Tag: ಸಾಧು

  • ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

    ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್‌

    – ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕರು ಕೆಂಡ

    ಕೋಲ್ಕತ್ತಾ: ಉತ್ತರ ಪ್ರದೇಶ ಮೂಲದ ಮೂವರು ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ, ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ (West Bengal Purulia) ಜಿಲ್ಲೆಯಲ್ಲಿ ನಡೆದಿದೆ.

    ಸಂಕ್ರಾಂತಿ ಹಬ್ಬದ (Sankranti Festival) ಹಿನ್ನೆಲೆಯಲ್ಲಿ ಗಂಗಾಸಾಗರ ಮೇಳಕ್ಕೆ (Gangasagar Mela) ತೆರಳುತ್ತಿದ್ದ ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ ಗುಂಪು ಥಳಿಸಿದ್ದು, ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 12 ಜನರನ್ನ ಬಂಧಿಸಲಾಗಿದ್ದು, ಆರೋಪಿಗಳನ್ನು ಪುರುಲಿಯಾ ಜಿಲ್ಲೆಯ ಕೋರ್ಟ್‌ಗೆ ಹಾಜರುಪಡಿಸುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ಗಂಗಾಸಾಗರದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಿರಿಯ ಸಾಧು ಮತ್ತು ಅವರ ಇಬ್ಬರು ಪುತ್ರರು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಮಹಿಳೆಯರ ಗುಂಪನ್ನು ಸಂಪರ್ಕಿಸಿ ಗಂಗಾಸಾಗರಕ್ಕೆ ತೆರಳಲು ದಾರಿ ಕೇಳಿದ್ದಾರೆ. ಇದರಿಂದ ಕೆಲವು ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸೇರಿದ ಜನರ ಗುಂಪು, ಸಾಧುಗಳನ್ನ ಅಪಹರಣಕಾರರು ಎಂದು ದೂರಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

    ಸಾಧುಗಳು ಮತ್ತು ಮೂವರು ಸ್ಥಳೀಯ ಹೆಣ್ಣುಮಕ್ಕಳ ನಡುವೆ ಭಾಷೆ ಸಮಸ್ಯೆಯಿಂದಾಗಿ ತಪ್ಪು ತಿಳಿವಳಿಕೆ ಉಂಟಾಗಿತ್ತು. ಸಾಧುಗಳ ಮಾತನ್ನು ಅರ್ಥಮಾಡಿಕೊಳ್ಳದೇ ಹೆಣ್ಣುಮಕ್ಕಳು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿ ಹೋದರು. ಇದರಿಂದ ಸ್ಥಳೀಯರು ಸಾಧುಗಳನ್ನು ಹಿಡಿದು ಥಳಿಸಿದ್ದಾರೆ. ಅಲ್ಲದೇ ಸಾಧುಗಳ ವಾಹವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪುರುಲಿಯಾ ಪೊಲೀಸರು ತಿಳಿಸಿದ್ದಾರೆ. ನಂತರ ಸಾಧುಗಳನ್ನು ರಕ್ಷಿಸಿ, ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಅನೀಲಿಕರಣ ಯೋಜನೆ ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಮಂಡನೆ – ಪ್ರಹ್ಲಾದ್‌ ಜೋಶಿ

    ಬಿಜೆಪಿ ಖಂಡನೆ: ಸಾಧುಗಳ ಮೇಲಿನ ಹಲ್ಲೆಯನ್ನು ಬಿಜೆಪಿಯ ಅನುರಾಗ್‌ ಠಾಕೂರ್, ಅಮಿತ್‌ ಮಾಳವೀಯಾ ಸೇರಿದಂತೆ ಹಲವರು ಮಮತಾ ಬ್ಯಾನರ್ಜಿ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೂ ಸಾಧುಗಳು ನಿಮ್ಮ ಅನುಕಂಪಕ್ಕೆ ಯೋಗ್ಯರಲ್ಲವೇ? ಈ ದೌರ್ಜನ್ಯಕ್ಕೆ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಮಮತಾ ಬ್ಯಾನರ್ಜಿ ಅವರ ಸರ್ಕಾರವು ಶಹಜಹಾನ್ ಶೇಖ್‌ನಂತಹ ಉಗ್ರರಿಗೆ ರಕ್ಷಣೆ ಒದಗಿಸುತ್ತಿದೆ. ಆದರೆ ಸಾಧುಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಕಿಡಿ ಕಾರಿದ್ದಾರೆ.

  • ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಸಾಧು ವೇಷ ಧರಿಸಿ ದೇವಸ್ಥಾನದಲ್ಲಿ ಬೀಡುಬಿಟ್ಟಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್‌

    ಚಂಡೀಗಢ: ಸಾಧು (Sadhu) ವೇಷ ಧರಿಸಿ ದೇವಸ್ಥಾನದಲ್ಲಿ ಹಲವು ತಿಂಗಳಿಂದ ನೆಲೆಸಿದ್ದ ಮುಸ್ಲಿಂ ವ್ಯಕ್ತಿಯನ್ನು ಮೀರತ್‌ ಪೊಲೀಸರು (Meerut Police) ಬಂಧಿಸಿದ್ದಾರೆ.

    ಬಂಧಿತನನ್ನು ಹರಿಯಾಣದ ಪಾಣಿಪತ್‌ನ ಗಾದ್ರಿ ಗ್ರಾಮದ ನಿವಾಸಿ ಗುಲ್ಲು ಎಂದು ಗುರುತಿಸಲಾಗಿದೆ. ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮತ್ತೂರು ಗ್ರಾಮದ ಶಿವ ದೇವಸ್ಥಾನದ ಬಳಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಈತ ಸಾಧು ಎಂದು ಹೇಳಿಕೊಂಡು ವಾಸವಾಗಿದ್ದ. ಇದನ್ನೂ ಓದಿ: ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಸ್ – ಬ್ರಿಜ್ ಭೂಷಣ್‌ಗೆ ಬಿಗ್ ರಿಲೀಫ್

    ಈ ವ್ಯಕ್ತಿ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತು. ಪೊಲೀಸರು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ತಲುಪಿದ್ದಾರೆ. ದೇವಸ್ಥಾನದ ಆವರಣದ ಬಳಿ ಸಾಧು ವೇಷ ಧರಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಪೊಲೀಸ್ ವಶದಲ್ಲಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

    ಗುಲ್ಲು ಎಂಬಾತ 2023 ರ ಜನವರಿಯಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧುವಿನಂತೆ ನಟಿಸುತ್ತಿದ್ದ. ಆತನ ಹಿನ್ನೆಲೆಯ ಬಗ್ಗೆ ಸ್ಥಳೀಯರಿಗೆ ತಿಳಿದಿರಲಿಲ್ಲ. ಈತನ ಕೃತ್ಯದ ಹಿಂದಿನ ಉದ್ದೇಶ ಮತ್ತು ಆತ ಏಕೆ ಮಾರುವೇಷದಲ್ಲಿ ಬದುಕಲು ನಿರ್ಧರಿಸಿದ ಎಂಬುದರ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಈತ ಅಪರಾಧ ಕೃತ್ಯಗಳ ಹಿನ್ನೆಲೆ ಹೊಂದಿದ್ದಾನೆಯೇ ಎಂಬ ವಿಚಾರವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಈತನಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಆದರೆ ಪತ್ನಿ ಜೊತೆಗೆ ವಾಸವಾಗಿಲ್ಲ ಎಂದು ದೌರಾಲಾ ಪೊಲೀಸ್ ಠಾಣೆಯ ಎಸ್‌ಐ ಅಭಿಷೇಕ್ ಪಟೇಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ರಮ ಗಣಿಗಾರಿಕೆ ತಡೆಗೆ ಬೆಂಕಿ ಹಚ್ಚಿಕೊಂಡ ಸಾಧು- ಗೆಹ್ಲೋಟ್ ಸರ್ಕಾರದ ವಿರುದ್ಧ ಆಕ್ರೋಶ

    ಅಕ್ರಮ ಗಣಿಗಾರಿಕೆ ತಡೆಗೆ ಬೆಂಕಿ ಹಚ್ಚಿಕೊಂಡ ಸಾಧು- ಗೆಹ್ಲೋಟ್ ಸರ್ಕಾರದ ವಿರುದ್ಧ ಆಕ್ರೋಶ

    ಜೈಪುರ: ಅಕ್ರಮ ಗಣಿಗಾರಿಕೆಯನ್ನು ಖಂಡಿಸಿದ್ದ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಸಾಧು ಬಾಬಾ ವಿಜಯ್ ದಾಸ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ರಾಜಸ್ಥಾನದ ಭರತ್‍ಪುರ ಜಿಲ್ಲೆ ಸುತ್ತಮುತ್ತ ಅಕ್ರಮ ಗಣಿಗಾರಿಕೆಯನ್ನು ಖಂಡಿಸಿದ್ದರು. ಆದರೆ ಸಾಧುವೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸಹಾಯಕ್ಕೆ ಧಾವಿಸಿದ ಪೊಲೀಸರು ಬೆಂಕಿ ಆರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪಂದ್ಯ ಕಟ್ಟಿ ವಿದ್ಯಾರ್ಥಿನಿಯನ್ನು ಚುಂಬಿಸಿದ ವಿದ್ಯಾರ್ಥಿ

    POLICE JEEP

    ಸಾಧು ಬಾಬಾ ವಿಜಯ್ ದಾಸ್ ಶೇ.80ರಷ್ಟು ಸುಟ್ಟಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಜಿಲ್ಲೆಯ ದೀಗ್ ಪ್ರದೇಶದ ಆದಿಬದ್ರಿ ಧಾಮ್ ಮತ್ತು ಕಂಕಂಚಲ್‍ನಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಾಧುಗಳು 550 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮಗಳು ಆಗಿರಲಿಲ್ಲ. ಇದರಿಂದ ಮನನೊಂದ ಸಾಧು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಘಟನೆ ಸಂಬಂಧಿಸಿ ಗೆಹ್ಲೋಟ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೆಚ್ಚಾಗಿದೆ. ಇದನ್ನೂ ಓದಿ: ಟೋಲ್‍ನಲ್ಲಿ ಹಸು ಮಲಗಿದ್ದೇ ಅಪಘಾತಕ್ಕೆ ಕಾರಣ – ಅಂಬುಲೆನ್ಸ್ ಚಾಲಕನ

    Live Tv
    [brid partner=56869869 player=32851 video=960834 autoplay=true]

  • ಸಾಧು ವೇಷದಲ್ಲಿ ಮಾದಕ ವಸ್ತು ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

    ಲಕ್ನೋ: 60 ವರ್ಷದ ವ್ಯಕ್ತಿ ಸಾಧು ವೇಷ ತೊಟ್ಟು, ಮಾದಕ ವಸ್ತುವನ್ನು ಮಾರುತ್ತಿದ್ದು, ಆತನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿಯ ಬಳಿಯಿದ್ದ 6ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿ ಘನ್ ಶ್ಯಾಮ್ ಶುಕ್ಲಾ(60) ತನ್ನನ್ನು ಸಾಧು ಎಂದು ಹೇಳಿಕೊಂಡು ಓಡಾಡುತ್ತಿದ್ದ. ನಗರದಲ್ಲಿ ಡ್ರಗ್ಸ್ ಸರಬರಾಜು ಮಾಡುವ ಗ್ಯಾಂಗ್‍ನ ಭಾಗವಾಗಿದ್ದ ಆತನನ್ನು ಕೃಷ್ಣ ನಗರದಲ್ಲಿ ಲಕ್ನೋ ಪೊಲೀಸರು ಬಂಧಿಸಿದ್ದಾರೆ.

    ಶುಕ್ಲಾ ಸಾಧು ವೇಷದಲ್ಲಿದ್ದು, ಕ್ಯಾಬ್‍ಗಳಲ್ಲಿ ನಗರವನ್ನು ಸುತ್ತುತ್ತಿದ್ದ. ಭಾರತ-ನೇಪಾಳ ಗಡಿಯಲ್ಲಿರುವ ಡ್ರಗ್ಸ್ ಪೆಡ್ಲರ್‍ಗಳಿಂದ ಗಾಂಜಾವನ್ನು ಸಂಗ್ರಹಿಸಿ, ಸ್ಥಳೀಯವಾಗಿ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 40 ಕತ್ತೆಗಳು ನಾಪತ್ತೆ- ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಗ್ರಾಮಸ್ಥರು

    ಆರೋಪಿ ಶುಕ್ಲಾ ಜೊತೆಗೂಡಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಅವದೇಶ್ ಮಿಶ್ರಾ ಅಲಿಯಾಸ್ ಸೋನು ತಲೆಮರೆಸಿಕೊಂಡಿದ್ದಾನೆ. ಅವರಿಬ್ಬರು ಒಟ್ಟಿಗೆ ಕ್ಯಾಬ್‍ಗಳನ್ನು ಬಾಡಿಗೆ ತೆಗೆದುಕೊಂಡು, ನಗರವನ್ನು ಸುತ್ತಿ ಮಾದಕ ವಸ್ತುವನ್ನು ರವಾನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈನ್ ಮೇಲಿನ ಐಟಿ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ: ಅಖಿಲೇಶ್ ಯಾದವ್

    ಇದೀಗ ಆರೋಪಿ ಘನ್ ಶ್ಯಾಮ್ ಶುಕ್ಲಾನನ್ನು ಬಂಧಿಸಲಾಗಿದ್ದು, ಆತನ ಸಹಚರ ಸೋನು ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ

    ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಬಂದ ಸಾಧು ಮೇಲೆ ಕಾಲಿನಿಂದ ಒದ್ದು ಹಲ್ಲೆ

    ಕಲಬುರಗಿ: ಮಾತಾ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ತೆರಳಿದ ಸಾಧುವೊಬ್ಬರ ಮೇಲೆ ಆಶ್ರಮದ ಕೆಲವರು ಹಲ್ಲೆ ನಡೆಸಿ, ಕಾಲಿನಿಂದ ಒದ್ದು ಹೊರಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಸೇಡಂ ತಾಲೂಕಿನ ಯಾನಾಗುಂದಿ ಆಶ್ರಮದಲ್ಲಿದ್ದ ಸಾಧುವೊಬ್ಬರು ರವಿವಾರ ರಾತ್ರಿ ಅಮ್ಮನ ಮಂದಿರದಲ್ಲಿ ಧ್ಯಾನ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಆಶ್ರಮದವರು ವಿರೋಧ ವ್ಯಕ್ತಪಡಿಸಿದ್ದು, ದೇವಾಲಯದ ಬಾಗಿಲು ತೆರೆಯಲು ಯತ್ನಿಸಿದಾಗ ಆತನನ್ನು ಅಮಾನವೀಯವಾಗಿ ಎಳೆದೊಯ್ದು ಹೊರಹಾಕಿದ್ದಾರೆ. ಅಲ್ಲದೇ ಕೆಲವರು ಕಾಲಿನಿಂದ ಒದ್ದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸಾಧುವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ

    ಮಾತಾ ಮಾಣಿಕೇಶ್ವರಿ ಅಮ್ಮನವರು ಜೀವಂತವಾಗಿದ್ದಾಗಲೂ ಸಹ ಅಮ್ಮನವರ ದರ್ಶನಕ್ಕೆ ಅಲ್ಲಿನ ಟ್ರಸ್ಟ್ ನಿರ್ಬಂಧ ಹೇರಿತ್ತು. ಮಾಣಿಕೇಶ್ವರಿ ಅಮ್ಮ ಲಿಂಗೈಕ್ಯರಾದ ನಂತರವೂ ಸಹ ಅಮ್ಮನವರ ಗರ್ಭಗುಡಿ ದರ್ಶನಕ್ಕೆ ಅವಕಾಶ ಕಲ್ಪಿಸದ ಟ್ರಸ್ಟ್​ ಸದಸ್ಯರ ನಡೆಗೆ ಭಕ್ತರು, ಜನರು ರೋಸಿ ಹೋಗಿದ್ದಾರೆ. ಇದೀಗ ಹಲವು ವರ್ಷಗಳಿಂದ ಸೇವೆ ಮಾಡಿಕೊಂಡಿದ್ದ ಸಾಧುವಿನ ಮೇಲೆ ಹಲ್ಲೆ ನಡೆಸಿದ ಟ್ರಸ್ಟ್​ ಸಿಬ್ಬಂದಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

  • ಕಹಿಬೇವು, ತುಳಸಿಯಿಂದ ಮಾಸ್ಕ್ – ನೆಟ್ಟಿಗರನ್ನು ದಂಗುಬಡಿಸಿದ ಸಾಧು

    ಕಹಿಬೇವು, ತುಳಸಿಯಿಂದ ಮಾಸ್ಕ್ – ನೆಟ್ಟಿಗರನ್ನು ದಂಗುಬಡಿಸಿದ ಸಾಧು

    ಲಕ್ನೋ: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಕರಿಛಾಯೆ ಹೆಚ್ಚಿಸುತ್ತಿದೆ. ಈ ನಡುವೆ ಜನ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಸೂಚನೆ ಕೊಡುತ್ತಿದೆ. ಇದರ ಪ್ರಕಾರ ಉತ್ತರ ಪ್ರದೇಶದಲ್ಲಿ ಸಾಧು ಒಬ್ಬರು ಕಹಿಬೇವು ಮತ್ತು ತುಳಸಿಯಿಂದ ತಯಾರು ಮಾಡಿದ ಹರ್ಬಲ್ ಮಾಸ್ಕ್ ಧರಿಸುವ ಮೂಲಕ ನೋಡುಗರ ಗಮನಸೆಳೆಯುತ್ತಿದ್ದಾರೆ.

    ಸಾಧು ಈ ರೀತಿ ಮಾಸ್ಕ್ ಬಳಸುತ್ತಿರುವ ವೀಡಿಯೋವನ್ನು ರೂಪಿನ್ ಶರ್ಮಾ ಹೆಸರಿನ ಐಪಿಎಸ್ ಅಧಿಕಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಮಾಸ್ಕ್ ಕಂಡು ಹಲವು ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ.

    ಸಾಧು ಮಾಸ್ಕ್ ಧರಿಸಿಕೊಂಡು ಈ ವೀಡಿಯೋದಲ್ಲಿ ಮಾತನಾಡುತ್ತಿದ್ದು, ಮಾಸ್ಕ್ ನ್ನು ಕಹಿಬೇವು ಮತ್ತು ತುಳಸಿಯ ಎಲೆಯನ್ನು ಉಪಯೋಗಿಸಿಕೊಂಡು ಧರಿಸುತ್ತಿದ್ದೇನೆ. ಇದು ಔಷಧಿಯ ಗುಣಹೊಂದಿದ್ದು, ಇತರ ಬಟ್ಟೆಯ ಮತ್ತು ಸರ್ಜಿಕಲ್ ಮಾಸ್ಕ್ ಗಿಂತ ಇದು ಉತ್ತಮವಾಗಿದೆ. ಕಹಿಬೇವು ಮತ್ತು ತುಳಸಿ ಪ್ರತಿ ರೋಗಕ್ಕೂ ರಾಮಬಾಣವಾಗಿದೆ ಎಂದು ವಿವರಿಸಿದ್ದಾರೆ.

    https://twitter.com/rupin1992/status/1396041839656849408

    ಇತ್ತ ಸಾಧು ಮಾಸ್ಕ್ ಕಂಡು ದಂಗಾಗಿರುವ ನೆಟ್ಟಿಗರು ನಾವು ಒಮ್ಮೆ ಬಳಸಿ ನೋಡೋಣ ಇದು ನಿಜವಾಗಿಯೂ ವಿಶೇಷವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ಲೈಂಗಿಕ ದೌರ್ಜನ್ಯ ವಿರೋಧಿಸಿದ ಬಾಲಕನ ಖಾಸಗಿ ಅಂಗವನ್ನೇ ಕತ್ತರಿಸಲೆತ್ನಿಸಿದ ಸಾಧು!

    ಲೈಂಗಿಕ ದೌರ್ಜನ್ಯ ವಿರೋಧಿಸಿದ ಬಾಲಕನ ಖಾಸಗಿ ಅಂಗವನ್ನೇ ಕತ್ತರಿಸಲೆತ್ನಿಸಿದ ಸಾಧು!

    ಲಕ್ನೋ: ಆಶ್ರಮದಲ್ಲಿ ಸಾಧುವೊಬ್ಬ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಲ್ಲದೇ ಆತನ ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿರುವ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿ ಸಾಧುವನ್ನು ರಾಮ್ ಸೇವಕ್ ದಾಸ್ ಎಂದು ಗುರುತಿಸಲಾಗಿದೆ. ಬಾಲಕ ತನ್ನ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದಾಗ ಸಾಧು ಆತನ ಖಾಸಗಿ ಅಂಗವನ್ನೇ ಕತ್ತರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಬಾಲಕ ಹೇಗೋ ಮಾಡಿ ಸಾಧು ಕೈಯಿಂದ ತಪ್ಪಿಸಿಕೊಂಡಿದ್ದಾನೆ.

    ಆಶ್ರಮವೊಂದರಲ್ಲಿ ಸಂಸ್ಕøತ ವಿದ್ಯಾರ್ಥಿಯಾಗಿರುವ ಬಾಲಕ ತನ್ನ ಸಂಬಂಧಿಕರೊಬ್ಬರ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾನೆ. ಈ ವೇಳೆ ಅವರು ಕೂಡಲೇ ಬಾಲಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಸಾಧು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಪೊಲೀಸರು ಸಾಧುವನ್ನು ಬಂಧಿಸಿದ್ದಾರೆ.

    ಸಾಧು ಬಾಲಕನನ್ನು ಆಶ್ರಮಕ್ಕೆ ಕರೆದು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಆತನ ಮೇಲೆ ಒತ್ತಡ ಹಾಕಿದ್ದಾನೆ. ಬಾಲಕ ಇದನ್ನು ನಿರಾಕರಿಸಿದಾಗ ಸಾಧು ಆತನ ಖಾಸಗಿ ಅಂಗವನ್ನು ಕಟ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಗಾಯಗೊಂಡ ಬಾಲಕ, ಸಾಧು ಕೈಯಿಂದ ತಪ್ಪಿಸಿಕೊಂಡು ಪಾರಾಗಿದ್ದಾನೆ. ನಂತರ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾನೆ. ಸದ್ಯ ಸಾಧುವನ್ನು ಬಂಧಿಸಲಾಗಿದ್ದು, ಪೊಲೀಸರು ಜೈಲಿಗಟ್ಟಿದ್ದಾರೆ.

  • ‘ಸಾಧುಗಳ ಹತ್ಯೆ ಕೇಸ್‍ನಲ್ಲಿ 101 ಜನ ಬಂಧನ, ಒಬ್ಬರು ಮುಸ್ಲಿಮರಿಲ್ಲ’ – ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

    ‘ಸಾಧುಗಳ ಹತ್ಯೆ ಕೇಸ್‍ನಲ್ಲಿ 101 ಜನ ಬಂಧನ, ಒಬ್ಬರು ಮುಸ್ಲಿಮರಿಲ್ಲ’ – ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

    ಮುಂಬೈ: ಕಳೆದ ವಾರ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಓರ್ವ ಸಾಧು ಸೇರಿ ಮೂವರ ಮೇಲೆ ನಡೆದ ಸಾಮೂಹಿಕ ದಾಳಿಗೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ 101 ಜನರಲ್ಲಿ ಯಾರೂ ಮುಸ್ಲಿಮರಲ್ಲ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ.

    ಇಂದು ಕೊರೊನಾ ವೈರಸ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಮಾತನಾಡಲು ಫೇಸ್ ಬುಕ್‍ನಲ್ಲಿ ಲೈವ್ ಬಂದಿದ್ದ ಅನಿಲ್ ದೇಶ್ಮುಖ್, ವಿರೋಧ ಪಕ್ಷವಾದ ಬಿಜೆಪಿಯ ಮೇಲೆ ಕಿಡಿಕಾರಿದ್ದಾರೆ. ಈ ಘಟನೆಯನ್ನೇ ಮುಂದೆ ಇಟ್ಟುಕೊಂಡು ಬಿಜೆಪಿ ಪಕ್ಷ ಇದಕ್ಕೆ ಕೋಮುವಾದದ ಬಣ್ಣ ಹಚ್ಚಲು ಪ್ರಯತ್ನಿಸುತ್ತದೆ ಎಂದು ಆರೋಪಿಸಿದ್ದಾರೆ.

    ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ದೇಶ್ಮುಖ್ ತಿಳಿಸಿದ್ದಾರೆ.

    ಮುಂಬೈನಿಂದ ಸುಮಾರು 125 ಕಿ.ಮೀ ದೂರದಲ್ಲಿ ನಡೆದ್ದ ಈ ಭಯಾನಕ ಘಟನೆಯ ಬಗ್ಗೆ ಮಾತನಾಡಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಘಟನೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಈ ದಾಳಿಯಲ್ಲಿ ಹಿಂದು ಮುಸ್ಲಿಂ ಎಂಬ ಕೋಮುವಾದದ ಬಣ್ಣ ಇಲ್ಲ. ಈ ವಿಚಾರವಾಗಿ ತಕ್ಷಣ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಕೋಮುವಾದ ಸೃಷ್ಟಿಸುತ್ತಿರುವರಿಗೆ ಎಚ್ಚರಿಕೆ ಎಂದು ವಾರ್ನಿಂಗ್ ನೀಡಿದ್ದರು.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡ್ಚಿಂಚಲೆ ಗ್ರಾಮದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಮೂವರಲ್ಲಿ ಒಬ್ಬರು 70 ವರ್ಷದ ಸಾಧು ಕೂಡ ಇದ್ದರು. ಜನರು ದೊಣ್ಣೆ ಮತ್ತು ಕಲ್ಲಿನಿಂದ ಓರ್ವನನ್ನು ಸಾಯುವ ಹಾಗೇ ಹೊಡೆಯುತ್ತಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು. ಜೊತೆಗೆ ಇವರನ್ನು ರಕ್ಷಣೆ ಮಾಡಲು ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿ ಅವರ ವಾಹನವನ್ನು ಜಖಂ ಮಾಡಲಾಗಿತ್ತು.

    ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಕೈಲಾಶ್ ಶಿಂಧೆ, ಲಾಕ್‍ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಕಳ್ಳತನ ಮಾಡಲು ಗ್ರಾಮಗಳಿಗೆ ಬರುತ್ತಾರೆ. ಜೊತೆಗೆ ಮಕ್ಕಳನ್ನು ಕದ್ದುಕೊಂಡು ಹೋಗುತ್ತಾರೆ ಎಂಬ ವಂದತಿ ಸುತ್ತಮುತ್ತಲಿನ ಗ್ರಾಮದಲ್ಲಿ ಹರಿದಾಡುತ್ತಿತ್ತು. ಹೀಗಾಗಿ ಆ ಊರಿನ ಯುವಕರು ರಾತ್ರಿಯ ವೇಳೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಈ ಸಾಧು ಅವರು ಅಲ್ಲಿಗೆ ಹೋಗಿದ್ದಾರೆ. ಅನುಮಾನಗೊಂಡ ಗ್ರಾಮದವರು ಅವರನ್ನು ಥಳಿಸಿದ್ದಾರೆ ಎಂದು ಹೇಳಿದ್ದಾರೆ.

  • ಸೈಕಲ್ ನೀಡಲು ನಿರಾಕರಿಸಿದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿದ ಸಾಧು

    ಸೈಕಲ್ ನೀಡಲು ನಿರಾಕರಿಸಿದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿದ ಸಾಧು

    ಲಕ್ನೋ: ಸೈಕಲ್ ಕೇಳಿದಾಗ ನೀಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಸಾಧುವೊಬ್ಬ ಕತ್ತಿಯಿಂದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿ, ಹಲ್ಲೆ ಮಾಡಿ ಕ್ರೌರ್ಯ ಮೆರೆದ ಘಟನೆ ಉತ್ತರ ಪ್ರದೇಶದ ಫರುಖಾಬಾದ್‍ನಲ್ಲಿ ನಡೆದಿದೆ.

    ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಚೋನಪುರ ನಿವಾಸಿಯಾಗಿರುವ 12 ವರ್ಷದ ಬಾಲಕ ಮೇಲೆ ಅದೇ ಗ್ರಾಮದ ಸಾಧು ಹಲ್ಲೆ ಮಾಡಿದ್ದಾನೆ. ಬುಧವಾರ ರಾತ್ರಿ ಬಾಲಕ ರಸ್ತೆಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದನು. ಈ ವೇಳೆ ಆತನಿಗೆ ಅಡ್ಡಗಟ್ಟಿದ ಸಾಧು ಬಾಲಕನ ಸೈಕಲ್ ತನಗೆ ಕೊಡುವಂತೆ ಕೇಳಿದ್ದಾನೆ. ಆಗ ಬಾಲಕ ಸೈಕಲ್ ನೀಡಲು ನಿರಾಕರಿಸಿದ್ದಾನೆ. ಇಷ್ಟಕ್ಕೆ ಕೋಪಗೊಂಡ ಸಾಧು ತನ್ನ ಬಳಿ ಇದ್ದ ಕತ್ತಿಯಿಂದ ಬಾಲಕನ ಗುಪ್ತಾಂಗ ಕತ್ತರಿಸಲು ಯತ್ನಿಸಿ ಹಲ್ಲೆ ಮಾಡಿದ್ದಾನೆ.

    ಸಾಧುವಿನ ಕೃರ್ತಕ್ಕೆ ಬಾಲಕ ಗಂಭಿರ ಗಾಯಗೊಂಡಿದ್ದು, ನೋವಿನಿಂದ ಕೂಗಿಕೊಳ್ಳುತ್ತಿದ್ದಂತೆ ಸಾಧು ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಲಕನ ಕಿರುಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಬಾಲಕನ ಪೋಷಕರು ಹಾಗೂ ಗ್ರಾಮಸ್ಥರು ಸೇರಿ ಸಾಧು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸಾಧುವನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಮೃತಪಟ್ಟಿದ್ದ 115ರ ಸಾಧು 4 ಗಂಟೆ ನಂತ್ರ ಎದ್ದು ನಿಂತ್ರು – ಬಾಬಾನ ದರ್ಶನಕ್ಕೆ ಮುಗಿಬಿದ್ದ ಜನ

    ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ಹಳ್ಳಿಯೊಂದರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ಸಾಧುವೊಬ್ಬರು 4 ಗಂಟೆಯ ನಂತರ ಎದ್ದು ನಿಂತ ಚಮತ್ಕಾರ ನಡೆದಿದೆ.

    ಕಾನ್ಪುರದ ರುಸೆಲ್ಲಾಬಾದ್ ತೆಹ್ಸಿಲ್ ಗ್ರಾಮದಲ್ಲಿ ಸೋಮವಾರ ಸಂಜೆ ಗ್ರಾಮದಲ್ಲಿದ್ದ 115 ವರ್ಷದ ಸಾಧು ನಾರಾಯಣ ಬಾಬಾ ಸಾವನ್ನಪ್ಪಿದ್ದರು. ಈ ವೇಳೆ ಊರವರೆಲ್ಲಾ ಸೇರಿ ಅವರ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿದ್ದರು. ಆದರೆ ಮೃತಪಟ್ಟ ನಾಲ್ಕು ಗಂಟೆಯ ನಂತರ ಚಮತ್ಕಾರ ಎಂಬಂತೆ ಸಾಧುವಿನ ಹೃದಯ ಬಡಿತ ಮತ್ತೆ ಶುರುವಾಗಿದೆ. ಇದನ್ನು ಕಂಡ ಗ್ರಾಮಸ್ಥರು ಮುಖವಿಸ್ಮಿತರಾಗಿದ್ದಾರೆ.

    ನಾರಾಯಣ ಬಾಬಾ ಕಳೆದ 15 ರಿಂದ 20 ವರ್ಷಗಳ ಹಿಂದೆ ಗ್ರಾಮದ ದೇವಸ್ಥಾನಕ್ಕೆ ಬಂದಿದ್ದರಂತೆ. ಆ ನಂತರ ಇಲ್ಲಿಯೇ ವಾಸಿಸಲು ಶುರು ಮಾಡಿದ್ದರು. ಅಲ್ಲದೆ ಅನೇಕ ವರ್ಷಗಳಿಂದ ಅನ್ನ ತ್ಯಜಿಸಿರುವ ಸಾಧು, ಹಣ್ಣನ್ನು ಮಾತ್ರ ಸೇವನೆ ಮಾಡುತ್ತಿದ್ದರು. ಹಾಗೆಯೇ ಅವರ ವಯಸ್ಸು ಅವರಿಗೆ ಸರಿಯಾಗಿ ತಿಳಿದಿಲ್ಲ. ಈ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈಗ ಚಮತ್ಕಾರಿ ಸಾಧುವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಬೇರೆ ಬೇರೆ ಊರುಗಳಿಂದಲೂ ಕೂಡ ಜನರು ಸಾಧುವಿನ ದರ್ಶನ ಪಡೆಯಲು ಬರುತ್ತಿದ್ದಾರೆ.