Tag: ಸಾಧ್ವಿ ಪ್ರಾಚಿ

  • ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

    ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ನೆಹರು ಕುಟುಂಬದ ಕೊಡುಗೆ: ಸಾಧ್ವಿ ಪ್ರಾಚಿ

    ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ, ಅತ್ಯಾಚಾರ, ಭ್ರಷ್ಟಾಚಾರ, ಭಯೋತ್ಪಾದನೆ ಎಲ್ಲವೂ ಸಮಾಜಕ್ಕೆ ನೆಹರು ಕುಟುಂಬದ ಕೊಡುಗೆ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ ಪ್ರಾಚಿ, ಭಾರತ ಅತ್ಯಾಚಾರದ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. ನಕ್ಸಲಿಸಂ, ಭಯೋತ್ಪಾದನೆ, ಅತ್ಯಾಚಾರಗಳೆಲ್ಲ ನೆಹರು ಕುಟುಂಬದಿಂದಲೇ ಬಂದಿದ್ದು ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಓದಿ: ಭಾರತ ವಿಶ್ವದ ಅತ್ಯಾಚಾರಗಳ ರಾಜಧಾನಿ: ರಾಹುಲ್ ಗಾಂಧಿ

    ನಮ್ಮ ದೇಶ ರಾಮ, ಕೃಷ್ಣನಂತವರು ಜನಿಸಿದ ಪುಣ್ಯಭೂಮಿ. ರಾಹುಲ್ ಗಾಂಧಿ ಹೇಳಿರುವುದು ಸರಿಯಲ್ಲ. ರಾಮ ಮತ್ತು ಕೃಷ್ಣನ ಸಂಸ್ಕೃತಿಯನ್ನು ನಮ್ಮ ದೇಶದಲ್ಲಿ ಹಾಳು ಮಾಡಿದ ನೆಹರು ಅವರೇ ಅತಿ ದೊಡ್ಡ ಅತ್ಯಾಚಾರಿ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಖಂಡಿಸಿ ಧರಣಿ ನಡೆಸುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ಮಾಡಿದ ಪ್ರಾಚಿ ಅಖಿಲೇಶ್ ಅಧಿಕಾರದಲ್ಲಿದ್ದಾಗ ಅತ್ಯಾಚಾರಿಗಳನ್ನೆಲ್ಲ ಕಾಪಾಡಿ, ಈಗ ಪ್ರತಿಪಕ್ಷದಲ್ಲಿ ಇದ್ದೇನೆ ಎಂದು ಧರಣಿ ಮಾಡುತ್ತಿದ್ದಾರೆ ಎಂದರು.

    ಹೈದರಾಬಾದ್‍ನ ಮಹಿಳಾ ಪಶುವೈದ್ಯಾಧಿಕಾರಿ ದಿಶಾ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್‍ಕೌಂಟರ್ ನಲ್ಲಿ ಕೊಂದ ಹೈದರಾಬಾದ್ ಪೊಲೀಸರನ್ನು ಸಾಧ್ವಿ ಪ್ರಾಚಿ ಶ್ಲಾಘಿಸಿದರು. ಉನ್ನಾವೋ ಸಂತ್ರಸ್ತೆಯ ಸಾವಿಗೆ ಕಾರಣವಾದವರ ಮೇಲೆ ಕೂಡ ಇದೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

  • ಹರಿದ್ವಾರದಿಂದ ಮುಸ್ಲಿಂರನ್ನು ಬಹಿಷ್ಕರಿಸಿ: ಸಾಧ್ವಿ ಪ್ರಾಚಿ

    ಹರಿದ್ವಾರದಿಂದ ಮುಸ್ಲಿಂರನ್ನು ಬಹಿಷ್ಕರಿಸಿ: ಸಾಧ್ವಿ ಪ್ರಾಚಿ

    ಲಕ್ನೋ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹರಿದ್ವಾರದಲ್ಲಿರುವ ಮುಸ್ಲಿಂರನ್ನು ಬಹಿಷ್ಕರಿಸಿ ಎಂದು ಸಾಧ್ವಿ ಪ್ರಾಚಿ ಹೇಳಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ಕೈರನಾ ಶಾಸಕ ನಾಹಿದ್ ಹಸನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾಧ್ವಿ ಪ್ರಾಚಿ, ಶಾಸಕರು ಮುಸ್ಲಿಂರಿಗೆ ಹಿಂದೂಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸದಂತೆ ಹೇಳುತ್ತಾರೆ. ನಾನು ಹರಿದ್ವಾರದ ಎಲ್ಲ ಹಿಂದೂಗಳಲ್ಲಿ ಮುಸ್ಲಿಂರು ತಯಾರಿಸುವ ಕಾಂವಡಾ(ಪೂಜಾ ಸಾಮಾಗ್ರಿ) ಖರೀದಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದ್ದಾರೆ.

    ಹರಿದ್ವಾರದಲ್ಲಿರುವ ಶೇ.99ರಷ್ಟು ಮುಸ್ಲಿಂರು ಹಿಂದೂಗಳ ಪೂಜೆಗೆ ಬೇಕಾಗುವ ಕಾಂವಡಾ ತಯಾರಿಸುತ್ತಾರೆ. ಮುಸ್ಲಿಂರನ್ನು ಹರಿದ್ವಾರದ ಕಳುಹಿಸಲು ಅವರು ತಯಾರಿಸುವ ವಸ್ತುಗಳನ್ನು ಖರೀದಿಸಬೇಡಿ. ಹರಿದ್ವಾರದಲ್ಲಿರುವ ಹಿಂದೂಗಳಿಗೂ ದಿನಗೂಲಿ ಸಿಗಬೇಕೆಂದ್ರೆ ಮುಸ್ಲಿಂರನ್ನು ಬಹಿಷ್ಕರಿಸಿ ಎಂದು ಒತ್ತಾಯಿಸಿದ್ದಾರೆ.

    ಎಲ್ಲಿ ಮುಸ್ಲಿಂರ ಸಂಖ್ಯೆ ಹೆಚ್ಚಾಗಿರುತ್ತೋ ಅಲ್ಲಿ ವಿವಾದ ಹುಟ್ಟಿಕೊಳ್ಳುತ್ತದೆ. ಈ ಮೊದಲು ಕೈರನಾದಿಂದ ಹಿಂದೂಗಳ ಮನೆಯನ್ನು ಖಾಲಿ ಮಾಡಿಸಲಾಯ್ತು. ಇದೀಗ ಹಿಂದೂಗಳ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬಾರದು ಶಾಸಕ ಹಸನ್ ಹೇಳುತ್ತಾರೆ. ನೀವು ಮುಸ್ಲಿಂರು ತಯಾರಿಸುವ ಕಾಂವಡಾ ಖರೀದಿಸಬೇಡಿ. ನಾವುಗಳು ಹಿಂದೂ, ಹಿಂದೂಸ್ಥಾನ್ ನಮ್ಮದು. ಮಾನವೀಯತೆ ದೃಷ್ಟಿಯಿಂದ ಭಾರತದಲ್ಲಿ ಮುಸ್ಲಿಂರು ವಾಸಿಸುತ್ತಿದ್ದಾರೆ. ಇಲ್ಲಿ ಕಳ್ಳತನ, ಸುಲಿಗೆ ಮಾಡಿದ್ರೆ ಸುಮ್ಮನೆ ಕುಳಿತುಕೊಳ್ಳಲು ನಾವು ಮಹಾತ್ಮ ಗಾಂಧೀಜಿ ಅಲ್ಲ. ಮುಸ್ಲಿಂರೇ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೈ ಶ್ರೀರಾಮ ಹೇಳದಿದ್ದರೆ ಚೆನ್ನಾಗಿರಲ್ಲ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶಾಸಕ ನಾಹಿದ್ ಹಸನ್ ಹೇಳಿದ್ದೇನು?
    ಕೈರನಾ ಮತ್ತು ಸುತ್ತಮುತ್ತಲಿನ ಗ್ರಾಮದ ನೀವು ಇಲ್ಲಿಯ ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಯಾವ ವಸ್ತುವನ್ನು ಖರೀದಿಸಬೇಡಿ ಎಂದು ನಾಹಿದ್ ಹಸನ್ ವಿವಾವಾದತ್ಮಕ ಹೇಳಿಕೆ ನೀಡಿದ್ದರು. ಹತ್ತು ಅಥವಾ ಒಂದು ತಿಂಗಳು ಕಷ್ಟವಾದರೂ ಪರವಾಗಿಲ್ಲ ಪಾಣಿಪತ್ ಗೆ ತೆರಳಿ ವಸ್ತುಗಳನ್ನು ಖರೀದಿಸಿ. ಮುಂದಿನ ಒಳ್ಳೆಯ ದಿನಕ್ಕಾಗಿ ಸ್ವಲ್ಪ ಕಷ್ಟ ಅನುಭವಿಸಬೇಕಿದೆ ಎಂದು ಶಾಸಕ ಹಸನ್ ತಮ್ಮ ಕ್ಷೇತ್ರದ ಮುಸ್ಲಿಂ ಜನತೆಯಲ್ಲಿ ಕೈ ಮುಗಿದು ನಿಮ್ಮಲ್ಲಿ ಮನವಿ ಮಾಡಿಕೊಂಡಿದ್ದರು.