Tag: ಸಾಮಾಜಿಕ ಸೇವೆ

  • ಕೊಡಗಿನ ಯುವಕನ ಸೇವೆಗೆ ಸಂದ ಗೌರವ – ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಕೊಡಗಿನ ಯುವಕನ ಸೇವೆಗೆ ಸಂದ ಗೌರವ – ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

    ಮಡಿಕೇರಿ: ಕೊಡಗಿನ ಯುವಕರೊಬ್ಬರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.

    ಮೂಲತಃ ಕೊಡಗಿನ ಶುಂಠಿಕೊಪ್ಪ ಸಮೀಪದ ಕಲ್ಲೂರು ಗ್ರಾಮದ ಪ್ರಶಾಂತ್ ಕಲ್ಲೂರು ಅವರಿಗೆ ಪ್ರಶಸ್ತಿ ಸಿಕ್ಕಿದೆ. ಪ್ರಶಾಂತ್‍ರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಪ್ರಶಾಂತ್ ತಮ್ಮ ಕಲ್ಲೂರ್ ಸಿನಿಮಾಸ್ ಮೂಲಕ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ತಮ್ಮದೇ ಆದ ಸಾಫ್ಟ್ ವೇರ್ ಕಂಪೆನಿಯೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಪ್ರಶಾಂತ್ ಬಸವಜ್ಯೋತಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ.

    ವೀರಶೈವ ಲಿಂಗಾಯತ ಯುವ ವೇದಿಕೆ ಮೂಲಕ ಹಲವಾರು ವರ್ಷಗಳ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ಸೇವೆಯನ್ನು ಗುರುತಿಸಿ ಫಾಲ್ಕೆ ಕುಟುಂಬಸ್ಥರು ಪ್ರತಿಷ್ಠಿತ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಜುಲೈ 11 ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾಲ್ಕೆ ಅವರ ಮೊಮ್ಮಗ ಚಂದ್ರಶೇಖರ್ ಫಾಲ್ಕೆ ಹಾಗೂ ಚಿತ್ರನಟ ಸುಮನ್ ತಲ್ವಾರ್ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ:ಕೊಡಗಿನಲ್ಲಿ ಗಾಳಿ ಸಹಿತ ಮಳೆ ಅರ್ಭಟ – ಉಕ್ಕಿ ಹರಿಯುತ್ತಿರುವ ನದಿಗಳು

  • ನೆಲಮಂಗಲದ ಬಿ.ರಂಗನಾಥ್ ಸಾಮಾಜಿಕ ಸೇವೆಗೆ ಒಲಿದ ಗೌರವ ಡಾಕ್ಟರೇಟ್

    ನೆಲಮಂಗಲದ ಬಿ.ರಂಗನಾಥ್ ಸಾಮಾಜಿಕ ಸೇವೆಗೆ ಒಲಿದ ಗೌರವ ಡಾಕ್ಟರೇಟ್

    ನೆಲಮಂಗಲ: ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂದಿರುವ ನೆಲಮಂಗಲ ತಾಲೂಕು ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಿ.ರಂಗನಾಥ್ ಅವರಿಗೆ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

    ಗ್ಲೋಬಲ್ ಕೌನ್ಸಿಲ್ ಫಾರ್ ಪ್ರೋಫೆಶನಲ್ ಎಜುಕೇಶನ್ ಮಿಷನ್ ವತಿಯಿಂದ ರಂಗನಾಥ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗಿದೆ. ಬಿ.ರಂಗನಾಥ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಸೇವೆಗಳಾದ ದೀನದಲಿತರ ಉದ್ದಾರ, ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

    ಈ ವೇಳೆ ಪಬ್ಲಿಕ್ ಡಿಜಿಟಲ್ ವಾಹಿನಿಯೊಂದಿಗೆ ಮಾತನಾಡಿದ ಅವರು, ಗೌರವ ಡಾಕ್ಟರೇಟ್ ಬಂದಿರುವುದು ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ನೆರವಾಗುವ ಉದ್ದೇಶವನ್ನು ಹೊಂದಿದ್ದೇವೆ. ಈ ಪ್ರಶಸ್ತಿ ಲಭಿಸಿರುವುದು ನನ್ನ ಸಾಧನೆಗಿಂತ, ಸಾಮಾಜಿಕ ಜೀವನದಲ್ಲಿ ಅಳಿಲು ಸೇವೆ ಗುರುತಿಸಿರುವುದು ಬಹಳ ಸಂತೋಷವಾಗಿದೆ. ತಾಲೂಕು ಪಂಚಾಯಿತಿಯಲ್ಲಿ ಹಲವಾರು ಕಾರ್ಯ ಮಾಡಿದ್ದೇನೆ. ಈಗ ಪ್ರಶಸ್ತಿ ಬಂದ ಇನ್ನಷ್ಟೂ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ರಂಗನಾಥ್ ಹೇಳಿದ್ದಾರೆ.