Tag: ಸಾಧನ್ ಪಾಂಡೆ

  • ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

    ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

    ಮುಂಬೈ: ಪಶ್ಚಿಮ ಬಂಗಾಳದ ಕ್ಯಾಬಿನೆಟ್ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ(71) ನಿಧನರಾಗಿದ್ದಾರೆ.

    ಮೂರನೇ ಹಂತದ ಚುನಾವಣೆಗಾಗಿ ಪ್ರಚಾರ ನಡೆಸಿದ್ದ ಅವರು, ಉತ್ತರಪ್ರದೇಶದಲ್ಲಿ ಜನರ ಅಭಿವೃದ್ಧಿಗಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಹೊಸ ಸರ್ಕಾರ ರಚನೆಯೊಂದಿಗೆ ಹೊಸ ಭವಿಷ್ಯವನ್ನು ರೂಪಿಸಲಾಗುವುದು ಎಂದು ಹೇಳಿದ್ದರು.

    ಸಾಧನ್ ಪಾಂಡೆ ಅವರ ಅಗಲಿಕೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ನಮ್ಮ ಹಿರಿಯ ಸಹೋದ್ಯೋಗಿ, ಪಕ್ಷದ ನಾಯಕ ಮತ್ತು ಕ್ಯಾಬಿನೆಟ್ ಸಚಿವ ಸಾಧನ್ ಪಾಂಡೆ ಇಂದು ಬೆಳಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಅವರೊಂದಿಗೆ ಅದ್ಭುತ ಸಂಬಂಧವಿತ್ತು. ಆದರೆ ಈ ನಷ್ಟದಿಂದ ತೀವ್ರ ನೋವಾಗಿದೆ. ಅವರ ಕುಟುಂಬ, ಸ್ನೇಹಿತರು, ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್-ಕೇಸರಿ ವಿವಾದ ಬೆನ್ನಲ್ಲೇ ಶುರುವಾಯ್ತು ಸಿಂಧೂರ ಚಳುವಳಿ

    ಕಳೆದ ವರ್ಷದಿಂದ ಸಾಧನ್ ಪಾಂಡೆ ಅವರು ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟ ಕಾರಣ ಅವರನ್ನು ಉತ್ತಮ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

    ಸಾಧನ್ ಪಾಂಡೆ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆಯೊಳಗೆ ಕೋಲ್ಕತ್ತಾಗೆ ತರಲು ಅವರ ಕುಟುಂಬಸ್ಥರು ಸಿದ್ಧತೆ ನಡೆಸಿದ್ದು, ಸೋಮವಾರ ಅಂತಿಮ ವಿಧಿವಿಧಾನ ನಡೆಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಹೇಳಿದ್ದೆ ವೇದವಾಕ್ಯನಾ? ಬೊಮ್ಮಾಯಿಗಿಂತ ಹಿರಿಯ ನಾನು: ಸಿದ್ದರಾಮಯ್ಯ