Tag: ಸಾಯಿಕುಮಾರ್

  • ‘ಚೌಕಿದಾರ್’ ಅಡ್ಡಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ

    ‘ಚೌಕಿದಾರ್’ ಅಡ್ಡಾಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ಎಂಟ್ರಿ

    ಟೈಟಲ್ ಮೂಲಕ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ನಟಿಸುತ್ತಿರುವ ಚೌಕಿದಾರ್ (Chowkidar) ಸಿನಿಮಾ ತಂಡದಿಂದ ಮತ್ತೊಂದು ಹೊಸ ಅಪ್ ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ. ಚೌಕಿದಾರ್ ಸಿನಿಮಾಕ್ಕೀಗ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

    ಕನ್ನಡದಲ್ಲಿ ‘ಆನೆ ಪಟಾಕಿ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ, ‘ರಥಾವರ’, ‘ತಾರಕಾಸುರ’ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಚೌಕಿದಾರ ಸಿನಿಮಾದ ಸೂತ್ರಧಾರರು. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

    ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೊದಲ ವಾರ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

  • ಗಾಯಕಿಯಾದ ನಟಿ ಪ್ರೇಮಾ: ‘ವರಾಹಚಕ್ರಂ’ ಚಿತ್ರಕ್ಕೆ ನಟಿ ಗಾಯನ

    ಗಾಯಕಿಯಾದ ನಟಿ ಪ್ರೇಮಾ: ‘ವರಾಹಚಕ್ರಂ’ ಚಿತ್ರಕ್ಕೆ ನಟಿ ಗಾಯನ

    ಗೌರಿಪುತ್ರ ಖ್ಯಾತಿಯ ಮಂಜು ಮಸ್ಕಲ್ ಮಟ್ಟಿ  ಅವರ ನಿರ್ದೇಶನ‌ದ ಚಿತ್ರ ವರಾಹಚಕ್ರಂ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಪದ್ದತಿಗಳು, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ  ಜಾಗೃತಿ ಮೂಡಿಸುವ ಕಥಾಹಂದರ ಒಳಗೊಂಡ  ವರಾಹಚಕ್ರಂ ಚಿತ್ರದಲ್ಲಿ ಹಿರಿಯನಟಿ ಪ್ರೇಮಾ (Prema), ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನ್ವಂತರಿ ಮೂವಿ ಮೇಕರ್ಸ್ ಅಡಿಯಲ್ಲಿ ಸ್ನೇಹಿತರೆಲ್ಲ ಸೇರಿ  ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ವಿಶೇಷವಾಗಿ ನಾಯಕಿ ಪ್ರೇಮಾ ಅವರು ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ದೇಶಭಕ್ತಿ ಗೀತೆಯೊಂದನ್ನು ಹಾಡಿದ್ದಾರೆ. ವಾರಣಾಸಿಯಲ್ಲಿ  ಚಿತ್ರೀಕರಿಸಲಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಜನವರಿ 26ರ  ಗಣರಾಜ್ಯೋತ್ಸವದಂದು ನಡೆಯಲಿದೆ.

    ಶೂಟಿಂಗ್  ಟೈಮ್ ನಲ್ಲಿ ಸೆಟ್ ನಲ್ಲಿ ಪ್ರೇಮ ಅವರು  ಹಾಡುತ್ತಿರುವಾಗ  ಅದನ್ನು ಕೇಳಿದ ನಿರ್ದೇಶಕರು ಈ ಹಾಡನ್ನು ನೀವೆ ಹಾಡಿ ಎಂದು ಕೇಳಿದಾಗ ಅವರೂ ಒಪ್ಪಿ ಪ್ರೀತಿಯಿಂದ ಹಾಡಿಗೆ ದನಿಯಾಗಿದ್ದಾರೆ.  ನಾಯಕಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿರುವ ಪ್ರೇಮ ಅವರು ತುಂಬಾ ಅನುಭವಿ ಗಾಯಕಿಯ ಹಾಗೆ  ಹಾಡಿದ್ದು ವಿಷೇಶವಾಗಿತ್ತು.  ಅರ್ಜುನ್ ದೇವ  ಚಿತ್ರದ ನಾಯಕನಾಗಿ ನಟಿಸಿದ್ದು, ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಉಳಿದ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ.


    ಮಂಜುನಾಥ್ ಮಸ್ಕಲ್ ಮಟ್ಟಿ ಅವರೇ  ಚಿತ್ರದ ಕಥೆ, ಚಿತ್ರಕಥೆ  ಬರೆದು ನಿರ್ದೇಶನ‌ ಮಾಡಿದ್ದಾರೆ. ಡಾ.ವಿ. ನಾಗೇಂದ್ರಪ್ರಸಾದ್ ಅವರು  ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿದ್ದಾರೆ. ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದ್ದು, ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣ ನಡೆದಿದೆ.

  • ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ನಟ ಭಯಂಕರ: ಮೊದಲು ಟ್ರೈಲರ್ ನೋಡಿ, ಆನಂತರ ಸಿನಿಮಾ ನೋಡ್ಬೇಕೋ ಬೇಡ್ವೊ ಡಿಸೈಡ್ ಮಾಡಿ

    ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ಇದೇ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ‘ನಟ ಭಯಂಕರ’ (Nata Bhayankara) ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿ ಕಳೆದ ಒಂದು ವಾರದಿಂದ ಟ್ರೆಂಡಿಂಗ್ ನಲ್ಲಿದೆ. ಈ ಸಿನಿಮಾದಲ್ಲಿ ಪ್ರಥಮ್ ಸಿಕ್ಕಾಪಟ್ಟೆ ಬಿಲ್ಡ್ ಅಪ್ ಕೊಟ್ಟಿದ್ದಾರೆ ಅಂತ ಅನಿಸಿದರೂ, ಅಲ್ಲೊಂದು ಪ್ರಾಮಾಣಿಕತೆ ಇರುವುದು ಎದ್ದು ಕಾಣುತ್ತದೆ. ಸಿನಿಮಾದಲ್ಲಿರುವ ಅಷ್ಟೂ ಪಾತ್ರ, ಪಾತ್ರಕ್ಕಿರುವ ಹಿನ್ನೆಲೆ ಮತ್ತು ತಾವು ಸಿನಿಮಾದ ಮೂಲಕ ಏನನ್ನು ಹೇಳಲು ಹೊರಟಿದ್ದೇವೆ ಎನ್ನುವುದನ್ನು ಸ್ಪಷ್ಟ ಮತ್ತು ನಿಖಿರವಾಗಿ ಟ್ರೈಲರ್ ನಲ್ಲಿ ಹೇಳಿದ್ದಾರೆ ಪ್ರಥಮ್.

    ಈ ಸಿನಿಮಾದ ಬಗ್ಗೆ ಅವರಲ್ಲಿ ಎಷ್ಟೊಂದು ಆತ್ಮವಿಶ್ವಾಸವಿದೆ ಎಂದರೆ, ‘ಜನರು ಮೊದಲು ಟ್ರೈಲರ್ ನೋಡಲಿ. ಆನಂತರ ಸಿನಿಮಾ ನೋಡಬೇಕೋ ಬೇಡವೋ ಡಿಸೈಡ್ ಮಾಡಲಿ’ ಎನ್ನುತ್ತಾರೆ ಪ್ರಥಮ. ಟ್ರೈಲರ್ ತುಣುಕುಗಳೇ ಹೇಳುವಂತೆ ನವರಸಗಳನ್ನು ಹಿಂಡಿ ಭಯಂಕರವಾದ ನಟನನ್ನು ಪ್ರೇಕ್ಷಕರು ಎದುರು ನಿಲ್ಲಿಸಲು ಹೊರಟಿದ್ದಾರೆ ಪ್ರಥಮ್. ಈ ಕಾರಣಕ್ಕಾಗಿ ನಟ ಭಯಂಕರ ನೋಡುಗರಿಗೆ ಇಷ್ಟವಾಗುತ್ತಾನೆ. ಇದನ್ನೂ ಓದಿ: ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಇದು ಪ್ರಥಮ್ ನಿರ್ದೇಶನದ ಚೊಚ್ಚಲು ಸಿನಿಮಾವಾದರೂ, ಹಾಗಂತ ಅನಿಸುವುದಿಲ್ಲ. ತಾವೇ ನಿರ್ದೇಶನ ಮಾಡಿ, ನಟಿಸುವ ದೊಡ್ಡದೊಂದು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅದರಲ್ಲಿ ಗೆಲುವು ಕಾಣುವಂತಹ ಸಾಕಷ್ಟು ಅಂಶಗಳನ್ನು ಟ್ರೈಲರ್ ನಲ್ಲಿಯೇ ಬಿಟ್ಟುಕೊಟ್ಟಿದ್ದಾರೆ. ಟ್ರೈಲರ್ ನಲ್ಲಿ ಕಾಮಿಡಿ ಇದೆ. ಹಾರರ್ ಇದೆ, ಥ್ರಿಲ್ಲರ್ ಅಂಶಗಳಿವೆ. ಸಾಹಸವಿದೆ ಜೊತೆಗೆ ಅನುಭವಿ ಕಲಾವಿದರ ದಂಡೇ ತಾರಾಗಣದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ನಟ ಭಯಂಕರ ಸಿನಿಮಾ ನೋಡುಗರಿಗೆ ಭರ್ಜರಿ ಮನರಂಜನೆ ನೀಡುವುದು ಗ್ಯಾರಂಟಿ.

    ಈ ಸಿನಿಮಾದ ಟ್ರೈಲರ್ ಅನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಬಿಡುಗಡೆ ಮಾಡಿ, ಅವರೇ ಮೆಚ್ಚಿ ಮಾತನಾಡಿದ್ದರು. ಪ್ರಥಮ್ ಸಾಮರ್ಥ್ಯದ ಬಗ್ಗೆ ಕೊಂಡಾಡಿದ್ದರು. ಈಗ ಜನರೂ ಟ್ರೈಲರ್ ನೋಡಿ ಭರವಸೆಯ ಮಾತುಗಳನ್ನು ಆಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಸಾಯಿಕುಮಾರ್ (Saikumar), ಶೋಭರಾಜ್, ಹಿರಿಯ ನಟ ಉಮೇಶ್, ಕುರಿ ಪ್ರತಾಪ್ ಸೇರಿದಂತೆ ಅನುಭವಿ ಕಲಾವಿದರೇ ಪಾತ್ರ ಮಾಡಿದ್ದಾರೆ.

    ಪ್ರಥಮ್ ಗೆ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ನಿಹಾರಿಕಾ ಮತ್ತು ಚಂದನಾ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪ್ರಥಮ್ ಈ ಸಿನಿಮಾದಲ್ಲಿ ಫೈಟ್ ಅಷ್ಟೇ ಮಾಡಿಲ್ಲ, ಇಬ್ಬರು ಸುಂದರಿಯರ ಜೊತೆ ಡ್ಯುಯೆಟ್ ಕೂಡ ಹಾಡಿದ್ದಾರೆ. ಹಾಗಾಗಿ ಈ ಪ್ರಥಮ್ ನಿಜಕಕ್ಕ ನಟ ಭಯಂಕರ ಅನ್ನುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಲೈಗರ್’ ಚಿತ್ರದ ಸೋಲಿನ ಬೆನ್ನಲ್ಲೇ ನಿರ್ದೇಶಕ ಪುರಿ ಜಗನ್ನಾಥ್ ಆಪ್ತ ಆತ್ಮಹತ್ಯೆ

    `ಲೈಗರ್’ ಚಿತ್ರದ ಸೋಲಿನ ಬೆನ್ನಲ್ಲೇ ನಿರ್ದೇಶಕ ಪುರಿ ಜಗನ್ನಾಥ್ ಆಪ್ತ ಆತ್ಮಹತ್ಯೆ

    `ಲೈಗರ್’ (Liger Film) ಚಿತ್ರದ ಸೋಲಿನ ಬಳಿಕ ನಿರ್ದೇಶಕ ಪುರಿ ಜಗನ್ನಾಥ್‌ಗೆ (Puri Jagannadh)  ಇದೀಗ ಮತ್ತೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಪುರಿ ಜಗನ್ನಾಥ್ ಅವರ ಆಪ್ತ ಸಾಯಿ ಕುಮಾರ್ ದುರ್ಗಂ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಟಾಲಿವುಡ್ (Tollywood) ಸ್ಟಾರ್ ನಿರ್ದೇಶಕನಾಗಿ ಗುರುತಿಸಿಕೊಂಡ ಪುರಿ ಜಗನ್ನಾಥ್‌ಗೆ ಅದೃಷ್ಟ ಕೈ ಕೊಟ್ಟಿದೆ. `ಲೈಗರ್’ (Liger Film) ಚಿತ್ರದ ಸೋಲಿನ ನಂತರ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ನಿರ್ದೇಶಕ ಪುರಿ ಬಳಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸಾಯಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರಿ ಅವರ ಬಳಿ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ, ಸಾಯಿ ಕುಮಾರ್ ಸೈ ಎನಿಸಿಕೊಂಡಿದ್ದರು.

    ಸಾಯಿಕುಮಾರ್ ಸಾವಿಗೆ ಅವರು ಮಾಡಿಕೊಂಡಿದ್ದ ಸಾಲವೇ ಕಾರಣ ಎನ್ನಲಾಗುತ್ತಿದೆ. ಮಾಡಿರುವ ಸಾಲ ತೀರಿಸಲಾಗದೇ ಅಸಿಸ್ಟೆಂಟ್ ಸಾಯಿ ಸಾವಿಗೆ ಶರಣಾಗಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನು ಸಹಾಯಕನ ಸಾವಿನ ಸುದ್ದಿ ಕೇಳಿ ಪುರಿ ಜಗನ್ನಾಥ್ ಶಾಕ್ ಆಗಿದ್ದಾರೆ. ಇದನ್ನೂ ಓದಿ:ರಕ್ತದಿಂದ ತನ್ನ ಪೇಂಟಿಂಗ್ ಮಾಡಿದ ಅಭಿಮಾನಿಗೆ ಖಡಕ್ ವಾರ್ನಿಂಗ್ ಕೊಟ್ಟ ಸೋನು ಸೂದ್

    ಇನ್ನು `ಲೈಗರ್’ ನಂತರ ವಿಜಯ್ ದೇವರಕೊಂಡ (Vijay Devarakonda) ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್‌ನ  `ಜನಗಣಮನ’ ಹೊಸ ಚಿತ್ರವಾಗಿದ್ದು, ಈ ಸಿನಿಮಾ ಬಜೆಟ್ ಕೊರತೆಯಿಂದ ನಿಂತು ಹೋಗಿದೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್

    ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್

    ಬೆಂಗಳೂರು: ಭಗವಂತನ ಮೇಲೆ ಕೋಪ ಬರುತ್ತಿದೆ ಎಂದು ನಟ ಸಾಯಿ ಕುಮಾರ್ ಸಿಟ್ಟು ಹೊರ ಹಾಕಿದ್ದಾರೆ.

    ಕಂಠೀರವ ಸ್ಟುಡಿಯೋಗೆ ಬಂದು ಅಪ್ಪು ಸಮಾಧಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಂಠೀರವ ಸ್ಟುಡಿಯೋಗೆ ಶೂಟಿಂಗ್ ಗಾಗಿ ನಾವು ಬಂದಿದ್ದೇವೆ. ನಾವು ಇಲ್ಲಿ ನಟಿಸುತ್ತಿದ್ದೇವೆ ಎನಿಸುತ್ತಿದೆ. ಇದು ನಿಜ ಎಂದು ನನಗೆ ಅನಿಸುತ್ತಿಲ್ಲ. ಏಕೆಂದರೆ  ನಾವು ಎಷ್ಟೋ ಸಿನಿಮಾಗಳನ್ನು ಇಲ್ಲಿ ಶೂಟಂಗ್ ಮಾಡಿದ್ದೆವು. ಆದರೆ ಇಂದು ಇವರ ದರ್ಶನಕ್ಕೆ ಬಂದಿರುವುದು ನೋವುತರುತ್ತಿದೆ ಎಂದರು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್

    ನಾನು ಭಗವಂತನನ್ನು ತುಂಬಾ ನಂಬುತ್ತೇನೆ. ಆದರೆ ಈ ವಿಚಾರ ಕೇಳಿ ಭಗವಂತನ ಮೇಲೆಯೇ ಕೋಪ ಬರುತ್ತಿದೆ. ಒಳ್ಳೆಯ ನಟನಿಗೆ ಈ ರೀತಿಯಾಗಿರುವುದು ತುಂಬಾ ನೋವು ತರುತ್ತಿದೆ. ಅವರು ಒಳ್ಳೆಯ ನಟನೂ ಹೌದು. ಅದೇ ರೀತಿ ಒಳ್ಳೆಯ ಮನುಷ್ಯ. ಏಕೆಂದರೆ ನಾನು ಅವರ ಜೊತೆ ನಟಿಸಿದ್ದೇನೆ. ಸೆಟ್ ನಲ್ಲಿ ಅವರು ಇದ್ದ ರೀತಿ ನೋಡಿದರೆ ಖುಷಿಯಾಗುತ್ತಿತ್ತು ಎಂದು ನೆನೆದರು.

    ಒಳ್ಳೆಯ ಮನುಷ್ಯ

    ಡಾ.ರಾಜ್‍ಕುಮಾರ್ ಕುಟುಂಬದವರ ಜೊತೆ ನಾವು ನಟಿಸುತ್ತಿದ್ದೇವೆ. ನಮ್ಮ ಅಪ್ಪ-ಅಮ್ಮನ ಕಾಲದಿಂದಲ್ಲೂ ನಟಿಸುತ್ತಾ ಬಂದಿದ್ದೇವೆ. ಅಪ್ಪ ತೆಲುಗಿನಲ್ಲಿ ರಾಜ್ ಅವರಿಗೆ ಧ್ವನಿ ಕೊಟ್ಟಿದ್ದರು. ಅಮ್ಮ ಅವರ ಜೊತೆ ಅಭಿನಯಿಸಿದ್ದರು. ನಾನು ಡಾ.ರಾಜ್ ಅವರನ್ನು ಭೇಟಿಯಾಗಿ ಬಭ್ರುವಾಹನ ಡೈಲಾಗ್ ಅನ್ನು ಅವರ ಹತ್ತಿರ ಹೇಳಿ ಆರ್ಶೀವಾದ ಪಡೆದು ಇಲ್ಲಿಯವರೆಗೂ ಬಂದಿದ್ದೇನೆ. ಶಿವಣ್ಣನ ಜೊತೆ, ರಾಘಣ್ಣನ ಮಗನ ಜೊತೆ ನಟಿಸಿದ್ದೆ. ಅಪ್ಪು ಜೊತೆ ಸಿನಿಮಾ ಮಾಡಬೇಕು ಎಂದು ಇತ್ತೀಚೆಗೆ ‘ಯುವರತ್ನ’ ಸಿನಿಮಾದಲ್ಲಿ ಅವರ ಜೊತೆಗೆ ನಟಿಸಿದ್ದೆ ಎಂದರು.

    ಆ ವೇಳೆ ನಾವು ಪೊಲೀಸ್ ಸ್ಟೋರಿಯಿಂದ ಇಲ್ಲಿವರೆಗೂ ಮಾಡಿದ ಸಿನಿಮಾಗಳ ಬಗ್ಗೆ ಮಾತನಾಡಿದ್ದೆವು. ನಿಜವಾಗಲು ಆ ರೀತಿಯ ಮನುಷ್ಯನನ್ನು ನಾನು ನೋಡಿಲ್ಲ. ಒಳ್ಳೆಯ ಮನುಷ್ಯ. ಎಲ್ಲರ ಜೊತೆ ಚೆನ್ನಾಗಿ ಮಾತನಾಡುತ್ತಾರೆ. ಅವರು ಬೆಳಗ್ಗೆ ಬಂದು ಶುಭೋದಯ ಹೇಳುವುದರಿಂದ ಹಿಡಿದು ಸಂಜೆ ಹೋಗುವವರೆಗೂ ಅವರ ನಡವಳಿಕೆ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಮೌನಿಯಾದರು.

    ಅಪ್ಪು ನಮ್ಮ ಜೊತೆಯಲ್ಲಿಯೇ ಇದ್ದರೆ ಎಂಬ ಭಾವನೆ ಇದೆಯೇ ಹೊರತು, ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ಭಾವನೆಯೇ ಬರುತ್ತಿಲ್ಲ. ಈ ರೀತಿ ಆಗುತ್ತೆ ಎಂದು ಯಾರು ಸಹ ಊಹಿಸಿಕೊಂಡಿರಲ್ಲ ಎಂದರು.

    ಹೆಮ್ಮೆ ಪಟ್ಟುಕೊಂಡಿದ್ದರು:

    ನನ್ನ ಮಗನನ್ನು ಅವರೇ ಇಂಡಸ್ಟ್ರಿಗೆ ಪರಿಚಯಿಸುತ್ತೇನೆ ಎಂದಿದ್ದರು. ನನ್ನ ಮಗಳು ಡಾಕ್ಟರ್. ಮಗಳು ಮತ್ತೆ ಅಳಿಯ ಸೇರಿ ಒಂದು ಫುಡ್ ಪ್ರಾಡಕ್ಟ್ ಲಾಂಚ್ ಮಾಡಲು ಕರೆದಾಗ ಅವರೇ ಸ್ವತಃ ಫೋನ್ ಮಾಡಿ ಡೇಟ್ ಕೇಳಿ ಲಾಂಚ್ ಮಾಡಿಕೊಟ್ಟಿದ್ದರು. ಪ್ರಾಡಕ್ಟ್ ಲಾಂಚ್ ಗೆ ಅವರು ಕುಟುಂಬದವರ ಜೊತೆ ಬಂದಿದ್ದು, ತುಂಬಾ ಹೆಮ್ಮೆ ಪಟ್ಟುಕೊಂಡಿದ್ದರು. ನಮ್ಮ ಕುಟುಂಬದವರ ಜೊತೆ ಸಂತೋಷವಾಗಿದ್ದರು ಎಂದರು. ಇದನ್ನೂ ಓದಿ: ತಾಂತ್ರಿಕ ಕಾರಣದಿಂದ ಎಡವಟ್ಟು ಆಗಿದೆ: ಅಕುಲ್ ಬಾಲಾಜಿ

    ಜೀವನ ಕ್ಷಣಿಕ:

    ಅಶ್ವಿನಿ ಮೇಡಂ ಜೊತೆಗೂ ಇವತ್ತು ಮಾತನಾಡಿಕೊಂಡು ಬರಬೇಕಾದರೆ ಪ್ರಾಡಕ್ಟ್ ಲಾಂಚ್ ದಿನದ ಬಗ್ಗೆ ನೆನೆಸಿಕೊಂಡರು. ಇದಕ್ಕೆ ಒಂದು ನುಡಿ ಇದೆ, ಕಣ್ಣು ತೆಗೆದರೆ ಜನನ, ಕಣ್ಣು ಮುಚ್ಚಿದರೆ ಮರಣ. ಈ ರೆಪ್ಪೆ ಆಡಿಸುವ ಕಾಲವೇ ನಮ್ಮ ಜೀವನ ಎನ್ನುತ್ತಾರೆ. ಅದೇ ರೀತಿ ನಮ್ಮ ಜೀವನ ಕ್ಷಣಿಕವಾಗಿದೆ. ಈ ಕ್ಷಣಿಕ ಜೀವನದಲ್ಲಿ ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ದೇಶಕ್ಕೆ ನಾವು ಏನನ್ನು ಕೊಟ್ಟೆವು ಎಂಬುದು ತುಂಬಾ ಮುಖ್ಯ. ಅದೇ ರೀತಿ ಇಡೀ ಪ್ರಪಂಚವೇ ಇಂದು ಅಪ್ಪು ಬಗ್ಗೆ ತಿಳಿದುಕೊಳ್ಳುತ್ತೆ ಎಂದು ಹೇಳಿದರು.

    ಕರ್ನಾಟಕದವರಿಗೆ ಅಪ್ಪು ಬಗ್ಗೆ ಗೊತ್ತು. ಆದರೆ ಹೊರಗಿನ ಜನರು ಅಪ್ಪು ಬಗ್ಗೆ ಅವರು ಇಷ್ಟು ಒಳ್ಳೆಯ ಕೆಲಸ ಮಾಡಿದ್ರ ಎಂದು ನನಗೆ ಕರೆ ಮಾಡಿ ಕೇಳುತ್ತಿದ್ದಾರೆ. ಇಂದು ಅಪ್ಪು ಮಾಡಿರುವ ಸಮಾಜ ಕಾರ್ಯಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

    ಇಡೀ ಭಾರತದಲ್ಲಿಯೇ ಜನರು ಅಪ್ಪುಗೆ ಭಗವಂತ ಏಕೆ ಈ ರೀತಿ ಮಾಡಿದ ಎಂದು ಮರುಗುತ್ತಿದ್ದಾರೆ. ಇದು ನಿಜವಾಗಲು ದೊಡ್ಡ ನಷ್ಟವಾಗಿದೆ. ವಿ ಮಿಸ್ ಯೂ ಎಂದರು.

  • ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಬೆಂಗಳೂರು: ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್, ಲವ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ ಜಗ್ಗಿ ಜಗನ್ನಾಥ್. ಈ ಚಿತ್ರದ ಟ್ರೈಲರ್ ಹೊರಬಂದಿದ್ದು, ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ಯುವಪ್ರತಿಭೆ ಲಿಖಿತ್ ರಾಜ್ ಈ ಮೂವರ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಯುಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿಯಂಥ ಮಾಸ್ ಡೈಲಾಗ್‍ಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಅಂಡರ್‍ವಲ್ರ್ಡ್ ಕಥೆ ಇದಾಗಿದ್ದರೂ ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್‍ಗಳು ಕೂಡ ಗಮನ ಸೆಳೆದಿವೆ. ಈಗಾಗಲೇ ಜಗ್ಗಿ ಜಗನ್ನಾಥ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡು ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು, ಜಿ.ಶಾರದ,ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ.

    ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಮುಂತಾದವರ ತಾರಾಬಳಗವಿದೆ.

  • ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬೆಂಗಳೂರು: ನಿರ್ದೇಶಕ ಓಂ ಸಾಯಿಪ್ರಕಾಶ್ ಅಂದರೆ ಭಾವನೆಗಳನ್ನು ಮೀಟುವಂಥಾ ಕೌಟುಂಬಿಕ ಚಿತ್ರಗಳು, ಭಕ್ತಿಪ್ರಧಾನ ಚಿತ್ರಗಳೇ ಕಣ್ಮುಂದೆ ಬರುತ್ತವೆ. ಅವರು ನಿರ್ದೇಶನ ಮಾಡಿದ ಚಿತ್ರಗಳನ್ನು ನೋಡುತ್ತಾ ಬಂದವರಿಗೆ ಅವರನ್ನು ಮಾಸ್ ಸಿನಿಮಾ ನಿರ್ದೇಶಕರಾಗಿ ಕಲ್ಪಿಕೊಳ್ಳುವುದೂ ಕಷ್ಟವಾಗಬಹುದು. ಆದರೀಗ ಸಾಕ್ಷಾತ್ತು ಸಾಯಿಪ್ರಕಾಶ್ ಜಗ್ಗಿ ಜಗನ್ನಾಥ ಎಂಬ ಪಕ್ಕಾ ಆಕ್ಷನ್ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡಿರೋ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಈ ಚಿತ್ರದಲ್ಲಿ ಲಿಖಿತ್ ಎಂಬ ಹೊಸ ಹುಡುಗ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ತಮ್ಮ ಬ್ರ್ಯಾಂಡಿನಂತಿರೋ ಖಡಕ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಈಗ ಹೊರಬಂದಿರೋ ಟ್ರೇಲರ್‍ನಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರಿನ ಡೈಲಾಗುಗಳೊಂದಿಗೆ ಗಮನ ಸೆಳೆದಿದ್ದಾರೆ. ಇಲ್ಲಿನ ಮೈನವಿರೇಳಿಸೋ ಮಾಸ್ ಸೂಚನೆಗಳು ಇದು ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಾ ಎಂಬಂಥಾ ಸಂಶಯ ಹುಟ್ಟುವಷ್ಟು ಆಕ್ಷನ್ ಅಂಶಗಳನ್ನೊಳಗೊಂಡಿದೆ.

    ಪೆಟ್ರೋಲ್ ಪ್ರಸನ್ನ ಈ ಹಿಂದೆ ದಂಡುಪಾಳ್ಯಂ ಸರಣಿಯಲ್ಲಿ ಒಂದಷ್ಟು ಸದ್ದು ಮಾಡಿದ್ದರು. ಜಗ್ಗಿ ಜಗನ್ನಾಥ ಚಿತ್ರದಲ್ಲಿ ಅವರು ಮತ್ತೆ ವಿಲನ್ ರೋಲ್‍ನಲ್ಲಿ ಅಬ್ಬರಿಸಿದ್ದಾರೆ. ಈ ಕಥಾ ಹಂದರವೂ ವಿಶೇಷವಾಗಿಯೇ ಇದೆಯಂತೆ. ಸಾಮಾನ್ಯರಲ್ಲಿ ಸಾಮಾನ್ಯನಾದ ಹುಡುಗನೊಬ್ಬ ಅಘೋರಿಯ ಅವತಾರವೆತ್ತುವ ಅಪರೂಪದ ಸನ್ನಿವೇಶವೂ ಇಲ್ಲಿದೆಯಂತೆ. ಮಾಫಿಯಾ, ರೌಡಿಸಂ ಮತ್ತು ಅದನ್ನು ಬಗ್ಗುಬಡಿಯಲು ನಿಂತ ಖಡಕ್ ಖಾಕಿಯ ಸುತ್ತಾ ಈ ಕಥೆ ರೋಚಕವಾಗಿ ಚಲಿಸುತ್ತದೆಯಂತೆ. ಇದೆಲ್ಲದರ ಜೊತೆಗೆ ಮನಮಿಡಿಯೋ ಪ್ರೇಮಕಥೆಯನ್ನೂ ಹೊಂದಿರುವ ಈ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.