Tag: ಸಾಫ್ಟ್ ಡ್ರಿಂಕ್

  • ಸಾಫ್ಟ್ ಡ್ರಿಂಕ್ ಟಿನ್‍ನಲ್ಲಿ ನಲ್ಲಿ ಸತ್ತ ಇಲಿ ಕಂಡು ಹೌಹಾರಿದ ವ್ಯಕ್ತಿ!

    ಸಾಫ್ಟ್ ಡ್ರಿಂಕ್ ಟಿನ್‍ನಲ್ಲಿ ನಲ್ಲಿ ಸತ್ತ ಇಲಿ ಕಂಡು ಹೌಹಾರಿದ ವ್ಯಕ್ತಿ!

    ವಾಷಿಂಗ್ಟನ್: ತಂಪು ಪಾನೀಯ ಟಿನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.

    ಜೋಶ್ ಹೆನ್ಲೆ ಭಾನುವಾರ ರಾತ್ರಿ ಅರ್ಕಾನ್ಸಾಸ್ ನ ಪೆಟ್ರೋಲ್ ಬಂಕ್ ಬಳಿ ರೆಡ್ ಬುಲ್ ತಂಪು ಪಾನೀಯವನ್ನು ಖರೀದಿಸಿದ್ದಾರೆ. ಆದರೆ ಬಳಿಕ ಅವರು ಅದರಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

    ಹೆನ್ಲೆ ತಂಪು ಪಾನೀಯದಲ್ಲಿ ಪತ್ತೆಯಾದ ಇಲಿಯ ವಿಡಿಯೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸತ್ತ ಇಲಿಯನ್ನು ತೋರಿಸಲು ಕತ್ತರಿಯಿಂದ ಟಿನ್‍ನ ಮಧ್ಯದಲ್ಲಿ ಕತ್ತರಿಸಿದ್ದಾರೆ.

    ನಾನು ಯಾವಾಗಲೂ ರೆಡ್ ಬುಲ್ ಕುಡಿಯುತ್ತೇನೆ. ಇದರಲ್ಲಿ ಕಾರ್ಖಾನೆಯ ತಪ್ಪಿದೆಯೋ ಅಥವಾ ಬೇರೆನೋ ನನಗೆ ತಿಳಿದಿಲ್ಲ. ಆದರೆ ಇದರೊಳಗೆ ಸತ್ತ ಇಲಿ ಇದೆ ಎಂದು ಹೇಳಿಕೊಂಡಿದ್ದಾರೆ. ಹೆನ್ಲೆ ತಂಪು ಪಾನೀಯವನ್ನು ಖರೀದಿಸಿದ ನಂತರ ಸಂಪೂರ್ಣ ಕುಡಿದು ಮುಗಿಸಿರಲಿಲ್ಲ. ರಾತ್ರಿ ಅದನ್ನು ತನ್ನ ಕಾರಿನಲ್ಲಿ ಬಿಟ್ಟು ಹೋಗಿದ್ದರು. ಮಾರನೇ ದಿನ ಕಾರಿನಲ್ಲಿದ್ದ ಪಾನೀಯವನ್ನು ಸುರಿಯಲು ಹೋದಾಗ ಏನೋ ಶಬ್ದ ಕೇಳಿದ್ದು, ಒಳಗೆ ಏನೋ ಇದೆ ಎಂದು ಗೊತ್ತಾಗಿತ್ತು. ನಂತರ ಟಿನ್‍ನ ಖಾಲಿಗೊಳಿಸಿ ನೋಡಿದಾಗ ಇಲಿ ಪತ್ತೆಯಾಗಿದೆ.

    ಹೊರಗಿನಿಂದ ಇಲಿ ಟಿನ್‍ನಲ್ಲಿ ಹೋಗಿರಲು ಸಾಧ್ಯವಿಲ್ಲ. ಯಾಕಂದ್ರೆ ಈ ಮುಂಚೆ ನನ್ನ ಕಾರಿನಲ್ಲಿ ಯಾವತ್ತೂ ಇಲಿಗಳನ್ನ ನೋಡಿಲ್ಲ ಎಂದು ಹೆನ್ಲೆ ಹೇಳಿದ್ದಾರೆ.

    ರೆಡ್ ಬುಲ್ ಅನ್ನು ಪರೀಕ್ಷಿಸಿ ಅದರಲ್ಲಿ ಸತ್ತ ಇಲಿಗಳು ಇರುತ್ತವೆ ಎಂದು ಹೇಳಿ ಜನರನ್ನು ಒತ್ತಾಯಿಸುತ್ತಿದ್ದಾರೆ. ವಿಡಿಯೋವನ್ನು ಪೋಸ್ಟ್ ಮಾಡಿದಾಗಿನಿಂದ 1,02,500 ಕ್ಕಿಂತ ಹೆಚ್ಚು ಬಾರಿ ಶೇರ್ ಆಗಿದೆ. ಜೊತೆಗೆ ಸುಮಾರು 3,000 ಕ್ಕೂ ಹೆಚ್ಚು ರಿಯಾಕ್ಷನ್ಸ್ ಬಂದಿದೆ.

    ಈ ಬಗ್ಗೆ ಪ್ರತಿಕ್ರಿಯೆಗಾಗಿ ರೆಡ್ ಬುಲ್ ಸಂಸ್ಥೆಯನ್ನ ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ.