Tag: ಸಾಧನ ಸಮಾವೇಶ

  • ಸಿಎಂ ಸಾಧನಾ ಸಮಾವೇಶದಲ್ಲಿ ಪೊಲೀಸ್ ದರ್ಪ – ವೃದ್ಧನನ್ನ ಬೂಟುಗಾಲಲ್ಲಿ ಒದ್ದ ಪಿಎಸ್‍ಐ

    ಸಿಎಂ ಸಾಧನಾ ಸಮಾವೇಶದಲ್ಲಿ ಪೊಲೀಸ್ ದರ್ಪ – ವೃದ್ಧನನ್ನ ಬೂಟುಗಾಲಲ್ಲಿ ಒದ್ದ ಪಿಎಸ್‍ಐ

    ಚಾಮರಾಜನಗರ: ಪಿಎಸ್‍ಐವೊಬ್ಬರು ಬುಧವಾರದಂದು ಸಿಎಂ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರನ್ನ ಬೂಟ್ ಕಾಲಿನಿಂದ ಒದ್ದು ಹಲ್ಲೆ ಮಾಡಿರುವ ಘಟನೆ ಚಾಮರಾಜನಗರದ ನಾಗವಳ್ಳಿಯಲ್ಲಿ ಜರುಗಿದೆ.

    ನಾಗವಳ್ಳಿಯಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಊಟದ ವ್ಯವಸ್ಥೆಯ ಬಳಿ ಈ ಘಟನೆ ನಡೆದಿದೆ. ಊಟದ ವಿಚಾರದಲ್ಲಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

    ಈ ವೇಳೆ ಚಾಮರಾಜನಗರ ಪಟ್ಟಣ ಠಾಣೆಯ ಪಿಎಸ್‍ಐ ಸಾಗರ್, ಟೇಬಲ್ ಜಂಪ್ ಮಾಡಿ ವೃದ್ಧ ವ್ಯಕ್ತಿಯನ್ನ ಬೂಟ್ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.

    ಪ್ರತ್ಯಕ್ಷದರ್ಶಿಗಳು ಈ ಘಟನೆಯ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಪೊಲೀಸ್ ಅಧಿಕಾರಿ ಬೂಟ್ ಕಾಲಿನಿಂದ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.youtube.com/watch?v=xnpJvIfOUoo&feature=youtu.be