Tag: ಸಾಧು ಕೋಕಿಲ

  • ಬ್ಯಾಂಕ್‌ ಜನಾರ್ಧನ್‌ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ

    ಬ್ಯಾಂಕ್‌ ಜನಾರ್ಧನ್‌ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ

    ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತಿನ ವ್ಯಕ್ತಿ – ಸಾಧು ಕೋಕಿಲ ಭಾವುಕ 

    ನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಬ್ಯಾಂಕ್‌ ಜನಾರ್ಧನ್.‌ ಅವರ ನಿಧನದ ಬಗ್ಗೆ ಕಲಾವಿದರಾದ ದೊಡ್ಡಣ್ಣ (Doddanna), ಡಿಂಗ್ರಿ ನಾಗರಾಜ್‌, ಸಾಧು ಕೋಕಿಲ, ವಿನೋದ್‌ ರಾಜ್‌ ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಬ್ಯಾಂಕ್‌ ಜನಾರ್ಧನ್ ನಿಧನಕ್ಕೆ ಟೆನ್ನಿನ್‌ ಕೃಷ್ಣ, ನಟಿ ಅಭಿನಯ ಭಾವುಕ

    ಪಬ್ಲಿಕ್‌ ಟಿವಿಗೆ ದೊಡ್ಡಣ್ಣ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು 46 ವರ್ಷಗಳಾಯ್ತು. ನನಗೆ 40 ವರ್ಷಗಳಿಂದ ಜನಾರ್ಧನ್ ಪರಿಚಿತರು. ಅವರೊಂದಿಗೆ ನಾನು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರೊಂದಿನ ಒಡನಾಟ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಜನಾರ್ಧನ್ ಒಬ್ಬ ಒಳ್ಳೆಯ ಪೋಷಕ ನಟನಾಗಿದ್ದರು. ಅವರು ಮುಂಚೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೆ ಅವರ ಹೆಸರೊಂದಿಗೆ ಬ್ಯಾಂಕ್ ಪದ ಸೇರಿಕೊಂಡಿದೆ. ಇದನ್ನೂ ಓದಿ: ಬ್ಯಾಂಕ್‌ ಜನಾರ್ಧನ್‌ ಅದ್ಭುತ ಅಭಿನಯದಿಂದ ನನ್ನ ಸಿನಿಪಯಣದಲ್ಲಿ ಯಶಸ್ವಿ ಹೆಜ್ಜೆ ಇಟ್ಟೆ: ಉಪೇಂದ್ರ

    2 ವರ್ಷಗಳ ಹಿಂದೆ ನಟ ಮಂದೀಪ್ ರಾಯ್ ತೀರಿಕೊಂಡಾಗ ಅವರ ಅಂತಿಮ ದರ್ಶನಕ್ಕೆ ಬ್ಯಾಂಕ್ ಜನಾರ್ಧನ್ ಬಂದಿದ್ದರು. ಈ ವೇಳೆ ಅವರನ್ನು ಕಡೆಯದಾಗಿ ಭೇಟಿಯಾಗಿದ್ದೆ. ಆಗ ಸ್ವಲ್ಪ ಸೋತಂಗೆ ಕಂಡಿದ್ದರು. ಆಗ ಹುಷರಿಲ್ವಾ ಎಂದು ಕೇಳಿದ್ದೆ, ಸಣ್ಣ ಪುಟ್ಟ ಏನಾದರೂ ಇರುತ್ತೆ ಅಲ್ವಾ ಎಂದಿದ್ದರು. ಒಂದೂವರೆ ವರ್ಷದ ಬಳಿಕ ಅವರು ಸಿಗಲಿಲ್ಲ. ಇಂದು ಬೆಳಗ್ಗೆ ಅವರ ಸಾವಿನ ಸುದ್ದಿ ತಿಳಿದು ಆಘಾತವಾಯ್ತು. ಏನು ಮಾಡೋಕೆ ಆಗಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟಿದ್ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಭಾವುಕವಾಗಿ ದೊಡ್ಡಣ್ಣ ಮಾತನಾಡಿದ್ದಾರೆ.

    ಡಿಂಗ್ರಿ ನಾಗರಾಜ್ ಮಾತನಾಡಿ, ಬ್ಯಾಂಕ್ ಜನಾರ್ಧನ್ (Bank Janardhan) ಹಾಗೂ ನನ್ನದು ಸುಮಾರು 40 ವರ್ಷದ ಸ್ನೇಹವಾಗಿತ್ತು. ನನ್ನ ನಾಟಕದ ಟೀಮ್‌ನಲ್ಲಿ ಹಲವು ನಾಟಕಗಳನ್ನ ಅವರು ಮಾಡಿದ್ದರು. ಜಗ್ಗೇಶ್, ಕಾಶಿನಾಥ್ ಅವರ ಸಿನಿಮಾದಲ್ಲಿ ನಟಿಸಿ ಅವರು ಕೂಡ ತುಂಬಾ ಜನಪ್ರಿಯವಾದರು. ಬ್ಯಾಂಕ್ ಕೆಲಸದ ಜೊತೆಗೆ ನಟನೆ ತುಂಬಾ ಇಷ್ಟಪಡುತ್ತಿದ್ದರು. ಈ ಹಿಂದೆ ಹಾಸ್ಯ ಪೋಷಕನಟರ ಅಸೋಸಿಯೇಷನ್ ಮಾಡಿದ್ವಿ. ಅದಕ್ಕೆ ಬ್ಯಾಂಕ್ ಜನಾರ್ದನ್‌ರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ವಿ.

    ಕಳೆದ 2 ವರ್ಷಗಳಿಂದ ನಿಲ್ಲೋದ್ದಕ್ಕೆ ಆಗ್ತಿರಲಿಲ್ಲ. ಹಾಗಾಗಿ ಸಿನಿಮಾದಿಂದ ದೂರವಾದರು. ಮಗನಿಗೆ ಡಬ್ಬಿಂಗ್ ಸ್ಟುಡಿಯೋ ಮಾಡಿ ಕೊಟ್ಟಿದ್ದರು. ಅದು ಅಷ್ಟೊಂದು ಸರಿಯಾಗಿ ನಡೆಯುತ್ತಿರಲಿಲ್ಲ. ಅವರಿಗೆ ಆ ಕೊರಗೂ ಇತ್ತು. ಪತ್ನಿ ತೀರಿ ಹೋದ ಮೇಲೆ ಸ್ವಲ್ಪ ಮಂಕಾಗಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಡಿಂಗ್ರಿ ನಾಗರಾಜ್ ಸ್ಮರಿಸಿದ್ದಾರೆ.

    ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತುವುಳ್ಳ ವ್ಯಕ್ತಿಯಾಗಿದ್ದರು. ಅವರು ಧ್ವನಿ ಅಂತೂ ಮರೆಯೋಕೆ ಆಗಲ್ಲ, ನಾವೆಲ್ಲಾ ಚಿತ್ರರಂಗಕ್ಕೆ ಜೊತೆ ಜೊತೆಯಲ್ಲಿ ಬಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಧು ಕೋಕಿಲ ಸಂತಾಪ ಸೂಚಿಸಿದ್ದಾರೆ.

    ಈ ವೇಳೆ, ಬ್ಯಾಂಕ್ ಜನಾರ್ಧನ್ ಜೊತೆಗಿನ ಒಡನಾಟ ನೆನೆದು ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ಹಾಸ್ಯ ಕಲಾವಿದರಾಗಿದ್ರು. ಸಿನಿಮಾದಲ್ಲಿ ರಂಜಿಸಿದವರನ್ನ ನಾವು ಕಳೆದುಕೊಂಡಿದ್ದೇವೆ. ಬೆರಳೆಣಿಕೆಯ ಶ್ರೇಷ್ಠ ಕಲಾವಿದರಲ್ಲಿ ಬ್ಯಾಂಕ್ ಜನಾರ್ಧನ್ ಒಬ್ಬರು ಆಗಿದ್ದರು. ಅವರ ನಿಧನ ಕರ್ನಾಟಕ ಚಲನಚಿತ್ರ ರಂಗಕ್ಕೆ ಭಾರೀ ಆಘಾತ ತಂದಿದೆ. ಅವರಿಲ್ಲದೇ ಇರೋದು ತುಂಬಾ ನೋವು ತಂದಿದೆ. ಕೆಲವು ದಿನಗಳ ಹಿಂದೆ ನನ್ನ ಆರೋಗ್ಯ ವಿಚಾರಿಸಲು ಅವರು ಫೋನ್ ಮಾಡಿದ್ದರು. ಆರೋಗ್ಯ ಸರಿ ಇಲ್ವಂತೆ ನಿನಗೆ ನೀನು ಚೆನ್ನಾಗಿರಬೇಕು ಅಂದರು. ಈಗ ನೋಡಿದ್ರೆ ನಮ್ಮ ಜೊತೆ ಅವರು ಇಲ್ಲ ಅನ್ನೋದು ನೋವು ತಂದಿದೆ ಎಂದಿದ್ದಾರೆ.

  • ಚಲನಚಿತ್ರೋತ್ಸವಕ್ಕೆ ಎಲ್ಲರಿಗೂ ಆಹ್ವಾನ ಹೋಗಿದೆ: ಸಾಧು ಕೋಕಿಲ

    ಚಲನಚಿತ್ರೋತ್ಸವಕ್ಕೆ ಎಲ್ಲರಿಗೂ ಆಹ್ವಾನ ಹೋಗಿದೆ: ಸಾಧು ಕೋಕಿಲ

    – ಮೇಕೆದಾಟುಗೆ ಮಾತ್ರ ಅಲ್ಲ, ನಾನು ಕಾಂಗ್ರೆಸ್‌ಗಾಗಿ ಕೆಲಸ ಮಾಡುತ್ತಿದ್ದೇನೆ 

    ಬೆಂಗಳೂರು: ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (International Film Festival) ಎಲ್ಲರಿಗೂ ಆಹ್ವಾನ ಹೋಗಿದೆ. ಪಿಆರ್‌ಓ ಅವರು ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ವರ್ಷ ವರ್ಷ ಯಾವ ರೀತಿ ನೀಡುತ್ತಿದ್ದರೋ ಆ ರೀತಿ‌ ಆಹ್ವಾನ ನೀಡಲಾಗಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ (Sadhu Kokila) ಅವರು ಸ್ಪಷ್ಟನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ ಅಕಾಡೆಮಿ ಅಧ್ಯಕ್ಷತೆಯಲ್ಲಿ ಚಲನಚಿತ್ರೋತ್ಸವ ಚೆನ್ನಾಗಿ ನಡೆಯುತ್ತಿದೆ. ಪ್ರೇಕ್ಷಕರು ಹೆಚ್ಚಾಗಿ ಬರ್ತಿದ್ದಾರೆ. ಮಂಗಳವಾರ ದುನಿಯಾ ವಿಜಿ ಬಂದಿದ್ರು. ಪೂಜಾ ಗಾಂಧಿ ಅವರು ಬಂದು ಮಾತಾಡಿ ಹೋಗಿದ್ದಾರೆ. ಅತ್ಯದ್ಭುತವಾಗಿ ಕಾರ್ಯಕ್ರಮ ನಡೆಯುತ್ತಿದೆ. ಕಲಾವಿದರು ಎಲ್ಲರೂ ಒಟ್ಟಾಗಿ ಹೋಗಬೇಕು. ಕಿಕ್ಕಿರಿದು ಜನ ಬರುತ್ತಿದ್ದಾರೆ, ಎಲ್ಲರೂ ಪ್ರಶಂಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ನಾನು ಸುಮಾರು ವರ್ಷಗಳಿಂದ ಕಾಂಗ್ರೆಸ್‌ಗೆ ಕೆಲಸ ಮಾಡುತ್ತಿದ್ದೇನೆ. ಮೇಕೆದಾಟುಗೆ ಮಾತ್ರ ಕೆಲಸ ಮಾಡುತ್ತಿಲ್ಲ. ಉಪಚುನಾವಣೆ, ಭಾರತ್ ಜೋಡೋ‌ದಲ್ಲೂ ಭಾಗಿಯಾಗಿದ್ದೇನೆ. ನನ್ನನ್ನು ಗುರುತಿಸಿದ್ದಾರೆ. ಜವಾಬ್ದಾರಿ ನೀಡಿದ್ದಾರೆ. ನಮ್ಮದು ಕಲಾವಿದರ ಕುಟುಂಬ. ನಾಗಾಭರಣ ಸರ್ ಇದ್ದಾರೆ, ಎಲ್ಲರೂ ಬರುತ್ತಿದ್ದಾರೆ. ಏನೂ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ.

  • ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ

    ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ

    ಬೆಂಗಳೂರು: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಾಧುಕೋಕಿಲ ನನಗೆ ಆಹ್ವಾನ ನೀಡಿಲ್ಲ ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ (Tennis Krishna) ಅಸಮಾಧಾನ ಹೊರಹಾಕಿದ್ದಾರೆ.

    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಹ್ವಾನದ ಕುರಿತು ಮಾತನಾಡಿದ ಅವರು, ಚಲನಚಿತ್ರೋತ್ಸವಕ್ಕೆ ಆಹ್ವಾನ ಸರಿಯಾಗಿ ಬಂದಿಲ್ಲ. ಕಲಾವಿದರು ಯಾರು ಬರಬೇಕಿತ್ತು? ಸರಿಯಾಗಿ ಆಹ್ವಾನ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    ನನ್ನನ್ನು ಚಲನಚಿತ್ರೋತ್ಸವಕ್ಕೆ ಕರೆದಿಲ್ಲ. ಪಾಸ್ ಕೂಡ ನೀಡಿಲ್ಲ. ಸಾಧುಕೋಕಿಲ ಅವರನ್ನೇ ಕೇಳಿ ಎಂದು ಹೇಳುತ್ತಾರೆ. ಯಾರ ಹತ್ತಿರ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಸಾಧುಕೋಕಿಲ ಅವರು ಸಭೆ ಕರೆಯಬೇಕಿತ್ತು. ನಿಗಮಮಂಡಳಿ ಅಧ್ಯಕ್ಷ ಸಭೆ ನಡೆಸಬೇಕಿತ್ತು. ನನ್ನ ಜೊತೆಯೇ ಅವರು ಸರಿಯಾಗಿ ಮಾತನಾಡಲ್ಲ. ಆಹ್ವಾಸ ಸಹ ಕೊಟ್ಟಿಲ್ಲ. ಸಾಧುಕೋಕಿಲ ಫೋನ್ ನಂಬರ್ ನನ್ನ ಬಳಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಗೆ ಗ್ರೀನ್ ಸಿಗ್ನಲ್?

    ನಾನು ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಲು ನೋವಿನ ಕಾರಣದಿಂದ ಮೇಕೆದಾಟು ಹೋರಾಟಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಿದ್ರೆ ಮಾತ್ರೆ ಸೇವಿಸಿ ಖ್ಯಾತ ಗಾಯಕಿ ಆತ್ಮಹತ್ಯೆಗೆ ಯತ್ನ

  • ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ಸಾಧುಕೋಕಿಲ

    ದರ್ಶನ್ ಭೇಟಿಗೆ ಜೈಲಿಗೆ ಆಗಮಿಸಿದ ಸಾಧುಕೋಕಿಲ

    ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ನೋಡಲು ಈಗಾಗಲೇ ಸ್ಯಾಂಡಲ್‌ವುಡ್‌ ನಟರು ಜೈಲಿಗೆ ಭೇಟಿ ಕೊಟ್ಟಿದ್ದರು. ಈಗ ಸಾಧು ಕೋಕಿಲ (Sadhu Kokila) ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ದರ್ಶನ್ ಭೇಟಿಗೆ ವಕೀಲರ ಜೊತೆ ಸಾಧುಕೋಕಿಲ ಆಗಮಿಸಿದ್ದಾರೆ.

    ನಿನ್ನೆ (ಜು.22) ದಿನಕರ್ ತೂಗುದೀಪ್ ಕುಟುಂಬದ ಜೊತೆ ವಿನೋದ್ ರಾಜ್ (Vinod Raj) ಜೈಲಿಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರು ದರ್ಶನ್ ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ಅಳಿದು ಉಳಿದವರು’ ಹೀರೋ ಹೊಸ ಸಿನಿಮಾ- ಅಶು ಬೆದ್ರ ಬರ್ತಡೇಗೆ ಮೇಕಿಂಗ್ ಉಡುಗೊರೆ

    ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.

  • ಹರ್ಷಿಕಾ ಪೂಣಚ್ಚ ನಟನೆಯ ‘ತಾಯ್ತ’ ಚಿತ್ರದ ಹಾಡು ಬಿಡುಗಡೆ

    ಹರ್ಷಿಕಾ ಪೂಣಚ್ಚ ನಟನೆಯ ‘ತಾಯ್ತ’ ಚಿತ್ರದ ಹಾಡು ಬಿಡುಗಡೆ

    ಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಲಯಕೋಕಿಲ ಚೊಚ್ಚಲ ನಿರ್ದೇಶನದ ‘ತಾಯ್ತ’ (Taytha) ಚಿತ್ರಕ್ಕಾಗಿ ರಾಮ್ ನಾರಾಯಣ್ ಬರೆದಿರುವ ‘ಶಿವನೇ ಕಾಪಾಡು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಮೂರು ದೇವರುಗಳನ್ನು ಕುರಿತಾದ ಈ ಹಾಡನ್ನು ಮೂರು ಧರ್ಮದ ಗುರುಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

    ಸಾಧುಕೋಕಿಲ (Sadhu Kokila), ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ‌. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕನಾಗಿದ್ದಾರೆ. ಅವರ ನಿರ್ದೇಶನದ ತಾಯ್ತ ಚಿತ್ರದ ಹಾಡೊಂದು ಇಂದು ಬಿಡುಗಡೆಯಾಗಿದೆ. ಅವರೆ ಸಂಗೀತ ನೀಡಿದ್ದಾರೆ. ನಾನು ಕೂಡ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಯಶಸ್ವಿಯಾಗಲಿ ಎಂದು ಸಾಧುಕೋಕಿಲ ಹಾರೈಸಿದರು. ಇದನ್ನೂ ಓದಿ:‘ಕಾರ್ತಿಕೇಯ 2’ ನಿರ್ದೇಶಕನ ಜೊತೆ ಕೈ ಜೋಡಿಸಿದ ನಾಗಚೈತನ್ಯ

    ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಾರಾರ್ ಜಾನರ್ ಚಿತ್ರವಾಗಿದ್ದರೂ, ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ನಾನು ಮಾಡಿದ್ದೇನೆ. ರಿಯಾನ್ ಈ ಚಿತ್ರದ ನಾಯಕನಾಗಿ, ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಇಂದು ಬಿಡುಗಡೆಯಾಗಿರುವ ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ. ಅನುರಾಧ ಭಟ್ ಹಾಡಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದು ಲಯಕೋಕಿಲ (Laya Kokila) ತಿಳಿಸಿದರು.

    ನಾಯಕ ರಿಯಾನ್ (Riyana), ನಾಯಕಿ ಹರ್ಷಿಕಾ ಪೂಣಚ್ಚ (Harshika Poonachha), ನಟಿ ಭಾನುಪ್ರಿಯ, ಸೇರಿದಂತೆ ಅನೇಕ ಕಲಾವಿದರು ಹಾಗೂ ಹಾಡು ಬರೆದಿರುವ ರಾಮ್ ನಾರಾಯಣ್ ಮುಂತಾದವರು ತಾಯ್ತ ಚಿತ್ರದ ಕುರಿತು ಮಾತನಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲಿವುಡ್ ಸ್ಟಾರ್ ಕಾಮಿಡಿಯನ್‌ಗೆ ಸಾಧು ಕೋಕಿಲ ಪುತ್ರ ಆ್ಯಕ್ಷನ್ ಕಟ್

    ಕಾಲಿವುಡ್ ಸ್ಟಾರ್ ಕಾಮಿಡಿಯನ್‌ಗೆ ಸಾಧು ಕೋಕಿಲ ಪುತ್ರ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ ಸ್ಟಾರ್ ಕಾಮಿಡಿಯನ್ ಸಾಧು ಕೋಕಿಲ (Sadhukokila) ಪುತ್ರ ಸುರಾಗ್ (Suraag) ಅವರು ನಿರ್ದೇಶಕನಾಗಿ ಗುರುತಿಸಿಕೊಳ್ಳಲು ಮೊದಲ ಹೆಜ್ಜೆ ಇಡ್ತಿದ್ದಾರೆ. ತಮಿಳಿನತ್ತ ಯುವ ನಿರ್ದೇಶಕ ಸುರಾಗ್ ಮುಖ ಮಾಡಿದ್ದಾರೆ. ತಮಿಳಿನ ಸ್ಟಾರ್ ಕಾಮಿಡಿಯನ್ ಯೋಗಿ ಬಾಬುಗೆ (Yogi Babu) ಸಾಧು ಪುತ್ರ ಸುರಾಗ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

    ನಟ ಸಾಧು ಕೋಕಿಲ ಅವರದ್ದು ಕಲಾವಿದರ ಕುಟುಂಬವಾಗಿದ್ದು, ಸಾಕಷ್ಟು ವರ್ಷಗಳಿಂದ ಕಲಾದೇವಿಯ ಸೇವೆ ಮಾಡ್ತಿದ್ದಾರೆ. ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್ ಇಡೀ ಕರ್ನಾಟಕವೇ ತಲೆಬಾಗಿದೆ. ಕಾಮಿಡಿ ಪಾತ್ರಗಳಿಗೆ ಸೀಮಿತವಾಗದೇ ಬೇರೆ ಬೇರೆ ಪಾತ್ರಗಳು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರದಲ್ಲೂ ಸಾಧು ಸಾಧನೆ ಮಾಡಿದ್ದಾರೆ. ಈಗ ಪುತ್ರ ಸುರಾಗ್ ಕೂಡ ನಿರ್ದೇಶನ ರಂಗದಲ್ಲಿ ಸಾಧನೆ ಮಾಡಲು ಹೆಜ್ಜೆ ಇಡ್ತಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕೆ ಅನುಭವಿ ನಟನಿಗೆ ಡೈರೆಕ್ಷನ್ ಮಾಡುವ ಅವಕಾಶ ಸುರಾಗ್‌ಗೆ ಸಿಕ್ಕಿದೆ. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್

    ಸುರಾಗ್- ಯೋಗಿ ಬಾಬು ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 2ನೇ ಹಂತದ ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ. ಸಾಧು ಕೋಕಿಲ ಅವರ ಲೂಪ್ ಎಂಟರ್‌ಟೇನ್ಮೆಂಟ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಾಧು ಕೋಕಿಲ ಅವರೇ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರೋದು ವಿಶೇಷ.

    ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಸುರಾಗ್ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಉಪ್ಪಿ 2 ಸಿನಿಮಾಗೆ ಸಹ-ನಿರ್ದೇಶಕನಾಗಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದರು. ಈಗ ಯೋಗಿ ಬಾಬು ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಕೌತುಕ ಮೂಡಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ತಮಿಳಿನ ಜೊತೆಗೆ ಬೇರೆ ಭಾಷೆಗಳಿಗೂ ಈ ಚಿತ್ರ ಡಬ್ ಆಗಲಿದೆ. ಕನ್ನಡದ ಹಿರಿಯ ನಟಿ ಉಮಾಶ್ರೀ, ಅವಿನಾಶ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ – ನಟಿ ರಮ್ಯಾ, ಶೆಟ್ಟರ್‌, ಸಾಧು ಕೋಕಿಲಗೆ ಸ್ಥಾನ

    ಕಾಂಗ್ರೆಸ್ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ – ನಟಿ ರಮ್ಯಾ, ಶೆಟ್ಟರ್‌, ಸಾಧು ಕೋಕಿಲಗೆ ಸ್ಥಾನ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹೇಗಾದರು ಮಾಡಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎಂದು ಮೂರು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ಕಾಂಗ್ರೆಸ್‌ (Congress) ಚುನಾವಣೆಗೆ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ 40 ಮಂದಿ ಸ್ಟಾರ್ ಪ್ರಚಾರಕರ ಹೆಸರನ್ನು ಕಾಂಗ್ರೆಸ್‌ ಘೋಷಣೆ ಮಾಡಿದೆ. ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್ (Jagadish Shetter), ನಟಿ ಹಾಗೂ ಮಾಜಿ ಸಂಸದೆ ರಮ್ಯಾ (Ramya), ಕನ್ನಯ್ಯ ಕುಮಾರ್‌, ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ಹಾಗೂ ಹಾಸ್ಯನಟ ಸಾಧು ಕೋಕಿಲ (Sadhu Kokila) ಅವರಿಗೂ ಸ್ಥಾನ ನೀಡಲಾಗಿದೆ. ಇದನ್ನೂ ಓದಿ: JDS ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ – 12 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬದಲಾವಣೆ

    ಪ್ರಿಯಾಂಕಾ ಗಾಂಧಿ ವಾದ್ರಾ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಹ ಪಟ್ಟಿಯಲ್ಲಿ ಸೇರಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮೇ 10 ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಮೂರು ಪಕ್ಷಗಳು ಹಲವು ಹಂತಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ ಕೆಲವು ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಪ್ರಕಟಿಸಬೇಕಿದೆ. ನಾಮಪತ್ರ ಸಲ್ಲಿಕೆ ಕಾರ್ಯವೂ ಬಿರುಸುಗೊಂಡಿದೆ. ಇದನ್ನೂ ಓದಿ: ಪತ್ನಿ ಬಳಿಯೇ 20 ಲಕ್ಷ ರೂ. ಸಾಲ ಪಡೆದಿರುವ ಸಚಿವ ಸೋಮಣ್ಣ

  • ಒಂದು ದಿನ ಬದುಕಿದ್ರೂ ಅಪ್ಪು ತರ ಬದುಕ್ಬೇಕು: ಸಾಧು ಕೋಕಿಲ

    ಒಂದು ದಿನ ಬದುಕಿದ್ರೂ ಅಪ್ಪು ತರ ಬದುಕ್ಬೇಕು: ಸಾಧು ಕೋಕಿಲ

    ಬೆಂಗಳೂರು: ಒಂದು ದಿನ ಬದುಕಿದರೂ ಪುನೀತ್ ರಾಜ್‍ಕುಮಾರ್ ಅವರಂತೆ ಬದುಕಬೇಕು ಎಂದು ಹಾಸ್ಯ ನಟ ಸಾಧು ಕೋಕಿಲ ಅವರು ತಿಳಿಸಿದ್ದಾರೆ.

    PUNEET RAJKUMAR

    ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರೂಢ ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಅಕ್ಟೋಬರ್ 28ರಂದು ಬರಬೇಕೆಂದು ನಾನು ಪುನೀತ್ ರಾಜ್‍ಕುಮಾರ್ ಅವರನ್ನು ಕೇಳಿಕೊಂಡಿದ್ದೆ. 28ನೇ ತಾರೀಖು ಇದ್ದ ಸುದ್ದಿಗೋಷ್ಠಿಯನ್ನು 27ಕ್ಕೆ ಮಾಡಿ 28ಕ್ಕೆ ನಾನು ಊರಿಗೆ ಹೋಗಬೇಕು ಎಂದು ಪುನೀತ್ ಹೇಳಿದ್ದರು. ಬಹುಶಃ 28ನೇ ತಾರೀಖು ಅಪ್ಪು ಅವರು ಊರಿಗೆ ಹೋಗಿದ್ದರೆ ಇಂದು ಬದುಕಿ ಉಳಿಯುತ್ತಿದ್ದರು ಅನಿಸುತ್ತದೆ. ಆದರೆ ಯಾಕೆ ಹೋಗಲಿಲ್ಲ ಎಂದು ಗೊತ್ತಿಲ್ಲ. ಈ ಜನ ಸಾಗರ ನೋಡಿದರೆ ಅಪ್ಪು ಅವರು ಎಲ್ಲೂ ಹೋಗಿಲ್ಲ ಇಲ್ಲೆ ಇದ್ದಾರೆ ಎಂದೇ ಹೇಳಬಹುದು ಎಂದು ನುಡಿದಿದ್ದಾರೆ. ಇದನ್ನೂ ಓದಿ: ರತ್ನನ್ ಪ್ರಪಂಚ ನೋಡಿ ಕರೆ ಮಾಡಿದ್ರು: ಡಾಲಿ ಧನಂಜಯ್

    80 ವರ್ಷ ಬದುಕಲಿ, 100 ವರ್ಷ ಬದುಕಲಿ, ಒಂದು ದಿನ ಬದುಕಲಿ, ಬದುಕಿದರೆ ಅಪ್ಪು ರೀತಿ ಬದುಕಬೇಕು. ಇಷ್ಟು ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ. ಅಪ್ಪು ಅವರನ್ನು ಯಾರು ದ್ವೇಷಿಸುತ್ತಿರಲಿಲ್ಲ ಅಂತಹ ಒಬ್ಬ ನಾಯಕರಾಗಿದ್ದರು. ಡಾ. ರಾಜ್‍ಕುಮಾರ್ ಅವರನ್ನು ಮುಟ್ಟಿದರೆ ಹೇಗೆ ರೋಮಾಂಚನವಾಗುತ್ತದೆಯೋ, ಅದೇ ರೀತಿ ಪುನೀತ್ ಅವರನ್ನು ಮುಟ್ಟಿದರೆ ಕೂಡ ರೋಮಾಂಚನವಾಗುತ್ತದೆ ಎಂದು ಇತ್ತೀಚೆಗಷ್ಟೆ ಸುದ್ದಿಗೋಷ್ಟಿಯೊಂದರಲ್ಲಿ ಹೇಳಿದ್ದೆ. ಇಡೀ ಚಿತ್ರರಂಗಕ್ಕೆ ಕೈ ಅಲ್ಲ, ಒಂದು ಕಾಲು ಹೊಡೆದುಹೋದಂತೆ ಆಗಿದೆ. ಪುನೀತ್ ರಾಜ್‍ಕುಮಾರ್ ಅವರು ನಮ್ಮೊಂದಿಗಿಲ್ಲ ಎಂದು ನಾನು ಎಂದಿಗೂ ಹೇಳುವುದಿಲ್ಲ. ಅವರ ಪತ್ನಿ ಹಾಗೂ ಮಕ್ಕಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಇಂಡಸ್ಟ್ರಿಯಲ್ಲಿ ಮೊದಲು ಕರೆ ಮಾಡಿದ ಸ್ಟಾರ್ ನಟ ಪುನೀತ್: ವಸಿಷ್ಠ ಸಿಂಹ

     

  • ರಿಯಾಲಿಟಿ ಶೋನಲ್ಲಿ ಭಾವುಕರಾದ ಸಾಧು ಕೋಕಿಲ

    ರಿಯಾಲಿಟಿ ಶೋನಲ್ಲಿ ಭಾವುಕರಾದ ಸಾಧು ಕೋಕಿಲ

    ಬೆಂಗಳೂರು: ಚಂದನವನದ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಭಾನುವಾರ ನಡೆದ ರಿಯಾಲಿಟಿ ಶೋನಲ್ಲಿ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ಸಾಧುಕೋಕಿಲ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಹಾಸ್ಯ ನಟನ ಜೊತೆಗೆ ಓರ್ವ ಒಳ್ಳೆಯ ಸಂಗೀತ ನಿರ್ದೇಶಕರಾಗಿರುವ ಸಾಧು ಕೋಕಿಲ, ಶೋನಲ್ಲಿ ಸ್ಪರ್ಧಿಗಳಿಗೆ ಒಳ್ಳೆಯ ಸಲಹೆ ನೀಡುತ್ತಿದ್ದಾರೆ.

    ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಎಲ್ಲ ಸ್ಪರ್ಧಿಗಳು 90ರ ದಶಕದ ಹಾಡುಗಳನ್ನು ಹಾಡುತ್ತಿದ್ದರು. ಸ್ಪರ್ಧಿ ಅಪೇಕ್ಷಾ ಪೈ ‘ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಎಂಬ ಲಾಲಿ ಹಾಡನ್ನು ಹಾಡಿದರು. ಹಾಡನ್ನು ಕೇಳಿದ ಸಾಧು ಕೋಕಿಲ ಒಂದು ಕ್ಷಣ ಭಾವುಕರಾದ್ರು. ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಇದೇ ಹಾಡನ್ನು ಹಾಡುತ್ತಿದ್ದರು. ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಲೇ ಸಾಧು ಅವರ ಕಣ್ಣಾಲಿಗಳು ತುಂಬಿಕೊಂಡವು. ಅಮ್ಮನಿಗೆ ಪ್ರಪಂಚದಲ್ಲಿ ಸರಿಸಾಟಿಯಾದದ್ದು ಬೇರೆ ಏನೂ ಇಲ್ಲ. ಈ ಲಾಲಿ ಹಾಡುಗಳು ಪ್ರತಿಯೊಬ್ಬರ ಮನದಾಳಕ್ಕೆ ತಲುಪುತ್ತವೆ ಅಂತ ಕಣ್ಣೀರು ಹಾಕಿದ್ರು.

    ತೀರ್ಪುಗಾರರಾಗಿರುವ ಅರ್ಚನಾ ಉಡುಪ ಸಹ ಮಕ್ಕಳನ್ನು ಮಲಗಿಸಲು ಇದೇ ಹಾಡನ್ನು ತೊಟ್ಟಿಲು ತೂಗುತ್ತಾ ಹೇಳುತ್ತಿದ್ದೆ. ಇಂದು ಆಪೇಕ್ಷಾ ಹಾಡು ಕೇಳಿ ಪರಮಾನಂದ ಆಯ್ತು ಎಂದು ಹೇಳಿದ್ರು. ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಹ ಶೋನ ತೀರ್ಪುಗಾರರಾಗಿದ್ದಾರೆ. ಇದೇ ಸಂಚಿಕೆಯಲ್ಲಿ ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಸಹ ಆಗಮಿಸಿದ್ದರು.

    ‘ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಹಾಡು ಟಿ.ಜಿ.ಲಿಂಗಪ್ಪ ಸಂಗೀತ, ವಿಜಯನರಸಿಂಹ ಲೇಖನಿಯಲ್ಲಿ ಮೂಡಿಬಂದಿದೆ. ಸೂಲಮಂಗಲಂ ಮತ್ತು ಎಂ. ರಾಜಲಕ್ಷ್ಮೀ ಕಂಠದಲ್ಲಿ ಹಾಡು ಮೊದಲ ಬಾರಿಗೆ ಮೂಡಿಬಂದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv