Tag: ಸಾಗರ

  • 5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    5 ದಿನಗಳ ಹಿಂದಷ್ಟೇ ವಸತಿ ಶಾಲೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಸಾವು

    – ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ

    ಶಿವಮೊಗ್ಗ: ಖಾಸಗಿ ವಸತಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಾಗರದಲ್ಲಿ (Sagar) ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ (13) ಎಂದು ಗುರುತಿಸಲಾಗಿದೆ. ಈಕೆ ಸಾಗರದ ವನಶ್ರೀ ವಸತಿ ಶಾಲೆಗೆ (Residential School) ಕಳೆದ ಐದು ದಿನಗಳ ಹಿಂದೆ ದಾಖಲಾಗಿದ್ದಳು. ಗುರುವಾರ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದ ತೇಜಸ್ವಿಯನ್ನು ಶಾಲೆಯ ಶಿಕ್ಷಕರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರಿಂದ ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರ ಮೆರವಣಿಗೆ

    ಇದೀಗ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ (McGann Hospital) ಮರಣೋತ್ತರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: 32 ವರ್ಷದ ಗೆಳತಿಯನ್ನು ಕೊಂದು ಪೀಸ್ ಪೀಸ್ ಮಾಡಿದ 56 ವರ್ಷದ ವ್ಯಕ್ತಿ ಅರೆಸ್ಟ್

  • ಶರಾವತಿ ಹಿನ್ನೀರಿನಲ್ಲಿ ಕಡಿಮೆಯಾದ ನೀರಿನ ಹರಿವು – ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ

    ಶರಾವತಿ ಹಿನ್ನೀರಿನಲ್ಲಿ ಕಡಿಮೆಯಾದ ನೀರಿನ ಹರಿವು – ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ

    ಶಿವಮೊಗ್ಗ: ಶರಾವತಿ (Sharavathi) ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆ ಶಿವಮೊಗ್ಗ (Shivamogga) ಜಿಲ್ಲೆ ಸಾಗರ (Sagara) ತಾಲೂಕಿನ ಕಾರ್ಗಲ್ – ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್ (Muppane Launch) ಮಾರ್ಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

    ಶುಕ್ರವಾರ ಬೆಳಗ್ಗೆ ಲಾಂಚ್ ಸಂಚಾರದ ವೇಳೆ ಮರದ ದಿಮ್ಮಿ ಹಾಗೂ ಮರಳಿನ ದಿಬ್ಬಗಳು ಲಾಂಚ್ ತಳಭಾಗಕ್ಕೆ ತಾಗಿದೆ. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಇದನ್ನೂ ಓದಿ: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ: ಜಗದೀಶ್ ಶೆಟ್ಟರ್

    ಹೊಳೆಬಾಗಿಲು ಲಾಂಚ್‌ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ತುಮರಿ, ಮಾರಲಗೋಡು, ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿದಂತೆ ಜೋಗ ಕಾರ್ಗಲ್ ತೆರಳಲು ಹಾಗೂ ಸಿಗಂದೂರು ಪ್ರವಾಸಿಗರು ಈ ಸುಗಮ ಮಾರ್ಗದ ಮೊರೆ ಹೋಗಿದ್ದರು. ಸದ್ಯ ಇದು ಕೂಡ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

    ಸದ್ಯ ಈ ಭಾಗದಲ್ಲಿ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಆಧರಿಸಿ ಲಾಂಚ್ ಸೇವೆ ಮತ್ತೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: New Parliament Building ಉದ್ಘಾಟನೆ – ಈ ಭವನ ಹಿರಿಮೆ, ವಿಶ್ವಾಸದ ಸಂಕೇತ: ಮೋದಿ

  • ರಸ್ತೆ ಅಪಘಾತದಲ್ಲಿ ಪಾದಾಚಾರಿ ಸಾವು

    ರಸ್ತೆ ಅಪಘಾತದಲ್ಲಿ ಪಾದಾಚಾರಿ ಸಾವು

    ಶಿವಮೊಗ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ (Pedestrian) ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ಸಾಗರದಲ್ಲಿ (Sagara) ನಡೆದಿದೆ.

    ಶಿವಕುಮಾರ್ (56) ಮೃತ ದುರ್ದೈವಿ. ಇವರು ಆನಂದಪುರದಿಂದ ಮನೆ ಕಡೆ ತೆರಳುವ ವೇಳೆ ಈ ಘಟನೆ ನಡೆದಿದ್ದು, ಯಡಹಳ್ಳಿಯ ಪೆಟ್ರೋಲ್ ಬಂಕ್‌ನಿಂದ ಅಣತಿ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದು ಅಪಘಾತ (Accident) ಮಾಡಿ ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲಾ ಆವರಣದಲ್ಲಿ ಯುವಕನ ಶವ ಪತ್ತೆ

    ಘಟನೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಶಿವಕುಮಾರ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಡಾ.ಬಿ.ಆರ್ ಅಂಬೇಡ್ಕರ್‌ಗೆ ಅವಮಾನ – ವೀಡಿಯೋ ಹರಿಬಿಟ್ಟ ಯುವತಿ ಅರೆಸ್ಟ್

  • ಕಾಂಗ್ರೆಸ್‍ನಲ್ಲಿ ಬಂಡಾಯದ ಸಿಡಿಲು – ಕೈ ಕಟ್ಟಾಳು ಕಾಗೋಡು ಪುತ್ರಿ ಬಿಜೆಪಿಗೆ ಸೇರ್ಪಡೆ

    ಕಾಂಗ್ರೆಸ್‍ನಲ್ಲಿ ಬಂಡಾಯದ ಸಿಡಿಲು – ಕೈ ಕಟ್ಟಾಳು ಕಾಗೋಡು ಪುತ್ರಿ ಬಿಜೆಪಿಗೆ ಸೇರ್ಪಡೆ

    ಬೆಂಗಳೂರು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರ (Kagodu Timmappa) ಪುತ್ರಿ ಡಾ.ರಾಜನಂದಿನಿ (Rajanandini) ಬುಧವಾರ ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

    ಸಾಗರ (Sagar) ಕ್ಷೇತ್ರದ ಕೈ ಟಿಕೆಟ್ ತಪ್ಪಿದ ಹಿನ್ನೆಲೆ ಅವರು ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಟಿಕೆಟ್‍ಗಾಗಿ ಬಾರೀ ಲಾಬಿ ನಡೆಸಿದ್ದರು. ಆದರೆ ಕಾಗೋಡು ತಿಮ್ಮಪ್ಪ ಅವರ ಸೋದರ ಅಳಿಯ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಈ ಬಾರಿಯ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಧಾನಗೊಂಡು ಅವರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಂಡಾಯ..!

    ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಮಾತನಾಡಿ, ನಾಡು ಕಂಡ ಅಪರೂಪದ ರಾಜಕಾರಣಿ, ಕಾಗೋಡು ತಿಮ್ಮಪ್ಪ ಪುತ್ರಿ ಕಾಂಗ್ರೆಸ್ (Congress) ಸ್ಥಾನಮಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ಪಕ್ಷಕ್ಕೆ ಶಕ್ತಿ ತಂದಿದೆ. ಹಿಂದುಳಿದ ವರ್ಗಕ್ಕೆ ಸೇರಿದ ರಾಜನಂದಿನಿ ವೃತ್ತಿಯಲ್ಲಿ ವೈದ್ಯರು. ಇವರ ಸೇರ್ಪಡೆಯಿಂದ ನಮ್ಮ ಅಭ್ಯರ್ಥಿಗಳು ಗೆಲುವಿಗೆ ಸಹಕಾರಿಯಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

  • 47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್

    47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್

    ಕಾರವಾರ: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‍ನ ಸ್ಟೇರಿಂಗ್ ತುಂಡಾಗಿ ಕಂದಕಕ್ಕೆ ಉರುಳಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (Siddapura) ತಾಲೂಕಿನ 16ನೇ ಮೈಲಿಕಲ್ ಬಳಿ ನಡೆದಿದೆ.

    ಹಳಿಯಾಳದಿಂದ (Haliyala) ಶಿವಮೊಗ್ಗ (Shivamogga) ಜಿಲ್ಲೆಯ ಸಾಗರಕ್ಕೆ (Sagar) 47 ಜನ ಪ್ರಯಾಣಿಕರನ್ನು ಕರೆದೊಯ್ಯುತಿದ್ದ ಬಸ್ ತಿರುವಿನಲ್ಲಿ ಚಲಿಸುತ್ತಿದ್ದ ವೇಳೆ ಸ್ಟೇರಿಂಗ್ ತುಂಡಾಗಿದೆ. ಇದರಿಂದ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿದೆ. ಉರುಳಿದ ಬಸ್ ಮರಕ್ಕೆ ಡಿಕ್ಕಿಯಾಗಿ ತಡೆದು ನಿಂತಿದ್ದು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

    ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಒಂದೆರಡು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಗಂಡ-ಹೆಂಡ್ತಿ ಒಟ್ಟಿಗೆ ಕೂತು ಎಣ್ಣೆ ಹೊಡೆದ್ರು- ಜಗಳವಾಡಿ 12ನೇ ಪತ್ನಿಯನ್ನೇ ಮುಗಿಸಿದ!

  • ಕೃತ್ಯಕ್ಕೆ ಹಿಜಬ್‌ ಲಿಂಕ್‌ – ಸಹೋದರಿಗೆ ಕಾಟ ಕೊಟ್ಟಿದ್ದಕ್ಕೆ ಭಜರಂಗ ದಳ ಕಾರ್ಯಕರ್ತನ ಹತ್ಯೆಗೆ ಯತ್ನ

    ಕೃತ್ಯಕ್ಕೆ ಹಿಜಬ್‌ ಲಿಂಕ್‌ – ಸಹೋದರಿಗೆ ಕಾಟ ಕೊಟ್ಟಿದ್ದಕ್ಕೆ ಭಜರಂಗ ದಳ ಕಾರ್ಯಕರ್ತನ ಹತ್ಯೆಗೆ ಯತ್ನ

    ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ (Bajrang Dal) ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಯತ್ನ ಎಂಬುದು ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

    ತನ್ನ ಸಹೋದರಿಗೆ ಸುನಿಲ್ ಕಾಟ ಕೊಡುತ್ತಿದ್ದಾನೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಸಮೀರ್ ಈ ಕೊಲೆ ಯತ್ನ ನಡೆಸಿದ್ದಾನೆ. ಸಮೀರ್ ಸಹೋದರಿಗೆ ಕಿರುಕುಳ ಕೊಡುತ್ತಿದ್ದ ಎಂಬುದಕ್ಕೆ ಕರೆ ಮಾಡಿದ್ದಕ್ಕೆ ದಾಖಲೆ ಸಿಕ್ಕಿದೆ ಎಂದು ಶಿವಮೊಗ್ಗ ಎಸ್.ಪಿ. ಮಿಥುನ್ (Shivamogga SP Mithun) ತಿಳಿಸಿದ್ದಾರೆ.

    ಒಂದು ಬಾರಿ ನಿನ್ನ ತಂಗಿ ನಂಬರ್ ಕೊಡು ಎಂದು ಸುನಿಲ್ ನೇರವಾಗಿ ಕೇಳಿದ್ದಕ್ಕೆ ಸಮೀರ್ ಸಿಟ್ಟಾಗಿದ್ದ. ಈ ಸಂದರ್ಭದಲ್ಲಿ ನನ್ನ ತಂಗಿಯ ತಂಟೆಗೆ ಬರಬೇಡ ಎಂದು ಎಚ್ಚರಿಸಿದ್ದ. ಆದರೂ ಸುನಿಲ್ ತಂಗಿಗೆ ಕಿರುಕುಳ ನೀಡಿದ್ದಕ್ಕೆ ಕೊಲೆಗೆ ಯತ್ನಿಸಿದ್ದಾನೆ ಎಂದು ಎಂದು ಎಸ್‍ಪಿ ವಿವರಿಸಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ವೈಯಕ್ತಿಕ ವಿವಾದಗಳಿದ್ದರೆ  ಠಾಣೆಗೆ ದೂರು ನೀಡಬೇಕು. ಯಾರೂ ಅಪರಾಧ ಕೃತ್ಯಕ್ಕೆ ಇಳಿಯಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಂದೂಗಳ ಭಾವನೆ ಕೆಣಕಿದಾಗ ಸುಮ್ಮನಿರಬೇಕಾ – ಭಜರಂಗದಳ ಗುಡುಗು

    ಸಾಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರೋಪಿ ಸಮೀರ್ ಸಹೋದರಿ ಸುನಿಲ್ ಬಗ್ಗೆ ಆರೋಪ ಮಾಡಿದ್ದು, ಆತ ತನಗೆ ಹಿಜಬ್ (Hijab) ತೆಗೆಯುವಂತೆ ಪೀಡಿಸುತ್ತಿದ್ದ. ಕಳೆದ ಹಿಜಬ್ ಗಲಾಟೆ ಬಳಿಕ ಬಹಳಷ್ಟು ಬಾರಿ ಹಿಜಬ್‌ ತೆಗೆಯುವಂತೆ ಕಾಟ ಕೊಡುತ್ತಿದ್ದ ಎಂದು ದೂರಿದ್ದಾರೆ. ಅಲ್ಲದೇ ನನ್ನ ಅಣ್ಣ ಆತನಿಗೆ ಹೆದರಿಸಲು ಹೋಗಿದ್ದ ಅಷ್ಟೇ ಎಂದು ತಿಳಿಸಿದ್ದಾರೆ.

    ಎಸ್‍ಪಿ ಎಸ್.ಪಿ. ಮಿಥುನ್ ಹೇಳಿಕೆ ಬಗ್ಗೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾರಾದರೂ ತಂಗಿ ಫೋನ್ ನಂಬರ್ ಕೊಡಿ ಎಂದು ಅಣ್ಣನನ್ನು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿ ಸಮೀರ್ ಸೇರಿ ಮೂವರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆಪಿಸಿಸಿ ವಕ್ತಾರ ದಿವಾಕರ್‌ ಆಪ್‌ ಸೇರ್ಪಡೆ

    ಕೆಪಿಸಿಸಿ ವಕ್ತಾರ ದಿವಾಕರ್‌ ಆಪ್‌ ಸೇರ್ಪಡೆ

    ಬೆಂಗಳೂರು: ಖ್ಯಾತ ವಕೀಲ ಹಾಗೂ ಕೆಪಿಸಿಸಿ ವಕ್ತಾರ ದಿವಾಕರ್ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.

    ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಆಮ್ ಆದ್ಮಿ ಪಕ್ಷವನ್ನು ದಿವಾಕರ್‌ ಸೇರಿದ್ದಾರೆ.

    ಮುಂದಿನ ವಿಧಾನಸಭೆ ಚುನಾವಣೆಯಲ್ಲಿ‌  ಶಿವಮೊಗ್ಗದ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ದಿವಾಕರ್ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಶಿಕ್ಷಣ ನಿಷೇಧಿಸಿ ತನ್ನ ಪುತ್ರಿಯರನ್ನು ಶಾಲೆಗೆ ಸೇರಿಸಿದ ತಾಲಿಬಾನ್‌ ವಕ್ತಾರ

  • ಗೃಹ ಸಚಿವರ ತವರಲ್ಲೇ ಹೇಯಕೃತ್ಯ – ಹೆಂಡತಿಯ ಅಪ್ರಾಪ್ತ ತಂಗಿ ಮೇಲೆ ಅತ್ಯಾಚಾರ

    ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರಲ್ಲೇ ಹೇಯಕೃತ್ಯವೊಂದು ನಡೆದಿದೆ. ಹೆಂಡತಿಯ ಅಪ್ರಾಪ್ತ ತಂಗಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಶಿವಮೊಗ್ಗದ ಜಿಲ್ಲೆಯಲ್ಲಿ ನಡೆದಿದೆ.

    ತನ್ನ ಪತ್ನಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಶ್ವ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶವ ಸಾಗಿಸ್ತಿದ್ದಾಗ ಡಿಸಿ ಕಚೇರಿ ಮುಂದೆಯೇ ಬೈಕ್ ಸ್ಕಿಡ್- ಮಹಿಳೆಯ ಕೊಲೆ ರಹಸ್ಯ ಬಯಲು

    ಬಂಧಿತ ಆರೋಪಿಯು ಸಾಗರ ತಾಲೂಕಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ತಂಗಿಯನ್ನು ಆರೋಪಿ ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ಹೆಂಡತಿಯ ತಂಗಿಯ ಜೊತೆ ವಿಶ್ವ ಸಲುಗೆ ಬೆಳೆಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗರ್ಭಿಣಿಯಾಗಿದ್ದ ಈಕೆಗೆ ಹೊಟ್ಟೆ ನೋವು ಕಂಡು ಬಂದು ಮನೆಯಲ್ಲಿಯೇ ಮಗು ಜನನವಾಗುತ್ತದೆ. ಮಗುವನ್ನು ಆರೋಪಿ ವಿಶ್ವ ಮನೆಯ ಹಿತ್ತಲಿನಲ್ಲಿಯೇ ಹೂತು ಹಾಕಿದ್ದು, ಮನೆಯವರೇ ಈ ದುಷ್ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಈಗ ಸಂತ್ರಸ್ತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಶ್ವನನ್ನು ಪೋಕ್ಸೊ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲವ್ವರ್‌ ಭೇಟಿ ಮಾಡಲು ಗ್ರಾಮದ ಕರೆಂಟ್ ಕಟ್ ಮಾಡುತ್ತಿದ್ದ ಲೈನ್‌ಮ್ಯಾನ್

  • ಶರಾವತಿ ಹಿನ್ನೀರಿನಲ್ಲಿ ಭರದಿಂದ ಸಾಗುತ್ತಿದೆ ರಾಜ್ಯದ 2ನೇ ಅತಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ

    ಶರಾವತಿ ಹಿನ್ನೀರಿನಲ್ಲಿ ಭರದಿಂದ ಸಾಗುತ್ತಿದೆ ರಾಜ್ಯದ 2ನೇ ಅತಿ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ

    -ನನಸಾಗುತ್ತಿದೆ ದ್ವೀಪದ ಜನರ ದಶಕಗಳ ಕನಸು

    ಶಿವಮೊಗ್ಗ: ಇದು ಸರಿಸುಮಾರು ದಶಕಗಳ ಕನಸು. ಈ ಊರಿನ ಜನರಿಗೆ ಇಲ್ಲೊಂದು ಸೇತುವೆ ಬೇಕಾಗಿತ್ತು. ಪಕ್ಕದ ತಾಲೂಕು ಕೇಂದ್ರಕ್ಕೆ 40 ಕಿ.ಮೀ. ಕ್ರಮಿಸುವ ಬದಲು ಬರೋಬ್ಬರಿ 150 ಕಿ.ಮೀ. ಕ್ರಮಿಸಬೇಕಿತ್ತು. ಹೀಗಾಗಿ ಸೇತುವೆ ನಿರ್ಮಾಣ ಮಾಡಿ ಅಂತಾ ಈ ಊರಿನ ಜನರು ಸಾಕಷ್ಟು ಬಾರಿ ಹೋರಾಟ ಮಾಡಿ, ಮಾಡಿ ಸುಸ್ತಾಗಿದ್ರು. ಆದ್ರೆ ಕೊನೆಗೂ ಈ ಗ್ರಾಮದ ಜನರಿಗೆ ಸೇತುವೆ ಭಾಗ್ಯ ಒದಗಿ ಬಂದಿದೆ. ರಾಜ್ಯದಲ್ಲಿಯೇ 2ನೇ ಅತಿ ದೊಡ್ಡ ಸೇತುವೆ ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ನೀರಿನಾಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

    ಇದು ರಾಜ್ಯಕ್ಕೆ ಬೆಳಕು ನೀಡಿ, ತಾವು ಕತ್ತಲಲ್ಲಿ ಇರುವ ಜನರಿಗೆ ಖುಷಿ ನೀಡುವ ಕಥೆ. ಶರಾವತಿ ಹಿನ್ನೀರಿನ ಜನರು ರಾಜ್ಯಕ್ಕೆ ಬೆಳಕು ನೀಡಲು ಹೋಗಿ ತಮ್ಮ ಸರ್ವಸ್ವವನ್ನೇ ಕಳೆದುಕೊಂಡಿದ್ದರು. ಈ ಊರಿನ ಜನರಿಗೆ ತಾಲೂಕು ಕೇಂದ್ರ ಹತ್ತಿರವಿದ್ದರೂ, ಸಂಪರ್ಕ ಕೊಂಡಿಯೇ ಇರಲಿಲ್ಲ. ಮುಳುಗಡೆ ಪ್ರದೇಶದಲ್ಲಿರುವ ಅಂಬಾರಗೊಡ್ಲು, ಕಳಸವಳ್ಳಿ, ತುಮರಿ, ಬ್ಯಾಕೋಡು ಮತ್ತಿತರ ಗ್ರಾಮದ ಜನರಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೇಂದ್ರಕ್ಕೆ ತೆರಳಬೇಕಂದ್ರೆ ಕೇವಲ 40 ಕಿ.ಮೀ. ದೂರವಿದ್ದರೂ ಸುಮಾರು 150 ಕೀ.ಮೀ. ದೂರ ಕ್ರಮಿಸುವ ಅನಿವಾರ್ಯವಿದೆ. ಹೀಗಾಗಿ ಕಳೆದ 1963 ರಿಂದಲೂ ಈ ಒಂದು ಸೇತುವೆಗಾಗಿ ನಿರಂತರ ಹೋರಾಟ ನಡೆದುಕೊಂಡು ಬಂದಿತ್ತು. ಇದೀಗ ಸೇತುವೆ ಕಾಮಗಾರಿ ಆರಂಭಗೊಂಡಿದ್ದು ಇಲ್ಲಿನ ಜನರು ನಿಟ್ಟುಸಿರು ಬಿಡುವಂತಾಗಿದೆ.

    ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸಿಗಂಧೂರು ಶ್ರೀ ಕ್ಷೇತ್ರಕ್ಕೆ ತೆರಳುವ ಮಾರ್ಗದ ಹಿನ್ನೀರಿನಲ್ಲಿ 18 ಗೋಪುರಗಳನ್ನು ಒಳಗೊಂಡ 2.1 ಕಿ.ಮೀ. ಉದ್ದ, 16 ಮೀ. ಅಗಲದ ಕೇಬಲ್ ಮಾದರಿಯ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ ಶರಾವತಿ ಹಿನ್ನೀರು ಪ್ರದೇಶದ ಜನರು ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು. ದ್ವೀಪ ಪ್ರದೇಶದ ಜನರು ಸಂಚಾರಕ್ಕೆ ಇಂದಿಗೂ ಲಾಂಚ್ ನ್ನೇ ಅವಲಂಬಿಸಿದ್ದಾರೆ. ತಾಲೂಕು ಕೇಂದ್ರ ಸಾಗರಕ್ಕೆ ಬರಲು ಹರಸಾಹಸಪಡುವ ಇಲ್ಲಿನ ಜನರು ಸೇತುವೆ ಬೇಕು ಎಂದು ಕಳೆದ ನಾಲ್ಕು ದಶಕಗಳಿಂದ ಹೋರಾಟ ನಡೆಸಿದ್ದರು. ಇದೆಲ್ಲದರ ಪರಿಣಾಮ ಇದೀಗ ಈ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಟೆಂಡರ್ ನಿಯಮಾವಳಿ ಪ್ರಕಾರ 2023 ನೇ ಜೂನ್ ಒಳಗೆ ಈ ಕಾಮಗಾರಿ ಮುಕ್ತಾಯಗೊಳ್ಳಬೇಕಿದೆ.

    ಅಷ್ಟಕ್ಕೂ ಈ ತುಮರಿ ಸೇತುವೆ ರಾಜ್ಯದಲ್ಲಿಯೇ 2 ನೇ ಅತಿ ದೊಡ್ಡ ಸೇತುವೆಯಾಗಿ ನಿರ್ಮಾಣಗೊಳ್ಳಲಿದೆ. ಸೇತುವೆಯು 2.125 ಮೀಟರ್ ಉದ್ದ, 16 ಮೀ. ಅಗಲವಾಗಿ ನಿರ್ಮಾಣಗೊಳ್ಳುತ್ತಿದೆ. 177 ಮೀ. ಗೆ ಒಂದರಂತೆ ಪಿಲ್ಲರ್ ಗಳನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಅಂಬಾರಗೊಡ್ಲುವಿನಿಂದ 1 ಕಿ.ಮೀ., ಕಳಸವಳ್ಳಿಯಿಂದ 3 ಕಿ.ಮೀ. ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಇಕ್ಕೇರಿಯಿಂದ ಮರಕುಟಕ ಗ್ರಾಮದವರೆಗಿನ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಲಾಗಿದೆ.

    2008ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದರು. ನಂತರ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಪ್ರತಿ ಬಾರಿ ಲೋಕಸಭೆ, ವಿಧಾನಸಭೆ ಚುನಾವಣೆ ಬಂದಾಗಲೆಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸೇತುವೆ ಬಗ್ಗೆ ಆಶ್ವಾಸನೆ ನೀಡುವುದು, ಅದು ಜಾರಿಗೆ ಬಾರದೇ ಇರುವುದು ನಡೆಯುತ್ತಿತ್ತು. ಹೀಗಾಗಿ ಸೇತುವೆ ಆಗುತ್ತದೆ ಎಂಬ ವಿಶ್ವಾಸವನ್ನೇ ಈ ಭಾಗದ ಜನರು ಕಳೆದುಕೊಂಡಿದ್ದರು.

    ನಂತರ ಹೋರಾಟ, ಪಾದಯಾತ್ರೆ, ಮೂಲಕ ಸರ್ಕಾರವನ್ನು ಎಚ್ಚರಿಸುವಂತಹ ಕೆಲಸವನ್ನು ಈ ಭಾಗದ ಜನರು ಮಾಡಿದ ಪ್ರತಿಫಲವಾಗಿ 2018ರಲ್ಲಿ ಆಗಿನ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿದ್ದ ನಿತಿನ್ ಗಡ್ಕರಿ ಈ ಸೇತುವೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಧ್ಯ ಪ್ರದೇಶದ ಬಿಲ್ಡ್ ಕಾನ್ ಸಂಸ್ಥೆಯು ಈ ಸೇತುವೆ ನಿರ್ಮಾಣ ಕಾರ್ಯ ಆರಂಭಿಸಿದ್ದು, ಹೊರ ರಾಜ್ಯಗಳಿಂದ ಸುಮಾರು 300 ರಿಂದ 400 ಕ್ಕೂ ಹೆಚ್ಚು ಕಾರ್ಮಿಕರು, ಈ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಲಾಕ್‍ಡೌನ್ ಘೋಷಣೆಯಾದಾಗ ಈ ಕಾಮಗಾರಿಗೆ ಹಿನ್ನೆಡೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈ ಕಾಮಗಾರಿ ನಿಲ್ಲದೇ ಇನ್ನು ಮುಂದುವರೆದಿದೆ. ಇದರಿಂದಾಗಿ ಈ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದ್ದು ತಮಗೆ ಓಡಾಡಲು ಅನುಕೂಲವಾಗಲಿದೆ ಎಂಬ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಒಟ್ಟಿನಲ್ಲಿ ನಿರ್ಮಾಣವಾಗುವ ವಿಶ್ವಾಸವನ್ನೇ ಕಳೆದುಕೊಂಡಿದ್ದ ಸೇತುವೆಯೊಂದು ಇದೀಗ ರಾಜ್ಯದ 2 ನೇ ಅತಿ ದೊಡ್ಡ ಸೇತುವೆಯಾಗಿ ಇಲ್ಲಿ ನಿರ್ಮಾಣಗೊಳ್ಳುತ್ತಿರುವುದಂತೂ ಸತ್ಯ. ಇದೀಗ ಇಲ್ಲಿನ ದ್ವೀಪ ಪ್ರದೇಶದ ಜನರ ಸಂಚಾರಕ್ಕೆ ಹಿಡಿದಿದ್ದ ಗ್ರಹಣ ಸಮಸ್ಯೆಗೆ ಮುಕ್ತಿ ಸಿಗುವಂತಾಗಿದೆ.

  • ಉಸಿರಾಟದ ತೊಂದರೆಯಿಂದ 1 ವರ್ಷದ ಕಂದಮ್ಮ ಸಾವು

    ಉಸಿರಾಟದ ತೊಂದರೆಯಿಂದ 1 ವರ್ಷದ ಕಂದಮ್ಮ ಸಾವು

    ಶಿವಮೊಗ್ಗ: ಉಸಿರಾಟದ ತೊಂದರೆಯಿಂದ ಒಂದು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಪಟ್ಟಣದಲ್ಲಿ ನಡೆದಿದೆ.

    ಮಗುವಿನ ಪೋಷಕರು ಸಾಗರ ತಾಲೂಕಿನ ಕಳಸವಳ್ಳಿ ಕ್ಯಾಂಪಿನಲ್ಲಿ ವಾಸವಾಗಿದ್ದಾರೆ. ಕೆಲಸಕ್ಕಾಗಿ ಬಂದು ಇಲ್ಲಿಯೇ ಉಳಿದುಕೊಂಡಿದ್ದರು. ಕಳೆದ ಮೂರು ದಿನಗಳಿಂದ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಹಾಗಾಗಿ ಪೋಷಕರು ತಮ್ಮ ಮೂರು ವರ್ಷ ಹೆಣ್ಣು ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.

    ಹೆಣ್ಣು ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು ಮುನ್ನೆಚ್ಚರಿಕ ಕ್ರಮವಾಗಿ ಮಗುವನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮುದ್ದು ಕಂದಮ್ಮ ಸಾವನ್ನಪ್ಪಿದೆ. ಆದ್ರೆ ಮಗುವಿನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯರು ಮಗುವಿನ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.