Tag: ಸಾನಿಯಾ ಮಿರ್ಜಾ

  • ಕಪಿಲ್ ಶೋ: ಡಿವೋರ್ಸ್ ವಿಷ್ಯ ಬಾಯ್ಬಿಡ್ತಾರಾ ಸಾನಿಯಾ

    ಕಪಿಲ್ ಶೋ: ಡಿವೋರ್ಸ್ ವಿಷ್ಯ ಬಾಯ್ಬಿಡ್ತಾರಾ ಸಾನಿಯಾ

    ಕಿರುತೆರೆಯ ಪ್ರತಿಷ್ಠಿತ ಶೋ ಕಾಮಿಡಿ ವಿತ್ ಕಪಿಲ್ ಶೋ (The Kapil Show)ನಲ್ಲಿ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋವನ್ನು ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಸಾನಿಯಾ ಡಿವೋರ್ಸ್ ಕುರಿತಂತೆ ಮಾತನಾಡಲಿದ್ದಾರಾ ಎನ್ನುವ ಕುತೂಹಲ ಮೂಡಿದೆ.

    ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ಇತ್ತೀಚೆಗಷ್ಟೇ ಪಾಕ್‌ನ ನಟಿ ಸನಾ ಜಾವೇರದ್‌ ಅವರನ್ನು ಮದುವೆಯಾಗಿದ್ದರು.  ನಟಿ ಸನಾ ಜಾವೇದ್‌ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಕಳೆದ ಕೆಲ ದಿನಗಳಿಂದ ಶೋಯಬ್‌ ಮಲ್ಲಿಕ್‌ ಹಾಗೂ ಭಾರತದ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು.

     

    ಶೋಯೆಬ್ ಮದುವೆಯಾದ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು.

  • ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

    ಶೋಯೆಬ್‌ ಮಲಿಕ್‌ರಿಂದ ವಿಚ್ಛೇದನ ಪಡೆದಿದ್ದಾರೆ – ಡಿವೋರ್ಸ್ ವದಂತಿಗೆ ತೆರೆಎಳೆದ ಸಾನಿಯಾ ಕುಟುಂಬ

    -ಶೋಯೆಬ್‌ ಮಲಿಕ್‌ ವಿರುದ್ಧವೇ ತಿರುಗಿಬಿದ್ದ ಪಾಕ್‌ ಫ್ಯಾನ್ಸ್‌!

    ನವದೆಹಲಿ: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್‌ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik) ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಸಾನಿಯಾ ಕುಟುಂಬ ಹೇಳಿದ್ದು, ಕೆಲ ವರ್ಷಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

     

    View this post on Instagram

     

    A post shared by Anam Mirza (@anammirzaaa)

    ಶೋಯೆಬ್‌ ಮಲಿಕ್‌ ಅವರು ಪಾಕ್‌ ನಟಿ ಸನಾ ಜಾವೇದ್‌ (Sana Javed) ಅವರೊಂದಿಗೆ ವಿವಾಹವಾದ ಬಳಿಕ ಸುದ್ದಿ ಹೊರಬೀಳುತ್ತಿದ್ದಂತೆ ಸಾನಿಯಾ ಕುಟುಂಬ ಸ್ಫಷ್ಟನೆ ನೀಡಿದೆ. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಸಾನಿಯಾ ಯಾವಾಗಲೋ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿಟ್ಟಿದ್ದಾಳೆ. ಆದರೆ ಶೋಯೆಬ್‌ ರಿಂದ ವಿಚ್ಛೇದನ ಪಡೆದು ಕೆಲವು ತಿಂಗಳಾಗಿವೆ. ಈಗ ಅದರ ಬಗ್ಗೆ ಮಾತನಾಡುವ ಸಂದರ್ಭ ಬಂದಿದೆ ಎಂದು ಹೇಳಿದೆ. ಅಲ್ಲದೇ ಸಾನಿಯಾ ಸಹ ಶೋಯೆಬ್‌ ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾಳೆ ಎಂಬುದಾಗಿ ಕುಟುಂಬ ತಿಳಿಸಿದೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಪಾಕ್‌ ಅಭಿಮಾನಿಗಳಿಂದಲೂ ಸಾನಿಯಾಗೆ ಬೆಂಬಲ:
    ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ಮದುವೆಯಾದ ಸುದ್ದಿ ಹೊರ ಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿರುವ ಸಾನಿಯಾ ಮಿರ್ಜಾ ಅಭಿಮಾನಿಗಳು ಸಾನಿಯಾ ಬೆಂಬಲಿಸಿ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.‌ ಪ್ರೇಮ ವಿವಾಹದಲ್ಲಿ ದೀರ್ಘಕಾಲದ ನಂಬಿಕೆ ಇರುವುದಿಲ್ಲ. ಅಲ್ಲಾಹು ನಿಮಗೆ ಒಳ್ಳೆಯದು ಮಾಡಲಿ, ಇವರಿಗಿಂತಲೂ ಹೆಚ್ಚಿನದ್ದನ್ನು ಕೊಡಲಿ ಎಂದಷ್ಟೇ ಈಗ ನಾವು ಕೇಳಿಕೊಳ್ಳಬಹುದು ಎಂದರೆ, ಇನ್ನೂ ಕೆಲವರು ಶೋಯೆಬ್‌-ಸನಾ ವಿವಾಹಕ್ಕೆ ಅಭಿನಂದನೆಗಳು ಆದ್ರೆ ಸಾನಿಯಾ ಅವರ ಹೃದಯವನ್ನು ನುಚ್ಚುನೂರು ಮಾಡಿದ್ದು ನೋವಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.

    ಪಾಕ್‌ ನಟಿ ವರಿಸಿದ ಶೋಯೆಬ್‌ ಮಲಿಕ್‌:
    ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್, ಪಾಕ್‌ನ ನಟಿ ಸನಾ ಜಾವೇರದ್ ಅವರನ್ನು ವಿವಾಹವಾಗಿದ್ದು, ನಟಿ ಸನಾ ಜಾವೇದ್ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಶೋಯೆಬ್‌, ಸಾನಿಯಾರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು, ಶೋಯೇಬ್ ಪಾಕಿಸ್ತಾನಿ ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದನ್ನೂ ಓದಿ: ಸತತ ಹೀನಾಯ ಸೋಲಿನಿಂದ ಬೇಸರ – PCB ಅಧ್ಯಕ್ಷ ಸ್ಥಾನಕ್ಕೆ ಝಾಕಾ ಅಶ್ರಫ್ ಗುಡ್‌ಬೈ

    ಶೋಯೆಬ್‌ಗೆ 3ನೇ, ಸನಾಗೆ 2ನೇ ಮದುವೆ:
    ಇದೀಗ ಶೋಯೆಬ್ ಮದುವೆಯಾದ ನಟಿ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಖ್ಯಾತ ಗೀತರಚನಾಕಾರ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ 2023ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದಾರೆ. ಬಳಿಕ ಶೋಯೆಬ್‌ರನ್ನ ಮದುವೆಯಾಗಿದ್ದಾರೆ. ಶೋಯೆಬ್ ಸಾನಿಯಾ ಮಿರ್ಜಾ ಬಿಟ್ಟು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

  • ಶೋಯೆಬ್‌ ಮಲಿಕ್‌ ವರಿಸಿದ ಪಾಕ್‌ ನಟಿ – ಸನಾ ಜಾವೇದ್‌ ಬಗ್ಗೆ ನಿಮ್ಗೆ ಗೊತ್ತಾ?

    ಶೋಯೆಬ್‌ ಮಲಿಕ್‌ ವರಿಸಿದ ಪಾಕ್‌ ನಟಿ – ಸನಾ ಜಾವೇದ್‌ ಬಗ್ಗೆ ನಿಮ್ಗೆ ಗೊತ್ತಾ?

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌ (Shoaib Malik), ಪಾಕ್‌ ನಟಿ ಸನಾ ಜಾವೇದ್‌ ಅವರನ್ನ ವಿವಾಹವಾಗಿದ್ದಾರೆ. ಈ ಕುರಿತ ಫೋಟೋಗಳನ್ನು ಸ್ವತಃ ಶೋಯೆಬ್‌ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈವರಿಬ್ಬರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಪಾಕ್‌ ನಟಿ ಸನಾ ಜಾವೇದ್‌ (Sana Javed) ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಈ ಕುರಿತು ತಿಳಿಯಬೇಕಾದ್ರೆ ಮುಂದೆ ಓದಿ…

    ಸನಾ ಜಾವೇದ್‌ ಬಗ್ಗೆ ನಿಮಗೆ ಗೊತ್ತಾ?
    ಸನಾ ಜಾವೇದ್‌ 1993ರ ಮಾರ್ಚ್‌ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಜನಿಸಿದರು. 2012ರಲ್ಲಿ ತೆರೆಕಂಡಿದ್ದ ʻಶೆಹರ್-ಎ-ಝಾತ್ʼ ಹಾಸ್ಯ ಟಿವಿ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರದಲ್ಲಿ ʻಖಾನಿʼ ರೊಮ್ಯಾಂಟಿಕ್‌ ವೆಬ್‌ಸಿರೀಸ್‌ನಲ್ಲಿ ಕಾಣಿಸಿಕೊಂಡರು. ಈ ಬೆನ್ನಲ್ಲೇ ರುಸ್ವಾಯಿ, ಡಂಕ್‌ನಂತಹ ಸೀರಿಯಲ್‌ಗಳಲ್ಲೂ ಗುರುತಿಸಿಕೊಂಡು ಫೇಮಸ್‌ ಆದ್ರು. ʻಖಾನಿʼ (Khaani) ಸೀರಿಯಲ್‌ನಲ್ಲಿ ತೋರಿದ ಉತ್ತಮ ಅಭಿನಯಕ್ಕಾಗಿ ʻಲಕ್ಸ್ ಸ್ಟೈಲ್ ಅವಾರ್ಡ್ಸ್ʼಪ್ರಶಸ್ತಿ ಪಡೆಯುವಲ್ಲಿಯೂ ಸನಾ ಜಾವೇದ್‌ ಯಶಸ್ವಿಯಾದರು. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ನಟಿಯಾಗಿದ್ದ ಜಾವೇದ್‌ 2020ರಲ್ಲಿ ಗೀತರಚನಕಾರ ಹಾಗೂ ಸಂಗೀತ ನಿರ್ಮಾಪಕರೂ ಆಗಿದ್ದ ಉಮರ್ ಜಸ್ವಾಲ್ ಅವರೊಂದಿಗೆ 2020ರಲ್ಲಿ ವಿವಾಹವಾಗಿದ್ದರು. ಆದ್ರೆ 2023ರಲ್ಲಿ ಅವರಿಂದ ವಿಚ್ಛೇದನ ಪಡೆದರು. ವಿಚ್ಛೇದನ ಪಡೆದ ಬಳಿಕ ಸನಾ ಹಾಗೂ ಉಮರ್‌ ಇಬ್ಬರು ತಮ್ಮ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದ ಇಬ್ಬರಿಗೂ ಸಂಬಂಧಿಸಿದ ಎಲ್ಲ ಚಿತ್ರಗಳನ್ನ ಡಿಲೀಟ್‌ ಮಾಡಿದರು. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

    ಸನಾ ವಿಚ್ಛೇದನ ಪಡೆದ ಬಳಿಕ 2023ರಲ್ಲಿ ಶೋಯೆಬ್‌ ಮಲಿಕ್‌ ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹುಟ್ಟಿಕೊಂಡಿತ್ತು. ಇದೀಗ ವದಂತಿಗಳಿಗೆಲ್ಲಾ ತೆರೆ ಎಳೆದಿದ್ದಾರೆ. ಶೋಯೆಬ್‌ ಮಲಿಕ್‌ ಅವರನ್ನು ಮದುವೆಯಾದ ನಂತರ ಸನಾ ಜೇವದ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯನ್ನ ಸನಾ ಶೋಯೆಬ್‌ ಮಲಿಕ್‌ ಎಂದೂ ಬದಲಾಯಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ಪ್ರಸಾದ ಅಂತಾ ಸ್ವೀಟ್‌ ಮಾರಾಟ – ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ನೋಟಿಸ್‌ 

  • ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

    ಇಸ್ಲಾಮಾಬಾದ್‌: ಭಾರತೀಯ ಮಾಜಿ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್‌ ಮಲಿಕ್‌, ಪಾಕ್‌ನ ನಟಿ ಸನಾ ಜಾವೇರದ್‌ ಅವರನ್ನು ಮದುವೆಯಾಗಿದ್ದಾರೆ.

    ನಟಿ ಸನಾ ಜಾವೇದ್‌ ಅವರೊಂದಿಗೆ ವಿವಾಹವಾಗಿರುವ ಫೋಟೋಗಳನ್ನು ಸ್ವತಃ ಮಲಿಕ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿವೆ. ಇದನ್ನೂ ಓದಿ: ‘ಭೀಮ’ನ ಟೀಸರ್ ರಿಲೀಸ್: ವಿಜಯ್ ದುನಿಯಾದ ಮತ್ತೊಂದು ಖದರ್

     

    View this post on Instagram

     

    A post shared by Shoaib Malik (@realshoaibmalik)

    ಕಳೆದ ಕೆಲ ದಿನಗಳಿಂದ ಶೋಯಬ್‌ ಮಲ್ಲಿಕ್‌ ಹಾಗೂ ಭಾರತದ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಇದನ್ನೂ ಓದಿ: ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಮೌನಮುರಿದ ದೇವರಕೊಂಡ

    ಹೌದು. ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. ಇದೀಗ ಅವರಿಬ್ಬರ ನಡುವೆ ಬಿರುಕು ಮೂಡಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಪುಷ್ಟಿ ನೀಡಿದೆ.

    ಶೋಯೆಬ್ ಮದುವೆಯಾದ ಸನಾ ಜಾವೇದ್ ಸಹ ವಿಚ್ಛೇದನ ಪಡೆದವರಾಗಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಖ್ಯಾತ ನಟಿಯರಲ್ಲಿ ಒಬ್ಬರಾದ ಸನಾ ಜಾವೇದ್ ಅವರು 2020 ರಲ್ಲಿ ಉಮೈರ್ ಜಸ್ವಾಲ್ ಎಂಬವರನ್ನ ವಿವಾಹವಾಗಿದ್ದರು. ಆದರೆ ಶೀಘ್ರದಲ್ಲೇ ದಂಪತಿ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಬಂದಿತು. ಇದೀಗ ಶೋಯೆಬ್‌ ಸಾನಿಯಾ ಮಿರ್ಜಾ ಬಿಟ್ಟು ಇವರನ್ನು ಮೂರನೇ ಮದುವೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ್ರೇಮ್ ಮತ್ತು ಮಾನ್ವಿತಾ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಫಿಕ್ಸ್ 

  • Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

    Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

    ಸಿಡ್ನಿ: ಭಾರತದ ತಾರಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ (Sania Mirza) ಮತ್ತು ರೋಹನ್ ಬೋಪಣ್ಣ (Rohan Bopanna) ಆಸ್ಟ್ರೇಲಿಯಾ ಓಪನ್ 2023 (Australian Open 2023) ಮಿಶ್ರ ಡಬಲ್ಸ್‌ನ ಫೈನಲ್‍ನಲ್ಲಿ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

    ರಾಡ್ ಲೇವರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬ್ರೆಜಿಲ್‍ನ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ ಸಾನಿಯಾ, ಬೋಪಣ್ಣ ಜೋಡಿ 6-7 (2-6), 2-6 ಅಂತರದಲ್ಲಿ ಸೋತಿತು. ಇದನ್ನೂ ಓದಿ: ರಾಂಚಿ ರ್‍ಯಾಂಬೋ ಜೊತೆ ಪಾಂಡ್ಯ ವಿಂಟೇಜ್ ಬೈಕ್ ರೈಡಿಂಗ್

    ಈ ಮೂಲಕ 36ರ ಹರೆಯದ ಟೆನಿಸ್ ಲೆಜೆಂಡ್ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವದ ಕೊನೆಯ ಗ್ರ್ಯಾಂಡ್‍ ಸ್ಲಾಮ್ (Grand Slam) ಪಂದ್ಯದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದು ಅಂತ್ಯವಾಡಿದ್ದಾರೆ.

    ಈ ಮೊದಲು ಸೆಮಿಫೈನಲ್‍ನಲ್ಲಿ ಸಾನಿಯಾ, ಬೋಪಣ್ಣ ಬ್ರಿಟನ್‍ನ ಆನ್ ಸ್ಕುಪ್‍ಸ್ಕಿ ಮತ್ತು ಅಮೆರಿಕದ ಡಿ ಕರಾವ್‍ಜಿಕ್ ಜೋಡಿಯನ್ನು 7-6, 6-7, 10-6 ಅಂತರದಲ್ಲಿ ಮಣಿಸಿ ಫೈನಲ್‍ಗೆ ಎಂಟ್ರಿಯಾಗಿತ್ತು.

    ಇದು ಸಾನಿಯಾ ಅವರ ಕೊನೆಯ ಗ್ರ್ಯಾಂಡ್‍ ಸ್ಲಾಮ್ ಟೂರ್ನಿಯಾಗಿತ್ತು. ಈ ಟೂರ್ನಿ ಆರಂಭಕ್ಕೂ ಮುನ್ನವೇ ಅವರು ನಿವೃತ್ತಿ ಘೋಷಿಸಿದ್ದರು. ಆ ಬಳಿಕ ಫೈನಲ್ ಪ್ರವೇಶಿಸಿದ್ದರಿಂದ ಪ್ರಶಸ್ತಿಯೊಂದಿಗೆ ಗ್ರ್ಯಾಂಡ್ ಸ್ಲಾಮ್‍ಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ ಫೈನಲ್‍ನಲ್ಲಿ ಸೋತು ನಿರಾಸೆ ಅನುಭವಿಸಿದರು. ಇದನ್ನೂ ಓದಿ: 50 ಕೋಟಿ ಮೌಲ್ಯದ ಫ್ಲಾಟ್‌, 2.17 ಕೋಟಿಯ ಕಾರು, 80 ಲಕ್ಷದ ಬೈಕ್ – ರಾಹುಲ್ ದಂಪತಿಗೆ ದುಬಾರಿ ಉಡುಗೊರೆ

    ಈ ಟೂರ್ನಿಯ ಬಳಿಕ ಸಾನಿಯಾ ಮಿರ್ಜಾ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 19 ರಂದು ಪ್ರಾರಂಭವಾಗುವ WTA 1000 ದುಬೈ ಟೆನಿಸ್ ಚಾಂಪಿಯನ್‍ಶಿಪ್‍ನ ನಂತರ ಅವರು ವೃತ್ತಿ ಬದುಕಿಗೆ ವಿದಾಯ ಹೇಳಲಿದ್ದಾರೆ.

    ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಎರಡನೇ ಬಾರಿಗೆ ಒಟ್ಟಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದ್ದರು. 6 ವರ್ಷಗಳ ಹಿಂದೆ 2017ರಲ್ಲಿ ಈ ಜೋಡಿ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್‍ನ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿತ್ತು. 2009ರಲ್ಲಿ ಮಹೇಶ್ ಭೂಪತಿಯೊಂದಿಗೆ ಸಾನಿಯಾ ಈ ಪ್ರಶಸ್ತಿಯನ್ನು ಜಯಿಸಿದ್ದರು. ಈವರೆಗೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದಲ್ಲಿ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2009ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾ ಓಪನ್, 2012ರಲ್ಲಿ ಫ್ರೆಂಚ್ ಓಪನ್, 2014ರಲ್ಲಿ ಯುಎಸ್ ಓಪನ್ ಹಾಗೂ ಮಹಿಳೆಯರ ಡಬಲ್ಸ್, 2015ರಲ್ಲಿ ವಿಂಬಲ್ಡನ್ ಮತ್ತು ಯುಎಸ್ ಓಪನ್, 2016ರಲ್ಲಿ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

    ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗ್ತಾರಾ ಸಾನಿಯಾ ಮಿರ್ಜಾ?

    ಲಕ್ನೋ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಬಳಿಕ ಅದೇ ಹೆಸರಿನ ಯುವತಿಯೊಬ್ಬರು ಇದೀಗ ಭಾರತದ ಕೀರ್ತಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.

    ಹೌದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (NDA) ಪರೀಕ್ಷೆಯಲ್ಲಿ ಸಾನಿಯಾ ಮಿರ್ಜಾ ಅವರು 149ನೇ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ ಉತ್ತರ ಪ್ರದೇಶದ ಮಿರ್ಜಾಪುರದ ಸಾನಿಯಾ, ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ (Woman Fighter Pilot) ಎನಿಸಿಕೊಳ್ಳಲಿದ್ದಾರೆ.

    ಎನ್‌ಡಿಎ ಪರೀಕ್ಷೆಯಲ್ಲಿ (NDA Exams) ಮಹಿಳೆಯರಿಗೆ ಮೀಸಲಿಟ್ಟ 19 ಸೀಟುಗಳಲ್ಲಿ ಸಾನಿಯಾ 2ನೇ ಸ್ಥಾನ ಪಡೆದಿದ್ದಾರೆ. ಅವನಿ ಚತುರ್ವೇದಿ ಅವರು ಮೊದಲ ಮಹಿಳಾ ಫೈಟರ್ ಪೈಲಟ್ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅವರ ಜತೆಗೆ ಮೋಹನಾ ಸಿಂಗ್ ಜಿತರ್ವಾಲ್ ಮತ್ತು ಭಾವನಾ ಕಾಂತ್ ಕೂಡ ಯುದ್ಧ ವಿಮಾನಗಳನ್ನು ಹಾರಿಸಿದ ಮಹಿಳೆಯರ ಸಾಲಿನಲ್ಲಿ ಸೇರಿದ್ದಾರೆ.

    ಯಾರಿದು ಸಾನಿಯಾ ಮಿರ್ಜಾ?
    ಸಣ್ಣ ಗ್ರಾಮದಿಂದ ಬಂದ ಸಾನಿಯಾ ಮಿರ್ಜಾ, ತಮ್ಮ ಗ್ರಾಮದ ಪಂಡಿತ್ ಚಿಂತಾಮಣಿ ದುಬೆ ಅಂತರ್ ಕಾಲೇಜಿನಲ್ಲಿ ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದರು. 10ನೇ ತರಗತಿ ಬಳಿಕ ಮಿರ್ಜಾಪುರದ ಗುರು ನಾನಕ್ ಬಾಲಕಿಯರ ಅಂತರ್ ಕಾಲೇಜಿನಲ್ಲಿ 12ನೇ ತರಗತಿ ಪೂರ್ಣಗೊಳಿಸಿದರು. 12ನೇ ತರಗತಿಯಲ್ಲಿ ಉತ್ತರ ಪ್ರದೇಶ ಪರೀಕ್ಷಾ ಮಂಡಳಿಯಲ್ಲಿ ಮಿರ್ಜಾಪುರಕ್ಕೆ ಟಾಪರ್ ಆಗಿದ್ದರು. 2022ರ ಏಪ್ರಿಲ್‌ನಲ್ಲಿ ಎನ್‌ಡಿಎ ಪರೀಕ್ಷೆಗೆ ಹಾಜರಾದ ಸಾನಿಯಾ, ಇದೀಗ 149ನೇ ರ‍್ಯಾಂಕ್ ಪಡೆಯುವ ಮೂಲಕ ದೇಶವೇ ಮೆಚ್ಚುವ ಸಾಧನೆ ಮಾಡಿದ್ದಾರೆ.

    ಸಾನಿಯಾ ಅವರು ಡಿ. 27ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಎನ್‌ಡಿಎ ಖಾಡಕ್ವಲ್ಸಾವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನಿರೀಕ್ಷೆಯಂತೆ ನಡೆದರೆ ಸಾನಿಯಾ ಮಿರ್ಜಾ ಅವರು ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಮೊದಲ ಮುಸ್ಲಿಂ ಪೈಲಟ್ ಎನಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ

    ಈ ಕುರಿತು ಮಾತನಾಡಿರುವ ಸಾನಿಯಾ `ನಾನು ಪೈಲಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರನ್ನು ಯಟ್ಯೂಬ್‌ನಲ್ಲಿ ನೋಡಿದ ನಂತರ ಅವರಿಂದ ಬಹಳ ಸ್ಫೂರ್ತಿ ಪಡೆದಿದ್ದೇನೆ. ಅವರನ್ನು ನೋಡಿಯೇ ನಾನು ಎನ್‌ಡಿಎ ಸೇರಿರುವುದು. ಯುವ ಪೀಳಿಗೆ ಮುಂದೊಮ್ಮೆ ನನ್ನಿಂದ ಕೂಡ ಪ್ರೇರಣೆ ಪಡೆಯಲಿದೆ ಎಂಬ ಆಶಯ ನನ್ನದು’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಿವೃತ್ತ ಪ್ರಾಧ್ಯಾಪಕಿ ಶೆಲ್ಲಿ ದೆಹಲಿ ಮೇಯರ್ ಅಭ್ಯರ್ಥಿಯಾಗಿ ಘೋಷಣೆ

    ಏನಿದು ಯೋಜನೆ?
    ಈ ವರ್ಷದ ಆರಂಭದಲ್ಲಿ ರಕ್ಷಣಾ ಸಚಿವಾಲಯವು ಐಎಎಫ್‌ನಲ್ಲಿ (IAF) ಮಹಿಳಾ ಪೈಲಟ್‌ಗಳನ್ನು ನಿಯೋಜಿಸುವ ತನ್ನ ಪ್ರಾಯೋಗಿಕ ಯೋಜನೆಯನ್ನು ಶಾಶ್ವತಗೊಳಿಸಲು ನಿರ್ಧರಿಸಿತು. ರಕ್ಷಣಾ ಸಚಿವಾಲಯವು ಮಹಿಳೆಯರೂ ಫೈಟರ್ ಪೈಲಟ್‌ಗಳಾಗಿ ವಾಯುಪಡೆ ಸೇರಲು 2015ರಲ್ಲಿ ಅನುಮತಿಸಿತ್ತು. ನಂತರ `ಫೈಟರ್ ಸ್ಟ್ರೀಮ್‌ ಆಫ್ ಫ್ಲೈಯಿಂಗ್‌ʼ ಬ್ರಾಂಚ್‌ನಲ್ಲಿ ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳನ್ನು ಸೇರಿಸುವ ಯೋಜನೆ 2016ರಲ್ಲಿ ಪ್ರಾರಂಭವಾಯಿತು.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ಡಿವೋರ್ಸ್ ವದಂತಿಯ ನಡುವೆ ಸಾನಿಯಾ ಮಿರ್ಜಾ ಬರ್ತ್‌ಡೇಗೆ ಶೋಯೆಬ್ ಮಲಿಕ್ ವಿಶ್

    ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಸದ್ಯ ತಮ್ಮ 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾನಿಯಾ ದಂಪತಿಯ ಡಿವೋರ್ಸ್ ವದಂತಿಯ ಬೆನ್ನಲ್ಲೇ ಪತ್ನಿ ಸಾನಿಯಾಗೆ ಸ್ವೀಟ್ ಆಗಿ ಶೋಯೆಬ್ ಮಲಿಕ್(Shoaib Malik) ವಿಶ್ ಮಾಡಿದ್ದಾರೆ. ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಕ್ರೀಡಾ ಲೋಕದಲ್ಲಿ ಸದ್ಯ ಒಂದೇ ಸುದ್ದಿ, ಅದು ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಡಿವೋರ್ಸ್(Divorce) ವಿಚಾರ. ಸದ್ಯದಲ್ಲೇ ಈ ಜೋಡಿ ಬೇರೆಯಾಗಲಿದ್ದಾರೆ. ಶೋಯೆಬ್ ಅವರು ಪಾಕಿಸ್ತಾನಿ ಮಾಡೆಲ್ ಜೊತೆ ಆಯೇಶಾ ಒಮರ್ ಜೊತೆ ಸಂಪರ್ಕ ಹೊಂದಿದ್ದಾರೆ. ಆಯೇಶಾ ಎಂಟ್ರಿಯಿಂದ ಸಾನಿಯಾ ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನಲಾಗಿತ್ತು. ಇದೀಗ ಈ ಎಲ್ಲಾ ವದಂತಿಗೂ ತೆರೆ ಬಿದ್ದಿದೆ. ಪತ್ನಿ ಸಾನಿಯಾಗೆ, ಶೋಯೆಬ್ ಸ್ವೀಟ್ ವಿಶ್ ಮಾಡಿದ್ದಾರೆ.

    ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ, ಸದಾ ನಿಮಗೆ ಆರೋಗ್ಯ ಮತ್ತು ಖುಷಿಯ ಜೀವನವಿರಲಿ ಎಂದು ಆಶಿಸುತ್ತೇನೆ ಎಂದು ವಿಶ್ ಮಾಡಿದ್ದಾರೆ. ಕ್ರಿಕೆಟಿಗ ಶೋಯೆಬ್ ಪೋಸ್ಟ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಈ ಮೂಲಕ ಡಿವೋರ್ಸ್ ಗಾಸಿಪ್‌ಗೂ ಬ್ರೇಕ್ ಬಿದ್ದಂತಾಗಿದೆ. ಇದನ್ನೂ ಓದಿ:ತುಳುವಿನಲ್ಲೂ ರಿಲೀಸ್ ಆಗಲಿದೆ `ಕಾಂತಾರ’: ರಿಲೀಸ್ ಡೇಟ್ ಫಿಕ್ಸ್

    ಇನ್ನೂ ಪಾಕಿಸ್ತಾನಿ ಚಾನೆಲ್‌ವೊಂದರಲ್ಲಿ `ದಿ ಮಿರ್ಜಾ ಮಲಿಕ್ ಶೋ’ ಎಂಬ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಶೋ ಬಳಿಕ ಸಾನಿಯಾಗೆ ಶೋಯೆಬ್ ವಿಶ್ ನೋಡಿ, ನೆಟ್ಟಿಗರು ಸೈಲೆಂಟ್ ಆಗಿದ್ದಾರೆ. ಒಂದು ವೇಳೆ ಡಿವೋರ್ಸ್ ಆಗೋದಾದರೆ, ಅಧಿಕೃತವಾಗಿ ಈ ಜೋಡಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    ಮುಂಬೈ: ಯಶಸ್ವಿ ಕ್ರೀಡಾ ಜೋಡಿಗಳಲ್ಲಿ ಒಂದಾಗಿದ್ದ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ (Shoaib Malik) ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಅವರಿಬ್ಬರು ವಿಚ್ಛೇದನ ಪಡೆಯುವುದು ಖಚಿತ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ.

    ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವಿನ ವೈಮನಸ್ಸನ್ನು ಮರೆತು ಪ್ರೀತಿಸಿ ಈ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆ ಬಳಿಕ 2018ರಲ್ಲಿ ಒಂದು ಮುದ್ದಾದ ಗಂಡು ಮಗವನ್ನು ಪಡೆದಿದ್ದರು. ಆದರೆ ಇದೀಗ ಈ ಜೋಡಿ ಮಧ್ಯೆ ಬಿರುಕು ಕಂಡುಬಂದಿದ್ದು ಬೇರೆ ಬೇರೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಇದಕ್ಕೆ ಸಾಕ್ಷಿ ಎಂಬಂತೆ ಪಾಕಿಸ್ತಾನದ ಮಲಿಕ್ ಆಪ್ತ ಸೇಹ್ನಿತರೊಬ್ಬರು, ಸಾನಿಯಾ ಮಿರ್ಜಾ ಮತ್ತು ಮಲಿಕ್ ಈಗಾಗಲೇ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ನನಗೆ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಬ್ಬರೂ ಬೇರೆಯಾಗುತ್ತಿರುವುದು ಖಚಿತ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಸಾನಿಯಾ ಹಾಗೂ ಮಲಿಕ್ 2010ರ ಎಪ್ರಿಲ್ 12 ರಂದು ಹೈದರಾಬಾದ್‍ನಲ್ಲಿ ಮುಸ್ಲಿಂ ಪದ್ಧತಿಯಂತೆ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ಆ ಬಳಿಕ ಮಲಿಕ್ ಭಾರತದ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದರು. ಮೂಗುತಿ ಸುಂದರಿಯನ್ನು ವರಿಸಿ ಸಂತೋಷವಾಗಿಯೇ ಇದ್ದ ಮಲಿಕ್ ಇದೀಗ ಬೇರೆಯಾಗಲು ಕಾರಣ ಪಾಕಿಸ್ತಾನದ ನಟಿ ಎಂಬ ಗುಮಾನಿ ಎದ್ದಿದೆ. ಇದನ್ನೂ ಓದಿ: ಬ್ಯಾಟಿಂಗ್‍ನಲ್ಲಿ ಅಟ್ಟರ್ ಫ್ಲಾಪ್‌ – ರೋಹಿತ್ ಪ್ರದರ್ಶನಕ್ಕೆ ಅಭಿಮಾನಿಗಳು ಗರಂ

    ಆಪ್ತಳಾದ ಆಯೇಷಾ:
    ಇದೀಗ ಮಲಿಕ್ ಜೊತೆ ಪಾಕಿಸ್ತಾನದ ನಟಿ ಆಯೇಷಾ ಒಮರ್ (Ayesha Omar) ಹೆಸರು ಕೇಳಿ ಬರುತ್ತಿದೆ. ಆಯೇಷಾ ಒಮರ್, ಪಾಕಿಸ್ತಾನಿ ನಟಿ, ಮಾಡೆಲ್ ಮತ್ತು ಯೂಟ್ಯೂಬರ್. ಪಾಕಿಸ್ತಾನಿ ಚಲನಚಿತ್ರಗಳಾದ ‘ಕರಾಚಿ ಸೆ ಲಾಹೋರ್’ (2015), ‘ಯಾಲ್ಘರ್’ (2017) ಮತ್ತು ‘ಕಾಫ್ ಕಂಗನಾ’ (2019)ದಲ್ಲಿ ನಟಿಸಿದಾಕೆ. ಪಾಕಿಸ್ತಾನ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಆಯೇಷಾ ತನ್ನ ಯೂಟ್ಯೂಬ್ ಖಾತೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 2015ರಲ್ಲಿ ಯಶಸ್ವಿ ರೊಮ್ಯಾಂಟಿಕ್-ಕಾಮಿಡಿ ಚಿತ್ರ ‘ಕರಾಚಿ ಸೆ ಲಾಹೋರ್’ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಆಯೇಷಾ ಖ್ಯಾತರಾಗಿದ್ದರು. ಇದಾದ ಬಳಿಕ ಆಯೇಶಾ ಒಮರ್, ಶೋಯೆಬ್ ಮಲಿಕ್ ಅವರೊಂದಿಗೆ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಬಳಿಕ ಇವರಿಬ್ಬರ ನಡುವೆ ಆಪ್ತತೆ ಬೆಳೆದು ಇದೀಗ ಮಲಿಕ್ ಸಾನಿಯಾ ಜೊತೆಗಿನ ವಿಚ್ಛೇದನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ನವದೆಹಲಿ: ಭಾರತದ ಮಾಜಿ ಟೆನ್ನಿಸ್ (Tennis) ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಎರಡೂ ದೇಶಗಳಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದ ಜೋಡಿ ಎಂದರೆ ತಪ್ಪಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿ ದೂರವಾಗುತ್ತಿರುವ ಬಗ್ಗೆ ಭಾರೀ ಅನುಮಾನ ಹುಟ್ಟಿಕೊಂಡಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ಒಂದು ಅವರಿಬ್ಬರ ವಿಚ್ಛೇದನದ (Divorce) ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಹೌದು, ಸಾನಿಯಾ ಹಾಗೂ ಶೋಯೆಬ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಆದರೆ ಸಾನಿಯಾ ಭಾರತೀಯಳಾಗಿದ್ದು (Indian), ಶೋಯೇಬ್ ಪಾಕಿಸ್ತಾನಿ (Pakistani) ಎಂಬ ವಿಚಾರಕ್ಕೆ ವಿವಾದವೂ ಉಂಟಾಗಿತ್ತು. 12 ವರ್ಷಗಳ ದಾಂಪತ್ಯ ಜೀವನದ ಬಳಿಕ ಇದೀಗ ಅವರಿಬ್ಬರ ನಡುವೆ ಬಿರುಕು ಬಿದ್ದಿರುವ ಬಗ್ಗೆ ವರದಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾನಿಯಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಗಟಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ‘ಒಡೆದ ಹೃದಯಗಳು ಎತ್ತ ಸಾಗುತ್ತಿವೆ? ಅಲ್ಲನನ್ನು ಹುಡುಕಲು’ ಎಂದು ಬರೆದಿದ್ದಾರೆ.

    12 ವರ್ಷಗಳ ಹಿಂದೆ ಜೋಡಿಗಳು ತಮ್ಮ ನಿಶ್ಚಿತಾರ್ಥದ ಬಗ್ಗೆ ಘೋಷಣೆ ಮಾಡಿದಾಗ ಭಾರೀ ಚರ್ಚೆಗೆ ಕಾರಣರಾಗಿದ್ದರು. ಭಾರತವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಟೆನ್ನಿಸ್ ತಾರೆ ಪಾಕಿಸ್ತಾನಿಯನ್ನು ಯಾಕೆ ಮದುವೆಯಾಗಬೇಕೆಂಬ ಟೀಕೆಗಳೂ ಹರಿದಿತ್ತು. ಆದರೆ ಇದೀಗ ಇವರಿಬ್ಬರ ವಿಚ್ಛೇದನದ ಬಗ್ಗೆ ವರದಿಯಾಗಿದ್ದು, ಮತ್ತೆ ಟೀಕೆಗೊಳಗಾಗುತ್ತಿದ್ದಾರೆ. ಇದನ್ನೂ ಓದಿ: ಈಗಿನ ಶಿಕ್ಷಣದ ಹೊಸ ಟ್ರೆಂಡ್ ಏನು? – ಪಬ್ಲಿಕ್ ಟಿವಿ ‘ವಿದ್ಯಾ ಮಂದಿರ’ಕ್ಕೆ ಬನ್ನಿ ಮಾಹಿತಿ ಪಡೆಯಿರಿ

    ಸಾನಿಯಾ ಹಾಗೂ ಶೋಯೆಬ್ ಬೇರ್ಪಡುತ್ತಿರುವ ಬಗ್ಗೆ ಪಾಕಿಸ್ತಾನದಲ್ಲೂ ವದಂತಿಗಳು ಹಬ್ಬಿವೆ. ಆದರೆ ಈ ಬಗ್ಗೆ ದಂಪತಿ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿಲ್ಲ. ಒಂದು ವೇಳೆ ದಂಪತಿ ನಿಜವಾಗಿಯೂ ಬೇರ್ಪಟ್ಟರೆ ಮತ್ತೆ ಟೀಕೆಗೆ ಗುರಿಯಾಗುವ ಸಾಧ್ಯತೆಯಿದೆ.

    ಸಾನಿಯಾ ಭಾರತದ ಮಾಜಿ ಟೆನಿಸ್ ಆಟಗಾರ್ತಿಯಾಗಿದ್ದು, ಗಮನಾರ್ಹ ಪುರಸ್ಕಾರಗಳನ್ನು ಗೆದ್ದಿದ್ದಲ್ಲದೇ ದೇಶಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳಲ್ಲೊಬ್ಬರಾಗಿರುವ ಇವರು ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೆಜಿಎಫ್‌ ಮ್ಯೂಸಿಕ್‌ ಬಳಕೆ – ಕಾಂಗ್ರೆಸ್‌ ಟ್ವಿಟ್ಟರ್‌ ಖಾತೆ ಬ್ಲಾಕ್‌ ಮಾಡುವಂತೆ ಕೋರ್ಟ್‌ ಆದೇಶ

    Live Tv
    [brid partner=56869869 player=32851 video=960834 autoplay=true]

  • ನಾವು ಭಾರತೀಯರಾಗಿರುವುದೇ ಹೆಮ್ಮೆ – ಅಮೃತಮಹೋತ್ಸವ ಸಂಭ್ರಮಿಸಿದ ಕ್ರೀಡಾ ತಾರೆಗಳು

    ನಾವು ಭಾರತೀಯರಾಗಿರುವುದೇ ಹೆಮ್ಮೆ – ಅಮೃತಮಹೋತ್ಸವ ಸಂಭ್ರಮಿಸಿದ ಕ್ರೀಡಾ ತಾರೆಗಳು

    ಮುಂಬೈ: 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಹರ್ ಘರ್ ತಿರಂಗಾ ಅಭಿಯಾನವನ್ನು ಸಾರ್ಥಕಗೊಳಿಸಿದರು. ಬಳಿಕ ಪ್ರಧಾನಿ ಮೋದಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

    ಇಡೀ ದೇಶದ ಜನರು ಮನೆ-ಮನೆಯಲ್ಲೂ ಧ್ವಜ ಹಾರಿಸುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ. ಇದಕ್ಕೆ ಭಾರತದ ಕ್ರೀಡಾ ತಾರೆಗಳೂ ಹೊರತಾಗಿಲ್ಲ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೇರಿ ಹಲವರು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ.

    ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ರಾಷ್ಟ್ರಧ್ವಜ ಹಿಡಿದ ಫೋಟೋಗಳನ್ನು ಹಂಚಿಕೊಂಡಿದ್ದು, ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಈ ಸಲ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್ – ಕಾರಣ ಏನು?

    ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿರುವ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, `ನಾನು ಭಾರತೀಯನೆಂದು ಹೇಳಲು ಹೆಮ್ಮೆ ಪಡುತ್ತೇನೆ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಬಜನ್ ಸಿಂಗ್, ನಮ್ಮ ರಾಷ್ಟ್ರಧ್ವಜ ಹಿಂದಿನ ತ್ಯಾಗ ಬಲಿದಾನಗಳ ಸಂಕೇತ, ವರ್ತಮಾನದ ಸಮೃದ್ಧಿ ಹಾಗೂ ಭವಿಷ್ಯದ ಭರವಸೆಗಳ ಸಂಕೇತವಾಗಿದೆ ಎಲ್ಲರೂ ಅದಕ್ಕೆ ಸಲ್ಯೂಟ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: IPLನಲ್ಲಿ ಸೊನ್ನೆಗೆ ಔಟಾಗಿದ್ದಕ್ಕೆ ಮೂರ್ನಾಲ್ಕು ಬಾರಿ ಕಪಾಳಕ್ಕೆ ಬಾರಿಸಿದ್ರು – ರಾಸ್‌ ಟೇಲರ್‌ ರೋಚಕ ಅನುಭವ

    ಇದೇ ರೀತಿ ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಜಸ್ಪಿತ್ ಬುಮ್ರಾ, ಶಿಖರ್ ಧವನ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಮಾಜಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬಾಕ್ಸಿಂಗ್ ಮಾಜಿ ಕ್ರೀಡಾಪಟು ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಮೊದಲಾದವರು ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿದ್ದಾರೆ.

    ವಿದೇಶಿ ಕ್ರೀಡಾ ತಾರೆಗಳಿಂದಲೂ ವಿಶ್: ಇನ್ನೂ ಭಾರತೀಯರು ಮಾತ್ರವಲ್ಲದೇ ವಿದೇಶಿ ಕ್ರಿಕೆಟಿಗರೂ ಶುಭ ಕೋರಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹಾಗೂ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಡೇರೆನ್ ಸಾಮಿ ಶುಭ ಕೋರಿದ್ದಾರೆ. ಡೇವಿಡ್ ವಾರ್ನರ್ ನನ್ನೆಲ್ಲಾ ಭಾರತೀಯ ಕುಟುಂಬದ ಸ್ನೇಹಿತರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ. ಇನ್ನೂ ಡೇರೆನ್ ಸಾಮಿ `ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಭಾರತದಲ್ಲೇ’ ಎಂದು ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]