Tag: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

  • ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಅವಾಚ್ಯ ನಿಂದನೆಯ ಆಡಿಯೋ- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಅವಾಚ್ಯ ನಿಂದನೆಯ ಆಡಿಯೋ- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

    ದಾವಣಗೆರೆ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊನ್ನಾಳಿ ಕಾಂಗ್ರೆಸ್ ಮುಖಂಡ ಹೆಚ್‍ಬಿ ಮಂಜಪ್ಪನವರ ಅವಾಚ್ಯ ನಿಂದನೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಂಜಪ್ಪನವರ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊತ್ತ ಶಿವರಾಜ್ ಹಾಗೂ ಜಿಲ್ಲಾಧ್ಯಕ್ಷರ ನಡುವೆ ನಡೆದ ಟಾಕ್ ವಾರ್ ಇದಾಗಿದೆ. ಈ ಆಡಿಯೋದಲ್ಲಿ ಮಂಜಪ್ಪ, ಶಾಂತನಗೌಡ ಅಭಿಮಾನಿ ಶಿವರಾಜ್‍ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

    7 ನಿಮಿಷದ ಈ ಆಡಿಯೋದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ದು, ಫೇಸ್‍ಬುಕ್ ನಲ್ಲಿ ಮುಂದಿನ ಕಾಂಗ್ರೆಸ್ ಟಿಕೆಟ್ ಹೆಚ್‍ಬಿ ಮಂಜಪ್ಪಗೆ ಅಂತಾ ಹಾಕಲಾಗಿತ್ತು. ಇದು ಮಾಜಿ ಶಾಸಕ ಶಾಂತನಗೌಡರ ಅಭಿಮಾನಿಗಳಿಗೆ ಕೆರಳುವಂತೆ ಮಾಡಿತ್ತು. ಇದಕ್ಕೆ ಕಾಮೆಂಟ್ ಮಾಡಿದ್ದ ಶಾಂತನಗೌಡರ ಅಭಿಮಾನಿಗಳು ಟಿಕೆಟ್ ಈ ಬಾರಿ ಶಾಂತನಗೌಡರಿಗೆ ಅಂತಾ ಪ್ರತಿಕ್ರಿಯಿಸಿದ್ದರು. ಇದರಿಂದ ಕೆರಳಿದ್ದ ಮಂಜಪ್ಪ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

    ವೈರಲ್ ಆದ ಆಡಿಯೋದಲ್ಲಿ ಏನಿದೆ?
    ನಿಮ್ಮ ಶಾಂತನಗೌಡರಿಗೆ ಈ ಬಾರಿ ಟಿಕೆಟ್ ಕೊಡಿಸಿ ಕುರುಬರ ಮತ ಪಡೆಯಿರಿ ನೋಡೋನಾ ಶಾಂತನಗೌಡರಿಗೆ ಲಿಂಗಾಯತರ ವೋಟ್ ಕೂಡ ಬೀಳೋದಿಲ್ಲ. ನಮ್ಮ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿ ನಿಮಗೆ ಕುರುಬರು ಮತ ಹಾಕುತ್ತಾರೆ. ಟಿಕೆಟ್ ಬಗ್ಗೆ ನೀವು ಯಾಕೆ ಮಾತನಾಡುತ್ತೀರಿ? ಎಂದು ಅವಾಚ್ಯ ಶಬ್ದಗಳಿಂದ ಶಾಂತನಗೌಡ ಅಭಿಮಾನಿಗೆ ಬಾಯಿಗೆ ಬಂದಂತೆ ಬೈಗುಳಗಳ ಸುರಿಮಳೆಗೈದಿದ್ದಾರೆ.