Tag: ಸಾಧುಕೋಕಿಲ

  • ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

    ಯಶ್, ಸುದೀಪ್ ಬಂದ್ರೆ ಸಮಸ್ಯೆ ಆಗುತ್ತದೆ: ಸಾಧುಕೋಕಿಲ

    16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (16th Bengaluru Film Festival) ಮಾರ್ಚ್‌ 1ರಂದು  ಅದ್ಧೂರಿಯಾಗಿ ಚಾಲನೆ ನೀಡಿದ್ದ ವೇಳೆ, ಡಿಸಿಎಂ ಡಿಕೆಶಿ ಅವರು ಕನ್ನಡದ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಎಂದು ಆಡಿದ್ದ ಮಾತು ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್ ನಟರಿಗೆ ಚಲನಚಿತ್ರೋತ್ಸವ ಆಹ್ವಾನ ನೀಡಿಲ್ವಾ? ಎಂಬ ಆರೋಪಕ್ಕೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ (Yash), ಸುದೀಪ್ ಬಂದರೆ ಪ್ರೋಟೋಕೋಲ್ ಸಮಸ್ಯೆ ಆಗುತ್ತದೆ ಎಂದಿದ್ದಾರೆ.

    ಕೆಲವರಿಗೆ ಚಲನಚಿತ್ರೋತ್ಸವದ ಇನ್ವಿಟೇಶನ್ ಹೋಗಿಲ್ಲದೇ ಇರಬಹುದು. ಕೆಲವರಿಗೆ ಮಿಸ್ ಆಗಿರಬಹುದು. ಇನ್ನೂ ಕೆಲವರಿಗೆ ಕಳುಸಿರುವ ತಡವಾಗಿ ರೀಚ್ ಆಗಿರಬಹುದು. ಒಟ್ನಲ್ಲಿ ಎಲ್ಲರಿಗೂ ಇನ್ವಿಟೇಶನ್ ಕಳುಹಿಸಿದ್ದೇನೆ. ದೊಡ್ಡ ದೊಡ್ಡ ಕಲಾವಿದರು ಬಂದಾಗ ಪ್ರೋಟೋಕೋಲ್ ಸಮಸ್ಯೆ ಆಗುತ್ತದೆ. ಈಗ ಯಶ್, ಸುದೀಪ್, ದರ್ಶನ್ ಅವರೇ ಕಾರ್ಯಕ್ರಮಕ್ಕೆ ಬಂದ್ರೂ ಅಂದುಕೊಳ್ಳಿ ಹಾಗೆ ನಿಭಾಹಿಸಬೇಕಲ್ವಾ? ಅದು ವಿಧಾನಸಭೆ ಮುಂದೆ ನಡೆಯುತ್ತಿರೋದು ಸಿಎಂ ಬರುವತನಕವೂ ಒಳಗೆ ಬರೋಕೆ ಕಷ್ಟ ಆಗಬಹದು ಎಂದು ಸಾಧುಕೋಕಿಲ ಸಮಜಾಯಿಸಿ ಕೊಟ್ಟಿದ್ದಾರೆ. ಇನ್ನೂ ಈ ವೇಳೆ, ಡಿಕೆಶಿ ಸಿನಿಮಾ ರಂಗದವರು ನಮ್ಮವರು ಅಂತ ಆ ರೀತಿ ಮಾತಾಡಿದ್ದಾರೆ ಅಷ್ಟೇ ಎಂದು ಡಿಸಿಎಂ ಪರ ಸಾಧುಕೋಕಿಲ (Sadhukokila) ಬ್ಯಾಟ್ ಬೀಸಿದ್ದಾರೆ.

    ಇನ್ನೂ ಚಲನಚಿತ್ರೋತ್ಸವದ ಆಹ್ವಾನ ಪತ್ರಿಕೆ, ಯಾವ ದಿನಾಂಕದಂದು ನೀಡಲಾಗಿದೆ ಎಂಬ ಮಾಹಿತಿ ಇದೆ. ಜೊತೆಗೆ ಯಾರು ಯಾರು ಆಹ್ವಾನ ಪತ್ರಿಕೆಯನ್ನು ವಾಪಸ್ ಮಾಡಿದ್ದಾರೆ. ಯಾವ ಕಾರಣಕ್ಕೆ ಕೆಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿಲ್ಲ ಎಂಬ ಮಾಹಿತಿ ಸಹ ಪಟ್ಟಿಯಲ್ಲಿದೆ. ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ನಟ, ನಟಿ ಮತ್ತು ನಿರ್ದೇಶಕರುಗಳ ಹೆಸರಿದೆ. ಸುದೀಪ್ ದರ್ಶನ್, ಗಣೇಶ್, ಡಾಲಿ, ಚಿಕ್ಕಣ್ಣ, ಹಲವಾರು ಮಂದಿ ಹಿರಿಯ ಮತ್ತು ಹೊಸ ನಟಿಯರ ಹೆಸರುಗಳು ಸಹ ಪಟ್ಟಿಯಲ್ಲಿವೆ.

    ಡಾಲಿ ಧನಂಜಯ ಮನೆ ಬದಲಿಸಿದ್ದ ಕಾರಣ ಅವರಿಗೆ ನೀಡಲಾಗಿಲ್ಲ ಎಂದು ಪಟ್ಟಿಯಲ್ಲಿದೆ. ಮಾನ್ವಿತಾ, ಆಹ್ವಾನವನ್ನು ವಾಪಸ್ ಕಳಿಸಿದ್ದಾರೆ. ಫೋನ್ ರಿಸೀವ್ ಮಾಡಿಲ್ಲ ಎಂದು ಪಟ್ಟಿಯಲ್ಲಿದೆ. ನಟ ಚಿಕ್ಕಣ್ಣ ಸಹ ಆಹ್ವಾನವನ್ನು ನಿರಾಕರಿಸಿದ್ದಾರೆ ಎಂಬ ಒಕ್ಕಣೆ ಪಟ್ಟಿಯಲ್ಲಿದೆ. ಧ್ರುವ ಸರ್ಜಾ, ರವಿಚಂದ್ರನ್, ಶ್ರೀನಾಥ್, ಸುಧಾರಾಣಿ, ಮಾಲಾಶ್ರಿ, ಅನುರಾಧಾ, ಮಾಳವಿಕಾ ಅವಿನಾಶ್, ಅವಿನಾಶ್, ಡಿಂಗ್ರಿ ನಾಗರಾಜ್, ನಿಶ್ವಿಕಾ ನಾಯ್ಡು, ಪೂಜಾ ಗಾಂಧಿ, ಅರ್ಜುನ್ ಜನ್ಯ, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಜಯಂತ್ ಕಾಯ್ಕಿಣಿ, ರಮೇಶ್ ಅರವಿಂದ್, ಟಿಎನ್ ಸೀತಾರಾಮ್, ಸುರೇಶ್ ಹಬ್ಳೀಕರ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಉಮಾಶ್ರೀ, ಪದ್ಮಾ ವಾಸಂತಿ, ಮುಖ್ಯಮಂತ್ರಿ ಚಂದ್ರು ಹೀಗೆ ಹಲವಾರು ನಟ ನಟಿಯರಿಗೆ ಆಹ್ವಾನ ಪತ್ರಿಕೆ ವಿತರಣೆ ಮಾಡಲಾಗಿದೆ.

  • ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ

    ಡಿಕೆ ಸಾಹೇಬ್ರು ಹೇಳಿರೋದ್ರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶ – ಸಾಧು ಕೋಕಿಲ

    ಬೆಂಗಳೂರು: ಡಿಕೆ ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ, ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ (Sadhu Kokila) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪರ ಬ್ಯಾಟ್ ಬೀಸಿದ್ದಾರೆ.ಇದನ್ನೂ ಓದಿ: ಹಕ್ಕಿಜ್ವರ ಭೀತಿ – ಚಿತ್ರದುರ್ಗ ಜಿಲ್ಲಾಡಳಿತದಿಂದ ಕೋಳಿ ಫಾರಂಗಳಲ್ಲಿ ಜಾಗೃತಿ

    ನಗರದಲ್ಲಿ ಡಿಕೆಶಿ ನಟ್ಟು, ಬೋಲ್ಟು, ಟೈಟ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಕೆಶಿ ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಸಿಎಂ, ಡಿಸಿಎಂ ಸಿನಿಮಾದವರನ್ನು ತಮ್ಮ ಮನೆಯವರು ಅಂದುಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ದೂರದವರಲ್ಲ, ತುಂಬಾ ಹತ್ತಿರದವರು. ಸಿನಿಮಾದವರು ಅವರಿಗೆ ಆತ್ಮೀಯರು. ಅವರು ಹೇಳಿರುವುದು ದೊಡ್ಡ ವಿಷಯ ಆಗಲ್ಲ, ದೊಡ್ಡ ವಿಷಯ ಮಾಡುತ್ತಿದ್ದಾರೆ ಅಷ್ಟೇ. ಅವರು ಹೇಳಿರುವುದರಲ್ಲಿ ಹಾಗೂ ಕೇಳಿರುವುದರಲ್ಲಿ ತಪ್ಪಿಲ್ಲ. ನೀರಿನ ವಿಚಾರದಲ್ಲಿ ಎಲ್ಲರೂ ಬರಬೇಕಿತ್ತು ಅನ್ನೋದು ಅವರ ಉದ್ದೇಶ, ಚಲನಚಿತ್ರೋತ್ಸವಕ್ಕೂ ಕೂಡ ಎಲ್ಲರೂ ಬರಲಿ ಅನ್ನೋದಷ್ಟೇ ಅವರ ಉದ್ದೇಶವಾಗಿತ್ತು ಎಂದರು.

    ಇನ್ನೂ ಇದೇ ವೇಳೆ ಬೆಂಗಳೂರು ಫಿಲ್ಮ್‌ಫೆಸ್ಟ್‌ಗೆ ಕೊನೆ ಕ್ಷಣದಲ್ಲಿ ಆಹ್ವಾನ ನೀಡಿದ ಆರೋಪ ವಿಚಾರವಾಗಿ, ಕಲಾವಿದರಿಗೆ ಕೊನೆಯ ಕ್ಷಣದಲ್ಲಿ ಆಮಂತ್ರಣ ಹೋಗಿಲ್ಲ. ಚಲನಚಿತ್ರೋತ್ಸವ ಜನವರಿ 6ಕ್ಕೆ ನಿರ್ಧಾರವಾಗಿದೆ. ಪಾಸ್ ಬಗ್ಗೆ ಕೇಳೋಕೆ ಆಗುತ್ತದೆ. ಉದ್ಘಾಟನೆ ಬಗ್ಗೆ ಗೊತ್ತಾಗುವುದಿಲ್ಲವಾ? ಬೇರೆಯವರ ಮೇಲೆ ಗೂಬೆ ಕೂರಿಸುವುದಲ್ಲ. ಆಹ್ವಾನ ಪತ್ರಿಕೆ ಎಲ್ಲೆಲ್ಲಿ ಹೋಗಿದೆ ಎನ್ನುವ ಲಿಸ್ಟ್ ತೆಗೆದರೆ ಎಲ್ಲ ಗೊತ್ತಾಗುತ್ತದೆ. ಎಲ್ಲರೂ ಬರಬೇಕು, ಇದು ನಮಗಾಗಿ ನಡೆಯುತ್ತಿರುವುದು ಎಂದು ತಿಳಿದುಕೊಳ್ಳಬೇಕು. ಹಿಂದಿನ ವರ್ಷಗಳ ಲಿಸ್ಟ್ ತೆಗಿತೀನಿ, ನೋಡೋಣ ಯರ‍್ಯಾರು ಬಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಕೊಡಗಿನಲ್ಲೂ ಹಕ್ಕಿ ಜ್ವರದ ಭೀತಿ – ಬಿರಿಯಾನಿ ಹೋಟೆಲ್‌ಗಳು ಖಾಲಿ ಖಾಲಿ!

     

     

  • ಜೈಲಿನಲ್ಲಿ ದರ್ಶನ್ ಭೇಟಿಯಾದ ಸಾಧುಕೋಕಿಲ

    ಜೈಲಿನಲ್ಲಿ ದರ್ಶನ್ ಭೇಟಿಯಾದ ಸಾಧುಕೋಕಿಲ

    ಕೊಲೆ ಪ್ರಕರಣದ ಸಂಬಂಧ ಜೈಲಿನಲ್ಲಿರುವ ದರ್ಶನ್‌ರನ್ನು (Darshan) ಕೊನೆಗೂ ಹಾಸ್ಯ ನಟ ಸಾಧುಕೋಕಿಲ ಭೇಟಿಯಾಗಿದ್ದಾರೆ. ಅವರನ್ನು ನೋಡಿ ಸಮಾಧಾನ ಆಯ್ತು ಎಂದು ದರ್ಶನ್‌ ಭೇಟಿಯ ಬಗ್ಗೆ ಸಾಧುಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್‌- ಮತ್ತೆ ಒಂದಾಗ್ತಾರಾ?

    ಸಚ್ಚಿದಾನಂದ, ನಿರ್ಮಾಪಕ ರಾಮಮೂರ್ತಿ ಜೊತೆ ಸಾಧುಕೋಕಿಲ ಜೈಲಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸ್ನೇಹಿತರು ನಟ ದರ್ಶನ್ ಅವರನ್ನು ಭೇಟಿ ಮಾಡಿದ್ವಿ, ಜೈಲಿನಲ್ಲಿ ದರ್ಶನ್ ಅವರು ಕೂಲ್ ಆಗಿ ಇದ್ದರು. ಅವರನ್ನು ನೋಡಿ ನಮಗೂ ಸಮಾಧಾನವಾಯ್ತು ಎಂದು ಮಾತನಾಡಿದ್ದಾರೆ. ಸೆಲ್‌ನಲ್ಲಿ ಬುಕ್ಸ್ ಓದಿಕೊಂಡು ಕೂಲ್ ಅಂಡ್ ಕಾಮ್ ಆಗಿ ಇದ್ದಾರೆ. ಅವರನ್ನು ನೋಡಿ ನಮಗೂ ನೆಮ್ಮದಿ ಸಿಕ್ತು ಎಂದಿದ್ದಾರೆ.

    ಕಳೆದ ಮಂಗಳವಾರ ದರ್ಶನ್ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. `ಮೆಜೆಸ್ಟಿಕ್’ ಸಿನಿಮಾ ನಿರ್ಮಾಪಕ ರಾಮಮೂರ್ತಿ ಮತ್ತು ಇತರೆ ಸ್ನೇಹಿತರು ಭೇಟಿ ಮಾಡಬೇಕಿತ್ತು. ವಾರಕ್ಕೆ ಎರಡೇ ಎಂಟ್ರಿಗೆ ಅವಕಾಶ ಇರುವ ಹಿನ್ನೆಲೆ ನನಗೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ದರ್ಶನ್ ಭೇಟಿಯಾಗದೆ ವಾಪಸ್ ಹೋಗಿದ್ದೆ ಎಂದು ಸಾಧುಕೋಕಿಲ ಹೇಳಿದ್ದಾರೆ.


    ದರ್ಶನ್ ಮೊದಲನೇ ಸಿನಿಮಾ ‘ಮೆಜೆಸ್ಟಿಕ್’ನಿಂದ ನಾವು ಸ್ನೇಹಿತರು. ದರ್ಶನ್ ಏನೂ ಅಂತ ನನಗೆ ಚೆನ್ನಾಗಿ ಗೊತ್ತು. ಒಬ್ಬ ಬ್ರದರ್ ಆಗಿ ದರ್ಶನ್ ನೋಡೋಕೆ ಬಂದಿದ್ದೇನೆ. ದರ್ಶನ್ ಒಳಗೆ ಆರೋಗ್ಯವಾಗಿದ್ದಾರೆ. ಕಾನೂನು ರೀತಿಯಲ್ಲಿ ನಟ ದರ್ಶನ್‌ಗೆ ಚಿಕಿತ್ಸೆ ಮತ್ತು ಇತರೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಸಾಧುಕೋಕಿಲ ಹೇಳಿದ್ದಾರೆ. ಅಭಿಮಾನಿಗಳು ಶಾಂತರಾಗಿದ್ದರೆ ದರ್ಶನ್ ಮತ್ತಷ್ಟು ಗಟ್ಟಿಯಾಗ್ತಾರೆ ಎಂದು ಸಾಧುಕೋಕಿಲ ಮಾತನಾಡಿದ್ದಾರೆ.

  • ದರ್ಶನ್ ಭೇಟಿಗೆ ಅವಕಾಶ ಸಿಗದೆ ಸಾಧುಕೋಕಿಲ ವಾಪಸ್

    ದರ್ಶನ್ ಭೇಟಿಗೆ ಅವಕಾಶ ಸಿಗದೆ ಸಾಧುಕೋಕಿಲ ವಾಪಸ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರಕ್ಕೆ ದರ್ಶನ್ ಭೇಟಿಗೆ ಅವಕಾಶ ಸಿಗದೇ ಸಾಧುಕೋಕಿಲ (Sadhu ವಾಪಸ್ ಆಗಿದ್ದಾರೆ. ಇದನ್ನೂ ಓದಿ:Suriya 44: ಗ್ಯಾಂಗ್‌ಸ್ಟರ್ ಅವತಾರದಲ್ಲಿ ಎಂಟ್ರಿ ಕೊಟ್ಟ ತಮಿಳು ನಟ ಸೂರ್ಯ

    ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆದ ಸಾಧುಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾನು ಇಂದು ಭೇಟಿ ಮಾಡಿದರೆ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ಕುಟುಂಬದವರ ಜೊತೆ ಭೇಟಿ ಮಾಡುತ್ತೇನೆ ಎಂದು ಮಾತನಾಡಿದ್ದಾರೆ.

    ಇನ್ನೂ ವಾರಕ್ಕೆ ಎರಡೇ ವಿಸಿಟ್‌ಗೆ ಅವಕಾಶ ಇರುವ ಹಿನ್ನೆಲೆ ಆದರೆ ದರ್ಶನ್ ಭೇಟಿಗೆ ಸಾಧುಕೋಕಿಲಗೆ ಅವಕಾಶ ಸಿಕ್ಕಿಲ್ಲ. ಈ ವಾರ ಈಗಾಗಲೇ ಒಂದು ಬಾರಿ ದಿನಕರ್ ತೂಗುದೀಪ್ ಕುಟುಂಬ ಜೈಲಿಗೆ ಭೇಟಿ ನೀಡಿದ್ದು, ಇವರ ಜೊತೆ ವಿನೋದ್ ರಾಜ್ ಕೂಡ ಭೇಟಿಯಾಗಿದ್ದಾರೆ.

  • Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    Cannes Film Festival 2024: ಎ.ಆರ್ ರೆಹಮಾನ್ ಭೇಟಿಯಾದ ಸಾಧು ಕೋಕಿಲ

    ಕಾನ್ಸ್ ಫಿಲ್ಮ್ ಫೆಸ್ಟಿವಲ್‌ಗೆ (Cannes Film Festival 2024) ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಹಲವು ಚಿತ್ರರಂಗದ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕಾನ್ಸ್ ಚಿತ್ರೋತ್ಸವದಲ್ಲಿ ಸಾಧು ಕೋಕಿಲ (Sadhu Kokila) ಭಾಗಿಯಾಗಿದ್ದಾರೆ. ಈ ವೇಳೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್‌ರನ್ನು (A.R. Rahman) ಭೇಟಿಯಾಗಿದ್ದಾರೆ. ಹಳೆಯ ದಿನಗಳನ್ನು ಸಾಧು ಕೋಕಿಲ ಸ್ಮರಿಸಿದ್ದಾರೆ.

     

    View this post on Instagram

     

    A post shared by Sadhukokila (@nimmasadhukokila)

    ನಟ ಕಮ್ ಗಾಯಕ ಸಾಧು ಕೋಕಿಲ ಅವರು ನಟನೆ ಮಾತ್ರವಲ್ಲ ಸಂಗೀತ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದ್ದಾರೆ. ಇದೀಗ ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎ.ಆರ್ ರೆಹಮಾನ್‌ರನ್ನು ಅನಿರೀಕ್ಷಿತ ಭೇಟಿಯ ಬಗ್ಗೆ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್

    ಹಲವಾರು ವರ್ಷದ ನಂತರ ಅಪರೂಪದ ಅನಿರೀಕ್ಷಿತ ಭೇಟಿ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರ ಜೊತೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ತುಂಬಾ ವರ್ಷಗಳ ಹಿಂದೆ ಇಬ್ಬರೂ ಒಟ್ಟಿಗೆ ಕೀಬೋರ್ಡ್ ನುಡಿಸುತ್ತಿದ್ದ ದಿನಗಳ ನೆನಪು ಹಂಚಿಕೊಂಡೆವು ಎಂದು ಹಳೆಯ ದಿನಗಳ ಬಗ್ಗೆ ಸಾಧು ಕೋಕಿಲ ಸ್ಮರಿಸಿದ್ದಾರೆ. ಜೊತೆಗೆ ಎ.ಆರ್ ರೆಹಮಾನ್ ಜೊತೆಗಿನ ಫೋಟೋ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಕೆರಿಯರನ್‌ ಪ್ರಾರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಇಬ್ಬರೂ ದಿಗ್ಗಜರನ್ನು ಒಟ್ಟಿಗೆ ನೋಡಿ ಫ್ಯಾನ್ಸ್‌ ಖುಷಿಪಡ್ತಿದ್ದಾರೆ.

  • ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವ ‘ಟಕ್ಕರ್’

    ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವ ‘ಟಕ್ಕರ್’

    ಸೈಬರ್ ಕ್ರೈಂ ಕಥಾಹಂದರದ ‘ಟಕ್ಕರ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ರಂಜನಿ ರಾಘವನ್ ಜೋಡಿಯಾಗಿದ್ದಾರೆ.

    ‘ರನ್ ಆ್ಯಂಟನಿ’ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ವಿ.ರಘುಶಾಸ್ತ್ರಿ ಈ ಚಿತ್ರದಲ್ಲಿ, ಹೆಣ್ಣುಮಕ್ಕಳ ಜೀವನ ಹಾಗೂ ಜೀವಕ್ಕೆ ಕುತ್ತು ತರುತ್ತಿರುವ ಮೊಬೈಲ್, ಲ್ಯಾಪ್ ಟಾಪ್ ಬಳಕೆ, ತಂತ್ರಜ್ಞಾನದಿಂದಾಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಣ್ಣಿಗೆ ಕಾಣದ ಹ್ಯಾಕರ್‌ಗಳು ಎಲ್ಲೋ ಕುಳಿತು ಹೆಣ್ಣುಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಇದೆಲ್ಲ ಹೇಗೆ ಸಾಧ್ಯ, ಯಾವ ರೀತಿ ಟ್ರ್ಯಾಪ್ ಮಾಡಿ ಬಲೆ ಬೀಸುತ್ತಾರೆ ಎಲ್ಲವನ್ನು ಸಿನಿಮ್ಯಾಟಿಕ್ ಆಗಿ ಮಾಸ್ ಎಳೆಯಲ್ಲಿ ತೆರೆ ಮೇಲೆ ಚಿತ್ರತಂಡ ತಂದಿದೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್ 

    ಕಥೆಯೇನು?
    ನಾಯಕ ನಟ ಸಾತ್ಯುಕಿ ಕಾಲೇಜು ಸ್ಟೂಡೆಂಟ್. ದಿನಾ ಒಂದಿಲ್ಲೊಂದು ಹೊಡೆದಾಟದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರೋದು ಆತನಿಗೆ ಕಾಮನ್. ಹಾಗಂತ ಕೆಟ್ಟವನಲ್ಲ. ಸಹಾಯ ಹಸ್ತ ಚಾಚೋ ಹುಡುಗ. ಆತನ ಗುಣಕ್ಕೆ ಮನಸೋಲೋ ಹುಡುಗಿ ಪುಣ್ಯ. ಹೀಗಿರುವಾಗ ಪಕ್ಕದ್ಮನೆ ಹುಡುಗಿ ದೀಪಾ ಕೊಲೆಯಾಗುತ್ತಾಳೆ. ಇದರ ಜೊತೆಗೆ ನಗರದಲ್ಲಿ ಅನೇಕ ಹುಡುಗಿಯರು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿರುತ್ತೆ.

    ದೀಪಾ ಕೊಲೆ ಭೇದಿಸಲು ನಿಂತ ಸಾತ್ಯುಕಿಗೆ ಪೊಲೀಸರ ಸಾಥ್ ಕೂಡ ಸಿಗುತ್ತೆ. ಇದೊಂದು ದೊಡ್ಡ ಸೈಬರ್ ಕ್ರೈಂ, ಹುಡುಗಿಯರ ಆತ್ಮಹತ್ಯೆ ಹಿಂದೆ ಇರೋದು ಹ್ಯಾಕರ್‍ನದ್ದೇ ಕೈವಾಡ ಅನ್ನೋದು ಮನವರಿಕೆಯಾಗುತ್ತೆ. ಆ ಕಾಣದ ಕೈ ಯಾರದ್ದು.? ಹುಡುಗಿಯರು ಸೂಸೈಡ್ ಮಾಡಿಕೊಳ್ಳಲು ಕಾರಣವೇನು? ಯಾವ ರೀತಿ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಿದ್ದ..? ಎಂಬುದರ ಬೆನ್ನತ್ತಿ ನಾಯಕ ಹೊರಡುತ್ತಾನೆ. ಈ ಆಟದಲ್ಲಿ ಗೆಲುವು ಸುಲಭದ್ದಾಗಿರೋದಿಲ್ಲ. ಬಂದ ಅಡೆತಡೆಗಳನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಹ್ಯಾಕರ್‌ನನ್ನು ಕಂಡು ಹಿಡಿಯುತ್ತಾನಾ.? ಹ್ಯಾಕರ್ ಬಲೆಗೆ ಬಿದ್ದ ಹುಡುಗಿಯರು ಬಚಾವಾಗುತ್ತಾರಾ..? ಅನ್ನೋದು ‘ಟಕ್ಕರ್’ ಸಾರಾಂಶ.

    ವಿಮರ್ಶೆ:
    ಸೈಬರ್ ಕ್ರೈಂ ಕಥಾಹಂದರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಹೆಣೆದು ನಿರ್ದೇಶಕ ರಘು ಶಾಸ್ತ್ರಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ಆದ್ರೆ ಚಿತ್ರಕಥೆ ವಿಚಾರದಲ್ಲಿ ಇನ್ನಷ್ಟು ಹೋಂವರ್ಕ್ ಮಾಡಿದ್ರೆ ಚಿತ್ರ ಇನ್ನಷ್ಟು ಅದ್ಭುತವಾಗಿರುತ್ತಿತ್ತು. ಮನೋಜ್ ಮಾಸ್ ಹೀರೋ ಆಗಿ ಗಮನ ಸೆಳೆದರೂ ಅಭಿನಯದಲ್ಲಿ ಇನ್ನಷ್ಟು ಪಳಗಬೇಕು. ನಾಯಕಿ ರಂಜನಿ ರಾಘವನ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಸಾಫ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ 

    ಚಿತ್ರದಲ್ಲಿ ಕಡಿಮೆ ಸ್ಪೇಸ್ ಇದ್ದರೂ ಇರುವಷ್ಟು ಸಮಯ ಗಮನ ಸೆಳೆಯುತ್ತಾರೆ. ಪೊಲೀಸ್ ಕಮಿಶನರ್ ಆಗಿ ಜೈಜಗದೀಶ್, ಪೊಲೀಸ್ ಆಗಿ ಶ್ರೀಧರ್, ಸಾಧುಕೋಕಿಲ ಎಂದಿನಂತೆ ತಮ್ಮ ಮನೋಜ್ಞ ಅಭಿನಯ ತೋರಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ಅಷ್ಟೇನು ಕಾಡದಿದ್ರು ಚೊಕ್ಕದಾಗಿ ಮೂಡಿ ಬಂದಿದೆ. ಒಟ್ಟಾರೆಯಾಗಿ, ಪ್ರತಿಯೊಬ್ಬರೂ ನೋಡಲೇಬೇಕಾದ, ಫ್ಯಾಮಿಲಿ ಸಮೇತ ಎಂಜಾಯ್ ಮಾಡಬಹುದಾದ ಚಿತ್ರ ‘ಟಕ್ಕರ್’.

  • ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದ್ರೆ ಧೈರ್ಯ ಬರುತ್ತೆ: ಸಾಧುಕೋಕಿಲ

    ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದ್ರೆ ಧೈರ್ಯ ಬರುತ್ತೆ: ಸಾಧುಕೋಕಿಲ

    ರಾಮನಗರ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಬಂದರೆ ಧೈರ್ಯ ಬರುತ್ತೆ ಎಂದು ಕನ್ನಡ ಚಲನಚಿತ್ರರಂಗದ ಹಾಸ್ಯ ನಟ ಸಾಧುಕೋಕಿಲ ಹೇಳಿದರು.

    ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ನಾನಂತೂ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಮ್ಮ ಚಿತ್ರರಂಗದ ಕಲಾವಿದರೆಲ್ಲರೂ ಬರುತ್ತಾರೆ ಅಂತಾ ನನಗೆ ಮಾಹಿತಿ ಇದೆ. ಶಿವಣ್ಣನವರು ಬರುತ್ತಿದ್ದಾರೆ ಅಂತಾ ಹೇಳುತ್ತಿದ್ದಾರೆ. ಅವರು ಬಂದರೆ ಒಳ್ಳೆಯದು, ಇವಾಗ ಶಿವಣ್ಣ ಅವರಷ್ಟೇ ಅಲ್ಲ. ಈ ಹಿಂದೆ ಅಣ್ಣಾವ್ರು ಇದ್ದಾಗ ಕಲಾವಿದರೆಲ್ಲರೂ ಅವರೊಟ್ಟಿಗೆ ಹೋಗುತ್ತಿದ್ದೆವು. ಇಂತಹ ಹೋರಾಟಗಳಲ್ಲಿ ಅವರೂ ಸಹ ಪಾಲ್ಗೊಳ್ಳುತ್ತಿದ್ದರು. ಕಾವೇರಿ ನೀರಿನ ವಿಷಯದಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಷ್ ಅವರೆಲ್ಲರೂ ಭಾಗವಹಿಸುತ್ತಿದ್ದರು. ಈಗ ಶಿವಣ್ಣ ಅವರು ಬಂದರೆ ನಮಗೆ ಸ್ಫೂರ್ತಿ ಮತ್ತು ಧೈರ್ಯ ಬರುತ್ತೇ ಎಂದು ಅಭಿಪ್ರಾಯಪಟ್ಟರು.

    ಇಂತಹ ಕಾರ್ಯಕ್ರಮಗಳಿಗೆ ಎಲ್ಲರೂ ಖಂಡಿತವಾಗಿ ಬರಬೇಕು. ಇಂತಹ ಕಾರ್ಯಕ್ರಮಗಳನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತ ಎಂದು ಭಾವಿಸಬಾರದು. ಯಾವುದೇ ರೀತಿಯ ರಾಜಕೀಯ ಇಲ್ಲಿ ಬರಬಾರದು. ನಾನು ಕೂಡಾ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾನು ಡಿಕೆಶಿಯವರ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಾವು ಯಾವ ರಾಜಕೀಯ ಪಕ್ಷದ ಸದಸ್ಯತ್ವ ತೆಗೆದುಕೊಂಡಿಲ್ಲ. ಇದು ಕನ್ನಡದ ಜನತೆಗಾಗಿ ಆಗಬೇಕಾದ ಕೆಲಸ ಎಂದು ನಾವು ಪರಿಗಣಿಸಬೇಕಾಗುತ್ತದೆ. ಇದರಿಂದ ಯಾರಿಗಾದರೂ ತೊಂದರೆಯಾಗುತ್ತಾ? ಯಾರಿಗೂ ಏನೂ ತೊಂದರೆ ಆಗುವುದಿಲ್ಲ. ಎಲ್ಲ ಕೈಗಳು ಸೇರಿದಾಗ ಒಂದು ಶಕ್ತಿ ಬರುತ್ತೇ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಅಕಟಕಟ’ ಎನ್ನುತ್ತ ಹೊಸತಂಡದೊಂದಿಗೆ ಮತ್ತೆ ಬಂದ್ರು ನಿರ್ದೇಶಕ ನಾಗರಾಜ್ ಸೋಮಯಾಜಿ

    ವೀಕೆಂಡ್ ಕಫ್ರ್ಯೂ ಕುರಿತು ಮಾತನಾಡಿ, 3 ವರ್ಷದಿಂದ ಕಫ್ರ್ಯೂ ಮಾಡುತ್ತಲೇ ಇದ್ದಾರೆ. ಲಾಕ್‍ಡೌನ್ ಆಗುತ್ತಲೇ ಇದೆ. ಕೊರೊನಾ 1ನೇ ಅಲೆ ಏನಾಯಿತು, 2 ನೇ ಅಲೆ ಏನಾಯಿತು? ಹೇಗಿದೆ ಈಗಿನ ಪರಿಸ್ಥಿತಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಜನರ ಒಳ್ಳೆಯದಾಗಲೆಂದು ಕಫ್ರ್ಯೂ ವಿಧಿಸಿದರೆ ತಪ್ಪೇನಿಲ್ಲ. ಕಫ್ರ್ಯೂ ಹಾಕಿರುವುದು ಸರಿಯಾಗಿದೆಯೇ? ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡಲಾಗುತ್ತಿದೆ. ಈ ಪಾದಯಾತ್ರೆಗೆ ಯಾರು ಬರತ್ತಾರೋ ಗೊತ್ತಿಲ್ಲ, ನಾನಂತು ಅಣೆಕಟ್ಟು ಶುರುವಾಗುವವರೆಗೂ ಜೊತೆಯಲ್ಲಿ ಇರುತ್ತೇನೆ ಎಂದರು. ಇದನ್ನೂ ಓದಿ: ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

  • ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ತಾಯಿಗೆ ತಕ್ಕ ಮಗನ ವಿಶೇಷತೆ ಮೊಗೆದಷ್ಟೂ ಮುಗಿಯೋದಿಲ್ಲ!

    ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.

    ‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.

    ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.

    ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!

    ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

    ಸೈಕಲ್ ರವಿ ಜೊತೆ ನಂಟು ಪ್ರಕರಣ – ಸಿಸಿಬಿ ಪೊಲೀಸರಿಂದ ಸಾಧುಕೋಕಿಲಾ ವಿಚಾರಣೆ

    ಬೆಂಗಳೂರು: ಪಾತಕಿ ಸೈಕಲ್ ರವಿ ಜೊತೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಸ್ಯಾಂಡಲ್‍ವುಡ್‍ನ ಹಾಸ್ಯ ಕಲಾವಿದ ಸಾಧುಕೋಕಿಲಾ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

    ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಸಿಸಿಬಿನ ಕಚೇರಿಗೆ ಬಂದಿದ್ದ ಸಾಧು ಕೋಕಿಲಾ, ಮಧ್ಯಾಹ್ನ ಸಿಸಿಬಿ ಕಚೇರಿಯಿಂದ ವಿಚಾರಣೆ ಮುಗಿಸಿ ನಿರ್ಗಮಿಸಿದ್ದಾರೆ. ಆದರೆ ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

    ಸೈಕಲ್ ರವಿಗೆ ಸಾಧು ಕೋಕಿಲಾ ಏಳೆಂಟು ಬಾರಿ ಕರೆ ಮಾಡಿದ್ದ ಬಗ್ಗೆ ಸಾಕ್ಷ್ಯ ಸಿಕ್ಕಿದ ಹಿನ್ನೆಲೆಯಲ್ಲಿ ಸಾಧುಕೋಕಿಲಾರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.

    ಜೂನ್ 27ರಂದು ರಾಜರಾಜೇಶ್ವರಿನಗರದ ನೈಸ್‍ರೋಡ್ ಬಳಿ ರೌಡಿ ಸೈಕಲ್ ರವಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಸೈಕಲ್ ರವಿ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಸೈಕಲ್ ರವಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ತನಿಖೆ ನಡೆಸಿದ್ದರು.

  • ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ನಟ ಸಾಧು ಕೋಕಿಲ ಕಾರು ಚಾಲಕನ ಬಂಧನ

    ಬೆಂಗಳೂರು: ನಟ ಸಾಧುಕೋಕಿಲ ಅವರ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ವಿಜಯ್ ಕುಮಾರ್ ಅಲಿಯಾಸ್ ಗಜ ಬಂಧಿತ ಆರೋಪಿ. ಈತ ಸಾಧು ಕೋಕಿಲ ಅವರ ಕಾರಿನಲ್ಲಿದ್ದ ಲ್ಯಾಪ್ ಟಾಪ್, 3 ಸಾವಿರ ವಿದೇಶಿ ಕರೆನ್ಸಿ ಹಾಗು ಮೊಬೈಲ್ ಕಳ್ಳತನ ಮಾಡಿದ್ದ. ಏಪ್ರಿಲ್ 24 ರಂದು ಕಳ್ಳತನ ನಡೆದಿತ್ತು. ಈ ಸಂಬಂಧ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇದೀಗ ಇನ್ಸ್ ಪೆಕ್ಟರ್ ವಿರೇಂದ್ರ ಪ್ರಸಾದ್ ತಂಡದಿಂದ ಆರೋಪಿಯ ಬಂಧನವಾಗಿದೆ.

    ಇದನ್ನೂ ಓದಿ: ಲಂಡನ್ ಲಾಡ್ರ್ಸ್ ಮೈದಾನದಲ್ಲಿ ಕಿಚ್ಚನ ಕಲರವ – ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜಯಪತಾಕೆ