Tag: ಸಾಮೂಹಿಕ ಮದುವೆ

  • ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ 75 ಸಾವಿರ ಭಗವದ್ಗೀತೆ ಪುಸ್ತಕ ವಿತರಣೆ – 132 ಜೋಡಿಗೆ ಮದುವೆ ಭಾಗ್ಯ

    ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ 75 ಸಾವಿರ ಭಗವದ್ಗೀತೆ ಪುಸ್ತಕ ವಿತರಣೆ – 132 ಜೋಡಿಗೆ ಮದುವೆ ಭಾಗ್ಯ

    ಹಾವೇರಿ: ಮದುವೆ (Marriage) ಸಮಾರಂಭ ಎಂದರೆ ಅಲ್ಲಿ ಅದ್ದೂರಿ ಇದ್ದೇ ಇರುತ್ತದೆ. ಇಲ್ಲಿ ಮದುವೆ ಆಮಂತ್ರಣ ಪತ್ರಿಕೆಯ (Invitation Card) ಜೊತೆಗೆ ಭಗವದ್ಗೀತೆ (Bhagavad Gita) ಪುಸ್ತಕವನ್ನು ನೀಡಿ ಮದುವೆಗೆ ಆಹ್ವಾನಿಸಲಾಗುತ್ತಿದೆ. ಸುಮಾರು 75 ಸಾವಿರಕ್ಕೂ ಅಧಿಕ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಲಾಗಿದೆ. ಮಾತ್ರವಲ್ಲದೇ 132 ಜೋಡಿಗಳ ಉಚಿತವಾಗಿ ಮದುವೆ (Mass Wedding) ಮಾಡಲಾಗುತ್ತಿದೆ.

    ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷರ ಪ್ರಕಾಶ ಬುರಡಿಕಟ್ಟಿ ಅವರ ವಿಭಿನ್ನ ಮದುವೆ ಕಾರ್ಯಕ್ರಮ. ನಾಳೆ ಪ್ರಕಾಶ ಬುರಡಿಕಟ್ಟಿಯ ಮದುವೆಯ ಜೊತೆಗೆ ರಾಣೇಬೆನ್ನೂರು ತಾಲೂಕಿನ 132 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಂದು ಜೋಡಿಗೆ ವಂದೇಮಾತರಂ ಸ್ವಯಂಸೇವಾ ಸಂಸ್ಥೆಯ ವತಿಯಿಂದ ಮಾಂಗಲ್ಯ, ಇಬ್ಬರಿಗೂ ಬಟ್ಟೆ ಜೊತೆಗೆ 35 ಸಾವಿರ ರೂ. ಧನಸಹಾಯವನ್ನು ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ ಪ್ರತಿಯೊಂದು ಹಳ್ಳಿಯ ಮನೆಮನೆಗೆ ಮದುವೆಯ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡುವ ಮೂಲಕ ವಿಭಿನ್ನವಾಗಿ ಮದುವೆ ಕಾರ್ಯಕ್ರಮ ಮಾಡಲಾಗುತ್ತಿದೆ.

    ಪ್ರಕಾಶ ಬುರಡಿಕಟ್ಟಿ ಅವರು ತಮ್ಮ ಸಂಬಂಧಿಕರಿಗೆ ನೀಡುವಂತೆ ರಾಣೇಬೆನ್ನೂರಿನ ಕೂಲಿಕಾರ್ಮಿಕರಿಗೆ, ಆಟೋಚಾಲಕರು, ಹಮಾಲರು, ಭಿಕ್ಷುಕರಿಗೆ, ಕುಶಲಕರ್ಮಿಗಳಿಗೆ, ಅಂಧ ಮಕ್ಕಳಿಗೆ ಸೇರಿದಂತೆ ವೃದ್ಧಾಶ್ರಮಗಳಿಗೆ ವಿಶೇಷ ಉಡುಗೊರೆ ಹಾಗೂ ಬಟ್ಟೆಯನ್ನು ನೀಡಲಾಗಿದೆ. ರಾಣೇಬೆನ್ನೂರು ತಾಲೂಕಿನ 132 ಬಡ ಜೋಡಿಗಳು ಹಸೆಮಣೆ ಏರಲಿದ್ದಾರೆ. ಅಲ್ಲದೆ ರಾಣೇಬೆನ್ನೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆಮನೆಗೆ ಮದುವೆ ಆಮಂತ್ರಣ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕವನ್ನು ತಲುಪಿಸಿದ್ದಾರೆ.

    ಹಿಂದೂ ಧರ್ಮದ ಜಾಗೃತಿ ಹಾಗೂ ಭಗವದ್ಗೀತೆ ಪುಸ್ತಕ ಎಲ್ಲರ ಮನೆಯಲ್ಲಿ ಇರಬೇಕು. ಮಕ್ಕಳು ಅದನ್ನು ಓದುವ ಕೆಲಸ ಆಗಬೇಕು. ಇದೊಂದು ಐತಿಹಾಸಿಕ ಮದುವೆ ಕಾರ್ಯಕ್ರಮವಾಗಿದೆ. ಭಗವದ್ಗೀತೆ ಪುಸ್ತಕ ನೀಡುವುದರ ಮೂಲಕ ಜನರಿಗೆ ಹಿಂದುತ್ವದ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೆ ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಈ ಮದುವೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಗೌಪ್ಯತೆ ಉಲ್ಲಂಘಿಸಲು ಸಾಧ್ಯವಿಲ್ಲ – ಡೇಟಾ ಸುರಕ್ಷತೆ ಬಗ್ಗೆ ರಾಜೀವ್ ಸ್ಪಷ್ಟನೆ

    ರಾಣೇಬೆನ್ನೂರು ತಾಲೂಕಿನಲ್ಲಿ ಪ್ರಕಾಶ ಬುರಡಿಕಟ್ಟಿ ತಮ್ಮ ಮದುವೆಯ ಆಮಂತ್ರಣದ ಪತ್ರಿಕೆಯ ಜೊತೆಗೆ ಭಗವದ್ಗೀತೆ ಪುಸ್ತಕ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ನಾಳೆ ನಡೆಯುವ 132 ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಧಾಮೂರ್ತಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳು ಸೇರಿದಂತೆ ನಾಡಿನ ಗಣ್ಯರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಹಳ್ಳಕ್ಕೆ ಉರುಳಿದ KSRTC ಬಸ್ – 12 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

  • ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಭಾಗಿಯಾದ ಸುದೀಪ್ ದಂಪತಿ

    ಸಾಮೂಹಿಕ ವಿವಾಹ ಸಂಭ್ರಮದಲ್ಲಿ ಭಾಗಿಯಾದ ಸುದೀಪ್ ದಂಪತಿ

    ಮಂಗಳೂರು: ಧರ್ಮಸ್ಥಳದಲ್ಲಿ ಭಾನುವಾರ 47ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆದಿದ್ದು, ಇಡೀ ದಿನ ಧರ್ಮಸ್ಥಳ ಮದುವೆ, ಸಂಭ್ರಮ ಮತ್ತು ಸಡಗರದಿಂದ ರಾರಾಜಿಸುತ್ತಿತ್ತು.

    ಭಾನುವಾರ ಸಂಜೆ ಸುಮಾರು 6.40ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಮಂಗಳವಾದ್ಯ, ವೇದ ಘೋಷ ಮೊಳಗುತ್ತಿದ್ದಂತೆ 131 ಜೊತೆ ವಧೂ-ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಸಾಮೂಹಿಕ ವಿವಾಹ ಸಮಾರಂಭಕ್ಕೆ ಸುದೀಪ್ ದಂಪತಿ ಆಗಮನಿಸಿದ್ದು, ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

    ಈ ವೇಳೆ ನಟ ಸುದೀಪ್ ಮಾತನಾಡಿ, “ಎಲ್ಲರಿಗೂ ನನ್ನ ನಮಸ್ಕಾರ ಎಂದು ಭಾಷಣ ಪ್ರಾರಂಭಿಸಿ ಕನ್ನಡಿಗರ ಪ್ರೀತಿ-ವಿಶ್ವಾಸ, ಅಭಿಮಾನವೇ ತನ್ನ ಅಮೂಲ್ಯ ಆಸ್ತಿಯಾಗಿದೆ. ಕಲಾಭಿಮಾನಿಗಳು ಕಲಾವಿದನನ್ನು ಮರೆತರೆ ಆತ ಸತ್ತ ಹಾಗೆ ಎಂದು ಹೇಳಿದರು. ಹೆಗ್ಗಡೆಯವರೇ ನನ್ನ ಚಲನಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿರುವುದು ತನಗೆ ದೊರೆತ ದೊಡ್ಡ ಗೌರವವಾಗಿದೆ” ಎಂದು ಹೇಳಿದ್ದಾರೆ.

    ಮದುವೆಯಲ್ಲಿ ಪ್ರತಿಜ್ಞೆ  ಮಾಡುವುದನ್ನು ಪ್ರಥಮ ಬಾರಿಗೆ ತಾನು ನೋಡಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಭಾನುವಾರ ಮುಂಜಾನೆಯಿಂದಲೇ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ, ಶಾಲು ಮತ್ತು ಅಂಗಿ ವಿತರಿಸಿದರು. ವಧು-ವರರು ಸಂಜೆ 5 ಗಂಟೆಗೆ ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ತೆರಳಿದರು. ಅಲ್ಲಿ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ಸುದೀಪ್ ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ನೀಡಿದ್ರು.

    ವಧು-ವರರ ಪ್ರತಿಜ್ಞೆ : ಧರ್ಮಸ್ಥಳದಲ್ಲಿ ಮಂಗಲ ಮುಹೂರ್ತದಲ್ಲಿ ಸತಿ – ಪತಿಗಳಾಗಿ ಪವಿತ್ರ ಬಾಂಧವ್ಯ ಹೊಂದಿರುವ ನಾವು ಮುಂದೆ ಜೀವನದುದ್ದಕ್ಕೂ ಧರ್ಮ, ಅರ್ಥ ಮತ್ತು ಕಾಮಗಳದಲ್ಲಿ ಸಹಚರರಾಗಿ ಪರಸ್ಪರ ಪ್ರೀತಿ ? ವಿಶ್ವಾಸದಿಂದ ಒಬ್ಬರಿಗೊಬ್ಬರು ವಂಚನೆ ಮಾಡದೆ ಹಾಗೂ ಯಾವುದೇ ದುರಭ್ಯಾಸಗಳಿಗೆ ಬಲಿಯಾಗದೆ ಬದುಕುತ್ತೇವೆ ಎಂದು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಮತ್ತು ಪೂಜ್ಯ ಹೆಗ್ಗಡೆಯವರ ಸಮಕ್ಷಮದಲ್ಲಿ ಪ್ರಮಾಣ ವಚನ ಬದ್ಧರಾಗುತ್ತಿದ್ದೇವೆ.

    ಸುಖೀ ದಾಂಪತ್ಯ ಜೀವನಕ್ಕೆ ಹೊಂದಾಣಿಕೆ ಅಗತ್ಯ: ನೂತನ ದಂಪತಿಗಳಿಗೆ ಶುಭ ಹಾರೈಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಜಾತಿ-ಮತ, ಸಂಪ್ರದಾಯದ ಎಲ್ಲೆಯನ್ನು ಮೀರಿ 23 ಜೊತೆ ಅಂತರ್ಜಾತಿಯ ವಿವಾಹವಾಗಿರುವುದು ಶ್ಲಾಘನೀಯವಾಗಿದೆ. ಹಲವು ಕಾರಣಗಳಿಂದ ಹೆಚ್ಚು ಪ್ರಾಯವಾದ ಬಳಿಕ ಮದುವೆ ಆಗುವುದು ದೊಡ್ಡ ಸಮಸ್ಯೆ ಆಗಿದೆ. ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ಸತಿ-ಪತಿ ಹೊಂದಿಕೊಂಡು ನೆಮ್ಮದಿ ಜೀವನ ನಡೆಸಬೇಕು. ವಿಚ್ಛೇದನವೇ ಸಮಸ್ಯೆಗೆ ಪರಿಹಾರವಲ್ಲ ಎಂದು ಕಿವಿ ಮಾತು ಹೇಳಿದರು. ವಿವಾಹದ ಪಾವಿತ್ರ್ಯತೆ ಮತ್ತು ಜೀವನದ ಗೌರವ ಕಾಪಾಡಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದ್ದಾರೆ.

    ಈ ಸಾಮೂಹಿಕ ಮದುವೆಗೆ ಬಿರ್ಲಾ ಕಂಪೆನಿಯ ಜಂಟಿ ಅಧ್ಯಕ್ಷ ಮನೋಜ್ ಕುಮಾರ್ ಮೆಹತಾ ಶುಭಾಶಂಸನೆ ಮಾಡಿದ್ದು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಪ್ರಿಯಾ ಸುದೀಪ್ ಮತ್ತು ಶಾಸಕ ಕೆ. ವಸಂತ ಬಂಗೇರ ಉಪಸ್ಥಿತರಿದ್ದರು.