Tag: ಸಾಧು

  • ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಲಕ್ನೋ: ಪ್ರಯಾಗ್ ಕುಂಭ ಮೇಳದಲ್ಲಿ ಸೇರಿರುವ ಅನೇಕ ಸಾಧು ಹಾಗೂ ಭಕ್ತರ ಬಳಿಗೆ ಹೋಗಿ ಧೂಮಪಾನ ಬಿಡುವಂತೆ ಯೋಗ ಗುರು ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

    ಶ್ರೀರಾಮ ಹಾಗೂ ಕೃಷ್ಣ ತಂಬಾಕು ಸೇವನೆ ಮಾಡುತ್ತಿರಲಿಲ್ಲ. ಅವರನ್ನು ಪೂಜಿಸುವ ನಾವು ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವುದು ಎಷ್ಟು ಸರಿ? ನಾವೆಲ್ಲರೂ ಧೂಮಪಾನ ಬಿಟ್ಟುಬಿಡೋಣ ಎಂದು ಬಾಬಾ ರಾಮ್‍ದೇವ್ ಸಾಧುಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

    ಸಾಧುಗಳಾದ ನಾವು ಮನೆ, ಕುಟುಂಬ ಸೇರಿದಂತೆ ಎಲ್ಲವನ್ನೂ ಬಿಟ್ಟಿದ್ದೇವೆ. ಇದಕ್ಕಿಂತ ಮಿಗಿಲಾಗಿ ನಮ್ಮ ತಂದೆ ಹಾಗೂ ತಾಯಿಯನ್ನು ಬಿಟ್ಟು ಬಂದಿದ್ದೇವೆ. ಆದರೆ ನಮ್ಮಿಂದ ಯಾಕೆ ಧೂಮಪಾನ ಬೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿ, ಸಾಧುಗಳ ಕಾಲು ಮುಟ್ಟಿ ಧೂಮಪಾನ ಮಾಡದಂತೆ ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡಿದ್ದಾರೆ.

    https://twitter.com/yogrishiramdev/status/1090858740046315520

    ಬಾಬಾ ರಾಮ್‍ದೇವ್ ಅವರು ಅನೇಕ ಸಾಧುಗಳ ಬಳಿ ಇದ್ದ ಚಿಲ್ಮಿ (ತಂಬಾಕು ಸೇವನೆ ಕೊಳವೆ) ಪಡೆದಿದ್ದಾರೆ. ಈ ಮೂಲಕ ಅವುಗಳನ್ನು ತಮ್ಮ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಡುತ್ತೇನೆ. ನೀವು ತಂಬಾಕು ಸೇವನೆಯನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಬಿಡುವಂತೆ ಯುವಕರಿಗೆ ಸಲಹೆ ನೀಡುತ್ತಿರುವೆ. ಹೀಗಾಗಿ ಮಹಾತ್ಮರಿಗೂ ಈ ಕುರಿತು ಮನವರಿಕೆ ಮಾಡಿಕೊಡುತ್ತಿರುವೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದಾರೆ.

    ಒಟ್ಟು 55 ದಿನಗಳ ಕಾಲ ನಡೆಯುವ ಕುಂಭ ಮೇಳವು ಮಾರ್ಚ್ 4ರಂದು ಮುಕ್ತಾಯವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರುವ ಮೇಳ ಇದಾಗಿದೆ. ಸಾಧು, ಸಂತರು ಹಾಗೂ ಭಕ್ತರು ಸೇರಿದಂತೆ ಸುಮಾರು 13 ಕೋಟಿ ಜನರು ಪ್ರಯಾಗ್ ಕುಂಭ ಮೇಳದಲ್ಲಿ ಸೇರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಮರ್ಮಾಂಗವನ್ನ ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಾಧು!

    ಲಕ್ನೋ: 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಕಾಮಸಿನ್ ನಗರದಲ್ಲಿ ನಡೆದಿದೆ.

    ಮದನಿ ಬಾಬಾ ಮರ್ಮಾಂಗ ಕತ್ತರಿಸಿಕೊಂಡ ಸಾಧು. ಮದನಿ ಬಾಬಾ ಕಳೆದ ಹಲವು ವರ್ಷಗಳಿಂದ ಕಾಮಸಿನ್ ನಗರದ ಸರ್ಕಾರಿ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಗುರುವಾರ ನಗರದ ಕೆಲ ಮಹಿಳೆಯರು ಸಾಧು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪದಿಂದ ಮನನೊಂದು ಸಾಧು ರಾತ್ರಿ ಬ್ಲೇಡ್ ನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ಮದನಿ ಬಾಬಾರನ್ನ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇಹದಿಂದ ಮರ್ಮಾಂಗ ಶೇ.80 ರಷ್ಟು ಬೇರೆಯಾಗಿದೆ. ಸದ್ಯ ಸಾಧು ಅವರ ಆರೋಗ್ಯ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ 

    2017ರಲ್ಲಿ ರಾಜಸ್ಥಾನದ 30 ವರ್ಷದ ಸ್ವಯಂಘೋಷಿತ ದೇವಮಾನವ ಸಂತೋಷ್ ದಾಸ್ ಅಕ್ರಮ ಸಂಬಂಧದ ಆರೋಪಕ್ಕೆ ಮನನೊಂದು ಮರ್ಮಾಂಗವನ್ನು ಕಟ್ ಮಾಡಿಕೊಂಡಿದ್ದ ಘಟನೆ ನಡೆದಿತ್ತು. ಕೇರಳದಲ್ಲಿ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಆತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀ ಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿ ಮರ್ಮಾಂಗ ಕತ್ತರಿಸಿಕೊಂಡಿದ್ದ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಅಕ್ರಮ ಸಂಬಂಧ ಆರೋಪಕ್ಕೆ ಮನನೊಂದು ಸ್ವಾಮೀಜಿ `ಅದನ್ನೇ’ ಕಟ್ ಮಾಡ್ಕೊಂಡ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv