Tag: ಸಾಫ್ಟ್ ವೇರ್

  • ಕೆಲಸ ಕಳೆದುಕೊಂಡ ಟೆಕ್ಕಿ, ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟಳು

    ಕೆಲಸ ಕಳೆದುಕೊಂಡ ಟೆಕ್ಕಿ, ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟಳು

    ಹೈದರಾಬಾದ್: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಸಾಫ್ಟ್ ವೇರ್  ಉದ್ಯೋಗಿ ಮಹಿಳೆ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಸ್ವಾರ್ತಿ ಕುಸುಮಾ (32)ಮೃತಳಾಗಿದ್ದಾಳೆ. ಈಕೆ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಳು. ಆರ್ಥಿಕ ಸಂಕಷ್ಟಕ್ಕೆ ಬೇಸತ್ತು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    POLICE JEEP

    ಸ್ವಾರ್ತಿ ಕುಸುಮಾ, ಪತಿ ಸಾಯಿಕುಮಾರ್ ಇಬ್ಬರೂ ಕೊರೊನಾ ಸಮಯದಲ್ಲಿ ಸಾಫ್ಟ್ ವೇರ್ ಉದ್ಯೋಗ ಕಳೆದುಕೊಂಡಿದ್ದರು. ಕೆಲಸ ಕಳೆದುಕೊಂಡ ನಂತರ ಸಾಯಿಕುಮಾರ್ ಕಾಲ್ ಸೆಂಟರ್‌ನಲ್ಲಿ ಕಡಿಮೆ ಸಂಬಳಕ್ಕೆ ಸೇರಿಕೊಂಡಿದ್ದರು. ಸ್ವಾತಿ ಅವರು ಮನೆಯಲ್ಲೇ ಇದ್ದರು. ಇದನ್ನೂ ಓದಿ: ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

    ಪತಿ ಸಾಯಿಕುಮಾರ್‌ಗೆ ಬರುತ್ತಿದ್ದ ಸಂಬಳ ಮಕ್ಕಳ ಫೀಸಿಗೂ ಸಾಕಾಗುತ್ತಿಲ್ಲವೆಂದು ಸ್ವಾತಿ ಚಿಂತಿತರಾಗಿದ್ದರು ಎನ್ನಲಾಗಿದೆ. ಸಾಯಿಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ ಬೆಡ್ ರೂಮಿನಲ್ಲಿ ಆತ್ಮಹತ್ಯೆ ನೋಟ್ ಬರೆದು ಸ್ವಾತಿ 5 ವರ್ಷದ ಮಗ ಮಗು 3 ವರ್ಷದ ಮಗಳನ್ನು ಕೊಂದು ತಾವೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ ಪ್ರಧಾನಿಗೆ ಭಗವದ್ಗೀತೆ ಗಿಫ್ಟ್ ಕೊಟ್ಟ ಐರಾವತ ನಟಿ

  • ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಸಾಫ್ಟ್‌ವೇರ್ ಕ್ಷೇತ್ರದಿಂದ ಬಂದ ಪ್ರತಿಭಾವಂತ ನಟ ಹರೀಶ್ ಅರಸು!

    ಬದುಕಿನ ಅನಿವಾರ್ಯತೆಗಳು ಅದೆತ್ತೆತ್ತ ಅಲೆಸಿದರೂ ಕಲಾಸಕ್ತಿ ಎಂಬುದು ಯಾವ ಮಾಯಕದಲ್ಲಾದರೂ ತನ್ನ ತಕ್ಕೆಗೆ ಸೆಳೆದುಕೊಂಡು ಬಿಡುತ್ತದೆ. ಈ ಮಾತಿಗೆ ಉದಾಹರಣೆಯಂಥಾ ನೂರಾರು ಮಂದಿ ಚಿತ್ರರಂಗದಲ್ಲಿ ಸಿಗುತ್ತಾರೆ. ಅಂಥಾ ತೀವ್ರವಾದ ಸಿನಿಮಾಸಕ್ತಿಯೇ ಅಂಥವರನ್ನೆಲ್ಲ ನಟ ನಟಿಯರಾಗಿ, ಇತರೇ ವಿಭಾಗಗಳ ಪರಿಣಿತರನ್ನಾಗಿ, ಸಾಧಕರನ್ನಾಗಿ ನೆಲೆಗಾಣಿಸಿರುತ್ತದೆ. ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಹಾದಿಯಲ್ಲಿರುವವರು ಉದಯೋನ್ಮುಖ ನಟ ಹರೀಶ್ ಅರಸು.

    ಹರೀಶ್ ಅವರದ್ದು ಬಹುಮುಖ ಪ್ರತಿಭೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಹರೀಶ್ ಬದುಕಿನ ಅನಿವಾರ್ಯತೆಗೆ ಬಿದ್ದು ನಾನಾ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಸದ್ಯಕ್ಕೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸಿನಿಮಾ ಪ್ರಮೋಶನ್ ಕಾರ್ಯದಲ್ಲಿ ಗುರುತಿಸಿಕೊಂಡಿರೋ ಹರೀಶ್ ಪಾಲಿಗೆ ಸಿನಿಮಾ ಎಂಬುದೇ ತನ್ನ ಐಡೆಂಟಿಟಿಯಾಗಬೇಕೆಂಬ ಆಳದ ಬಯಕೆಯಿದೆ. ಬಹುಶಃ ಅದಿಲ್ಲದೇ ಹೋಗಿದ್ದರೆ ನಟನೆಯ ಗುಂಗು ಹತ್ತಿಸಿಕೊಂಡು ಐಟಿ ಕ್ಷೇತ್ರದಿಂದ ಸಿನಿಮಾ ಕ್ಷೇತ್ರದತ್ತ ವಾಲಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲವೇನೋ…

    ಇದುವರೆಗೂ ಹಲವಾರು ಕಿರುಚಿತ್ರಗಳಲ್ಲಿ ನಟಿಸಿ ಅನುಭವ ಹೊಂದಿರುವ ಹರೀಶ್ ಅರಸು ಪೂರ್ಣಪ್ರಮಾಣದಲ್ಲಿ ನಟನಾಗಿ ಗುರುತಿಸಿಕೊಂಡಿದ್ದು ‘ಕನ್ನಡ ದೇಶದೊಳ್’ ಎಂಬ ಸಿನಿಮಾ ಮೂಲಕ. ಅದರಲ್ಲಿ ಅಪ್ಪಟ ಕನ್ನಡಪ್ರೇಮಿ ಹುಡುಗನಾಗಿ ನಟಿಸಿದ್ದ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದ್ದರು. ನಟನಾಗಿ ಸಿನಿಮಾದಲ್ಲಿ ಅದು ಅವರ ಪಾಲಿಗೆ ಮೊದಲ ಅನುಭವ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಗಳಿಂದ ಭರವಸೆ ತುಂಬಿಕೊಂಡಿರುವ ಅವರೀಗ ‘ಧೀರ ಸಾಮ್ರಾಟ್’ ಎಂಬ ಸಿನಿಮಾದಲ್ಲಿ ಮಹತ್ವದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಒಂದೊಳ್ಳೆ ಕಥೆ ಹೊಂದಿರುವ ಈ ಸಿನಿಮಾದಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಇದರ ಜೊತೆಗೆ ಮತ್ತೊಂದು ಸಿನಿಮಾ ಅವಕಾಶವೂ ಅವರ ಕೈಲಿದೆ. ಅದರ ಬಗ್ಗೆ ಇಷ್ಟರಲ್ಲಿಯೇ ಮಾಹಿತಿಗಳು ಜಾಹೀರಾಗಲಿವೆ.

    ಹೀಗೆ ಸಾಫ್ಟ್‍ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಲೇ ಸಿನಿಮಾ ರಂಗವನ್ನೇ ಪ್ರಧಾನವಾಗಿ ಆಯ್ಕೆ ಮಾಡಿಕೊಂಡಿರುವ ಹರೀಶ್ ಮೂಲತಃ ಕಡೂರಿನ ವಡೆಯರಳ್ಳಿಯವರು. ಮಧ್ಯಮ ವರ್ಗದ ರೈತಾಪಿ ಕುಟುಂಬದಿಂದ ಬಂದಿರುವ ಅವರಿಗೆ ಹಳ್ಳಿಯ ಸಹಜ ವಾತಾವರಣವೇ ಕಲೆಗಳ ಗುಂಗು ಹತ್ತುವಂತೆ ಮಾಡಿತ್ತು. ಆ ಕಾಲಕ್ಕೆ ಹರೀಶ್ ಅವರನ್ನು ಬಹುವಾಗಿ ಸೆಳೆದುಕೊಂಡಿದ್ದದ್ದು ನೃತ್ಯ. ಹಳ್ಳಿ ಕಾರ್ಯಕ್ರಮಗಳಲ್ಲಿ ಮೈಮರೆತು ಎಲ್ಲರೂ ಮೆಚ್ಚುವಂತೆ ನೃತ್ಯ ಮಾಡುತ್ತಿದ್ದ ಹರೀಶ್ ಆ ಕಾಲದಲ್ಲಿಯೇ ತಮ್ಮ ಹಳ್ಳಿಯಲ್ಲಿ ಪ್ರತಿಭಾವಂತರಾಗಿ ಗುರುತಿಸಿಕೊಂಡಿದ್ದವರು.

    ಇವರ ತಾತ ಗಂಗಯ್ಯ ಕಡೂರು ಸೀಮೆಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ ನಟನಾಗಿ ಪ್ರಸಿದ್ಧರಾಗಿದ್ದರಂತೆ. ಅವರು ಸುತ್ತಲ ಹತ್ತೂರುಗಳಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿರುವವರು. ಬಹುಶಃ ತಾತನ ಕಲಾಸಕ್ತಿಯ ಒಂದಂಶ ಹರೀಶ್ ಅವರೊಳಗೂ ಪ್ರವಹಿಸಿದ್ದರಿಂದಲೇ ಅವರೊಳಗೆ ಕಲಾಸಕ್ತಿ ಹುಟ್ಟಿಕೊಂಡಿದ್ದರೂ ಅಚ್ಚರಿಯೇನಿಲ್ಲ. ಶಾಲಾ ಕಾಲೇಜು ಹಂತದಲ್ಲಿ ಸಿನಿಮಾಸಕ್ತಿ ಇದ್ದರೂ ಆ ಕ್ಷಣದಲ್ಲಿ ಹರೀಶ್ ಅವರಿಗೆ ಬದುಕು ಕಟ್ಟಿಕೊಳ್ಳುವುದೇ ಮುಖ್ಯವಾಗಿತ್ತು. ಇದರಿಂದಾಗಿಯೇ ಸಾಫ್ಟ್‍ವೇರ್ ವಲಯದಲ್ಲಿ ಟ್ರಾನ್ಸ್‍ಪೋರ್ಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸಲಾರಂಭಿಸಿದ್ದರು.

    ಆ ನಂತರದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಫೇಸ್‍ಬುಕ್‍ನಲ್ಲಿ ವಾರಕ್ಕೊಂದರಂತೆ ಪ್ರಸಾರವಾಗುತ್ತಿದ್ದ ಸೀರೀಸ್‍ನಲ್ಲಿ ನಟಿಸಲಾರಂಭಿಸಿದ್ದರು. ಆ ನಂತರ ಒಂದಷ್ಟು ಕಿರುಚಿತ್ರಗಳಲ್ಲಿಯೂ ಹರೀಶ್ ನಟಿಸಿದ್ದರು. ಹೀಗೆ ಹಂತ ಹಂತವಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿಕೊಂಡು ಸಾಗಿ ಬಂದ ಹರೀಶ್ ಇದೀಗ ನಟನಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ನಟನಾಗಿಯೇ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹೊಂದಿದ್ದಾರೆ. ಯಾವ ಪಾತ್ರವಾದರೂ ಮಾಡುವ ಛಾತಿ ಹೊಂದಿರೋ ಹರೀಶ್ ಅರಸು ಮತ್ತೊಂದಷ್ಟು ಅವಕಾಶ ಗಿಟ್ಟಿಸಿಕೊಂಡು ನಟನಾಗಿ ನೆಲೆ ಕಂಡುಕೊಳ್ಳುವ ಲಕ್ಷಣಗಳೇ ದಟ್ಟವಾಗಿವೆ.

  • 600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿ ವಂಚಿಸಿದ್ದ ಟೆಕ್ಕಿ ಕೊನೆಗೂ ಅರೆಸ್ಟ್

    600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿ ವಂಚಿಸಿದ್ದ ಟೆಕ್ಕಿ ಕೊನೆಗೂ ಅರೆಸ್ಟ್

    ಹೈದರಾಬಾದ್: ಕರ್ನಾಟಕ ಸೇರಿದಂತೆ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿದ್ದ ಚೆನ್ನೈ ಮೂಲದ ಖತರ್ನಾಕ್ ಟೆಕ್ಕಿಯನ್ನು ಸೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಕ್ಲೆಮಂಟ್ ರಾಜ್ ಅಲಿಯಾಸ್ ಪ್ರದೀಪ್(33) ಬಂಧಿತ ಟೆಕ್ಕಿ. ಸ್ಥಳೀಯ ಯುವತಿ ನೀಡಿದ ದೂರಿನ ಆಧಾರದಲ್ಲಿ ಸೈದರಾಬಾದ್ ಪೊಲೀಸರು ಚೆನ್ನೈಗೆ ತೆರಳಿ ಆತನನ್ನು ಬಂಧಿಸಿದ್ದಾರೆ.

    ಚೆನ್ನೈನ ಪ್ರಖ್ಯಾತ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಫೈವ್ ಸ್ಟಾರ್ ಹೋಟೆಲ್ ಕಂಪನಿಯಲ್ಲಿ ನಕಲಿ ಮಾನವ ಸಂಪನ್ಮೂಲ ಅಧಿಕಾರಿ(ಎಚ್‍ಆರ್) ಎಂದು ನಂಬಿಸಿ ಯುವತಿಯರಿಗೆ ಸಂದರ್ಶನ ಮಾಡುತ್ತಿದ್ದ. ನಂತರ ಯುವತಿಯರ ಖಾಸಗಿ ಫೋಟೋಗಳನ್ನು ಪಡೆದು ಶೋಷಣೆ ಮಾಡುತ್ತಿದ್ದ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದ ವಿಚಾರವನ್ನು ಆತ ವಿಚಾರಣೆಯ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.

    ಮದುವೆಯಾಗಿದ್ದ ಪ್ರದೀಪ್ ಸಾಫ್ಟ್ ವೇರ್ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಈತನ ಪತ್ನಿ ಬೆಳಗಿನ ಜಾವ ಉದ್ಯೋಗಕ್ಕೆ ಹೋಗುತ್ತಿದ್ದಳು. ಪತ್ನಿ ಉದ್ಯೋಗಕ್ಕೆ ತೆರಳಿದ ನಂತರ ಪ್ರಸಿದ್ಧ ಇ ಕ್ಲಾಸಿಫೈಡ್ ತಾಣದಲ್ಲಿ ಏಕಾಂಗಿತನವನ್ನು ಕಳೆಯಲು ಯುವತಿಯರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದ. ನಂತರ ತನ್ನ ವಿಕೃತ ಸುಖಕ್ಕಾಗಿ ಅವರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕೃತ್ಯ ಹೇಗೆ ಎಸಗುತ್ತಿದ್ದ?
    ದೇಶದ ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲಿನ ಎಚ್‍ಆರ್ ಎಂದು ಬಿಂಬಿಸಿಕೊಂಡಿದ್ದ ಪ್ರದೀಪ್ ತಾನು ಪಡೆದುಕೊಂಡಿದ್ದ ನಂಬರಿಗೆ ಕರೆ ಮಾಡಿ, ಸುಂದರವಾಗಿರುವ ಯುವತಿಯರನ್ನು ನೇಮಕ ಮಾಡುವಂತೆ ಕಂಪನಿ ಸೂಚಿಸಿದೆ. ಹೀಗಾಗಿ ಸುಂದರವಾಗಿರುವ ಯುವತಿಯರನ್ನು ಸರ್ಚ್ ಮಾಡುತ್ತಿದ್ದಾಗ ನಿಮ್ಮ ನಂಬರ್ ಸಿಕ್ಕಿತು ಎಂದು ಆರಂಭದಲ್ಲಿ ಹೇಳಿ ಸಂದರ್ಶನ ಮಾಡುತ್ತಿದ್ದ. ತನ್ನ ಇಂಗ್ಲಿಷ್ ಸಂವಹನ ಕರೆಗೆ ಯುವತಿಯರು ಬೀಳುತ್ತಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆ ಎರಡನೇ ಹಂತದ ಸಂದರ್ಶನವನ್ನು ನನ್ನ ಮಹಿಳಾ ಸಹೋದ್ಯೋಗಿ ಮಾಡುತ್ತಾರೆ ಎಂದು ನಂಬಿಸಿದ್ದ.

    ತನ್ನ ಖೆಡ್ಡಾಗೆ ಯುವತಿಯರು ಬಿದ್ದಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ ಪ್ರದೀಪ್ ಬೇರೆ ಫೋನ್ ನಂಬರ್ ಮೂಲಕ ಕರೆ ಮಾಡಿ, ನಮ್ಮ ಕಂಪನಿ ವಿಶೇಷವಾಗಿ ಯುವತಿಯರ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಹೀಗಾಗಿ ನಿಮ್ಮ ದೇಹದ ಸಂಪೂರ್ಣ ವಿಡಿಯೋ ಕಳುಹಿಸಿ ಎಂದು ಕೇಳುತ್ತಿದ್ದ. ಇದಾದ ಬಳಿಕ ವಾಟ್ಸಪ್ ವಿಡಿಯೋ ಕಾಲ್ ಮಾಡಿ ದೇಹದ ಬಟ್ಟೆಯನ್ನು ತೆಗೆಯುವಂತೆ ಹೇಳುತ್ತಿದ್ದ. ಯುವತಿಯರು ದೇಹದ ವಸ್ತ್ರವನ್ನು ತೆಗೆಯುತ್ತಿರುವುದನ್ನು ಸಾಫ್ಟ್ ವೇರ್ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.

    ಫೋಟೋ ಮತ್ತು ವಿಡಿಯೋವನ್ನು ಗ್ಯಾಲರಿಯಲ್ಲಿ ಪಾಸ್‍ವರ್ಡ್ ಹಾಕಿ ಸೇವ್ ಮಾಡುತ್ತಿದ್ದ. ಈಗ ಆತನ ಬಳಿಯಿದ್ದ ಮೊಬೈಲ್ ಫೋನನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ. ವಂಚನೆಗೆ ಒಳಗಾದ ಯುವತಿಯರಿಂದ ಲಕ್ಷಗಟ್ಟಲೇ ಅಧಿಕ ಹಣವನ್ನು ಸಂಪಾದಿಸಿದ್ದಾನೆ. ವಿಚಾರಣೆಯ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • 50ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್: ಬೆಂಗ್ಳೂರು ಟೆಕ್ ಕಂಪೆನಿಯ ಮಾಜಿ ಉದ್ಯೋಗಿ ಅರೆಸ್ಟ್

    50ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್: ಬೆಂಗ್ಳೂರು ಟೆಕ್ ಕಂಪೆನಿಯ ಮಾಜಿ ಉದ್ಯೋಗಿ ಅರೆಸ್ಟ್

    ಚೆನ್ನೈ: 50ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯೊಬ್ಬನನ್ನು ಗುರುವಾರ ತಮಿಳುನಾಡಿನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

    ಮದನ್ ಅರಿವಲಗನ್(28) ಬಂಧಿತ ಆರೋಪಿ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಅವರನ್ನು ಬೆದರಿಸುತ್ತಿದ್ದ ವಿಚಾರವೂ ಈಗ ಬೆಳಕಿಗೆ ಬಂದಿದೆ.

    ಕೃಷ್ಣಗಿರಿ ಜಿಲ್ಲೆಯ ಮತ್ತೂರ್ ಮೂಲದ ಮದನ್ ಬಂಧಿಸಿ ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿರುವ ಹಲವು ರೇಪ್ ವಿಡಿಯೋಗಳನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ.

    ಕೃತ್ಯ ಹೀಗೆ ಎಸಗುತ್ತಿದ್ದ:
    ಒಬ್ಬಂಟಿಯಾಗಿ ನೆಲೆಸಿರುವ ಮಹಿಳೆಯರನ್ನು ಪತ್ತೆ ಮಾಡಿ ಕಳ್ಳತನ ಮಾಡುತ್ತಿದ್ದ. ಬಳಿಕ ಬೆದರಿಸಿ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈ ವೇಳೆ ತನ್ನ ಕೃತ್ಯವನ್ನು ವಿಡಿಯೋ ಮಾಡುತ್ತಿದ್ದ. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ವ್ಯಕ್ತಿಯೊಬ್ಬ ಚಾಕು ತೋರಿಸಿ 8,500 ರೂ. ಹಣವನ್ನು ದೋಚಿದ್ದಾರೆ ಎಂದು ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮದನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲ ಕೃತ್ಯ ಬೆಳಕಿಗೆ ಬಂದಿದೆ.

    ರೇಪ್ ಎಸಗ್ತಿದ್ದಿದ್ದು ಯಾಕೆ?
    ಒಂದು ಬಾರಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ. ಈ ವೇಳೆಗೆ ಮಹಿಳೆಯನ್ನು ಬೆದರಿಸಿ ರೇಪ್ ಮಾಡಿದ್ದ. ನಂತರ ಕಳ್ಳತನ ಎಸಗಲು ಹೋಗಿ ಬೆದರಿಸಿ ರೇಪ್ ಮಾಡುವ ಕೆಟ್ಟ ಹವ್ಯಾಸವನ್ನು ಆರಂಭಿಸಿದ್ದ. ಈತನಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಯಾರೂ ದೂರು ನೀಡದೇ ಇದ್ದ ಕಾರಣ ಕೃತ್ಯ ಬೆಳಕಿಗೆ ಬಂದಿರಲಿಲ್ಲ.

    ಬಿಎಸ್‍ಸಿ ಪದವಿಧರ:
    ಕೃಷ್ಣಗಿರಿ ಕಾಲೇಜಿನಲ್ಲಿ ಬಿಎಸ್‍ಸಿ(ಗಣಿತ) ಪದವಿ ಓದಿದ ಬಳಿಕ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದೋಗ್ಯದಲ್ಲಿದ್ದ. 2015ರಲ್ಲಿ ಚೆನ್ನೈಗೆ ಬಂದಿದ್ದ ಈತ ಉದ್ಯೋಗ ಹುಡುಕುತ್ತಿದ್ದ. ಈ ವೇಳೆ ಈತನಿಗೆ ಸರಿಯಾದ ಉದ್ಯೋಗ ಸಿಗದೇ ಇದ್ದ ಕಾರಣ ಕಳ್ಳತನ ವೃತ್ತಿಗೆ ಇಳಿದು ತನ್ನ ಕಾಮ ಕೃತ್ಯವನ್ನು ಮುಂದುವರಿಸಿದ್ದ.

    ವಿಚಾರಣೆಯ ವೇಳೆ ನಾನು ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದೇನೆ ಎಂಬುದನ್ನು ಮದನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ ಲಾಡ್ಜ್ ಗೆ ಕರೆದೊಯ್ದು 4 ಜನರಿಂದ 10 ದಿನಗಳ ಕಾಲ ನಿರಂತರ ಅತ್ಯಾಚಾರ

    ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಅತ್ಯಾಚಾರಗೈದ ಕಾಮಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ರು

     

  • ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಬೆಂಗಳೂರು: ಇನ್ಫೋಸಿಸ್  ಕಂಪೆನಿಯ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯುಬಿ ಪ್ರವೀಣ್ ರಾವ್ ಅವರ ಸಂಬಳ ಏರಿಸಿದ್ದಕ್ಕೆ ಸಂಸ್ಥಾಪಕ ನಾರಾಯಣ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಸಂಬಳವನ್ನು ಏರಿಸಿದ್ದು ಯಾಕೆ ಎಂದು ಪ್ರಶ್ನಿಸಿ ನಾರಾಯಣ ಮೂರ್ತಿ ಮಾಧ್ಯಮ ಸಂಸ್ಥೆಗೆ ಇಮೇಲ್ ಮಾಡಿದ್ದಾರೆ.

    ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಸಂಬಳವನ್ನು ಏರಿಸಿದರೆ, ಪ್ರವೀಣ್ ರಾವ್ ಅವರಿಗೆ ಶೇ.60ರಿಂದ ಶೇ.70ರಷ್ಟು ಸಂಬಳ ಏರಿಸಿದ್ದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಸಂಬಳ ಏರಿಸಿದ್ದು ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸ ಕಡಿಮೆಯಾಗಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಪ್ರವೀಣ್ ನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ನಾನು ಇನ್‍ಫೋಸಿಸ್‍ನಲ್ಲಿ ಇದ್ದಾಗ ಆತನನ್ನು ಬೆಳೆಸಿದ್ದೆ. ಆದರೆ ಆ ಬಳಿಕ ಆತನನ್ನು ಸೈಡ್‍ಲೈನ್ ಮಾಡಲಾಯಿತು. 2013ರಲ್ಲಿ ನಾನು ಇನ್ಫಿಗೆ ಮರಳಿದಾಗ ಪ್ರವೀಣ್ ಕಾರ್ಯಕಾರಿ ಮಂಡಳಿಯಲ್ಲಿ ಇರಲಿಲ್ಲ. ವಿಶಾಲ್ ಸಿಕ್ಕಾ ಅವರನ್ನು ಸಿಇಒ ಹುದ್ದೆಗೆ ನೇಮಕ ಮಾಡಿದಾಗ ಪ್ರವೀಣ್ ರಾವ್‍ನನ್ನು ಇಒಒ ಹುದ್ದೆಗೆ ಏರಿಸಲಾಯಿತು. ಈಗ ಶೇ.60-70ರಷ್ಟು ಸಂಬಳ ಏರಿಕೆಯ ಆಕ್ಷೇಪಕ್ಕೂ ಪ್ರವೀಣ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.

    ಈಗ ಎಷ್ಟು ಸಂಬಳ:
    ಪ್ರವೀಣ್ ರಾವ್‍ಗೆ ಒಟ್ಟು ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ. ಇದರಲ್ಲಿ 4.62 ಕೋಟಿ ರೂ. ಸಂಬಳ, 3.88 ಕೋಟಿ ರೂ. ಪರಿಹಾರ, 4 ಕೋಟಿ ರೂ. ಸ್ಟಾಕ್ ಕಾಂಪನ್ಸೇಶನ್ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?

  • ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಬೆಂಗಳೂರು:ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ವಾರ್ಷಿಕವಾಗಿ ವಿಶ್ವದಲ್ಲೇ ಅತಿ ಕಡಿಮೆ ಸಂಬಳವನ್ನು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್‍ಗಳು ಪಡೆಯುತ್ತಿದ್ದಾರೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

    2017ರ ಜಾಗತಿಕ ಸ್ಟಾರ್ಟ್‌ಅಪ್‌ ಎಕೋಸಿಸ್ಟಮ್ ವರದಿಯನ್ನು  startupgenome.com ಬಿಡುಗಡೆ ಮಾಡಿದ್ದು ಟಾಪ್ 20 ನಗರಗಳ ಪಟ್ಟಿಯಲ್ಲಿ 20ನೇ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ಬೆಂಗಳೂರಿನ ಸಂಸ್ಥೆಗಳಲ್ಲಿ ಸಾಫ್ಟ್ ವೇರ್ ಎಂಜಿನಿಯರ್‍ಗಳು ವಾರ್ಷಿಕ 8600 ಡಾಲರ್(ಅಂದಾಜು 5.6 ಲಕ್ಷ) ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

    ಕ್ಯಾಲಿಫೋರ್ನಿಯಾದ  ಸಿಲಿಕಾನ್ ವ್ಯಾಲಿಯಲ್ಲಿ ಅತಿ ಹೆಚ್ಚು ಸಂಬಳ ಸಿಗುತ್ತಿದ್ದು, ಅಲ್ಲಿ 1,12,000 ಡಾಲರ್( ಅಂದಾಜು 72.9 ಲಕ್ಷ ರೂ.) ಸಂಬಳವನ್ನು ಟೆಕ್ಕಿಗಳು ಪಡೆಯುತ್ತಿದ್ದಾರೆ. ಬೆಂಗಳೂರಿನ ಸಂಬಳಕ್ಕೆ ಹೋಲಿಸಿದರೆ 13 ಪಟ್ಟು ಹೆಚ್ಚು ಸಂಬಳ ಇಲ್ಲಿ ಉದ್ಯೋಗ ಮಾಡುತ್ತಿರುವ ಟೆಕ್ಕಿಗಳಿಗೆ ಸಿಗುತ್ತಿದೆ.

    ಬೆಂಗಳೂರಿನಲ್ಲಿ ಕಡಿಮೆ ಸಂಬಳಕ್ಕೆ ಸಾಫ್ಟ್ ವೇರ್ ಎಂಜಿನಿಯರ್‍ಗಳು ಸಿಗುವ ಕಾರಣ ಇಲ್ಲಿ ಬಹುತೇಕ ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಮಾರುಕಟ್ಟೆ ವ್ಯಾಪ್ತಿ, ಪ್ರತಿಭೆ, ಸ್ಟಾರ್ಟ್‌ಅಪ್‌ ಅನುಭವ, ಕಾರ್ಯನಿರ್ವಹಣೆ, ಬಂಡವಾಳ ಆಧಾರದ ಮೇಲೆ ಈ ಸ್ಟಾರ್ಟ್ ಅಪ್ ವರದಿಯನ್ನು ತಯಾರಿಸಲಾಗಿದೆ.

    ಪ್ರಸ್ತುತ ಬೆಂಗಳೂರಿನಲ್ಲಿ ಅಂದಾಜು 1,800 ರಿಂದ 2,300 ಸ್ಟಾರ್ಟ್ ಅಪ್‍ಗಳು ಕಾರ್ಯನಿರ್ವಹಿಸುತ್ತಿದೆ ಎಂದು ಅಧ್ಯಯನ ತಿಳಿಸಿದೆ.

    ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?

    ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ 7 ಸಾವಿರ ಸಂಬಳ: ಯಾರ ಪಾಲು ಎಷ್ಟು? ಬೇರೆ ರಾಜ್ಯದಲ್ಲಿ ಎಷ್ಟಿದೆ?

    ಬೆಂಗಳೂರಿನ ವರದಿ

    ಅಧ್ಯಯನ ವರದಿಯ ಸಂಪೂರ್ಣ ಕಾಪಿಯನ್ನು ಓದಲು ಕ್ಲಿಕ್ ಮಾಡಿ: startupgenome.com

     

  • 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    ನವದೆಹಲಿ: ಐಟಿ ಸಂಸ್ಥೆ ಕಾಗ್ನಿಜೆಂಟ್ ತನ್ನ ಸುಮಾರು 6 ಸಾವಿರ ಉದ್ಯೋಗಿಗಳನ್ನ ಕೆಲಸದಿಂದ ತೆಗೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    2016ರ ಡಿಸೆಂಬರ್ 31ರ ವೇಳೆಗೆ ಕಾಗ್ನಿಜೆಂಟ್‍ನಲ್ಲಿ ಅಂದಾಜು 2.6 ಲಕ್ಷ ಉದ್ಯೋಗಿಗಳಿದ್ದರು. ಪ್ರತಿವರ್ಷದಂತೆ ಕಡಿಮೆ ಪ್ರದರ್ಶನ ನೀಡುವ ಉದ್ಯೋಗಿಗಳನ್ನು ಕಿತ್ತುಹಾಕಲಾಗ್ತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. ಕಂಪೆನಿಯಲ್ಲಿ ಹಲವು ಉದ್ಯೋಗಿಗಳಿಗೆ ಸಂಬಳವನ್ನೂ ಕಡಿತಗೊಳಿಸಲಾಗಿದೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಕಂಪೆನಿಯ ವಕ್ತಾರರು, ಉದ್ಯೋಗ ನಿರ್ವಹಣೆಯ ತಂತ್ರವಾಗಿ ನಾವು ಪ್ರತಿ ವರ್ಷ ಇದನ್ನು ಮಾಡುತ್ತೇವೆ. ಕಂಪೆನಿಯ ಗ್ರಾಹಕರ ಅಗತ್ಯತೆಗಳನ್ನ ಪೂರೈಸಲು ಹಾಗೂ ನಮ್ಮ ಗುರಿಯನ್ನ ಈಡೇರಿಸಲು ಸರಿಯಾದ ನೌಕರರು ನಮ್ಮ ಬಳಿ ಇದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ನಾವು ನಿಯಮಿತವಾಗಿ ಉದ್ಯೋಗಿಯ ಕೆಲಸವನ್ನ ಮೌಲ್ಯಮಾಪನ ಮಾಡುತ್ತೇವೆ. ಹೀಗಾಗಿ ಕಂಪೆನಿ ತೆಗೆದುಕೊಳ್ಳುವ ನಿರ್ಧಾರ ಉದ್ಯೋಗಿಯ ಕಾರ್ಯವೈಖರಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.

    ಅಲ್ಲದೆ ಉದ್ಯೋಗಿಗಳ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗಬಹುದು. ಇದೇ ವೇಳೆ ನಾವು ನಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.