಿಪಲ್ಲವಿ ತಂಗಿ ಪೂಜಾ ವೆಕೇಷನ್ ಎಂಜಾಯ್ ಮಾಡಿದ್ದು, ಇದರ ಕ್ಲೋಸ್‌ಅಪ್ ಫೋಟೋಗಳನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ಫೋಟೋಗಳಲ್ಲಿ ಎಲ್ಲಿಯೂ ಸಾಯಿಪಲ್ಲವಿ ಮೈಕಾಣುವಂತೆ ಪೋಸ್ ನೀಡಿಲ್ಲ. ಇಷ್ಟಾದ್ರೂ ಟ್ರೋಲ್ ಆಗೋಕೆ ಕಾರಣ ಸಾಯಿಪಲ್ಲವಿ ಬೀಚ್‌ವೇರ್ ಅಥವಾ ಸ್ವಿಮ್‌ಸೂಟ್ ಧರಿಸಿದ್ದಾರೆ ಅನ್ನೋದು. ಗ್ಲ್ಯಾಮರ್ ಬಟ್ಟೆ ಇರಲಿ ಕೊನೆ ಪಕ್ಷ ಸ್ಲೀವ್‌ಲೆಸ್ ಡ್ರೆಸ್‌ನಲ್ಲೂ ಸಾಯಿಪಲ್ಲವಿ ಕಾಣಿಸಿಕೊಳ್ಳೋದು ವಿರಳ. ಆದರೆ ಬೀಚ್‌ನಲ್ಲಿ ಎಂಥಹ ಉಡುಗೆ ಧರಿಸಬೇಕೋ ಅಂಥಹ ಉಡುಗೆ ಧರಿಸಿದ್ದಾರೆ ಸಾಯಿಪಲ್ಲವಿ. ಇಷ್ಟಕ್ಕೇ ಸಾಯಿಪಲ್ಲವಿ ಫೋಟೋಗೆ ಕೆಟ್ಟ ಕಾಮೆಂಟ್‌ಗಳು ಬಂದಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ ಇದು ಬೀಚ್‌ನಲ್ಲಿ ಸಾಮಾನ್ಯ ಉಡುಗೆಯಾಗಿದ್ದು ಇಷ್ಟಕ್ಕೇ ರಾಮಾಯಣದ ಸೀತೆ ಪಾತ್ರಧಾರಿ ಸಾಯಿಪಲ್ಲವಿಯನ್ನ ಗುರಿ ಮಾಡಿ ಕಾಮೆಂಟ್ ಮಾಡ್ತಿರೋದು ಖಂಡನೀಯ ಎಂಬ ಕಾಮೆಂಟ್ ಕೂಡ ಬಂದಿದೆ. ಒಟ್ನಲ್ಲಿ ತಂಗಿ ಮಾಡಿರೋ ಚಿಕ್ಕ ತಪ್ಪಿಗೆ ಅಕ್ಕ ಸಾಯಿಪಲ್ಲವಿ ದಂಡ ತೆರುವ ಪ್ರಸಂಗ ನಡೆದಿದೆ.

  • ಸಾಯಿಪಲ್ಲವಿ ಬೈಕಾಟ್: ಬಾಲಿವುಡ್ ಪಿತೂರಿ ಅಂತಿದ್ದಾರೆ ನಟಿಯ ಫ್ಯಾನ್ಸ್

    ಸಾಯಿಪಲ್ಲವಿ ಬೈಕಾಟ್: ಬಾಲಿವುಡ್ ಪಿತೂರಿ ಅಂತಿದ್ದಾರೆ ನಟಿಯ ಫ್ಯಾನ್ಸ್

    ಬಾಲಿವುಡ್ ನಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ (Sai Pallavi) ಅವರು ಸೀತಾ ಪಾತ್ರ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನೆಟ್ಟಿಗರು ವಿರೋಧ ವ್ಯಕ್ತ ಪಡಿಸಿದ್ದರು. ಇದೊಂದು ಬಾಲಿವುಡ್ ಮಾಡುತ್ತಿರುವ ಪಿತೂರಿ ಅಂತಿದ್ದಾರೆ ನಟಿಯ ಫ್ಯಾನ್ಸ್. ದಕ್ಷಿಣ ಹುಡುಗಿಯರನ್ನು ಬಾಲಿವುಡ್ ಬಿಟ್ಟುಕೊಳ್ಳುವುದಿಲ್ಲ. ಹಾಗಾಗಿ ಬೈಕಾಟ್ (Boycott) ಅಂತಿದ್ದಾರೆ ಎನ್ನುವ ಸಂದೇಶ ಹರಿದಾಡುತ್ತಿದೆ.

    ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಾಗ ಹಿಂದೂ ವಿರೋಧಿ ಹೇಳಿಕೆಯನ್ನು ಸಾಯಿ ಪಲ್ಲವಿ ನೀಡಿದ್ದರು. ಈ ಕಾರಣದಿಂದಾಗಿ ಭಾರೀ ವಿರೋಧವನ್ನು ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಇದನ್ನು ಬಾಲಿವುಡ್ ಮೇಲೆ ಎತ್ತಿ ಹಾಕುವಂತಹ ಪ್ರಯತ್ನವನ್ನು ನಟಿಯ ಅಭಿಮಾನಿಗಳು ಮಾಡುತ್ತಿದ್ದಾರೆ.

    ರಾಮಾಯಣ ಸಿನಿಮಾದ ಬಜೆಟ್, ಸಂಭಾವನೆಯದ್ದೇ ಸುದ್ದಿ. ಮೂರು ಪಾರ್ಟ್ ನಲ್ಲಿ ಈ ರಾಮಾಯಣ ಸಿನಿಮಾ ಮೂಡಿ ಬರಲಿದ್ದು, ಒಟ್ಟು ಬಜೆಟ್ ಎಷ್ಟು, ಯಾರಿಗೆ ಎಷ್ಟು ಸಂಭಾವನೆ (Remuneration) ನೀಡಲಾಗಿದೆ, ಅತೀ ಹೆಚ್ಚು ಸಂಭಾವನೆ ಪಡೆದ ನಟ ಯಾರು ಹೀಗೆ ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಹೇಳಿಕೊಳ್ಳದೇ ಇದ್ದರೂ, ನಟ, ನಟಿಯರು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ.

    ರಾಮನ ಪಾತ್ರದಲ್ಲಿ ಮಿಂಚಲಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮೂರು ಪಾರ್ಟ್ ಸೇರಿ ಇವರಿಗೆ 225 ಕೋಟಿ ರೂಪಾಯಿ ಸಂದಾಯವಾಗಲಿದೆಯಂತೆ. ರಾವಣನ ಪಾತ್ರಧಾರಿ ಯಶ್ (Yash) ಮೂರೂ ಪಾರ್ಟ್ ಸೇರಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರಂತೆ. ನಟಿ ಸಾಯಿ ಪಲ್ಲವಿ 18 ಕೋಟಿ ರೂಪಾಯಿ ನೀಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಾವುದೂ ಖಚಿತ ಮಾಹಿತಿ ಅಲ್ಲ ಎನ್ನುವುದು ನೆನಪಿನಲ್ಲಿಡಬೇಕಾದ ಸಂಗತಿ.

     

    ಈ ನಡುವೆ ಸಿನಿಮಾಗಾಗಿ ರಣ್‌ಬೀರ್ (Ranbir Kapoor) ಹಳ್ಳಿಯಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ರಾಮನ ಅವತಾರದಲ್ಲಿ ಬರಲು ‘ಅನಿಮಲ್‌’ ಹೀರೋ ಭಾರೀ ತಯಾರಿ ಮಾಡಿಕೊಳ್ತಿದ್ದಾರೆ. ‘ದಂಗಲ್’ ಸಿನಿಮಾ ನಂತರ ರಾಮಾಯಣ (Ramayana) ಚಿತ್ರಕ್ಕಾಗಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ ನಿತೇಶ್ ತಿವಾರಿ. ಚಿತ್ರತಂಡ ಕೂಡ ಪಾತ್ರಕ್ಕಾಗಿ ಏನೆಲ್ಲಾ ತಯಾರಿ ಮಾಡಲು ತಿಳಿಸಿದ್ದಾರೋ ಅದನ್ನು ಪ್ರಾಮಾಣಿಕವಾಗಿ ರಣ್‌ಬೀರ್ ಕಪೂರ್ ಮಾಡುತ್ತಿದ್ದಾರೆ. ‘ಆದಿಪುರುಷ್’ (Adipurush Film) ಸಿನಿಮಾದಂತೆ ತಮ್ಮ ಸಿನಿಮಾ ಆಗಬಾರದು ಎಂದು ಎಚ್ಚರಿಕೆಯಿಂದ ರಣ್‌ಬೀರ್ ಹೆಜ್ಜೆ ಇಡುತ್ತಿದ್ದಾರೆ.

  • ಸಾಯಿ ಪಲ್ಲವಿ ವೃತ್ತಿ ಜೀವನಕ್ಕೆ ಅಡ್ಡಿಯಾಗಿದ್ದೇನು?: ಚಿತ್ರರಂಗದಿಂದ ದೂರ ದೂರ ನಟಿ

    ಸಾಯಿ ಪಲ್ಲವಿ ವೃತ್ತಿ ಜೀವನಕ್ಕೆ ಅಡ್ಡಿಯಾಗಿದ್ದೇನು?: ಚಿತ್ರರಂಗದಿಂದ ದೂರ ದೂರ ನಟಿ

    ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್‌ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ?

    ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ.

    ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ.

    ಕಳೆದ ವರ್ಷ ಸಾಯಿಪಲ್ಲವಿಯ ಮೇಲೆ ಬಂದ ಅಪವಾದಗಳು ಒಂದೆರಡಲ್ಲ. ನಾಗಚೈತನ್ಯ ಜೊತೆ ಲವ್‌ಸ್ಟೋರಿ ಚಿತ್ರ ಮಾಡ್ತಿರುವಾಗ ಸ್ಯಾಮ್ ನಾಗ್ ಡಿವೋರ್ಸ್ ಮುನ್ನಲೆಗೆ ಬಂತು. ವಿಪರ್ಯಾಸ ಅಂದ್ರೆ ನಾಗ್ ಜೊತೆ ಸಾಯಿಪಲ್ಲವಿ ಸಲುಗೆಯಿಂದ ಕಾಣಿಸ್ಕೊಂಡಿದ್ದಕ್ಕೆ ಇದೇ ಪ್ರೇಮಂ ಬೆಡಗಿಯ ಮೇಲೆ ಗೂಬೆ ಕೂರಿಸಲಾಯಿತು. ಈ ಎರಡು ಹೊಡೆತದಿಂದ ಸಾಯಿಪಲ್ಲವಿ ಸಿನಿಮಾ ರಂಗದಿಂದ ಒಳ್ಳೆಯ ನೀತಿಪಾಠ ಕಲಿತಿದ್ದಾರೆ. ಹೀಗಾಗೇ ಸಾಯಿಪಲ್ಲವಿ ಕರಿಯರ್ ಆಲ್‌ಮೋಸ್ಟ್ ಮುಗಿಯುವ ಹಂತಕ್ಕೆ ಬಂದು ತಲುಪಿದೆ.

     

    ಕುಟುಂಬಸ್ಥರೂ ಕೂಡ ಸಿನಿಮಾ ಸಾಕು ಮದುವೆಯಾಗು ಎಂಬ ಸಲಹೆ ಕೊಡುತ್ತಿದ್ದಾರಂತೆ. ಶೀಘ್ರದಲ್ಲೇ ಸಾಯಿಪಲ್ಲವಿ ಬಣ್ಣಕ್ಕೆ ವಿದಾಯ ಹೇಳಿದ್ರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದೆ ಟಾಲಿವುಡ್ ಗಲ್ಲಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮರನಾಥ ಯಾತ್ರೆ ಮುಗಿಸಿದ ಖ್ಯಾತ ತಾರೆ ಸಾಯಿ ಪಲ್ಲವಿ

    ಅಮರನಾಥ ಯಾತ್ರೆ ಮುಗಿಸಿದ ಖ್ಯಾತ ತಾರೆ ಸಾಯಿ ಪಲ್ಲವಿ

    ಕ್ಷಿಣದ ಖ್ಯಾತ ತಾರೆ ಸಾಯಿ ಪಲ್ಲವಿ (Sai Pallavi) ದೈವಭಕ್ತೆ. ಬಿಡುವಿನ ಸಮಯದಲ್ಲಿ ಅವರು ದೇವಸ್ಥಾನಗಳನ್ನು ಸುತ್ತುತ್ತಲೇ ಇರುತ್ತಾರೆ. ಸಾಯಿಬಾಬಾ ಅವರ ಪರಮ ಭಕ್ತೆಯೂ ಆಗಿರುವ ಸಾಯಿ ಪಲ್ಲವಿ ಇದೀಗ ತಂದೆ-ತಾಯಿ ಜೊತೆ ಅಮರನಾಥ ಯಾತ್ರೆ (Amarnath Yatra) ಕೈಗೊಂಡಿದ್ದರು. 60ರ ಆಸುಪಾಸಿನ ಪಾಲಕರೊಂದಿಗೆ ಅಮರನಾಥ ಯಾತ್ರೆ ಮುಗಿಸಿ, ಆ ಫೋಟೋ ಮತ್ತು ವಿಡಿಯೋಗಳನ್ನು ಅವರು ಶೇರ್ ಮಾಡಿದ್ದಾರೆ.

    ಅಮ್ಮ ಅಪ್ಪನೊಂದಿಗೆ ಅಮರನಾಥ ಯಾತ್ರೆ ಮಾಡಿದ್ದು ಎಂದಿಗೂ ಮರೆಯದ ಅನುಭವ ನೀಡಿದೆ. ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ. ಇಂತಹ ಯಾತ್ರೆಯು ಸಾಧ್ಯವಾಗಿದ್ದು ತಂದೆ ತಾಯಿಗಳ ಆಶೀರ್ವಾದದಿಂದ ಎಂದು ಅವರು ಹೇಳಿಕೊಂಡಿದ್ದಾರೆ. ಯಾತ್ರೆಯ ಕೆಲವು ಅನುಭವಗಳನ್ನೂ ಅವರು ಹೇಳಿದ್ದಾರೆ. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು (Cinema) ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬಾನೇ ಕಾಳಜಿ ವಹಿಸುತ್ತಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಈವರೆಗೂ ಅವರು ಹೇಳಿಕೊಂಡಿಲ್ಲ. ಅವರು ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದು ಸುದ್ದಿಯಾಗಿತ್ತು. ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಮುಂದುವರೆಸಲಿದ್ದಾರೆ ಎಂದು ಅವರು ಆಪ್ತರು ಹೇಳಿಕೊಂಡಿದ್ದರು.

     

    ಆದರೆ, ಸಾಯಿ ಪಲ್ಲವಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ನಡೆಯುವನ್ನು ಗೌಪ್ಯವಾಗಿ ಇಟ್ಟುಕೊಂಡು ಬರುತ್ತಿದ್ದಾರೆ. ಹೆಚ್ಚೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವ ಕಾರಣಕ್ಕಾಗಿ ಈಗಲೂ ಅವರು ಸಿನಿಮಾ ರಂಗದಿಂದ ದೂರವಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟ ಸಾಯಿಪಲ್ಲವಿ

    ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟ ಸಾಯಿಪಲ್ಲವಿ

    ಸೌತ್ ಸಿನಿಮಾರಂಗದ ಬ್ಯೂಟಿ ಸಾಯಿಪಲ್ಲವಿ, ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಇದೀಗ ತಮ್ಮ ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟಿದ್ದಾರೆ. ತಮ್ಮ ಮದುವೆಯ ಕುರಿತು ಇದೀಗ ಮುಕ್ತವಾಗಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.

    ದಕ್ಷಿಣದ ಚಿತ್ರರಂಗದಲ್ಲಿ ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಸೈ ಎನಿಸಿಕೊಂಡ ನಟಿ ಸಾಯಿಪಲ್ಲವಿಯ ಮದುವೆಯ ಕುರಿತು ಸಾಕಷ್ಟು ವಿಚಾರಗಳು ಕೇಳಿ ಬಂದಿತ್ತು. ಸಾಯಿಪಲ್ಲವಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗೆ ಸಾಲು ಸಾಲು ಚಿತ್ರಗಳ ಅನೌನ್ಸ್ ಮಾಡುವ ಮೂಲಕ ಮದುವೆಯ ಸುದ್ದಿಗೆ ಈ ನಟಿ ಬ್ರೇಕ್ ಹಾಕಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕನಸಿನ ಬಗ್ಗೆ ಸಾಯಿಪಲ್ಲವಿ ಮಾತನಾಡಿದ್ದಾರೆ.

    ಕೋವಿಡ್ ಸಮಯದಲ್ಲಿ ನನಗೆ ಮದುವೆ ಆಗುವಂತೆ ಪೋಷಕರಿಂದ ಒತ್ತಾಯವಿತ್ತು. ಅದಕ್ಕೂ ಮುನ್ನ ನಾನು ಸಾಕಷ್ಟು ಸಮಯ ಸಿನಿಮಾ ಶೂಟಿಂಗ್‌ನಲ್ಲಿಯೇ ಭಾಗವಹಿಸುತ್ತಿದ್ದೆ, ಹಾಗಾಗಿ ನನ್ನ ಪೋಷಕರಿಗೂ ಭಯವಾಗುತ್ತಿತ್ತು. ಜತೆಗೆ ಗ್ರಾಮದಲ್ಲಿ ನನ್ನ ಜೊತೆಗಿದ್ದ ಸಾಕಷ್ಟು ನನ್ನ ವಯಸ್ಸಿನ ಯುವತಿಯರಿಗೆ ಮದುವೆಯಾಗಿತ್ತು. ಸಹಜವಾಗಿ, ನನಗೂ ಮದುವೆಯಾಗುವಂತೆ ಮನೆಯಲ್ಲಿ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.

    ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸಿತ್ತು. ನನಗೆ 23 ವಯಸ್ಸಿಗೆ ಮದುಯಾಗುತ್ತದೆ, 30 ವಯಸ್ಸಿನಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಕನಸು ಕಂಡಿದ್ದೆ. ಆದರೆ ಈಗ ದಾಂಪತ್ಯದ ಕುರಿತು ಯೋಚನೆ ಮಾಡಿದ್ರೆ, ನಾನು ಮದುವೆಯಾಗದಿದ್ದು ಒಳ್ಳೆಯದು ಅನಿಸುತ್ತಿದೆ. ಮದುವೆಯೆಂಬ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಪರಿಪಕ್ವತೆ ಬೇಕು. ಮಡದಿಯಾಗಿ, ತಾಯಿಯಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು. ಈಗ ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮದುವೆಯ ವಿಚಾರದಲ್ಲಿ ನನಗೆ ಸಂಪೂರ್ಣ ಸ್ವತಂತ್ರ್ಯವಿದೆ. ಆದರೆ ಹುಡುಗ ಯಾರು ಸೆಲೆಕ್ಟ್ ಮಾಡ್ತಾರೆ ಗೊತ್ತಿಲ್ಲ. ಪೋಷಕರು ಆದ್ರು ಓಕೆ, ನಾನು ಹೇಳಿದ್ರು ಸರಿ ಸದ್ಯ ಈ ಕುರಿತು ಯೋಚನೆ ಮಾಡಿಲ್ಲ ಅಂತಾ ಮುಕ್ತವಾಗಿ ಸಾಯಿಪಲ್ಲವಿ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಸದ್ಯ ಸಾಯಿಪಲ್ಲವಿ ನಟನೆಯ `ಗಾರ್ಗಿ’ ಮತ್ತು `ವಿರಾಟ ಪರ್ವಂ’ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು `ಪ್ರೇಮಂ’ ಬೆಡಗಿ ರೆಡಿಯಾಗಿದ್ದಾರೆ.

  • ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

    ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

    ಟಾಲಿವುಡ್ ಸೂಪರ್ ಡ್ಯಾನ್ಸರ್, ಸ್ಟಾರ್ ನಟಿ ಸಾಯಿ ಪಲ್ಲವಿ ಇತ್ತೀಚೆಗೆ ಬಣ್ಣದ ಲೋಕದಿಂದ ದೂರ ಉಳಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದಕ್ಕೆ ಪೂರಕ ಎನ್ನುವಂತೆ ಅವರು ಕೂಡ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ.

    ಟಾಲಿವುಡ್ ಅಂಗಳದಲ್ಲಿ ಸಾಯಿ ಪಲ್ಲವಿ ಸಿನಿಮಾ ರಂಗದಿಂದ ದೂರವಾಗುತ್ತಿದ್ದಾರೆ ಎನ್ನುವ ಸುದ್ದಿ ದಟ್ಟವಾದರೂ, ಈ ಕುರಿತು ಸಾಯಿ ಪಲ್ಲವಿ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅದರ ಜೊತೆಗೆ ಯಾವುದೇ ಹೊಸ ಸಿನಿಮಾಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿಲ್ಲ. ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸಾಯಿ ಪಲ್ಲವಿ ಕೃಷಿ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿಆ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಭಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

     

    View this post on Instagram

     

    A post shared by Sai Pallavi (@saipallavi.senthamarai)

    ಸಾಯಿ ಪಲ್ಲವಿ ಇನ್‌ಸ್ಟಾಗ್ರಾಮ್‌ನಲ್ಲಿ, ಹೊಲದಲ್ಲಿ ಕೆಲಸ ಮಾಡುವವರ ಜೊತೆ ಕುಳಿತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ನಂತರ ಮತ್ತೊಂದು ಫೋಟೋದಲ್ಲಿ ಸಾಯಿ ಕ್ಯಾರೆಟ್ ಕಿತ್ತುಕೊಂಡಿರುವುದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಸಿಂಪಲ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ನೋಡಿದ ಯು ಟರ್ನ್ ಬೆಡಗಿ ಶ್ರದ್ಧಾಶ್ರೀನಾಥ್, ನಿಮ್ಮ ರೀತಿ ಯಾರು ಇಲ್ಲ ಎಂದು ಕಾಂಮೆಟ್ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಭಿಮಾನಿಗಳು ಇವರ ಸರಳತೆ ಕಂಡು ಡೌನ್ ಟು ಅರ್ಥ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಈ ನಟಿ ‘ಶ್ಯಾಮ್ ಸಿಂಗ ರಾಯ್’ ನಂತರ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಈ ಕುರಿತು ಸಾಯಿಪಲ್ಲವಿ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ ಇದನ್ನೂ ಓದಿ: ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

  • ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಸಿನಿಜರ್ನಿಯನ್ನ ಕೊನೆಗೊಳಿಸುತ್ತಾರಾ ನಾಟ್ಯಸುಂದರಿ ಸಾಯಿ ಪಲ್ಲವಿ?

    ಟಾಲಿವುಡ್, ಮಾಲಿವುಡ್ ಸಿನಿಮಾಗಳಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದ ಸಾಯಿ ಪಲ್ಲವಿ ತಮ್ಮ ಪ್ರೌಢ ಪ್ರತಿಮೆಯಿಂದ ಸಿನಿರಸಿಕರನ್ನು ರಂಜಿಸುತ್ತಾ ಬಂದಿದ್ದಾರೆ. ತಮ್ಮ ನಟನೆ ಜೊತೆಗೆ ಸೂಪರ್ ಡ್ಯಾನ್ಸರ್ ಆಗಿರುವ ಈ ನಟಿ ವಿಭಿನ್ನ ನಟನಾ ಕೌಶಲ್ಯದಿಂದ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಸಿಂಪಲ್ ಬ್ಯೂಟಿಗೆ ಚಂದನವನದಲ್ಲಿಯೂ ಅಭಿಮಾನಿಗಳಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಈ ನಟಿ ಸಿನಿಜರ್ನಿ ಮುಗಿಸುತ್ತಾರೆ ಎಂಬ ಗಾಸಿಪ್ ಸಿನಿಅಂಗಳದಲ್ಲಿ ಕೇಳಿಬರುತ್ತಿದೆ.

    ನಟರನ್ನು ಮೀರಿಸುವಂತಹ ಪ್ರತಿಭೆ ಇರುವ ಪಲ್ಲವಿ ‘ಪ್ರೇಮಂ’ ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟರು. ಪಾತ್ರಗಳ ಆಯ್ಕೆಯಲ್ಲಿ ಹೆಚ್ಚು ಯೋಚನೆ ಮಾಡುವ ಈ ನಟಿ, ತಮ್ಮ ಪಾತ್ರಕ್ಕೆ ಇರುವ ಮಹತ್ವದ ಬಗ್ಗೆ ಚರ್ಚೆ ಮಾಡಿ ನಂತರ ಸಿನಿಮಾವನ್ನು ಮಾಡುತ್ತಾರೆ. ಅಲ್ಲದೇ ರಶ್ಮಿಕಾ ಮಂದಣ್ಣ ಮತ್ತು ಶರ್ವಾನಂದ್ ಅಭಿನಯದ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದ ಕಾರ್ಯಕ್ರಮದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು. ಈ ಇವೆಂಟ್‍ನಲ್ಲಿ ಪಲ್ಲವಿಗೆ ಎಷ್ಟೂ ಅಭಿಮಾನಿಗಳು ಇದ್ದಾರೆ ಎಂಬುದನ್ನು ಅವರು ಕಿರುಚುವ ಶಬ್ದದಲ್ಲಿ ತಿಳಿದುಕೊಳ್ಳಬಹುದಿತ್ತು. ಅವಕಾಶಗಳಿದ್ದು ಏಕೆ ಈ ನಟಿ ಸಿನಿಜರ್ನಿ ಮುಗಿಸುತ್ತಿದ್ದಾರೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಪ್ರಿ ಆಸ್ಕರ್ ಪಾರ್ಟಿಯಲ್ಲಿ ಮೊದಲಬಾರಿ ಮಗಳ ಬಗ್ಗೆ ಮಾತನಾಡಿದ ದೇಸಿ ಗರ್ಲ್ ಪಿಗ್ಗಿ

    ಕೊನೆದಾಗಿ ಸಾಯಿ ಪಲ್ಲವಿ ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಈ ಸಿನಿಮಾದಲ್ಲಿಯೂ ಡ್ಯಾನ್ಸ್‌ಗೆ ಹೆಚ್ಚು ಪ್ರಾಮುಖ್ಯತೆ ಇರುವಂತಹ ಪಾತ್ರದಲ್ಲಿ ನಟಿಸಿದ್ದು, ದೇವದಾಸಿಯರ ಕಷ್ಟಗಳ ಬಗ್ಗೆ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಈ ಸಿನಿಮಾ ಯಶಸ್ವಿನ ನಂತರವು ಈ ನಟಿ ಯಾವುದೇ ಮಲಯಾಳಂ ಮತ್ತು ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಸುದ್ದಿ ಚಿತ್ರರಂಗದ ತುಂಬಾ ಹಬ್ಬುತ್ತಿದೆ.

    ಪಲ್ಲವಿ ‘ಶ್ಯಾಮ್ ಸಿಂಗ ರಾಯ್’ ನಂತರ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಇರುವುದು ಎಲ್ಲರ ಅನುಮಾನಕ್ಕೆ ಸಾಕ್ಷಿಯಾಗುತ್ತಿದೆ. ಒಂದು ವೇಳೆ ಅವರು ಸಿನಿರಂಗದಿಂದ ಹೋಗಲು ಯೋಚನೆ ಮಾಡುತ್ತಿದ್ದರಾ ಎಂದು ಎಲ್ಲಕಡೆ ಗಾಸಿಪ್ ಆಗುತ್ತಿದೆ. ಆದರೆ ಈ ಕುರಿತು ಪಲ್ಲವಿ ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಒಂದು ವೇಳೆ ಇದು ನಿಜವಾದರೆ ಅಭಿಮಾನಿಗಳಿಗೆ ಬೇಸರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದನ್ನೂ ಓದಿ: ಸೆಕ್ಸ್ ಮಾಡುವಂತೆ ಕೇಳುವುದೇ ಮೀಟೂ ಆದರೆ, ನಾನು ಅದನ್ನು ಕೇಳುತ್ತೇನೆ : ಖ್ಯಾತ ಖಳನಟನ ಶಾಕಿಂಗ್ ಮಾತು

    ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಈ ನಟಿ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬಂದ ಪ್ರಾಜೆಕ್ಟ್ ಗಳನ್ನು ತಿರಸ್ಕರಿಸುತ್ತಾ ಹೋಗುತ್ತಿದ್ದಾರೆ. ಅದಕ್ಕೆ ಅವರು ಸಿನಿಮಾಲೋಕವನ್ನೆ ಬಿಡುತ್ತಾರೆಂಬ ಪಿಸು ಪಿಸು ಕೇಳಿಬರುತ್ತಿದೆ.

  • ಮೆಹಂದಿ ಹಾಕಿ ಮದುವೆಗೆ ಸಿದ್ಧವಾದ ಸಾಯಿ ಪಲ್ಲವಿ

    ಮೆಹಂದಿ ಹಾಕಿ ಮದುವೆಗೆ ಸಿದ್ಧವಾದ ಸಾಯಿ ಪಲ್ಲವಿ

    ಬೆಂಗಳೂರು: ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮಕ್ಕೆ ಸಜ್ಜಾದ ಸಾಯಿ ಪಲ್ಲವಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಫೋಟೋ ನೋಡಿ ಅಭಿಮಾನಿಗಳಿಗೆ ನಟಿ ಮದುವೆಯಾಗುತ್ತಿದ್ದಾರಾ? ಎಂದು ಪ್ರಶ್ನೆ ಮೂಡಿದೆ. ಇದನ್ನೂ ಓದಿ:  ಮದುವೆ ಸ್ಕ್ವಾಡ್ ಕನ್ನಡದಲ್ಲೇ ಬರೆದು, ಕಲರ್‍ಫುಲ್ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    ಲಾಕ್‍ಡೌನ್‍ನಲ್ಲಿ ಕೆಲವು ದಿನಗಳಿಂದ ಸಾಯಿ ಪಲ್ಲವಿ ಅವರು ತಮ್ಮ ಕಸಿನ್ಸ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕ್ಯಾಂಡಿಡ್ ಗ್ರೂಪ್ ಫೋಟೋಗಳನ್ನು ಹಂಚಿಕೊಂಡಿದ್ದ ಅವರು ಮದುವೆ ಸ್ಕ್ವಾಡ್ ಎಂದು ಕ್ಯಾಪ್ಷನ್ ನೀಡಿದ್ದರು. ಈಗ ಮೆಹಂದಿ ಸಂಭ್ರಮದ ಕ್ಷಣಗಳ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಕಂಡ ಹಲವರು ಒಮ್ಮೆಲೇ ಅಚ್ಚರಿ ಪಟ್ಟಿದ್ದಾರೆ. ಸೈಲೆಂಟ್ ಆಗಿ ಸಾಯಿ ಪಲ್ಲವಿ ಹಸೆಮಣೆ ಏರಬಹುದೇ ಎಂಬ ಗುಮಾನಿ ಅನೇಕರಿಗೆ ಒಂದು ಕ್ಷಣ ಕಾಡಿರಬಹುದು. ಆದರೆ ಅವರು ಈ ರೀತಿ ಮೆಹಂದಿ ಹಚ್ಚಿಕೊಂಡು ಸಜ್ಜಾಗಿರುವುದು ಕಸಿನ್ ಮದುವೆಗೆ ಎನ್ನಲಾಗಿದೆ. ಇದನ್ನೂ ಓದಿ:  ಮುಖಕ್ಕೆ ಎಂಜಲು ಹಚ್ಚಿಕೊಳ್ಳುತ್ತೇನೆ: ಮಿಲ್ಕಿ ಬ್ಯೂಟಿ ತಮನ್ನಾ

     

    View this post on Instagram

     

    A post shared by Sai Pallavi (@saipallavi.senthamarai)

    ಲಾಕ್‍ಡೌನ್‍ನಲ್ಲಿ ಅನೇಕ ನಟಿಯರು ಸದ್ದಿಲ್ಲದೇ ಮದುವೆ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಣಿತಾ ಸುಭಾಷ್, ಯಾಮಿ ಗೌತಮ್ ಮುಂತಾದವರು ಸೈಲೆಂಟ್ ಆಗಿ ಹಸೆಮಣೆ ಏರಿದ್ದರು. ಹೆಚ್ಚಾಗಿ ಸೆಲೆಬ್ರಿಟಿಗಳು ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಮೆಹಂದಿ ಧರಿಸಿ ಅಚ್ಚರಿ ಮೂಡಿಸಿದ್ದಾರೆ. ಹಾಗಂತ ಸ್ವತಃ ಸಾಯಿ ಪಲ್ಲವಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿಲ್ಲ. ಸದ್ಯ ಅವರು ಸಂಬಂಧಿಕರ ಮದುವೆಗಾಗಿ ಸಜ್ಜಾಗಿದ್ದಾರೆ.

     

    View this post on Instagram

     

    A post shared by Sai Pallavi (@saipallavi.senthamarai)

    ಸಿನಿಮಾದಿಂದ ಭಾರಿ ಜನಪ್ರಿಯತೆಗಳಿಸಿದ ಅವರು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮಲಯಾಳಂನ ಪ್ರೇಮಂ ಸಿನಿಮಾದಿಂದ ಭಾರಿ ಜನಪ್ರಿಯತೆ ಗಳಿಸಿದ ಅವರು ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಲವ್ ಸ್ಟೋರಿ ಸಿನಿಮಾದಲ್ಲಿ ನಾಗ ಚೈತನ್ಯ ಜೊತೆ, ವಿರಾಟ ಪವರ್ಂ ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ನಾನಿ ಜೊತೆ ನಟಿಸುತ್ತಿರುವ ಶ್ಯಾಮ್ ಸಿಂಗ್ ರಾಯ್ ಸಿನಿಮಾ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.

  • ಭಾವನಾತ್ಮಕವಾಗಿ ಸೆಳೆದ ಟಾಲಿವುಡ್‍ನ ಲವ್‍ಸ್ಟೋರಿ ಟೀಸರ್

    ಭಾವನಾತ್ಮಕವಾಗಿ ಸೆಳೆದ ಟಾಲಿವುಡ್‍ನ ಲವ್‍ಸ್ಟೋರಿ ಟೀಸರ್

    ಟಾಲಿವುಡ್‍ನ ಲವ್ ಸ್ಟೋರಿ ಸಿನಿಮಾದ ಟೀಸರ್ ಇಂದು ರೀಲಿಸ್ ಆಗಿದ್ದು ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಇಬ್ಬರ ನಡುವಿನ ಸುಂದರ ಮತ್ತು ನವೀರಾದ ಪ್ರೀತಿಯ ಸುಂದರವಾದ ಪ್ರಯಾಣವನ್ನು ಟೀಸರ್‌ನಲ್ಲಿ ನೋಡಬಹುದಾಗಿದೆ.

    ನಾಗ ಚೈತನ್ಯ ಲವ್ ಸ್ಟೋರಿ ಸಿನಿಮಾದ ಮೂಲಕವಾಗಿ ಲವರ್ ಬಾಯ್ ಆಗಿ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಈ ಸಿನಿಮಾ ಭಾರೀ ಪ್ರಮಾಣದ ನಿರೀಕ್ಷೆಗಳ ಪಟ್ಟಿಯನ್ನು ಹೆಚ್ಚಿಸಿದೆ. ಈ ಪ್ರೇಮಕಥೆಯ ಟೀಸರ್ ಇಂದು ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟೀಸರ್ ಉತ್ತಮವಾಗಿ ಮೂಡಿಬಂದಿರುವ ಖುಷಿಯಲ್ಲಿ ಸಿನಿಮಾತಂಡವಿದೆ.

    ಲವ್ ಸ್ಟೋರಿ ಸಿನಿಮಾ ಶೇಖರ್ ಕಮ್ಮುಲಾ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಟೀಸರ್ ಈಗಾಗಲೇ ಎಲ್ಲರ ಹೃದಯವನ್ನು ಗೆದ್ದಿದೆ.

    ಈ ಪ್ರೇಮ ಕಥೆ ಸುತ್ತಲೂ ನೋವು ಮತ್ತು ಭರವಸೆ ಇದೆ ಎಂದು ಬರೆದುಕೊಳ್ಳುವ ಮೂಲಕವಾಗಿ ಸಿನಿಮಾದ ನಿರ್ದೇಶಕರಾದ ಶೇಖರ್ ಕಮ್ಮುಲಾ ಟೀಸರ್ ನನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ನಾಗಚೈತನ್ಯ, ಸಾಯಿ ಪಲ್ಲವಿ ಕೂಡ ಲವ್‍ಸ್ಟೋರಿ ಸಿನಿಮಾದ ಟೀಸರ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟೀಸರ್‍ನಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ, ರೇವಂತ್ ಮತ್ತು ಮೌನಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ತಾನೇ ಕಾಲೇಜು ಮುಗಿಸಿದ ರೇವಂತ್ ಕೆಲಸ ಹುಡುಕುತ್ತಿರುತ್ತಾನೆ. ಮೌನಿಕಾ ನೃತ್ಯದ ಬಗ್ಗೆ ಒಲವು ತೋರುತ್ತಿರುತ್ತಾಳೆ. ಸಾಯಿಪಲ್ಲವಿ ಎಂದಿನಂತೆ ಸಿಂಪಲ್ ಆಗಿ ಮುದ್ದು ಮುದ್ದಾಗಿ ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ತಮ್ಮ ಅಭಿನಯದ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಟೀಸರ್ ವೀಕ್ಷಣೆ ಮಾಡಿರುವ ಅಭಿಮಾನಿಗಳು ಭಾವನಾತ್ಮಕ ಕಮೆಂಟ್‍ಗಳನ್ನು ಮಾಡಿದ್ದಾರೆ. ಅಕ್ಷರಶಃ ನನ್ನ ಕಣ್ಣಲ್ಲಿ ನೀರು ಬಂತು. ಸಾಧ್ಯವಾದಷ್ಟು ಬೇಗ ಚಿತ್ರವನ್ನು ಬಿಡುಗಡೆ ಮಾಡಿ ಸರ್. ಹೃದಯವನ್ನು ಸ್ಪರ್ಶಿಸುವ ಚಿತ್ರವೊಂದನ್ನು ಮಾಡಿದ ತಂಡಕ್ಕೆ ಧನ್ಯವಾದಗಳು ಎಂದೆಲ್ಲಾ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‍ಗಳ ಸುರಿಮಳೆ ಗೈದಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

    ಲವ್ ಸ್ಟೋರಿ ಸಿನಿಮಾ ತಂಡ ಈ ಚಿತ್ರವು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಭರವಸೆ ನೀಡಿದ್ದಾರೆ. ಚಿತ್ರದ ಶೂಟಿಂಗ್ 2019ರ ಸೆಪ್ಟೆಂಬರ್‍ನಲ್ಲಿ ಪ್ರಾರಂಭವಾಯಿತ್ತು. ಆದರೆ 2020ರ ಸಾಂಕ್ರಾಮಿಕ ರೋಗದಿಂದಾಗಿ ಅದು ಸ್ಥಗಿತಗೊಂಡಿತ್ತು. ಚಲನಚಿತ್ರ ನಿರ್ಮಾಪಕರು ಅನ್ಲಾಕ್ ಸಮಯದಲ್ಲಿ ಮತ್ತೆ ಚಿತ್ರೀಕರಣವನ್ನು ಪ್ರಾರಂಭಿಸಿದರು. ಲವ್ ಸ್ಟೋರಿ ಸಿನಿಮಾಗೆ ಪವನ್ ಸಿಎಚ್ ಅವರ ಸಂಗೀತ ನಿರ್ದೆಶನವಿದೆ.