Tag: ಸಾನ್ಯ

  • ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ರೆಸಾರ್ಟ್‌ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ

    ಬಿ‌ಗ್ ಬಾಸ್ ಮನೆಯ (Bigg Boss House) ಪ್ರೇಮ ಪಕ್ಷಿಗಳಾಗಿ ರೂಪೇಶ್ ಶೆಟ್ಟಿ (Roopesh Shetty) ಮತ್ತು ಸಾನ್ಯ ಅಯ್ಯರ್ (Sanya Iyer)  ಹೈಲೈಟ್ ಆಗಿದ್ದರು. ಬಿಗ್ ಬಾಸ್ ಮನೆಯ ಆಟ ಮುಗಿದ ಮೇಲೂ ಈ ಜೋಡಿ ಸಖತ್ ಸುದ್ದಿಯಲ್ಲಿದೆ. ಹೀಗಿರುವಾಗ ರೂಪೇಶ್ ಮತ್ತು ಸಾನ್ಯ ಬಗ್ಗೆ ರಾಕೇಶ್ ಅಡಿಗ (Rakesh Adiga) ಸ್ಪೋಟಕ ಮಾಹಿತಿಯೊಂದನ್ನ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್ ಒಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರೂಪೇಶ್, ಸಾನ್ಯ ಜೊತೆ ರಾಕೇಶ್ ಅಡಿಗ ಕೂಡ ಕಾಣಿಸಿಕೊಂಡಿದ್ದರು. ಇನ್ನೂ ರೂಪೇಶ್ ಮತ್ತು ಸಾನ್ಯ ಹಲವು ಬಾರಿ ನಾವಿಬ್ಬರು ಫ್ರೆಂಡ್ಸ್ ಅಷ್ಟೇ ನಮ್ಮಿಬ್ಬರ ನಡುವೆ ಬೇರೇ ಎನಿಲ್ಲ ಎಂದು ಹೇಳಿದ್ದರು. ಆದರೆ ಸಾನ್ಯ ಎಲಿಮಿನೇಷನ್ ವೇಳೆ ರೂಪೇಶ್ ಶೆಟ್ಟಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇವರ ನಡುವೆ ಪ್ರೇಮವಿದೆ ಎಂದೇ ವೀಕ್ಷಕರು ಊಹಿಸಿದ್ದರು. ಈ ಬಗ್ಗೆ ರಾಕೇಶ್ ಅಡಿಗ ಕೂಡ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ನಾನು ಒಟಿಟಿಯಲ್ಲಿರುವಾಗಲೇ ರೂಪೇಶ್ (Roopesh Shetty) ಮತ್ತು ಸಾನ್ಯಗೆ ಕೇಳಿದ್ದೆ, ನೀವಿಬ್ಬರು ಡೇಟಿಂಗ್ ಮಾಡ್ತೀರಾ ಅಂತಾ. ಇಲ್ಲಾ ಅಂತಾನೇ ಇಬ್ಬರು ಉತ್ತರ ಕೊಟ್ಟಿದ್ದರು. ಒಟಿಟಿ ಫಿನಾಲೆ ಬಳಿಕ ರೆಸಾರ್ಟ್‌ನಲ್ಲಿರುವಾಗ(Resort) 10 ದಿನ ಇರುವಾಗ ಅಲ್ಲಿ ಮೈಕ್ ಮತ್ತು ಕ್ಯಾಮೆರಾ ಇರಲಿಲ್ಲ ಅಲ್ಲೂ ಕೂಡ ನಾನು ಕೇಳಿದ್ದೀನಿ. ನೀವಿಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದೀರಾ ಅಂತಾ, ಆಗ ಇಲ್ಲಾ ಅಂತಾ ಇಬ್ಬರು ಈ ಬಗ್ಗೆ ಕ್ಲ್ಯಾರಿಟಿ ಕೊಟ್ಟಿದ್ದರು.

    ಒಟಿಟಿಯಲ್ಲಿರುವಾಗಲೇ ಇಬ್ಬರು ರೂಪೇಶ್ ಮತ್ತು ಸಾನ್ಯ ಒಟ್ಟಿಗೆ ಇದ್ದರು. ರೆಸಾರ್ಟ್‌ನಲ್ಲಿ ಇಬ್ಬರ ಬಾಂಡಿಂಗ್ ಮತ್ತಷ್ಟು ಸ್ಟ್ರಾಂಗ್ ಆಯ್ತು. ಸೀಸನ್ 9ರಲ್ಲಿ ಒಬ್ಬರಿಗೊಬ್ಬರು ಸರ್ಪೋಟ್ ಸಿಸ್ಟಮ್ ಆಗಿದ್ದರು. ಸಾನ್ಯ ಮೇಲೆ ರೂಪೇಶ್‌ಗೆ ತುಂಬಾ ನಂಬಿಕೆಯಿದೆ. ಅವಳು ಏನೇ ತನ್ನ ಒಳ್ಳೆಯದಕ್ಕೆ ಎನ್ನುವ ವಿಶ್ವಾಸವಿದೆ. ಹಾಗಾಗಿ ಸಾನ್ಯ ಎಲಿಮಿನೇಷನ್‌ನ (Elimination) ರೂಪೇಶ್‌ಗೆ ಒಪ್ಪಿಕೊಳ್ಳೋಕೆ ಸಾಧ್ಯವಾಗಲಿಲ್ಲ ಇದಾದ ಒಂದು ವಾರದ ಬಳಿಕ ರೂಪೇಶ್ ಶೆಟ್ಟಿ ಬದಲಾದರು. ಟಫ್ ಫೈಟ್ ಕೊಟ್ರು ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೋನು ಶ್ರೀನಿವಾಸ್‌ ಗೌಡಗೆ ಗುಡ್‌ ಬೈ, ಸಾನ್ಯ ನನ್ನ ಲವರ್‌ ಎಂದ ರಾಕೇಶ್‌ ಅಡಿಗ

    ಸೋನು ಶ್ರೀನಿವಾಸ್‌ ಗೌಡಗೆ ಗುಡ್‌ ಬೈ, ಸಾನ್ಯ ನನ್ನ ಲವರ್‌ ಎಂದ ರಾಕೇಶ್‌ ಅಡಿಗ

    ರಿಯಲ್ ಸ್ಟಾರ್ ಉಪೇಂದ್ರ (Upendra) ‘ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದ್ನೆಕಾಯಿ’ ಎಂದಿದ್ದಾರೆ. ಆದರೆ, ರಾಕೇಶ್ ವಿಷಯದಲ್ಲಿ ಪ್ರೀತಿ ಪ್ರೇಮವೇ ನಿತ್ಯದಾಟ ಎನ್ನುವಂತಾಗಿದೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಯಾರ ಎದುರಿಗೆ ಸಿಕ್ಕರೂ, ಬರೀ ಪ್ರೇಮ ಸಲ್ಲಾಪವೇ ನಡೆಯುತ್ತಿದೆ. ಬಿಗ್ ಬಾಸ್ ಓಟಿಟಿಯಲ್ಲಿ (Rakesh) ರಾಕೇಶ್, ಜಯಶ್ರೀ ಮತ್ತು ಸೋನು ನಡುವೆ ತ್ರಿಕೋನ ಪ್ರೇಮ ನಡೆದಿತ್ತು. ಅವಕಾಶ ಸಿಕ್ಕಾಗೆಲ್ಲ ಇಬ್ಬರಿಗೂ ಒಂದೊಂದು ಕಿಸ್ ಕೊಟ್ಟು ಮೆಂಟೇನ್ ಮಾಡ್ತಿದ್ರು. ಬಿಗ್ ಬಾಸ್ ಸೀಸನ್ 9ರಲ್ಲಿ ಅವರಿಬ್ಬರೂ ಇಲ್ಲ. ಹಾಗಾಗಿ ಹೊಸ ಪ್ರೇಮಿಯ ಹುಡುಕಾಟದಲ್ಲಿದ್ದಾರೆ ರಾಕೇಶ್.

    ಎರಡ್ಮೂರು ದಿನದಿಂದ ಹೊಸ ಹಕ್ಕಿಗಾಗಿ ಕಾಳು ಹಾಕುತ್ತಿದ್ದ ರಾಕೇಶ್, ಇದೀಗ ದಿಢೀರ್ ಅಂತ ಸಾನ್ಯ ಅಯ್ಯರ್ (Sanya Iyer) ನನ್ನ ಲವರ್ ಎಂದು ಘೋಷಿಸಿ ಬಿಟ್ಟಿದ್ದಾರೆ. ಇದೇ ವಿಚಾರವಾಗಿಯೇ ಬಿಗ್ ಬಾಸ್ ಮನೆಯಲ್ಲಿ ಸಖತ್ ಚರ್ಚೆ ಕೂಡ ನಡೀತಿದೆ. ಸಾನ್ಯ ಅಯ್ಯರ್ ಕುಡಿದ ಲೋಟದಲ್ಲೇ ರಾಕೇಶ್ ಟಿ ಕುಡಿದಿದ್ದಾರೆ. ಅದನ್ನು ಕಂಡ ಗುರೂಜಿ, ‘ಇದೇನಿದು ಆ ಹುಡುಗಿ ಕುಡಿದಿಟ್ಟ ಕಪ್ ನಲ್ಲಿ ಟಿ ಕುಡೀತಿದ್ದೀಯಾ’ ಎಂದು ಕೇಳುತ್ತಾರೆ. ಒಂದು ಕ್ಷಣವೂ ಯೋಚಿಸದ ರಾಕೇಶ್, ‘ಸಾನ್ಯ ನನ್ನ ಲವರ್’ ಎಂದು ಹೇಳುವ ಮೂಲಕ ಮನೆಯ ಸದಸ್ಯರ ಎದೆಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಪ್ರೀತಿ ಪ್ರೇಮದ ವಿಚಾರವಾಗಿ ರಾಕೇಶ್, ಸಖತ್ ಗೇಮ್ ಆಡ್ತಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸೋನು ಗೌಡ (Sonu Gowda), ಜಯಶ್ರೀ (Jayashree) ಹಿಂದೆ ಬಿದ್ದಿದ್ದವರು, ಆನಂತರ ಅಮೂಲ್ಯ ಜೊತೆ ಸುತ್ತಿದರು. ಸಡನ್ನಾಗಿ ಈಗ ಸಾನ್ಯ ಅಯ್ಯರ್ ನನ್ನ ಲವರ್ ಎನ್ನುತ್ತಾರೆ. ಈ ನಡೆ ದೀಪಿಕಾ ದಾಸ್ಗೆ (Deepika Das) ಅಚ್ಚರಿ ಮೂಡಿಸಿದೆ. ಹಾಗಾಗಿ ರಾಕೇಶ್ ಅವರ ಪ್ರೇಮ ಪುರಾಣ ಕೇಳಲು ಮುಂದಾಗ್ತಾರೆ. ತಾನು ಅದೆಷ್ಟೋ ಜನರನ್ನು ಲವ್ ಮಾಡಿದ್ದು ನಿಜ. ಆದರೆ, ಬ್ರೇಕ್ ಅಪ್ ಆಗಿಲ್ಲ ಎಂದು ಹೊಸ ಬಾಂಬ್ ಸಿಡಿಸ್ತಾರೆ ರಾಕೇಶ್. ಲವ್ ಅಂದರೆ ಬ್ರೇಕ್ ಆಗದೇ ಇರುವ ಅನುಭವ ಎಂದು ಹೊಸ ಪಾಠ ಕೂಡ ಮಾಡ್ತಾರೆ ರಾಕೇಶ್.

    ಲವ್ ವಿಚಾರವಾಗಿ ರಾಕೇಶ್ ಮತ್ತು ಗುರೂಜಿ ನಡುವೆಯೂ ಮತ್ತೆ ಚರ್ಚೆ ನಡೆದಿದೆ. ಸಾನ್ಯ ಟಿ ಕುಡಿದ ಕಪ್ ನಲ್ಲಿ ರಾಕೇಶ್ ಕುಡಿದ ಅನ್ನೋ ವಿಚಾರವನ್ನೇ ಮುಂದಿಟ್ಟುಕೊಂಡು ಸಾರಸ್ಯಕರವಾದ ಮಾತುಗಳನ್ನೂ ಆಡಿದ್ದಾರೆ ರ‍್ಯರ‍್ಧನ್ ಮತ್ತು ರಾಕೇಶ್. ‘ನನ್ನ ಬಸ್ ಈಗ ಸಾನ್ಯ ಕಡೆ ತಿರುಗಿದೆ ಎಂದು ಗುರೂಜಿ ಬಳಿ ರಾಕೇಶ್ ಹೇಳ್ತಾರೆ. ಅದಕ್ಕೆ ಗುರೂಜಿ ‘ನೋಡಿಕೊಂಡು ಹಾರ್ನ್ ಹೊಡಿ’ ಎಂದು ಕಿಚ್ಚಾಯಿಸ್ತಾರೆ. ಬಸ್ ನಿಲ್ಲಿಸಿ ಹಾರ್ನ್ ಹೊಡೆಯೋದೇ ಹತ್ತೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ರಾಕೇಶ್ ತಮಾಷೆ ಮಾಡ್ತಾರೆ. ಒಂದ್ ಕಡೆ ಅಮೂಲ್ಯ, ಮತ್ತೊಂದು ಕಡೆ ಸಾನ್ಯ ಅಯ್ಯರ್ , ಯಾರು ಒಲವು ರಾಕೇಶ್ ಕಡೆಗೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    ಎಲ್ಲರಿಗೂ ಅವಕಾಶ ಕೊಡುವ ಆತುರದಲ್ಲಿ ಕ್ಯಾಪ್ಟನ್ ರೂಪೇಶ್ ಶೆಟ್ಟಿ ಮಾಡಿದ ಎಡವಟ್ಟೇನು ಗೊತ್ತಾ?

    ದೊಡ್ಮನೆಯಲ್ಲಿ ಬಿಗ್ ಬಾಸ್ (Bigg Boss) ಮನೆ ಮಂದಿಗೆ 5 ಲಕ್ಷ ಹಣವನ್ನು ಗಿಫ್ಟ್ ಆಗಿ ನೀಡುವ ಅವಕಾಶವೊಂದನ್ನು ನೀಡಿತ್ತು. ಅದು ಟಾಸ್ಕ್‌ ಅನ್ನು ಇಂತಿಷ್ಟು ಗಂಟೆಯ ಒಳಗೆ ಗೆದ್ದರೆ ಮಾತ್ರ ಎಂಬ ನಿಯಮವಿದೆ. ಅದರಂತೆ ಈ ವಾರ ಒಂದೊಂದೆ ಟಾಸ್ಕ್ ಅನ್ನು ನೀಡುತ್ತಾ ಹೋಗಿದ್ದಾರೆ. ಒಂದೊಂದು ಟಾಸ್ಕ್‌ನಲ್ಲೂ ಬಿಗ್ ಬಾಸ್ ನೀಡುತ್ತಿದ್ದ ಹಣ 50 ಸಾವಿರ. ಆದರೆ ಮನೆ ಮಂದಿ ಯಾವ ಆಟವನ್ನು ಅಷ್ಟು ಸರಿಯಾಗಿ ಆಡಲಿಲ್ಲ. ಹೀಗಾಗಿ 5 ಲಕ್ಷ ಹಣದಲ್ಲಿ ಸದಸ್ಯರ ಪಾಲಾಗಿದ್ದು, 2 ಲಕ್ಷದ 86 ಸಾವಿರ  ಮಾತ್ರ.

    ಎಷ್ಟೇ ಹಣ ಗೆದ್ದರು ಮನೆ ಮಂದಿಗೆಲ್ಲಾ ಸಿಗುತ್ತೆ ಎನ್ನುವ ಹಾಗಿಲ್ಲ. ಈ ಹಣ ಫೈನಲ್ ತಲುಪಿದ ಒಬ್ಬರಿಗೆ ಮಾತ್ರ ಸಿಗಲಿದೆ.  ಆದರೆ ಆಗಾಗ ಆದ ಪೌಲ್ ನೆನೆದು ರೂಪೇಶ್ ಬೇಸರ ಮಾಡಿಕೊಂಡಿದ್ದಾರೆ. ಇಲ್ಲಿ ಸರಿಯಾದ ವ್ಯಕ್ತಿಯನ್ನು ಆಟವಾಡುವುದಕ್ಕೆ ಆರಿಸಿಲ್ಲ ಎಂಬ ಮಾತುಗಳು ಬಂದಿದೆ. ಆ ಒಂದು ಕಾರಣಕ್ಕೆ ರೂಪೇಶ್ (Roopesh Shetty)  ಎಲ್ಲರಿಗೂ ಅವಕಾಶ ನೀಡಿ, ಸೋತರಾ ಎಂಬ ಪ್ರಶ್ನೆಯೂ ಇದೀಗ ಎಲ್ಲರಿಗೂ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಐದನೇ ವಾರ ಸಖತ್ ರೋಚಕ ತಿರುವಿನಿಂದ ಮನೆಯ ರಂಗು ಹೆಚ್ಚಿತ್ತು. ಇನ್ನೂ ಟಾಸ್ಕ್‌ ಕಡೆಯ ದಿನವಾದ ಕಾರಣ ಬಿಗ್ ಬಾಸ್ ಮೂರು ಟಾಸ್ಕ್‌ಗಳನ್ನ ನೀಡಿದ್ದರು. ಬೆಳಗ್ಗೆನೆ ಬುಟ್ಟಿ ಮತ್ತು ಬಾಲ್ ಟಾಸ್ಕ್ ಅನ್ನು ನೀಡಿತ್ತು. ಅದರಲ್ಲಿ ಮೂರು ತಂಡಗಳಾಗಿ ಆಡಲಾಯಿತು. ಜಶ್ವಂತ್, ಸೋನು ಆಂಡ್ ಗುರೂಜಿ ಒಂದು ಟೀಂ ಆಗಿದ್ದರು. ಕೋ ಆರ್ಡಿನೇಷನ್ ಮಿಸ್ ಆಗಿ ಅವರು ಸೋತರು. ಮೂರು ಬಾರಿ ಜಶ್ವಂತ್ ಪೌಲ್ ಆದರು. ಇದರಿಂದ ರೂಪೇಶ್‌ಗೆ ಅದಾಗಲೇ ಕೋಪ ಬಂದಿತ್ತು. ನಿನಗೆ ಗೇಮ್ ಅರ್ಥವಾಗಿಲ್ಲ ಎಂದಾಗ ಒಂದು ಕ್ಷಣ ನಿಂತು ಯೋಚಿಸಿ ಮುಂದುವರೆಯಬೇಕು ಎಂದು ರೂಪೇಶ್ ಸಲಹೆ ನೀಡಿದ್ದರು. ಇದನ್ನೂ ಓದಿ:ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಬಳಿಕ ಕಣ್ಣು ಜೋಡಿಸುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ನೀಡಿದ್ದು 50 ಸಾವಿರ. ಈ ಗೇಮ್‌ನಿಂದಾಗಿ 50 ಸಾವಿರ ಗೆದ್ದೆ ಬಿಟ್ಟರು. ಇದು ಕಡೆಯ ಟಾಸ್ಕ್ ಎಂದುಕೊಳ್ಳುವಾಗಲೇ ರಾತ್ರಿ 11 ಗಂಟೆಯ ಮೇಲೆ ಕೊನೆಯ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿತ್ತು. ಅದುವೆ ಗ್ಲಾಸ್ ಜೋಡಿಸುವ ಟಾಸ್ಕ್‌ನಲ್ಲಿ ಸೋನು, ಜಶ್ವಂತ್, ಜಯಶ್ರೀ, ಸಾನ್ಯಾಳನ್ನು ಈ ಆಟಕ್ಕೆ ಸೆಲೆಕ್ಟ್ ಮಾಡಲಾಯ್ತು. ಮೊದಲಿಗೆ ಜಶ್ವಂತ್ ಆ ಆಟ ಶುರು ಮಾಡಿದ. ಮೂರು ಲೋಟ ಮೂರು ಪೇಪರ್. ಒಂದರ ಮೇಲೊಂದು ಇಟ್ಟು ಪೇಪರ್ ಎಳೆದಾಗ ಲೋಟಗಳು ಒಂದರ ಮೇಲೆ ಒಂದು ಕೂರಬೇಕು. ಜಶ್ವಂತ್ ಸೂಪರ್ ಆಗಿ, ಫಾಸ್ಟ್ ಆಗಿ ಮಾಡಿದ. ಆದ್ರೆ ಸೋನು ಸಾಕಷ್ಟು ಸಮಯ ತೆಗೆದುಕೊಂಡು ಬಿಟ್ಟರು. ಜಯಶ್ರೀ ಕೂಡ ಚೆನ್ನಾಗಿ ಆಡಿದಳು. ಆದರೆ ಸಾನ್ಯಾ ಮಾಡುವಷ್ಟರಲ್ಲಿ ಸಮಯ ಮುಗಿದಿತ್ತು. ಇದಕ್ಕೆ ಸೋನು ಕ್ಷಮೆ ಕೂಡ ಕೇಳಿದರು. ಮನೆಯವರೆಲ್ಲ ಸಮಾಧಾನ ಕೂಡ ಮಾಡಿದರು. ಆದರೆ ಈ ಆಟವನ್ನು ಸೋತಿದ್ದರು.

    ಬಿಗ್ ಬಾಸ್ (Bigg Boss) ಮನೆಯವರು ಗಳಿಸಿದ ಒಟ್ಟು ಹಣ 2 ಲಕ್ಷದ 86 ಸಾವಿರ ಎಂದಾಗ ಎಲ್ಲರೂ ಖುಷಿ ಪಟ್ಟರು. ಇಲ್ಲಿಗೆ ಈ ವಾರದ ಟಾಸ್ಕ್‌ಗಳು ಮುಕ್ತಾಯವಾಗಿದೆ ಎಂದಾಗ ರೂಪೇಶ್ ಮುಖದಲ್ಲಿ ಬೇಸರ ಆವರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ಜಶ್ವಂತ್- ನಂದಿನಿ ಮಧ್ಯೆ ಇದ್ದ ಮನಸ್ತಾಪ ರೂಪೇಶ್‍ನಿಂದ ಸರಿ ಆಯ್ತಾ?

    ರೂಪೇಶ್ ಬುದ್ಧಿವಂತ ಎಂಬುದು ಮನೆಯವರಿಗೆ ಈಗಾಗಲೇ ಗೊತ್ತು. ಆದರೆ ರೂಪೇಶ್(Rupesh) ಫ್ರೆಂಡ್ ಲೈಫ್ ಹಳ್ಳ ಹಿಡಿಯುತ್ತಿದ್ದರೆ ಅದನ್ನು ಸರಿ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಒಬ್ಬ ಫ್ರೆಂಡ್ ಎಂದರೆ ಹೀಗೂ ಇರಬೇಕು ಎಂಬ ಮಾದರಿಯಾಗಿದ್ದಾನೆ. ಯಾಕೆಂದ್ರೆ ಬಿಗ್ ಬಾಸ್(Bigg Boss) ಮನೆಯಲ್ಲಿ ನಡೆದದ್ದು, ನಾಲ್ಕು ಜನ ಬೆಸ್ಟ್ ಫ್ರೆಂಡ್ಸ್‍ಗಳ ಮನಸ್ತಾಪ. ಇತ್ತ ಫ್ರೆಂಡ್ಶಿಪ್ ಹಾಳಾಗಬಾರದು, ಸಂಬಂಧವೂ ಕೆಡಬಾರದು, ಒಂದು ಪ್ರೀತಿಯೂ ಬ್ರೇಕಪ್ ಆಗಬಾರದು ಎಂದು ಎಲ್ಲವನ್ನು ತುಂಬಾ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾನೆ ಎಂದೇ ಹೇಳಬಹುದು.

    ಸಾನ್ಯಾ ನಡೆದುಕೊಳ್ಳುತ್ತಿರುವ ರೀತಿ ನಂದಿನಿಗೆ(Nandini) ಖಂಡಿತ ಹರ್ಟ್ ಆಗಿದೆ. ಜೊತೆಗೆ ರೂಪೇಶ್ ಗಮನಕ್ಕೂ ಸಾನ್ಯಾ ಮತ್ತು ಜಶ್ವಂತ್ ತುಂಬಾ ಕ್ಲೋಸ್ ಆಗುತ್ತಿರುವುದು ಬಂದಿದೆ. ಈ ಕಡೆ ಅದನ್ನು ಕಂಡು ನಂದಿನಿ ತುಂಬಾನೆ ಹರ್ಟ್ ಆಗಿದ್ದಾಳೆ. ಡಿಸ್ಟೆನ್ಸ್ ಮೆಂಟೈನ್ ಮಾಡುತ್ತಿದ್ದಾಳೆ. ಇದೆಲ್ಲವನ್ನು ಗಮನಿಸಿದಾಗ ಸಾನ್ಯಾಳನ್ನು ಜಶ್ವಂತ್‍ನಿಂದ(Jashwanth) ದೂರ ಇಡಬೇಕು ಎಂಬುದು ರೂಪೇಶ್‍ಗೆ ಅರಿವಾಗಿದೆ. ಆದರೆ ಹೇಗೆ? ನೇರವಾಗಿ ಹೇಳಿದರೆ ನನ್ನ ಬಗ್ಗೆಯೇ ತಪ್ಪಾಗಿ ತಿಳಿದುಕೊಳ್ತಿಯಾ ಅಂತ ಸಾನ್ಯಾ(Sanya) ಹರ್ಟ್ ಮಾಡಿಕೊಳ್ಳುತ್ತಾಳೆ. ಆದರೆ ರೂಪೇಶ್ ಸಖತ್ ಐಡಿಯಾ ಮಾಡಿದ್ದ. ಸಾನ್ಯಾಳ ಬಳಿ ಬೇಸರವಾದವನಂತೆ ನಟಿಸಿದ. ನಿನ್ನ ನಾನು ಬೆಸ್ಟ್ ಫ್ರೆಂಡ್ ಅಂತ ಹೇಳಿಕೊಂಡಿದ್ದೆ. ಆದರೆ ನೀನು ನನ್ನ ಜೊತೆಗಿಂತ ಹೆಚ್ಚು ಜಶ್ವಂತ್ ಜೊತೆಗೆ ಇರ್ತೀಯಾ. ಆ ಪದಕ್ಕೆ ತೂಕ ಇರುವುದಿಲ್ಲ ಎಂದು ಹರ್ಟ್ ಮಾಡಿಕೊಂಡವನಂತೆ ಮಾಡಿದಾಗ ಸಾನ್ಯಾ ಪ್ರಾಮೀಸ್ ಮಾಡಿದ್ದಳು. ಸರಿ ಇನ್ನು ಮುಂದೆ ಅವನ ಸಂಘ ಸೇರಲ್ಲ ಅಂತ.

    ಆದರೆ ಮತ್ತೆ ಅದೇ ತಪ್ಪು ಮಾಡುತ್ತಿದ್ದಳು. ಇಲ್ಲಿ ರೂಪೇಶ್ ಮತ್ತು ನಂದಿನಿ ಗೇಮ್ ಆಡುವುದಕ್ಕೆ ಶುರು ಮಾಡಿದರು. ಇದು ಜಶ್ವಂತ್‍ಗೆ ಬೇಗ ಅರ್ಥವಾಯಿತು. ನಂದಿನಿ ಒಬ್ಬಳೆ ಬೆಡ್ ಮೇಲೆ ಇದ್ದಾಗ ಮಾತನಾಡುವುದಕ್ಕೆ ಹೋದ. ಆಗಲೂ ನಂದಿನಿ ಆಯ್ತಪ್ಪ ನಾನೇ ಸರಿ ಇಲ್ಲ. ನಂದೆ ತಪ್ಪು ನನ್ನ ಬಿಟ್ ಬಿಡು ಎಂದಳು. ಒಂದು ಹಗ್ ಮಾಡ್ತೀನಿ ಎಂದಾಗಲೂ ಅವಳು ಒಪ್ಪಲೇ ಇಲ್ಲ. ಆಗಲೇ ಜಶ್ವಂತ್‍ಗೆ ಕೊಂಚ ರಿಯಲೈಸ್ ಆಗಿತ್ತು. ಆಮೇಲೆ ಸ್ವಲ್ಪ ರೂಪೇಶ್ ಹಾಗೂ ನಂದಿನಿ ಸೇರಿ ಉರಿಸುವುದಕ್ಕೆ ಮುಂದಾದರು. ಇಲ್ಲಿಗೆ ಜಶ್ವಂತ್ ಕೊಂಚ ಮಟ್ಟಿಗೆ ಸರಿ ಹೋದ. ನಂದಿನಿ ಇದ್ದ ಕಡೆಗೆ ಹೋಗುತ್ತಿದ್ದ, ನಂದಿನಿ ಯಾವ ಜಾಗದಲ್ಲಿ ಇರುವುದಿಲ್ಲವೋ ಅಲ್ಲಿ ಕುಳಿತುಕೊಳ್ಳಲೆ ಇರುತ್ತಿರಲಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ರಿಚಾ ಚಡ್ಡಾ, ಅಲಿ ಫಜಲ್

    ಆದರೆ ನಂದಿನಿ ಇನ್ನು ಕೂಡ ಸಂಪೂರ್ಣ ಮೊದಲಿನಂತೆ ಆಗಿಲ್ಲ. ಜಶ್ವಂತ್‍ಗೆ ಎಲ್ಲವನ್ನು ಅರಿವು ಮಾಡಿಸಬೇಕು ಎಂಬುದೇ ಅವಳ ಉದ್ದೇಶವಾಗಿತ್ತು. ಅತ್ತ ರೂಪೇಶ್ ಹತ್ತಿರ ಸಾನ್ಯಾ, ಜಶ್ವಂತ್ ಬಗ್ಗೆಯೇ ಹೇಳುತ್ತಿದ್ದಾಳೆ. ನಂದಿನಿ ತುಂಬಾ ಎಮೋಷನಲ್ ಆದರೆ ಜಶ್ವಂತ್ ತುಂಬಾ ಪ್ರಾಕ್ಟಿಕಲ್. ಅವನು ಹೇಳುತ್ತಿದ್ದ ನನಗಿನ್ನು 24 ವರ್ಷ. ಸಾಧಿಸುವುದು ತುಂಬಾ ಇದೆ ಅಂತ ಎಂದಾಗ ಏನಾದರೂ ಇರಲಿ ಅವರಿಬ್ಬರ ನಡುವೆ ಹೋಗುವುದು ತಪ್ಪು. ಮೊದಲು ಅವನು ಅವಳನ್ನ ಅರ್ಥ ಮಾಡಿಕೊಳ್ಳಬೇಕು. ಅವಳ ಫೀಲಿಂಗ್ಸ್‌ಗೆ ಬೆಲೆ ಕೊಡುವವನು ಅಲ್ಲವೇ ಅಲ್ಲ ಆತ ಎಂದು ರೂಪೇಶ್ ಹೇಳಿದ್ದಾನೆ. ಇದನ್ನೂ ಓದಿ: ತನ್ನ ಬಟ್ಟೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಪಾಪರಾಜಿಗಳ ಮೇಲೆ ಉರ್ಫಿ ಖಡಕ್‌ ಕ್ಲಾಸ್

    ಮಾತು ಮುಂದುವರಿಸಿದ ಸಾನ್ಯಾ, ಇದು ಗೇಮ್. ಪರ್ಸನಲ್ ತಲೇಲಿ ಇಟ್ಟುಕೊಳ್ಳಬಾರದು. ಈಗ ಹೊರಗಡೆ ನಿನ್ನ ಗರ್ಲ್ ಫ್ರೆಂಡ್ ಇದ್ದು. ಪೊಸೆಸಿವ್ ಆಗಿದ್ದರೇ, ನೀನು ನನ್ನ ಹಗ್ ಮಾಡೋದು, ಹೆಗಲ ಮೇಲೆ ಕೈ ಹಾಕೋದು ಮಾಡುತ್ತಾ ಇರಲಿಲ್ಲವಾ ಎಂಬ ಪ್ರಶ್ನೆಗೆ ರೂಪೇಶ್, ಖಂಡಿತ ಅವಳಿಗೆ ಇದೆಲ್ಲಾ ಇಷ್ಟ ಇಲ್ಲ ಎಂದಿದ್ದರೆ ಅವಳಿಗೆ ನಾನು ಗೌರವ ಕೊಡಲೇಬೇಕು. ಹೀಗಾಗಿ ನಾನು ಅವಾಯ್ಡ್ ಮಾಡುತ್ತಿದ್ದೆನೇನೋ ಎಂದಿದ್ದಾನೆ.

    Live Tv

    [brid partner=56869869 player=32851 video=960834 autoplay=true]