Tag: ಸಾನ್ಯಾ

  • ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ಮಹಿಳಾ ಸ್ಪರ್ಧಿಗಳ ವಿಚಾರದಲ್ಲಿ ರಾಕೇಶ್ ಅಡಿಗಗೆ ಸೆಡ್ಡು ಹೊಡೆದ ರೂಪೇಶ್ ಶೆಟ್ಟಿ ಕಾಲೆಳೆದ ಸುದೀಪ್

    ಟಿಟಿಯಿಂದ ಪರಿಚಿತರಾದ ಸಾನ್ಯ ಅಯ್ಯರ್ (Sanya Iyer) ಮತ್ತು ರೂಪೇಶ್ ಶೆಟ್ಟಿ (Rupesh Shetty) ಲವ್ವಿ-ಡವ್ವಿ ಬಿಗ್‍ಬಾಸ್ ಮನೆಯಲ್ಲಿ ಜೋರಾಗಿ ನಡೆಯುತ್ತಿದೆ. ಈ ಜೋಡಿಯನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ಮಹಿಳಾ ಸ್ಪರ್ಧಿಗಳ ಜೊತೆ ರೂಪೇಶ್ ಮಿಂಗಲ್ ಆಗುವುದನ್ನು ನೋಡಿ, ನೀವು ಬಿಗ್‍ಬಾಸ್ (BiggBoss) ಮನೆಯ ಯೂನಿವರ್ಸಿಟಿ ಎಂದು ಸುದೀಪ್ (Sudeep) ಕಾಲೆಳೆದಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಜೊತೆ ರೂಪೇಶ್ ಶೆಟ್ಟಿ ಆತ್ಮೀಯವಾಗಿದ್ದಾರೆ. ಒಟಿಟಿ ಸೀಸಸ್‍ನಿಂದ ಇವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಈ ಜೋಡಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಸಾಕಷ್ಟು ಫ್ಯಾನ್ ಪೇಜ್ ಕ್ರಿಯೇಟ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕಮಾಲ್ ಮಾಡುತ್ತಿದೆ. ನಮ್ಮ ಮಧ್ಯೆ ಇರೋದು ಫ್ರೆಂಡ್‍ಶಿಪ್ ಮಾತ್ರ ಎಂದು ರೂಪೇಶ್ ಶೆಟ್ಟಿ ಆಗಾಗ ಸ್ಪಷ್ಟನೆ ನೀಡುತ್ತಲೇ ಇರುತ್ತಾರೆ. ಆದರೆ ಇವರ ಆತ್ಮೀಯತೆ ಸ್ನೇಹಕ್ಕೂ ಮೀರಿದ ಬಾಂಧವ್ಯದಂತೆ ಕಾಣುತ್ತಿದೆ. ಈಗ ಟಿವಿ ಸೀಸಸ್‍ನಲ್ಲಿ ರೂಪೇಶ್ ಶೆಟ್ಟಿ ಅವರು ಸಾನ್ಯ ಜೊತೆಗೆ ಅನೇಕ ಮಹಿಳಾ ಸ್ಪರ್ಧಿಗಳ ಜತೆ ಕ್ಲೋಸ್ ಆಗಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಿಂದ ನವಾಜ್ ಔಟ್- ಇಷ್ಟವಾಗಲಿಲ್ಲ ಹುಡುಗನ ನಡೆ

    ರೂಪೇಶ್ ಅವರೇ ನೀವು ಬಿಗ್ ಬಾಸ್ ಮನೆಯ ಯೂನಿವರ್ಸಿಟಿ ಎಂದರು ಸುದೀಪ್. ಇದು ಏಕೆ ಎಂದು ರೂಪೇಶ್ ಶೆಟ್ಟಿ ಪ್ರಶ್ನೆ ಮಾಡಿದರು. ಅದಕ್ಕೆ ಸುದೀಪ್ ನಗುತ್ತಲೇ ಉತ್ತರ ನೀಡಿದರು. ‘ರೂಪೇಶ್ ಅವರು ಈ ಬಾರಿ ಎಲ್ಲರ ಜೊತೆ ಕ್ಲೋಸ್ ಆಗಿದ್ದಾರೆ. ಅಡುಗೆ ಮನೆಯಲ್ಲಿ ಯಾರ ಜೊತೆ ಮಾತನಾಡಬೇಕು, ಬಾತ್‍ರೂಂನಲ್ಲಿದ್ದಾಗ ಯಾರ ಜೊತೆ ಮಾತನಾಡಬೇಕು, ಲೈಟ್ ಆಫ್ ಆದಾಗ ಯಾರ ಜೊತೆ ಮಾತನಾಡಬೇಕು ಎಂಬುದು ಅವರಿಗೆ ಗೊತ್ತಿದೆ ಎಂದು ಸುದೀಪ್ ಹೇಳಿದರು. ಇದನ್ನು ಕೇಳಿದ ರೂಪೇಶ್ ಆ ರೀತಿ ಇಲ್ಲ ಎಂದು ನಕ್ಕರು.

    ಇನ್ನೂ ರೂಪೇಶ್ ಯೂನಿವರ್ಸಿಟಿ ಆದರೆ ರಾಕೇಶ್ ಅಡಿಗ (Rakesh Adiga) ನೀವು ಪ್ರಿ ಯೂನಿವರ್ಸಿಟಿ ಎಂದಿದ್ದಾರೆ. ಹಾಗೆಯೇ ದರ್ಶ್ ಚಂದ್ರಪ್ಪಗೆ ರೂಪೇಶ್ ಶೆಟ್ಟಿ ಅವರನ್ನು ನೀವು ಗುರುವಾಗಿ ಸ್ವೀಕರಿಸಿ, ಅವರಿಂದ ಸಾಕಷ್ಟು ಕಲಿಯುತ್ತೀರಿ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಕಾವ್ಯಶ್ರೀಗೆ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ ಆರ್ಯವರ್ಧನ್ ಗುರೂಜಿ

    Live Tv
    [brid partner=56869869 player=32851 video=960834 autoplay=true]

  • ಉದಯ್‍ಗೆ ಹೋಲಿಸಿದ ಸಾನ್ಯಾ – ರೂಪೇಶ್ ಮನಸ್ಸಿಗೆ ತುಂಬಾ ನೋವು?

    ಉದಯ್‍ಗೆ ಹೋಲಿಸಿದ ಸಾನ್ಯಾ – ರೂಪೇಶ್ ಮನಸ್ಸಿಗೆ ತುಂಬಾ ನೋವು?

    – ರೂಪೇಶ್‍ನನ್ನು ಸಾನ್ಯಾ ಇಷ್ಟೇನಾ ಅರ್ಥ ಮಾಡಿಕೊಂಡಿದ್ದು

    ರೂಪೇಶ್ ಮತ್ತು ಸಾನ್ಯಾ ನಡುವೆ ಮನೆಯಲ್ಲಿ ಆಗಾಗ ಸಣ್ಣ ಸಣ್ಣ ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಒಂದು ಹಗ್ ಕೊಟ್ಟಿಲ್ಲದ ಕಾರಣಕ್ಕೋ, ಸಮಯ ಕೊಡದೆ ಇರುವ ಕಾರಣಕ್ಕೋ ಅದು ಜಗಳ ಅಲ್ಲ ಹೆಲ್ದಿ ಚರ್ಚೆಗಳು ನಡೆಯುತ್ತಲೆ ಇರುತ್ತವೆ. ಇವತ್ತು ಕೂಡ ಅಂತದ್ದೊಂದು ಸಣ್ಣ ಜಗಳವೇ ಆರಂಭವಾಗಿತ್ತು. ಆದರೆ ಮಧ್ಯೆ ಮಾಜಿ ಸ್ಪರ್ಧಿ ಉದಯ್ ಹೋಲಿಕೆ ರೂಪೇಶ್ ಮನಸ್ಸಿಗೆ ಅಗಾಧವಾದ ನೋವು ತಂದಿದೆ.

    ಸಾನ್ಯಾ, ರೂಪೇಶ್ ಮತ್ತು ಸೋನು ಕೂತು ಬಿಟ್ಟರ್ ಬೆಟರ್ ಹೇಳುತ್ತಾ ಇದ್ದರು. ಆ ರೈಮ್ಸ್ ಅಷ್ಟು ಈಸಿಯಾಗಿಲ್ಲದ ಕಾರಣ ಕಷ್ಟಪಟ್ಟು ಸಾನ್ಯಾ ಹೇಳುತ್ತಾ ಇದ್ದಳು. ರೂಪೇಶ್ ಗಮನವಿಟ್ಟು ಕೇಳುತ್ತಾ ಇದ್ದ. ಆದ್ರೆ ರೂಪೇಶ್ ಪಕ್ಕದಲ್ಲಿ ಕೂತಿದ್ದ ಗುರೂಜಿ ಸಣ್ಣ ಚೇಷ್ಟೇ ಮಾಡಿದ್ದಾರೆ. ಅದು ಸಾನ್ಯಾಗೆ ಉರಿದು, ಅಲ್ಲಿಂದ ಮತ್ತೊಂದು ಸೋಫಾದ ಮೇಲೆ ಎದ್ದು ಹೋಗಿದ್ದಾಳೆ. ನಾವೂ ಎಷ್ಟು ಅಂತ ನೋಡುವುದು. ಬರೀ ನಿಮ್ಮದೇ ಕೇಳಬೇಕಾ. ಇದು ಫಸ್ಟ್ ಟೈಮ್ ಅಲ್ಲ ನೀವೂ ಹಿಂಗೆ ಮಾಡುತ್ತಾ ಇರುವುದು. ನಾನು ತಾಳ್ಮೆಯಿಂದ ಎಷ್ಟು ಸಲ ಅಂತ ಇರಲಿ. ಮಾತಾಡಿಕೊಳ್ಳಿ, ಏನಾದರೂ ಮಾಡಿಕೊಳ್ಳಿ. ತುಂಬಾ ಇರಿಟೇಟ್ ಮಾಡ್ತೀರಾ ಎಂದಿದ್ದಾಳೆ. ಇದನ್ನೂ ಓದಿ: ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಆದ್ರೆ ರೂಪೇಶ್ ಬಾ ಇಲ್ಲಿಗೆ ಬಾ ಇಲ್ಲಿಗೆ ಅಂತ ಕರೆದರೂ ಸಾನ್ಯಾ ಬಂದಿಲ್ಲ. ನಿನ್ನೆ ರಾತ್ರಿಯೂ ಅದನ್ನೇ ಮಾಡಿದ್ದೀರಿ. ನಾನು ನೀವಿಬ್ಬರು ಇದ್ದ ಕಡೆ ನಾನು ಬರುವುದೇ ಇಲ್ಲ ಎಂದಿದ್ದಾಳೆ. ಆಗ ರೂಪೇಶ್, ಇದು ಮೊದಲ ಸಲ ತಾನೇ. ಬಾ ಇಲ್ಲಿಗೆ ಒಂದೇ ಒಂದು ಸಲ ಎಂದಿದ್ದಾನೆ. ಇದೆಲ್ಲಾ ಮುಗಿದರು ಸಾನ್ಯಾ ಮಾತ್ರ ಬರಲಿಲ್ಲ. ಕಡೆಗೆ ಎಲ್ಲಾ ಎದ್ದು ಹೋಗುವಾಗ ಗುರೂಜಿ, ನೀವಿಬ್ಬರು ಇಲ್ಲಿಯ ತನಕ ಮಾತನಾಡುತ್ತಲೇ ಇರಲಿಲ್ಲ ಹೊಸದಾಗಿ ಮಾತನಾಡುತ್ತಿದ್ದೀವಿ ಅನ್ನೋ ಥರ ಆಡುತ್ತಿರಲ್ಲ ಅಂದಿದ್ದಾರೆ. ಇದು ಸಾನ್ಯಾಗೆ ಕೋಪ ತರಿಸಿದೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಸಾನ್ಯಾ ಬಳಿ ಬಂದು ರೂಪೇಶ್ ವಿವರಣೆ ನೀಡಿದ್ದಾನೆ. ಅದಕ್ಕೂ ಒಪ್ಪದೆ ಮತ್ತೆ ವಾದ ಮಾಡುತ್ತಲೇ ಇದ್ದಾಗ, ರೂಪೇಶ್, ಆಯ್ತು ಬಿಡು ಸಾರಿ ಎಂದಿದ್ದಾನೆ. ಇಬ್ಬರ ನಡುವೆ ಕೋಳಿ ಜಗಳ ಮುಂದುವರೆದಿದೆ. ನನ್ನದು ತಪ್ಪಲ್ಲ ನಿನ್ನದು ತಪ್ಪಲ್ಲ ಎಂದೇ ವಾದ ಮಾಡಿದ್ದಾರೆ.

    ಮತ್ತೆ ರಾತ್ರಿ 9.30ಕ್ಕೆ ಮತ್ತೆ ರೂಪೇಶ್ ಸಾನ್ಯಾ ಮಾತು ಶುರು ಮಾಡಿದ್ದಾರೆ. ನಾನು ಆಗಲೇ ಕರೆದಾಗಲೂ ನೀನು ಬರಲೇ ಇಲ್ಲ. ಒಂದು ಹಗ್ ಬೇಕು ಅಂತ ಕರೆದೆ ಅಷ್ಟೇ ಎಂದಾಗ ಜಶ್ವಂತ್, ನೀವು ಕೂತಿದ್ರಿ. ಆಗ ನೀನು ಏನೋ ಅಂದೆ ಅದು ನಂಗೆ ಕ್ಲಾರಿಟಿ ಸಿಕ್ಕಿಲ್ಲ. ಅದಕ್ಕೆ ಹೋದೆ ಎಂದಿದ್ದಾನೆ ರೂಪೇಶ್. ಏನೋ ಅಂದೇ ನಂಗೆ ಕನೆಕ್ಟ್ ಅಲ್ಲ ಅಂತ ನಾನು ಹೋದೆ ಅಂದಾಗ ಸಾನ್ಯಾ ಅದೇನು ಅಂತ ಬಿಡಿಸಿ ಹೇಳು ಅಂದಿದ್ದಾಳೆ. ಆಗ ರೂಪೇಶ್ ವಿಚಾರ ಹೇಳುವುದಕ್ಕೆ ತಡಕಾಡಿದ್ದಾನೆ. ನಾನು ಬಂದಾಗ ನಿಮ್ಮಿಬ್ಬರ ಮಾತು ಕಟ್ ಆಯ್ತು. ಅದಕ್ಕೆ ನಾನು ಎದ್ದು ಹೋದೆ ಎಂದಿದ್ದಾನೆ. ಅದಾದ ಬಳಿಕ ಸಾನ್ಯಾ ಒಂದಷ್ಟು ವಿಚಾರಗಳನ್ನು ತೆಗೆದು ಮತ್ತೆ ವಾದ ಮಾಡಿದ್ದಾಳೆ. ವಾದವೆಲ್ಲಾ ಮುಗಿದ ಮೇಲೆ ನಾನು ನಿನ್ನ ಕ್ಯಾರೆಕ್ಟರ್‌ಗೂ ಅವನ ಕ್ಯಾರೆಕ್ಟರ್ ಹೋಲಿಕೆ ಮಾಡುತ್ತಿಲ್ಲ ಎಂದಾಗ ರೂಪೇಶ್ ಹಂಗೆಲ್ಲಾ ಮಾತನಾಡಬೇಡ. ಎಲ್ಲರಿಗೂ ಗೊತ್ತಾಗಲ್ಲ. ಅಂತದ್ದು ನಾನು ಏನು ಮಾಡಿದೆ ಎಂದಿದ್ದಾಳೆ.

    ಮತ್ತೆ ವಾದ ಪ್ರತಿವಾದ ಮುಂದುವರಿದು ಮಾತು ಮತ್ತೊಂದು ಸೋಫಾಗೆ ಶಿಫ್ಟ್ ಆಗಿದೆ. ಸಣ್ಣ ಸಣ್ಣ ಕೋಪ ಇರಬೇಕು ಓಕೆ. ಆದರೆ ಅದನ್ನೇ ಕಾಂಪ್ಲಿಕೇಟ್ ಮಾಡಿದರೆ ಮತ್ತೆ ಇನ್ನೇನೋ ಆಗುತ್ತೆ ಎಂದು ರೂಪಿ ಹೇಳಿದ್ದಾನೆ. ಅದಕ್ಕೆ ಸಾನ್ಯಾ, ಈಗ ಏನಾಗಿದ್ದು ನಿಂಗೆ ಅವನ ಹೆಸರು ಎತ್ತಿದ್ದ ಎಂದಾಗ. ಎತ್ತಬೇಡ. ಅದು ನಂಗೆ ಇಷ್ಟವೂ ಇಲ್ಲ. ನೀನು ಒಂದು ವಿಚಾರಕ್ಕೆ ತೆಗೆದಿರುತ್ತೀಯಾ. ಅದು ಎಷ್ಟು ದೊಡ್ಡ ಪದ ಗೊತ್ತಾ. ನೀನು ಉದಯ್ ಥರ ಕಾಣುತ್ತೀಯಾ ಅಂತ ಛೀ.. ಆ ಥರ ಎಲ್ಲಾ ಯಾಕೆ ಮಾತನಾಡುತ್ತೀಯಾ. ಹಂಗೇನಾದರೂ ಕಾಣಿಸ್ತಾ ನಿಂಗೆ ಎಂದಾಗ ಸಾನ್ಯಾ ಕ್ಷಮೆ ಕೇಳಿದ್ದಾಳೆ. ಒಂದಷ್ಟು ಮಾತು ಕತೆಯ ಮೂಲಕ ಆ ಟಾಪಿಕ್ ಮುಗಿದಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ರೂಪೇಶ್‍ಗೆ ಸಾನ್ಯಾ ಸಹವಾಸವೇ ಮೈನಸ್ ಆಯ್ತಾ?

    ಬಿಗ್‍ಬಾಸ್(Bigg Boss) ಮನೆಯಲ್ಲಿ ರೂಪೇಶ್ ಅವರದ್ದು ಕೊನೆಯ ಕ್ಯಾಪ್ಟೆನ್ಸಿಯಾಗಿತ್ತು. ಆದರೆ ಈ ವಾರ ರೂಪೇಶ್ ಎಷ್ಟು ಚೆನ್ನಾಗಿ ಕ್ಯಾಪ್ಟೆನ್ಸಿ ನಿಭಾಯಿಸಿದ್ದರೋ ಅಷ್ಟೇ ಒನ್ ಸೈಡ್ ಆಗಿದ್ದ ಎಂಬ ಆರೋಪವೂ ಕೇಳಿ ಬಂತು. ಹೆಚ್ಚಿನ ಪ್ರಧಾನ್ಯತೆಯನ್ನು ಫ್ರೆಂಡ್ ಎನ್ನುವ ಕಾರಣಕ್ಕೆ ಸಾನ್ಯಾಳಿಗೆ(Sanya) ನೀಡಿದ ಎಂಬುದು ಮನೆಯ ಸದಸ್ಯರಿಗೆ ಕೊಂಚ ಬೇಸರವನ್ನು ತರಿಸಿತ್ತು. ಆ ಬಗ್ಗೆ ಇಂದು ವಾರದ ಕಥೆ ಕಿಚ್ಚ ಸದೀಪನ ಜೊತೆ ವೇದಿಕೆಯಲ್ಲೂ ಬಹಳಷ್ಟು ಚರ್ಚೆಗೆ ಕಾರಣವಾಯಿತು.

    ಕಿಚ್ಚ ಸುದೀಪ್(Sudeep) ವೇದಿಕೆ ಬರುವುದಕ್ಕೂ ಮುನ್ನ ಈ ಬಗ್ಗೆ ಒಂದು ಕ್ಲೂ ಕೂಡ ಕೊಟ್ಟಿದ್ದರು. ಕೊನೆವಾರದಲ್ಲಿ ಬಿದ್ದರೆ ಏಳುವುದಕ್ಕೆ ಟೈಮ್ ಇರುವುದಿಲ್ಲ. ಸ್ನೇಹ ಹಾಗೂ ಆಟ ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂಬುದು ಗೊತ್ತಿರಬೇಕು ಎಂದಾಗ ಇಂದು ರೂಪೇಶ್ ಮಾಡಿದ ಯಡವಟ್ಟು ಅನಾವರಣವಾಗುತ್ತದೆ ಎಂಬುದು ಸ್ಪಷ್ಟವಾಯಿತು. ಅದರಂತೆ ವೇದಿಕೆ ಮೇಲೆ ರೂಪೇಶ್‍ಗೆ ಆ ಪ್ರಶ್ನೆ ಕೇಳಿದರು. ಸ್ನೇಹ ಮತ್ತು ಆಟವನ್ನು ಹೇಗೆ ಬ್ಯಾಲೆನ್ಸ್ ಮಾಡಬೇಕು ಎಂದಾಗ ರೂಪೇಶ್(Rupesh) ಆಟ ಅಂತ ಬಂದಾಗ ಸ್ನೇಹ, ಸಂಬಂಧ, ಎಮೋಷನಲ್ ನೋಡಬಾರದು ಎಂಬ ಅರ್ಥದಲ್ಲಿಯೇ ವಿವರಣೆಯನ್ನು ಬಹಳ ದೊಡ್ಡ ಪ್ರಮಾಣದಲ್ಲಿ ನೀಡಿದ್ದರು. ವಿವರಣೆ ಕೇಳಿಸಿಕೊಂಡ ಕಿಚ್ಚ, ಒಂದು ಕ್ಷಣ ನಗೆ ಬೀರಿ, ಓಕೆ ವೆಲ್ ಡನ್ ಅಂತ ಮನೆಯ ಸದಸ್ಯರ ಬಳಿ ರಿಯಾಕ್ಷನ್ ಕೇಳಿದರು. ಇದನ್ನೂ ಓದಿ: ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ

    ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ,(Somanna) ನಂಗೆ ಈ ಹಿಂದೆ ಅನುಭವವಾಗಿತ್ತು. ಅದನ್ನು ಹೇಳಿದ್ದೆ ಕೂಡ, ವೋಟ್ ಕೂಡ ಒಂದು ಸಲ ಮಾಡಿದ್ದೆ. ಯಾವುದೋ ಒಂದು ವಿಚಾರ ಬಂದಾಗ ಒಬ್ಬ ವ್ಯಕ್ತಿಯ ಪರ ಮಾತನಾಡುವುದಲ್ಲ. ಹೌದು ಕಣ್ಣೀರಿಗೆ ಒಂದು ಬೆಲೆ ಇರುತ್ತದೆ. ಭಾವನೆಗೂ ಒಂದು ಬೆಲೆ ಇರುತ್ತದೆ. ಆದರೆ ಅದೇ ವೀಕ್ನೆಸ್ ಆಗಬಾರದು. ನಾನು ತುಂಬಾ ಸಲ ಕಂಡಿದ್ದೇನೆ. ಕಣ್ಣೀರು ಹಾಕಿದ ಕೂಡಲೇ ಅದನ್ನು ಬ್ಯಾಲೆನ್ಸ್ ಮಾಡಬಹುದು. ಪಾಪ ಅನಿಸುತ್ತದೆ. ಅದು ಪಾಪ ಅಲ್ಲ. ಅದಕ್ಕೆ ಒಂದು ಉದಾಹರಣೆ ಇತ್ತೀಚೆಗೆ ನಡೆದಿದೆ. ಅವರು ಒಂದು ಟಾಸ್ಕ್‌ನಲ್ಲಿ ಸೋತಾಗ ಕಣ್ಣೀರು ಹಾಕುತ್ತಾರೆ. ಕಣ್ಣೀರು ಹಾಕಿದ ತಕ್ಷಣ ಅವಕಾಶ ಸಿಗುತ್ತದೆ. ಇಲ್ಲಿ ಕಣ್ಣೀರು ಎಕ್ಸಿಕ್ಯೂಟ್ ಮಾಡುವುದಕ್ಕೆ ಬಂದಿಲ್ಲ. ಬೇಕಾಬಿಟ್ಟಿ ಹಾಕಿದರೆ ಅದಕ್ಕೊಂದು ಅರ್ಥವೇ ಇರುವುದಿಲ್ಲ ಎಂದಿದ್ದಾರೆ.

    ಸುದೀಪ್ ಅವರ ಮಾತುಕತೆ ಮುಗಿದು ಒಂದು ಬ್ರೇಕ್ ಕೊಟ್ಟಾಗ ಮನೆಯಲ್ಲಿ ಕಣ್ಣೀರಿನ ಕಥೆಯ ಮಹಾಯುದ್ಧವೇ ನಡೆದಿದೆ. ಜಯಶ್ರೀ(Jaya shree) ಹಾಗೂ ಸೋನು ಕುಳಿತಲ್ಲಿಗೆ ಬಂದ ಸಾನ್ಯಾ, ಸೋಮಣ್ಣ ಕೊಟ್ಟ ರೀಸನ್ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ನೀನು ಇವಳನ್ನು ರಾಂಗ್ ಇನ್ಫರ್ಮೇಶನ್ ಕೊಟ್ಟಿದ್ದೀಯಾ ಅದಕ್ಕೆ ಈ ರೀತಿಯೆಲ್ಲಾ ಆಗಿದೆ ಅಂತ. ಆಗ ಸಾನ್ಯಾಳಾ ಮಾತು ತಡೆದ ಜಯಶ್ರೀ, ನೀನು ರೂಪೇಶ್ ಕೂತು ಮಾತನಾಡುವಾಗ ನಾವಿಬ್ಬರು ನಿಮ್ಮ ಎದುರಿಗಿನ ಸೋಫಾದಲ್ಲಿಯೇ ಇದ್ದೇವು. ನೀನು ರೂಪೇಶ್ ಜೊತೆ ಮಾತನಾಡುವಾಗ ಇಟ್ ವಾಸ್ ನಾಟ್ ಸ್ಯಾಟಿಫೈ ಎಂಬಂತೆ ಇತ್ತು. ನೀನು ಕಣ್ಣಲ್ಲಿ ನೀರು ತುಂಬಿಕೊಂಡೆ ಮಾತನಾಡುತ್ತಿದ್ದೆ. ಅದಕ್ಕೆ ನೀನು ಅಳುತ್ತಿದ್ದಿಯಾ ಅಂತ ಅಂದುಕೊಂಡೆವು ಎಂದಾಗ, ಸಾನ್ಯಾ ಅವಳ ಪಕ್ಕದಲ್ಲಿಯೇ ನಿಂತಿದ್ದ ರೂಪೇಶ್‍ನನ್ನು ಕರೆದು ನೀನು ಕ್ಯಾಪ್ಟನ್ ಆಗಿದ್ದವನು ಹೇಳು ನಾನು ಕಣ್ಣೀರು ಹಾಕಿದ್ನಾ ಎಂದಾಗ, ರೂಪೇಶ್ ಇಲ್ಲ ಎಂದಿದ್ದಾನೆ. ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಿಂದ ನಂದಿನಿ ಔಟ್

    ಮತ್ತೆ ಸೋನು(Sonu) ಮತ್ತು ಜಯಶ್ರೀ ಕಡೆಗೆ ಸಾನ್ಯಾಳ ಗಮನ ತಿರುಗಿದೆ. ಅದೇಗೆ ಹೇಳುತ್ತೀರಾ. ನೀವೂ ಹೇಳಿದ್ದಕ್ಕೆ ಸೋಮಣ್ಣ ಇವತ್ತು ಆ ರೀತಿ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದಿದ್ದಾರೆ. ಜಯಶ್ರೀ ಎಮೋಷನಲ್(Emotional) ಅಂದಿದ್ದಾಳೆ, ಸೋನು ಕಣ್ಣೀರು ಹಾಕಿದ್ದೀಯಾ ಅಂತ ಮತ್ತೆ ಮತ್ತೆ ವಾದ ಮಾಡಿದ್ದಾರೆ. ಜಗಳ ತಾರಕ್ಕೇರಿದಾಗ ಆಯಿತು ಬಿಡು ನೀನು ಕಣ್ಣೀರು ಹಾಕಿಲ್ಲ ತಾನೇ. ಜನ ನೋಡಿದ್ದಾರೆ ಅಂತ ಸೋನು ಸುಮ್ಮನೆ ಆಗಿದ್ದಾರೆ. ಈ ಮಧ್ಯೆ ಇದೇ ಕಣ್ಣೀರಿನ ವಿಚಾರ ಸೋಮಣ್ಣ ಹಾಗೂ ರೂಪೇಶ್ ನಡುವೆಯೂ ವಾದ ಪ್ರತಿವಾದ ನಡೆದಿದೆ. ಅವಳ ಕಣ್ಣೀರು ನೋಡಿ ನಾನು ಅವಕಾಶ ಹೇಗೆ ಕೊಟ್ಟಿದ್ದೇನೆ ಎಂದು ಸೋಮಣ್ಣನ ಬಳಿ ಕೇಳಿದ್ದಾರೆ. ಆದರೆ ಕೆಲವೊಂದು ವಿಚಾರಗಳು ಡ್ರ್ಯಾಗ್ ಆಗಿದೆ. ಅಷ್ಟರಲ್ಲಿ ಬಿಗ್ ಬಾಸ್ ವೇದಿಕೆ ಸಿದ್ಧವಾಯಿತು. ಸುದೀಪ್ ಪ್ರತ್ಯಕ್ಷವಾದರು. ಹೀಗಾಗಿ ಜಗಳ ಅಲ್ಲಿಗೆ ನಿಂತಿತು.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ರೂಪೇಶ್‍ಗೆ ಶುರುವಾಯ್ತು ಇಮೇಜ್ ಚಿಂತೆ – ಮಂಗ್ಳೂರು ಹುಡ್ಗಿ ಬಿಟ್ಟಳಾ ಹುಳ?

    ರೂಪೇಶ್ ಬಿಗ್‍ಬಾಸ್(BiggBoss) ಮನೆಗೆ ಬಂದಾಗ ಹೆಚ್ಚು ಕ್ಲೋಸ್ ಆಗಿದ್ದು ಸಾನ್ಯಾ(Sanya). ಆದರೆ ರೂಪೇಶ್ ಹೆಸರು ಬಂದಾಗಲೆಲ್ಲಾ ಸಾನ್ಯಾ ಹೆಸರು ತಳುಕಿ ಹಾಕಿಕೊಳ್ಳುತ್ತಿರುವುದು ರೂಪೇಶ್ ಗೆ ಇಷ್ಟವಿಲ್ಲ. ಅದಕ್ಕಾಗಿಯೇ ಸಾಕಷ್ಟು ಬಾರಿ ಸಾಕಷ್ಟು ಸದಸ್ಯರಿಗೆ ರೂಪೇಶ್ ಆ ಬಗ್ಗೆ ಸಮರ್ಥನೆ ಕೊಡುವುದಕ್ಕೆ ಟ್ರೈ ಮಾಡಿದ್ದಾರೆ. ಆದರೆ ಒಂದಷ್ಟು ದಿನ ತಣ್ಣಗಾಗಿದ್ದ ಸಾನ್ಯಾ ಆ್ಯಂಡ್ ರೂಪೇಶ್(Rupesh) ಎಂಬ ಹೆಸರು ಈಗ ಮತ್ತೆ ಮತ್ತೆ ಓಡಾಡುತ್ತಿದೆ. ರೂಪೇಶ್ ಯಾರು ಏನೇ ಹೇಳಲಿ ಸಆನ್ಯಾ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ ಎಂದು ಹೇಳಿದ್ದಾರೆ. ಈ ಮಧ್ಯೆ ಮಂಗಳೂರಿನಿಂದ ಬಂದ ವೀಡಿಯೋ ಮೆಸೇಜ್ ಒಂದು ರೂಪೇಶ್ ತನ್ನ ಇಮೇಜ್ ಬಗ್ಗೆ ಚಿಂತೆ ಮಾಡುವಂತೆ ಮಾಡಿಟ್ಟಿದೆ.

    ರೂಪೇಶ್‍ಗೆ ಗರ್ಲ್ ಫ್ರೆಂಡ್ ಇಲ್ಲ ಅದನ್ನು ರೂಪೇಶ್ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಆ್ಯಂಡ್ ಗರ್ಲ್ ಫ್ರೆಂಡ್ ಜೊತೆ ಹೇಗೆ ಇರಬೇಕು ಎಂಬುದು ಗೊತ್ತಿಲ್ಲ ಎಂಬುದನ್ನು ಇತ್ತೀಚೆಗೆ ಸಾನ್ಯಾ ಬಳಿ ಹಂಚಿಕೊಂಡಿದ್ದರು. ಜೊತೆಗೆ ಗರ್ಲ್ ಫ್ರೆಂಡ್ ಸಿಕ್ಕಿದರೆ ಅವಳಿಗೆ ಹರ್ಟ್ ಆಗುವಂತ ಯಾವ ಕೆಲಸವನ್ನು ಮಾಡುವುದಿಲ್ಲ ಎಂದು ಸಹ ಹೇಳಿಕೊಂಡಿದ್ದರು. ಇದನ್ನು ಕೇಳಿಸಿಕೊಂಡ ಹೆಣ್ಣು ಮಕ್ಕಳು ರೂಪೇಶ್ ಹೊರಗೆ ಬರುತ್ತಿದ್ದಂತೆ ಪ್ರಪೋಸ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿರಬೇಕು. ನಿರ್ದೇಶನ, ಸಿನಿಮಾ ಅಂತ ಯಾವಾಗಲೂ ಬ್ಯುಸಿ ಇರುವ ರೂಪೇಶ್‍ಗೆ ಇಮೇಜ್ ಬಗ್ಗೆ ಸಾಕಷ್ಟು ಕಾಳಜಿ. ಆದರೆ ಮಂಗಳೂರಿನ ಆ ಬೆಡಗಿ ಹೇಳಿದ ಇಮೇಜ್ ಸಾನ್ಯಾನ ಎಂಬುದೇ ರೂಪೇಶ್ ಗೊಂದಲ. ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರೂಪೇಶ್ ಮತ್ತು ರಾಕೇಶ್(Rakesh) ನಡುವೆ ಸಖತ್ ಡೀಪ್ ಆಗಿ ಮಾತುಕತೆ ನಡೆಯುತ್ತಿತ್ತು. ಯಾರು ಯಾರಿಗೂ ಮಾತು ನಿಲ್ಲಿಸುವ ರೀತಿ ಕಾಣಲೇ ಇಲ್ಲ. ಸಮರ್ಥನೆಗಳು ಹೆಚ್ಚಾಗುತ್ತಿದ್ದಂತೆ ಬಿಗ್‍ಬಾಸ್ ಕಡೆಯಿಂದ ಎಲ್ಲರೂ ಸೋಫಾ ಮೇಲೆ ಕುಳಿತುಕೊಳ್ಳಲು ಆರ್ಡರ್ ಬಂತು. ಬಿಗ್‍ಬಾಸ್ ಮಾತಿನಂತೆ ಎಲ್ಲರು ಆಸಿನರಾದರೂ. ಬಿಗ್‍ಬಾಸ್ ಆಗಾಗ ಪಬ್ಲಿಕ್ ಬೈಟ್ ಅನ್ನು ಕಳುಹಿಸಿಕೊಡುತ್ತಾರೆ. ಮನೆಯ ಸದಸ್ಯರಲ್ಲಿ ಜನಕ್ಕೆ ಯಾರು ಇಷ್ಟವೋ ಅವರ ಬಗ್ಗೆ, ಅವರ ಆಟದ ಬಗ್ಗೆ ಮಾತನಾಡಿ ಒಂದು ವೀಡಿಯೋ ಕಳುಹಿಸುತ್ತಾರೆ. ಇವತ್ತು ಎರಡು ವೀಡಿಯೋ ಬಂದಿತ್ತು. ಒಂದು ನಂದಿನಿಗೆ ಮತ್ತೊಂದು ರೂಪೇಶ್‍ಗೆ. ಮೊದಲಿಗೆ ಸಂಜೀವಿನಿ ಎಂಬುವವರು ಮಾತನಾಡಿ ನನ್ನ ಫೇವರಿಟ್ ನಂದಿನಿ(Nandini). ನಂದು ಟಾಸ್ಕ್ ಬಿಟ್ಟು ನಿಮಗೆ ಒಂಟಿತನ ಕಾಡುತ್ತಿದೆ. ನೀವೂ ಬೇರೆಯವರ ಜೊತೆಗೆ ಸಮಯ ಕಳೆದರೆ ನಿಮ್ನನ್ನು ನೀವೂ ಮನರಂಜನಾತ್ಮಕವಾಗಿ ಇಟ್ಟುಕೊಳ್ಳಬಹುದು ಎಂದಿದ್ದಾರೆ. ಇಲ್ಲೂ ನನಗೆ ವಿಶ್ ಮಾಡುವವರು ಇದ್ದಾರಾ ಅಂತ ನಂದು ಫುಲ್ ಖುಷಿ ಆಗಿ ಕುಣಿದಾಡಿ ಬಿಟ್ಟರು. ಇದನ್ನೂ ಓದಿ: ‘ಈ ಶನಿವಾರ ನಿನ್ನ ಮನೆಗೆ ಕಳಿಸ್ತಾರೆ’ ಎಂದು ಗುರೂಜಿಗೆ ಭವಿಷ್ಯ ನುಡಿದ ಸೋನು ಶ್ರೀನಿವಾಸ್ ಗೌಡ

    ನೆಕ್ಸ್ಟ್ ಬಂದಿದ್ದೆ ಸೌಮ್ಯ ಅವರ ಬೈಟ್, ಹಲೋ ನನ್ನ ಹೆಸರು ಸೌಮ್ಯ ಅಂತ. ನಾನು ಮಂಗಳೂರಿನವರು. ಇವತ್ತು ರೂಪೇಶ್ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದೇನೆ. ಚೆನ್ನಾಗಿ ಆಟ ಆಡುತ್ತಿದ್ದೀರಾ. ಆದರೆ ನನ್ನ ಪರ್ಸನಲ್ ಮೆಸೇಜ್ ಏನು ಅಂದರೆ, ಎಲ್ಲೋ ಈ ವೀಕ್ ನಿಮ್ಮ ಇಮೇಜ್ ಮಿಸ್ಸಾಯಿತು ಎನಿಸುತ್ತದೆ. ಫ್ರೆಂಡ್ಶಿಪ್ ಏನಿದೆ ಅದನ್ನು ಹೊರಗಡೆ ಬಂದು ಕೂಡ ನಿಭಾಯಿಸಬಹುದು. ಜಾಸ್ತಿ ಗೇಮ್ ಬಗ್ಗೆ ಗಮನ ನೀಡಿ ಎಂದಿದ್ದಾರೆ. ಇದಾದ ಮೇಲೆ ನಂದಿನಿ ಅಂಡ್ ರೂಪೇಶ್ ಥ್ಯಾಂಕ್ಸ್ ಹೇಳಿದ್ದಾರೆ. ನಾನು ಫ್ರೆಂಡ್ಶಿಪ್ ಅಂತ ಬಂದರೆ ಸದಾ ನಿಂತುಕೊಳ್ಳುತ್ತೇನೆ. ನಿಮಗೆ ಆ ರೀತಿ ಅನ್ನಿಸಿದರೆ ಖಂಡಿತ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಓವರ್ ಲ್ಯಾಪ್ ಆಗದಂತೆ ಟ್ರೈ ಮಾಡುತ್ತೇನೆ ಎಂದಿದ್ದಾರೆ.

    ಮಧ್ಯಾಹ್ನ ಇದೇ ವಿಚಾರವನ್ನು ರೂಪೇಶ್, ಸಾನ್ಯಾ ಬಳಿ ಡಿಸ್ಕಸ್ ಮಾಡುತ್ತಿದ್ದನು. ಏನು ಅವರು ಹೇಳಿದ ವರ್ಡ್ ಎಂದಾಗ ಸಾನ್ಯಾ, ಇಮೇಜ್ ಅಂದರು. ಅದು ರಾಂಗ್ ವರ್ಡ್. ಅವರಿಗೆ ಫ್ರೇಮ್ ಮಾಡುವುದಕ್ಕೆ ಬಂದಿಲ್ಲ ಎಂದಿದ್ದಾಳೆ. ಆದರೆ ರೂಪೇಶ್ ಗೊಂದಲದಲ್ಲಿದ್ದಾರೆ. ಈ ವಾರದ್ದು ಹೇಳಿದ್ದ ಅಥವಾ ಕಳೆದ ವಾರದ್ದು ಹೇಳಿದ್ದ. ಮೇ ಬಿ ಯಾವ ಇಮೇಜ್ ಇದೆ. ಮಂಗಳೂರು ಕಡೆ ನಾನು ಯಾವ ಹುಡುಗಿಯರ ಜೊತೆ ಹೋಗಲ್ಲ ಎಂಬ ಇಮೇಜ್ ಇದೆ. ಹೀಗಾಗಿ ಆ ರೀತಿ ಹೇಳಿರಬಹುದು ಎಂದಾಗ ಸಾನ್ಯಾ ಅದೇನು ಅಂತ ಹೇಳು ಹೇಳು ಎಂದಿದ್ದಾರೆ. ಅದರಿಂದ ಏನು ತಿದ್ದುಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಆ ಇಮೇಜ್ ಬಗ್ಗೆಯೇ ಯೋಚನೆ ಮಾಡುತ್ತಾ ಕೂತಿದ್ದಾರೆ. ಆದರೆ ಸಾನ್ಯಾ ಅವಳ ಬಗ್ಗೆ ಎಂಬುದನ್ನು ಬುದ್ದಿವಂತಿಕೆಯಿಂದ ಹೈಡ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ರೂಪೇಶ್(Roopesh) ಅವರ ಕ್ಯಾಪ್ಟೆನ್ಸಿ ಮುಗಿದಿದೆ. ಯಾರೇ ಕ್ಯಾಪ್ಟನ್ ಆದರೂ ಮುಗಿದ ಮೇಲೆ ಮನೆಯವರಿಂದ ಅಂಕ ನೀಡಲಾಗುತ್ತದೆ. ಅದರಂತೆ ರೂಪೇಶ್‌ಗೂ ಮನೆಯವರೆಲ್ಲ ಪಾಸಿಟಿವ್ ಅಂಡ್ ನೆಗೆಟಿವ್ ಎರಡನ್ನು ಹೇಳಿ ಒಂದಷ್ಟು ಅಂಕ ನೀಡಿದರು.

    ಅದರಲ್ಲಿ ಎಲ್ಲಾ ಮುಗಿದ ಮೇಲೂ ರೂಪೇಶ್ ಬೆಂಬಿಡದಂತೆ ರಾಕೇಶ್(Rakesh) ಹೋಗಿ ಬೆಡ್ ರೂಮಿನಲ್ಲಿ ಅದನ್ನೇ ಮಾತನಾಡುತ್ತಿದ್ದಾನೆ. ರೂಪೇಶ್, ನಂಗೆ ಸುತ್ತಿ ಬಳಸಿ ಮಾತನಾಡುವಂತದ್ದು ಏನು ಇಲ್ಲ. ಡೈರೆಕ್ಟ್ ಆಗಿ ಪಾಯಿಂಟ್‌ಗೆ ಬರ್ತೀನಿ. ಸಾನ್ಯಾ(Sanya) ವಿಚಾರದಲ್ಲಿ ಸಾಫ್ಟ್ ಆದೆ ಅನ್ನಿಸಿತು ಎಂದಿದ್ದಾನೆ. ಆಗ ರೂಪೇಶ್ ಅವಳಿಗೆ ಮಾತ್ರ ಕಳುಹಿಸಿಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ನಂದುಗೆ ಬಿಟ್ಟುಕೊಟ್ಟಿದ್ದೆ ಎಂದು ಅಂದಿನ ಗೇಮ್‌ನ ವಿವರಣೆ ನೀಡಿದ್ದಾನೆ.

    ಆ ಮೂರು ಜನರಲ್ಲಿ ಪ್ರಿಯಾರಿಟಿ ಜಾಸ್ತಿ ಇತ್ತು ನನಗನ್ನಿಸಿತು. ಇಲ್ಲಿ ಏನು ನಡೀತಾ ಇದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಆದರೆ ನೀನು ಅದ್ಯಾಕೋ ಪರ್ಸನಾಲಿಟಿಯಲ್ಲಿ ಸ್ವಲ್ಪ ಡಲ್ ಆಗುತ್ತಿದ್ದೀಯಾ ಅನ್ನಿಸುತ್ತಿದೆ. ನಿಮ್ಮಿಬ್ಬರ ನಡುವೆ ಏನೋ ನಡೀತಾ ಇದೆ ಅನ್ನಿಸ್ತಾ ಇದೆ ಎಂದು ರಾಕೇಶ್ ಹೇಳಿದಾಗ ರೂಪೇಶ್ ಸ್ವಲ್ಪ ಗೊಂದಲಕ್ಕೀಡಾಗಿದ್ದಾನೆ. ಆಗ ನನಗೇನು ಆ ರೀತಿ ಅನ್ನಿಸ್ತಾ ಇಲ್ಲ. ಕ್ಯಾಪ್ಟನ್ ಆಗಿ ನಡೆದುಕೊಂಡಿದ್ದೀನಿ. ಬೇಕಾದರೆ ಆ ಬಗ್ಗೆ ನಾನು ಆಲೋಚನೆ ಮಾಡಿಕೊಳ್ಳುತ್ತೇನೆ. ಒಂದು ದಿನ ಆಗಿರುವುದು ಬಿಟ್ಟರೆ ಬೇರೆ ದಿನ ಆಗಿಲ್ಲ ಎಂದು ರೂಪೇಶ್ ಮತ್ತೆ ಸ್ಪಷ್ಟನೆ ನೀಡಿದ್ದಾನೆ.

    ಮತ್ತೆ ಮಾತು ಮುಂದುವರೆಸಿದ ರಾಕೇಶ್, ನಿನ್ನ ತಮಾಷೆ, ನಿನ್ನ ತರಲೆಗಳನ್ನು ನಾವೂ ಕೇಳಿಯೇ ಇಲ್ಲ. ನಿನ್ನ ತಮಾಷೆಯನ್ನು ನಾವೂ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ ಎಂದಿದ್ದಾನೆ. ಅದಕ್ಕೆ ತಕ್ಕಂತೆ ತಿರುಗೇಟು ನೀಡಿದ ರೂಪೇಶ್, ಹಾಗೇ ನೋಡಿದರೆ ನೀನು ಸೋನು ಜೊತೆ ಮಾತನಾಡುವ ಶೈಲಿ, ಬೇರೆಯವರ ಹತ್ರ ಮಾತನಾಡುವ ಶೈಲಿಯಲ್ಲಿ ಬದಲಾವಣೆ ಇದೆ. ನನ್ನ ಹತ್ತಿರ ಅಂತು ಓಪನ್ ಅಪ್ ಆಗಿಯೇ ಇಲ್ಲ ಎಂದಿದ್ದಾನೆ. ಈ ಮಾತುಕತೆಗಳು ಮುಂದುವರಿದು ಒಂದು ಹಗ್ ಮಾಡಿ, ಡಿಸ್ಪ್ಯಾಚ್ ಆಗಿದ್ದಾರೆ.

    ಇನ್ನು ರೂಪೇಶ್ ಈ ಮಾತನ್ನು ಸಾನ್ಯಾಳಿಗೆ ಹೇಳುತ್ತಿದ್ದಾನೆ. ರಾಕಿಗೆ ನಿಂಗೆ ಅವಕಾಶ ಕೊಟ್ಟಂತೆ ಅನ್ನಿಸುತ್ತಿದೆಯಂತೆ. ನಾನು ಅದನ್ನು ಕ್ಲಾರಿಟಿ ಕೊಟ್ಟಿದ್ದೀನಿ ಎಂದಾಗ ಸಾನ್ಯಾ, ನೀನು ಯಾವಾಗಲೂ ಫ್ರೆಂಡ್ಸ್ ಅಂತ ನೋಡಿನೇ ಇಲ್ಲ ಅಂದಿದ್ದಾಳೆ. ಅವನತ್ರ ಏನು ಇಟ್ಟುಕೊಂಡು ಮಾತನಾಡುತ್ತಿದ್ದಾನೆ ಗೊತ್ತಾಗುತ್ತಿಲ್ಲ. ನನ್ನ ಒಳ್ಳೆಯದ್ದಕ್ಕೆ ಹೇಳುತ್ತಾ ಇರುವುದು ಅಂತ ಹೇಳುತ್ತಾನೆ. ಒಂದು ವೇದಿಕೆ ಅಂದ್ರೆ ಅಗ್ರೆಸ್ಸಿವ್ ಆಗುತ್ತೀನಿ ಅಂತಿದ್ದ. ಹಾಗಾದ್ರೆ ಇದು ಏನು. ಮನೆಯಲ್ಲಿದ್ದಾಗ ಹೇಗೆ ಇರುತ್ತೀವಿ ಆ ರೀತಿ ಇರಬೇಕು ಅಲ್ವಾ ಅಂತ ಸಾನ್ಯಾ ಜೊತೆಗೆ ಮಾತು ಮುಗಿಸಿದ. ಇದನ್ನೂ ಓದಿ: ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಮತ್ತೆ ರಾಕಿ ಬಳಿ ಬಂದ ರೂಪೇಶ್, ನಾನು ಆ ಬಗ್ಗೆ ಮಾತನಾಡುವುದಕ್ಕೆ ಯಾಕೆ ಸಮಯ ತೆಗೆದುಕೊಂಡೆ ಎಂದರೆ ಎಲ್ಲವನ್ನು ಅವಲೋಕನ ಮಾಡಿಕೊಳ್ಳಬೇಕಿತ್ತು ಅದಕ್ಕೆ ಎಂದು ವಿವರಣೆ ನೀಡುತ್ತಾ ಬಂದಿದ್ದು, ನೀನು ಹೇಳಿದ ಕೆಲವೊಂದು ಪಾಯಿಂಟ್ ಓಕೆ ಅನ್ನಿಸಿತು. ಅದನ್ನು ತಿದ್ದುಕೊಳ್ಳುತ್ತೇನೆ. ಆದರೆ ಓವರ್ ಆಲ್ ನನ್ನನ್ನು ನೋಡುವಾಗ ಸಾನ್ಯಾ ಬಂದ್ರೆ ಮಾತ್ರ ಫ್ರೆಂಡ್ಶಿಪ್ ಮಾತ್ರ ಕಾಣಿಸುತ್ತೆ ಎಂದು ಹೇಳುತ್ತಾನೆ. ಅದೇ ವೇಳೆ ಬಿಗ್‌ಬಾಸ್ ಎಲ್ಲರಿಗೂ ಲೀವಿಂಗ್ ಏರಿಯಾ ಸೋಫಾದಲ್ಲಿ ಕುಳಿತುಕೊಳ್ಳಲು ಹೇಳಿದ್ದರು. ಆಮೇಲೆ ಸಿಗು ಮತ್ತೆ ಈ ಬಗ್ಗೆ ಮಾತನಾಡೋಣ ಎಂದು ಒಂದಷ್ಟು ಚರ್ಚೆ ನಡೆಯಿತು.

    ಈ ಬಗ್ಗೆ ಸಂಜೆ ಮತ್ತೆ ಸಾನ್ಯಾ ಮತ್ತು ರೂಪೇಶ್ ಚರ್ಚೆ ನಡೆಸಿದ್ದಾರೆ. ಆಗ ಸಾನ್ಯಾ ಅವನು ನಾನು ಹೇಳಿದ್ದೆ ಯಾವಾಗಲೂ ರೈಟ್ ಎಂಬ ರೀತಿ ಕ್ರಿಯೇಟ್ ಆಗಿದೆ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಎಲ್ಲೆಲ್ಲಿ ಮಾತು ಅಗತ್ಯವಿಲ್ಲವೋ ಅಲ್ಲಿಯೂ ಮಾತನಾಡುವುದಕ್ಕೆ ಶುರು ಮಾಡಿದ್ದಾನೆ. ಸ್ಮಾರ್ಟ್ ಗೇಮ್ ಎಂದಿದ್ದಾಳೆ. ಇದನ್ನೂ ಓದಿ: ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಸಾಲ ತೀರಿಸಲು ಬಂದಿದ್ದಾರಾ ಜಶು – ರೂಪೇಶ್ ಮೇಲೆ ಇರೋದು ಸಿಟ್ಟೋ, ಕಿಂಡಲ್ಲೋ?

    ಸಾಲ ತೀರಿಸಲು ಬಂದಿದ್ದಾರಾ ಜಶು – ರೂಪೇಶ್ ಮೇಲೆ ಇರೋದು ಸಿಟ್ಟೋ, ಕಿಂಡಲ್ಲೋ?

    ಬಿಗ್‍ಬಾಸ್ ಓಟಿಟಿ ಮುಗಿಯುವುದಕ್ಕೆ ಕಾಲ ತುಂಬಾ ಸನಿಹವಾಗಿದೆ. ಇನ್ನೆರಡು ವಾರ ಕಳೆದರೆ ಸಂಪೂರ್ಣವಾಗಿ ಬಿಗ್‍ಬಾಸ್ ಮುಗಿದಿರುತ್ತದೆ. ಈ ಮಧ್ಯೆ ಇಂದು ನಾಮಿನೇಷನ್ ಪ್ರಕ್ರಿಯೆ ಕೂಡ ಮೊದಲಿನಂತೆಯೇ ನಡೆದಿದೆ. ಮನೆಯವರೆಲ್ಲರ ಆಯ್ಕೆಯ ಪ್ರಕಾರ, ಸೋಮಣ್ಣ, ನಂದಿನಿ, ಸೋನು, ಜಯಶ್ರೀ, ಆರ್ಯವರ್ಧನ್ ಅವರು ನಾಮಿನೇಷನ್ ಆಗಿದ್ದರು. ಇನ್ನು ರಾಕೇಶ್ ಜನರ ಆಯ್ಕೆಯಂತೆ ಬಚಾವ್ ಆಗಿದ್ದಾರೆ. ರೂಪೇಶ್ ಕ್ಯಾಪ್ಟನ್ ಆಗಿರುವ ಕಾರಣ ನಾಮಿನೇಷನ್ ಮಾಡುವಂಗಿಲ್ಲ. ಇನ್ನುಳಿದದ್ದು ಸಾನ್ಯಾ ಮತ್ತು ಜಶ್ವಂತ್ ನಾಮಿನೇಷನ್ ಆಗದೇ ಇದ್ದವರು. ಕ್ಯಾಪ್ಟನ್ ಆಗಿದ್ದ ರೂಪೇಶ್ ಅವರಿಗೆ ಬಿಗ್‍ಬಾಸ್ ಸೂಚನೆ ನೀಡಿತ್ತು. ನೇರ ನಾಮಿನೇಷನ್ ಮಾಡುವ ಅವಕಾಶ. ರೂಪೇಶ್‍ಗೆ ಸಾನ್ಯಾ ಕೂಡ ಮುಖ್ಯ ಜಶ್ವಂತ್ ಕೂಡ ಮುಖ್ಯ. ಆದರೆ ಮೊದಲ ಆದ್ಯತೆ ಕೊಟ್ಟಿದ್ದು ಸಾನ್ಯಾಗೆ. ಸೋ ಇಲ್ಲಿ ಜಶ್ವಂತ್ ನೇರ ನಾಮಿನೇಟ್ ಆಗಿದ್ದರು. ಆದರೆ ಇದಾದ ಮೇಲೆ ಒಂದು ಸ್ವಲ್ಪ ಜಶ್ವಂತ್ ಬೇಸರ ಮಾಡಿಕೊಂಡರು ಎನಿಸುತ್ತದೆ. ಫ್ರೆಂಡ್ ಅಂತ ಹೇಳಿ ನಾಮಿನೇಟ್ ಮಾಡಿಬಿಟ್ಟ ಅಂತ ಫನ್ ಆಗಿ ಅಂದು ಹೊರಟಿದ್ದಾರೆ.

    ಆದರೆ ಕುಂತರೂ ನಿಂತರೂ ನಾಮಿನೇಷನ್ ದೇ ಡಿಸ್ಕಷನ್, ನಂದು ಬಳಿ ಬಂದು ಅಳಲು ತೋಡಿಕೊಳ್ಳುತ್ತಿದ್ದ, ಜಶ್ವಂತ್ ಇನ್ನು ಎಂಟರ್ಟೈನ್ ಮಾಡಬೇಕು ಅಂತಿದ್ದಾಗ, ನಂದು ರಿಪ್ಲೆ ಮಾಡಿ ಮಾಡ್ತಾ ಇದ್ದಿಯಾ ಅಲ್ವಾ ಅಂದಿದ್ದಾರೆ. ಆದರೆ ರೂಪೇಶ್ ಕೊಟ್ಟ ರೀಸನ್ ನನಗೆ ಇಷ್ಟ ಆಗಲಿಲ್ಲ. ಹೆಚ್ಚು ನಾಮಿನೇಟ್ ಆಗಿಲ್ಲವಲ್ಲ ಅದಕ್ಕೆ ಅಂತ ಹೇಳಿ ನಾಮಿನೇಟ್ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಅಲ್ಲಿಗೆ ಮುಗಿದ ಮಾತುಕತೆ ಮತ್ತೆ ಕಸ ಗೂಡಿಸುವಾಗ ಶುರುವಾಗಿದೆ. ಇದನ್ನೂ ಓದಿ: ಜಶ್ವಂತ್‍ನಿಂದ ನಂದಿನಿ ಅಂತರ ಕಾಯ್ದುಕೊಳ್ಳುತ್ತಿರುವುದ್ಯಾಕೆ..?

    ಅತ್ತ ರೂಪೇಶ್ ಮತ್ತು ಸಾನ್ಯಾ ಕೂಡ ಈ ಬಗ್ಗೆ ಡಿಸ್ಕಷನ್ ಮಾಡಿದ್ದಾರೆ. ರೂಪೇಶ್, ನೇರ ನಾಮಿನೇಟ್ ಮಾಡಿದ್ದಕ್ಕೆ ಜಶು ಫೀಲ್ ಮಾಡಿಕೊಂಡಿದ್ದಾರೆ. ಆದರೆ ನನಗೆ ಆಪ್ಶನ್ ಇರಲಿಲ್ಲ. ನಿನ್ನ ಹೇಗೆ ನಾಮಿನೇಟ್ ಮಾಡುವುದಕ್ಕೆ ಸಾಧ್ಯ. ಅದು ನ್ಯಾಯನೂ ಅಲ್ಲ. ನಾನು ಮಾಡಿರುವುದರಲ್ಲಿ ತಪ್ಪಿಲ್ಲ. ಸರಿಯಾಗಿದೆ ನನ್ನ ನಿರ್ಧಾರ ಅಂತ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಾನೆ. ಆಗ ಸಾನ್ಯ, ಜಶ್ವಂತ್ ಪರ ಮಾತನಾಡಿದ್ದು, ಅವನು ಮೆಚ್ಯುರ್ಡ್ ಇದ್ದಾನೆ. ಅರ್ಥ ಮಾಡಿಕೊಳ್ಳುತ್ತಾನೆ ಎಂದಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಜಶ್ವಂತ್ ಕಸ ಗುಡಿಸುತ್ತಿದ್ದ ವೇಳೆ ಅಲ್ಲಿಗೆ ಬಂದ ರೂಪೇಶ್‍ನಿಂದ ಮತ್ತೆ ಒಂದಷ್ಟು ಫನ್ನಿ ಇನ್ಸಿಡೆಂಟ್ ನಡೆದಿದೆ. ಸ್ಲೈಲ್ ಕೊಟ್ಟು ರೂಪೇಶ್ ಹಗ್ ಮಾಡಿದ್ದಾರೆ. ಆಗ ಜಶ್ವಂತ್, ಏನು ಒಂದು ಸ್ಮೈಲ್ ಕೊಟ್ಟರೆ ಅದಕ್ಕೆ ನಾನು ಬೀಳುತ್ತೇನೆ ಅಂತಾನ. ಒಂದು ಬೆಟರ್ ರೀಸನ್ ಗೊತ್ತಿಲ್ವಾ ನಿನಗೆ ಎಂದಿದ್ದಾರೆ. ಅದಕ್ಕೆ ರೂಪೇಶ್ ಸಮಾಧಾನ ಮಾಡಿದ್ದು, ನೀವಿಬ್ಬರು ಸ್ಟ್ರಾಂಗ್ ಅಂತ ಹೇಳಿದ್ದಾರೆ. ಆದರೆ ಜಶ್ವಂತ್ ಬೇಸರ ಏನು ಅಂದರೆ ಸರಿಯಾದ ರೀಸನ್ ಕೊಟ್ಟಿಲ್ಲ ಅಂತ. ಆಗ ನಂದಿನಿ ಅಲ್ಲಿಯೇ ಪಾಸಾದಾಗ ನಾಮಿನೇಷನ್ ನಿಂಗೆ ಪಾಪ ಎನ್ನಿಸೋದಿಲ್ವಾ ಎಂದಿದ್ದಾರೆ. ಆಗ ನೀನು ಹೀರೋ ಬಿಡು ಎಂದು ನಂದಿನಿ ಹೇಳಿ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ.

    ಮತ್ತೆ ಅಡುಗೆ ಮನೆಯಲ್ಲಿ ಜಶ್ವಂತ್ ಅಂಡ್ ರೂಪೇಶ್ ಮುಖಾಮುಖಿಯಾಗಿದ್ದಾರೆ. ಆಗ ಜಶ್ವಂತ್, ರೂಪೇಶ್ ಬಳಿ ನಾನು ನನ್ನ ಫ್ಯಾಮಿಲಿಗೆ ಹೇಳಿ ಬಂದಿದ್ದೇನೆ, ಗೆದ್ದುಕೊಂಡು ಬರುತ್ತೇನೆ. ಸಾಲ ಎಲ್ಲಾ ತೀರಿಸೋಣಾ ಅಂತ ಹೇಳಿದ್ದೇನೆ. ಆದರೆ ನೀನು ನನ್ನ ನಾಮಿನೇಟ್ ಮಾಡಿದ್ದೀಯಾ ಅಂದಾಗ ರೂಪೇಶ್ ನಾನು ನಾಮಿನೇಟ್ ಮಾಡಿರುವುದು ಎಲಿಮಿನೇಟ್ ಮಾಡಿಲ್ಲ ಎಂದಿದ್ದಾರೆ. ಈ ಮಧ್ಯೆ ರೂಪೇಶ್ ನೊಣದ ಬಗ್ಗೆ ಕಾಳಜಿ ತೋರಿಸಿದಾಗ ಮತ್ತೆ ಜಶ್ವಂತ್ ಕಿಂಡಲ್ ಮಾಡಿದ್ದಾರೆ. ನೋಡು ನೊಣದ ಬಗ್ಗೆ ಕಾಳಜಿ ತೋರಿಸುತ್ತೀಯಾ ನನ್ನ ಬಗ್ಗೆ ಇಲ್ಲ ಅಂತಾನೆ. ಆಗ ಮತ್ತೆ ವಿವರಣೆ ನೀಡಿದ ರೂಪೇಶ್, ನೋಡು ಹೊರಗೆ ಬಂದಾಗ ಯಾರಾದರೂ ನಿನ್ನ ಅಟ್ಯಾಕ್ ಮಾಡಿದರೆ ನಾನು ಅಲ್ಲಿ ಇರುತ್ತೇನೆ. ಮೊದಲು ನನ್ನ ಟಚ್ ಮಾಡು ಅಂತ ಅಂದಾಗ. ಹಾ ನಂಗೆ ಯಾರಾದರೂ ಹೊಡೆಯೋದಕ್ಕೆ ಬಂದಾಗ ನಾನು ನಿನಗೆ ಫೋನ್ ಮಾಡಿದರೇ ಆ ಮಗ ಇನ್ನೊಂದು 6 ಅವರ್ಸ್‍ನಲ್ಲಿ ಬರುತ್ತೇನೆ ಅಂತ ಹೇಳುತ್ತೀಯಾ ಅಂತ ಒಂದಷ್ಟು ತಮಾಷೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಜಯಶ್ರೀ, ಚೈತ್ರಾ ಬೆಸ್ಟಿ ಅಂದ ರೂಪೇಶ್- ಸಾನ್ಯಾಗೆ ಶುರುವಾಯ್ತು ಹೊಟ್ಟೆಕಿಚ್ಚು..?

    ಬಾರಿಯ ಬಿಗ್‍ಬಾಸ್‍ನಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಹೆಸರು ಹೆಚ್ಚು ಕೇಳಿಬರುತ್ತಿದೆ. ಆದರೆ ಇತ್ತೀಚೆಗೆ ರೂಪೇಸ್ ಕೊಂಚ ತಿದ್ದುಕೊಂಡಂತೆ ಕಾಣುತ್ತಿದ್ದಾರೆ. ಮುಂಚೆ ಇದ್ದಷ್ಟು ಕ್ಲೋಸ್ ಇಲ್ಲ. ಈ ಮೂಲಕ ಬಿಗ್‍ಬಾಸ್ ನಲ್ಲಿ ಹೇಗಿರಬೇಕು ಎಂಬುದನ್ನು ಅರಿತಂತಿದೆ. ಅಲ್ಲದೆ ತನ್ನ ಸಮಯವನ್ನು ಎಲ್ಲರೊಂದಿಗೆ ಕಳೆಯಲು ಇಷ್ಟಪಡುತ್ತಿದ್ದಾರೆ ಎಂದನಿಸುತ್ತಿದೆ. ಹೀಗಾಗಿಯೇ ಇಂದು ಚೈತ್ರಾ ಹಾಗೂ ಜಯಶ್ರೀ ಕೂಡ ಬೆಸ್ಟ್ ಫ್ರೆಂಡ್ ಎಂದಿದ್ದಾರೆ.

    ಬಿಗ್ ಬಾಸ್ ಸೂಪರ್ ಸಂಡೇ ಶೋನಲ್ಲಿ ಈ ವಾರ ಇಂಟ್ರೆಸ್ಟಿಂಗ್ ವಿಚಾರಗಳು ಕೆಲವೊಂದು ಪ್ರಶ್ನೆಗಳ ಮೂಲಕ ಹೊರ ಬಂದಿದೆ. ಈ ಮನೆಯಲ್ಲಿ ಬೆಸ್ಟ್ ಫ್ರೆಂಡ್ಸ್ ಯಾರ್ಯಾರು ಎಂದು ಸುದೀಪ್ ಎಲ್ಲರಿಗೂ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಎಲ್ಲರೂ ಅವರಿಗೆ ಯಾರ್ಯಾರು ಬೆಸ್ಟ್ ಫ್ರೆಂಡ್ ಎಂಬುದನ್ನು ಹೇಳಿದರು. ಚೈತ್ರಾ ಹೇಳಿದ್ದು ಜಯಶ್ರೀ ಹೆಸರು, ಸೋನು ಹೇಳಿದ್ದು ರಾಕೇಶ್ ಹೆಸರು, ನಂದಿನಿ ಹೇಳಿದ್ದು, ಸಾನ್ಯಾ, ರೂಪೇಶ್. ರೂಪೇಶ್ ಸರದಿ ಬಂದಾಗ, ಸಾನ್ಯಾ, ನಂದಿನಿ, ಜಶ್ವಂತ್, ರಾಕೇಶ್, ಜಯಶ್ರೀ ಮತ್ತು ಚೈತ್ರಾ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಸಖತ್ ಶಾಕ್ ಕೊಟ್ಟ ಜನ

    ರೂಪೇಶ್ ಅವರು ಚೈತ್ರಾ ಹಾಗೂ ಜಯಶ್ರೀ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಇತ್ತ ಸಾನ್ಯಾ ಶಾಕ್ ಆಗಿದ್ದಾರೆ. ರೂಪೇಶ್ ಹೀಗೆ ಹೇಳ್ತಿದ್ದಂತೆ ‘ಹ’ ಎಂಬ ಉದ್ಘಾರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ರೂಪೇಶ್ ಈ ಬಗ್ಗೆ ತನ್ನ ಗಮನ ಹರಿಸಿಲ್ಲ. ಬಳಿಕ ಸುದೀಪ್ ಎಲ್ಲರ ಅಭಿಪ್ರಾಯ ಕೇಳಿ ಒಂದು ಬ್ರೇಕ್ ಹೇಳಿದ್ದಾರೆ. ಬ್ರೇಕ್ ಸಮಯದಲ್ಲಿ ಪೌಡರ್ ರೂಮಿನಲ್ಲಿದ್ದಾಗ ರೂಪೇಶ್ ನನ್ನು ಸಾನ್ಯಾ ಪ್ರಶ್ನಿಸಿದ್ದಾರೆ. ಅವರು ಎಲ್ಲಿ ತಪ್ಪು ತಿಳಿದುಕೊಳ್ಳುತ್ತಾರೋ ಎಂದು ಹೇಳುತ್ತಾ ಇದ್ದೀನಿ ಅಂತ ಕಾಣಿಸಿತು ಎಂದು ಒತ್ತಿ ಒತ್ತಿ ಹೇಳಿದ್ದಾರೆ. ಅದಕ್ಕೆ ಅಲ್ಲಿಯೇ ರಿಯಾಕ್ಟ್ ಮಾಡಿದೆ ಎಂದಾಗ ರೂಪೇಶ್ ನಾನು ನಿನ್ನ ರಿಯಾಕ್ಷನ್ ನೋಡಿಲ್ಲ ಎಂದಿದ್ದಾರೆ.

    ಬಳಿಕ ಇಬ್ಬರು ಮಾತು ಮುಂದುವರಿಸಿ ನೀನು ಅವರ ಹೆಸರನ್ನು ತೆಗೆಯಬಾರದಿತ್ತು ಎಂಬುದು ನಿನ್ನ ವಾದವಾಗಿತ್ತಾ ಎಂದು ರೂಪೇಶ್ ಸಾನ್ಯಾರನ್ನು ಕೇಳಿದ್ದಾರೆ. ನನ್ನ ಒಬ್ಬಳದ್ದೆ ಅಂತ ವಾದವಲ್ಲ, ಅವರು ಬೆಸ್ಟ್ ಫ್ರೆಂಡ್ ಅಂತ ಕೇಳಿದಾಗ ಐದು ಹೆಸರು ತೆಗೆದುಕೊಂಡಿದ್ದು. ಮೂರು ಹೆಸರು ತೆಗೆದುಕೊಂಡಿದ್ದರೆ ಪರ್ಫೆಕ್ಟ್ ಆಗಿ ಇರುತ್ತಾ ಇತ್ತು. ನಾವೂ ಮೂರು ಜನ ಅಂತ ನನ್ನ ಅನಿಸಿಕೆ. ಓ ಸಾರಿ ಇದು ನನ್ನ ಅನಿಸಿಕೆ. ನಿನ್ನ ಮನಸ್ಸಲ್ಲಿ ಏನಿದೆ ಅಂತ ಯಾರಿಗೆ ಗೊತ್ತು. ಬೆಸ್ಟ್ ಫ್ರೆಂಡ್, ಕ್ಲೋಸ್ ಫ್ರೆಂಡ್, ನೈಸ್ ಫ್ರೆಂಡ್, ಒಳ್ಳೆ ಫ್ರೆಂಡ್ ಎಂದಾಗ ಸರಿ ಬಿಡು ನಾನು ಕರೆಕ್ಟ್ ಮಾಡಿಕೊಳ್ಳುತ್ತೇನೆ ಎಂದು ರೂಪೇಶ್ ಹೇಳಿದ್ದಾರೆ. ಆ ರೀತಿ ಅಲ್ಲ ನಾನು ಯಾಕೆ ನಿನಗೆ ಬೆಸ್ಟ್ ಫ್ರೆಂಡ್ ಹೇಳು, ನಾನು ನಿನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಎಂದಾಗ. ಫಸ್ಟ್ ಸೆಕೆಂಡ್ ಎಲ್ಲಾ ನೀನೇ ಎಂದು ಅದನ್ನು ಅಲ್ಲಿಯೇ ಮತ್ತೆ ಅನೌನ್ಸ್ ಮಾಡ್ತೀನಿ ಎಂದು ಸಾನ್ಯಾಳ ಮುಖದಲ್ಲೊಂದು ನಗು ತರಿಸಿರು.

    Live Tv
    [brid partner=56869869 player=32851 video=960834 autoplay=true]