Tag: ಸಾಮಾಜಿಕಜಾಲತಾಣ

  • #BJPChor100Crore – ಬಿಜೆಪಿ ವಿರುದ್ಧ ರಮ್ಯಾ ಕಿಡಿ

    #BJPChor100Crore – ಬಿಜೆಪಿ ವಿರುದ್ಧ ರಮ್ಯಾ ಕಿಡಿ

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿ ಪಕ್ಷದ ವಿರುದ್ಧ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ ರಮ್ಯಾ ಭ್ರಷ್ಟಾಚಾರದ ಆರೋಪ ಮಾಡಿ ಕಿಡಿಕಾರಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ರಮ್ಯಾ, ಬಿಜೆಪಿ ಪಕ್ಷ ಗುಜರಾತ್ ಉದ್ಯಮಿಯೊಬ್ಬರ ಮೂಲಕ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದ್ದು, ಆ ಉದ್ಯಮಿ ಯಾರು? ಬಿಜೆಪಿ ಉದ್ಯಮಿಯೊಂದಿಗೆ ಯಾವ ರೀತಿ ಒಪ್ಪಂದ ಮಾಡಿಕೊಂಡಿದೆ? ಬಿಜೆಪಿಯ ಭ್ರಷ್ಟಾಚಾರಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಂದ ಸಹಾಯ ಪಡೆದುಕೊಳ್ಳಲಾಗುತ್ತಿದೆಯೇ? ಈ ಕುರಿತು ತಾತ್ಕಾಲಿಕ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಪ್ರತಿಕ್ರಿಯಿಸುತ್ತಾರಾ ಎಂದು ಪ್ರಶ್ನೆಗಳ ಸರಮಾಲೆಯನ್ನು ಎಸೆದಿದ್ದಾರೆ.

    ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಸಲು ಮುಂದಾಗಿದೆ. ಸರ್ಕಾರ ರಚಿಸಲು ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತಿಲ್ಲ. ಕಪ್ಪು ಹಣ ಇಟ್ಟು ಕೊಂಡು ಪಕ್ಷದ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿದ್ದಾರೆ. ಆದರೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

  • ತಮಾಷೆ ಮಾಡಲು ಹೋಗಿ ಐದು ರನ್ ಪೆನಾಲ್ಟಿ ಪಡೆದ ಆಸ್ಟ್ರೇಲಿಯಾ ಕ್ರಿಕೆಟರ್ – ವಿಡಿಯೋ ನೋಡಿ

    ತಮಾಷೆ ಮಾಡಲು ಹೋಗಿ ಐದು ರನ್ ಪೆನಾಲ್ಟಿ ಪಡೆದ ಆಸ್ಟ್ರೇಲಿಯಾ ಕ್ರಿಕೆಟರ್ – ವಿಡಿಯೋ ನೋಡಿ

    ಕ್ಯಾನ್ಬೆರಾ: ಆಟಗಾರರು ಮೈದಾನದಲ್ಲಿ ಕ್ರಿಕೆಟ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅಂಪೈರ್ ದಂಡ ವಿಧಿಸುವುದು ಸಾಮಾನ್ಯ. ಹಾಗೆಯೇ ಆಸ್ಟ್ರೇಲಿಯಾ ದೇಶಿಯಾ ಕ್ರಿಕೆಟ್ ಟೂರ್ನಿಯ ವೇಳೆ ಸ್ಲಿಪ್ ನಲ್ಲಿದ್ದ ಆಟಗಾರ ವಿಕೆಟ್ ಕೀಪರ್ ಗ್ಲೌಸ್ ಧರಿಸಿ ಫೀಲ್ಡಿಂಗ್ ಮಾಡಿದ್ದಕ್ಕೆ ಅಂಪೈರ್ ಪೆನಾಲ್ಟಿಯಾಗಿ 5 ರನ್ ನೀಡಿದ್ದಾರೆ.

    ಆಸ್ಟ್ರೇಲಿಯಾ ದೇಶಿಯಾ ಕ್ರಿಕೆಟ್ ತಂಡಗಳಾದ ಕ್ವೀನ್ಸ್ ಲ್ಯಾಂಡ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳ ನಡುವೆ ಶುಕ್ರವಾರ ನಡೆದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.

    ಕ್ವೀನ್ಸ್ ಲ್ಯಾಂಡ್ ತಂಡದ ವಿಕೆಟ್ ಕೀಪರ್ ಜಿಮ್ಮಿ ಪೀರ್ಸನ್ ಬ್ಯಾಟ್ಸ್ ಮನ್ ಹೊಡೆದ ಬಾಲ್ ಅನ್ನು ಹಿಡಿಯಲು ಹೋಗುವಾಗ ತಮ್ಮ ಕೈಯಲ್ಲಿ ಧರಿಸಿದ್ದ ಗ್ಲೌಸ್ ಅನ್ನು ವಿಕೆಟ್ ಬಳಿ ಎಸೆದು ಒಡಿದ್ದರು. ಈ ವೇಳೆ ಸ್ಲಿಪ್ ನಲ್ಲಿದ್ದ ಮ್ಯಾಥ್ಯೂ ರೆನ್ಷಾ ಕೀಪರ್ ಗ್ಲೌಸ್ ಧರಿಸಿ ಬಾಲನ್ನು ಹಿಡಿದಿದ್ದಾರೆ. ಇನ್ನು ಗಮನಿಸಿದ ಫೀಲ್ಡ್ ನಲ್ಲಿದ್ದ ಅಂಪೈರ್ ಕ್ವೀನ್ಸ್ ಲ್ಯಾಂಡ್ ತಂಡಕ್ಕೆ 5 ರನ್ ಪೆನಾಲ್ಟಿ ನೀಡಿದ್ದಾರೆ.

    ಕ್ರಿಕೆಟ್ ನಿಯಮ 27.1 ರ ಪ್ರಕಾರ ಆಟದ ಮೈದಾನದಲ್ಲಿ ವಿಕೆಟ್ ಕೀಪರ್ ಮಾತ್ರ ಗ್ಲೌಸ್ ಧರಿಸಿ ಕ್ಷೇತ್ರ ರಕ್ಷಣೆ ಮಾಡಲು ಅವಕಾಶವಿದೆ. ಇಲ್ಲಿ ಈ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದಾರೆ.

    ಈ ಕುರಿತು ಪಂದ್ಯದ ನಂತರ ಪ್ರತಿಕ್ರಿಯಿಸಿದ ಮ್ಯಾಥ್ಯೂ ರೆನ್ಷಾ, ಆಟದ ವೇಳೆ ತಮಾಷೆಗಾಗಿ ಗ್ಲೌಸ್ ಧರಿಸಿ ಬಾಲ್ ಪಡೆದೆ. ಇದು ಕ್ರಿಕೆಟ್ ನಿಯಮಗಳ ಉಲ್ಲಂಘನೆ ಎಂದು ತಿಳಿದಿರಲಿಲ್ಲ. ಆದರೆ ನಾನು ಹಾಗೇ ಮಾಡಬಾರದಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ಪಂದ್ಯವನ್ನು ಕ್ವೀನ್ಸ್ ಲ್ಯಾಂಡ್ 215 ರನ್ ಗಳಿಂದ ಗೆದ್ದಿದ್ದರೂ 5 ರನ್ ಪೆನಾಲ್ಟಿ ನೀಡಿದ ಪರಿಣಾಮ ಗೆಲುವಿನ ಅಂತರ 211 ರನ್ ಗೆ ಇಳಿದಿತ್ತು. ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮ್ಯಾಥ್ಯೂ ರೆನ್ಷಾ ಆಸ್ಟ್ರೇಲಿಯಾದ ತಂಡಕ್ಕೆ ಮತ್ತೆ ಮರಳುವ ವಿಶ್ವಾಸದಲ್ಲಿದ್ದಾರೆ.

  • ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ಹೆಗ್ಡೆ ಯಿಂದ ಕೇಸ್ ದಾಖಲು

    ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ಹೆಗ್ಡೆ ಯಿಂದ ಕೇಸ್ ದಾಖಲು

    ಬೆಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣಕ್ಕೆ ಮತ್ತು ಸಮಾಜ ಒಡೆಯುವ ಕೆಲಸಕ್ಕೆ ಉದ್ದೇಶಪೂರ್ವಕವಾಗಿ ಮುಂದಾಗುತ್ತಿರುವವರಿಗೆ ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಫೇಸ್‍ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ಸಚಿವ ಅನಂತ ಕುಮಾರ್ ಹೆಗ್ಡೆ, ಸುಳ್ಳು, ವಿಕೃತ ಸುದ್ಧಿ ಹರಡುವ ಮೂಲಕ ಜನತೆಯ ದಾರಿ ತಪ್ಪಿಸುತ್ತಿರುವವರನ್ನು ಸಹ ನ್ಯಾಯಾಲಯಕ್ಕೆ ಎಳೆಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಸಚಿವರ ಆಪ್ತ ಕಾರ್ಯದರ್ಶಿ ಆಗಿರುವ ಸುರೇಶ ಶೆಟ್ಟಿ ಅವರು ಸಚಿವರ ವಿರುದ್ಧ ಆಕ್ಷೇಪಾರ್ಹ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವವರ ವಿರುದ್ಧ ಶಿರಸಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ಸಚಿವರ ವಿರುದ್ಧ ಶ್ರೇಯಸ್ ಮುರಳ್ಳಿಗೌಡ ಹಾಗೂ ಆನಂದ ರಾಮಣ್ಣ ಎಂಬುವರು ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಹಾಗೂ ನಿಂದನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ. ಈ ಮೂಲಕ ಸಮಾಜದಲ್ಲಿ ಗೊಂದಲ ಹಾಗೂ ಜಾತಿಗಳ ನಡುವೆ ದ್ವೇಷ ಹುಟ್ಟಿಸುವಂತೆ ಪ್ರಚೋದಿಸುವ ಕೃತ್ಯ ಮಾಡುತ್ತಿದ್ದಾರೆ. ಈ ಕುರಿತ ದಾಖಲೆಗಳನ್ನು ಲಗತ್ತಿಸಿಲಾಗಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಸಚಿವರ ಫೇಸ್ ಬುಕ್ ಸ್ಟೇಟಸ್‍ನಲ್ಲಿ ಏನಿದೆ?
    ಸಂವಿಧಾನದ ಮೂಲ ಹಕ್ಕುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಒಂದು. ಯಾವುದೇ ವ್ಯಕ್ತಿ ತನ್ನ ಅಭಿಪ್ರಾಯವನ್ನು ಹೊಂದಲು ಮತ್ತು ವ್ಯಕ್ತಪಡಿಸಲು ನಮ್ಮ ದೇಶದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಇದನ್ನು ಬಳಸಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ವ್ಯಕ್ತಿಯ ಚಾರಿತ್ರ್ಯ ಹರಣಕ್ಕೆ ಮತ್ತು ಸಮಾಜ ಒಡೆಯುವ ಕೆಲಸಕ್ಕೆ ಉದ್ದೇಶಪೂರ್ವಕ ಮುಂದಾದಲ್ಲಿ, ಅದು ಖಂಡಿತವಾಗಿಯೂ ಸಹಿಸಲಾಗದ ಅಪರಾಧವಾಗುತ್ತದೆ.

    ಮಾನ್ಯ ಪ್ರಧಾನ ಮಂತ್ರಿ ಮೋದಿಯವರು ನಮ್ಮ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿ ತಮ್ಮ ಪ್ರತಿಯೊಂದು ಸಭೆಯಲ್ಲೂ ಸರ್ಕಾರದ ಯೋಜನೆಗಳ ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದರೆ, ಕೆಲವು ಪ್ರತಿಪಕ್ಷಗಳು ಹಾಗು ಅದರ ನಾಯಕತ್ವ ವಹಿಸಿದವರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅಕೌಂಟುಗಳ ಸೃಷ್ಟಿಗೆ ಪ್ರೋತ್ಸಾಹ ಕೊಡುತ್ತಿರುವ ಕಾಲವು ಹೌದು. ಇವತ್ತಿನ Digital ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಅನಿಷ್ಟ ಬೆಳವಣಿಗೆ ಬಹಳ ವೇಗವಾಗಿ ಮತ್ತು ಅಪಾಯಕಾರವಾಗಿ ಹರಡುತ್ತಿದೆ.

    ಭಾರತ ವಿಭಿನ್ನ ಸಂಸ್ಕೃತಿಯ ದೇಶ. ಇಲ್ಲಿಯ ವರ್ಣಮಯ ಜೀವನ ಪದ್ಧತಿ, ಪ್ರದೇಶವಾರು ವಿಂಗಡಣೆಗಳು ಆಯಾ ಪ್ರದೇಶದ ಜನಪ್ರತಿನಿಧಿಗಳಿಗೆ ಹತ್ತಿರದಿಂದ ತಿಳಿದಿರುತ್ತದೆ. ವೈಯುಕ್ತಿಕವಾಗಿ ದಲಿತರ ಮತ್ತು ಇತರೆ ಹಿಂದುಳಿದ ಜಾತಿಗಳ ಬಗ್ಗೆ ಅಪಾರ ಗೌರವ ಇರುವ ನಾನು ಅವರ ಶ್ರೀಮಂತ ಸಂಸ್ಕೃತಿ ಮತ್ತು ಆಚರಣೆಗಳನ್ನು ಅತೀವ ಶ್ರದ್ಧೆ ಮತ್ತು ಗೌರವದಿಂದ ಕಾಣುತ್ತಾ ಬಂದಿದ್ದೇನೆ. ಅವರ ಮುಗ್ಧತೆಗೆ ಸಹ ಮಾರು ಹೋಗಿದ್ದೇನೆ. ದೇಶದಲ್ಲಿ ದಲಿತರಿಗೆ ಸಂಪೂರ್ಣ ಸ್ಥಾನಮಾನ ದೊರೆಕಿಸಲು ತಮ್ಮ ಜೀವನವನ್ನೇ ತೇಯ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನನ್ನ ಅಚ್ಚು-ಮೆಚ್ಚಿನ ಆರಾಧ್ಯ ಪುರುಷರು. ಅವರ ಚಿಂತನೆ ಮತ್ತು ಸಮಾಜ ಜೋಡಿಸಿದ ಪರಿ, ಅವರು ದಲಿತರಿಗೆ ಮಾತ್ರವಲ್ಲ, ಇಡೀ ಸಮಸ್ತ ವಿಶ್ವಕ್ಕೆ ಅವರು ನಾಯಕರು. ಇನ್ನು ಕುರುಬ ಜನಾಂಗದವರು ಈ ನಾಡಿನ ಸಂಸ್ಕೃತಿಗೆ ನೀಡಿದ ಕೊಡುಗೆಯಂತೂ ಅನನ್ಯ. ಅವರ ಪರಂಪರೆ ಕೂಡ ಅಷ್ಟೇ ಸ್ಪೂರ್ತಿದಾಯಕ. ಭಕ್ತಿ ಪರಂಪರೆಯಿಂದ ಹಿಡಿದು ದೇಶ ಕಾಯುವ ಶೌರ್ಯ ಮೆರೆಯುವರೆಗೂ ಈ ಜನಾಂಗದವರ ಕೀರ್ತಿ ಅಪಾರ. ಈ ದೇಶದ ಇತಿಹಾಸದಲ್ಲಿ ಕನಕದಾಸರನ್ನು ಭಕ್ತಿಯ ಪರಾಕಾಷ್ಠೆಗೆ ಹೋಲಿಸಿದರೆ, ವೀರ-ಪರಾಕ್ರಮಕ್ಕೆ ಇನ್ನೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದರೆ ಎಂತವರನ್ನು ಬಡಿದೆಬ್ಬಿಸುವುದು. ಇಂತವರನ್ನು ಪಡೆದ ನಾವೇ ಧನ್ಯರು.

    ನನ್ನ ಕ್ಷೇತ್ರದ ಅಭಿವೃದ್ಧಿಗೆ ಮತ್ತು ನಮ್ಮ ಸಮಸ್ತ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯುಳ್ಳ ನಾನು ಎಂದು ಚಿಂತಿಸದ, ಎಲ್ಲಿಯೂ ಹೇಳದ, ಎಲ್ಲಿಯೂ ಬಳಸದ ಪದಗಳನ್ನು ಸೃಷ್ಟಿಸಿ, ಅದಕ್ಕೊಂದು ವ್ಯವಸ್ಥಿತ ರೂಪ ನೀಡಿ ವಿಷ ಹರಡುವ ವಿಕೃತ ಮನೋಸ್ಥಿತಿಗಳ ತಂಡವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ, ವಿಕೃತ ಅವಹೇಳನಕಾರಿ ಮತ್ತು ಅಸಭ್ಯ ರೂಪದಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು, ಈ ವ್ಯಕ್ತಿಗಳು ಮಾಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಸ್ವಾಸ್ಥ್ಯಕ್ಕಾಗಿ, ಜನರ ಹಕ್ಕುಗಳ ಮತ್ತು ವೈಯುಕ್ತಿಕ ಸ್ವಾತಂತ್ರ್ಯದ ರಕ್ಷಣೆಗಾಗಿ ಈ ದುಷ್ಟ-ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಇಂದು ಬಹಳ ಅನಿವಾರ್ಯ ಮತ್ತು ಅವಶ್ಯಕತೆಯಾಗಿದೆ. ಇದು ಕೂಡ ರಾಜ್ಯ ಚುನಾವಣೆಯ ಸಂದರ್ಭದಲ್ಲಿಯೇ ಸೃಷ್ಟಿಯಾಗುತ್ತಿರುವುದು ಇವರ ಕಾರ್ಯ ಸೂಚಿ ಏನೆಂದು ಅರಿಯಬಹುದಾಗಿದೆ. ಕೆಲವು ಮುಗ್ಧ ಭಾಂದವರು ಈ ಸುಳ್ಳು ವದಂತಿಗಳಿಗೆ ಬಲಿಯಾಗುವ ಸಂದರ್ಭವು ಉಂಟು.

    ಇಂತಹ ಕೆಲವು ಸಮಾಜ-ವಿರೋಧಿ ವ್ಯಕ್ತಿಗಳ ವಿವರಗಳು ನಮಗೆ ಲಭ್ಯವಾಗಿದ್ದು, ಈ ವ್ಯಕ್ತಿಗಳು ಫೇಸ್ ಬುಕ್ ಮತ್ತು ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲ-ತಾಣಗಳಲ್ಲಿ ಅವಹೇಳನಕರ ಹೇಳಿಕೆಗಳನ್ನು ನೀಡಿದ್ದು, ಸುಳ್ಳು ಸುದ್ಧಿ ಸೃಷ್ಟಿಸಿ ಸಮಾಜದಲ್ಲಿ ವಿವಿಧ ಸಮುದಾಯಗಳ ನಡುವೆ ಇರುವ ಸಾಮರಸ್ಯ ಕೆಡಿಸುತ್ತಿದ್ದಾರೆ. ಜನತೆಯನ್ನು ದಾರಿ ತಪ್ಪಿಸಲು ಸೋಗಲಾಡಿ ಸಿದ್ಧ ಸರಕಾರವೇ ಇಂತಹ ವ್ಯಕ್ತಿಗಳ ಹಿಂದೆ ನಿಲ್ಲುತ್ತಿರುವುದರಿಂದ ನಾನು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸರ್ಕಾರವೇ ನಮ್ಮದು ಎಂದು ಅಹಂನಿಂದ ವರ್ತಿಸುತ್ತಿರುವ ಈ ಮೂರ್ಖಶಿಖಾಮಣಿಗಳಿಗೆ ಕಾನೂನಿನ ರುಚಿ ತೋರಿಸಲೇಬೇಕಾದ ಅನಿವಾರ್ಯತೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಈ ಶತಮೂರ್ಖರು ಎಷ್ಟೇ ದೊಡ್ಡವರಾದರು ಸಹ ಅವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ.

    ಸಾಮಾಜಿಕ ಜಾಲ-ತಾಣಗಳಲ್ಲದೆ ಬೇರೆ-ಬೇರೆ ವೇದಿಕೆಗಳಲ್ಲಿ, ಜನತೆಯನ್ನು ದಾರಿ ತಪ್ಪಿಸುತ್ತಿರುವ ಎಡ-ಬಿಡಂಗಿಗಳನ್ನು ಸಹ ನ್ಯಾಯಾಲಯಕ್ಕೆ ಎಳೆಯುತ್ತಿದ್ದೇನೆ. ಜನರ ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ. ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇದೊಂದು ಮುನ್ನೆಚ್ಚರಿಕೆಯಾಗಲಿ.

     

  • ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್‍ಐ ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ವಾಯುಪಡೆ ವಿಂಗ್ ಕಾಮಾಂಡರ್ ಆರುಣ್ ಮರ್ವಾಹಾ (51) ಬಂಧಿತ ಅಧಿಕಾರಿ. ಪಾಕಿಸ್ತಾನ ಐಎಸ್‍ಐ ನ ಇಬ್ಬರು ಏಜೆಂಟ್‍ಗಳು ತಾವು ಮಹಿಳೆಯರೆಂದು ಬಿಂಬಿಸಿ ಹನಿಟ್ರ್ಯಾಪ್ ಮಾಡಿ ವಾಟ್ಸಪ್ ಮೂಲಕ ವಾಯುಪಡೆಯ ಪ್ರಮುಖ ದಾಖಲೆಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಕಾಮಾಂಡರ್ ಆರುಣ್ ದೆಹಲಿಯ ಐಎಎಫ್ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ. ಆರುಣ್ ಮುಂದಿನ ವರ್ಷ ಕೆಲಸದಿಂದ ನಿವೃತ್ತಿ ಹೊಂದಬೇಕಿತ್ತು ಎಂದು ವರದಿಯಾಗಿದೆ.

    ಮಹಿಳೆಯರ ಹೆಸರಲ್ಲಿ ನಕಲಿ ಖಾತೆ ಹೊಂದಿದ್ದ ಪಾಕಿಸ್ತಾನದ ಐಎಸ್‍ಐ ಏಜೆಂಟ್‍ಗಳ ಜೊತೆ ಅಧಿಕಾರಿ ಫೇಸ್‍ಬುಕ್ ನಲ್ಲಿ ಕೆಲ ತಿಂಗಳ ಹಿಂದೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ವಾಟ್ಸಪ್‍ನಲ್ಲಿ ನಿರಂತರ ಚಾಟ್ ಮಾಡುತ್ತಿದ್ದರು. ಸಲಿಗೆಯ ಸಂದೇಶಗಳನ್ನ ವಿನಿಮಯ ಮಾಡಿಕೊಂಡಿದ್ದರು. ಏಜೆಂಟ್‍ಗಳು ಅಧಿಕಾರಿಯ ವಿಶ್ವಾಸ ಗಳಿಸಿದ ಬಳಿಕ, ಅಶ್ಲೀಲ ಫೋಟೋಗಳಿಗೆ ಬದಲಿಯಾಗಿ ರಹಸ್ಯ ಮಾಹಿತಿಯುಳ್ಳ ದಾಖಲೆಗಳನ್ನ ಅಧಿಕಾರಿಯಿಂದ ಪಡೆದಿದ್ದಾರೆ. ಅಧಿಕಾರಿ ಹಂಚಿಕೊಂಡ ಮಾಹಿತಿ ಸೈಬರ್ ವಾರ್ ಫೇರ್, ಸ್ಪೇಸ್ ಮತ್ತು ವಿಶೇಷ ಕಾರ್ಯಾಚರಣೆಗಳದ್ದಾಗಿದೆ ಎಂದು ವರದಿಯಾಗಿದೆ.

    ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಕೆಲವು ವಾರಗಳ ಹಿಂದೆ ಈ ಬಗ್ಗೆ ಪತ್ತೆ ಮಾಡಿದ ನಂತರ ಆಂತರಿಕ ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಆರುಣ್ ಅವರ ಪಾತ್ರವಿರುವುದು ಸಾಬೀತಾದ ಬಳಿಕ ವಾಯುಪಡೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. 10 ದಿನಗಳ ವಿಚಾರಣೆಯ ಬಳಿಕ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನ ಪೊಲೀಸರಿಗೆ ಹಸ್ತಾಂತರಿಸಿದೆ.

    ಗುರುವಾರ ಆರುಣ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅರುಣ್ ಅವರನ್ನ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಟ್ಟಡದೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ ಬಂಧನದ ವೇಳೆ ಅರುಣ್ ಮೊಬೈಲ್‍ನೊಂದಿಗೆ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಪಾಕಿಸ್ತಾನದ ಇನ್ನೂ ದೊಡ್ಡ ಬೇಹುಗಾರಿಕೆಯಲ್ಲಿ ಅರುಣ್ ಪಾತ್ರವಿದೆಯಾ ಎಂಬ ಬಗ್ಗೆ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪರಿಶೀಲನೆ ನಡೆಸುತ್ತಿದೆ.

  • ತನ್ನ ವಿರುದ್ಧ ಟೀಕೆಗಳಿಗೆ ಕೊನೆಗೂ ಮೌನ ಮುರಿದ ರಮ್ಯಾ

    ತನ್ನ ವಿರುದ್ಧ ಟೀಕೆಗಳಿಗೆ ಕೊನೆಗೂ ಮೌನ ಮುರಿದ ರಮ್ಯಾ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಭಾಷಣ ವಿರುದ್ಧ ವ್ಯಂಗ್ಯವಾಡಿ ಟ್ವೀಟ್ ಮಾಡಿದ್ದ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ತಮ್ಮ ವಿರುದ್ಧದ ಟೀಕೆಗಳ ವಿರುದ್ಧ ಮೌನ ಮುರಿದಿದ್ದಾರೆ.

    ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣಗಳ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅವರು ತಮ್ಮ ವಿರುದ್ಧದ ಟೀಕೆ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರಧಾನಿ ಮೋದಿ ಕುರಿತದ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದ ಪಾಟ್ ಪದದ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಮೋದಿ ಹೇಳಿರುವ ಅರ್ಥದಲ್ಲಿಯೇ ಪೊಟ್ಯಾಟೋ, ಆನಿಯನ್, ಟೊಮೆಟೊ ಅರ್ಥವನ್ನೇ ಹೇಳಿದ್ದೇನೆ. ಅಕ್ಷರಗಳನ್ನು ಉಲ್ಟಾ ಬರೆದಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ಫೇಕ್ ಅಕೌಂಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಆ ರೀತಿ ಪಾಠ ಮಾಡಿಲ್ಲ. ಆದರೆ ಪಕ್ಷಕ್ಕೆ ಒಂದು, ವೈಯಕ್ತಿಕ ವಿಚಾರಕ್ಕೆ ಒಂದು ಅಕೌಂಟ್ ಇಟ್ಟುಕೊಳ್ಳಿ ಎಂದು ಹೇಳಿದ್ದೇನೆ. ಆದರೆ ನಾನು ಮಲ್ಟಿಪಲ್ ಅಕೌಂಟ್ ಬಗ್ಗೆ ಹೇಳಿದ್ದೆ. ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಎಂದು ನಾನು ಎಂದು ಹೇಳಿಲ್ಲ. ಮಲ್ಟಿಪಲ್ ಅಕೌಂಟ್ ಮತ್ತು ನಕಲಿ ಅಕೌಂಟ್ ವ್ಯತ್ಯಾಸವಿದೆ ಎಂದು ಸ್ಪಷ್ಟನೆ ನೀಡಿದರು.  ಇದನ್ನೂ ಓದಿ: ರಮ್ಯಾ ಒಬ್ಬಳು ವಯ್ಯಾರಿ, ನಟನೆ ಮಾಡೋದಷ್ಟೆ ಅವಳ ಕೆಲಸ : ಸೊಗಡು ಶಿವಣ್ಣ

    ನಟ ಜಗ್ಗೇಶ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಅವರು ದೊಡ್ಡವರು ನಾನೇನು ಮಾತನಾಡಲ್ಲ ಎಂದರು.  ಇದನ್ನೂ ಓದಿ: ರಮ್ಯಾ ವಿರುದ್ಧ ಸೈಬರ್ ಕ್ರೈಂಗೆ ದೂರು

  • ಹೋಟೆಲ್ ಉದ್ಘಾಟನೆಗೆ ಬನ್ನಿ ಎಂದು ಆಹ್ವಾನಿಸಿದ ಮಹಿಳೆಗೆ ಪೋಲಿ ಮೆಸೇಜ್ ಕಳಿಸಿದ ಪೇದೆ

    ಹೋಟೆಲ್ ಉದ್ಘಾಟನೆಗೆ ಬನ್ನಿ ಎಂದು ಆಹ್ವಾನಿಸಿದ ಮಹಿಳೆಗೆ ಪೋಲಿ ಮೆಸೇಜ್ ಕಳಿಸಿದ ಪೇದೆ

    ಮೈಸೂರು: ಹೊಸ ಫಾಸ್ಟ್ ಫುಡ್ ಸೆಂಟರ್ ನ ಉದ್ಘಾಟನೆಗೆ ಬಂದು ನಮ್ಮನ್ನು ಹರಸಿ ಎಂದು ಪರಿಚಯದ ಪೊಲೀಸ್ ಪೇದೆಗೆ ಫೇಸ್‍ಬುಕ್ ಮೂಲಕ ಆಹ್ವಾನ ನೀಡಿದ ಮಹಿಳೆಯೊಬ್ಬರಿಗೆ ಅಸಭ್ಯವಾಗಿ ಕೊಟ್ಟ ಪ್ರತಿಕ್ರಿಯೆಯಿಂದ ಪೇದೆಯ ಮಾನ ಹರಾಜಾಗುತ್ತಿರುವ ಘಟನೆ ಮೈಸೂರು ನಗರದಲ್ಲಿ ನಡೆದಿದೆ.

    ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇದೆ ರಾಜು ಎಂಬವರೇ ಮಹಿಳೆಗೆ ಅಸಭ್ಯ ಮೆಸೇಜ್ ಮಾಡಿದ ಪೇದೆ. ಈ ಕುರಿತು ಪೇದೆ ರಾಜು ವಿರುದ್ಧ ಮಹಿಳೆ ಲಕ್ಷ್ಮೀಪುರಂಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹಿಳೆ, ನಾನು ಪರಿಚಯವಿದ್ದ ಕಾರಣ ಅವರಿಗೆ ಆಹ್ವಾನ ನೀಡಿದೆ. ಆದರೆ ರಾಜು ಅವರು ದುರುದ್ದೇಶದಿಂದ ಈ ರೀತಿ ಕಮೆಂಟ್ ಮಾಡಿದ್ದಾರೆ. ಈ ಕುರಿತ ದಾಖಲೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ನಡೆದಿದ್ದೇನು: ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಮಹಿಳೆಯೊಬ್ಬರು ಹೊಸದಾಗಿ ಫಾಸ್ಟ್ ಫುಡ್ ಹೋಟೆಲ್ ಆರಂಭಿಸಿದ್ದಾರೆ. ಆಗ ತಮಗೆ ಪರಿಚಯವಿದ್ದ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೇದೆ ರಾಜು ಅವರಿಗೆ ಹೋಟೆಲ್‍ನ ಉದ್ಘಾಟನೆಗೆ ಬನ್ನಿ ಎಂದು ಫೇಸ್ ಬುಕ್ ನಲ್ಲಿ ಮೆಸೇಜ್ ಕಳಿಸಿ ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೇದೆ ರಾಜು, ಹೀಗೆ ಸುಂದರವಾದ ಹುಡುಗಿ ಕರೆದರೆ ಯಾರು ಹೋಟೆಲ್‍ಗೆ ಬರೋಲ್ಲ ಹೇಳು? ಹೋಟೆಲ್ ಗೆ ಮೊದಲು ಬಂದವರಿಗೆ ತಿಂಡಿ, ಊಟ ಫ್ರೀನಾ? ಎಂದು ಗೃಹಿಣಿಗೆ ಅಸಭ್ಯವಾಗಿ ರಿಪ್ಲೈ ಮಾಡಿದ್ದಾರೆ.

    ಇದಕ್ಕೆ ಮರು ಉತ್ತರ ನೀಡಿರುವ ಗೃಹಿಣಿ ನಿಮ್ಮ ತಂಗಿಯೆಂದು ಹೋಟೆಲ್ ಗೆ ಬನ್ನಿ ಎಂದು ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ಮೇಸೆಜ್ ನೋಡಿದ ಗೃಹಿಣಿ ಸಹೋದರ ಹಾಗೂ ಪೋಷಕರು ಗೃಹಿಣಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದೆಲ್ಲದರಿಂದ ಮನನೊಂದ ಗೃಹಿಣಿ ಪೇದೆ ರಾಜು ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.