Tag: ಸಾಧ್ವಿ ಸರಸ್ವತಿ

  • ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

    ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

    ಉಡುಪಿ: ದೇಶದಲ್ಲಿ ಗೋವು ಕಳ್ಳರ ಹಾವಳಿ ವಿಪರೀತವಾಗಿದೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡುವ ಪರಿಸ್ಥಿತಿ ಇದೆ. ಪ್ರತಿ ಮನೆಯಲ್ಲಿ ತಲ್ವಾರ್ ಗಳನ್ನು ಖರೀದಿಸಿ ಗೋವು ರಕ್ಷಣೆಗೈಯಿರಿ ಎಂದು ಸಾಧ್ವಿ ಸರಸ್ವತಿ ಕರೆ ನೀಡಿದ್ದಾರೆ.

    ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿಂದೂ ಸಂಗಮ ಕಾರ್ಯಕ್ರಮ ಭಾನುವಾರ ಸಂಜೆ ನಡೆದಿದೆ. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

    ಸಾಧ್ವಿ ಸರಸ್ವತಿ ದಿಕ್ಸೂಚಿ ಭಾಷಣಕಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗೋಭಕ್ಷಕರು ಹಾವಳಿ ಹೆಚ್ಚಾಗಿದೆ. ಮನೆಗೆ, ಕೊಟ್ಟಿಗೆಗೆ ನುಗ್ಗಿ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ಗೋವು ರಕ್ಷಣೆಗಾಗಿ ಪ್ರತಿ ಮನೆಯಲ್ಲಿ ತಲ್ವಾರ್ ಗಳನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ನಿಷೇಧ ಕಾಯ್ದೆ: ಸುನಿಲ್ ಕುಮಾರ್

    ಮೊಬೈಲ್ ಕಂಪ್ಯೂಟರ್ ಗೆ 50 ಸಾವಿರ ಒಂದು ಲಕ್ಷ ರೂಪಾಯಿ ಕೊಟ್ಟು ಖರೀದಿಸುವ ನಿಮಗೆ ಒಂದು ಸಾವಿರ ರೂಪಾಯಿ ಕೊಟ್ಟು ತಲ್ವಾರ್ ಖರೀದಿಸಲು ಕಷ್ಟವಲ್ಲ. ತಲ್ವಾರ್ ಖರೀದಿ ಮಾಡಿರಿ, ಗೋವಿನ ರಕ್ಷಣೆ ಮಾಡಿ ಎಂದು ಕರೆ ನೀಡಿದರು. ಕಲ್ಲಿಗೆ ಕಲ್ಲೇ ಉತ್ತರ, ಬಾಣಕ್ಕೆ ಬಾಣವೇ ಉತ್ತರ. ಶಾಂತಿ ಮಂತ್ರ ಪಠಿಸುತ್ತಾ ಕುಳಿತುಕೊಳ್ಳಲು ಕಾಲ ಇದಲ್ಲ ಎಂದರು. ನಾನು ಕೂಡ ಗೋವುಗಳು ಇರುವ ಮನೆಯಿಂದ ಬಂದವಳು. ಗೋವಿನ ಪಾಲನೆ-ಪೋಷಣೆ ಎಷ್ಟು ಕಷ್ಟ ಎಂದು ಗೊತ್ತಿದೆ ಎಂದರು. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

  • ಕಲಬುರಗಿಯಲ್ಲಿ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಣೆ

    ಕಲಬುರಗಿಯಲ್ಲಿ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಣೆ

    ಕಲಬುರಗಿ: ಗುಜರಾತ್ ಚುನಾವಣೆ ನಂತರ ಕಾಂಗ್ರೆಸ್ ನಾಯಕರು ಮೃದು ಹಿಂದುತ್ವ ಅನುಸರಿಸ್ತಿದ್ದಾರೆ ಎನ್ನಲಾಗಿತ್ತು. ಆದ್ರೆ ಹಿಂದುತ್ವ ವಿಷಯದಲ್ಲಿ ರಾಜ್ಯ ಸರ್ಕಾರ ಯೂಟರ್ನ್ ಹೊಡೆದಿದೆ.

    ಪ್ರತಿವರ್ಷದಂತೆ ಈ ವರ್ಷ ಸಹ ಕಲಬುರಗಿಯ ಜೇವರ್ಗಿ ಪಟ್ಟಣದಲ್ಲಿ ಮಾರ್ಚ್ 27ರಂದು ವಿಶ್ವ ಹಿಂದು ಪರಿಷತ್ ಸಮಾವೇಶ ನಡೆಸಲು ನಿರ್ಧರಿಸಿದೆ. ಆದ್ರೆ ಜಿಲ್ಲಾಡಳಿತ ಮಾತ್ರ ಸಮಾವೇಶಕ್ಕೆ ಅನುಮತಿ ನೀಡಲು ನಿರಾಕರಿಸಿದೆ ಎಂಬುದಾಗಿ ತಿಳಿದುಬಂದಿದೆ.

    ಕಾರ್ಯಕ್ರಮಕ್ಕೆ ಹಿಂದೂ ಫೈರ್ ಬ್ರಾಂಡ್ ಎಂದೇ ಪ್ರಸಿದ್ಧರಾಗಿರುವ ಸಾಧ್ವಿ ಸರಸ್ವತಿ ಆಗಮಿಸುತ್ತಿದ್ದು, ಅವರ ಭಾಷಣದಿಂದ ಕಾಂಗ್ರೆಸ್‍ಗೆ ಹೊಡೆತ ಬೀಳುತ್ತೆ ಅನ್ನೋ ಭೀತಿಯಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡ್ತಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ.

    ಇತ್ತ ಸರ್ಕಾರ ಅನುಮತಿ ಕೊಡಲಿ ಕೊಡದೇ ಇರಲಿ. ನಾವು ನಿಗದಿತ ದಿನಾಂಕದಂದು ಸಮಾವೇಶ ನಡೆಸಿಯೇ ತೀರುತ್ತೇವೆ ಅಂತ ವಿಹೆಚ್‍ಪಿ ಮತ್ತು ಭಜರಂಗದಳ ಮುಖಂಡರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

  • ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ

    ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡ್ಬೇಕು, ಅನ್ಯಧರ್ಮೀಯರು ಕಣ್ಣೆತ್ತಿ ನೋಡಿದ್ರೆ ತಲೆ ಕಡೀಬೇಕು: ಸಾಧ್ವಿ ಸರಸ್ವತಿ

    ಬೆಳಗಾವಿ: ಗೋ ಹತ್ಯೆ ಮಾಡೋರನ್ನ ತಲೆ ಕಡೀಬೇಕು. ಹಿಂದೂ ಯುವತಿಯರ ಕೈಗೆ ತಲ್ವಾರ್ ಕೊಡಬೇಕು. ತಮ್ಮನ್ನು ಕಣ್ಣೆತ್ತಿ ನೋಡೋ ವಿಧರ್ಮಿಯರ ತಲೆ ಕಡೀಬೇಕು ಎಂದು ಮಹಿಳಾ ಸನ್ಯಾಸಿನಿ, ಚೈತನ್ಯ ಪೀಠದ ಪ್ರಚಾರಕಿ ಸಾಧ್ವಿ ಸರಸ್ವತಿ ಹೇಳಿದ್ದಾರೆ.

    ಬೆಳಗಾವಿಯ ಗುಜರಾತ್ ಭವನದಲ್ಲಿ ಬಜರಂಗದಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಹೋದರಿಯರೊಂದಿಗೆ ಲವ್ ಜಿಹಾದ್ ಮಾಡಲಾಗ್ತಿದೆ. ಶಾಲೆ-ಕಾಲೇಜುಗಳು, ಟ್ಯೂಷನ್ ಸೆಂಟರ್‍ಗಳು, ಬಟ್ಟೆಯಂಗಡಿ, ಮೊಬೈಲ್ ಅಂಗಡಿಗಳಲ್ಲಿ ಲವ್ ಜೆಹಾದ್ ಜಾಸ್ತಿಯಾಗ್ತಿದೆ ಎಂದರು.

    ಲವ್ ಜಿಹಾದ್ ತಪ್ಪಿಸಲು ರಕ್ಷಾ ಬಂಧನದಂದು ಅಣ್ಣಂದಿರು ತಂಗಿಯರಿಗೆ ಉಡುಗೊರೆಯಾಗಿ ತಲ್ವಾರ್ ಕೊಡ್ಬೇಕು. ನಮ್ಮತ್ತ ಕಣ್ಣ ಎತ್ತಿ ನೋಡುವವರ ತಲೆಕಡಿದು ಭಾರತ ಮಾತೆಯ ಪಾದಕ್ಕೆ ಅರ್ಪಿಸುವಂತೆ ನಮ್ಮ ಸಹೋದರಿಯರಿಗೆ ಸೂಚಿಸಿ ಎಂದು ಸಾಧ್ವಿ ಸರಸ್ವತಿ ಹೇಳಿದರು.

    ಗೋ ಹತ್ಯೆ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅಷ್ಟೇ ಅಲ್ಲದೇ ಅವರ ಕತ್ತನ್ನು ಕತ್ತರಿಸಬೇಕು ಎಂದು ಅವರು ಆಗ್ರಹಿಸಿದರು.

     

    https://youtu.be/B1brRKodbtU