Tag: ಸಾಮಾಜಿಕ ಕಾರ್ಯಕರ್ತೆ

  • ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    ಭುವನೇಶ್ವರ: ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಪದ್ಮಶ್ರೀ ಪುರಸ್ಕೃತೆ ಕಮಲಾ ಪುಜಾರಿ ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಡಿಸ್ಚಾರ್ಜ್ ಮಾಡುವುದಕ್ಕೂ ಮೊದಲು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬಲವಂತವಾಗಿ ನೃತ್ಯ ಮಾಡಿಸಿರುವ ಘಟನೆ ಕಟಕ್ ನಗರದ ಆಸ್ಪತ್ರೆಯಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೃದ್ಧ ಪದ್ಮಶ್ರೀ ಪುರಸ್ಕೃತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಕೂಡ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

    ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ನನಗೆ ನೃತ್ಯ ಮಾಡಲು ಇಷ್ಟವಿರಲಿಲ್ಲ. ಆದರೆ ನನಗೆ ನೃತ್ಯ ಮಾಡಲು ಒತ್ತಾಯಿಸಲಾಗಿತ್ತು. ನಾನು ಪದೇ ಪದೇ ನಿರಾಕರಿಸಿದರೂ ಅವರು ಕೇಳಲಿಲ್ಲ. ಎಂದು ಕಮಲಾ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬ್ರಿಟಿಷರ ಕಾಲದ ಚಿನ್ಹೆಗೆ ಕೊಕ್ – ನೌಕಾಪಡೆಗೆ ಶಿವಾಜಿಯ ಧ್ವಜ ಸೇರ್ಪಡೆ

    ಕಮಲಾ ಪುಜಾರಿ ಅವರನ್ನು ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ನಮ್ಮ ಸದಸ್ಯರು ಬೀದಿಗಿಳಿಯುತ್ತಾರೆ ಎಂದು ಬುಡಕಟ್ಟು ಸಮುದಾಯ ಪರಜಾ ಸಮಾಜದ ಅಧ್ಯಕ್ಷ ಹರೀಶ್ ಮುದುಳಿ ಎಚ್ಚರಿಕೆ ನೀಡಿದ್ದಾರೆ.

    ಸಾವಯವ ಕೃಷಿಯನ್ನು ಉತ್ತೇಜಿಸಿದ ಹಾಗೂ ಭತ್ತ ಸೇರಿದಂತೆ ವಿವಿಧ ಬೆಳೆಗಳ 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019 ರಲ್ಲಿ ಕಮಲಾ ಪುಜಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಇತ್ತೀಚೆಗೆ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಪೈಲಟ್‍ಗಳ ಮುಷ್ಕರದಿಂದ ವಿಮಾನ ಸಂಚಾರ ರದ್ದು – ದೆಹಲಿ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

    Live Tv
    [brid partner=56869869 player=32851 video=960834 autoplay=true]

  • ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ನಾನು ಕಷ್ಟಕ್ಕೆ ಸ್ಪಂದಿಸಿ ಮನೆಯಲ್ಲಿ ಇಟ್ಕೋತೀನಿ ಅಂದಿದ್ದೆ – ಆದ್ರೆ ನವ್ಯಶ್ರೀ 50ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು: ಟಾಕಳೆ ಆರೋಪ

    ಬೆಳಗಾವಿ: ನವ್ಯಶ್ರೀ ಅವರ ಕಷ್ಟಕ್ಕೆ ಸ್ಪಂದಿಸಿ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಅಂದಿದ್ದೆ. ಆದ್ರೆ ನವ್ಯಶ್ರೀ ಕಳೆದ 4 ವರ್ಷಗಳಿಂದ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರು, ಈಗಾಗಲೇ 2 ಲಕ್ಷ ಹಣವನ್ನೂ ಪಡೆದಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಆರೋಪಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 3-4 ತಿಂಗಳಿನಿಂದ ನವ್ಯಶ್ರೀ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇನೆ. ನನ್ನ ಪತ್ನಿಯ ಸಹಕಾರದಿಂದಲೇ ಕೇಸ್ ದಾಖಲು ಮಾಡಿದ್ದೇನೆ. ನ್ಯಾಯಾಂಗ, ಪೊಲೀಸ್ ಇಲಾಖೆಯಿಂದ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: 1,800 ಕೋಟಿಗೆ ಅಡಮಾನವಿಟ್ಟಿದ್ದ 11 ಕಟ್ಟಡಗಳನ್ನು ವಾಪಸ್ ಪಡೆದ BBMP

    ನಾನೊಬ್ಬ ಸರ್ಕಾರಿ ನೌಕರನಾಗಿದ್ದು ಹೆಚ್ಚಿಗೆ ಹೇಳಲ್ಲ. ಕಳೆದ 5-6 ತಿಂಗಳಿಂದ ಸತತವಾಗಿ ಬ್ಲ್ಯಾಕ್‌ಮೇಲ್‌ ನಡೆಯುತ್ತಿದೆ. ನಾನು ಪತಿ ಎಂದು ನವ್ಯಶ್ರೀ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ನಂತರ ಕೇವಲ ಹಣಕಾಸಿನ ವ್ಯವಹಾರ ಇದೆ ಎಂದು ಪೊಲೀಸರು ಹೇಳಿದ್ದರು. ಇದಾದ ಬಳಿಕ ಮತ್ತೆ 50 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಈಗಾಗಲೇ 2 ಲಕ್ಷ ಹಣ ಸಹ ಪಡೆದುಕೊಂಡಿದ್ದಾರೆ. ನನ್ನ ಮದುವೆ ವಿಚಾರ ತಿಳಿದು ಬ್ಲ್ಯಾಕ್ ಮೆಲ್ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

    ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೆ: ನವ್ಯಶ್ರೀ ಆಡಿಯೋ ರಿಲೀಸ್ ವಿಚಾರಕ್ಕೆ ಸಬಂಧಿಸಿದಂತೆ ಮಾತನಾಡಿರುವ ಅವರು, ಆಡಿಯೋದಲ್ಲಿ ಎಲ್ಲಿಯೂ ಪತ್ನಿ ಎಂದು ನಾನು ಹೇಳಿಲ್ಲ. ಮಾನವೀಯ ದೃಷ್ಟಿಯಿಂದ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮನೆ ಸಮಸ್ಯೆ ಬಗ್ಗೆ ಜಗಳ ನಡೆದಿತ್ತು. ಆಗ ನಾನು ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್‌ಗಳೇ ಟಾಪ್

    ಮಾತನಾಡುವ ವೇಳೆ ಪತ್ನಿ ಸಹ ನನ್ನ ಜೊತೆಗೆ ಇದ್ರು. ನಮ್ಮ ಸಮಾಜದ ಮಹಿಳೆ ಎಂದು ನಮ್ಮ ಮನೆಗೆ ಬನ್ನಿ ಅಂತಾ ಹೇಳಿದ್ದೇನೆ. ಆಗ ಹೆಂಡತಿ ಯಾರು ಇವರು ಅಂತ ಕೇಳಿದಾಗ ಪತ್ನಿ, ಮಗಳಿಗೆ ಗೊತ್ತಿರಲಿ ಅಂತಾ ಹೇಳಿದ್ದೇನೆ. ನಾನು ಡಿಡಿ ರೂಪದಲ್ಲಿ 2 ಲಕ್ಷ ಹಣ, ಕ್ಯಾಷ್ 3 ಲಕ್ಷ ಕೊಟ್ಟಿದ್ದೇನೆ. ಅವರು ಯಾವುದೇ ದಾಖಲೆ ರಿಲೀಸ್ ಮಾಡಿದ್ರೂ ನನಗೇನೂ ತೊಂದರೆಯಿಲ್ಲ. ಜನರಿಗೆ ಈ ವಿಚಾರ ತಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

    ನನ್ನ ದೂರು ಸಂದೇಶವಾಗಲಿ: ಪತ್ನಿಯ ಸಹಕಾರದಿಂದಲೇ ದೂರು ನೀಡಿದ್ದೇನೆ. ಯಾರಿಗೂ ಈ ರೀತಿಯ ಬ್ಲ್ಯಾಕ್‌ಮೇಲ್ ಆಗಬಾರದು. ವೀಡಿಯೋ, ಆಡಿಯೋ ಬಗ್ಗೆ ತನಿಖೆ ಆಗಬೇಕು. ಸತ್ಯಾಸತ್ಯತೆಗಳು ಹೊರಬರಬೇಕು. ತಿಲಕ್ ಕುಮಾರ್ ಮಾವ ಅಂತಾ ಹೇಳಿದ್ರು. ಆಮೇಲೆ ಆಕೆಯ ಫ್ರೆಂಡ್ ಅಂತಾ ಗೊತ್ತಾಗಿದೆ. ಬ್ಲ್ಯಾಕ್‌ಮೇಲ್‌ಲ್‌ಗೆ ಒಳಗಾದವರಿಗೆ ನನ್ನ ದೂರು ಸಂದೇಶವಾಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೇಪ್ ಕೇಸ್ ಹಾಕ್ತೀನಿ – ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು

    ರೇಪ್ ಕೇಸ್ ಹಾಕ್ತೀನಿ – ಬ್ಯಾಂಕ್ ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು

    ಬೆಂಗಳೂರು: ಹಣ ವಾಪಸ್ ಕೇಳಲು ಬಂದ ಬ್ಯಾಂಕ್ ಸಿಬ್ಬಂದಿಗೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಅತ್ಯಾಚಾರದ ಕೇಸ್ ಹಾಕ್ತೀನಿ – ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಮಹಿಳೆ ಅವಾಜ್

    ಸಂಗೀತಾ ಗೋಪಾಲ್ ವಿರುದ್ಧ ದೂರು ದಾಖಲಾಗಿದೆ. ಸಂಗೀತಾ ಗೋಪಾಲ್ ಡ್ರಗ್ಸ್ ಪೆಡ್ಲರ್ ರಾಹುಲ್ ಆಪ್ತೆ ಎನ್ನಲಾಗುತ್ತಿದೆ. ಇಂದಿರಾನಗರ ಪೊಲೀಸ್ ಠಾಣೆಗೆ ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯಾ ದೂರು ನೀಡಿದ್ದಾರೆ.

    ಸಂಗೀತಾ ಗೋಪಾಲ್ ಬ್ಯಾಂಕ್ ಅಧಿಕಾರಿಗಳಿಗೆ ಸುಳ್ಳು ರೇಪ್ ಕೇಸ್ ಹಾಕುತ್ತೇನೆ ಎಂದು ಧಮ್ಕಿ ಹಾಕಿದ್ದಳು. ಬ್ಯಾಂಕ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್‌ನಲ್ಲೂ ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು. ಇದೀಗ ಬ್ಯಾಂಕ್ ಅಧಿಕಾರಿಯನ್ನ ಅಶ್ಲೀಲವಾಗಿ ನಿಂದಿಸಿದ್ದಾರೆಂದು ದೂರು ನೀಡಲಾಗಿದೆ. ಸದ್ಯ ಸಾಮಾಜಿಕ ಕಾರ್ಯಕರ್ತೆ ದೂರಿನ ಅನ್ವಯ ಸಂಗೀತಾಳನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.

    ಏನಿದು ಪ್ರಕರಣ?
    ಬ್ಯಾಂಕಿನಲ್ಲಿ ಪಡೆದ ಸಾಲವನ್ನು ವಾಪಸ್ ಕೊಡಿ ಎಂದು ಕೇಳಲು ಮೂರು ಜನ ಬ್ಯಾಂಕ್ ಸಿಬ್ಬಂದಿ ಸಂಗೀತಾ ಗೋಪಾಲ್ ಮನೆಗೆ ಬಂದಿದ್ದರು. ಈ ವೇಳೆ ಮಹಿಳೆ ಸುಮ್ಮನೆ ಜಗಳ ಮಾಡಿ ನಿಮ್ಮ ಮೇಲೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ಅವಾಜ್ ಹಾಕಿದ್ದಳು. ಸಂಗೀತಾ ಗೋಪಾಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಬ್ಯಾಂಕ್ ಸಿಬ್ಬಂದಿಯನ್ನು ತಾನೇ ಎಳೆದಾಡಿ ನಿನ್ನ ಮೇಲೆ ಅತ್ಯಾಚಾರ ಕೇಸ್ ಹಾಕುತ್ತೇನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡುತ್ತೇನೆ ಎಂದು ಸಂಗೀತಾ ಬೆದರಿಕೆ ಹಾಕಿದ್ದಳು. ಅಲ್ಲದೇ ನಿಮ್ಮ ಫೋಟೋವನ್ನು ಫೇಸ್‍ಬುಕ್‍ಗೆ ಹಾಕಿ ಅರೆಸ್ಟ್ ಮಾಡಿಸುತ್ತೇನೆ ಎಂದಿದ್ದಳು. ಈ ವೇಳೆ ಸಿಬ್ಬಂದಿಯೋರ್ವರು ಸಂಗೀತಾ ಗೋಪಾಲ್ ಕಾಲಿಗೆ ಬಿದ್ದು ನಮ್ಮನ್ನು ಬಿಟ್ಟು ಬೀಡಿ ಎಂದು ಕೇಳಿಕೊಂಡರು ಮಹಿಳೆ ದರ್ಪ ತೋರಿದ್ದಳು. ಹಿರಿಯ ನಾಗರೀಕರು ಎಂಬ ಅರಿವಿಲ್ಲದೇ ಸಂಗೀತಾ ಗೋಪಾಲ್ ನಡೆದುಕೊಂಡ ರೀತಿಗೆ ನೆಟ್ಟಗರು ಛೀಮಾರಿ ಹಾಕಿದ್ದರು.