Tag: ಸಾಮಾಜಿಕ ಜಾಲತಾಣ

  • ಬಂದಿದೆ ಹೊಸ ಟ್ರಾಫಿಕ್‌ ಟ್ಯಾಕ್ಸ್‌ – ವರ್ಷಕ್ಕೆ 2.5 ತಿಂಗಳು ಲಾಸ್‌: ಬೆಂಗಳೂರು ಟೆಕ್ಕಿಯ ಪೋಸ್ಟ್‌ ವೈರಲ್‌

    ಬಂದಿದೆ ಹೊಸ ಟ್ರಾಫಿಕ್‌ ಟ್ಯಾಕ್ಸ್‌ – ವರ್ಷಕ್ಕೆ 2.5 ತಿಂಗಳು ಲಾಸ್‌: ಬೆಂಗಳೂರು ಟೆಕ್ಕಿಯ ಪೋಸ್ಟ್‌ ವೈರಲ್‌

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru)  ಹೊಸ ತೆರಿಗೆಯಾಗಿ ಟ್ರಾಫಿಕ್‌(Traffic Tax) ಬಂದಿದೆ ಟೆಕ್ಕಿಯೊಬ್ಬರು ಪೋಸ್ಟ್‌ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಪೋಸ್ಟ್‌ನಲ್ಲಿ ಏನಿದೆ?
    ಜೆಪಿನಗರದದಲ್ಲಿ ನಾನು ವಾಸವಾಗಿದ್ದು ಕಚೇರಿ ಹೊರ ವರ್ತುಲ ರಸ್ತೆಯಲ್ಲಿದೆ. ವರ್ಷಕ್ಕೆ 28 ಲಕ್ಷ ರೂ. ಸಂಪಾದನೆಯಿದೆ. ಈ ಸಂಪಾದನೆಗೆ 6.5 ಲಕ್ಷ ರೂ. ಆದಾಯ ತೆರಿಗೆ (Income Tax) ಪಾವತಿಸಲಾಗುತ್ತಿದೆ.

    ದೈನಂದಿನ ಖರ್ಚಿನ ಮೇಲೆ 1.4 ಲಕ್ಷ ರೂ. ಜಿಎಸ್‌ಟಿ ಪಾವತಿಸಲಾಗುತ್ತಿದೆ. ಕಚೇರಿ 14 ಕಿ.ಮೀ ದೂರದಲ್ಲಿದೆ. ಮನೆಯಿಂದ ಕಚೇರಿಗೆ ತೆರಳಲು 30 ನಿಮಿಷ ತೆಗೆದುಕೊಳ್ಳಬೇಕು. ಆದರೆ ವಾಸ್ತವದಲ್ಲಿ 90 ನಿಮಿಷ ಪ್ರಯಾಣಿಸಬೇಕಾಗುತ್ತದೆ.  ಇದನ್ನೂ ಓದಿ: ನಾಳೆಯಿಂದಲೇ ಹಿಂದುಳಿದ ಆಯೋಗದಿಂದ ಸಮೀಕ್ಷೆ 60 ಪ್ರಶ್ನೆಗಳಿಗೆ ಉತ್ತರ ಪಡೆಯಲಿರೋ ಸರ್ವೇಯರ್ಸ್

     

    ಟ್ರಾಫಿಕ್‌ನಲ್ಲಿ ಕಳೆದುಹೋದ ಸಮಯವನ್ನು ಸೇರಿಸಿದರೆ ವರ್ಷಕ್ಕೆ ಎರಡೂವರೆ ತಿಂಗಳುಗಳು ಇದರಲ್ಲೇ ಕಳೆದುಹೋಗುತ್ತಿದೆ. ಮೊದಲ ಎರಡು ತೆರಿಗೆಯಲ್ಲಿ ಉತ್ತಮ ರಸ್ತೆಗಳು, ಸುಗಮ ಪ್ರಯಾಣ, ಸ್ಮಾರ್ಟ್ ನಗರಗಳನ್ನು ನಿರ್ಮಿಸಬೇಕಿತ್ತು. ಆದರೆ ಇದು ಸಾಧ್ಯವಾಗಿಲ್ಲ. ಈ ಹಣ ಬೇರೆ ಕಡೆ ಹೋಗುತ್ತಿದೆ. ಈ ಗುಪ್ತ ತೆರಿಗೆಯ ಬಗ್ಗೆ ಆತ್ಮಾವಲೋಕನ ಮಾಡಲು ಸಹ ಸಮಯವಿಲ್ಲ. ನೀವು ಸಹ ಈ ರೀತಿಯ ತೆರಿಗೆ ಪಾವತಿಸುತ್ತಿದ್ದೀರಾ? ಪಾವತಿಸಿದ್ದರೆ ಕಮೆಂಟ್‌ ಮಾಡಿ ಎಂದು ಹೇಳಿದ್ದಾರೆ.

    ಈ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೋಸ್ಟ್‌ಗೆ ಬಗೆ ಬಗೆಯ ಕಮೆಂಟ್‌ಗಳು ಬರುತ್ತಿದೆ. ಸರ್ಕಾರ ಯಾಕೆ ಬೆಂಗಳೂರು ಒಂದೇ ಜಾಗಕ್ಕೆ ಕಂಪನಿಗಳಿಗೆ ತೆರೆಯಲು ಅವಕಾಶ ನೀಡುತ್ತಿದೆ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನು ಮುಂದೆ ರಾಜಧಾನಿಗಳನ್ನು ಬಿಟ್ಟು ಟಯರ್‌-2 ನಗರಗಳಲ್ಲಿ ಹೂಡಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಬರೆದಿದ್ದಾರೆ.

    ಇನ್ನು ಕೆಲವರು ಸರ್ಕಾರಗಳು ಉಚಿತ ಕೊಡುಗೆ ನೀಡುವುದನ್ನು ನಿಲ್ಲಿಸಿ ಆ ಹಣವನ್ನು ಉತ್ತಮ ರಸ್ತೆ ನಿರ್ಮಾಣಗಳಿಗೆ ಬಳಸಬೇಕು. ರಸ್ತೆಗಳು ಸರಿಇಲ್ಲದ ಕಾರಣ ವಾಹನಗಳು ದೊಡ್ಡ ದೊಡ್ಡ ಗುಂಡಿಗಳಿಗೆ ಬಿದ್ದು ಹಾಳಾಗುತ್ತಿವೆ. ಹೇಗೆ ಮಕ್ಕಳ ಶಿಕ್ಷಣಕ್ಕೆ ಎಂದು ವರ್ಷಕ್ಕೆ ಹಣವನ್ನು ಮೀಸಲಿಡಲಾಗುತ್ತದೋ ಅದೇ ರೀತಿ ಇನ್ನು ಮುಂದೆ ವಾಹನ ಮಾಲೀಕರು ವಾಹನ ರಿಪೇರಿಗೆಂದು ವರ್ಷಕ್ಕೆ ದುಡ್ಡನ್ನು ಇಡಬೇಕಾಗುತ್ತದೆ. ಟ್ರಾಫಿಕ್‌ ಜಾಮ್‌ನಿಂದ ಉಂಟಾಗುವ ಹೊಗೆಯಿಂದ ಉಸಿರಾಟದ ಸಮಸ್ಯೆ ಸಹ ಬರುತ್ತಿದೆ ಎಂದು ಸಿಟ್ಟು ಹೊರಹಾಕಿದ್ದಾರೆ.

  • ಟ್ರೋಲ್‌ ಮಾಡಿದ ಕಿಡಿಗೇಡಿಗಳಿಗೆ ಮಾರ್ಮಿಕ ಉತ್ತರ ನೀಡಿದ ವಿಜಯಲಕ್ಷ್ಮಿ

    ಟ್ರೋಲ್‌ ಮಾಡಿದ ಕಿಡಿಗೇಡಿಗಳಿಗೆ ಮಾರ್ಮಿಕ ಉತ್ತರ ನೀಡಿದ ವಿಜಯಲಕ್ಷ್ಮಿ

    ರ್ಶನ್ (Darshan) ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಸತತ ಕಾನೂನು ಹೋರಾಟ ನಡೆಸುತ್ತಿರುವ ಮಧ್ಯೆ ಗೆಳತಿಯರಾದ ಕಾವ್ಯ ಗೌಡ ಹಾಗೂ ಭವ್ಯ ಗೌಡ ಜೊತೆ ಹೋಟೆಲಿನಲ್ಲಿ ಕಾಣಿಸಿಕೊಂಡ ಫೋಟೋ ವೈರಲ್‌ ಆಗಿ ಆಗಿ ಟ್ರೋಲ್‌ ಆಗಿತ್ತು.

    ದರ್ಶನ್ ಜೈಲಿನಲ್ಲಿ ಒದ್ದಾಡುತ್ತಿದ್ದರೆ ಒನ್ನೊಂದು ಕಡೆ ವಿಜಯಲಕ್ಷ್ಮಿ ಆರಾಮಾಗಿದ್ದಾರೆ ಎಂದಿದ್ದರು ನೆಟ್ಟಿಗರು. ಆದರೆ ಇದಕ್ಕೆಲ್ಲಾ ವಿಜಯಲಕ್ಷ್ಮಿ ಇನ್‌ಸ್ಟಾದಲ್ಲಿ ಸ್ಟೋರಿ ಪೋಸ್ಟ್‌ ಮಾಡಿ ಮಾರ್ಮಿಕವಾಗಿ ಉತ್ತರ ನೀಡಿ ಮನಸ್ಸಿನ ಬೇಸರ ಹೊರಹಾಕಿದ್ದಾರೆ.  ಇದನ್ನೂ ಓದಿ:  ʻಹೂಬಾಣʼದ ವೈರಲ್ ಹುಡ್ಗಿಗೆ ಬಂತು ಸಿನಿಮಾ ಆಫರ್‌

    ನೀವು ಮಾನಸಿಕವಾಗಿ ಅಥವಾ ದೈಹಿಕವಾಗಿ ದಣಿದಿದ್ದಾಗ ಮುಂದೆ ಸಾಗಿದರೆ ಮತ್ತಷ್ಟು ಸಮಸ್ಯೆಯಾಗಬಹುದು. ಈ ಸಂದರ್ಭದಲ್ಲಿ ವಿಶ್ರಾಂತಿ ಪಡೆದರೆ ದೀರ್ಘಕಾಲೀನ ಯೋಗಕ್ಷೇಮಕ್ಕೆ ಒಳ್ಳೆಯದು ಎಂಬರ್ಥದ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಕಳೆದ ವಿಚಾರಣೆಯಲ್ಲಿ ದರ್ಶನ್ ತಮಗೆ ವಿಷ ಕೊಡುವಂತೆ ನ್ಯಾಯಾಧೀಶರ ಬಳಿ ಕೇಳಿಕೊಂಡಿದ್ದರು. ಈ ನೋವಿನ ನಡುವೆಯೇ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ಹಣ ಕಳ್ಳತನವಾಗಿತ್ತು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಅವರ ವಿರುದ್ಧ ಕೆಟ್ಟ ಸಂದೇಶ ಕಳುಹಿಸಿದ್ದರ ವಿರುದ್ಧವೂ ದೂರು ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಬಾರದ ವಿಜಯಲಕ್ಷ್ಮಿ ಅವರು ದರ್ಶನ್‌ಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿದ್ದಾರೆ.  ಈ ನಡುವೆ ಗೆಳತಿಯರ ಜೊತೆ ಸುತ್ತಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

     

  • ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    – ಅಧಿಕಾರದಿಂದ ಇಳಿದ 1 ದಿನದ ಬಳಿಕ ಓಲಿ ಮೊದಲ ಪ್ರತಿಕ್ರಿಯೆ
    – ಪ್ರತಿಭಟನೆಯ ಹಿಂದೆ ಭಾರತದ ಕೈವಾಡದ ಬಗ್ಗೆ ಪರೋಕ್ಷ ಮಾತು

    ಕಠ್ಮಂಡು: ಶ್ರೀರಾಮನನ್ನು (Rama) ವಿರೋಧಿಸಿ ಮಾತನಾಡಿದ್ದಕ್ಕೆ ನನ್ನ ಅಧಿಕಾರ ಹೋಯ್ತು ಎಂದು ನೇಪಾಳದ (Nepal) ಮಾಜಿ ಪ್ರಧಾನಿ ಕೆ.ಪಿ ಶರ್ಮಾ ಓಲಿ (KP Sharma Oli) ಹೇಳಿದ್ದಾರೆ. ಈ ಮೂಲಕ ನೇಪಾಳದ ಪ್ರತಿಭಟನೆಯ ಹಿಂದೆ ಭಾರತದ ಕೈವಾಡವಿದೆ ಎಂದು ಬಿಂಬಿಸುವ ಪ್ರಯತ್ನ ಆರಂಭಿಸಿದ್ದಾರೆ.

    ಯುವಜನತೆಯ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಓಲಿ ಅವರು ಶಿವಪುರದಲ್ಲಿರುವ ಬ್ಯಾರಕ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಹಲವು ವಿಚಾರಗಳನ್ನು ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಸ್ವಭಾವತಃ ನಾನು ಸ್ವಲ್ಪ ಹಠಮಾರಿ. ಆ ಹಠಮಾರಿತನ ಇಲ್ಲದಿದ್ದರೆ ಬಹುಶಃ ಈ ಎಲ್ಲಾ ಸವಾಲುಗಳ ನಡುವೆ ನಾನು ಬಹಳ ಹಿಂದೆಯೇ ಅಧಿಕಾರವನ್ನು ಬಿಟ್ಟುಕೊಡುತ್ತಿದ್ದೆ. ಹಠಮಾರಿ ಧೋರಣೆಯಿಂದಾಗಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ದೇಶದ ನಿಯಮಗಳನ್ನು ಪಾಲಿಸಬೇಕು ಮತ್ತು ಸ್ಥಳೀಯವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದೆ.

    ಈ ಹಿಂದೆ ಲಿಪುಲೇಖ್, ಕಲಾಪಾನಿ ಮತ್ತು ಲಿಂಪಿಯಾಧುರ ನೇಪಾಳಕ್ಕೆ ಸೇರಿವೆ ಎಂದು ನಾನು ಪ್ರತಿಪಾದಿಸಿದ್ದೆ. ಧರ್ಮಗ್ರಂಥಗಳು ಹೇಳುವಂತೆ ಭಗವಾನ್ ಶ್ರೀರಾಮ ಭಾರತದಲ್ಲಿ ಜನಿಸಿಲ್ಲ. ನೇಪಾಳದಲ್ಲಿ ಜನಿಸಿದನೆಂದು ನಾನು ಸಮರ್ಥಿಸಿಕೊಂಡಿದ್ದೆ. ಈ ನಿಲುವುಗಳಲ್ಲಿ ನಾನು ರಾಜಿ ಮಾಡಿಕೊಂಡಿದ್ದರೆ ನಾನು ಅನೇಕ ಸುಲಭ ಮಾರ್ಗಗಳನ್ನು ಆರಿಸಿಕೊಳ್ಳಬಹುದಿತ್ತು. ಲಿಂಪಿಯಾಧುರ ಸೇರಿದಂತೆ ನೇಪಾಳದ ನಕ್ಷೆಯನ್ನು ವಿಶ್ವಸಂಸ್ಥೆಗೆ ಕಳುಹಿಸದಿದ್ದರೆ ನನ್ನ ಜೀವನವು ತುಂಬಾ ವಿಭಿನ್ನವಾಗಿರುತ್ತಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಭಾರತ ವಿರೋಧಿ ಧೋರಣೆ:
    ಚೀನಾ ಪರವಾಗಿದ್ದ ಕೆ.ಪಿ ಶರ್ಮಾ ಓಲಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಅದರಲ್ಲೂ ರಾಮನ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    ರಾಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಹುಟ್ಟಿದ್ದಾನೆ ಎಂದು ಭಾರತ ಹೇಳುತ್ತಿರುವ ಕಾರಣ ಸೀತೆ ರಾಜಕುಮಾರ ರಾಮನನ್ನು ವಿವಾಹವಾಗಿದ್ದಾಳೆ ಎಂದು ನಾವು ನಂಬಿದ್ದೇವೆ. ಆದರೆ ನಿಜವಾದ ಅಯೋಧ್ಯೆ ನೇಪಾಳದ ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿದೆ ಎಂದು ಹೊಸ ಕಥೆ ಕಟ್ಟಿದ್ದರು.

    ಅಯೋಧ್ಯೆ ಹೆಸರಿನ ಗ್ರಾಮ ಬಿರ್‌ಗುಂಜ್‌ನಲ್ಲಿದೆ. ನಾವು ಸಾಂಸ್ಕೃತಿಕವಾಗಿ ಭಾರತದ ದಬ್ಬಾಳಿಕೆಗೆ ಒಳಗಾಗಿದ್ದೇವೆ. ವಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ. ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದು ಇದೇ ರಿಧಿಯಲ್ಲಿ. ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವ ಸಂದರ್ಭದಲ್ಲಿ ರಾಮ ಸೀತೆಯನ್ನು ಮದುವೆಯಾಗಲು ಜನಕಪುರಿಗೆ ಬಂದಿದ್ದು ಹೇಗೆ? ಜನಕಪುರಿ ನೇಪಾಳದಲ್ಲಿರುವಾಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕಪುರಿಗೆ ಬರುವುದು ಅಸಾಧ್ಯ. ಫೋನ್‌ ಅಥವಾ ಮೊಬೈಲ್‌ ಇಲ್ಲದ ಆ ಸಮಯದಲ್ಲಿ ವಿವಾಹ ಮಾತುಕತೆ ಹೇಗೆ ನಡೆಯಿತು? ರಾಮನಿಗೆ ಜನಕಪುರಿ ಬಗ್ಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದರು.  ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

     

    ಕೊರೊನಾ ವೈರಸ್‌ ಚೀನಾದಿಂದಲೇ ವಿಶ್ವಕ್ಕೆ ಹರಡಿದೆ ಎಂಬ ವಿಚಾರ ವಿಶ್ವಕ್ಕೆ ತಿಳಿದಿದ್ದರೂ ಒಲಿ ಭಾರತದಿಂದ ಕೋವಿಡ್‌ 19 ನೇಪಾಳಕ್ಕೆ ಬಂದಿದೆ ಎಂದು ದೂರಿದ್ದರು. ಇದಾದ ಬಳಿಕ ಭಾರತದ ಕಾಲಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶ ತನ್ನದು ಎಂದು ನೇಪಾಳ ಹೇಳಿತ್ತು. ಕೆಪಿ ಶರ್ಮಾ ಓಲಿ ಅವರ ಈ ನಿರ್ಧಾರ ಹಿಂದೆ ಚೀನಾ ಇದೆ ಎನ್ನುವುದು ಗೊತ್ತಿದ್ದರೂ ನೇಪಾಳದ ಹೊಸ ನಕ್ಷೆಯನ್ನು ಅಲ್ಲಿನ ಕ್ಯಾಬಿನೆಟ್ ಅನುಮೋದಿಸಿತ್ತು. ಈ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಭಾರತ ಸರ್ಕಾರ ಹೇಳಿದ್ದರೂ ನೇಪಾಳ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ವಿವಾದಿತ ನಕ್ಷೆಯನ್ನು ಬಿಡುಗಡೆ ಮಾಡಿ ವಿಶ್ವಸಂಸ್ಥೆಗೆ ಕಳುಹಿಸಿತ್ತು.

    ಮೊದಲಿನಿಂದಲೂ ನೇಪಾಳ ಜೊತೆ ಮಿತೃತ್ವ ಹೊಂದಿದ್ದ ಭಾರತದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಪಕ್ಷದ ಸದಸ್ಯರೇ ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದಾಗ ಒಲಿ ನನ್ನ ವಿರುದ್ಧ ಭಾರತ ಷಡ್ಯಂತ್ರ ಮಾಡಿದೆ ಎಂದು ದೂರಿದ್ದರು.

  • ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

    ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

    ಕಠ್ಮಂಡು: ನೇಪಾಳದಲ್ಲಿ(Nepal)  ಯುವ ಜನತೆಯ ಪ್ರತಿಭಟನೆ (Protest) ತೀವ್ರಗೊಂಡಿದ್ದು ಪ್ರಧಾನಿ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ.

    ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ (KP Sharma Oli) ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದಾರೆ. ಬಿಗಿಪಟ್ಟು ಹಿಡಿದ ಬೆನ್ನಲ್ಲೇ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ:  ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

    ಇಂದು ಸಂಸತ್ ಭವನದ ಆವರಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಸಂಸತ್‌ ಭವನದ ಗೋಡೆ ಉರುಳಿಸಿ ಆಕ್ರೋಶ ಹೊರಹಾಕಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಸೇನಾ ಪಡೆ ಈಗ ಕಾರ್ಯಾಚರಣೆಗ ಇಳಿದಿದೆ.

    ನೇಪಾಳದ ಎಲ್ಲಾ ವಿಮಾನ ನಿಲ್ದಾಣಗಳು ಬಂದ್‌ ಆಗಿವೆ. ದೇಶಿಯ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತವಾಗಿದೆ.

  • ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಎಂಗೇಜ್‌ಮೆಂಟ್‌ ಎಷ್ಟಿದೆ: ಸಂಸದರಿಗೆ ಮೋದಿ ಪ್ರಶ್ನೆ

    ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಎಂಗೇಜ್‌ಮೆಂಟ್‌ ಎಷ್ಟಿದೆ: ಸಂಸದರಿಗೆ ಮೋದಿ ಪ್ರಶ್ನೆ

    – ಬಿಜೆಪಿ ಸಂಸದರಿಗೆ ಕಾರ್ಯಾಗಾರ
    – 8 ತಿಂಗಳ ಚಟುಟವಟಿಕೆ ಟ್ರ್ಯಾಕ್‌ ಮಾಡಿ ಕಳಪೆ ಸಾಧನೆ ಮಾಡಿದವರಿಗೆ ಕ್ಲಾಸ್‌

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ನಿಮ್ಮ ಎಂಗೇಜ್‌ಮೆಂಟ್‌ ಎಷ್ಟಿದೆ ಎಂದು ಸಂಸದರ ಬಳಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವರದಿ ಕೇಳಿದ್ದಾರೆ.

    ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಬಿಜೆಪಿ ಸಂಸದರಿಗೆ (BJP MP’s) ಕಾರ್ಯಾಗಾರ ಆಯೋಜನೆಗೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿರುವುದು ಹೇಗೆ? ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹೇಗೆ ಸೇರಿದಂತೆ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಾಯಿತು ಎಂದು ವರದಿ ತಿಳಿಸಿವೆ.

    ಸಂಸದರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಚುನಾವಣೆಗಳನ್ನು ಗೆಲ್ಲಲು ಅಭಿವೃದ್ಧಿ ಸಾಕಾಗುವುದಿಲ್ಲ. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳನ್ನು ಸಕ್ರಿಯವಾಗಿ ಬಳಸುವುದು ಬಹಳ ಮುಖ್ಯ ಎಂದು ಸಲಹೆ ನೀಡಿದರು.

    ಸಭೆಯಲ್ಲಿದ್ದ ಎಲ್ಲಾ ಸಂಸದರಿಗೆ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯ ವರದಿಗಳನ್ನು ನೀಡಲಾಯಿತು. ಈ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ನಿಷ್ಕ್ರಿಯರಾಗಿರುವ ಸಂಸದರಿಗೆ ಕ್ಲಾಸ್‌ ಮಾಡಲಾಯಿತು. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

    ಕಾರ್ಯಾಗಾರದಲ್ಲಿ ಸಂಸದರ ಸಾಮಾಜಿಕ ಮಾಧ್ಯಮ ಸೈಟ್‌ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್‌ನಲ್ಲಿ ಅವರ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಿ ಸಿದ್ಧಪಡಿಸಿದ ವರದಿಯನ್ನು ನೀಡಲಾಯಿತು. ಜನವರಿ ಮತ್ತು ಆಗಸ್ಟ್ ನಡುವಿನ ಅವಧಿಯಲ್ಲಿನ ಚಟುವಟಿಕೆಯನ್ನು ಪರಿಶೀಲಿಸಿ ಸಂಸದರನ್ನು ಸಕ್ರಿಯ, ದುರ್ಬಲ ಮತ್ತು ನಿಷ್ಕ್ರಿಯ ಎಂದು ಮೂರು ವರ್ಗಗಳಾಗಿ ವಿಂಗಡಿಸಲಾಗಿತ್ತು.

    ಉದಾಹರಣೆಗೆ, ಒಂದು ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಮಾಡದ ಸಂಸದರನ್ನು ‘ನಿಷ್ಕ್ರಿಯ’ ಮತ್ತು ಕೆಂಪು ಎಂದು ಟ್ಯಾಗ್ ನೀಡಲಾಗಿತ್ತು. ಒಂದು ತಿಂಗಳಲ್ಲಿ 0-60 ಪೋಸ್ಟ್‌ಗಳನ್ನು ಹೊಂದಿರುವವರನ್ನು ‘ಕಡಿಮೆ ಸಕ್ರಿಯ’ ಮತ್ತು ಹಳದಿ ಎಂದು ಟ್ಯಾಗ್ ಮಾಡಲಾಗಿತ್ತು. 60 ಕ್ಕೂ ಹೆಚ್ಚು ಪೋಸ್ಟ್‌ ಮಾಡಿದವರನ್ನು ‘ಸಕ್ರಿಯ’ ಮತ್ತು ಹಸಿರು ಎಂದು ಟ್ಯಾಗ್ ಮಾಡಲಾಗಿತ್ತು.

    ಕಾರ್ಯಾಗಾರದ ಸಮಯದಲ್ಲಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಸಂಪರ್ಕಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಪ್ರಸ್ತುತಿ ನೀಡಿದರು.

  • ಅಶ್ಲೀಲ ಕಾಮೆಂಟ್ ಕೇಸ್‌ – ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ

    ಅಶ್ಲೀಲ ಕಾಮೆಂಟ್ ಕೇಸ್‌ – ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕಣದ ತನಿಖೆಯಲ್ಲಿ ದರ್ಶನ್‌ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ನಿರಾಸಕ್ತಿ ತೋರಿಸುತ್ತಿದ್ದಾರೆ.

    ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕಣದ ತನಿಖೆಯನ್ನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಪೊಲೀಸರು ಚುರುಕುಗೊಳಿಸಿದ್ದಾರೆ‌. ಪ್ರಕರಣದ ಬಗ್ಗೆ ಸ್ಪಷ್ಟನೆ ಕೊಡುವಂತೆ ವಿಜಯ ಲಕ್ಷ್ಮೀ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

     

    ಈಗ ನನ್ನ ಮುಂದೆ ಇರುವ ದೊಡ್ಡ ಸಮಸ್ಯೆಯನ್ನ ಬಗೆಹರಿಸಿಕೊಂಡರೆ ಸಾಕಾಗಿದೆ. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಬೇರೆ ಯಾವುದಕ್ಕೂ ಕೂಡ ರಿಸ್ಕ್ ತೆಗೆದುಕೊಂಡು ಓಡಾಟ ಮಾಡುವುದಕ್ಕೆ ಆಗುವುದಿಲ್ಲ ಎಂಬ ಅರ್ಥದಲ್ಲಿ ಪೊಲೀಸರ ನೋಟಿಸಿಗೆ ಮೂರನೇ ವ್ಯಕ್ತಿಯಿಂದ ಮೌಖಿಕ ಉತ್ತರವನ್ನ ವಿಜಯಲಕ್ಷ್ಮಿ ಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲದ ರೂಲ್ಸ್ ದರ್ಶನ್‌ಗೆ ಯಾಕೆ?- ವಕೀಲರ ವಾದ

    ಪ್ರಕರಣದ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿರುವುದರಿಂದ ವಿಜಯಲಕ್ಷ್ಮಿ ಅವರ ಹೇಳಿಕೆ ಪಡೆದು ನಂತರ ಅಶ್ಲೀಲ ಕಮೆಂಟ್ ಮಾಡಿದವರ ಬಗ್ಗೆ ಕಾನೂನು ಕ್ರಮ ಜರಗಿಸುವ ಪ್ಲಾನ್ ನಲ್ಲಿದ್ದಾರೆ.  ಆದರೆ ಪ್ರಕರಣದ ಬಗ್ಗೆ ವಿಜಯಲಕ್ಷ್ಮಿ  ಅವರಿಂದಲೇ ಸರಿಯಾದ ಸಹಕಾರ ಪೊಲೀಸರಿಗೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.

    ಸೆನ್‌ ಠಾಣೆಯ ಸಹಕಾರದೊಂದಿಗೆ ಪೊಲೀಸರು ಅಶ್ಲೀಲವಾಗಿ ಕಮೆಂಟ್‌ ಮಾಡಿದ ಖಾತೆಗಳನ್ನು ಪತ್ತೆ ಮಾಡಲು ಆರಂಭಿಸಿದ್ದಾರೆ.

  • ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

    ಕೊಡಗು | ʻಪ್ರವಾಸಿಗರಿಗೆ ಹುಡ್ಗೀರು, ಆಂಟಿಯರು ಲಭ್ಯವಿದ್ದಾರೆʼ ಅಂತ ಪೋಸ್ಟ್‌ – ಬಾಗಲಕೋಟೆ ಯುವಕ ಅರೆಸ್ಟ್‌

    – ಹಣ ಕಳೆದುಕೊಂಡು ಮೋಸ ಹೋದವನಿಂದಲೇ ಕೃತ್ಯ

    ಮಡಿಕೇರಿ: ಕೊಡಗಿನಲ್ಲಿ (Kodagu) ಪ್ರವಾಸಿಗರಿಗೆ (Tourists) ಹುಡುಗಿಯರು ಮತ್ತು ಆಂಟಿಯರು ಡೇಟಿಂಗ್‌ ಮಾಡಲು ಲಭ್ಯವಿದ್ದಾರೆ ಅಂತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ ಹಾಕಿದ್ದ ಯುವಕನನ್ನ ಕೊಡಗು ಪೊಲೀಸರು ಬಂಧಿಸಿದ್ದಾರೆ.

    ಬಾಗಲಕೋಟೆ ನಿವಾಸ ನಾಗಪ್ಪ (26) ಬಂಧಿತ ಯುವಕ. ಕಿಡಿಗೇಡಿ, ಮಡಿಕೇರಿ ನಗರದ (Madikeri City) ವ್ಯಾಪ್ತಿಯಲ್ಲಿ ಆಂಟಿಯರು, ಹುಡುಗಿಯರು ಡೇಟಿಂಗ್‌ಗೆ ಸಿಕ್ತಾರೆ, ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ಮೊಬೈಲ್‌ ನಂಬರ್‌ ಕೂಡ ಹಾಕಿದ್ದ. ಇದರ ವಿರುದ್ಧ ಪ್ರವಾಸಿಗರು ಮಾತ್ರವಲ್ಲದೇ ಕೊಡಗಿನ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ ದಸರಾ ವೇಳೆ ಯುವತಿಯರನ್ನ ಕೆಣಕ್ಕಿದ್ರೆ ಹುಷಾರ್‌; ಮದುವೆ ಮಂಟಪಕ್ಕೆ ಕರೆತಂದು ಕೇಸ್‌ ದಾಖಲು

    Kodagu Social Media Post

    ಈ ಹಿಂದೆ ಪುಣೆಯಲ್ಲಿ ಹುಡುಗಿಯರು ಸಿಕ್ತಾರೆ ಅನ್ನೋ ಪೋಸ್ಟ್‌ ನಂಬಿ ನಾಗಪ್ಪ 4,000 ರೂ. ಹಣ ಕಳೆದುಕೊಂಡಿದ್ದ. ಹೀಗಾಗಿ ತಾನೂ ಕೂಡ ಏಕೆ ಮಹಿಳೆಯರ ಫೋಟೋಗಳನ್ನ ಹಾಕಿ ಹಣ ಮಾಡಬಾರದು ಅಂತ ಆಲೋಚನೆ ಮಾಡಿದ್ದ. ಹಲವಾರು ಕಡೆ ಇದೇ ರೀತಿ ಪೋಸ್ಟ್‌ಗಳನ್ನ ಹಾಕಿ 30 ರಿಂದ 40 ಸಾವಿರ ರೂ. ಸಂಪಾದನೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಅದೇ ರೀತಿ ಮಡಿಕೇರಿಯಲ್ಲೂ ಹುಡ್ಗೀರು, ಆಂಟಿಯರು ಸಿಕ್ತಾರೆ ಅಂತ ಪೋಸ್ಟ್‌ ಹಾಕಿದ್ದ. ಇದನ್ನ ನಂಬಿ ಮಡಿಕೇರಿ ಹಾಗೂ ಕುಶಾಲನಗರದ ಕೆಲ ಯುವಕರು ಹಣ ಕಳೆದುಕೊಂಡಿದ್ದಾರೆ ಅನ್ನೋ ಮಾಹಿತಿ ಇದೆ. ಬಳಿಕ ಈ ಪೇಜ್‌ ವಿರುದ್ಧ‌ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಕೊಡಗು | ವಯನಾಡ್‌ ಸಮೀಪದ ತಮರಶೆರಿ ಘಾಟ್ ಬಳಿ ಭೂಕುಸಿತ; ಬದಲಿ ಮಾರ್ಗಕ್ಕೆ ಸೂಚನೆ

  • ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ – ಸಾಮಾಜಿಕ ಜಾಲತಾಣದಲ್ಲಿ ಕೊಡಗಿನ ಬಗ್ಗೆ ಅಪಪ್ರಚಾರ

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಮತ್ತು ಭಾರತದ ಸ್ಕಾಟ್ಲೆಂಡ್ ಎಂದು ಕರೆಸಿಕೊಳ್ಳುವ ಕೊಡಗಿನಲ್ಲಿ (Kodagu) ಪ್ರವಾಸಿಗರಿಗೆ ಹುಡುಗಿಯರು ಮತ್ತು ಮಹಿಳೆಯರು ಲಭ್ಯವಿದ್ದಾರೆ ಎಂದು ದುಷ್ಟರು ಸಾಮಾಜಿಕ ಜಾಲತಾಣಗಳಲ್ಲಿ (SocialMedia) ಪೋಸ್ಟ್ ಹಾಕಿದ್ದಾರೆ.

    ಕೊಡಗಿನ ವಾತಾವರಣ, ಮಳೆ, ಟೂರಿಸಂಗೆ ಪ್ರಸಿದ್ಧಿ ಹೊಂದಿರುವ, ರಮಣೀಯ ಗುಡ್ಡಗಾಡು ಪ್ರದೇಶಗಳು, ಹಸಿರನ್ನು ಹೊದ್ದಂತಿರುವ ನೆಲ, ಮತ್ತು ಭೋರ್ಗರೆಯುವ ಹಲವಾರು ಜಲಪಾತಗಳಿಂದ ಪ್ರತಿದಿನ ಸಾವಿರಾರು ಪ್ರವಾಸಿಗರನ್ನು ಕೈಮಾಡಿ ಕರೆಯುವ ಸುಂದರವಾದ ಸ್ಥಳ. ಹೀಗಾಗಿ ದೇಶ ವಿದೇಶಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗು ಜಿಲ್ಲೆಗೆ ಆಗಮಿಸುತ್ತಾರೆ. ಇಲ್ಲಿನ ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಚುಮು ಚುಮು ಚಳಿ, ಆಹ್ಲಾದಕರವಾದ ವಾತಾವರಣಗಳನ್ನು ನೋಡಿ ಎಂಜಾಯ್ ಮಾಡಿ ಹೋಗುತ್ತಾರೆ. ಇನ್ನೂ ಕೆಲವರು ಕೊಡಗಿನ ಆಹಾರ ಪದ್ಧತಿಗೆ ಮನಸೋತು ಇಲ್ಲಿನ ವಿಶೇಷ ಖಾದ್ಯಗಳನ್ನು ಸವಿದು ತೆರಳುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಈ ನಡುವೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನ ಹುಡುಗಿಯರು ಬೇಕಾ, ಮಹಿಳೆಯರು ಬೇಕಾ, ಇಲ್ಲಿ ಬಂದರೆ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಎಂದೆಲ್ಲ ಜಿಲ್ಲೆಯ ಮೇಲೆ ಅಪಪ್ರಚಾರ ಮಾಡಲು ಮುಂದಾಗುತ್ತಿದ್ದಾರೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಹೇಳಿದಂತೆ ನಾನು ಮಾಡಿದ್ದೇನೆ – ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಥಂಡಾ

    ಕಳೆದ ಹಲವಾರು ವರ್ಷಗಳ ಹಿಂದೆ ನಿಮ್ಮ ಪಬ್ಲಿಕ್ ಟಿವಿ ಕಾಲ್ ಗರ್ಲ್ ಸಿಗುತ್ತಾರೆ ಅಂತ ಸಾಮಾಜಿಕ ಜಾಲತಾಣದಲ್ಲಿ ಮೊಬೈಲ್ ನಂಬರ್ ಹಾಕಿದ ದುಷ್ಟರ ಮುಖವಾಡ ಬಯಲು ಮಾಡಿತ್ತು. ಇದೀಗ ಕೆಲ ತಿಂಗಳುಗಳಿಂದ ಈ ರೀತಿಯ ಅಪಪ್ರಚಾರ ಮಾಡುತ್ತಿರುವುದು ವರದಿಯಾಗುತ್ತಲೇ ಇರುವುದರಿಂದ ಇದೀಗ ಜಿಲ್ಲೆಯ ಜನರು  ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

  • ಐಪಿಎಲ್‌ಗೆ ಗುಡ್‌ಬೈ ಹೇಳಿದ ಅಶ್ವಿನ್‌

    ಐಪಿಎಲ್‌ಗೆ ಗುಡ್‌ಬೈ ಹೇಳಿದ ಅಶ್ವಿನ್‌

    ಚೆನ್ನೈ: ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (R Ashwin) ಅವರು ತಮ್ಮ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ್ದಾರೆ.

    221 ಪಂದ್ಯಗಳನ್ನು ಆಡಿ 187 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್‌ ಸಾಮಾಜಿಕ ಜಾಲತಾಣದಲ್ಲಿ (Social Media) ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿರುತ್ತದೆ. ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ. ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳನ್ನು ನೀಡಿದ ಎಲ್ಲಾ ಫ್ರಾಂಚೈಸಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ (BCCI) ಕೃತಜ್ಞತೆಗಳು ಎಂದು ಹೇಳಿದ್ದರು. ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ನಿಷೇಧ BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

    ಐಪಿಎಲ್‌ನಲ್ಲಿ ಅಶ್ವಿನ್‌ ಐದು ತಂಡಗಳ ಪರ ಆಡಿದ್ದಾರೆ ಅಷ್ಟೇ ಅಲ್ಲದೇ ನಾಯಕನಾಗಿ ಪಂಜಾಬ್‌ ಕಿಂಗ್ಸ್‌ (Punjab Kings) ತಂಡವನ್ನು ಮುನ್ನಡೆಸಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದ ಅವಧಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅನ್ನು ಪ್ರತಿನಿಧಿಸಿದ್ದರು.

    ಅಶ್ವಿನ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಲ್‌, ಭುವನೇಶ್ವರ್ ಕುಮಾರ್, ಸುನಿಲ್ ನರೈನ್ ಮತ್ತು ಪಿಯೂಷ್ ಚಾವ್ಲಾ ನಂತರ ಅಶ್ವಿನ್‌ ಇದ್ದಾರೆ.

    ಅಶ್ವಿನ್‌ ಕೊನೆಯ ಬಾರಿ ಚೆನ್ನೈ ತಂಡದ ಪರ ಆಡಿದ್ದರು. 2025 ರಲ್ಲಿ ಚೆನ್ನೈ ತಂಡ ಅಶ್ವಿನ್‌ ಅವರನ್ನು 9.75 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ 9 ಪಂದ್ಯವಾಡಿ 7 ವಿಕೆಟ್‌ ಮಾತ್ರ ಪಡೆದಿದ್ದರು.

  • 422 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲೈಓವರ್‌ನ ನಟ್‌, ಬೋಲ್ಟ್‌ ತೆಗೆದ ಮಕ್ಕಳು

    422 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲೈಓವರ್‌ನ ನಟ್‌, ಬೋಲ್ಟ್‌ ತೆಗೆದ ಮಕ್ಕಳು

    ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ (Bihar) ಉದ್ಘಾಟನೆಯಾದ ಡಬಲ್‌ ಡೆಕ್ಕರ್‌ ಫ್ಲೈವರ್‌ನ (Double Decker Flyover) ನಟ್‌ ಬೋಲ್ಟ್‌ಗಳನ್ನು ಮಕ್ಕಳು (Kids) ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಬಿಹಾರದ ಮೊದಲ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಅನ್ನು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜೂನ್‌ 11 ರಂದು ಉದ್ಘಾಟನೆ ಮಾಡಿದ್ದರು. ಉದ್ಘಾಟನೆಯಾದ ಎರಡನೇ ದಿನದಲ್ಲಿ 422 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಫ್ಲೈ ಓವರ್‌ನ ಬೋಲ್ಟ್‌ಗಳನ್ನು ಮಕ್ಕಳು ತೆಗೆದಿದ್ದಾರೆ.

    ಹಗಲು ಹೊತ್ತಿನಲ್ಲೇ ಮಕ್ಕಳು ಬೋಲ್ಟ್‌ಗಳನ್ನು ತೆಗೆಯುತ್ತಿರುವುದನ್ನು ಒಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿ ಪ್ರಶ್ನಿಸುತ್ತಿದ್ದಂತೆ ಮಕ್ಕಳು ಸ್ಥಳದಿಂದ ಓಡಿ ಹೋಗಿದ್ದಾರೆ.  ಇದನ್ನೂ ಓದಿ: ಗೋಲ್ಡ್‌ ಪ್ರಿಯರಿಗೆ ಶಾಕ್‌ – 1 ವಾರದಲ್ಲಿ ಚಿನ್ನದ ದರ 3,645 ರೂ. ಏರಿಕೆ

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್‌ ವೈರಲ್‌ ಆಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಮೂಲಸೌಕರ್ಯ ಸುರಕ್ಷತೆಯ ಬಗ್ಗೆ ಗಂಭೀರ ಆತಂಕವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಮಾನ ಪತನದ ವೀಡಿಯೋ ಶೂಟ್ ಮಾಡಿದ ಹುಡುಗ ಇವನೇ ನೋಡಿ

    ಮಕ್ಕಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿಗಳ ಬಗ್ಗೆ ಪಾಠ ಬೋಧಿಸುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿದೆ. ಬಿಹಾರದಲ್ಲಿ ಆಗಾಗ ನಿರ್ಮಾಣ ಹಂತದ ಸೇತುವೆಗಳು, ಕಟ್ಟಡಗಳು ಉರುಳಿ ಬೀಳುವ ಸುದ್ದಿಯಾಗುತ್ತಿರುತ್ತದೆ. ಈ ರೀತಿ ಕುಸಿದು ಬೀಳಲು ಕಬ್ಬಿಣ ಇತ್ಯಾದಿ ವಸ್ತುಗಳ ಕಳ್ಳತನವೂ ಕಾರಣ ಆಗಿರಬಹುದು ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.