Tag: ಸಾಧ್ವಿ

  • ಅನ್ಯಕೋಮಿನ ವ್ಯಕ್ತಿಯನ್ನು ಸ್ವರಾ ಭಾಸ್ಕರ್‌ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್‌ ಪ್ರಕರಣ ನೆನಪಿಸಿದ ಸಾಧ್ವಿ

    ಅನ್ಯಕೋಮಿನ ವ್ಯಕ್ತಿಯನ್ನು ಸ್ವರಾ ಭಾಸ್ಕರ್‌ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್‌ ಪ್ರಕರಣ ನೆನಪಿಸಿದ ಸಾಧ್ವಿ

    ಬಾಲಿವುಡ್ (Bollywoo) ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಇತ್ತೀಚಿಗೆ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆಯಾದರು. ಹಿಂದೂ ಹುಡುಗಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕೆ ಈ ಜೋಡಿಯ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ನಟಿ ಸ್ವರಾ ಭಾಸ್ಕರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ರಾಂಗ್ ಆಗಿದ್ದಾರೆ. ಶ್ರದ್ಧಾ ವಾಕರ್ (Shraddha Walker) ಕಥೆ ನೆನಪಿಸಿ ನಿಮಗೂ ಫ್ರಿಡ್ಜ್ ಗತಿ ಬರಬಹುದು ಎಂದು ಸ್ವರಾಗೆ ಎಚ್ಚರಿಸಿದ್ದಾರೆ.

    ಶ್ರದ್ಧಾ ವಾಕರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಫ್ತಾಬ್ ತನ್ನ ಲವರ್ ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಿ 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರ ಶಾಕ್ ಆಗಿತ್ತು. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿ ಸಾಧ್ವಿ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಅನುಪಮಾ ಗೌಡ

    ಶ್ರದ್ಧಾ ಅವರ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಕರಣದ ಬಗ್ಗೆ ಸ್ವರಾ ಅವರು ಹೆಚ್ಚು ಗಮನವಹಿಸಿಲ್ಲ ಅನಿಸುತ್ತದೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಫ್ರಿಡ್ಜ್‌ ಒಮ್ಮೆ ನೋಡಬೇಕು. ಮದುವೆ ಅವರ ವೈಯಕ್ತಿಕ ಆಯ್ಕೆ. ಆದ್ದರಿಂದ ನನಗೇನು ಆಗುವುದಿಲ್ಲ. ಆದರೆ, ಶ್ರದ್ಧಾಗೆ ಬಂದ ಗತಿ ಸ್ವರಾಗೂ ಬರಬಹುದು ಎಂದಿದ್ದಾರೆ.

    ನಟಿ ಸ್ವರಾ ಭಾಸ್ಕರ್ ಅವರು ಈ ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿಯೇ ಆಗಿದ್ದರು. ಬೇರೆ ಧರ್ಮದವರನ್ನು ಅವರು ಮದುವೆ ಆಗುತ್ತಾರೆ ಎಂದು ನಾನು ಮೊದಲೇ ಊಹೆ ಮಾಡಿದ್ದೆ, ಅದು ಈಗ ಆಗಿದೆ. ಅವರು ಮುಸ್ಲಿಂನನ್ನು ಮದುವೆ ಆಗಿದ್ದಾರೆ ಎಂದು ಸಾಧ್ವಿ ಹೇಳಿದ್ದಾರೆ. ಸದ್ಯ ಸಾಧ್ವಿ ಮಾತಿಗೆ ಸ್ವರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    ತಡರಾತ್ರಿ ಆಶ್ರಮಕ್ಕೆ ನುಗ್ಗಿದ ನಾಲ್ವರಿಂದ ಸಾಧ್ವಿ ಮೇಲೆ ಗ್ಯಾಂಗ್‍ರೇಪ್

    – ಸಾಧುಗಳನ್ನ ರೂಮಿನಲ್ಲಿ ಲಾಕ್ ಮಾಡಿ ಸಾಮೂಹಿಕ ಅತ್ಯಾಚಾರ
    – ತಡೆಯಲು ಬಂದ ಸಾಧುಗೆ ಥಳಿತ

    ರಾಂಚಿ: ಸಾಧ್ವಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್‍ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಆಶ್ರಮವೊಂದರಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಂಗಳವಾರ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.

    ಜಿಲ್ಲೆಯ ಆಶ್ರಮಕ್ಕೆ ಸೋಮವಾರ ತಡರಾತ್ರಿ ನಾಲ್ವರು ಆರೋಪಿಗಳು ಏಕಾಏಕಿ ಬಲವಂತವಾಗಿ ನುಗ್ಗಿದ್ದಾರೆ. ನಂತರ ಆಶ್ರಮದಲ್ಲಿದ್ದ ಸಾಧುಗಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಈ ವೇಳೆ ಆಶ್ರಮದಲ್ಲಿದ್ದ 38 ವರ್ಷದ ಸಾಧ್ವಿ ಮೇಲೆ ನಾಲ್ವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಸಾಧ್ವಿ ಮೇಲಿನ ಅತ್ಯಾಚಾರವನ್ನು ಸಾಧುವೊಬ್ಬರು ತಡೆಯಲು ಬಂದಾಗ ಅವರನ್ನು ಆರೋಪಿಗಳು ಥಳಿಸಿದ್ದಾರೆ. ಸಂತ್ರಸ್ತೆ ಮಂಗಳವಾರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಹೋಗಿ ತನಿಖೆ ನಡೆಸಿದ್ದಾರೆ.

    ಸದ್ಯಕ್ಕೆ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಬಂಧಿಸಿದ್ದು, ನಾಲ್ಕನೇ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಆತನಿಗೆ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.