Tag: ಸಾಜಿದ್

  • ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

    ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಕಳೆದ ವರ್ಷ ಅಂತ್ಯದಲ್ಲಿ ‘ಜೈಲರ್’ (Jailer) ಮೂಲಕ ಸಕ್ಸಸ್ ಕಂಡಿದ್ದರು. ಆದರೆ ಈ ವರ್ಷ ಶುರುವಿನಲ್ಲೇ ‘ಲಾಲ್ ಸಲಾಮ್’ ಸಿನಿಮಾ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲಿನ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಿರ್ಮಾಪಕನ ಜೊತೆ ಸಿನಿಮಾ ಮಾಡಲು ತಲೈವಾ ಮುಂದಾಗಿದ್ದಾರೆ.

    ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಮ್’ (Lal Salam) ಚಿತ್ರದಲ್ಲಿ ರಜನಿಕಾಂತ್ ಅವರು ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಎಲ್ಲರ ನಿರೀಕ್ಷೆಯಂತೆ ಗಳಿಕೆ ಮಾಡಲಿಲ್ಲ. ಈಗ ಬಾಲಿವುಡ್‌ನ ಫೇಮಸ್ ನಿರ್ಮಾಪಕ ಸಾಜಿದ್ ನಾಡಿಯಾವಾಲ (Sajid Nadiadwala) ಜೊತೆ ತಲೈವಾ ಸಿನಿಮಾ ಮಾಡ್ತಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ನಿರ್ಮಾಪಕ ಸಾಜಿದ್ ಅವರೇ ಮಾಹಿತಿ ನೀಡಿದ್ದಾರೆ.

    ರಜನಿಕಾಂತ್ ಜೊತೆ ಕೆಲಸ ಮಾಡುವುದು ಅತ್ಯಂತ ಗೌರವಯುತ ಘಳಿಗೆ. ನಾವು ಒಟ್ಟಿಗೆ ಪ್ರಯಾಣ ಆರಂಭಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ನಿರ್ಮಾಪಕ ಸಾಜಿದ್ ಸೋಷಿಯಲ್ ಮೀಡಿಯಾದಲ್ಲಿ ತಲೈವಾ ಜೊತೆಗಿನ ಫೋಟೋ ಶೇರ್ ಮಾಡಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ತಲೈವಾ ಹೊಸ ಚಿತ್ರ ಯಾವ ಭಾಷೆಯಲ್ಲಿ ಮೂಡಿ ಬರಲಿದೆ? ನಿರ್ದೇಶಕ, ತಂತ್ರಜ್ಞರು ಯಾರು? ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎನ್ನುವ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗುತ್ತಿರುವುದುರಿಂದ ಹೆಚ್ಚಿನ ನಿರೀಕ್ಷೆ ಮೂಡಿದೆ.

    ‘ಜೈ ಭೀಮ್‌’ ನಿರ್ದೇಶಕನ ಜೊತೆ ಮತ್ತು ಲೋಕೇಶ್‌ ಕನಕರಾಜ್‌ ಜೊತೆ ಹೊಸ ಸಿನಿಮಾ ರಜನಿಕಾಂತ್‌ ಮಾಡ್ತಿದ್ದಾರೆ. ಇದರ ಜೊತೆ ಜೈಲರ್‌ ಪಾರ್ಟ್‌ 2ಗೆ ಕಥೆ ರೆಡಿಯಾಗುತ್ತಿದೆ. ಒಪ್ಪಿಕೊಂಡ ಮೊದಲ 2 ಸಿನಿಮಾಗಳು ಮುಗಿದ ಮೇಲೆ ತಲೈವಾ ಜೈಲರ್‌ 2ಗೆ ಸಾಥ್‌ ನೀಡಲಿದ್ದಾರೆ.

  • ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ರಾಖಿ ಸಾವಂತ್ ‘ಡುಮ್ಮಿ’ ಎಂದು ಕೆಣಕಿದ ನಟಿ ಶೆರ್ಲಿನ್ ಚೋಪ್ರಾ

    ಲ್ಲದ ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುತ್ತಾರೆ ನಟಿಯರಾದ ರಾಖಿ ಸಾವಂತ್ (Rakhi Sawant) ಮತ್ತು ಶೆರ್ಲಿನ್ ಚೋಪ್ರಾ (Sherlina Chopra). ಮದುವೆ, ಬಾಯ್ ಫ‍್ರೆಂಡ್, ಬ್ರೇಕಪ್ ಎನ್ನುತ್ತಾ ದಿನಕ್ಕೊಂದು ಸದ್ದು ಮಾಡುವ ಚಾಳಿ ರಾಖಿಗಿದ್ದರೆ, ಮೀಟೂ ಕಾರಣದಿಂದಾಗಿ ಶೆರ್ಲಿನ್ ಚೋಪ್ರಾ ಇತ್ತೀಚೆಗಂತೂ ಸಾಕಷ್ಟು ಸುದ್ದಿ ಆಗುತ್ತಿದ್ದಾಳೆ. ಈ ಇಬ್ಬರ ನಡುವೆ ಯಾವತ್ತೂ ಕೋಲ್ಡ್ ವಾರ್ ಇದ್ದೇ ಇದೆ. ಇದು ಮತ್ತೊಮ್ಮೆ ಸಾಬೀತಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿರುವ ಶೆರ್ಲಿನ್ ಚೋಪ್ರಾ, ಖಡಕ್ಕಾಗಿಯೇ ರಾಖಿಗೆ ಸಂದೇಶವೊಂದನ್ನು ನೀಡಿದ್ದಾರೆ. ರಾಖಿ ನಾನ್ ಸೆನ್ಸ್ ಎಂದು ಮೂದಲಿಸಿದ್ದಾರೆ. ರಾಖಿ ಮೂರ್ನಾಲ್ಕು ತಿಂಗಳಿಗೊಮ್ಮೆ ಬಾಯ್ ಫ್ರೆಂಡ್ ಬದಲಾಯಿಸುತ್ತಾಳೆ. ಗಂಡನನ್ನೂ ಬದಲಾಯಿಸುತ್ತಾಳೆ. ಆಕೆ ಡುಮ್ಮಿ (Dummy). ಜಿಮ್ ಮುಂದೆ ಓಡಾಡುತ್ತಾಳೆಯೇ ಹೊರತು, ಜಿಮ್ ನಲ್ಲಿ ಕಷ್ಟ ಪಡಲ್ಲ ಎಂದು ಕಾಮೆಂಟ್ ಮಾಡಿದ್ದಾಳೆ. ಇದನ್ನೂ ಓದಿ:ಅಮಿತಾಭ್ ಮೊಮ್ಮಗಳ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಟ ಸಿದ್ಧಾಂತ್

    ರಾಖಿ ಮೇಲೆ ಶೆರ್ಲಿನ್ ಕೋಪ ಮಾಡಿಕೊಳ್ಳಲು ಕಾರಣ ಸಾಜಿದ್ (Sajid) ಮೇಲೆ ರಾಖಿ ತೋರಿಸಿದ ಅನುಕಂಪ. ಹಿಂದಿ ಬಿಗ್ ಬಾಸ್ (Bigg Boss) ಮನೆಯಲ್ಲಿ ಸದ್ಯ ನಿರ್ದೇಶಕ ಸಾಜಿದ್ ಇದ್ದಾನೆ. ಅವನ ಮೇಲೆ ಶೆರ್ಲಿನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಸಾಜಿದ್ ನನ್ನು ಮನೆಯಿಂದ ಆಚೆ ಹಾಕಿ ಎಂದು ಗುಡುಗಿದ್ದಳು. ಅವನೊಬ್ಬ ಅವಿವೇಕಿ ಎಂದೂ ಜರಿದಿದ್ದರು. ಈ ಮಾತಿಗೆ ಸಾಜಿದ್ ಮೇಲೆ ರಾಕಿ ಅನುಕಂಪ ತೋರಿದ್ದರು. ಸಾಜಿದ್ ನನ್ನು ಬಿಟ್ಟುಬಿಡಿ ಎಂದು ಹೇಳಿದ್ದರು.

    ಸಾಜಿದ್ ಪರ ರಾಖಿ ಸಾವಂತ್ ಬ್ಯಾಟಿಂಗ್ ಮಾಡಿದಳು ಎನ್ನುವ ಕಾರಣಕ್ಕಾಗಿ ಶೆರ್ಲಿನ್ ಇದೀಗ ತಿರುಗಿ ಬಿದ್ದಿದ್ದಾಳೆ. ರಾಖಿ ದೇಹ ಬೆಳೆಸಿದ್ದಾಳೆ. ಅದನ್ನು ಕರಗಿಸಬೇಕು ಅಂತ ಜಿಮ್ ಮುಂದೆ ತಿರುಗುತ್ತಾಳೆ. ಜಿಮ್ ಒಳಗೆ ಹೋಗಬೇಕು, ಮೆಂಬರ್ ಶಿಪ್ ತಗೆದುಕೊಳ್ಳಬೇಕು, ಕಷ್ಟ ಪಡಬೇಕು. ಆಕೆಗೆ ಕಷ್ಟ ಪಡೋದು ಏನು ಅಂತಾನೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]