Tag: ಸಾತ್ವಿಕ್

  • ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ-  ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಕೊಳವೆ ಬಾವಿಗೆ ಬಿದ್ದು ಸಾವುಗೆದ್ದ ಸಾತ್ವಿಕ್ ಕ್ಷೇಮ- ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್

    ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸಾವು ಗೆದ್ದ 2 ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ (Sathwik) ಕ್ಷೇಮವಾಗಿದ್ದು, ಶೀಘ್ರವೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.

    ಈ ಸಂಬಂಧ ಜಿಲ್ಲಾಧಿಕಾರಿ ಭೂಬಾಲನ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗು ಅರೋಗ್ಯವಾಗಿದ್ದಾನೆ. ಸಣ್ಣ-ಪುಟ್ಟ ಗಾಯ ಬಿಟ್ಟರೆ ಯಾವುದೇ ಗಾಯಗಳು ಇಲ್ಲ. ಘಟನೆ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಗು ಸಂದ್ಪಿಸಿದೆ. ಮಗು ಚಟುವಟಿಕೆಯಿಂದ ಕೂಡಿದೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ನಾಳೆ ಒಂದು ದಿನ ನೋಡಿಕೊಂಡು ಮಗುವನ್ನ ಡಿಸ್ಚಾರ್ಜ್ ಮಾಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

    ಸಾತ್ವಿಕ್‍ಗೆ ಮರು ನಾಮಕರಣ: ಮಗನ ಆರೋಗ್ಯದ ಕುರಿತು ತಂದೆ ಸತೀಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮಗ ಸಂಪೂರ್ಣ ಆರೋಗ್ಯದಿಂದ ಇದ್ದಾನೆ. ನಿನ್ನೆ ಎಂಆರ್‍ಐ ಸೇರಿದಂತೆ ಎಲ್ಲಾ ತಪಾಸಣೆ ನಡೆಸಿದ್ದಾರೆ. ಎಲ್ಲವೂ ಸಾಮಾನ್ಯವಾಗಿದೆ ಅಂತಾ ವೈದ್ಯರು ಹೇಳಿದ್ದಾರೆ. ನಮ್ಮ ಮಗನನ್ನ ಉಳಿಸಿಕೊಟ್ಟ ಸಂಪೂರ್ಣ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು. ಇದನ್ನೂ ಓದಿ: ಕೊಳವೆ ಬಾವಿ ದುರಂತ- ಸಾವು ಗೆದ್ದ ಸಾತ್ವಿಕ್‌

    ಲಚ್ಯಾಣ ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಕೃಪೆಯಿಂದಲೇ ನಮ್ಮ ಮಗ ಮರಳಿದ್ದಾನೆ. ಕಾರಣ ಸಿದ್ಧಲಿಂಗ ಮುತ್ಯಾನ ಹೆಸರನ್ನ ಸಾತ್ವಿಕ್ ಗೆ ಮರು ನಾಮಕರಣ ಮಾಡಲಿದ್ದೇವೆ. ಇದೇ ತಿಂಗಳ 28 ರಂದು ಸಿದ್ಧಲಿಂಗ ಮಹರಾಜರ ಜಾತ್ರಾ ಮಹೋತ್ಸವ ಇದೆ. ಆಗ ಸಾತ್ವಿಕ್ ಮರುನಾಮಕರಣ ಕಾರ್ಯ ಮಾಡಲಿದ್ದೇವೆ. ಸಮಸ್ತ ಕುಟುಂಬಸ್ಥರು, ಸಂಬಂಧಿಕರು, ಗ್ರಾಮಸ್ಥರು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

    ಸಾತ್ವಿಕ್ ತಪಾಸಣೆಗೆ ಬಂದ ಜಿಲ್ಲಾ ಸರ್ಜನ್ ಶಿವಾನಂದ ಮಾಸ್ತಿಹೊಳಿ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಾತ್ವಿಕ್‍ಗೆ ಚಿಕಿತ್ಸೆ ನಡೆಯುತ್ತಿದ್ದು, ನಿನ್ನೆಯಿಂದಲೆ ತಪಾಸಣೆ ಕಾರ್ಯ ನಡೆದಿದೆ. ಸಾತ್ವಿಕ್ ನನ್ನ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾನೆ. ಎರಡು ದಿನ ನಿಗಾದಲ್ಲಿ ಇಡಲಾಗಿದೆ. ಸದ್ಯ ವೈದ್ಯರ ತಂಡದಿಂದ ನಡೆಯುತ್ತಿರುವ ತಪಾಸಣೆ ಕಾರ್ಯ ನಡೆಸುತ್ತಿದೆ ಎಂದಿದ್ದಾರೆ.

    ಉಪ್ಪಿಟ್ಟು ಅಂದ್ರೆ ಇಷ್ಟ: ಸಾತ್ವಿಕ್ ಆರೋಗ್ಯವಾಗಿದ್ದಾನೆ, ಭಯಪಡುವ ಅವಶ್ಯಕತೆ ಇಲ್ಲ. ಆತನಿಗೆ ಉಪ್ಪಿಟ್ಟು ಅಂದ್ರೆ ಇಷ್ಟ. ಹೀಗಾಗಿ ಬೆಳಗ್ಗೆ ಉಪ್ಪಿಟ್ಟು, ರಾಗಿ ಗಂಜಿ ಸೇವಿಸಿದ್ದಾನೆ. ಸದ್ಯ ಯಾವುದೇ ತೊಂದರೆ ಇಲ್ಲ. ಏನೇ ಹೆಚ್ಚು ಕಮ್ಮಿ ಆಗುವುದಿದ್ದರೆ 48 ಗಂಟೆ ಒಳಗೆ ಆಗುತ್ತೆ. ಕಾರಣ 48 ಗಂಟೆ ನಿಗಾದಲ್ಲಿ ಇಟ್ಟಿದ್ದೇವೆ ಅಷ್ಟೆ. ಮಗುವಿನ ಆರೋಗ್ಯ ಸ್ಥಿತಿ ನೋಡಿ ಡಿಸ್ಚಾರ್ಜ್ ಮಾಡುತ್ತೇವೆ. ಇದೊಂದು ವಿಸ್ಮಯ ಅಂತಾನೆ ಹೇಳಬೇಕು. ಈ ರೀತಿ 16 ತಿಂಗಳ ಮಗು ಯಾವುದೆ ತೊಂದರೆ ಇಲ್ಲದೆ ಬದುಕುಳಿದಿದ್ದು ದೇವರ ಕೃಪೆ ಅಂತಾನೇ ಹೇಳಬೇಕು ಎಂದು ಅವರು ತಿಳಿಸಿದರು.

  • ಚಿತ್ರೀಕರಣ ಮುಗಿದ ನಂತರ ಫೋಟೋಶೂಟ್ ಮಾಡಿದ ‘ಅಥಿ’ ತಂಡ

    ಚಿತ್ರೀಕರಣ ಮುಗಿದ ನಂತರ ಫೋಟೋಶೂಟ್ ಮಾಡಿದ ‘ಅಥಿ’ ತಂಡ

    ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ಸ್ ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಹೆಚ್ಚಿಸಿಕೊಂಡು ಬಂದಿರುವ ಚಿತ್ರ ‘ಅಥಿ’ (Athi). ಹಾಗೆ ನೋಡಿದರೆ ಕನ್ನಡದಲ್ಲಿ ಗಂಡ-ಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ಈವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ನಾವಿನ್ನಲಿ ಅಥಿಯ ಮೂಲಕ ಅನಾವರಣ ಮಾಡುತ್ತಿದ್ದೇವೆ ಅನ್ನೋದು ಸ್ವತಃ ಚಿತ್ರದ ನಾಯಕನಟರೂ ಆಗಿರುವ, ನಿರ್ದೇಶಕ ಲೋಕೇಂದ್ರ ಸೂರ್ಯ (Lokendra Surya) ಅವರ ಮಾತು.

    ʻಅಟ್ಟಯ್ಯ ವರ್ಸಸ್ ಹಂದಿ ಕಾಯೋಳುʼ ಎನ್ನುವ ಚಿತ್ರದ ಮೂಲಕ ಚಿತ್ರರಂಗದ ಅಚ್ಛರಿ ಮೂಡಿಸಿದವರು ಲೋಕೇಂದ್ರ. ಆ ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ , ಕಾಡುವ ಕತೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ ʻಕುಗ್ರಾಮʼ ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ.

    ಸದ್ಯ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ʻಅಥಿʼ ಚಿತ್ರಕ್ಕಾಗಿ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಈ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ಮೇ 13ರ ನಂತರ ʻಅಥಿʼ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಚಿತ್ರದ ನಿರ್ಮಾಪಕರಾದ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿದ್ದಾರೆ. ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ  ಮಾಡಿರುವುದು ಈ ಫೋಟೋಶೂಟ್ ನ ಮತ್ತೊಂದು ವಿಶೇಷ.

    ಇನ್ನುಳಿದಂತೆ ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ ಅಥಿ ಐ ಲವ್ ಯು ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ (Shravya Rao) ಅಂದ್ರೆ ಸಾತ್ವಿಕ (Satvik) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪರದೆಯನ್ನು ಬಹುತೇಕ ಸಾತ್ವಿಕ ಆವರಿಸಿಕೊಂಡಿದ್ದು ಬಿಡುಗಡೆಗೆ ಕಾತರದಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಸಾತ್ವಿಕ ಹೇಳಿದ್ದಾರೆ. ಅಲ್ಲದೆ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.