Tag: ಸಾಮಾಜಿಕ ಜಾಲತಾಣ

  • ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್‌ – ಪೇಜ್‌ ವಿರುದ್ಧ ಎಫ್‌ಐಆರ್‌

    ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ಆಕ್ಷೇಪಾರ್ಹ ವಿಡಿಯೋ ಅಪ್ಲೋಡ್‌ – ಪೇಜ್‌ ವಿರುದ್ಧ ಎಫ್‌ಐಆರ್‌

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವ ಯುವತಿಯರ ವಿಡಿಯೋ ರೆಕಾರ್ಡ್ (Video Record) ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್ಲೋಡ್‌ ಮಾಡಿ ವಿಕೃತಿ ಮೆರೆದ ವಿಚಾರ ಬೆಳಕಿಗೆ ಬಂದಿದೆ.

    metro_chicks ಖಾತೆಯಿಂದ 13ಕ್ಕೂ ಹೆಚ್ಚು ವಿಡಿಯೋ ಅಪ್‌ಲೋಡ್‌ ಮಾಡಲಾಗಿತ್ತು.  ಈ ಖಾತೆಯನ್ನು 5,538 ಮಂದಿ ಫಾಲೋ ಮಾಡುತ್ತಿದ್ದರು. ಇದನ್ನೂ ಓದಿ: ಇನ್ನು 1 ವಾರ ರಾಜ್ಯದಲ್ಲಿ ಭಾರೀ ಮಳೆ- ಯಾವ ಜಿಲ್ಲೆಗೆ ಯಾವ ಅಲರ್ಟ್‌?

     

    ಮೆಟ್ರೋ ರೈಲಿನ ಒಳಗೆ, ನಿಲ್ದಾಣದಲ್ಲಿ ಹುಡುಗಿಯರ ಆಕ್ಷೇಪಾರ್ಹ ರೀತಿಯ ವಿಡಿಯೋಗಳನ್ನು ರೆಕಾರ್ಡ್‌ ಮಾಡಲಾಗಿತ್ತು. ಈ ಖಾತೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ವಿಡಿಯೋಗಳು ಡಿಲೀಟ್‌ ಆಗಿದೆ.

    ಇನ್‌ಸ್ಟಾ ಪೇಜ್‌ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಈಗ ಈ ವಿಡಿಯೋ ಅಪ್ಲೋಡ್‌ ಮಾಡಿದವರ  ಪತ್ತೆಗೆ ಬಲೆ ಬೀಸಿದ್ದಾರೆ.

  • ಬೆಂಗಳೂರು ಪೋರ್ಟ್‌ ಧ್ವಂಸ ಮಾಡಿದ್ದೇವೆ – ಮತ್ತೆ ಪಾಕ್‌ ಫುಲ್‌ ಟ್ರೋಲ್‌

    ಬೆಂಗಳೂರು ಪೋರ್ಟ್‌ ಧ್ವಂಸ ಮಾಡಿದ್ದೇವೆ – ಮತ್ತೆ ಪಾಕ್‌ ಫುಲ್‌ ಟ್ರೋಲ್‌

    ಬೆಂಗಳೂರು: ಭಾರತ (India) ಪಾಕಿಸ್ತಾನದ (Pakistan) ಮಧ್ಯೆ ದಾಳಿ ಆರಂಭವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (Social Media) ವಿಪರೀತ ಸುಳ್ಳು ಸುದ್ದಿಗಳು ಹರಿದಾಡಲು ಆರಂಭವಾಗಿದೆ. ಅದರಲ್ಲೂ ಪಾಕ್‌ನ ಒಬ್ಬಾತ ಬೆಂಗಳೂರಿನ ಬಂದರನ್ನು ಪಾಕಿಸ್ತಾನ ಧ್ವಂಸ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

    Bangalore Port destroyed By Pakistan Navy ಎಂದು ಬರೆದು ಪಾಕ್‌ ರಾಷ್ಟ್ರಧ್ವಜ ಚಿಹ್ನೆಯನ್ನು ಹಾಕಿ ಟೈಪಿಸಿದ್ದಾನೆ. ಈ ಪೋಸ್ಟ್‌ನ ಸ್ಕ್ರೀನ್‌ ಶಾಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನೊಬ್ಬ ಪಾಟ್ನಾದ ಬಂದರನ್ನು ಪಾಕಿಸ್ತಾನ ನೌಕಾಸೇನೆ ಧ್ವಂಸ ಮಾಡಿದೆ ಎಂದು ಪೋಸ್ಟ್‌ ಮಾಡಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ  ಈ ಸ್ಕ್ರೀನ್‌ ಶಾಟ್‌ಗೆ ಬಗೆ ಬಗೆಯ ಕಮೆಂಟ್‌ಗಳು ಬರುತ್ತಿದೆ. ಪೋರ್ಕಿಸ್ತಾನಕ್ಕೆ ಮಾತ್ರ ಗೋಚರಿಸುವ ಬೆಂಗಳೂರಿನ ಅದೃಶ್ಯದ ಬಂದರನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಅರೆರೆ ಬೆಂಗಳೂರಿನಲ್ಲಿ ಬಂದರು ಇದ್ಯಾ? ನಮ್ಮಿಂದ ಯಾಕೆ ಪೋರ್ಟ್ ಅನ್ನು ಮರೆಮಾಚಲಾಯ್ತು ಅಂತಾ ಲೇವಡಿ ಮಾಡಿ ಕಮೆಂಟ್‌ ಮಾಡುತ್ತಿದ್ದಾರೆ.

    ಕಳೆದ ರಾತ್ರಿ ಪಾಕಿಸ್ತಾನವು ಉಧಂಪುರ, ಪಠಾಣ್‌ಕೋಟ್ ಮತ್ತು ಬಟಿಂಡಾದಲ್ಲಿನ ಭಾರತೀಯ ವಾಯುನೆಲೆಗಳು ಮತ್ತು ಇತರ 23 ಭಾರತೀಯ ನಗರಗಳ ಮೇಲೆ ಇಂದು ದಾಳಿ ಮಾಡಿತ್ತು. ಕ್ಷಿಪಣಿ, ಡ್ರೋನ್‌ ದಾಳಿಗಳನ್ನು ಭಾರತ ತಟಸ್ಥಗೊಳಿಸಿತ್ತು. ಇದನ್ನೂ ಓದಿ: ಪೊಲೀಸರೇ ಅರೆಸ್ಟ್‌ – ಪಾಕ್‌ ಹಿಡಿತದಲ್ಲಿದ್ದ ನಗರ ವಶಕ್ಕೆ ಪಡೆದ ಬಲೂಚ್‌ ಹೋರಾಟಗಾರರು

    ಪಾಕ್‌ ಸೇನೆ ಭಾರತದ ನಾಗರಿಕರು, ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿವೆ. ಪ್ರಯಾಣಿಕ ವಿಮಾನವನ್ನು ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿದೆ.

    ಪಾಕಿಸ್ತಾನ ಶೆಲ್ ದಾಳಿ ನಡೆಸಿ ಅಮಾಯಕರನ್ನ ಗುರಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಾದ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಗಡಿ ಭಾಗದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಬೆಳಗ್ಗಿನವರೆಗೂ ಬ್ಲಾಕ್‌ಔಟ್ ಘೋಷಿಸಲಾಗಿತ್ತು. ಇದನ್ನೂ ಓದಿ: ಪಾಕ್‌ ತತ್ತರ – ಇಸ್ಲಾಮಾಬಾದ್‌ನಲ್ಲಿ 48 ಗಂಟೆಗಳವರೆಗೆ ಪೆಟ್ರೋಲ್ ಪಂಪ್‌ಗಳು ಬಂದ್‌

    ಭಾರತ ನಡೆಸಿದ ವಾಯುದಾಳಿಯಲ್ಲಿ ಸಿಯಾಲ್‌ಕೋಟ್, ಪಸ್ರೂರ್ ರಾಡಾರ್ ಸೈಟ್, ರಹೀಮ್ ಯಾರ್ ಖಾನ್, ಮುರಿದ್‌, ರಫೀಕ್, ಚುನಿಯನ್, ಚಕ್ಲಾಲಾ, ಸುಕ್ಕೂರ್ ಮೊದಲಾದ ಪಾಕಿಸ್ತಾನ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ. ಜೊತೆಗೆ ಭಾರತದ ಮೇಲೆ ಪದೇ ಪದೇ ದಾಳಿಗೆ ಯತ್ನಿಸುತ್ತಿದ್ದ ಡ್ರೋನ್‌ ಲಾಂಚ್‌ಪ್ಯಾಡನ್ನೇ ಉಡೀಸ್‌ ಮಾಡಿದೆ.

  • ರಸ್ತೆ ಗುಂಡಿ ಬಗ್ಗೆ ದೂರು ಕೊಟ್ಟವರ ಎಕ್ಸ್ ಖಾತೆ ಬ್ಲಾಕ್; ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

    ರಸ್ತೆ ಗುಂಡಿ ಬಗ್ಗೆ ದೂರು ಕೊಟ್ಟವರ ಎಕ್ಸ್ ಖಾತೆ ಬ್ಲಾಕ್; ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

    ಬೆಂಗಳೂರು: ಬಿಬಿಎಂಪಿಗೆ (BBMP) ಎಕ್ಸ್ ಖಾತೆಯಲ್ಲಿ ದೂರು ನೀಡಿದರೆ, ಅಂತಹವರನ್ನು ಬ್ಲಾಕ್ ಮಾಡ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಾಲಿಕೆಯ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪಾಲಿಕೆಗೆ ನಾಚಿಕೆಯಾಗಬೇಕು ಅಂತ ಬೈಯುತ್ತಿದ್ದಾರೆ.

    ಬಿಬಿಎಂಪಿಗೆ ಮಾನ ಮರ್ಯಾದೆ ಯಾವ್ದು ಇಲ್ಲ ಅನ್ಸುತ್ತೆ. ಸಾರ್ವಜನಿಕರು ಎಕ್ಸ್ ಖಾತೆಯಲ್ಲಿ ಬಿಬಿಎಂಪಿಗೆ ದೂರು ನೀಡಿದ್ರೆ, ದೂರು ಕೊಟ್ಟವ್ರ ಖಾತೆಯನ್ನೆ ಬ್ಲಾಕ್ ಮಾಡಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬಿಬಿಎಂಪಿಯ ಐಟಿ ಸೆಲ್ ವಿಭಾಗದ ಈ ನಡೆಗೆ ಬೆಂಗಳೂರಿನ ನಾಗರಿಕರು ನಿಗಿನಿಗಿ ಅಂತಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಶೂಟೌಟ್‌ ಕೇಸ್‌: ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ FIR

    ಬೆಂಗಳೂರಿಗರು ಯಾವ್ದೇ ದೂರುಗಳಿದ್ರೆ ಪಾಲಿಕೆಯ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ, ಪಾಲಿಕೆಯ ಗಮನಕ್ಕೆ ತರ್ತಾರೆ. ಹೀಗೆ ರಸ್ತೆ ಸರಿ ಮಾಡಿ ಕೊಡಿ ಅಂತ ನೀತು ಅನ್ನೋ ಮಹಿಳೆ ಟ್ವೀಟ್ ಮಾಡಿದ್ದರು. ಇದಕ್ಕೆ ಬಿಬಿಎಂಪಿ ಎಕ್ಸ್ ಖಾತೆ ಯಾವುದೇ ಪ್ರತಿಕ್ರಿಯೆ ನೀಡದೇ, ನೀತು ಖಾತೆಯನ್ನ ಬ್ಲಾಕ್ ಮಾಡಿದೆ. ಇದು ದೂರು ಕೊಟ್ಟರೆ ನಿಮ್ಮನ್ನ ಬ್ಲಾಕ್ ಮಾಡುತ್ತೇವೆ ಅನ್ನೋ ಮನಸ್ಥಿತಿಯನ್ನ ತೋರಿಸಿದೆ. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಲು ಮುಂದಾದ ಮಹಿಳೆ

    ಕೇವಲ ನೀತು ಖಾತೆ ಮಾತ್ರವಲ್ಲ. ಬೇರೆಯವರ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ. ಯಾವುದೇ ದೂರುಗಳಿದ್ದರೇ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ತನ್ನಿ ಎಂದು ಡಿಸಿಎಂ, ಬಿಬಿಎಂಪಿ ಕಮಿಷನರ್ ಹೇಳುತ್ತಾರೆ. ಆದರೆ ಇದೀಗಾ ಎಕ್ಸ್ ಖಾತೆ ಮೂಲಕ ಗಮನಕ್ಕೆ ತಂದವರ ಖಾತೆಯನ್ನ ಬ್ಲಾಕ್ ಮಾಡ್ತಿರೋ ಬಿಬಿಎಂಪಿ ನಡೆಗೆ ವ್ಯಾಪಾಕ ಆಕ್ರೋಶಗಳು ವ್ಯಕ್ತವಾಗ್ತಿವೆ. ಬಿಬಿಎಂಪಿ ಐಟಿ ಸೆಲ್ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಏನು ಸಮಜಾಯಿಷಿ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ.

  • ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ಹುಚ್ಚಾಟ – ಬಿಸಿ ಮುಟ್ಟಿಸಿದ ಪೊಲೀಸರು

    ರೀಲ್ಸ್‌ಗಾಗಿ ನಡು ರಸ್ತೆಯಲ್ಲಿ ಟೀ ಕುಡಿಯುತ್ತಾ ಹುಚ್ಚಾಟ – ಬಿಸಿ ಮುಟ್ಟಿಸಿದ ಪೊಲೀಸರು

    ಬೆಂಗಳೂರು: ರಸ್ತೆ ಮಧ್ಯೆ ಚಯರ್‌ ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್‌ (Reels) ಮಾಡಿ ಹುಚ್ಚಾಟ ಮಾಡಿದವನಿಗೆ ಬೆಂಗಳೂರು ಪೊಲೀಸರು (Bengaluru Police) ಬಿಸಿ ಮುಟ್ಟಿಸಿದ್ದಾರೆ.

    ಪ್ರಚಾರದ ತೆವಲಿಗೆ ಕಳೆದ ಏಪ್ರಿಲ್ 12 ರಂದು ವಾಹನ ಸಂಚಾರ ಹೆಚ್ಚಾಗಿರುವ ಎಸ್.ಜೆ.ಪಾರ್ಕ್ ಬಳಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಾ ಕಿರಿಕ್‌ ಮಾಡಿದ್ದ. ನಂತರ ಆ ರೀಲ್ಸ್‌ ಅನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆ simbu_str_123 ನಲ್ಲಿ ಅಪ್ಲೋಡ್‌ ಮಾಡಿದ್ದ. ಇದನ್ನೂ ಓದಿ:ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

     

    ಸಿಟಿ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಪುಂಡನ ರೀಲ್ಸ್ ಗಮನಿಸಿತ್ತು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ತಪ್ಪು ಸಂದೇಶ ನೀಡಿದ ಅಡಿ ಎಸ್.ಜೆ.ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಪುಂಡನನ್ನು ಬಂಧಿಸಿದ್ದರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ಬೆಂಗಳೂರು ಪೊಲೀಸರು ಈಗ ಪುಂಡನ ರೀಲ್ಸ್‌ ಮತ್ತು ಬಂಧನ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿ ಮುಂದೆ ಯಾರಾದರೂ ಈ ರೀತಿ ಹುಚ್ಚಾಟ ಮಾಡಿದವರಿಗೆ ಬಿಸಿ ಮುಟ್ಟಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.

  • ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ

    ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ

    ಮುಂಬೈ: ‘ಬೀರ್ ಬೈಸೆಪ್ಸ್’ ಎಂದೇ ಖ್ಯಾತಿ ಪಡೆದಿರುವ ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ (YouTuber Ranveer Allahbadia) ಮಾಡಿದ ಕೀಳು ಅಭಿರುಚಿಯ ಹಾಸ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲೇಟೆಂಟ್ (India’s Got Latent) ಕಾರ್ಯಕ್ರಮದಲ್ಲಿ ರಣವೀರ್  ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಯೊಬ್ಬರಿಗೆ, ನಿಮ್ಮ ಪೋಷಕರು ಜೀವನದುದ್ದಕ್ಕೂ ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರೊಂದಿಗೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದಾರೆ.

    ಯೂಟ್ಯೂಬ್‌ನಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿರುವ ಅವರಿಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಷ್ಟ್ರೀಯ ಯುವ ಕಂಟೆಂಟ್ ಕ್ರಿಯೇಟರ್ ಪ್ರಶಸ್ತಿಗಳನ್ನು ಪಡೆದಿದ್ದರು.

    ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಮುಂಬೈನಲ್ಲಿ ಮಾಧ್ಯಮವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ನಾನು ರಣವೀರ್ ಅವರ ಹೇಳಿಕೆಯ ಬಗ್ಗೆ ತಿಳಿದುಕೊಂಡಿದ್ದೇನೆ. ವಿಡಿಯೋವನ್ನು ನಾನು ನೋಡಿಲ್ಲ. ಪ್ರತಿಯೊಬ್ಬರಿಗೆ ವಾಕ್‌ ಸ್ವಾತಂತ್ರ್ಯವಿದೆ. ನಮ್ಮ ಸಮಾಜದಲ್ಲಿ, ನಾವು ಕೆಲವು ನಿಯಮಗಳನ್ನು ಮಾಡಿದ್ದೇವೆ. ಯಾರಾದರೂ ಅವುಗಳನ್ನು ಉಲ್ಲಂಘಿಸಿದರೆ ಅದು ಸಂಪೂರ್ಣವಾಗಿ ತಪ್ಪು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

     

    ಕಾರ್ಯಕ್ರಮದಲ್ಲಿ ನಿಂದನಾತ್ಮಕ ಭಾಷೆಯನ್ನು ಬಳಸಿದ ಆರೋಪದ ಮೇಲೆ ಮುಂಬೈ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

     

    ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಣವೀರ್ ಅಲ್ಲಾಬಾದಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿ ಕ್ಷಮೆ ಕೇಳಿದ್ದಾರೆ. ಆ ರೀತಿ ನಾನು ಹೇಳಬಾರದಿತ್ತು. ನನ್ನ ಹೇಳಿಕೆ ತಪ್ಪಾಗಿದೆ. ಆ ಭಾಗವನ್ನು ಡಿಲೀಟ್‌ ಮಾಡುವಂತೆ ಕೇಳಿಕೊಂಡಿದ್ದೇನೆ. ನಿಮ್ಮ ಭಾವನೆಗಳಿಗೆ ನೋವಾಗಿದೆ. ಇನ್ನು ಮುಂದೆ ಈ ರೀತಿಯ ತಪ್ಪು ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

     

  • ನಾವು ದರ್ಶನ್ ಭೇಟಿಯಾಗಿಲ್ಲ, ಯಾವ್ದೇ ಕಾರು ಖರೀದಿಸಿಲ್ಲ: ವದಂತಿ ಬಗ್ಗೆ ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

    ನಾವು ದರ್ಶನ್ ಭೇಟಿಯಾಗಿಲ್ಲ, ಯಾವ್ದೇ ಕಾರು ಖರೀದಿಸಿಲ್ಲ: ವದಂತಿ ಬಗ್ಗೆ ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

    ಚಿತ್ರದುರ್ಗ: ನಾವು ಶೆಡ್‌ಗೆ ಹೋಗಿಲ್ಲ, ನಟ ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಸ್ಪಷ್ಟಪಡಿಸಿದ್ದಾರೆ.

    ಬೇಲ್ ಮೇಲೆ ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿದ್ದು, ಹಣ ಪಡೆದು ರಾಜಿಯಾಗಿದೆ. ಹೊಸ ಕಾರನ್ನು ಆ ಕುಟುಂಬ ಬುಕ್ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು ಬಾರಿ ವೈರಲ್ ಆಗಿತ್ತು. ಹೀಗಾಗಿ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ದರ್ಶನ್ ಭೇಟಿಯಾಗಿಲ್ಲ, ಅವರು ಸಹ ನಮ್ಮನ್ನು ಭೇಟಿಯಾಗಿಲ್ಲ. ಅಲ್ಲದೇ ನಾವು ಯಾವುದೇ ಕಾರು ಖರೀದಿಸಿಲ್ಲ. ನಮಗೆ ಹಳೆಯ ಬೈಕ್ ರಿಪೇರಿ ಮಾಡಿಸಲು ಸಹ ದುಡ್ಡಿಲ್ಲ. ಯಾವ ಶೆಡ್‌ಗೂ ಹೋಗಿಲ್ಲ, ಹಣವನ್ನೂ ಪಡೆದಿಲ್ಲ. ಆದರೆ ಫೇಸ್‌ಬುಕ್ಕೊ ಅಥವಾ ಫೇಕ್ ಬುಕ್ಕೊ ನಮಗೆ ಗೊತ್ತಿಲ್ಲ. ನಾವೆಲ್ಲರೂ ರೇಣುಕಾಸ್ವಾಮಿ ಸಾವಿಂದ ಸಾಕಷ್ಟು ನೊಂದಿದ್ದೇವೆ. ದಯವಿಟ್ಟು ಆ ರೀತಿ ವದಂತಿ ಹರಡಿಸಬೇಡಿ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ

    ಹಾಗೆಯೇ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ನ್ಯಾಯಯುತ ತನಿಖೆ ನಡೆಸಿರುವ ಸರ್ಕಾರವು, ದರ್ಶನ್‌ಗೆ ಬೇಲ್ ಸಿಕ್ಕಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಿರುವುದನ್ನು ನಮ್ಮ ಕುಟುಂಬದಿಂದ ಸ್ವಾಗತಿಸುತ್ತೇವೆ. ಈ ಕೇಸಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಭರವಸೆ ಇದೆ. ಜೊತೆಗೆ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರದಿಂದ ಕೆಲಸ ನೀಡಲು ಸಾಧ್ಯವಿಲ್ಲವೆಂದು ನಮಗೆ ಹಿಂಬರಹ ಬಂದಿದೆ. ಇದು ನಮಗೆ ದೊಡ್ಡ ಆಘಾತ ತಂದಿದೆ. ಹೀಗಾಗಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ನಮ್ಮ ಸೊಸೆಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ನಾನು ಕ್ಷೇಮವಾಗಿದ್ದೇನೆ: ಚೂರಿ ಇರಿತದ ಬಳಿಕ ಸೈಫ್ ಅಲಿ ಖಾನ್ ಫಸ್ಟ್ ರಿಯಾಕ್ಷನ್

    ಯಾಕೆ ಈ ರೀತಿ ವದಂತಿ ಹರಡಿಸುತ್ತಿದ್ದಾರೆ ಎಂದು ನಾನು ಕಾನೂನು ಪಂಡಿತರನ್ನು ಕೇಳಲು ಇಚ್ಚಿಸುತ್ತೇನೆ. ಅವರು ದರ್ಶನ್ ಅಭಿಮಾನಿಗಳೋ ಮತ್ಯಾರೊ ನಮಗೆ ಗೊತ್ತಿಲ್ಲ. ಆದರೆ ಮತ್ತೊಮ್ಮೆ ಈ ರೀತಿ ವದಂತಿ ಹರಡಿಸಬೇಡಿ. ಒಂದು ವೇಳೆ ದರ್ಶನ್ ಭೇಟಿಗೆ ಧಾವಿಸಿದರೆ ಹಿತೈಷಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ – ಬೀದರ್‌ ದರೋಡೆ ಕೇಸ್‌ ಬಗ್ಗೆ ಪರಮೇಶ್ವರ್‌ ಪ್ರತಿಕ್ರಿಯೆ

    ಇದೇ ವೇಳೆ ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಗೆ ಫಾಸ್ಟ್ ಟ್ರಾಕ್ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಅಲ್ಲದೇ ಫೇಸ್‌ಬುಕ್‌ಗಳಲ್ಲಿ ನಮ್ಮ ಕುಟುಂಬದ ಬಗ್ಗೆ ಸುಳ್ಳು ಸಂದೇಶ ಕಳುಹಿಸದಂತೆ ಮನವಿ ಮಾಡುದರು. ರೇಣುಕಾಸ್ವಾಮಿ ಸಾವಿಂದ ನೊಂದಿರುವ ಸಹನಾಗೆ ಸರ್ಕಾರದಿಂದ ಉದ್ಯೋಗ ನೀಡಬೇಕು. ರೇಣುಕಾಸ್ವಾಮಿ ಮಗು ಹಾಗೂ ತಾಯಿಗೆ ಜೀವನ ಸಾಗಿಸಲು ಸರ್ಕಾರ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪೆಟ್ರೋಲ್‌ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಈ ರೀತಿಯ ಫೇಕ್ ಸುದ್ದಿಯಿಂದ ಮನನೊಂದಿದ್ದೇವೆ. ದಯವಿಟ್ಟು ಫೇಸ್‌ಬುಕ್‌ನಲ್ಲಿ ವದಂತಿ ಹರಡಿಸಬೇಡಿ. ಜೊತೆಗೆ ಸಿಎಂ, ಡಿಸಿಎಂ ತನಿಖೆಗೆ ಸಹಕಾರ ನೀಡಿದ್ದು, ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇದೆ. ಜೊತೆಗೆ ಗಣ್ಯರು ನೀಡಿರುವ ನೆರವಿನ ಹಣದಿಂದ ರೇಣುಕಾಸ್ವಾಮಿ ಪತ್ನಿ ಸಹನ ಹಾಗೂ ಕಾಶೀನಾಥ್ ಶಿವನಗೌಡ್ರು ಕುಟುಂಬದ ಮಧ್ಯೆ ಬಿರುಕು ವದಂತಿ ವಿಚಾರಕ್ಕೂ ಸ್ಪಷ್ಟನೆ ನೀಡಿದ್ದು, ಸೊಸೆಯಾದ ಸಹನ ಕುಟುಂಬ, ರೇಣುಕಾಸ್ವಾಮಿ ಕುಟುಂಬದ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಎಲ್ಲಾ ಕುಟುಂಬಗಳು ಒಟ್ಟಾಗಿವೆ. ಸಾಂಪ್ರದಾಯಿಕ ವಾ ಗಿ ಮೊಮ್ಮಗು, ಸೊಸೆ ತವರುಮನೆಯಲ್ಲಿದ್ದಾರೆ. 5 ತಿಂಗಳು ಕಳೆದ ಬಳಿಕ ನಮ್ಮ ಮನೆಗೆ ಬರಲಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ತಂತ್ರ.. ಈಗ ಡಿಕೆಶಿ ಒಬ್ಬಂಟಿ: ಆರ್‌.ಅಶೋಕ್‌ ಲೇವಡಿ

  • ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ?

    ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ?

    -ಡಾಟಾ ಲೀಕ್ ಆದ್ರೆ ಕಂಪನಿಗೆ ದಂಡ

    ನವದೆಹಲಿ: 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು (Childrens) ಸಾಮಾಜಿಕ ಜಾಲತಾಣ (Social Media) ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯಗೊಳಿಸುವ ನೀತಿ ಜಾರಿಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. 2023ರಲ್ಲೇ ಸಂಸತ್ತಿನ ಅನುಮೋದನೆ ಪಡೆದುಕೊಂಡಿರುವ ಡಿಜಿಟಲ್ ಖಾಸಗಿ ಮಾಹಿತಿ ರಕ್ಷಣಾ ಕಾಯ್ದೆಗೆ (Social Media Rules) ಕೇಂದ್ರ ಸರ್ಕಾರ ಕೆಲವೊಂದು ತಿದ್ದುಪಡಿ ಮಾಡಿ ಹೊಸ ಕರಡು ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

    ಈ ಮಹತ್ವದ ನಿರ್ಧಾರದ ಬಗ್ಗೆ ಜನರು ಅಭಿಪ್ರಾಯಗಳನ್ನು ತಿಳಿಸಲು ಫೆ.18ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ಸಂಗ್ರಹವಾಗುವ ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ವರದಿ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಕರಡು ವರದಿ ಅನ್ವಯ, ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ಇದರ ಜೊತೆಗೆ ಕಂಪನಿಗಳು ತಮ್ಮ ದಾಖಲೆಗಳನ್ನು ಅಳಿಸುವಂತೆ ಮತ್ತು ದಾಖಲೆಗಳನ್ನು ಏಕೆ ಕಲೆಹಾಕುತ್ತಿದ್ದೀರಿ ಎಂದು ಮಾಹಿತಿ ಪಡೆಯುವ ಮತ್ತು ಖಾಸಗಿ ಮಾಹಿತಿ ರಕ್ಷಣೆ ಮಾಡಿಕೊಳ್ಳುವ ಅಧಿಕಾರ ಬಳಕೆದಾರನಿಗೆ ಇದೆ.

    ಕಂಪನಿಗಳು ಬಳಕೆದಾರನ ಡಾಟಾ ಲೀಕ್ ಮಾಡಿದರೆ ರೂ.250 ದಂಡ ಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.

    ಮಸೂದೆಯಲ್ಲಿರುವ ಪ್ರಮುಖ ಅಂಶಗಳು
    – ಮಕ್ಕಳ ವಯೋಮಿತಿ ಪೋಷಕರು ಖಾತ್ರಿ ಪಡಿಸಬೇಕು
    – ತಾವೇ ಪೋಷಕರು ಎಂಬ ಸಾಕ್ಷಿಗೆ ಸರ್ಕಾರಿ ಐಡಿ ಕಡ್ಡಾಯ
    – ಆ್ಯಪ್‌ನಲ್ಲಿ ದಾಖಲೆ ಅಳಿಸಲು ಕೇಳುವ ಅಧಿಕಾರ

  • ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR

    ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ – ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ FIR

    ತುಮಕೂರು: ಸಾಮಾಜಿಕ ಜಾಲತಾಣದಲ್ಲಿ‌ (Social Media) ಕೋಮು ವೈಷಮ್ಯದ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ (Shakunthala Nataraj) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

    ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶಕುಂತಲಾ, ಯೋಗಿಜಿ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಅಲ್ಲಾ ಸಹಾಯಕ್ಕೆ ಬರಲಿಲ್ಲ. ಆದ್ದರಿಂದ ಜೀವ ಹೋಗಿದೆ ಅಷ್ಟೇ. ಮೇಲೆ ಹೋದಮೇಲೆ 72 ಜನ ಸುಂದರಿಯರು ಸಿಗುತ್ತಾರೆ ಎಂದು ಅನ್ಯ ಧರ್ಮದ ವಿರುದ್ಧ ಅವಹೇಳನ ಮಾಡಿದ್ದಾರೆ ಎಂದು ಎಂದು ದೂರಲಾಗಿದೆ. ಇದನ್ನೂ ಓದಿ: ಬಳ್ಳಾರಿ ಸಿಸೇರಿಯನ್‌ ದುರಂತ: ಮೃತ ಮಹಿಳೆಯರ ಸಂಖ್ಯೆ ನಾಲ್ಕಕ್ಕೆ ಏರಿಕೆ

    ಪೋಸ್ಟ್ ಹಾಕಿದ ಹಿನ್ನೆಲೆ ಪೊಲೀಸ್ ಕಾನ್ಸ್‌ಟೇಬಲ್ ಉಮಾಶಂಕರ್ ದೂರು ನೀಡಿದ್ದಾರೆ. ಅದರಂತೆ ಕಲಂ 299 ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಾಗಿದೆ. ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಇದನ್ನೂ ಓದಿ: ನಮ್ಮ ಹೋರಾಟ ವಕ್ಫ್ ವಿರುದ್ಧ, ಯಾವುದೇ ಕುಟುಂಬದ ವಿರುದ್ಧವಲ್ಲ: ಯತ್ನಾಳ್

    ಯತ್ನಾಳ್ ಅಭಯ:
    ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನು ಖಂಡಿಸಿ ಶಕುಂತಲಾ ಮತ್ತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಯತ್ನಾಳ್, ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಇದನ್ನೂ ಓದಿ: ಸ್ಕ್ಯಾನ್‌ ಮಾಡಿ, ಹಂಪಿ ಶಿಲೆಗಳ ಸಂಗಿತ ಕೇಳಿ!

  • ಚೀನಾದಲ್ಲಿ ಕಾರು ಚಾಲಕನ ಹುಚ್ಚಾಟಕ್ಕೆ 35 ಬಲಿ, 43 ಮಂದಿಗೆ ಗಾಯ

    ಚೀನಾದಲ್ಲಿ ಕಾರು ಚಾಲಕನ ಹುಚ್ಚಾಟಕ್ಕೆ 35 ಬಲಿ, 43 ಮಂದಿಗೆ ಗಾಯ

    – ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟಕ್ಕೆ ಸೆನ್ಸಾರ್

    ಬೀಜಿಂಗ್‌: ವ್ಯಾಯಾಮ ಮಾಡುತ್ತಿರುವವರ ಮೇಲೆ ಕಾರು ನುಗ್ಗಿದ ಪರಿಣಾಮ 35 ಮಂದಿ ಬಲಿಯಾಗಿ 43 ಜನರು ಗಾಯಗೊಂಡ ಘಟನೆ ಚೀನಾದಲ್ಲಿ (China) ನಡೆದಿದೆ.

    ಸೋಮವಾರ ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರದಲ್ಲಿ (Outside Sports Centre) ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ 62 ವರ್ಷದ ಚಾಲಕ ಕಾರು ನುಗ್ಗಿಸಿದ್ದಾನೆ.

    ಪೊಲೀಸರು ಕಾರು ಚಾಲಕನನ್ನು ಬಂಧಿಸಿದ್ದಾರೆ. ಕೃತ್ಯದ ಬಳಿಕ ಚಾಲಕ ಚಾಕು ಬಳಸಿ ತನ್ನ ಹತ್ಯೆಗೆ ಮುಂದಾಗಿದ್ದ ಎಂದು ವರದಿಯಾಗಿದೆ. ಇದನ್ನೂ ಓದಿ: ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನ – ದೋಹಾದಿಂದ ಮುಂಬೈಗೆ ಮೊದಲ ವಿಮಾನ ಹಾರಾಟ 

    ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಆಯೋಜಿಸಿದ್ದ ಝುಹೈ ಏರ್‌ಶೋ ಒಂದು ದಿನ ಮೊದಲು ಈ ಘಟನೆ ನಡೆದಿದೆ. ಇದು ಅಪಘಾತವೇ ಅಥವಾ ಪೂರ್ವ ನಿಯೋಜಿತ ಉಗ್ರರ ಕೃತ್ಯವೇ ಎಂಬ ನಿಟ್ಟಿನಲ್ಲಿ ಈಗ ತನಿಖೆ ಆರಂಭವಾಗಿದೆ.

    ಮಂಗಳವಾರ ಬೆಳಗ್ಗೆ ಚೀನೀ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಹುಡುಕಾಟಗಳ ಬಗ್ಗೆ ಚೀನಾ ಸೆನ್ಸಾರ್‌ ಮಾಡಿದೆ. ಸಾಮಾಜಿಕ ಜಾಲತಾಣ Weibo ನಲ್ಲಿ ಈ ಘಟನೆಯ ಬಗ್ಗೆ ಸರ್ಚ್‌ ಮಾಡಿದರೆ ಕೇವಲ ಒಂದೆರಡು ಚಿತ್ರಗಳು ಮಾತ್ರ ಕಾಣುತ್ತಿದೆ.

    ಸೋಮವಾರ ರಾತ್ರಿಯಿಂದಲೇ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ಮುಂದಿನ ಸೂಚನೆ ಬರುವವರೆಗೆ ವ್ಯಾಯಾಮ ಕೇಂದ್ರವನ್ನು ಬಂದ್‌ ಮಾಡಲಾಗಿದೆ.

     

  • ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ

    ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ

    ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದ (Karachi Airport) ಹೊರಗೆ ಸೋಮವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ (Blast) ಇಬ್ಬರು ಚೀನಾದ ಕಾರ್ಮಿಕರು (Chinese workers) ಸಾವನ್ನಪ್ಪಿ ಎಂಟು ಮಂದಿ ಗಾಯಗೊಂಡಿದ್ದಾರೆ.

    ಘಟನಾ ಸ್ಥಳದಿಂದ ದಟ್ಟವಾದ ಹೊಗೆ ಏಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೂಡಲೇ ಭದ್ರತಾ ಪಡೆ ಸ್ಥಳವನ್ನು ಸುತ್ತುವರೆದಿದೆ. ಇದನ್ನೂ ಓದಿ: ಮುಡಾ ಜಟಾಪಟಿ ಮಧ್ಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಸಭೆ – ಮಾತುಕತೆಗೆ ಬ್ರೇಕ್ ಹಾಕುತ್ತಾ ಹೈಕಮಾಂಡ್‌?

    ಸ್ಫೋಟದ ತೀವ್ರತೆ ವಿಮಾನ ನಿಲ್ದಾಣದ ಕಟ್ಟಡಗಳು ಸಹ ಅಲುಗಾಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಚೀನಾ (China) ಈ ಕೃತ್ಯವನ್ನು ಭಯೋತ್ಪಾದಕ ದಾಳಿ ಎಂದು ಕರೆದಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಬಂದು ಮುಡಾ ಕಡತ ತೆಗೆದುಕೊಂಡು ಹೋಗಿದ್ದಾರೆ: ಬೈರತಿ ವಿರುದ್ಧ ದೂರು

    ಉಗ್ರಗಾಮಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (BLA) ಪತ್ರಕರ್ತರಿಗೆ ಇಮೇಲ್ ಮಾಡಿ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಎಂಜಿನಿಯರ್‌ಗಳು ಸೇರಿದಂತೆ ಚೀನಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ವಾಹನದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಿದೆ.